ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 26-08-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 13/2021, ಕಲಂ: 279, 338 ಐಪಿಸಿ ಸಹಿತ ಕಲಂ: 185 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ರಾಜೇಶ ತಂದೆ ರೋಹಿದಾಸ ಗುನಗಿ, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೇಲಿನಕೇರಿ, ಅರ್ಗಾ, ಕಾರವಾರ (ಮೋಟಾರ್ ಸೈಕಲ್ ನಂ: ಕೆ.ಎ-30/ವಿ-4682 ನೇದರ ಸವಾರ). ದಿನಾಂಕ: 26-08-2021 ರಂದು ರಾತ್ರಿ 21-15 ಗಂಟೆಗೆ ಪಿರ್ಯಾದಿಯ ಅಣ್ಣನಾದ ಶ್ರೀ ರೋಹಿತ ತಂದೆ ವಿಶ್ರಾಮ ಕೃಷ್ಣಾಪುರ, ಈತನು ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-30/ಕ್ಯೂ-2959 ನೇದನ್ನು ಚಲಾಯಿಸಿಕೊಂಡು ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮುಖಾಂತರ ಅರ್ಗಾ ಕಡೆಯಿಂದ ಕಾರವಾರ ಕಡೆಗೆ ಬರುತ್ತಿರುವಾಗ ಕಾರವಾರದ ಲಂಡನ್ ಬ್ರಿಡ್ಜ್ ಹತ್ತಿರ ಕಾರವಾರ ಕಡೆಯಿಂದ ಬಂದಂತಹ ಮೋಟಾರ್ ಸೈಕಲ್ ನಂ: ಕೆ.ಎ-30/ವಿ-4682 ನೇದರ ಆರೋಪಿತ ಸವಾರನು ಸರಾಯಿ ಕುಡಿದ ನಶೆಯಲ್ಲಿ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಯಾವುದೋ ವಾಹನವನ್ನು ಓವರಟೇಕ್ ಮಾಡಲು ಹೋಗಿ ತನ್ನ ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸಲಾದೇ ಒಮ್ಮೇಲೆ ರಸ್ತೆಯ ತೀರಾ ಬಲಕ್ಕೆ ತನ್ನ ಮೋಟಾರ್ ಸೈಕಲನ್ನು ಚಲಾಯಿಸಿ, ತನ್ನ ಮುಂದಿನಿಂದ ಬರುತ್ತಿದ್ದ ಪಿರ್ಯಾದಿಯ ಅಣ್ಣನ ಮೋಟಾರ್ ಸೈಕಲಿನ ಮುಂದಿನ ಭಾಗಕ್ಕೆ ತನ್ನ ಮೋಟಾರ್ ಸೈಕಲಿನ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಅಣ್ಣನಾದ ರೋಹಿತ ಈತನಿಗೆ ಎಡಗೈ ಮೊಣಕೈ, ಮೊಣಕೈ ಕೆಳಗೆ ಹಾಗೂ ಎಡಗೈ ಮುಷ್ಠಿಯ ಹತ್ತಿರ ಮೂಳೆ ಮುರಿತವಾಗಿ ಭಾರೀ ಗಾಯ ಹಾಗೂ ಎಡಗಾಲಿನ ಮೊಣಕಾಲಿನ ಮೇಲ್ಭಾಗದಲ್ಲಿ ಹಾಗೂ ಎಡ ಮೊಣಕಾಲಿನ ಕೆಳಭಾಗದಲ್ಲಿ ಮೂಳೆ ಮುರಿತವಾಗಿ ಭಾರೀ ಗಾಯಗೊಳಿಸಿದ್ದಲ್ಲದೇ, ಆರೋಪಿ ಸವಾರನು ತನಗೂ ಸಹ ಮುಖದಲ್ಲಿ, ಹಣೆಯ ಮೇಲೆ ಗಾಯ, ಮೂಗಿನ ಮೇಲೆ ಗಾಯ, ಮೇಲಿನ ತುಟಿಗೆ ಗಾಯ ಹಾಗೂ ಮುಂದಿನ ಮೇಲಿನ 3 ಹಲ್ಲುಗಳು ಮುರಿತವಾಗಿ ಭಾರೀ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ರತನ್ ತಂದೆ ವಿಶ್ರಾಮ ಕೃಷ್ಣಾಪುರ, ಪ್ರಾಯ-39 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮಾರುತಿ ದೇವಸ್ಥಾನದ ಹತ್ತಿರ, ಸೀಬರ್ಡ್ ಕಾಲೋನಿ, ಚಿತ್ತಾಕುಲಾ, ಕಾರವಾರ ರವರು ದಿನಾಂಕ: 26-08-2021 ರಂದು 23-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 150/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜಯಕರ ತಂದೆ ಗೋಪಾಲ ಪೂಜಾರಿ, ಪ್ರಾಯ-47 ವರ್ಷ, ವೃತ್ತಿ-ಚಾಲಕ, ಸಾ|| ಯಯಡ್ಡಿ, ನಂತೂರು, ಮಂಗಳೂರು (ಈಚರ್ ಮಿನಿ ಲಾರಿ ನಂ: ಕೆ.ಎ-19/ಎ.ಸಿ-6410 ನೇದರ ಚಾಲಕ). ಈತನು ದಿನಾಂಕ: 26-08-2021 ರಂದು-16-45 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯ ಮೇಲೆ ತಾನು ಚಲಾಯಿಸುತ್ತಿದ್ದ ಈಚರ್ ಮಿನಿ ಲಾರಿ ನಂ: ಕೆ.ಎ-19/ಎ.ಸಿ-6410 ನೇದನ್ನು ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಕುಮಟಾದ ತಂಡ್ರಕುಳಿ ಶಾಲೆಯ ಹತ್ತಿರ ತಾನು ಚಲಾಯಿಸುತ್ತಿದ್ದ ಲಾರಿಯನ್ನು ನಿಷ್ಕಾಳಜಿತನದಿಂದ ಬಲಕ್ಕೆ ಚಲಾಯಿಸಿ, ತನ್ನ ಮುಂದಿನಿಂದ ಅಂದರೆ ಕುಮಟಾ ಕಡೆಯಿಂದ ಮಿರ್ಜಾನ ಕಡೆಗೆ ಪಿರ್ಯಾದಿಯು ಚಲಾಯಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-31/ಎಫ್-1326 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎರಡು ವಾಹನ ಜಖಂ ಆಗಲು ಕಾರಣವಾಗಿರುವುದಲ್ಲದೇ, ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕುಮಾರಿ: ದಿವ್ಯಾ ತಂದೆ ರಾಮ ನಾಯ್ಕ, ಪ್ರಾಯ-22 ವರ್ಷ, ವೃತ್ತಿ-ವಿದ್ಯಾರ್ಥಿ ಸಾ|| ಗೌರಸಗಿ, ಖಂಡಗಾರ, ತಾ: ಕುಮಟಾ ಇವಳ ಮೂಗಿಗೆ, ಬಲಗಣ್ಣಿನ ಪಕ್ಕ ಉಬ್ಬಿದ ಗಾಯವಾಗಲು ಕಾರಣವಾಗಿರುವುದಲ್ಲದೇ, ತನ್ನ ಬಲಗಾಲು ಮುರಿದುಕೊಂಡು ತೀವೃ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸೀತಾರಾಮ ತಂದೆ ತಿಮ್ಮಪ್ಪ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ, ಸಾ|| ಕೊಳಗೇರಿ, ಸಂತೆಗುಳಿ, ತಾ: ಕುಮಟಾ ರವರು ದಿನಾಂಕ: 26-08-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 226/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸದಾನಂದ ತಂದೆ ಶೇಖಪ್ಪ ಹೊರಕೇರಿ, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ಮುಕ್ಕಾಲ, ತಾ: ಕಲಘಟಗಿ, ಜಿ: ಧಾರವಾಡ (ಮೋಟಾರ್ ಸೈಕಲ್ ನಂ: ಕೆ.ಎ-25/ಇ.ಎಕ್ಸ್-9942 ನೇದರ ಸವಾರ). ಈತನು ದಿನಾಂಕ: 26-08-2021 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-25/ಇ.ಎಕ್ಸ್-9942 ನೇದರ ಹಿಂದೆ ಕಲ್ಮೇಶ ತಂದೆ ಚನ್ನಬಸಪ್ಪ ಮಟ್ಟಿ, ಪ್ರಾಯ-26 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬೀರವಳ್ಳಿ, ತಾ: ಕಲಘಟಗಿ, ಜಿ: ಧಾರವಾಡ ಈತನಿಗೆ ಕೂಡ್ರಿಸಿಕೊಂಡು ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಬಲಕ್ಕೆ ಚಲಾಯಿಸಿ, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮಠದಕೇರಿ ಕ್ರಾಸ್ ಹತ್ತಿರ ಹೊಟೇಲ್ ಮಹಾಲಸಾ ಎದುರು ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನ ನಂ: ಕೆ.ಎ-30/ಎ-0825 ನೇದರ ಬಲಬದಿ ಹಿಂದಿನ ಟಾಯರ್ ಮಡಗಾರ್ಡಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸಮೇತ ರಸ್ತೆಯಲ್ಲಿ ಬಿದ್ದು, ತನಗೂ ಮತ್ತು ಮೋಟಾರ್ ಸೈಕಲ್ ಹಿಂಬದಿ ಸವಾರ ಕಲ್ಮೇಶ ತಂದೆ ಚನ್ನಬಸಪ್ಪ ಮಟ್ಟಿ, ಈತನಿಗೆ ಗಾಯನೋವು ಉಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಆನಂದ ತಂದೆ ಶಿವಾನಂದ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ತೊಪ್ಪಲಕೇರಿ, ಕರ್ಕಿ, ತಾ: ಹೊನ್ನಾವರ ರವರು ದಿನಾಂಕ: 26-08-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 76/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ಬಿಬಿ ಸೀಮಾ ತಂದೆ ಖಾಜಾ ಹಜೀಬ್, ಪ್ರಾಯ-18 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹಮ್ಜಾ ಕಾಲೋನಿ, ಅಶ್ಫಾಕ್ ಕಂಪೌಂಡ್ ಸಮೀಪ, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ. ಪಿರ್ಯಾದಿಯ ಮಗಳಾದ ಇವಳು ಎಸ್.ಎಸ್.ಎಲ್.ಸಿ ಯವರೆಗೆ ಕಲಿತು ಮನೆಯಲ್ಲಿಯೇ ಇದ್ದವಳು. ಕಳೆದ ಒಂದು ತಿಂಗಳಿಂದ ಗೌಸಿಯಾ ಪಳ್ಳಿ ಸಮೀಪ ಇರುವ ಮದರಸಾಕ್ಕೆ ಹೋಗುತ್ತಿದ್ದಳು. ದಿನಾಂಕ: 23-08-2021 ರಂದು ಸಾಯಂಕಾಲ 04-00 ಗಂಟೆಯ ಸುಮಾರಿಗೆ ಮದರಸಾದ ಕೆಲವೊಂದು ವಿಷಯಗಳನ್ನು ಝೆರಾಕ್ಸ್ ಮಾಡಿಕೊಳ್ಳಬೇಕೆಂದು ಝೆರಾಕ್ಸ್ ಅಂಗಡಿಗೆ ಹೋಗಲು ಅಂತಾ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಗೆ ಬೀಗ ಹಾಕಿ ಮನೆಯಿಂದ ಹೊರಗೆ ಹೋದವಳು, ಈವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ಕುಮಾರಿ: ಬಿಬಿ ಸೀಮಾ ಇವಳಿಗೆ ಮುರ್ಡೇಶ್ವರ ಮತ್ತು ಭಟ್ಕಳದಲ್ಲಿರುವ ಸಂಬಂಧಿಕರಲ್ಲಿ ಮಗಳ ಬಗ್ಗೆ ವಿಚಾರಿಸಿದ್ದು, ಪತ್ತೆಯಾಗದೇ ಇರುವುದರಿಂದ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಫಾತಿಮಾ ಜುರಾ ಕೋಂ. ಖಾಜಾ ಹಜೀಬ್, ಪ್ರಾಯ-50 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹಮ್ಜಾ ಕಾಲೋನಿ, ಅಶ್ಫಾಕ್ ಕಂಪೌಂಡ್ ಸಮೀಪ, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 26-08-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 100/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಅನಿಲ ತಂದೆ ಹೊನ್ನಪ್ಪ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮುಟ್ಟಳ್ಳಿ, ತಾ: ಭಟ್ಕಳ. ಈತನು ದಿನಾಂಕ: 26-08-2021 ರಂದು 10-15 ಗಂಟೆಗೆ ಭಟ್ಕಳ ಶಹರದ ಬಂದರ್ ರಸ್ತೆಯ 1 ನೇ ಕ್ರಾಸ್ ಈದ್ಗಾ ಮೈದಾನದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 2,430/- ರೂಪಾಯಿ ಮತ್ತು ಓ.ಸಿ ಜೂಗಾರಾಟದ ಸಲಕರಣೆಗಳ ಸಮೇತ ದಾಳಿಯ ಕಾಲಕ್ಕೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 26-08-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 101/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ನಾರಾಯಣ ನಾಯ್ಕ, ಪ್ರಾಯ-35 ವರ್ಷ, ಸಾ|| ತಗ್ಗರಗೋಡ, ತಾ: ಭಟ್ಕಳ. ಈತನು ದಿನಾಂಕ: 26-08-2021 ರಂದು 12-45 ಗಂಟೆಗೆ ಭಟ್ಕಳ ಶಹರದ ಬಂದರ್ ರಸ್ತೆಯ 2 ನೇ ಕ್ರಾಸ್ ಈದ್ಗಾ ಮೈದಾನದ ಪಕ್ಕ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 1,640/- ರೂಪಾಯಿ ಮತ್ತು ಓ.ಸಿ ಜೂಗಾರಾಟದ ಸಲಕರಣೆಗಳ ಸಮೇತ ದಾಳಿಯ ಕಾಲಕ್ಕೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 26-08-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 102/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ನಾರಾಯಣ ನಾಯ್ಕ, ಪ್ರಾಯ-29 ವರ್ಷ, ಸಾ|| ತಲಾಂದ, ತಾ: ಭಟ್ಕಳ. ಈತನು ದಿನಾಂಕ: 26-08-2021 ರಂದು 15-15 ಗಂಟೆಗೆ ಭಟ್ಕಳ ಶಹರದ ಬಂದರ್ ರಸ್ತೆಯ 3 ನೇ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 1,830/- ರೂಪಾಯಿ ಮತ್ತು ಓ.ಸಿ ಜೂಗಾರಾಟದ ಸಲಕರಣೆಗಳ ಸಮೇತ ದಾಳಿಯ ಕಾಲಕ್ಕೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಬಿ. ಕುಡಗುಂಟಿ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 26-08-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 101/2021, ಕಲಂ: 87 ಕರ್ನಾಟಪ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ಗಣಪತಿ ಗೌಡ, ಪ್ರಾಯ-22 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹರಗಿ, ಇಟಗಿ, ತಾ: ಸಿದ್ದಾಪುರ, 2]. ಅಣ್ಣಪ್ಪ ಈಶ್ವರ ಗೌಡ, ಪ್ರಾಯ-31 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹುಲಗೇಬೈಲ್, ಗೇರುಸೊಪ್ಪಾ, ತಾ: ಹೊನ್ನಾವರ, 3]. ಗಣಪತಿ ಜಟ್ಯಾ ಗೌಡ,, ಪ್ರಾಯ-65 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹುಲಗೇಬೈಲ್, ಗೇರುಸೊಪ್ಪಾ, ತಾ: ಹೊನ್ನಾವರ, 4]. ನಾರಾಯಣ ಬೀರು ಗೌಡ, ಪ್ರಾಯ-67 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹರಗಿ, ಇಟಗಿ, ತಾ: ಸಿದ್ದಾಪುರ, 5]. ನಾಗರಾಜ ಈಶ್ವರ ಮಡಿವಾಳ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹರಗಿ, ಇಟಗಿ, ತಾ: ಸಿದ್ದಾಪುರ, 6]. ವೆಂಕಟೇಶ ಶಂಕರ ಗೌಡ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹರಗಿ, ಇಟಗಿ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ದಿನಾಂಕ: 25-08-2021 ರಂದು 10-45 ಗಂಟೆಗೆ ಸಿದ್ದಾಪುರ ತಾಲೂಕಿನ ಹರಗಿಯ ಆರೋಪಿ 1 ನೇಯವನ ಮನೆಯ ಹತ್ತಿರದ ಸರ್ಕಾರಿ ಅರಣ್ಯದಲ್ಲಿ ಸೇರಿಕೊಂಡು ತಮ್ಮ ತಮ್ಮ ಲಾಭಕ್ಕೋಸ್ಕರ ಅಂದರ್-ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ಸಮಯ 19-15 ಗಂಟೆಗೆ ಪಿರ್ಯಾದಿಯವರಿ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ 1). ನಗದು ಹಣ 1,250/- ರೂಪಾಯಿ, 2). ಇಸ್ಪೀಟ್ ಎಲೆಗಳು-52, 3). ಮಂಡಕ್ಕೆ ಹಾಸಿದ ಜಮಾಖಾನಾ-1, ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 26-08-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 102/2021, ಕಲಂ: 8(C), 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ತಂದೆ ಮೋಹನ ಮೊಗೇರ, ಪ್ರಾಯ-38 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ರವೀಂದ್ರನಗರ, ತಾ: ಸಿದ್ದಾಪುರ, 2]. ರಂಜನ ತಂದೆ ಗಣಪತಿ ಮಹಾಲೆ, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ರವೀಂದ್ರನಗರ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ದಿನಾಂಕ: 26-08-2021 ರಂದು ಸ್ಕೂಟಿ ನಂ: ಕೆ.ಎ-31/ಎಕ್ಸ್-1862 ನೇದರಲ್ಲಿ ಸಾಗರಕ್ಕೆ ಹೋಗಿ ಯಾರೋ ಆಪರಿಚಿತನಿಂದ ಗಾಂಜಾ ಮಾದಕ ವಸ್ತುವನ್ನು ಖರೀದಿಕೊಂಡು ಪಾಸ್ ಯಾ ಪರ್ಮಿಟ್ ಇಲ್ಲದೆ ಸದರ ಸ್ಕೂಟಿ ಡಿಕ್ಕಿಯಲ್ಲಿ ಇಟ್ಟುಕೊಂಡು ಸಾಗಾಟ ಮಾಡಿಕೊಂಡು ಬಂದು ಸಿದ್ದಾಪುರ ತಾಲೂಕಿನ ಚೂರಿಕಟ್ಟೆ ಕ್ರಾಸಿನಲ್ಲಿ ಖರೀದಿ ಮಾಡಿಕೊಂಡು ಬಂದಿದ್ದ ಗಾಂಜಾ ಮಾದಕ ಪದಾರ್ಥವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಇಟ್ಟುಕೊಂಡು ನಿಂತುಕೊಂಡಿದ್ದಾಗ ಪಿರ್ಯಾದಿಯವರು ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಗಳು, ಪತ್ರಾಂಕಿತ ಅಧಿಕಾರಿ ಹಾಗೂ ಪಂಚರೊಂದಿಗೆ ಸೇರಿ ಸಮಯ 16-20 ಗಂಟೆಗೆ ದಾಳಿ ಮಾಡಿದಾಗ ಆರೋಪಿತರ ತಾಬಾದಲ್ಲಿ 1). ಗಾಂಜಾ ಮಾದಕ ವಸ್ತು ಒಟ್ಟು ತೂಕ 34 ಗ್ರಾಂ, 2). ನಗದು ಹಣ 240/- ರೂಪಾಯಿ, 3). ಸ್ಯಾಮ್ಸಂಗ್ ಕಂಪನಿಯ ಕೀ-ಪ್ಯಾಡ್ ಮೊಬೈಲ್-01, 4). ಸ್ಯಾಮ್ಸಂಗ್ ಕಂಪನಿಯ ಅಂಡ್ರಾಯ್ಡ್ ಮೊಬೈಲ್-01, 5). ಸ್ಕೂಟಿ (ರಜಿಸ್ಟ್ರೇಶನ್‍ ನಂ: ಕೆ.ಎ-31/ಎಕ್ಸ್-1862)-01, ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 26-08-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 26-08-2021

at 00:00 hrs to 24:00 hrs

 

ರಾಮನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 11/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ರಂಜಿತಾ ತಂದೆ ಸುಬ್ರಮಣ್ಯ ರೆಡ್ಡಿ, ಪ್ರಾಯ-16 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ನವಗ್ರಾಮ ಕಾಲೋನಿ, ರಾಮನಗರ, ತಾ: ಜೋಯಿಡಾ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 23-07-2021 ರಂದು ಮಧ್ಯಾಹ್ನ ಓದಲೆಂದು ನವಗ್ರಾಮದಲ್ಲಿರುವ ತಮ್ಮ ಟೀಚರ್ ಮನೆಗೆ ಹೋದಾಗ ವಿಪರೀತ ಮಳೆ ಇದ್ದುದರಿಂದ ಚಳಿ ಕಾಯಿಸಲೆಂದು ಕಟ್ಟಿಗೆಯ ಒಲೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಮಾಡಿಕೊಳ್ಳುವಾಗ ಆಕಸ್ಮಿಕವಾಗಿ ಬೆಂಕಿ ಮೈಗೆ ತಾಗಿ ತೀವ್ರ ಪ್ರಮಾಣದಲ್ಲಿ ಸುಟ್ಟುಕೊಂಡವಳು, ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಉಪಚಾರದಲ್ಲಿದ್ದವಳು ಉಪಚಾರ ಫಲಿಸದೇ ದಿನಾಂಕ: 26-08-2021 ರಂದು ಬೆಳಗಿನ ಜಾವ 02-00 ಗಂಟೆಗೆ ಮೃತಪಟ್ಟಿರುತ್ತಾಳೆ. ಇದೊಂದು ಆಕಸ್ಮಿಕವಾಗಿ ನಡೆದ ಘಟನೆಯಾಗಿದ್ದು, ಇದರ ಹೊರತು ಅವಳ ಸಾವಿನ ಮೇಲೆ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಮಣ್ಯ ತಂದೆ ಸುಬ್ಬಯ್ಯ ರೆಡ್ಡಿ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನವಗ್ರಾಮ ಕಾಲೋನಿ, ರಾಮನಗರ, ತಾ: ಜೋಯಿಡಾ ರವರು ದಿನಾಂಕ: 26-08-2021 ರಂದು 11-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 28-08-2021 12:40 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080