ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 26-03-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 68/2021, ಕಲಂ: 307, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಿಶಾಂತ ತಂದೆ ನಾಗರಾಜ ಅಂಬಿಗ, ಪ್ರಾಯ-20 ವರ್ಷ, ಸಾ|| ಧಾರೇಶ್ವರ ಬೀಚ್, ತಾ: ಕುಮಟಾ. ನಮೂದಿತ ಆರೋಪಿತನು ಕಳೆದ 2 ತಿಂಗಳ ಹಿಂದೆ ಖರ್ಚಿಗೆ ಅಂತಾ ಪಿರ್ಯಾದಿಯವರಿಂದ 1,000/- ರೂಪಾಯಿ ಹಣವನ್ನು ಪಡೆದುಕೊಂಡಿದ್ದು, ಪಿರ್ಯಾದಿಯು ತಾನು ನೀಡಿದ ಹಣವನ್ನು ಮರಳಿ ಕೇಳಿದ್ದಕ್ಕೆ ಪಿರ್ಯಾದಿಯವರ ಮೇಲೆ ಸಿಟ್ಟಿನಿಂದ ಇದ್ದ ಆರೋಪಿತನು ದಿನಾಂಕ: 25-03-2021 ರಂದು 22-30 ಗಂಟೆಯ ಸುಮಾರಿಗೆ ಪಿರ್ಯಾದಿಯವರು ಧಾರೇಶ್ವರ ಸಮುದ್ರದ ತೀರಕ್ಕೆ ಬಹಿರ್ದೆಸೆಗೆ ಹೋಗಿ ಮರಳಿ ಮನೆಗೆ ಹೋಗಲು ರಸ್ತೆಯಿಂದ ನಡೆದುಕೊಂಡು ಹೋಗುತ್ತಿದ್ದಾಗ, ಆ ವೇಳೆಗೆ ಆರೋಪಿತನು ಪಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿ ಬಿಯರ್ ಬಾಟಲಿಯನ್ನು ಹಿಡಿದುಕೊಂಡು ಪಿರ್ಯಾದಿಯ ಹಿಂದಿನಿಂದ ಬಂದು ಬಿಯರ್ ಬಾಟಲಿಯಿಂದ ಬಲವಾಗಿ ಪಿರ್ಯಾದಿಯ ತಲೆಗೆ ಹೊಡೆದು ಗಾಯನೋವು ಪಡಿಸಿ, ಅವಾಚ್ಯ ಶಬ್ದಗಳಿಂದ ಬೈಯ್ದು ‘ಇನ್ನೊಮ್ಮೆ ಹಣ ಕೇಳಿದರೆ ನಿನ್ನನ್ನು ಕೊಂದು ಹಾಕುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಭಾಸ್ಕರ ತಂದೆ ಜಟ್ಟಿ ಹರಿಕಾಂತ, ಪ್ರಾಯ-26 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಧಾರೇಶ್ವರ ಬೀಚ್, ತಾ: ಕುಮಟಾ ರವರು ದಿನಾಂಕ: 26-03-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 49/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಟ್ರಾಕ್ಸ್ ವಾಹನ ನಂ: ಕೆ.ಎ-49/ಎಮ್-1472 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ, 2]. ವಸೀಮ್ ತಂದೆ ಶಬೀರ್ ಮುಲ್ಲಾ, ಪ್ರಾಯ-34 ವರ್ಷ, ವೃತ್ತಿ-ಖಾಸಗಿ ಬಸ್ ಚಾಲಕ, ಸಾ|| ಪೀರನವಾಡಿ, ಬೆಳಗಾವಿ (ಖಾಸಗಿ ಬಸ್ ಸಂಖ್ಯೆ: ಕೆ.ಎ-51/ಎ.ಎಫ್-5924 ನೇದರ ಚಾಲಕ). ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 26-03-2021 ರಂದು ಬೆಳಗಿನ ಜಾವ ಸುಮಾರು 00-30 ಗಂಟೆಗೆ ಯಲ್ಲಾಪುರ ತಾಲೂಕಿನ ಕೋಳಿಕೇರಿ ಗ್ರಾಮದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ  ತನ್ನ  ಬಾಬ್ತು ಟ್ರ್ಯಾಕ್ಸ್ ವಾಹನ ನಂ: ಕೆ.ಎ-49/ಎಮ್-1472 ನೇದರಲ್ಲಿ 05 ರಿಂದ 06 ಜನ ಪ್ರಯಾಣಿಕರನ್ನು ಕೂರಿಸಿಕೊಂಡು ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಅದೇ ವೇಳೆಗೆ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ನಿಧಾನವಾಗಿ ರಸ್ತೆಯ ಎಡಬದಿಯಿಂದ ಸಾಕ್ಷಿದಾರರಾದ ಶ್ರೀ ಸಂಗಪ್ಪ ಪರೀಟ ರವರು ಚಲಾಯಿಸಿಕೊಂಡು ಬರುತ್ತಿದ್ದ ಟ್ರ್ಯಾಕ್ಸ್ ವಾಹನ ನಂ: ಕೆ.ಎ-29/ಎ-1442 ನೇದರಲ್ಲಿ 08 ರಿಂದ 09 ಜನರಿದ್ದ ವಾಹನಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದನ್ನು ನೋಡಿ ನಿಧಾನವಾಗಿ ಟ್ರ್ಯಾಕ್ಸ್ ಹಿಂದೆ ತನ್ನ ಬಸ್ ನಂ: ಜಿ.ಎ-03/ಎಕ್ಸ್-0666 ನೇದನ್ನು ಚಲಾಯಿಸಿಕೊಂಡು ಬರುತ್ತಿದ್ದ ಪಿರ್ಯಾದಿಯವರಿದ್ದ ಬಸ್ ಚಾಲಕನು ತನ್ನ ಬಸ್ಸನ್ನು ನಿಯಂತ್ರಿಸಿ ನಿಲ್ಲಿಸಿದಾಗ ಪಿರ್ಯಾದಿಯವರ ಬಸ್ ಹಿಂದಿನಿಂದ ಅಂದರೆ ಯಲ್ಲಾಪುರ ಕಡೆಯಿಂದ ಕಲಘಟಗಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಖಾಸಗಿ ಬಸ್ ನಂ: ಕೆ.ಎ-51/ಎ.ಎಫ್-5924 ನೇದರ ಚಾಲಕನಾದ ಆರೋಪಿ 2 ನೇಯವನು ತನ್ನ ಬಸ್ಸಿನ ವೇಗ ನಿಯಂತ್ರಿಸದೇ ಪಿರ್ಯಾದಿಯವರ  ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಬಸ್ ಹಿಂಬದಿಗೆ ಹಾಗೂ ತಾನು ಚಾಲನೆ ಮಾಡುತ್ತಿದ್ದ ಮುಂಭಾಗ ಜಖಂಗೊಳ್ಳುವಂತೆ ಮಾಡಿರುತ್ತಾನೆ. ಈ ಅಪಘಾತದಿಂದ ಎರಡೂ ಟ್ರ್ಯಾಕ್ಸ್ ವಾಹನಗಳಲ್ಲಿರುವ ಜನರಿಗೆ ಸಾದಾ ಹಾಗೂ ಭಾರೀ ಸ್ವರೂಪದ ಗಾಯನೋವು ಪಡಿಸಿ, ನಾಲ್ಕು ವಾಹನಗಳನ್ನು ಜಖಂಗೊಳಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುನೀಲ ತಂದೆ ಕಾಳಿದಾಸ ವೂಳೇಕರ್, ಪ್ರಾಯ-50 ವರ್ಷ, ವೃತ್ತಿ-ಕದಂಬ ಟ್ರಾನ್ಸಪೋರ್ಟ್ ಕಾರ್ಪೋರೇಷನ್ ಲಿಮಿಟೆಡ್‍ ನಲ್ಲಿ ಬಸ್ ಚಾಲಕ, ಸಾ|| ಮನೆ ನಂ: 418, ಪೆಧಾರದೀವಾರ್, ಪೋ: ಮಾರಜೀವಾ, ತಿಸವಾಡಿ, ನಾರ್ಥಗೋವಾ, ಗೋವಾ ರವರು ದಿನಾಂಕ: 26-03-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 454, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 25-03-2021 ರಂದು ಮಧ್ಯಾಹ್ನ 13-30 ಗಂಟೆಯಿಂದ 14-45 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ತಾಲೂಕಿನ ಓಣಿ ವಿಘ್ನೇಶ್ವರದಲ್ಲಿರುವ ಶ್ರೀ ವಾಣಿ ವಿಘ್ನೇಶ್ವರ ದೇವಾಲಯದ ಆವರಣದಲ್ಲಿದ್ದ ಸಿ.ಸಿ ಕ್ಯಾಮರಾಗೆ ಸಂಬಂಧಿಸಿದ ವಸ್ತುಗಳನ್ನಿಟ್ಟ ಕೊಠಡಿಯ ಬೀಗ ತೆಗೆದು ಅದರಲ್ಲಿದ್ದ ಸಿ.ಸಿ ಕ್ಯಾಮರಾಗೆ ಸಂಬಂಧಿಸಿದ ಡಿ.ವಿ.ಆರ್, ಯುಪಿಎಸ್, ಬ್ಯಾಟರಿ ಸೇರಿದಂತೆ ಅ||ಕಿ|| 15,000/- ರೂಪಾಯಿ ಮೌಲ್ಯದ ಹಾಗೂ ದೇವಸ್ಥಾನದ ಪ್ರಧಾನ ಬಾಗಿಲಿಗೆ ಅಳವಡಿಸಿದ ಬೀಗ ಮುರಿದು ಒಳ ಹೊಕ್ಕು ಅಲ್ಲಿಯ ಸ್ಟೀಲಿನ ಕಾಣಿಕೆ ಹುಂಡಿಯಲ್ಲಿದ್ದ ಕಾಣಿಕೆ ಹಣ ಅಂದಾಜು 1,000/- ರೂಪಾಯಿ ಹಾಗೂ ದೇವಸ್ಥಾನದಲ್ಲಿ ಅಳವಡಿಸಿದ್ದ ಹಿತ್ತಾಳೆ ಮತ್ತು ಕಂಚಿನ ಗಂಟೆ ಹಾಗೂ ಎರಡು ಹಿತ್ತಾಳೆಯ ದೀಪದ ಗುಡ್ನ, ಅ||ಕಿ|| 9,000/- ರೂಪಾಯಿ. ಹೀಗೆ ಒಟ್ಟೂ ಸುಮಾರು 35,000/- ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ತಂದೆ ಗಣಪತಿ ಹೆಗಡೆ, ಪ್ರಾಯ-69 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹೊಸ್ತೋಟ, ಪೋ: ನವಿಲಗಾರ, ತಾ: ಶಿರಸಿ ರವರು ದಿನಾಂಕ: 26-03-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಅಮೀತ್ ತಂದೆ ಸುಹಾಸ ಪಾಲೇಕರ, ಪ್ರಾಯ-42 ವರ್ಷ, ವೃತ್ತಿ-ಸಪ್ಲಾಯರ್ ಕೆಲಸ, ಸಾ|| ಮಸೀದಿ ಗಲ್ಲಿ, ಹಳೇ ದಾಂಡೇಲಿ, ದಾಂಡೇಲಿ. ನಮೂದಿತ ಆರೋಪಿತನು ದಿನಾಂಕ: 26-03-2021 ರಂದು 12-45 ಗಂಟೆಗೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯ ಅಂಬೇವಾಡಿಯ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತನ್ನ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಾ ದಾಳಿಯ ಕಾಲಕ್ಕೆ ಒಂದು ಬಾಲ್ ಪೆನ್, ಓ.ಸಿ ಅಂಕೆ-ಸಂಖ್ಯೆ ಬರೆದಿರುವ ಚೀಟಿ ಹಾಗೂ ನಗದು ಹಣ 940/- ರೂಪಾಯಿಗಳ ಸಮೇತ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಸ್, ಪಿ.ಎಸ್.ಐ, ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 26-03-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 36/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಬುದಾಜಿ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ವ್ಯಾಪಾರ, ಸಾ|| ಹಳೇ ದಾಂಡೇಲಿ, ದಾಂಡೇಲಿ. ನಮೂದಿತತ ಆರೋಪಿತನು ದಿನಾಂಕ: 26-03-2021 ರಂದು 13-30 ಗಂಟೆಗೆ ದಾಂಡೇಲಿ ನಗರ ಠಾಣಾ ವ್ಯಾಪ್ತಿಯ ಕೆ.ಸಿ ಸರ್ಕಲ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ತಮ್ಮ ಲಾಭಕ್ಕಾಗಿ ಅದೃಷ್ಟದ ಅಂಕೆ ಬಂದಲ್ಲಿ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ ಮಟಕಾ ಜುಗಾರಾಟ ಆಡಿಸುತ್ತಾ ದಾಳಿಯ ಕಾಲಕ್ಕೆ ಒಂದು ಬಾಲ್ ಪೆನ್, ಓ.ಸಿ ಅಂಕೆ-ಸಂಖ್ಯೆ ಬರೆದಿರುವ ಚೀಟಿ ಹಾಗೂ ನಗದು ಹಣ 1,130/- ರೂಪಾಯಿಗಳ ಸಮೇತ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರಭು ಆರ್. ಗಂಗನಹಳ್ಳಿ, ಪೊಲೀಸ್ ವೃತ್ತ ನಿರೀಕ್ಷಕರು, ದಾಂಡೇಲಿ ವೃತ್ತ, ದಾಂಡೇಲಿ ರವರು ದಿನಾಂಕ: 26-03-2021 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 37/2021, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರವೀಣ ಯಲ್ಲಪ್ಪ ಕಣಸಗೇರಿ, ಪ್ರಾಯ-25 ವರ್ಷ, ಸಾ|| ಗಾಂಧೀನಗರ, ದಾಂಡೇಲಿ, 2]. ಬಾಬು, ಸಾ|| ದಾಂಡೇಲಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 26-03-2021 ರಂದು 16-00 ಗಂಟೆಗೆ ಪಿರ್ಯಾದಿಯು ದಾಂಡೇಲಿಯ ಶ್ರೀ ಲಾಡ್ಜ್ ಮುಂದೆ ನಿಂತುಕೊಂಡಿದ್ದಾಗ ಆರೋಪಿ 1 ನೇಯವನು ಪಿರ್ಯಾದಿಯ ಹತ್ತಿರ ಬಂದು ಏಕಾಏಕಿ ಪಿರ್ಯಾದಿಯ ಮೊಬೈಲನ್ನು ಕಸಿದುಕೊಂಡಿದ್ದು, ಅದಕ್ಕೆ ಪಿರ್ಯಾದಿಯು ಆರೋಪಿ 1 ನೇಯವನಿಗೆ ‘ನನ್ನ ಮೊಬೈಲ್ ಯಾಕೆ ಕಸಿದುಕೊಂಡೆ? ನನಗೆ ನನ್ನ ಮೊಬೈಲ್ ಕೊಡು’ ಅಂತಾ ಹೇಳಿದಾಗ ಆರೋಪಿ 1 ನೇಯವನು ‘ನಾನು ನಿನಗೆ ನಿನ್ನ ಮೊಬೈಲ್ ಕೊಡುವುದಿಲ್ಲ. ನೀನು ಕೆ.ಸಿ ಸರ್ಕಲ್ ಹತ್ತಿರ ಬಾ’ ಅಂತಾ ಹೇಳಿ ಅಲ್ಲಿಂದ ಕೆ.ಸಿ ಸರ್ಕಲ್ ಕಡೆಗೆ ಹೋಗಿದ್ದು, ಪಿರ್ಯಾದಿಯು ತನ್ನ ಮೊಬೈಲ್ ನ್ನು ತೆಗೆದುಕೊಂಡು ಬರಲು ದಾಂಡೇಲಿಯ ಕೆ.ಸಿ ಸರ್ಕಲ್ ಹತ್ತಿರ ಹೋದಾಗ ಆರೋಪಿ 1 ನೇಯವನು ಕೆ.ಸಿ ಸರ್ಕಲ್ ಹತ್ತಿರ ಇರುವ ಫಿಶ್ ಲ್ಯಾಂಡ್ ಹೊಟೇಲಿನ ಮುಂದೆ ನಿಂತುಕೊಂಡಿದ್ದು, ಪಿರ್ಯಾದಿಯು ಸಾಯಂಕಾಲ 04-30 ಗಂಟೆಯ ಸುಮಾರಿಗೆ ಆರೋಪಿ 1 ನೇಯವನ ಹತ್ತಿರ ಹೋಗಿ 'ನನಗೆ ನನ್ನ ಮೊಬೈಲ್ ಕೊಡು’ ಅಂತಾ ಹೇಳಿದ್ದಕ್ಕೆ ಆರೋಪಿ 1 ನೇಯವನು ‘ನಾನು ಕೊಡುವುದಿಲ್ಲ, ಬೋಸಡಿಕೆ’ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ ಅಲ್ಲಿಯೇ ಇದ್ದ ಒಂದು ಕಲ್ಲನ್ನು ತೆಗೆದುಕೊಂಡು ಪಿರ್ಯಾದಿಯ ತಲೆಗೆ ಹೊಡೆದಿದ್ದು, ಅದಕ್ಕೆ ಪಿರ್ಯಾದಿಯು ‘ನನಗೆ ಯಾಕೆ ಹೊಡೆಯುತ್ತೀಯಾ?’ ಅಂತಾ ಹೇಳಿದ್ದಕ್ಕೆ ತನ್ನ ಕೈಯಲ್ಲಿದ್ದ ಸ್ಟೀಲಿನ ಬಳೆಯನ್ನು (ಕೈಗಡ) ತೆಗೆದುಕೊಂಡು ತಲೆಗೆ ಹೊಡೆದಿದ್ದಲ್ಲದೇ, ಆರೋಪಿ 1 ನೇಯವನ ಜೊತೆಯಲ್ಲಿದ್ದ ಆರೋಪಿ 2 ನೇಯವನು ಕೈಯಿಂದ ಪಿರ್ಯಾದಿಯ ಮುಖಕ್ಕೆ ಹೊಡೆದು ಗಾಯನೋವು ಪಡಿಸಿದ್ದಲ್ಲದೇ, ಕೆಲವು ಜನರು ಬಂದು ಜಗಳ ಬಿಡಿಸಿದ್ದು, ನಂತರ ಆರೋಪಿತರು ಹೋಗುವಾಗ ‘ಸೂಳೆ ಮಗನೇ ಈ ದಿವಸ ನೀನು ಉಳಿದುಕೊಂಡೆ. ನಿನ್ನನ್ನು ಒಂದಲ್ಲ ಒಂದು ದಿನ ಕೊಂದೆ ಬಿಡುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಮೃತ್ಯುಂಜಯ ಮಠಪತಿ, ಪ್ರಾಯ-25 ವರ್ಷ, ವೃತ್ತಿ-ಚಾಲಕ, ಸಾ|| ಪೋಸ್ಟ ಆಫೀಸ್ ಎದುರಿಗೆ, ಬರ್ಚಿ ರಸ್ತೆ, ದಾಂಡೇಲಿ ರವರು ದಿನಾಂಕ: 26-03-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 26-03-2021

at 00:00 hrs to 24:00 hrs

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2021, ಕಲಂ: 174(ಸಿ) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ವೀಣಾ ಕೋಂ. ಪರುಶುರಾಮ ಜೋಗಳೆಕರ, ಪ್ರಾಯ-31 ವರ್ಷ, ವೃತ್ತಿ-ಗೃಹಿಣಿ, ಸಾ|| ಅಶೋಕ ನಗರ, ತಾ: ಶಿರಸಿ. ನಮೂದಿತೆ ಇವಳು ಪಿರ್ಯಾದಿಯ ಮಗಳಾಗಿದ್ದು, ಇವಳನ್ನು ದಿನಾಂಕ: 28-06-2017 ರಂದು ಶಿರಸಿ ಅಶೋಕನಗರದ ನಿವಾಸಿಯಾದ ಪರಶುರಾಮ ಕೃಷ್ಣ ಜೋಗಳೆಕರ ಈತನೊಂದಿಗೆ ಮದುವೆ ಮಾಡಿದ್ದು, ಮದುವೆಯ ನಂತರ ತನ್ನ ಮಗಳು ಗಂಡನ ಮನೆಯಲ್ಲಿ ವಾಸವಿದ್ದು, ಅವರಿಗೆ ಕುಮಾರಿ: ಸಿರಿ ಹೆಸರಿನ ಎರಡು ವರ್ಷದ ಮಗುವಿರುತ್ತದೆ. ನನ್ನ ಮಗಳ ಗಂಡನಾದ ಪರಶುರಾಮ ಜೋಗಳೆಕರ ಈತನು ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದವನು, ಕಳೆದ 04 ತಿಂಗಳುಗಳಿಂದ ಹೆಚ್ಚಿನ ಶಿಕ್ಷಣವನ್ನು ಮಾಡಲು ಮಂಗಳೂರಿಗೆ ಹೋಗಿದ್ದು, ಮನೆಗೆ ಬಂದು ಹೋಗುವುದು ಮಾಡುತ್ತಿದ್ದನು. ಮನೆಯಲ್ಲಿ ತನ್ನ ಮಗಳಾದ ವೀಣಾ ಹಾಗೂ ಅವಳ ಮಗಳು ಅತ್ತೆ-ಮಾವನ ಜೊತೆಯಲ್ಲಿ ವಾಸವಿದ್ದಳು. ಹೀಗಿರುವಾಗ ದಿನಾಂಕ: 25-03-2021 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ನನ್ನ ಅಳಿಯನಾದ ಪರಶುರಾಮ ಜೋಗಳೆಕರ ಈತನು ನನಗೆ ಕರೆ ಮಾಡಿ ತನ್ನ ಮಗಳಾದ ವೀಣಾಳ ಮೊಬೈಲಿಗೆ ಗೊತ್ತಿಲ್ಲದ ನಂಬರಗಳಿಂದ ಕೆಟ್ಟ ಕೆಟ್ಟ ಶಬ್ದಗಳ ಮೆಸೇಜ್ ಬಂದಿದ್ದು, ಅವಳಿಗೆ ವಿಚಾರಿಸಿದರೆ ಏನು ಹೇಳುತ್ತಿಲ್ಲ, ಶಿರಸಿಗೆ ಬಂದು ಅವಳಿಗೆ ಬುದ್ಧಿವಾದ ಹೇಳಲು ಹೇಳಿದನು. ಅದರಂತೆ ತಾನು ಮತ್ತು ತನ್ನ ಮಗನಾದ ಉದಯ ಬೋರಕರ ಸಂಜೆ 05-00 ಗಂಟೆಯ ಸುಮಾರಿಗೆ ಶಿರಸಿಗೆ ಬಂದು ಮನೆಯ ಹಿರಿಯರೊಂದಿಗೆ ಮಾತುಕತೆ ಮಾಡಿ ತನ್ನ ಮಗಳು ಮತ್ತು ಅಳಿಯನಿಗೆ ಒಳ್ಳೆಯ ರೀತಿಯಿಂದ ಸಂಸಾರ ನಡೆಸುವಂತೆ ತಿಳುವಳಿಕೆ ಹೇಳಿ ಮರಳಿ ಊರಿಗೆ ಹೋಗಿದ್ದೆವು. ಹೀಗಿರುವಾಗ ನನ್ನ ಅಳಿಯನಾದ ಪರಶುರಾಮ ಕೃಷ್ಣ ಜೋಗಳೆಕರ ಈತನು ದಿನಾಂಕ: 26-03-2021 ರಂದು ಬೆಳಿಗ್ಗೆ 06-20 ಗಂಟೆಯ ಸುಮಾರಿಗೆ ತನಗೆ ಕರೆ ಮಾಡಿ ತನ್ನ ಮಗಳಾದ ವೀಣಾ ಪರಶುರಾಮ ಜೋಗಳೇಕರ ಮನೆಯ ಬೆಡ್ ರೂಮಿನ ಪ್ಯಾನಿಗೆ ಸೀರೆಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ ಅಂತಾ ತಿಳಿಸಿದನು. ವಿಷಯ ತಿಳಿದ ತಾನು ಮತ್ತು ತನ್ನ ಮಗ ಉದಯ ಬೋರಕರ ಕೂಡಲೇ ಭಟ್ಕಳದಿಂದ ಶಿರಸಿಗೆ ಬಂದು ನನ್ನ ಮಗಳು ನೇಣು ಹಾಕಿಕೊಂಡಿರುವುದನ್ನು ನೋಡಿದ್ದು, ಸೀರೆಯಿಂದ ಅವಳು ಮಲಗಿದ್ದ ಬೆಡ್ ರೂಮಿನ ಪ್ಯಾನಿಗೆ ಸುತ್ತಿಕೊಂಡು ಕುತ್ತಿಗೆಗೆ ನೇಣು ಹಾಕಿಕೊಂಡಿದ್ದು ಕಂಡುಬಂದಿರುತ್ತದೆ. ಈ ಬಗ್ಗೆ ತನ್ನ ಮಗಳ ಮನೆಯವರಿಗೆ ವಿಚಾರಿಸಿದಾಗ ರಾತ್ರಿ ತಮ್ಮ ಜೊತೆಯಲ್ಲಿ ಊಟ ಮಾಡಿದವಳು, ಮನೆಯ ಬೆಡ್ ರೂಮಿಗೆ ಹೋಗಿ ಮಗುವಿನ ಜೊತೆಯಲ್ಲಿ ಮಲಗಿದ್ದು, ಅವಳ ಅತ್ತೆಯಾದ ರಾಧಾ ಜೋಗಳೇಕರ ಸಹ ಅವಳೊಂದಿಗೆ ಮಲಗಿದ್ದು, ಬೆಳಿಗ್ಗೆ 03-00 ಗಂಟೆಯ ಸುಮರಿಗೆ ಅತ್ತೆಯಾದ ರಾಧಾ ಬಾತ್ ರೂಮಿಗೆ ಹೋಗಿ ಮರಳಿ ಅದೇ ರೂಮಿನ ಪಕ್ಕದ ಹಾಲ್ ನಲ್ಲಿ ಮಲಗಿದ್ದು, ಬೆಳಿಗೆ 06-00 ಗಂಟೆಯ ಸುಮಾರಿಗೆ ಹೋಗಿ ನೋಡಿದಾಗ ತನ್ನ ಮಗಳು ನೇಣು ಹಾಕಿಕೊಂಡಿರುವುದನ್ನು ನೋಡಿರುವುದಾಗಿ ತಿಳಿಸಿದರು. ಇದರಿಂದ ತನ್ನ ಮಗಳು ದಿನಾಂಕ: 26-03-2021 ರಂದು ಬೆಳಿಗ್ಗೆ 03-00 ಗಂಟೆಯಿಂದ 06-00 ಗಂಟೆಯ ಅವಧಿಯಲ್ಲಿ ಅವಳು ಮಲಗಿದ್ದ ರೂಮಿನ ಪ್ಯಾನಿಗೆ ಸೀರೆಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದ್ದು, ಆದರೂ ಸಹ ತನ್ನ ಮಗಳ ಕಾಲು ಜೋತು ಬೀಳದೆ ಮಡಚಿದ್ದು ಹಾಗೂ ಸೀರೆ ಕೂಡಾ ಬಲವಾಗಿ ಇಲ್ಲದ್ದು ಕಂಡುಬಂದಿದ್ದರಿಂದ ತನ್ನ ಮಗಳ ಮರಣದಲ್ಲಿ ಸಂಶಯವಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಲತಾ ಕೋಂ. ದುರ್ಗಪ್ಪ ಬೋರಕರ, ಪ್ರಾಯ-56 ವರ್ಷ, ವೃತ್ತಿ-ಗೃಹಿಣಿ, ಸಾ|| ಮಾದನಗೇರಿ, ತಾ: ಕುಮಟಾ, ಹಾಲಿ ಸಾ|| ತಾಲೂಕ ಪಂಚಾಯತ್ ಕ್ವಾರ್ಟರ್ಸ್, ತಾ: ಭಟ್ಕಳ ರವರು ದಿನಾಂಕ: 26-03-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ಇತ್ತೀಚಿನ ನವೀಕರಣ​ : 27-03-2021 05:13 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080