ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 26-12-2021

at 00:00 hrs to 24:00 hrs

 

ಕದ್ರಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 16/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗುರುದಾಸ ತಂದೆ ಶಾಂತಾರಾಮ ರಾಯ್ಕರ, ಪ್ರಾಯ-50 ವರ್ಷ, ಸಾ|| ನಂದನಗದ್ದಾ, ಕಾರವಾರ (ಕಾರ್ ನಂ: ಎಮ್.ಎಚ್-01/ಬಿ.ಡಬ್ಲ್ಯೂ-3789 ನೇದರ ಚಾಲಕ). ಈತನು ದಿನಾಂಕ: 26-12-2021 ರಂದು 13-30 ಗಂಟೆಗೆ ತನ್ನ ಕಾರ್ ನಂ: ಎಮ್.ಎಚ್-01/ಬಿ.ಡಬ್ಲ್ಯೂ-3789 ನೇದನ್ನು ಜೋಯಿಡಾ ಕಡೆಯಿಂದ ಕದ್ರಾ ಕಡೆಗೆ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ರಾಜ್ಯ ಹೆದ್ದಾರಿ ಸಂಖ್ಯೆ-34 ರ ರಸ್ತೆಯ ಅಣಶಿ ಘಟ್ಟದಲ್ಲಿನ ರಸ್ತೆಯಲ್ಲಿ ಕಾರವಾರ ಕಡೆಯಿಂದ ಉಳವಿ ಕಡೆಗೆ ಪಿರ್ಯಾದಿಯು ತನ್ನ ಕಾರ್ ನಂ: ಜಿ.ಎ-08/ಇ-2432 ನೇದರಲ್ಲಿ ಎಡಬದಿಯಿಂದ ಹೋಗುತ್ತಿದ್ದಾಗ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ತಲೆಗೆ ರಕ್ತಗಾಯ, ಎದೆಗೆ ಮತ್ತು ಎಡಗೈಗೆ ಒಳನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಹೊಟ್ಟೆಗೆ, ಎದೆಗೆ ಹಾಗೂ ಒಳನೋವು ಪಡೆಸಿಕೊಂಡಿದ್ದಲ್ಲದೇ, ಎರಡೂ ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ನೌಶಾದ್ ಅಹಮ್ಮದ್ ಅಲಿ ಶೇಖ್, ಪ್ರಾಯ-36 ವರ್ಷ, ವೃತ್ತಿ-ಸ್ವ ಉದ್ಯೋಗಿ, ಸಾ|| ಹಬ್ಬುವಾಡ, ಕಾರವಾರ ರವರು ದಿನಾಂಕ: 26-12-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 225/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೃಷ್ಣ ತಂದೆ ಮಾರುತಿ ದಡಸ, ಪ್ರಾಯ-39 ವರ್ಷ, ವೃತ್ತಿ-ಚಾಲಕ, ಸಾ|| ಯಲವಾಡಿ, ಮಾನ್ ಬಿಜವಾಡಿ, ಸಾತಾರ, ಮಹಾರಾಷ್ಟ್ರ (ಲಾರಿ ನಂ: ಎಮ್.ಎಚ್-46/ಎಫ್-5093 ನೇದರ ಚಾಲಕ). ಈತನು ದಿನಾಂಕ: 26-12-2021 ರಂದು 18-45 ಗಂಟೆಯ ಸುಮಾರಿಗೆ ತನ್ನ (ಲಾರಿ ನಂ: ಎಮ್.ಎಚ್-46/ಎಫ್-5093 ನೇದನ್ನು ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಮೇಲೆ ಅಡ್ಡ ಬಂದ ದನಕ್ಕೆ ತಪ್ಪಿಸಲು ಹೋಗಿ ತನ್ನ ಲಾರಿಯನ್ನು ಒಮ್ಮೆಲೇ ರಸ್ತೆಯ ಎಡಕ್ಕೆ ಚಲಾಯಿಸಿ, ಲಾರಿಯ ಮುಂದಿನ ಎಡಭಾಗವು ರಸ್ತೆಯ ಎಡಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಯ ತಾಯಿ ಶ್ರೀಮತಿ ದುಮಗಿ ಲಾರೆನ್ಸ್ ಗೊನ್ಸಾಲ್ವಿಸ್, ಪ್ರಾಯ-70 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೋಟೆ ರಸ್ತೆ, ಮಿರ್ಜಾನ, ತಾ: ಕುಮಟಾ, ಇವಳಿಗೆ ಬಡಿಯುವಂತೆ ಮಾಡಿ ಅಪಘಾತ ಪಡಿಸಿ, ರಸ್ತೆಯ ಮೇಲೆ ಬೀಳುವಂತೆ ಮಾಡಿ, ಅವಳ ಹಣೆಯ ಬಲಬದಿಗೆ ಗಾಯವಾಗಿ ರಕ್ತ ಬರುವಂತೆ ಮಾಡಿ, ಎಡಗಾಲ ಮೊಣಗಂಟಿಗೆ ತೆರಚಿದ ಗಾಯ ಪಡಿಸಿ, ಅವಳಿಗೆ ಉಪಚಾರದ ಕುರಿತು ಖಾಸಗಿ ವಾಹನದ ಮೇಲೆ ಕುಮಟಾದ ಸಾರ್ವಜನಿಕ ಆಸ್ಪತ್ರೆಗೆ ತರುತ್ತಿರುವಾಗ ಕುಮಟಾದ ಹೆಗಡೆ ಕ್ರಾಸ್ ಹತ್ತಿರ ಸಾಯಂಕಾಲ 19-10 ಗಂಟೆಗೆ ಅವಳಿಗೆ ಅಪಘಾತದಿಂದ ಆದ ಗಾಯದಿಂದ ಮರಣ ಪಡುವಂತೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಸಿಂಜಾಂವ್ ತಂದೆ ಲಾರೆನ್ಸ್ ಗೊನ್ಸಾಲ್ವಿಸ್, ಪ್ರಾಯ-47 ವರ್ಷ, ವೃತ್ತಿ-ಚಾಲಕ, ಸಾ|| ಕೋಟೆ ರಸ್ತೆ, ಮಿರ್ಜಾನ, ತಾ: ಕುಮಟಾ ರವರು ದಿನಾಂಕ: 26-12-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 361/2021, ಕಲಂ: 427, 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾಬ್ಲೇಶ್ವರ ತಂದೆ ದೇವು ಹರಿಕಂತ್ರ, ಸಾ|| ಈರಪ್ಪನ ಹಿತ್ಲ, ಹಳದೀಪುರ, ತಾ: ಹೊನ್ನಾವರ. ಈತನು ಈ ಹಿಂದಿನಿಂದಲೂ ಪಿರ್ಯಾದಿಯವರೊಂದಿಗೆ ತಂಟೆ ತಕರಾರು ಮಾಡಿಕೊಂಡು ಬಂದಿದ್ದವನು, ದಿನಾಂಕ: 24-12-2021 ರಂದು ಸಂಜೆ 19-00 ಗಂಟೆಗೆ ತನ್ನ ಕೈಯಲ್ಲಿ ಒಂದು ದೊಣ್ಣೆಯನ್ನು ಹಿಡಿದುಕೊಂಡು ಏಕಾಏಕಿ ಪಿರ್ಯಾದಿಯ ಮನೆಯ ಹತ್ತಿರ ಬಂದವನು, ಪಿರ್ಯಾದಿಯ ಮನೆಯ ಹತ್ತಿರ ಸ್ವಲ್ಪ ದೂರದಲ್ಲಿ ಗೌಡಕುಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಿಟ್ಟಿದ್ದ ಪಿರ್ಯಾದಿಯ ಮಗ ಬಾಲಚಂದ್ರ ತಂದೆ ನಾಗಪ್ಪ ಹರಿಕಂತ್ರ, ಈತನ ಮೋಟಾರ್ ಸೈಕಲ್ ನಂ: ಕೆ.ಎ-47/ಯು-7197 ನೇದಕ್ಕೆ ತಾನು ತಂದಿದ್ದ ದೊಣ್ಣೆಯಿಂದ ಹೊಡೆದು ಮೋಟಾರ್ ಸೈಕಲ್ ಡೂಮ್ ಹಾಗೂ ಬಂಪರ್ ಒಡೆದು ಹಾಕಿ ಸುಮಾರು 3,000/- ರೂಪಾಯಿಯ ಲುಕ್ಸಾನ್ ಪಡಿಸಿದ್ದಲ್ಲದೇ, ತಡೆಯಲು ಬಂದ ಪಿರ್ಯಾದಿಯನ್ನು ಅಡ್ಡಗಟ್ಟಿ ತಡೆದು ಪಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು, ‘ನಿನ್ನ ಮಗ ವಿಘ್ನೇಶನನ್ನು ಕರಿ. ಈ ದಿನ ಅವನನ್ನು ಸುಮ್ಮನೆ ಬಿಡುವುದಿಲ್ಲ’ ಅಂತಾ ಹೇಳಿದ್ದು, ಘಟನೆ ನೋಡಿ ಸ್ಥಳಕ್ಕೆ ಬಂದ ಜೀವನ್ ತಂದೆ ದುರ್ಗು ಹರಿಕಂತ್ರ ಹಾಗೂ ಗಣೇಶ ತಂದೆ ಕನ್ನಯ್ಯ ಹರಿಕಂತ್ರ, ಇವರು ಆರೋಪಿತನು ಮೋಟಾರ್ ಸೈಕಲ್ ಲುಕ್ಸಾನ್ ಪಡಿಸುವುದನ್ನು ತಡೆದಿದ್ದು, ಆಗ ಆರೋಪಿತನು ಪಿರ್ಯಾದುದಾರರನ್ನು ಉದ್ದೇಶಿಸಿ ‘ಈ ಬಾರಿ ನೀನು ಉಳಿದುಕೊಂಡೆ. ಇನ್ನೊಂದು ದಿನ ನಿನಗೆ ಹಾಗೂ ನಿನ್ನ ಮಗನಿಗೆ ಸುಮ್ಮನೆ ಬಿಡುವುದಿಲ್ಲ. ಕೊಂದು ಹಾಕುತ್ತೇನೆ’ ಅಂತಾ ತಾನು ತಂದಿದ್ದ ದೊಣ್ಣೆಯನ್ನು ಪಿರ್ಯಾದಿಯ ಮನೆಯ ಹತ್ತಿರ ಬಿಸಾಡಿ ಅಲ್ಲಿಂದ ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಸುಶೀಲಾ ಕೋಂ ನಾಗಪ್ಪ ಹರಿಕಂತ್ರ, ಪ್ರಾಯ-58 ವರ್ಷ, ವೃತ್ತಿ-ಗೃಹಿಣಿ, ಸಾ|| ಗೌಡಕುಳಿ, ಹಳದೀಪುರ, ತಾ: ಹೊನ್ನಾವರ ರವರು ದಿನಾಂಕ: 26-12-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 362/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಭವಾನಿ ಕೋಂ. ಕೃಷ್ಣ ಹಳ್ಳೇರ, ಪ್ರಾಯ-27 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಗ್ಗೆರೆ, ಖರ್ವಾ, ತಾ: ಹೊನ್ನಾವರ. ಪಿರ್ಯಾದಿಯ ಹೆಂಡತಿಯಾದ ಇವಳು ‘ಪ್ರತಿದಿನ ಬೆಳಗಿನಿಂದ ಸಂಜೆವರೆಗೆ ಕೂಲಿ ಕೆಲಸ ಮಾಡಿಕೊಂಡು ಸಂಜೆ ಮನೆಗೆ ಬಂದು, ನಂತರ ಸ್ವಲ್ಪ ಹೊತ್ತು ಟೈಮ್ ಪಾಸ್ ಗೆ ಅಂಗಡಿ ಕಡೆಗೆ ಹೋಗುತ್ತಿರುವುದು ನನಗೆ ಇಷ್ಟ ಇಲ್ಲ, ಪದೇ ಪದೇ ಅಂಗಡಿ ಕಡೆಗೆ ಹೋಗಬೇಡ. ಮನೆಯಲ್ಲಿಯೇ ಇರು‘ ಅಂತಾ ಪಿರ್ಯಾದಿಗೆ ಹೇಳುತ್ತಿದ್ದವಳು, ದಿನಾಂಕ: 25-12-2021 ರಂದು ಮಧ್ಯಾಹ್ನ ಪಿರ್ಯಾದಿಯು ಮನೆಯಲ್ಲಿದ್ದಾಗ ತನ್ನ ಹೆಂಡತಿಯು ‘ಮಗನಿಗೆ ಸ್ನಾನ ಮಾಡಿಸಿಕೊಂಡು ಬರುತ್ತೇನೆ‘ ಅಂತಾ ಹೇಳಿ ಹೋದವಳು, ಮಧ್ಯಾಹ್ನ 02-30 ಗಂಟೆಯ ಸುಮಾರಿಗೆ ಬಚ್ಚಲು ಮನೆಯಿಂದಲೇ ಉಟ್ಟ ಬಟ್ಟೆಯಲ್ಲಿಯೇ ತನ್ನ ಮಗನನ್ನು ಅಲ್ಲಿಯೇ ಬಿಟ್ಟು ಎಲ್ಲಿಯೋ ಹೋಗಿರುತ್ತಾಳೆ. ತನ್ನ ಮಗ ಅಳುವ ಶಬ್ದ ಕೇಳಿ ತಾನು ಬಚ್ಚಲು ಮನೆ ಹತ್ತಿರ ಹೋಗಿ ನೋಡಿದಾಗ ಅಲ್ಲಿ ಮಗನೊಬ್ಬನೇ ಇದ್ದನು. ಮಗನಿಗೆ ‘ಏನಾಯಿತು?‘ ಅಂತಾ ಕೇಳಿದಾಗ ‘ಅಮ್ಮ ತನ್ನ ಬಿಟ್ಟು ಹೋದಳು‘ ಅಂತಾ ಹೇಳಿ ಅಳುತ್ತಿದ್ದನು. ತನ್ನ ಹೆಂಡತಿಯಾದ ಭವಾನಿಯು ಈ ಹಿಂದೆ ಸಹ ಮೂರ್ನಾಲ್ಕು ಸಲ ಇದೇ ರೀತಿ ತನ್ನ ಮೇಲೆ ಸಿಟ್ಟು ಮಾಡಿಕೊಂಡು ಮನೆಯಿಂದ ಹೋದವಳು, ಸಂಜೆ ವೇಳೆಗೆ ಮರಳಿ ಮನೆಗೆ ಬಂದಿದ್ದಳು. ಆದ ಕಾರಣ ತಾನು ಈ ಸಲವು ಭವಾನಿ ಮನೆಗೆ ಬರಬಹುದು ಅಂತಾ ಸಂಜೆವರೆಗೂ ಕಾದೆನು. ರಾತ್ರಿ ಆದರೂ ತನ್ನ ಹೆಂಡತಿ ಭವಾನಿಯು ಮನೆಗೆ ಬರದೇ ಇದ್ದುದನ್ನು ನೋಡಿ, ತಾನು ಗ್ರಾಮದಲ್ಲಿ ಮತ್ತು ಸುತ್ತಮುತ್ತ ಗ್ರಾಮದಲ್ಲಿ, ಸಂಬಂಧಿಕರಲ್ಲಿ ಕೇಳಿ ಹುಡುಕಾಡಿದರೂ ಪತ್ತೆಯಾಗಿದ್ದು ಇರುವುದಿಲ್ಲ. ಕಾರಣ ಸದ್ರಿ ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣ ತಂದೆ ಕನ್ಯಾ ಹಳ್ಳೇರ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೆಗ್ಗೆರೆ, ಖರ್ವಾ, ತಾ: ಹೊನ್ನಾವರ ರವರು ದಿನಾಂಕ: 26-12-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 115/2021, ಕಲಂ: 341, 323, 324, 504 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಧರ ತಂದೆ ಶನಿಯಾರ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಹೋಟೆಲ್ ವ್ಯಾಪಾರ, ಸಾ|| ತಿಮ್ಮಯ್ಯನ ಮನೆ, ಗುಡಿಗಾರಬೋಳೆ, ಮಾವಳ್ಳಿ-1, ತಾ: ಭಟ್ಕಳ, 2]. ನಾಗರಾಜ ತಂದೆ ಮಂಜುನಾಥ ನಾಯ್ಕ, ಪ್ರಾಯ-25 ವರ್ಷ, ವೃತ್ತಿ-ಹೋಟೆಲ್ ಕೆಲಸ, ಸಾ|| ಕನ್ನಡ ಶಾಲೆ, ಮಾವಳ್ಳಿ-2, ತಾ: ಭಟ್ಕಳ. ಪಿರ್ಯಾದಿಯವರು ಹಾಗೂ ಮಹೇಶ ತಂದೆ ಮಾಣಿ, ಶಿವನ ತಂದೆ ಆರು, ಸತೀಶ ತಂದೆ ಚಂದ್ರನ, ಸಾ|| (ಎಲ್ಲರೂ) ಪಲಕಾಡ್, ಕೇರಳಾ ರಾಜ್ಯ ರವರು ಭಟ್ಕಳದಲ್ಲಿ ಕೆಲಸಕ್ಕೆ ಬಂದವರು, ದಿನಾಂಕ: 26-12-2021 ರಂದು ಮುರ್ಡೇಶ್ವರಕ್ಕೆ ಬಂದು ಬೀಚಿನಲ್ಲಿ ತಿರುಗಾಡಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರದ ಗಗನ ಫಿಶ್ ಲ್ಯಾಂಡ್ ಹೋಟೆಲಿನಲ್ಲಿ 16-00 ಗಂಟೆಗೆ ಊಟ ಮಾಡಿ, ಊಟದ ಬಿಲ್ಲನ್ನು ಕೊಡುವ ವೇಳೆ ಕ್ಯಾಶ್ ಇರದೇ ಇದ್ದ ಕಾರಣ ಪೋನ್-ಫೇ ಮಾಡುತ್ತಿದ್ದಾಗ ತಡವಾಗಿದ್ದರಿಂದ ಹೋಟೆಲ್ ಮಾಲಿಕನಾದ ಆರೋಪಿ 1 ನೇಯವನಿಗೆ ಮತ್ತು ಪಿರ್ಯಾದಿಗೆ ಮಾತಿಗೆ ಮಾತಾಗಿ ಹೋಟೆಲ್ ಮಾಲಿಕನಾದ ಆರೋಪಿ 1 ನೇಯವನು ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಯಿಂದ ಕಪಾಳದ ಮೇಲೆ ಹೊಡೆಯುವುದನ್ನು ಕಂಡ ಪಿರ್ಯಾದಿಯ ಸ್ನೇಹಿತರಾದ  ಮಹೇಶ, ಶಿವನ, ಸತೀಶ ಇವರು ಬಿಡಿಸಲು ಬಂದಾಗ ಹೋಟೆಲ್ ಕ್ಯಾಶಿಯರ್ ಆದ ಆರೋಪಿ 2 ನೇಯವನು ಓಡಿ ಬಂದು ಇವರೆಲ್ಲರಿಗೂ ಅಡ್ಡಗಟ್ಟಿ ದೂಡಿ ಹಾಕಿ, ಅಲ್ಲಿಯೇ ಇದ್ದ ಇಟ್ಟಂಗಿ ರಾಶಿಯಲ್ಲಿ ಅಪ್ಪಳಿಸಿ ಮತ್ತು ಸತೀಶ ಈತನಿಗೆ ಕರೆಂಟ್ ಕಂಬಕ್ಕೆ ದೂಡಿ, ಇಬ್ಬರೂ ಆರೋಪಿತರು ಸೇರಿ ಪಿರ್ಯಾದಿಗೆ ಹಾಗೂ ಶಿವನ, ಮಹೇಶ ಇವರಿಗೆ ತಲೆಯ ಮೇಲೆ ಮತ್ತು ಸತೀಶ ಈತನಿಗೆ ಕಾಲಿನ ಮೇಲೆ ಕಟ್ಟಿಗೆಯಿಂದ ಹೊಡೆದು ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಅಬ್ಬಾಸ್ ತಂದೆ ಕೆ. ಕೆ. ಇಬ್ರಾಹಿಂ, ಪ್ರಾಯ-40 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಕೆರಿಯನಕುಲಂ ಹೌಸ್, ಎಲೆವೆಂಜರಿ ಪೋಸ್ಟ್, ತಾ: ಚಿತ್ತೂರ, ಜಿ: ಪಲಕಾಡ್, ಕೇರಳಾ ರಾಜ್ಯ ರವರು ದಿನಾಂಕ: 26-12-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 155/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಸರ್ಕಾರದಿಂದ ನೀರಾವರಿ ಯೋಜನೆಗೆ ಬಾಂದಾರುಗಳನ್ನು ನಿರ್ಮಿಸಲು ಕಳೆದ 10 ವರ್ಷಗಳ ಹಿಂದೆ ನೀಡಿದ್ದ ಕಬ್ಬಿಣದ ಗೇಟ್ ಗಳನ್ನು ಸಿದ್ದಾಪುರ ತಾಲೂಕಿನ ಬಿಳಗಿ ಪಂಚಾಯತ ವ್ಯಾಪ್ತಿಯ ಗೋಳಿಕೈ ಗ್ರಾಮದ ಕಳೂರುನಲ್ಲಿ ನಿರ್ಮಿಸಿದ್ದೆವು. ಮಳೆಗಾಲದ ಪ್ರಾರಂಭದಲ್ಲಿ ಗೇಟ್ ಗಳನ್ನು ತೆಗೆದು ಬಾಂದಾರದ ಪಕ್ಕದಲ್ಲಿ ಇಟ್ಟಿದ್ದೆವು. ದಿನಾಂಕ: 24-12-2021 ರಂದು 16-00 ಗಂಟೆಯಿಂದ ದಿನಾಂಕ: 26-12-2021 ರಂದು 09-00 ಗಂಟೆಯ ನಡುವಿನ ಆವಧಿಯಲ್ಲಿ ನಮೂದಿತ ಆರೋಪಿತರು ಕಬ್ಬಿಣದ 16 ಗೇಟ್ (ಅ||ಕಿ|| ತಲಾ ಒಂದಕ್ಕೆ 6,000/- ರೂಪಾಯಿಯಂತೆ ಒಟ್ಟು 96,000/- ರೂಪಾಯಿ) ಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ನವಿನರಾಜ್ ಡಿ. ತಂದೆ ಡಿ. ಬಂಗಾರಪ್ಪ, ಪ್ರಾಯ-37 ವರ್ಷ, ವೃತ್ತಿ-ಸಹಾಯಕ ಅಭಿಯಂತರರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ, ಉಪ ವಿಭಾಗ, ಶಿರಸಿ, ಸಾ|| ಯಡಗೊಪ್ಪ, ಜಡೆ, ತಾ: ಸೊರಬಾ, ಜಿ: ಶಿವಮೊಗ್ಗ, ಹಾಲಿ ಸಾ|| ಶ್ರೀನಗರ, ತಾ: ಶಿರಸಿ ರವರು ದಿನಾಂಕ: 26-12-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 26-12-2021

at 00:00 hrs to 24:00 hrs

 

ಮಂಕಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 12/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಜಯಂತ ತಂದೆ ಗಣಪತಿ ನಾಯ್ಕ, ಪ್ರಾಯ-46 ವರ್ಷ, ಸಾ|| ಜಲವಳ್ಳಿ, ಕರ್ಕಿ, ತಾ: ಹೊನ್ನಾವರ. ಈತನು ದಿನಾಂಕ: 24-12-2021 ರಂದು ಪಿರ್ಯಾದಿ ಹಾಗೂ ಸತೀಶ ನಾಯ್ಕ ಇವರೊಂದಿಗೆ ಕೂಡಿ ಬಳ್ಕೂರಿನ ಹಾಮಕ್ಕಿಯಲ್ಲಿ ಎಂಗೇಜ್‍ಮೆಂಟ ಕಾರ್ಯಕ್ರಮದ ಅಡುಗೆ ಕೆಲಸಕ್ಕೆ ಹೋಗಿ, ಕೆಲಸ ಮುಗಿಸಿ ಮರಳಿ ಶರಾವತಿ ನದಿ ದಾಟಿ ಜಲವಳ್ಳಿ ಕರ್ಕಿಯಲ್ಲಿರುವ ಮನೆಗೆ ಹೋಗಲು ಪಿರ್ಯಾದಿ ಹಾಗೂ ಸತೀಶ ನಾಯ್ಕ ಇವರ ಜೊತೆಯಲ್ಲಿ ಬಳ್ಕೂರಿನ ಶರಾವತಿ ನದಿ ದಡಕ್ಕೆ ಮಧ್ಯಾಹ್ನ 16-15 ಗಂಟೆಯ ಸುಮಾರಿಗೆ ಬಂದು ಧರ್ಮ ತಂದೆ ಗಣೇಶ ನಾಯ್ಕ, ಇವರ ದೋಣಿಯಲ್ಲಿ ಹತ್ತುತ್ತಿದ್ದಾಗ ಆಕಸ್ಮಾತ್ ಆಗಿ ಕಾಲು ಜಾರಿ ದೋಣಿಯ ಮೇಲಿನಿಂದ ನದಿಯ ನೀರಿನಲ್ಲಿ ಬಿದ್ದು ಮುಳುಗಿ ಕಾಣೆಯಾದವನನ್ನು ಹುಡುಕುತ್ತಿರುವಾಗ ಆತನ ಮೃತದೇಹವು ಘಟನಾ ಸ್ಥಳದಿಂದ ಸುಮಾರು 35 ಮೀಟರ್ ಅಂತರದಲ್ಲಿ ಶರಾವತಿ ನದಿಯ ನೀರಿನಲ್ಲಿ ದಿನಾಂಕ: 26-12-2021 ರಂದು 12-30 ಗಂಟೆಗೆ ಪತ್ತೆಯಾಗಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರದೀಪ ತಂದೆ ಗಣಪತಿ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಅಡುಗೆ ಕೆಲಸ, ಸಾ|| ಜಲವಳ್ಳಿ, ಕರ್ಕಿ, ತಾ: ಹೊನ್ನಾವರ ರವರು ದಿನಾಂಕ: 26-12-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 42/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸಹದೇವ ತಂದೆ ಕೃಷ್ಣಾ ಮಿರಾಶಿ, ಪ್ರಾಯ-37 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಸೋಮಾಪುರ, ಕಿರವತ್ತಿ, ತಾ: ಯಲ್ಲಾಪುರ. ಪಿರ್ಯಾದಿಯವರ ತಂದೆಯವರ ಎರಡನೆಯ ಹೆಂಡತಿಯ ಮಗನಾದ ಈತನು ಕಳೆದ 4-5 ವರ್ಷದಿಂದ ತನ್ನ ಹೆಂಡತಿಯು ತನ್ನೊಂದಿಗಿರದೇ ತವರು ಮನೆಯಲ್ಲಿರುವ ಬಗ್ಗೆ ಬೇಜಾರಿನಿಂದ ಸರಾಯಿ ಕುಡಿಯುವ ಚಟ ಅಂಟಿಸಿಕೊಂಡು ಅಲ್ಲಿ ಇಲ್ಲಿ ಗೌಂಡಿ ಕೆಲಸ ಮಾಡಿಕೊಂಡು ಇದ್ದವನು, ಕಳೆದ 1 ತಿಂಗಳಿನಿಂದ ತನ್ನ ಸಂಬಂಧಿಕರ ಮನೆಯಲ್ಲಿ ಗೌಂಡಿ ಕೆಲಸ ಮಾಡಿಕೊಂಡಿದ್ದವನು, ದಿನಾಂಕ: 25-12-2021 ರಂದು 23-00 ಗಂಟೆಯಿಂದ ದಿನಾಂಕ: 26-12-2021 ರಂದು 05-00 ಗಂಟೆಯ ನಡುವಿನ ಅವಧಿಯಲ್ಲಿ ಯಲ್ಲಾಪುರ ತಾಲೂಕಿನ ಕಿರವತ್ತಿಯ ಸೋಮಾಪುರ ಊರಿನ ತಾನು ಕೆಲಸ ಮಾಡಿಕೊಂಡಿರುವ ಮನೆಯ ಹಿಂಬದಿಯಲ್ಲಿರುವ ಗೇರು ಮರದ ಟೊಂಗೆಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತಪಟ್ಟಿದ್ದು ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹಾದೇವ ತಂದೆ ಕೃಷ್ಣಾ ಮಿರಾಶಿ ಪ್ರಾಯ-37 ವರ್ಷ, ವೃತ್ತಿ-ಕೃಷಿ ಕೂಲಿ ಕೆಲಸ, ಸಾ|| ಸೋಮಾಪುರ, ಕಿರವತ್ತಿ, ತಾ: ಯಲ್ಲಾಪುರ ರವರು ದಿನಾಂಕ: 26-12-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 28-12-2021 09:38 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080