ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 26-07-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: 323, 337, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಮಚಂದ್ರ ತಂದೆ ಪರಮೇಶ್ವರ ಹರಿಕಂತ್ರ, ಪ್ರಾಯ-50 ವರ್ಷ, ಸಾ|| ಮೊರಬಾ, ತಾ: ಕುಮಟಾ. ದಿನಾಂಕ: 26-07-2021 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಮೊರಬಾ ಗ್ರಾಮದಲ್ಲಿರುವ ಪಿರ್ಯಾದಿಯ ಮನೆಯಲ್ಲಿ ಪಿರ್ಯಾದಿಯವರು ಇದ್ದಾಗ ನಮೂದಿತ ಆರೋಪಿತನ ಮಕ್ಕಳು ಗೌಜಿ ಮಾಡುತ್ತಿದ್ದುದರಿಂದ ಅವರಿಗೆ ಸುಮ್ಮನಿರಲು ಹೇಳಿದಕ್ಕೆ ನಮೂದಿತ ಆರೋಪಿತನು ತನ್ನ ಮಕ್ಕಳಿಗೆ ಜೋರು ಮಾಡಿದ ಬಗ್ಗೆ ಪಿರ್ಯಾದಿಯ ಮೇಲೆ ಸಿಟ್ಟಿನಿಂದ ಇದ್ದವನು, ಪಿರ್ಯಾದಿಗೆ ಉದ್ದೇಶಿಸಿ ‘ಬೋಳಿ ಮಗನೆ, ಮಕ್ಕಳಿಗೆ ಬೈಯ್ಯತ್ತೀ?’ ಅಂತಾ ಹೊಡೆಯಲು ಬಂದಾಗ ಮನೆಯಲ್ಲಿದ್ದ ಪಿರ್ಯಾದಿಯ ಕಿರಿಯ ಮಗ: ವಿಠ್ಠಲ ಪರಮೇಶ್ವರ ಹರಿಕಂತ್ರ ಇವನು ತಪ್ಪಿಸಲು ಬಂದಾಗ ಆರೋಪಿತನು ಆತನಿಗೆ ಕೈಯಿಂದ ಹೊಡೆದು ಶೋ-ಗ್ಲಾಸ್ ಮೇಲೆ ದೂಡಿ ಹಾಕಿ, ಆತನ ಕಾಲಿಗೆ ಗ್ಲಾಸ್ ತಾಗಿ ರಕ್ತಗಾಯ ಪಡಿಸಿದ್ದಲ್ಲದೇ, ಪಿರ್ಯಾದಿಗೆ ಮತ್ತು ವಿಠ್ಠಲನಿಗೆ ಕೊಂದು ಹಾಕುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಪರಮೇಶ್ವರ ತಂದೆ ಕೃಷ್ಣ ಹರಿಕಂತ್ರ, ಪ್ರಾಯ-76 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮೊರಬಾ, ತಾ: ಕುಮಟಾ ರವರು ದಿನಾಂಕ: 26-07-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 136/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಕೃಷ್ಣಾ ತಂದೆ ತುಳುಸು ಗೌಡಾ, ಪ್ರಾಯ-24 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಬಸ್ತಿಕೇರಿ, ಸಂತೆಗುಳಿ, ತಾ: ಕುಮಟಾ. ಪಿರ್ಯಾದುದಾರರ ಮಗನಾದ ಈತನು ಕಳೆದ ದಿನಾಂಕ: 24-02-2021 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ತಾನು ಹಳಿಯಾಳಕ್ಕೆ ಹೊಟೇಲ್ ಕೆಲಸಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದವನು, ಕೆಲಸಕ್ಕೆ ಹೋದ ಆರಂಭದಲ್ಲಿ 2-3 ತಿಂಗಳು ಪೋನ್ ಮಾಡುತ್ತಿದ್ದವನು, ನಂತರ ಮನೆಗೆ ಪೋನ್ ಮಾಡದೇ, ಮೊಬೈಲ್ ಸಂಪರ್ಕಕ್ಕೂ ಸಿಗದೇ, ಈವರೆಗೂ ಮನೆಗೂ ಬಾರದೇ ಸಂಬಂಧಿಕರ ಮನೆಗೂ ಸಹ ಹೋಗದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾರಣ ಕಾಣೆಯಾದ ತನ್ನ ಮಗನನ್ನು ಹುಡಕಿ ಕೊಡಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಲಕ್ಷ್ಮೀ ಕೋಂ. ತುಳುಸು ಗೌಡಾ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಸ್ತಿಕೇರಿ, ಸಂತೆಗುಳಿ, ತಾ: ಕುಮಟಾ ರವರು ದಿನಾಂಕ: 26-07-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 96/2021, ಕಲಂ: 4, 5, 7, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಮತ್ತು ಕಲಂ: 192 ಎಮ್.ವಿ ಎಕ್ಟ್ ಹಾಗೂ ಕಲಂ: 429 ಸಹಿತ 34 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಲೀಮ್ ಇಬ್ರಾಹೀಂಸಾಬ್ ಸವಣೂರು, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಇಸ್ಲಾಂಪುರ ಓಣಿ, ಬ್ಯಾಡಗಿ, ಹಾವೇರಿ, 2]. ನಬಿ ಕಾಟನಳಿ, ಸಾ|| ಕಾಟನಳಿ, ಹಾವೇರಿ, 3]. ತಬ್ರೇಜ್ ಬೆಳಗಾಂ, ಸಾ|| ಬ್ಯಾಡಗಿ, ಹಾವೇರಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ಮತ್ತು 2 ನೇಯವರು ಆರೋಪಿ 3 ನೇಯವನ ಸಹಯೋಗದೊಂದಿಗೆ ಎಲ್ಲಿಯೋ ಜಾನುವಾರುಗಳನ್ನು ವಧೆ ಮಾಡಿ ಸುಮಾರು 40,000/- ರೂಪಾಯಿ ಮೌಲ್ಯದ 200 ಕೆ.ಜಿ ಆಗುವಷ್ಟು ದನದ ಮಾಂಸವನ್ನು TATA INDICA VISTA ಕಾರ್ ನಂ: ಕೆ.ಎ-27/ಬಿ-2803 ನೇದರಲ್ಲಿ ತುಂಬಿ ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ಸಕ್ಷಮ ಪ್ರಾಧಿಕಾರದಿಂದ ಸಾಗಾಟ ಮಾಡಲು ಪರವಾನಿಗೆ ಪಡೆಯದೇ ವಾಹನದಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದಾಗ ದಿನಾಂಕ: 26-07-2021 ರಂದು 01-00 ಗಂಟೆಯ ಸಮಯಕ್ಕೆ ಕಾರ್ ವಾಹನ ಹಾಗೂ ದನದ ಮಾಂಸದ ಸಮೇತ ಶಿರಾಲಿಯ ಸರ್ಕಲ್ ದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 26-07-2021 ರಂದು 06-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 97/2021, ಕಲಂ: 143, 147, 341, 323, 427, 504, 506 ಸಹಿತ 149 ಐಪಿಸಿ  ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ 7 ರಿಂದ 8 ಜನರು ಅಪರಿಚಿತಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ದಿನಾಂಕ: 26-07-2021 ರಂದು 01-00 ಗಂಟೆಗೆ ಶಿರಾಲಿಯ ಸರ್ಕಲ್ ಹತ್ತಿರ ನಿಂತ ಟಾಟಾ ಇಂಡಿಕಾ ಕಾರ್ ನಂ: ಕೆ.ಎ-27/ಬಿ-2803 ನೇದರಲ್ಲಿ ದನದ ಮಾಂಸ ಇರುವ ವಿಷಯ ತಿಳಿದು ಕಾರಿನ ಹತ್ತಿರ ಬಂದಾಗ, ಆರೋಪಿತರಿಗೆ ನೋಡಿ ಪಿರ್ಯಾದಿಯು ಕಾರಿನಿಂದ ಇಳಿದು ತಪ್ಪಿಸಿಕೊಂಡು ಓಡಿ ಹೋಗುವಾಗ ಆಯ ತಪ್ಪಿ ಕೆಳಗೆ ಬಿದ್ದಾಗ, ಆರೋಪಿತರು ಪಿರ್ಯಾದಿಯನ್ನು ಸುತ್ತುವರಿದು ಅಡ್ಡಗಟ್ಟಿ ತಡೆದು ‘ಕಾರಿನಲ್ಲಿ ಏನಿದೆ?’ ಅಂತಾ ಕೇಳಿದಾಗ ಪಿರ್ಯಾದಿಯು ‘ದನದ ಮಾಂಸ ಇದೆ’ ಅಂತಾ ತಿಳಿಸಿದ್ದು, ಆಗ ಕೆಲವು ಜನರು ‘ಸೂಳಾ ಮಗನೇ, ದನದ ಮಾಂಸ ಎಲ್ಲಿಂದ ತಂದು ಎಲ್ಲಿಗೆ ಕೊಡುತ್ತೀಯಾ?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವದ ಧಮಕಿ ಹಾಕಿ, ಕೆಲವು ಜನ ಆರೋಪಿತರು ಕೈಯಿಂದ ಹಾಗೂ ಕಾಲಿನಿಂದ ಹಲ್ಲೆ ಮಾಡಿ ಪೋಲಿಸ್ ಜೀಪ್ ಬರುತ್ತಿರುವುದು ನೋಡಿ ಅಲ್ಲಿಂದ ಹಲ್ಲೆ ಮಾಡಿದವರು ಓಡಿ ಹೋಗಿದ್ದು, ಪಿರ್ಯಾದಿಯು ತಾನು ಅವರಿಗೆ ನೋಡಿದರೆ ಗುರುತು ಹಿಡಿಯುತ್ತೇನೆ ಹಾಗೂ ತಾನು ತಂದ ಕಾರನ್ನು ಆರೋಪಿತರು ಜಖಂ ಮಾಡಿ ಲುಕ್ಸಾನ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸಲೀಮ್ ಇಬ್ರಾಹೀಂಸಾಬ್ ಸವಣೂರು, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಇಸ್ಲಾಂಪುರ ಓಣಿ, ತಾ: ಬ್ಯಾಡಗಿ, ಜಿ: ಹಾವೇರಿ ರವರು ದಿನಾಂಕ: 26-07-2021 ರಂದು 09-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 63/2021, ಕಲಂ: 353, 332, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮೊಹಮ್ಮದ್ ಬಿಲಾಲ್ ತಂದೆ ಅಬ್ದುಲ್ ವಹಾಬ್ ಸೌದಾಗರ್, ಪ್ರಾಯ-19 ವರ್ಷ, ಸಾ|| ಕಸ್ತೂರಾಬಾ ನಗರ, ತಾ: ಶಿರಸಿ. ಪಿರ್ಯಾದಿಯವರು ಕಳೆದ ಕಳೆದ 3 ವರ್ಷಗಳಿಂದ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಸಿವಿಲ್ ಪೊಲೀಸ್ ಕಾನ್ಸಟೇಬಲ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ: 26-07-2021 ರಂದು ಬೆಳಿಗ್ಗೆ 09-00 ರಿಂದ ಮಧ್ಯಾಹ್ನ 02-00 ಗಂಟೆಯವರೆಗೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಅಶ್ವಿನಿ ಸರ್ಕಲಿನಲ್ಲಿ ಟ್ರಾಫಿಕ್ ಪಾಯಿಂಟ್ ಕರ್ತವ್ಯಕ್ಕೆ ನೇಮಿಸಿದಂತೆ ಕರ್ತವ್ಯ ನಿರ್ವಹಿಸುತ್ತಿರುವಾಗ ಸಮಯ 12-00 ಗಂಟೆಯ ಸುಮಾರಿಗೆ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಭೀಮಾಶಂಕರ ಸಿನ್ನೂರ ಸಂಗಣ್ಣ ರವರು ಠಾಣೆಯ ಸಿಬ್ಬಂದಿಯವರಾದ ಶ್ರೀ ಗಣಪತಿ ಬಂಟ (ಸಿ.ಎಚ್.ಸಿ-1441), ಶ್ರೀ ಮೋಹನ ನಾಯ್ಕ (ಸಿ.ಪಿ.ಸಿ-1175) ಇವರೊಂದಿಗೆ ಇಲಾಖಾ ಜೀಪಿನಲ್ಲಿ ಬಂದು ಪಿರ್ಯಾದಿಯವರನ್ನು ಅವರೊಂದಿಗೆ ಕರೆದುಕೊಂಡು ಅಶ್ವಿನಿ ಸರ್ಕಲಿನಲ್ಲಿ ನಿಂತುಕೊಂಡು ಮೋಟಾರ್ ವಾಹನಗಳ ದಾಖಲಾತಿಗಳ ಪರಿಶೀಲನೆಯಿಂದ ಮೋಟಾರ್ ವಾಹನಗಳ ಕಾಯಿದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸುತ್ತಿರುವಾಗ ಮಧ್ಯಾಹ್ನ 01-15 ಗಂಟೆಯ ಸುಮಾರಿಗೆ ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ವಿಕಾಸ ಆಶ್ರಮ ಕಡೆಯಿಂದ ಆಶ್ವಿನಿ ಸರ್ಕಲ್ ಕಡೆಗೆ ನಮೂದಿತ ಆರೋಪಿತನು ತಲೆಗೆ ಹೆಲ್ಮೆಟ್ ಧರಿಸದೇ ಮೋಟಾರ್ರ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-8042 ನೇದನ್ನು ಚಲಾಯಿಸಿಕೊಂಡು ಬಂದಾಗ ಪಿರ್ಯಾದಿಯವರು ಆರೋಪಿತನಿಗೆ ನಿಲ್ಲಿಸಲು ಸೂಚನೆಯನ್ನು ನೀಡಿದಂತೆ ಆತನು ‘ರಾಂಡಾಕೊ ಕಾಮ ನಹೀ’ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ ವಾಹನವನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿದಾಗ, ಪಿರ್ಯಾದಿಯವರು ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಲು ಹೇಳಿದಾಗ ಆರೋಪಿತನು ‘ತನ್ನ ವಾಹನವನ್ನು ತಡೆಯಲು ನೀನು ಯಾರು? ತಾನು ವಾಹನ ನಿಲ್ಲಿಸುವುದಿಲ್ಲ. ಪಕ್ಕಕ್ಕೆ ಸರಿ’ ಎಂದು ಹೇಳುತ್ತಾ ತಾನು ಚಲಾಯಿಸಿಕೊಂಡು ಬಂದ ಮೋಟಾರ್ ಸೈಕಲ್ ಚಾಲು ಮಾಡಿಕೊಂಡು ಪಿರ್ಯಾದಿಯವರ ಬಲಗಾಲಿನ ಪಾದದ ಮೇಲೆ ಹತ್ತಿಸಿ ಗಾಯನೋವುಂಟು ಮಾಡಿದ್ದಲ್ಲದೇ, ಪಿರ್ಯಾದಿಯು ಮೋಟಾರ್ ಸೈಕಲ್ ತಡೆಯಲು ಹೋದಾಗ ಆರೋಪಿತನು ಮೋಟಾರ ಸೈಕಲನ್ನು ಒಮ್ಮೇಲೆ ಪಿರ್ಯಾದಿಯ ಮೇಲೆ ಚಲಾಯಿಸಿಕೊಂಡು ಬಂದು ಎಡಗಾಲಿನ ಮೊಣಗಂಟಿಗೆ ಹೊಡೆದು ಪಿರ್ಯಾದಿಯನ್ನು ರಸ್ತೆಯಲ್ಲಿ ಬೀಳಿಸಿದಾಗ ಪಿರ್ಯಾದಿಯು ಧರಿಸಿದ್ದ ಪೊಲೀಸ್ ಸಮವಸ್ತ್ರದ ಪ್ಯಾಂಟ್ ಆರೋಪಿತನ ಮೋಟಾರ್ ಸೈಕಲಿಗೆ ಸಿಕ್ಕಿದರೂ ಸಹ ತನ್ನ ಮೋಟಾರ್ ಸೈಕಲ್ ನಿಲ್ಲಿಸದೇ ಪಿರ್ಯಾದಿಯವರಿಗೆ ರಸ್ತೆಯಲ್ಲಿ ಸುಮಾರು 20 ಅಡಿಯಷ್ಟು ದೂರ ಎಳೆದುಕೊಂಡು ಹೋಗಿ ಪಿರ್ಯಾದಿಯವರ ಎಡಗೈ ಮತ್ತು ಬಲಗೈಗಳಿಗೆ ಗಾಯನೋವುಂಟು ಮಾಡಿ, ಸರ್ಕಾರಿ ನೌಕರನಾದ ತನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಹನುಮಂತ ತಂದೆ ಮಹಾದೇವಪ್ಪ ಕೋಲಾರ, ಪ್ರಾಯ-26 ವರ್ಷ, ವೃತ್ತಿ-ಸಿವಿಲ್ ಪೊಲೀಸ್ ಕಾನ್ಸಟೇಬಲ್ (ಸಿ.ಪಿ.ಸಿ-1177), ಸಾ|| ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 26-07-2021 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 99/2021, ಕಲಂ: 306 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುರೇಶ ತಂದೆ ಪುಂಡಲಿಕ ಕಮ್ಮಾರ, 2]. ಶ್ರೀಕಾಂತ ತಂದೆ ಪುಂಡಲಿಕ ಕಮ್ಮಾರ, 3]. ಕೃಷ್ಣ ತಂದೆ ಪುಂಡಲಿಕ ಕಮ್ಮಾರ, ಸಾ|| (ಎಲ್ಲರೂ) ನಂದಿಕಟ್ಟಾ ಗ್ರಾಮ, ತಾ: ಮುಂಡಗೋಡ. ಈ ನಮೂದಿತ ಆರೋಪಿತರು ಪಿರ್ಯಾದಿಯ ಸಹೋದರರಾಗಿದ್ದು, ಪಿರ್ಯಾದಿಯ ಮಗನಾದ ಅಮಿತ ಈತನ ಬಗ್ಗೆ ಅವರ ಸಂಬಂಧಿಕರ ಹತ್ತಿರ ಹಾಗೂ ಗ್ರಾಮದ ಜನರ ಹತ್ತಿರ ಇಲ್ಲಸಲ್ಲದ ಆಪಾದನೆ ಹೊರಿಸಿದ್ದರಿಂದ ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡ ಅಮಿತ ಈತನು ಮಾನಸಿಕವಾಗಿ ನೊಂದು ದಿನಾಂಕ: 25-07-2021 ರಂದು 16-00 ಗಂಟೆಯಿಂದ 18-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವನ ಮರಣಕ್ಕೆ ಕಾರಣರಾದವರ ಮೇಲೆ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬಸವರಾಜ ತಂದೆ ದತ್ತಾತ್ರೇಯ ಲೋಹಾರ, ಪ್ರಾಯ-51 ವರ್ಷ, ವೃತ್ತಿ-ಸೋಶಿಯಲ್ ವರ್ಕ್, ಸಾ|| ನಂದಿಕಟ್ಟಾ ಗ್ರಾಮ, ತಾ: ಮುಂಡಗೋಡ ರವರು ದಿನಾಂಕ: 26-07-2021 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 100/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹಬೀಬ್ ಹನೀಫ್ ಖಾನ್, ಪ್ರಾಯ-38 ವರ್ಷ, ವೃತ್ತಿ-ಟ್ರಕ್ ಚಾಲಕ, ಸಾ|| ನವಾಡ್, ಪುನವಾ, ಗುರಗಾಂವ್, ಹರಿಯಾಣ (ಲಾರಿ ನಂ: ಎಚ್.ಆರ್-55/ಟಿ-6263 ನೇದರ ಚಾಲಕ). ಈತನು ದಿನಾಂಕ: 26-07-2021 ರಂದು ಸಂಜೆ 17-30 ಗಂಟೆಗೆ ತನ್ನ ಲಾರಿ ನಂ: ಎಚ್.ಆರ್-55/ಟಿ-6263 ನೇದನ್ನು ಶಿರಸಿ ಕಡೆಯಿಂದ ಮುಂಡಗೋಡ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಬಂದು ಮುಂಡಗೋಡ-ಶಿರಸಿ ರಸ್ತೆಯ ಪಾಳಾ ಕಲಕೊಪ್ಪ ಗ್ರಾಮದ ಶಂಕರಗೌಡ್ರು ಇಂಗಳಕಿ ಇವರ ಹೊಲದ ಹತ್ತಿರ ಡಾಂಬರ್ ರಸ್ತೆಯ ಮೇಲೆ ತನ್ನ ಸೈಡನ್ನು ಬಿಟ್ಟು ಎದುರಿನಿಂದ ಬರುತ್ತಿದ್ದ ಬಸ್ ನಂ: ಕೆ.ಎ-31/ಎಫ್-1543 ನೇದಕ್ಕೆ ಡಿಕ್ಕಿ ಹೊಡೆದು ಅಪಾಘತ ಪಡಿಸಿ, ಬಸ್ಸಿನ ಮುಂದಿನ ಶೋ-ಗ್ಲಾಸ್, ಡ್ಯಾಶ್ ಬೋರ್ಡ್, ರೇಡಿಯೇಟರ್ ಡ್ಯಾಮೇಜ್ ಮಾಡಿದ್ದಲ್ಲದೇ ಸ್ವಯಂಕೃತ ಅಪಘಾತದಿಂದ ತನ್ನ ಲಾರಿಗೂ ಡ್ಯಾಮೇಜ್ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ವಿನೋದ ತಂದೆ ತುಳಸೀರಾಮ ರಾಥೋಡ, ಪ್ರಾಯ-36 ವರ್ಷ, ವೃತ್ತಿ-ಬಸ್ ಚಾಲಕ, ಸಾ|| ಹೆಗಡೆ, ತಾ: ಕುಮಟಾ ರವರು ದಿನಾಂಕ: 26-07-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 128/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಪಾಂಡುರಂಗ ತಂದೆ ಮಹಾದೇವ ಮಣ್ಣುರಕರ್, ಪ್ರಾಯ-48 ವರ್ಷ, ವೃತ್ತಿ-ಕೃಷಿಕ, 2]. ಶಿವಾನಂದ ತಂದೆ ಬಲವಂತ ಸೋಮಯಾಚಿ, ಪ್ರಾಯ-31 ವರ್ಷ, ವೃತ್ತಿ-ಗೌಂಡಿ ಕೆಲಸ, 3]. ಯಲ್ಲಪ್ಪ ತಂದೆ ಪರಶುರಾಮ್ ವಡ್ಡರ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, 4]. ಜಯದೇವ ತಂದೆ ತುಕಾರಾಮ ಕೇಸರೇಕರ್, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, 5]. ಮಾರುತಿ ತಂದೆ ಯಶವಂತ ಕಿತ್ತವಾಡಕರ, ಪ್ರಾಯ-33 ವರ್ಷ, ವೃತ್ತಿ-ಕೃಷಿಕ, 6]. ಬಳಿರಾಮ ತಂದೆ ದೇವೇಂದ್ರ ಕೊಂಜಾಳಿ, ಪ್ರಾಯ-50 ವರ್ಷ, ವೃತ್ತಿ-ಕೃಷಿಕ, ಸಾ|| (ಎಲ್ಲರೂ) ಕರ್ಲಕಟ್ಟಾ, ತಾ: ಹಳಿಯಾಳ. ಈ ನಮೂದಿತ ಆರೋಪಿತರುಗಳು ದಿನಾಂಕ: 26-07-2021 ರಂದು ಸಾರ್ವಜನಿಕ ಸ್ಥಳವಾದ ಹಳಿಯಾಳ ತಾಲೂಕಿನ ಕರ್ಲಕಟ್ಟಾ ಗ್ರಾಮದ ಬಸ್ ಸ್ಟಾಪ್ ಹತ್ತಿರದ ರಸ್ತೆಯ ಬದಿಯಲ್ಲಿ ಗುಂಪಾಗಿ ಕುಳಿತುಕೊಂಡು ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣ ಪಂಥಕಟ್ಟಿ ಅಂದರ್-ಬಾಹರ್ ಜೂಜಾಟ ಆಟ ಆಡುತ್ತಿದ್ದಾಗ, ಸಮಯ 18-50 ಗಂಟೆಗೆ ದಾಳಿಯ ಕಾಲಕ್ಕೆ ನಗದು ಹಣ 2,770/- ರೂಪಾಯಿ ಮತ್ತು ಜೂಜಾಟದ ಸಲಕರಣೆಗಳ ಸಮೇತ ಸಿಕ್ಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸತ್ಯಪ್ಪ ಎಚ್. ಹುಕ್ಕೇರಿ, ಪಿ.ಎಸ್.ಐ (ತನಿಖೆ), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 26-07-2021 ರಂದು 22-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 129/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾರುತಿ ತಂದೆ ತಮ್ಮಣ್ಣ ವಡ್ಡರ, ಪ್ರಾಯ-42 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಮುತ್ತಲಮುರಿ, ತಾ: ಹಳಿಯಾಳ (ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-0818 ನೇದರ ಚಾಲಕ). ಈತನು ದಿನಾಂಕ: 26-07-2021 ರಂದು 21-45 ಗಂಟೆಗೆ ಹಳಿಯಾಳ ತಾಲೂಕಿನ ಹವಗಿ ಗ್ರಾಮದ ಹತ್ತಿರ ಇರುವ ಐಟಿಐ ಕಾಲೇಜ್ ಹತ್ತಿರ ಹಳಿಯಾಳ-ಅಳ್ನಾವರ ಡಾಂಬರ್ ರಸ್ತೆಯ ಮೇಲೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-0818 ನೇದರ ಮೇಲೆ ಹಿಂಬದಿ ಸವಾರ ಗಾಯಾಳು ಶಿವಾನಂದ ಮಾರುತಿ ಕುಂಬಾರ ಇವರನ್ನು ಕೂಡ್ರಿಸಿಕೊಂಡು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ಡಾಂಬರ್ ರಸ್ತೆಯ ಮೇಲೆ ಮೋಟಾರ್ ಸೈಕಲ್ ಸಮೇತ ಸ್ಕಿಡ್ ಆಗಿ ಪಲ್ಟಿ ಕೆಡವಿಕೊಂಡ ಪರಿಣಾಮ, ಹಿಂಬದಿ ಸವಾರ ಗಾಯಾಳು ಶಿವಾನಂದ ಮಾರುತಿ ಕುಂಬಾರ ರವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಗಾಯನೋವು ಪಡಿಸಿಕೊಂಡು ಮೋಟಾರ್ ಸೈಕಲ್ ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಠ್ಠಲ ತಂದೆ ಚಂದ್ರಶೇಕರ ತೇಲಿ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ತೆರಗಾಂವ, ತಾ: ಹಳಿಯಾಳ ರವರು ದಿನಾಂಕ: 26-07-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 26-07-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

ಇತ್ತೀಚಿನ ನವೀಕರಣ​ : 27-07-2021 04:54 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080