ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 26-05-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 110/2021, ಕಲಂ: 279, 337, 338 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ರಮೇಶ ತಂದೆ ಮಲ್ಲಪ್ಪಾ ಕಿಟಕಣ್ಣನವರ, ಸಾ|| ಮಾಸಕಟ್ಟಿ, ತಾ: ಕುಷ್ಠಗಿ, ಜಿ: ಕೊಪ್ಪಳ (ಫೋರ್ಸ್ ಕ್ರೂಸರ್ ವಾಹನ ನಂ: ಕೆ.ಎ-20/ಡಿ-5354 ನೇದರ ಚಾಲಕ). ಈತನು ದಿನಾಂಕ: 26-05-2021 ರಂದು ಬೆಳಿಗ್ಗೆ 04-15 ಗಂಟೆಗೆ ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ತನ್ನ ಫೋರ್ಸ್ ಕ್ರೂಸರ್ ವಾಹನ ನಂ: ಕೆ.ಎ-20/ಡಿ-5354 ನೇದನ್ನು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಮಿರ್ಜಾನಿನ ಕೈರೆಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಮೇಲೆ ನಿಷ್ಕಾಳಜಿಯಿಂದ ಚಲಾಯಿಸಿ, ರಸ್ತೆಯ ಡಿವೈಡರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮವಾಗಿ ವಾಹನವು ಎಡ ಮಗ್ಗುಲಾಗಿ ಪಲ್ಟಿಯಾಗಿ ಬಿದ್ದುದರಿಂದ ವಾಹನದಲ್ಲಿ ಪ್ರಯಾಣಿಸುತ್ತಿದ್ದ 1). ಶ್ರೀಮತಿ ಗಂಗಮ್ಮಾ ಶರಣಪ್ಪಾ ಬಾವಿಮನಿ, 2). ಬಸವ ಮಲ್ಲಪ್ಪಾ ನಂದವಾಡಗಿ, 3). ಶ್ರೀಮತಿ ರೇಣುಕಾ ಬಸವ ನಂದವಾಡಗಿ, 4). ಹನಮಂತ ಹುಗ್ಗಪ್ಪಾ ಗೌಡ್ರ, 5). ನೇತ್ರಾ ಬಸವ ನಂದವಾಡಿ, ಇವರುಗಳ ಎಡಗೈ ಮುರಿದು, ಮುಖಕ್ಕೆ ಹಾಗೂ ಹಣೆಗೆ ತೀವೃ ಗಾಯವಾಗಿದ್ದು, 6). ಪಿರ್ಯಾದಿಗೆ, 7). ಭಾಗ್ಯ ಶರಣಪ್ಪಾ ಬಾವಿಮನಿ, 8). ಮೈಬೂಬಸಾಬ್ ಹಸೇನಸಾಬ್ ಕೋಲಾರ, ಇವರುಗಳಿಗೆ ಸಾದಾ ಗಾಯವಾಗಲು ಮತ್ತು ವಾಹನ ಜಖಂ ಆಗಲು ಆರೋಪಿ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಶರಣಪ್ಪಾ ತಂದೆ ಮೈಲಾರಪ್ಪಾ ಬಾವಿಮನಿ, ಪ್ರಾಯ-40 ವರ್ಷ, ವೃತ್ತಿ-ಕೆ.ಎಮ್.ಎಫ್ ಟ್ಯಾಂಕರ್ ಲಾರಿ ಚಾಲಕ, ಸಾ|| ಬಂಡಿ, ತಾ: ಯಲಬುರ್ಗಾ, ಜಿ: ಕೊಪ್ಪಳ ರವರು ದಿನಾಂಕ: 26-05-2021 ರಂದು 07-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 152/2021, ಕಲಂ: ಯುವತಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವತಿ ಕುಮಾರಿ: ಸೌಮ್ಯಾ ತಂದೆ ನಾಗೇಶ ನಾಯ್ಕ, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೈಂಗಾರಕೇರಿ, ಹಳದೀಪುರ, ತಾ: ಹೊನ್ನಾವರ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 24-05-2021 ರಂದು ಬೆಳಿಗ್ಗೆ 07-30 ಗಂಟೆಗೆ ತನ್ನ ಗೆಳತಿ ಪ್ರೀತಿ ಎನ್ನುವವಳ ಮನೆಯಾದ ಗೇರುಸೊಪ್ಪಾಗೆ ಹೋಗಿ ಬರುತ್ತೇನೆ ಅಂತಾ ಹೇಳಿ ತನ್ನ ಮನೆಯಿಂದ ಹೋದವಳು, ಅವಳ ಗೆಳತಿಯ ಮನೆಗೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ, ಈವರೆಗೆ ಮನೆಗೂ ಮರಳಿ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಪಾರ್ವತಿ ಕೋಂ. ನಾಗೇಶ ನಾಯ್ಕ, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೈಂಗಾರಕೇರಿ, ಹಳದೀಪುರ, ತಾ: ಹೊನ್ನಾವರ ರವರು ದಿನಾಂಕ: 26-05-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 152/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಅನುಷಾ ಕೋಂ. ಮಹಾವೀರ ಜೈನ್, ಪ್ರಾಯ-24 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಜೈನಕೇರಿ, ಜಲವಳ್ಳಿ, ತಾ: ಹೊನ್ನಾವರ. ಪಿರ್ಯಾದಿಯ ಹೆಂಡತಿಯಾದ ಇವಳು ದಿನಾಂಕ: 25-05-2021 ರಂದು ರಾತ್ರಿ 22-30 ಗಂಟೆಯ ಸಮಯಕ್ಕೆ ತನ್ನ ಮನೆಯಾದ ಜೈನಕೇರಿ, ಜಲವಳ್ಳಿ, ಹೊನ್ನಾವರದ ಮನೆಯಲ್ಲಿ ಇದ್ದವಳು, ರಾತ್ರಿ ಬಹಿರ್ದೆಸೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು, ಈವರೆಗೂ ವಾಪಸ್ ಬಾರದೇ ತನ್ನ ಇರುವಿಕೆಯ ಬಗ್ಗೆ ಸಹ ತಿಳಿಸದೇ ಕಾಣೆಯಾಗಿದ್ದು, ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹಾವೀರ ತಂದೆ ಚಂದಯ್ಯಾ ಜೈನ್, ಪ್ರಾಯ-32 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಜೈನಕೇರಿ, ಜಲವಳ್ಳಿ, ತಾ: ಹೊನ್ನಾವರ ರವರು ದಿನಾಂಕ: 26-05-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 76/2021, ಕಲಂ: 324, 506 ಐಪಿಸಿ ವಿವರ...... ನಮೂದಿತ ಆರೋಪಿತರು 1]. ಸೈಯದ್ ನವಾಜ್ ಸೈಯದ್ ಅಹ್ಮದ್ ಬಾಪುಸಾಬ್, 2]. ಸೈಯದ್ ಜಿಯಾ ಸೈಯದ್ ಅಹ್ಮದ್ ಬಾಪುಸಾಬ್, ಸಾ|| (ಇಬ್ಬರೂ) ಹೆಬ್ಳೆ, ತಾ: ಭಟ್ಕಳ. ಈ ನಮೂದಿತ ಆರೋಪಿತರು ಹಾಗೂ ಪಿರ್ಯಾದಿಯವರು ಸ್ವಂತ ಅಣ್ಣ-ತಮ್ಮಂದಿರಿದ್ದು, ಪಿರ್ಯಾದಿಯು ದಿನಾಂಕ: 26-05-2021 ರಂದು 11-30 ಗಂಟೆಯ ಸುಮಾರಿಗೆ ತನ್ನ ಮಗುವಿಗೆ ಹಾಲು ತರಲು ಮನೆಯಿಂದ ಗಾಂಧಿನಗರ ಸರ್ಕಲ್ ಹತ್ತಿರ ಬಂದು ಹಾಲು ತೆಗೆದುಕೊಂಡು ಹೋಗುವಾಗ ಕಲಿಂ ಗ್ಯಾರೇಜ್ ಹತ್ತಿರ ನಮೂದಿತ ಆರೋಪಿತರು ಮೋಟಾರ್ ಸೈಕಲ್ ಮೇಲೆ ಬಂದು ಪಿರ್ಯಾದಿಯ ಸ್ಕೂಟಿಯನ್ನು ನಿಲ್ಲಿಸಿ, ಆರೋಪಿತರಿಬ್ಬರೂ ಸೇರಿ ಪಿರ್ಯಾದಿಯ ಮೈ ಮೇಲೆ, ಮುಖದ ಮೇಲೆ ಹೊಡೆದು ಆರೋಪಿ 1 ನೇಯವನು ಪಿರ್ಯಾದಿಯನ್ನು  ಹಿಡಿದುಕೊಂಡು ಪಕ್ಕದಲ್ಲಿ ಬಿದ್ದ ಕಲ್ಲನ್ನು ಆರೋಪಿ 2 ನೇಯವನು ಎತ್ತಿಕೊಂಡು ಪಿರ್ಯಾದಿಯ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದಲ್ಲದೇ, ಹೋಗುವಾಗ ಆರೋಪಿತರಿಬ್ಬರೂ ‘ಚೋಡೆಂಗೇ ನಹಿ, ಬಚ್ಚೋಕೋ ಫ್ಯಾಮಿಲಿ ಕೋ ಬಿ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಸೈಯದ್ ಸಲೀಮ್ ತಂದೆ ಸೈಯದ್ ಅಹ್ಮದ್ ಬಾಪುಸಾಬ್, ಪ್ರಾಯ-34 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಬಬ್ಬನಕಲ್ ರೋಡ್, ಗಣೇಶ ನಗರ, ಹೆಬ್ಳೆ, ತಾ: ಭಟ್ಕಳ ರವರು ದಿನಾಂಕ: 26-05-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 51/2021, ಕಲಂ: 269, 270 ಐಪಿಸಿ ಹಾಗೂ ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ವಿವರ...... ನಮೂದಿತ ಆರೋಪಿತ ಮಾರುತಿ ತಂದೆ ನಾಗೇಶ ಭೋವಿ, ಪ್ರಾಯ-42 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಮಾರುತಿ ದೇವಸ್ಥಾನದ ಹತ್ತಿರ, ಗಣೇಶ ನಗರ, ತಾ: ಶಿರಸಿ. ಈತನು ಕೊರೋನಾ ಸಾಂಕ್ರಾಮಿಕ ರೋಗವು ಹರಡುವುದನ್ನು ತಡೆಗಟ್ಟಲು ಘನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ಸಾಂಕ್ರಾಮಿಕ ರೋಗ ತಡೆಯಲು ಹೊರಡಿಸಿದ ನಿಯಮಗಳನ್ನು ಉಲ್ಲಂಘಿಸಿ, ಮುಖಕ್ಕೆ ಮಾಸ್ಕ್ ಧರಿಸದೇ ಸಮಾಜಿಕ ಅಂತರ ಕಾಯ್ದುಕೊಳ್ಳದೆ, ದಿನಾಂಕ: 26-05-2021 ರಂದು 18-10 ಗಂಟೆಯ ಸುಮಾರಿಗೆ ಶಿರಸಿ ನಗರದ ಗಣೇಶನಗರದ ಶ್ರೀ ಮಾರುತಿ ದೇವಸ್ಥಾನದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಜನರಿಗೆ ಮುಕ್ತವಾಗಿ ಮದ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟ ಕಾಲಕ್ಕೆ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ 1). Haywards Cheers Whisky ಹೆಸರಿನ 90 ML ಅಳತೆಯ ಪ್ಯಾಕೆಟ್ ಗಳು-15, ತಲಾ ಒಂದಕ್ಕೆ 35.13/- ರೂಪಾಯಿಯಂತೆ ಒಟ್ಟೂ 526.95/- ರೂಪಾಯಿ, 2). ಮದ್ಯವನ್ನು ಕುಡಿಯಲು ಉಪಯೋಗಿಸಿದ se & Through Plastic Glass-4, ಅ||ಕಿ|| 00.00/- ರೂಪಾಯಿ, 3). 01 ಲೀಟರ್ ನೀರಿನ ಖಾಲಿ ಬಾಟಲಿಗಳು-02, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಭೀಮಾಶಂಕರ ಸಿನ್ನೂರ ಸಂಗಣ್ಣ, ಪಿ.ಎಸ್.ಐ, ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 26-05-2021 ರಂದು 20-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2021, ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜನಾರ್ಧನ್ ಎಚ್. ಆರ್. ತಂದೆ ಹುಲಿಕಲ್ ರಾಮಸ್ವಾಮಿ, ಪ್ರಾಯ-62 ವರ್ಷ, ವೃತ್ತಿ-ಬೇಕರಿ ವ್ಯವಹಾರ, ಸಾ|| ಸೋಮಾನಿ ಸರ್ಕಲ್ ಹತ್ತಿರ, ದಾಂಡೇಲಿ. ಜಗತ್ತಿನಾದ್ಯಂತ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡಿಕೊಂಡಿದ್ದು, ಅದು ಭಾರತ ದೇಶದಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಅದರಂತೆ ಕರ್ನಾಟಕ ರಾಜ್ಯ ಸರಕಾರ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ ಕಾರವಾರ ರವರು ದಿನಾಂಕ: 07-06-2021 ರವರೆಗೆ ಲಾಕಡೌನ್ ಘೊಷಣೆ ಮಾಡಿ ಆದೇಶಿಸಿದ್ದು, ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಿ ದಾಂಡೇಲಿ ನಗರವನ್ನು ವಿಶೇಷ ಕಂಟೈನಮೆಂಟ್ ಜೋನ್ ಆಗಿ ಘೋಷಿಸಿ, ಅಂಗಡಿಗಳಲ್ಲಿ ವ್ಯಾಪಾರ ವಹಿವಾಟನ್ನು ನಿಷೇಧಿಸಿದ್ದು ಇರುತ್ತದೆ. ಆದರೆ ನಮೂದಿತ ಆರೋಪಿತನು ತಾನು ಬೇಕರಿಯನ್ನು ತೆರೆದು ವ್ಯಾಪಾರ ಮಾಡಿದರೆ ಅಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ, ಸಾಂಕ್ರಾಮಿಕ ರೋಗ ಒಬ್ಬರಿಂದ ಒಬ್ಬರಿಗೆ ಹರಡಿ ಪ್ರಾಣಕ್ಕೆ ತೊಂದರೆ ಆಗಬಹುದು ಅಂತಾ ಗೊತ್ತಿದ್ದರೂ ಸಹ ಹಾಗೂ ಲಾಕಡೌನ್ ಮತ್ತು ಸರಕಾರದ ಆದೇಶವನ್ನು ಪಾಲನೆ ಮಾಡದೇ ಉದ್ದೇಶಪೂರ್ವಕವಾಗಿ ದಿನಾಂಕ: 26-05-2021 ರಂದು 11-00 ಗಂಟೆಯಿಂದ 11-15 ಗಂಟೆಯವರೆಗೆ ದಾಂಡೇಲಿಯ ಸೋಮಾನಿ ಸರ್ಕಲ್ ಹತ್ತಿರದಲ್ಲಿರುವ ತನ್ನು ಬಿ.ಬಿ ಬೇಕರಿಯನ್ನು ತೆರೆದು ವ್ಯಾಪಾರ ವಹಿವಾಟು ನಡೆಸಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಸ್, ಪಿ.ಎಸ್.ಐ (ಕಾ&ಸು), ದಾಂಡೇಲಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 26-05-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಂಜಯ ತಂದೆ ವಿಠ್ಠಲ ಭಂಡಾರಕರ, ಪ್ರಾಯ-55 ವರ್ಷ, ಸಾ|| ಲಕ್ಷ್ಮಿನಾರಾಯಣ ಗಲ್ಲಿ, ಸಿದ್ದಾಪುರ ಶಹರ, 2]. ಸುರೇಶ @ ಶೇಷಗಿರಿ ತಂದೆ ರಾಮಾ ನಾಯ್ಕ, ಪ್ರಾಯ-50 ವರ್ಷ, ಸಾ|| ಕೊಪ್ಪಾ, ಕೊಂಡ್ಲಿ, ಸಿದ್ದಾಪುರ ಶಹರ. ಈ ನಮೂದಿತ ಆರೋಪಿತರು ಸೇರಿಕೊಂಡು ದಿನಾಂಕ: 25-05-2021 ರಂದು 19-00 ಗಂಟೆಗೆ ಸಿದ್ದಾಪುರ ಶಹರದ ಮೂರ್ತಿ ಮೆಡಿಕಲ್ಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಓ.ಸಿ ಅಂಕೆ-ಸಂಖ್ಯೆಗಳ ಮೇಲೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣವನ್ನು ಪಂಥ ಕಟ್ಟಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ದಾಳಿಯ ಕಾಲಕ್ಕೆ 1). ನಗದು ಹಣ 1,830/- ರೂಪಾಯಿ, 2). ಬಾಲ್ ಪೆನ್-01, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01 ಯೊಂದಿಗೆ ಆರೋಪಿ 1 ನೇಯವನು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 2 ನೇಯವನು ದಾಳಿಯ ಕಾಲಕ್ಕೆ ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ಚಂದಾವರ, ಪಿ.ಎಸ್.ಐ (ಕ್ರೈಂ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 26-05-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2021, ಕಲಂ: 307, 448, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಲಾಸ ತಂದೆ ರಾಮಾ ನಾವೇಲಕರ, ಸಾ|| ದುರ್ಗಿ, ತಾ: ಜೋಯಿಡಾ. ನಮೂದಿತ ಆರೋಪಿತನು ಪಿರ್ಯಾದಿಯ ತಮ್ಮನಾಗಿದ್ದು, ಪಿರ್ಯಾದಿಯವರು 1998 ನೇ ಸಾಲಿನಲ್ಲಿ ತನ್ನ ಹೆಂಡತಿ: ರುಕ್ಮಿಣಿ ಇವಳನ್ನು ಕೊಲೆ ಮಾಡಿದ ಆರೋಪದಲ್ಲಿ 14 ವರ್ಷಗಳ ಜೈಲು ಶಿಕ್ಷೆ ಮುಗಿಸಿಕೊಂಡು, ಕಳೆದ 7-8 ವರ್ಷಗಳ ಹಿಂದೆ ಮನೆಗೆ ಬಂದು ತನ್ನ ಪಾಲಿನ ಒಂದು ಎಕರೆ ಆಸ್ತಿಯನ್ನು ಸಾಗುವಳಿ ಮಾಡಿಕೊಂಡು ಪ್ರತ್ಯೇಕವಾಗಿ ಗದ್ದೆಯಲ್ಲಿ ಮನೆ ಮಾಡಿಕೊಂಡು ಒಬ್ಬನೆ ಉಳಿದುಕೊಂಡಿದ್ದು, ಪಿರ್ಯಾದಿಯವರು ಜೈಲಿನಲ್ಲಿರುವಾಗ ಪಿರ್ಯಾದಿಯವರ ಪಾಲಿನ ಜಮೀನು ಸಾಗುವಳಿ ಮಾಡಿಕೊಂಡಿದ್ದ ಆರೋಪಿತನು ಜಮೀನು ಬಿಟ್ಟು ಕೊಡುವಂತೆ ಹೇಳುತ್ತಾ ಪಿರ್ಯಾದಿಯವರಿಗೆ ಹೊಡೆಯುತ್ತಾ ಇದ್ದರೂ ಸಹ ಕಂಪ್ಲೇಂಟ್ ಮಾಡದೇ ಇದ್ದರು. ದಿನಾಂಕ: 25-05-2021 ರಂದು ಸಾಯಂಕಾಲ 07-15 ಗಂಟೆಯಿಂದ 07-30 ಗಂಟೆಯ ಸುಮಾರಿಗೆ ಪಿರ್ಯಾದಿಯವರು ತಮ್ಮ ಮನೆಯ ಕಟ್ಟೆಯ ಮೇಲೆ ನಿಂತಿರುವಾಗ ಅಲ್ಲಿಗೆ ಬಂದ ಆರೋಪಿತನು ಪಿರ್ಯಾದಿಗೆ  ‘ಪೊದ್ರಿಚಾ, ಏನು ಮಾಡುತ್ತಾ ಇದ್ದೀ? ನೀನು ಹೊಲ ಬಿಟ್ಟು ಕೊಡುತ್ತಿಯಾ ಇಲ್ಲಾ?’ ಅಂತಾ ಕೇಳಿದ್ದು, ಅದಕ್ಕೆ ಪಿರ್ಯಾದಿಯವರು ‘ಬಿಟ್ಟು ಕೊಡಲು ಆಗುವುದಿಲ್ಲ’ ಅಂತಾ ಹೇಳಿದ್ದಕ್ಕೆ, ‘ರಾಂಡೇಚಾ, ನಿನಗೆ ಬಿಡುವುದಿಲ್ಲ. ನಿನಗ ಕೊಂದು ಹಾಕುತ್ತೇನೆ’ ಅಂತಾ ಹೇಳಿದವನೇ, ಕತ್ತಲಿನಲ್ಲಿ ತನ್ನ ಕೈಯಲ್ಲಿದ್ದ ಯಾವುದೋ ಒಂದು ಭಾರವಾದ ಮತ್ತು ಹರಿತವಾದ ವಸ್ತುವಿನಿಂದ ಪಿರ್ಯಾದಿಯವರಿಗೆ ತಲೆಯ ಭಾಗದಲ್ಲಿ ಹೊಡೆದು, ಪಿರ್ಯಾದಿಯವರು ಕೆಳಗೆ ಬಿದ್ದ ನಂತರ ಬೆನ್ನಿನ ಭಾಗದಲ್ಲಿ ಹೊಡೆದಿರುತ್ತಾನೆ. ಪಿರ್ಯಾದಿಯವರು ಮೂರ್ಛೆ ಹೋಗಿ ಸ್ಥಳದಲ್ಲಿ ಬಿದ್ದುಕೊಂಡಿದ್ದವರು, ದಿನಾಂಕ: 26-05-2021 ರಂದು ಬೆಳಿಗ್ಗೆ ಎಚ್ಚರವಾಗಿ ನೋಡಿದಾಗ ಸ್ಥಳದಲ್ಲಿ ರಕ್ತ ಬಿದ್ದುಕೊಂಡಿತ್ತು. ಪಿರ್ಯಾದಿಯವರ ಹಣೆಯ ಮೇಲೆ ತಲೆಯ ಭಾಗದಲ್ಲಿ ಹಾಗೂ ಎಡಕಿವಿಯ ಭಾಗದಲ್ಲಿ ಭಾರೀ ಪೆಟ್ಟಾಗಿರುತ್ತವೆ. ವಿಷಯ ತಿಳಿದು ರಾಮನಗರದಿಂದ ಬಂದ ಪಿರ್ಯಾದಿಯವರ ಮಗಳು: ಪ್ರತಿಮಾ ಇವಳು ಆರೋಪಿತನಿಗೆ ‘ಯಾಕೆ ಈ ರೀತಿ ಹೊಡೆದೆ?’ ಅಂತಾ ಕೇಳಿದ್ದಕ್ಕೆರೆ, ಆರೋಪಿತನು ‘ಅವನು ಸತ್ತಾ ಅಂತಾ ಬಂದಿದ್ದೆ. ಅವನು ಸತ್ತಿಲ್ಲಾ ಏನು? ನೀನು ಏನು ಮಾಡಕೋತಿ ಮಾಡಕೋ ಹೋಗು, ಪೊಲೀಸ್ ಕಂಪ್ಲೇಂಟ್ ಕೊಡತಿಯಾ, ಕೊಡು’ ಅಂತಾ ಪಿರ್ಯಾದಿಯ ಮಗಳಿಗೆ ಜೋರು ಮಾಡಿರುತ್ತಾನೆ. ಪಿರ್ಯಾದಿಯವರು ತನ್ನ ಮೇಲೆ ಮರಣಾಂತಿಕ ಹಲ್ಲೆ ಮಾಡಿದ ತನ್ನ ತಮ್ಮನಾದ ನಮೂದಿತ ಆರೋಪಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಪಾಂಡುರಂಗ ತಂದೆ ರಾಮಾ ನಾವೇಲಕರ, ಪ್ರಾಯ-60 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ದುರ್ಗಿ, ತಾ: ಜೋಯಿಡಾ ರವರು ದಿನಾಂಕ: 26-05-2021 ರಂದು 20-55 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 26-05-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 27/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಈಶ್ವರ ತಂದೆ ನಾರಾಯಣ ಪಟಗಾರ, ಪ್ರಾಯ-72 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕೊನ್ನಾಳ, ತಾ: ಅಂಕೋಲಾ. ಇವರು ದಿನಾಲೂ ಸಾರಾಯಿ ಕುಡಿಯುವ ಚಟದವರಾಗಿದ್ದು, ದಿನಾಂಕ: 26-05-2021 ರಂದು ಸಾರಾಯಿ ಕುಡಿದುಕೊಂಡು ಮನೆಗೆ ಬಂದು ಮನೆಯಲ್ಲಿ ಎಲ್ಲರೊಂದಿಗೆ ಕೂಡಿಕೊಂಡು ಊಟ ಮಾಡಿಕೊಂಡಿಕೊಂಡು ಮನೆಯಲ್ಲಿ ತಮ್ಮದೇ ಮಲಗುವ ಕೋಣೆಯಲ್ಲಿ ಮಲಗಿಕೊಂಡಿದ್ದವರು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 25-05-2021 ರಂದು 22-00 ಗಂಟೆಯಿಂದ ದಿನಾಂಕ: 26-05-2021 ರಂದು ಬೆಳಿಗ್ಗೆ 08-30 ಗಂಟೆಯ ನಡುವಿನ ವೇಳೆಯಲ್ಲಿ ಮನೆಯಲ್ಲಿ ಎಲ್ಲರೂ ಮಲಗಿದ ವೇಳೆಯಲ್ಲಿ ತಾನು ವಾಸವಾಗಿರುವ ಮನೆಯ ಕೋಣೆಯಲ್ಲಿ ಇವರು ಫ್ಯಾನ್ ಹುಕ್ಕಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ಈಶ್ವರ ಪಟಗಾರ, ಪ್ರಾಯ-41 ವರ್ಷ, ವೃತ್ತಿ-ಕಾರ್ಪೆಂಟರ್ ಕೆಲಸ, ಸಾ|| ಕೊನಾಳ, ತಾ: ಅಂಕೋಲಾ ರವರು ದಿನಾಂಕ: 26-05-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 12/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ರಾಮಕ್ಕ ಕೋಂ. ನಿಂಗಪ್ಪ ಮೇತ್ರಿ, ಪ್ರಾಯ-67 ವರ್ಷ, ವೃತ್ತಿ-ಮನೆ ಕೆಲಸ, ಸಾ|| ನಾಗಶೆಟ್ಟಿಕೊಪ್ಪ ಗ್ರಾಮ, ತಾ: ಹಳಿಯಾಳ. ಇವಳು ಪಿರ್ಯಾದಿ ತಾಯಿಯ ತಮ್ಮನ ಹೆಂಡತಿ (ಅತ್ತೆ) ಆಗಿದ್ದು, ಸದ್ರಿಯವಳು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿದವಳು, ದಿನಾಂಕ: 25-05-2021 ರಂದು ರಾತ್ರಿ 12-00 ಗಂಟೆಯಿಂದ ದಿನಾಂಕ: 26-05-2021 ರಂದು ಮಧ್ಯಾಹ್ನ 01-30 ಗಂಟೆಯ ನಡುವಿನ ಅವಧಿಯಲ್ಲಿ ನಾಗಶೆಟ್ಟಿಕೊಪ್ಪ ಗ್ರಾಮದ ಸಾರ್ವಜನಿಕ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಮೃತದೇಹವು ಸಾರ್ವಜನಿಕ ಬಾವಿಯಲ್ಲಿಯೇ ಇರುತ್ತದೆ. ಇದರ ಹೊರತು ಮೃತಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡು ಮೃತದೇಹ ಬಿಟ್ಟು ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಫಕೀರಪ್ಪ ತಂದೆ ಹನ್ಮಂತ ಮೇತ್ರಿ, ಪ್ರಾಯ-55 ವರ್ಷ, ವೃತ್ತಿ-ಪಂಚಾಯತ್ ನಲ್ಲಿ ಫ್ಯೂನ್ ಕೆಲಸ, ಸಾ|| ನಾಗಶೆಟ್ಟಿಕೊಪ್ಪ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 26-05-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 27-05-2021 12:45 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080