ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 26-06-2021
at 00:00 hrs to 24:00 hrs
ಮಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 83/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 23-06-2021 ರಂದು ಮುಂಜಾನೆ 09-30 ಗಂಟೆಯಿಂದ ಸಂಜೆ 18-00 ಗಂಟೆಯ ನಡುವಿನ ಅವಧಿಯಲ್ಲಿ ಮುಂಡಗೋಡದ ಹಳೇ ತಹಶೀಲ್ದಾರ ಆಫೀಸಿನ ಕಂಪೌಂಡಿನ ಒಳಗೆ ಇರುವ ಖುಲ್ಲಾ ಜಾಗದಲ್ಲಿ ನಿಲ್ಲಿಸಿಟ್ಟ ಪಿರ್ಯಾದಿಯವರ ಬಾಬ್ತು ಅ||ಕಿ|| 30,000/- ರೂಪಾಯಿ ಬೆಲೆಬಾಳುವ ಕಪ್ಪು ಬಣ್ಣದ ಬಿಳಿ ಪಟ್ಟಿ ಇರುವ ಹೀರೋ ಸ್ಪ್ಲೆಂಡರ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಬಿ-3830 (ಚೆಸ್ ನಂ: MBLHAR072JHG44395 ಹಾಗೂ ಇಂಜಿನ್ ನಂ: HA10AGJHG54366) ನೇದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ತನ್ನ ಮೋಟಾರ್ ಸೈಕಲನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಗಂಗಾಧರ ತಂದೆ ವೆಂಕಪ್ಪ ಚಿಗಪ್ಪನವರ, ಪ್ರಾಯ-48 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಲಕೇರಿ, ತಾ: ಮುಂಡಗೋಡ ರವರು ದಿನಾಂಕ: 26-06-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 120/2021, ಕಲಂ: ಯುವತಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವತಿ ಕುಮಾರಿ: ಸುಮಿತ್ರಾ ತಂದೆ ಮಾರುತಿ ಸಂಗಮೇಶ್ವರ, ಪ್ರಾಯ-18 ವರ್ಷ 2 ದಿನಗಳು, ವೃತ್ತಿ-ಮನೆವಾರ್ತೆ, ಸಾ|| ಅಂಬೇಡ್ಕರ್ ಗಲ್ಲಿ, ಬಿ.ಕೆ ಹಳ್ಳಿ ಗ್ರಾಮ, ತಾ: ಹಳಿಯಾಳ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 24-06-2021 ರಂದು ಬೆಳಿಗ್ಗೆ 10-30 ಗಂಟೆಗೆ ಹಳಿಯಾಳದ ಬಿ.ಕೆ ಹಳ್ಳಿ ಗ್ರಾಮದ ತನ್ನ ಮನೆಯಿಂದ ಹಳಿಯಾಳಕ್ಕೆ ಹೊಲಿಗೆ ತರಗತಿಗೆ ಅಂತಾ ಹೋದವಳು, ಹೊಲಿಗೆ ತರಗತಿಗೂ ಹೋಗದೇ ಮರಳಿ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಮಾರುತಿ ತಂದೆ ಯಲ್ಲಪ್ಪಾ ಸಂಗಮೇಶ್ವರ, ಪ್ರಾಯ-50 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಅಂಬೇಡ್ಕರ್ ಗಲ್ಲಿ, ಬಿ.ಕೆ ಹಳ್ಳಿ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 26-06-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 74/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಸಂಜೀವ @ ಮಂಜುನಾಥ ತಂದೆ ಕನ್ನಾ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಾಳಮಾಂವ ಗ್ರಾಮ, ಸುತ್ತಲಮನೆ, ತಾ: ಸಿದ್ದಾಪುರ, ಹಾಲಿ ಸಾ|| ಸುಂಕತ್ತಿ, ತಾ: ಸಿದ್ದಾಪುರ. ಈತನು ದಿನಾಂಕ: 26-06-2021 ರಂದು 13-00 ಗಂಟೆಗೆ ಸಿದ್ದಾಪುರ ತಾಲೂಕಿನ ಸುಂಕತ್ತಿಯಲ್ಲಿರುವ ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 04 ಪೌಚ್ ಗಳು, 2). 02 ಪ್ಲಾಸ್ಟಿಕ್ ಗ್ಲಾಸುಗಳು, 3). Original Choice Deluxe Whisky 90 ML ಅಂತಾ ಬರೆದ 04 ಮದ್ಯದ ಖಾಲಿ ಪೌಚ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 26-06-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ರಾಮನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 58/2021, ಕಲಂ: ಯುವತಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವತಿ ಕುಮಾರಿ: ಶೃತಿ ತಂದೆ ಸುರೇಶ ತಾಂಬೆ, ಪ್ರಾಯ-19 ವರ್ಷ, ವೃತ್ತಿ-ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿ, ಸಾ|| ಕೃಷ್ಣಾ ಗಲ್ಲಿ, ರಾಮನಗರ, ತಾ: ಜೋಯಿಡಾ. ಪಿರ್ಯಾದಿಯವರ ತಂಗಿಯಾದ ಇವಳು ದಿನಾಂಕ: 22-06-2021 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಮನೆಯ ಜನರೆಲ್ಲರೂ ಕೆಲಸದ ಮೇಲೆ ಹೊರಗಡೆ ಹೋದಾಗ ಮನೆಯಲ್ಲಿ ಒಬ್ಬಳೇ ಇದ್ದವಳು, ಮನೆಯ ಜನರಿಗೆ ಯಾರಿಗೂ ಹೇಳದೇ ಮನೆ ಬಿಟ್ಟು ಹೋಗಿದ್ದು, ಪಿರ್ಯಾದಿಯವರು ದಿನಾಂಕ: 22-06-2021 ರಂದು ಮಧ್ಯಾಹ್ನ 03-00 ಗಂಟೆಗೆ ಕೆಲಸದಿಂದ ಮನೆಗೆ ಬಂದಾಗ ತಂಗಿ: ಶೃತಿ ಇವಳು ಮನೆಯಲ್ಲಿ ಇಲ್ಲದೇ ಇರುವುದನ್ನು ನೋಡಿ ಅಕ್ಕಪಕ್ಕದ ಮನೆಯ ಜನರಿಗೆ ವಿಚಾರಣೆ ಮಾಡಿದಾಗ ತಾವು ನೋಡಿಲ್ಲವಾಗಿ ತಿಳಿಸಿದ್ದು, ಪಿರ್ಯಾದಿಯವರ ತಾಯಿಯವರು ರೇಷನ್ ತೆಗೆದುಕೊಂಡು ಬರಲು ತಿಳಿಸಿದ್ದರಿಂದ ರೇಷನ್ ಅಂಗಡಿಗೆ ಹೋಗಿರಬಹುದೆಂದು ಅಲ್ಲಿಗೆ ಹೋಗಿ ವಿಚಾರಿಸಿದ್ದು, ಅಲ್ಲಿಯೂ ಹೋಗಿರಲಿಲ್ಲ. ನಂತರದಲ್ಲಿ ಪಿರ್ಯಾದಿಯವರು ತನ್ನ ಗೆಳೆಯರು ಹಾಗೂ ಮನೆಯ ಜನರು ಸೇರಿಕೊಂಡು ರಾಮನಗರದ ಹಾಗೂ ಹೊರಗಡೆಯ ತಮ್ಮ ಎಲ್ಲ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದ್ದು ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಕಾರಣ ಕಾಣೆಯಾಗಿರುವ ತನ್ನ ತಂಗಿಯನ್ನು ಹುಡುಕಿ ಕೊಡುವ ಕುರಿತು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಯಶ್ವಂತ ಸುರೇಶ ತಾಂಬೆ, ಪ್ರಾಯ-23 ವರ್ಷ, ವೃತ್ತಿ-ಟಿ.ವಿ ರಿಪೇರಿ, ಸಾ|| ಕೃಷ್ಣಾ ಗಲ್ಲಿ, ರಾಮನಗರ, ತಾ: ಜೋಯಿಡಾ ರವರು ದಿನಾಂಕ: 26-06-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 26-06-2021
at 00:00 hrs to 24:00 hrs
ಪ್ರಕರಣಗಳು ದಾಖಲಾಗಿರುವುದಿಲ್ಲ....
======||||||||======