ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 26-11-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 22-11-2021 ರಂದು ಪಿರ್ಯಾದಿಯು ತನ್ನ ಅ||ಕಿ|| 5,000/- ರೂಪಾಯಿಯ ಹೀರೋ ಹೋಂಡಾ ಕಂಪನಿಯ ಮೋಟಾರ್ ಸೈಕಲ್ ನಂ: ಕೆ.ಎ-30/ಎಚ್-8294 (ಚಾಸಿಸ್ ನಂ: 98L19F09944) ನೇದನ್ನು ಮನೆಯ ಕಂಪೌಂಡ್ ಒಳಗೆ ಬೀಗ ಹಾಕಿ ಇಟ್ಟಿದ್ದು, ದಿನಾಂಕ: 23-11-2021 ರಂದು ಬೆಳಿಗ್ಗೆ 06-00 ಗಂಟೆಗೆ ಎದ್ದು ನೋಡಿದಾಗ ತನ್ನ ಮೋಟಾರ್ ಸೈಕಲ್ ಕಾಣಲಿಲ್ಲ. ತಾನು ಮೋಟಾರ್ ಸೈಕಲನ್ನು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಸದರಿ ಮೋಟಾರ್ ಸೈಕಲನ್ನು ಯಾರೋ ಆರೋಪಿತ ಕಳ್ಳರು ದಿನಾಂಕ: 22-11-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 23-11-2021 ರಂದು ಬೆಳಿಗ್ಗೆ 06-00 ಗಂಟೆಯ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಾರುತಿ ತಂದೆ ಲಕ್ಷ್ಮಣ ನಾಯ್ಕ, ಪ್ರಾಯ-63 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಕಣಸಗಿರಿ, ಸದಾಶಿವಗಡ, ಕಾರವಾರ ರವರು ದಿನಾಂಕ: 26-11-2021 ರಂದು 02-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 175/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ತಿಮ್ಮಪ್ಪ ತಂದೆ ಹೊನ್ನಪ್ಪ ನಾಯಕ, 2]. ಸುಬ್ರಾಯ ತಂದೆ ನಾರಾಯಣ ನಾಯಕ, ಸಾ|| (ಇಬ್ಬರೂ) ಗಾಂವಕರವಾಡಾ, ಭಾವಿಕೇರಿ, ತಾ: ಅಂಕೋಲಾ. ಈ ನಮೂದಿತ ಆರೋಪಿತರಿಬ್ಬರೂ ಸೇರಿಕೊಂಡು ದಿನಾಂಕ: 26-11-2021 ರಂದು 20-45 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಭಾವಿಕೇರಿಯ ಗಾಂವಕರವಾಡ ಹತ್ತಿರ ತಮ್ಮ ತಾಬಾ ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲದೇ ಸುಮಾರು 3,513/- ರೂಪಾಯಿ ಮೌಲ್ಯದ ಕರ್ನಾಟಕ ರಾಜ್ಯದ Original choice ಎಂಬ ಹೆಸರಿನ 90 ML ನ ಸರಾಯಿಯ ಸ್ಯಾಚೆಟ್ ಗಳು-100, ಇವುಗಳನ್ನು ಅಕ್ರಮವಾಗಿ ಸಾಗಾಟ ಮಾಡಿಕೊಂಡು ತಂದು ಮಾರಾಟ ಮಾಡುತ್ತಿದ್ದಾಗ ದಾಳಿಯ ಕಾಲಕ್ಕೆ ಸ್ವತ್ತುಗಳನ್ನು ಬಿಟ್ಟು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರವೀಣ ಕುಮಾರ ಆರ್, ಪಿ.ಎಸ್.ಐ (ಕಾ&ಸು), ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 26-11-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 322/2021, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಲಾರಿ ನಂ: ಕೆ.ಎ-01/ಎ.ಡಿ-4214 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ. ಈತನು ದಿನಾಂಕ: 26-11-2021 ರಂದು ಸಂಜೆ 17-00 ಗಂಟೆಗೆ ತನ್ನ ಲಾರಿ ನಂ: ಕೆ.ಎ-01/ಎ.ಡಿ-4214 ನೇದನ್ನು ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಹಿರಿಯ ಪ್ರಾಥಮಿಕ ಶಾಲೆಯು ಹತ್ತಿರ ಕರ್ಕಿ, ಹೊನ್ನಾವರ ಎದುರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ತನ್ನ ಬದಿಯಿಂದ ಅಂದರೆ ಹಳದೀಪುರ ಕಡೆಯಿಂದ ಹೊನ್ನಾವರ ಕಡೆಗೆ ಮೋಟಾರ ಸೈಕಲ್ ನಂ: ಕೆ.ಎ-47/ಕ್ಯೂ-4247 ನೇದನ್ನು ಚಲಾಯಿಸಿಕೊಂಡು ಬರುತ್ತಿದ್ದ ಶರತ್ ತಂದೆ ವಿಶ್ವನಾಥ ನಾಯ್ಕ, ಪ್ರಾಯ-27 ವರ್ಷ, ವೃತ್ತಿ-ಗ್ಲಾಸ್ ಕೆಲಸ, ಸಾ|| ಹೆಗಡೆ ಹಿತ್ತಲ, ಕರ್ಕಿ, ತಾ: ಹೊನ್ನಾವರ ಇವರಿಗೆ ಡಿಕ್ಕಿ ಪಡಿಸಿ, ಅವರ ತಲೆ, ಮುಖ, ಎಡಗೈ ಹಾಗೂ ಎರಡೂ ಕಾಲಿನ ಪಾದಕ್ಕೆ ಗಾಯ ಪಡಿಸಿ, ಅಪಘಾತದ ನಂತರ ಆರೋಪಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ವಿಶ್ವನಾಥ ತಂದೆ ಗಣಪತಿ ನಾಯ್ಕ, ಪ್ರಾಯ-61 ವರ್ಷ, ವೃತ್ತಿ-ಕಮ್ಮಾರ ಕೆಲಸ, ಸಾ|| ಹೆಗಡೆ ಹಿತ್ತಲ, ಕರ್ಕಿ, ತಾ: ಹೊನ್ನಾವರ ರವರು ದಿನಾಂಕ: 26-11-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 212/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪರ್ವತಗೌಡ ತಂದೆ ಸೋಮನಗೌಡ ಪಾಟೀಲ, ಪ್ರಾಯ-26 ವರ್ಷ, ವೃತ್ತಿ-ಖಾಸಗಿ ನೌಕರ, ಸಾ|| ಮನಗೊಳಿ, ತಾ: ಬಸವನ ಬಾಗೇವಾಡಿ, ಜಿ: ಬಿಜಾಪುರ (ಮೋಟಾರ್ ಸೈಕಲ್ ನಂ: ಕೆ.ಎ-28/ಇ.ವೈ-0001 ನೇದರ ಸವಾರ). ಈತನು ದಿನಾಂಕ: 26-11-2021 ರಂದು 12-45 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಅರಬೈಲ್ ಗ್ರಾಮದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-28/ಇ.ವೈ-0001 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ವಾಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ, ಅದೇ ವೇಳೆ ತನ್ನ ಮುಂದಿನಿಂದ ಅಂದರೆ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ತನ್ನ ರಸ್ತೆಯ ಸೈಡಿನಲ್ಲಿ ಪಿರ್ಯಾದಿಯವರು ಚಲಾಯಿಸಿಕೊಂಡು ಬರುತ್ತಿದ್ದ ಕಾರ್ ನಂ: ಕೆ.ಎ-17/ಪಿ-7687 ನೇದಕ್ಕೆ ಎದುರುನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಆರೋಪಿತನು ಮೋಟಾರ್ ಸೈಕಲ್ ಸಮೇತ ರಸ್ತೆಯÀಲ್ಲಿ ಬಿದ್ದು, ತನ್ನ ಮೋಟಾರ್ ಸೈಕಲ್ ಹಿಂಬದಿಯ ಸೀಟಿನಲ್ಲಿ ಕುಳಿತ ಸಾಕ್ಷಿದಾರಳಾದ ಕುಮಾರಿ: ಅರ್ಪಿತಾ ತಂದೆ ಶಿವಾ ಜವಳಿ, ಇವಳಿಗೆ ಬಲಬದಿಯ ಕಾಲಿನ ಮೊಣಗಂಟಿನ ಕೆಳಗೆ ಮತ್ತು ಮೈಕೈಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನ್ನ ಬಲಗಾಲಿನ ಮೊಣಗಂಟಿನ ಕೆಳಗೆ ಗಾಯನೋವು ಪಡಿಸಿಕೊಂಡು ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜಿ. ಎನ್. ಅಶೋಕ ಕುಮಾರ ತಂದೆ ಜಿ. ನಾಗಪ್ಪ, ಪ್ರಾಯ-62 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ಡೋರ್ ನಂ: 1656/6, ದರ್ಶನ ನಿಲಯ, 44 ನೇ ಕ್ರಾಸ್, ಎಸ್. ಎನ್. ಲೇಔಟ್, ಎ ಬ್ಲಾಕ್, ದಾವಣಗೇರಿ ರವರು ದಿನಾಂಕ: 26-11-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 84/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರದೀಪ ತಂದೆ ಅಣ್ಣಪ್ಪ ಗಂಗಾಮತ, ಪ್ರಾಯ-24 ವರ್ಷ, ಸಾ|| ಕಬ್ಬೆ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ವಿ-8589 ನೇದರ ಸವಾರ). ಈತನು ದಿನಾಂಕ: 26-11-2021 ರಂದು 09-30 ಗಂಟೆಯ ಸುಮಾರಿಗೆ ಶಿರಸಿ ಶಹgದÀ ಬನವಾಸಿ ರೋಡ್ ಶ್ರೀರಾಮ ಕಾಲೋನಿ ಕ್ರಾಸ್ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-31/ವಿ-8589 ನೇದನ್ನು ಶಿರಸಿ ಶಹರದ ಕಡೆಯಿಂದ ಬನವಾಸಿ ಕಡೆಗೆ ಹೋಗಲು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ತನ್ನ ಮುಂದೆ ಶಿರಸಿಯ ಮಾರಿಕಾಂಬಾ ದೇವಸ್ಥಾನದ ಕಡೆಯಿಂದ ಬನವಾಸಿ ರಸ್ತೆಯ ಮೂಲಕ ಹೋಗಿ ಶ್ರೀರಾಮ ಕಾಲೋನಿಗೆ ಹೋಗಲು ಮೋಟಾರ್ ಸೈಕಲ್ ನಂ: ಕೆ.ಎ-31/ಎಲ್-4781 ನೇದರ ಸವಾರನಾದ ಹಜರತ್ ಅಲಿ ತಂದೆ ಅಬ್ದುಲ್ ಬಸೀರ್ ಟೇಲರ್, ಈತನು ತನ್ನ ಮೋಟಾರ್ ಸೈಕಲಿನ ಬಲಬದಿಯ ಇಂಡಿಕೇಟರ್ ಲೈಟ್ ಹಾಕಿ, ಕೈ ಸನ್ನೆ ಮಾಡಿ ಬಲಕ್ಕೆ ತಿರುಗಿಸುತ್ತಿರುವಾಗ ಮೋಟಾರ್ ಸೈಕಲಿನ ಬಲಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಬೆನ್ನಿಗೆ ಮತ್ತು ಕಾಲಿಗೆ ಗಾಯನೋವು ಪಡಿಸಿ, ಮೋಟಾರ್ ಸೈಕಲ್ ಸವಾರ ಹಜರತ್ ಅಲಿ ಈತನಿಗೆ ತಲೆಗೆ, ಮುಖಕ್ಕೆ, ಕೈಗೆ, ಕಾಲಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀಮತಿ ಹಾಜೀರಾ ಕೋಂ. ಮುಕ್ತಾರ್ ಅಹಮ್ಮದ್ ಶೇಖ್, ಪ್ರಾಯ-46 ವರ್ಷ, ವೃತ್ತಿ-ಮೆಡಿಕಲ್ ಶಾಪ್, ಸಾ|| ಕರಿಗುಂಡಿ, 4 ನೇ ಕ್ರಾಸ್, ತಾ: ಶಿರಸಿ ರವರು ದಿನಾಂಕ: 26-11-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 74/2021, ಕಲಂ: 279, 304(ಎ), 201 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಮೋಟಾರ್ ಸೈಕಲ್ ಸವಾರನಾಗಿದ್ದು,  ಮೋಟಾರ್ ಸೈಕಲ್ ನಂಬರ್ ಹಾಗೂ ಆರೋಪಿತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯ ತಂಗಿಯಾದ ಕುಮಾರಿ: ಲಕ್ಷ್ಮೀ @ ಚಿಂಗಿ ತಂದೆ ತುಕಾರಾಮ ರೇಡೆಕರ್, ಪ್ರಾಯ-26 ವರ್ಷ, ವೃತ್ತಿ-ರೆಸಾರ್ಟ್ ನಲ್ಲಿ ಪಾತ್ರೆ ತೊಳೆಯುವ ಕೆಲಸ, ಸಾ|| ಉರ್ದು ಶಾಲೆಯ ಹತ್ತಿರ, ಆಜಾದ್ ನಗರ, ತಾ: ದಾಂಡೇಲಿ, ಇವಳು ದಿನಾಂಕ: 25-11-2021 ರಂದು ಸಂಜೆ 04-00 ಗಂಟೆಯಿಂದ ದಿನಾಂಕ: 26-11-2021 ರಂದು ಬೆಳಿಗ್ಗೆ 09-00 ಗಂಟೆಯ ನಡುವಿನ ಅವಧಿಯಲ್ಲಿ ಜೋಯಿಡಾ ತಾಲೂಕಿನ ಜನತಾ ಕಾಲೋನಿಯ ಹತ್ತಿರ ಮೋಟಾರ್ ಸೈಕಲ್ ಅಪಘಾತದಿಂದ ಮೃತಪಟ್ಟಿದ್ದು, ಅವಳಿಗೆ ಅಪಘಾತ ಪಡಿಸಿದ ಆರೋಪಿ ಮೋಟಾರ್ ಸೈಕಲ್ ಸವಾರನು ಗಾಯಗೊಂಡ ಪಿರ್ಯಾದಿಯ ತಂಗಿಗೆ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ದಾಖಲಿಸಿದೇ, ಅಪಘಾತದ ವಿಷಯವನ್ನು ಹತ್ತಿರದ ಪೊಲೀಸ್ ಠಾಣೆಗೆ ತಿಳಿಸದೇ, ಅವಳ ಶವವನ್ನು ರಾಜ್ಯ ಹೆದ್ದಾರಿಯ ಮೇಲಿಂದ ಎತ್ತಿಕೊಂಡು ಹೋಗಿ ರಾಜ್ಯ ಹೆದ್ದಾರಿಯ ಪಕ್ಕದ ಕಚ್ಚಾ ರಸ್ತೆಯ ಮೇಲೆ ಹಾಕಿ, ಸಾಕ್ಷಿ ಪುರಾವೆ ನಾಶ ಪಡಿಸಲು ಪ್ರಯತ್ನಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತನ್ನ ಮೋಟಾರ್ ಸೈಕಲನ್ನು ರಾಜ್ಯ ಹೆದ್ದಾರಿಯ ಮೇಲೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಈ ಅಪಘಾತ ಪಡಿಸಿ, ಅಪಘಾತದ ನಂತರ ತನ್ನಮೋಟಾರ್ ಸೈಕಲನ್ನು ಚಲಾಯಿಸಿ ಪರಾರಿಯಾಗಿರುವ ಬಗ್ಗೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಅಂಜಲಿ ಕೋಂ. ಪ್ರವೀಣ ಮಹಾಲೆ, ಪ್ರಾಯ-33 ವರ್ಷ, ವೃತ್ತಿ-ಬೇಕರಿಯಲ್ಲಿ ಕೆಲಸ,  ಸಾ|| ಉರ್ದು ಶಾಲೆಯ ಹತ್ತಿರ, ಆಜಾದ್ ನಗರ, ತಾ: ದಾಂಡೇಲಿ ರವರು ದಿನಾಂಕ: 26-11-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 26-11-2021

at 00:00 hrs to 24:00 hrs

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 18/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸೀತಾರಾಮ ತಂದೆ ಕೆರಿಯಾ ಜೋಗಿ, ಪ್ರಾಯ-34 ವರ್ಷ, ವೃತ್ತಿ-ಕೃಷಿ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ, ಸಾ|| ದೊಡ್ನಳ್ಳಿ, ತಾ: ಶಿರಸಿ, ಹಾಲಿ ಸಾ|| ಹನುಮಗಿರಿ, ತಾ: ಶಿರಸಿ. ಪಿರ್ಯಾದಿಯವರ ಮಗನಾದ ಈತನು ತನ್ನ ವ್ಯವಹಾರದ ನಿಮಿತ್ತ ಜನರಿಂದ ಸಾಲವನ್ನು ಪಡೆದುಕೊಂಡಿದ್ದವನು, ಸಾಲವನ್ನು ತೀರಿಸಲಾಗದೇ ಮತ್ತು ತಾನು ಮಾಡುತ್ತಿದ್ದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಷ್ಟವಾಗಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 26-11-2021 ರಂದು 00-30 ಗಂಟೆಯಿಂದ 09-00 ಗಂಟೆಯ ನಡುವಿನ ಅವಧಿಯಲ್ಲಿ ತಾನು ವಾಸವಿದ್ದ ಶಿರಸಿ ನಗರದ ಹನುಮಗಿರಿಯಲ್ಲಿರುವ ಮನೆಯ ಕೋಣೆಯ ಮರದ ಜಂತಿಗೆ ನೈಲಾನ್ ಹಗ್ಗವನ್ನು ಕಟ್ಟಿ ಆ ಹಗ್ಗದಿಂದ ತನ್ನ ಕುತ್ತಿಗೆಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಇದರ ಹೊರತು ತನ್ನ ಮಗನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಲಕ್ಷ್ಮೀ ಕೋಂ. ಕೆರಿಯಾ ಜೋಗಿ, ಪ್ರಾಯ-65 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ದೊಡ್ನಳ್ಳಿ, ತಾ: ಶಿರಸಿ ರವರು ದಿನಾಂಕ: 26-11-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 12/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ಪ್ರಿಯಾಂಕಾ ತಂದೆ ವಿನಾಯಕ ಭಟ್ಕಳಕರ, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| 3 ನಂಬರ್ ಗೇಟ್, ಹಳಿಯಾಳ ರೋಡ್, ತಾ: ದಾಂಡೇಲಿ. ಪಿರ್ಯಾದಿಯವರ ಮಗಳಾದ ಇವಳು ತನ್ನ ತಾಯಿಯವರಿಗೆ ಕಿಡ್ನಿ ಸಮಸ್ಯೆ ಇದ್ದುದ್ದನ್ನು ಹಾಗೂ ವಾರಕ್ಕೆ ಎರಡು ಸಲ ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಬರುತ್ತಿದ್ದು, ಅದೇ ವಿಷಯವನ್ನು ತನ್ನ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 26-11-2021 ರಂದು ಬೆಳಿಗ್ಗೆ 10-00 ಗಂಟೆಯಿಂದ 10-30 ಗಂಟೆಯ ಅವಧಿಯಲ್ಲಿ ಪಿಯಾದಿಯವರು ವಾಸದ ಮನೆಯ ಎರಡನೇ ರೂಮಿನಲ್ಲಿರುವ ಒಂದು ಕಟ್ಟಿಗೆಯ ಜಂತಿಗೆ ಒಂದು ವೇಲ್ ಅನ್ನು ಕಟ್ಟಿ, ಅದನ್ನು ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹೊರತು ತನ್ನ ಮಗಳ ಸಾವಿನಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ವಿಶ್ವನಾಥ ಭಟ್ಕಳಕರ, ಪ್ರಾಯ-52 ವರ್ಷ, ವೃತ್ತಿ-ಡಬ್ಲ್ಯೂ.ಸಿ.ಪಿ.ಎಮ್ ನಲ್ಲಿ ಕೆಲಸ, ಸಾ|| 3 ನಂಬರ್ ಗೇಟ್, ಹಳಿಯಾಳ ರೋಡ್, ತಾ: ದಾಂಡೇಲಿ ರವರು ದಿನಾಂಕ: 26-11-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ರಾಮನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 15/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗಂಗಾರಾಮ ತಂದೆ ಕೊಂಡು ಬಾವದಾನಿ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಸೋಡಾ, ಗೌಳಿವಾಡ, ತಾ: ಜೋಯಿಡಾ. ಈತನು ಕಳೆದ 25 ವರ್ಷದಿಂದ ವರ್ಷಕ್ಕೆ ಒಂದು ಸಾರಿ ಪಿರ್ಯಾದಿಯವರ ತೆಂಗಿನ ಗದ್ದೆಯ ಹತ್ತಿರ ಕೆಲಸ ಕೇಳಿಕೊಂಡು ಬಂದು ತೆಂಗಿನಕಾಯಿ ಕಿತ್ತು ಹಣ ಪಡೆದುಕೊಂಡು ಹೋಗುತ್ತಿದ್ದವನು, ದಿನಾಂಕ: 25-11-2021 ರಂದು ಬೆಳಗ್ಗೆ 08-00 ಗಂಟೆಗೆ ಕೆಲಸ ಕೇಳಿಕೊಂಡು ಬಂದು ತೆಂಗಿನಕಾಯಿ ಕೀಳುತ್ತಿದ್ದವನು, ಸಾಯಂಕಾಲ 16-30 ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಮರದ ಮೇಲಿಂದ ಕಾಲು ಜಾರಿ ನೆಲಕ್ಕೆ ಬಿದ್ದು ಮೃತಪಟ್ಟಿರುತ್ತಾನೆ. ಇದರ ಹೊರತು ಅವನ ಸಾವಿನಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ದಸ್ತಗೀರ್ ಹುಸೇನಸಾಬ್ ನಾಯ್ಕ, ಪ್ರಾಯ-82 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಟೌನಶಿಪ್, ತಾ: ದಾಂಡೇಲಿ ರವರು ದಿನಾಂಕ: 26-11-2021 ರಂದು 00-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

ಇತ್ತೀಚಿನ ನವೀಕರಣ​ : 28-11-2021 12:07 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080