ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 26-10-2021

at 00:00 hrs to 24:00 hrs

 

ಮಹಿಳಾ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 12/2021, ಕಲಂ: 498(ಎ), 323, 504, 506, 307 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಜೈನುಲ್ಲಾಬಿದ್ದಿನ್ ತಂದೆ ಮಹ್ಹಮ್ಮದ್ ಇಸಾಖ್ ಶೇಖ್, ಪ್ರಾಯ-39 ವರ್ಷ, ಸಾ|| ಪ್ಲಾಟ್ ನಂ: 106, ರಾಯಲ್ ಎಂಬೆಸ್ಸಿ, ಕಾಜುಬಾಗ, ಕಾರವಾರ, 2]. ಶ್ರೀಮತಿ ತಬಸಮ್ ಕೋಂ. ಅಮ್ಜದ್ ಶಾಪೂರಕರ್, ಪ್ರಾಯ-35 ವರ್ಷ, ಸಾ|| ಉದ್ಯಮನಗರ, ತಾ: ಯಲ್ಲಾಪುರ, 3]. ಶ್ರೀಮತಿ ತಾಹೀರಾ ಕೋಂ. ಫಾರೂಖ್ ಮಖಾಂದರ್, ಪ್ರಾಯ-35 ವರ್ಷ, ಸಾ|| ದರ್ಗಾ ಹಿಂದುಗಡೆ, ತಾ: ಯಲ್ಲಾಪುರ, 4]. ಅಬ್ದುಲ್ ರಹೀಮ್ ತಂದೆ ಇಸ್ಮಾಯಿಲ್ ಶೇಖ್, ಪ್ರಾಯ-61 ವರ್ಷ, ಸಾ|| ವಿಜಯನಗರ ರೋಡ್, ಖುರ್ಸಾವಾಡ, ಕಾರವಾರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದಿಯ ಗಂಡನಾಗಿದ್ದು, ಆರೋಪಿ 1 ನೇಯವನು ಪಿರ್ಯಾದಿಯವರಿಗೆ 2019 ನೇ ಸಾಲಿನಿಂದ ಸಣ್ಣ ಸಣ್ಣ ವಿಷಯಕ್ಕೂ ಬೈಯ್ಯುವುದು, ಹೊಡೆಯುವುದು ಮಾಡಿ, ಅವಾಚ್ಯ ಶಬ್ದಗಳಿಂದ ಬೈಯ್ದು, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಾ ಬಂದಿದ್ದು, ಆರೋಪಿ 2 ರಿಂದ 4 ನೇಯವರ ಕುಮ್ಮಕ್ಕಿನಿಂದ ದಿನಾಂಕ: 21-03-2021 ರಂದು ಪಿರ್ಯಾದಿಯವರಿಗೆ ಕೈಯಿಂದ, ಹೊಡೆ ಬಡೆ ಮಾಡಿ ‘ನಿನ್ನನ್ನು ಹಾಗೂ ನಿನ್ನ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ದಿನಾಂಕ: 07-10-2021 ರಂದು ಪಿರ್ಯಾದಿಯವರು ಮಧ್ಯಾಹ್ನ 02-00 ಗಂಟೆ ಸಮಯದಲ್ಲಿ ಮಲಗಿರುವಾಗ ಆರೋಪಿ 1 ನೇಯವನು ತಲೆ ದಿಂಬನ್ನು ಮುಖದ ಮೇಲೆ ಇಟ್ಟು ಶ್ವಾಸಗೂಡಿಸಿ ಸಾಯಿಸಲು ಪ್ರಯತ್ನಿಸಿದ ಬಗ್ಗೆ ಪಿರ್ಯಾದಿ ಶ್ರೀಮತಿ ಆಸ್ಮಾ ಕೋಂ. ಜೈನುಲ್ಲಾಬಿದ್ದಿನ್ ಶೇಖ್, ಪ್ರಾಯ-34 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಮನೆ ನಂ: 4906, ಸರಕಾರಿ ಉರ್ದು ಶಾಲೆಯ ಹತ್ತಿರ, ಕಠಿಣಕೋಣ, ಸುಂಕೇರಿ, ಕಾರವಾರ ರವರು ದಿನಾಂಕ: 26-10-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 157/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುಲೇಮಾನ್ ತಂದೆ ಅಬ್ಜಲ್ ಶೇಖ್, ಪ್ರಾಯ-20 ವರ್ಷ, ವೃತ್ತಿ-ಮೊಬೈಲ್ ಅಂಗಡಿಯಲ್ಲಿ ಕೆಲಸ, ಸಾ|| ಕಾಕರಮಠ, ತಾ: ಅಂಕೋಲಾ (ಮೋಟಾರ್ ಸೈಕಲ್ ನಂ: ಕೆ.ಎ-30/ಡಬ್ಲ್ಯೂ-4640 ನೇದರ ಚಾಲಕ). ಈತನು ದಿನಾಂಕ: 25-10-2021 ರಂದು ರಾತ್ರಿ 20-15 ಗಂಟೆಯ ಸುಮಾರಿಗೆ ಅಂಕೋಲಾ ಶಹರದ ಗುಡಿಗಾರ ಗಲ್ಲಿಯಲ್ಲಿನ ರಸ್ತೆಯ ಮೇಲೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-30/ಡಬ್ಲ್ಯೂ-4640 ನೇದರ ಹಿಂದೆ ಗಾಯಾಳು ಹಪೀಜಾ ತಂದೆ ಸುಲೇಮಾನ್ ಶೇಖ್, ಪ್ರಾಯ-48 ವರ್ಷ, ವೃತ್ತಿ-ಚಿಕನ್ ಅಂಗಡಿಯಲ್ಲಿ ಕೆಲಸ, ಸಾ|| ಕಾಕರಮಠ, ತಾ: ಅಂಕೋಲಾ ಇವಳಿಗೆ ಕೂಡ್ರಿಸಿಕೊಂಡು ತನ್ನ ಮೋಟಾರ್ ಸೈಕಲನ್ನು ಕಾಕರಮಠ ಕಡೆಯಿಂದ ಬಂಡಿಕಟ್ಟಾದ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತಯಿಂದ ಚಲಾಯಿಸಿಕೊಂಡು ಬಂದು, ತನ್ನ ಹಿಂಬದಿಯ ಸವಾರಳಿಗೆ ಮೋಟಾರ್ ಸೈಕಲಿನಿಂದ ಕೆಳಗೆ ಬೀಳಿಸಿ ಅಪಘಾತ ಪಡಿಸಿ, ತಲೆಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸರ್ಪರಾಜ್ ತಂದೆ ಹಸನ್ ಶೇಖ್, ಪ್ರಾಯ-35 ವರ್ಷ, ವೃತ್ತಿ-ಮೊಬೈಲ್ ಅಂಗಡಿ ವ್ಯಾಪಾರ, ಸಾ|| ಕಾಕರಮಠ, ತಾ: ಅಂಕೋಲಾ ರವರು ದಿನಾಂಕ: 26-10-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 278/2021, ಕಲಂ: 341, 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಕೃಷ್ಣಾ ತಂದೆ ಹನುಮಂತ ನಾಯ್ಕ, ಪ್ರಾಯ-ಅಂದಾಜು 48 ವರ್ಷ, ವೃತ್ತಿ-ರೈತಾಬಿ ಕೆಲಸ, 2]. ಅರುಣ ತಂದೆ ಈಶ್ವರ ನಾಯ್ಕ, ಪ್ರಾಯ-ಅಂದಾಜು 30 ವರ್ಷ, ವೃತ್ತಿ-ರೈತಾಬಿ ಕೆಲಸ, 3]. ಹರೀಶ ತಂದೆ ರಾಮಾ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ರೈತಾಬಿ ಕೆಲಸ, 4]. ರಾಮಾ ತಂದೆ ಹನುಮಂತ ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| (ಎಲ್ಲರೂ) ಅಂದಬಳ್ಳಿ, ಹಿರೇಬೈಲ್, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಹಾಗೂ ಪಿರ್ಯಾದಿಯು ಒಂದೇ ಕುಟುಂಬದವರಿದ್ದು, ಪಿರ್ಯಾದಿ ಹಾಗೂ ಆರೋಪಿತರ ಮನೆಗಳು ಹೊನ್ನಾವರ ತಾಲೂಕಿನ ಹಿರೇಬೈಲ್ ದ ಅಂದಬಳ್ಳಿಯಲ್ಲಿ ಹತ್ತಿರದಲ್ಲಿಯೇ ಇದ್ದು, ಆರೋಪಿ 1 ರಿಂದ 4 ನೇಯವರು ಪಿರ್ಯಾದಿಯ ಮನೆಯವರೊಂದಿಗೆ ಜಮೀನಿನ ವಿಷಯದಲ್ಲಿ ಮೊದಲಿನಿಂದಲೂ ದ್ವೇಷದಿಂದ ಇದ್ದವರು, ದಿನಾಂಕ: 26-10-2021 ರಂದು ಮಧ್ಯಾಹ್ನ 14-00 ಗಂಟೆಯ ಸುಮಾರಿಗೆ ಪಿರ್ಯಾದಿ ಆರೋಪಿ 1 ನೇಯವನ ಮನೆಯ ಅಂಗಳದ ದಾರಿಯಿಂದ ತಮ್ಮ ತೋಟಕ್ಕೆ ನಡೆದುಕೊಂಡು ಹೋಗುತ್ತಿದ್ದವನಿಗೆ ಆರೋಪಿ 1 ರಿಂದ 4 ನೇಯವರು ಅಡ್ಡಗಟ್ಟಿ ತಡೆದು ನಿಲ್ಲಿಸಿ, ‘ತಮಗೆ ಹೊಡೆಯುವುದಾದರೆ ಹೊಡೆಯಿರಿ. ಎಲ್ಲಾ ಆಸ್ತಿ ನಿಮಗೆ ಬೇಕಾ ಬೋಳಿ ಮಕ್ಕಳಾ’ ಅಂತಾ ಕೆಟ್ಟ ಶಬ್ದದಿಂದ ಬೈದು, ‘ನಮ್ಮ ಮನೆ ದಾರಿಯಿಂದ ಏಕೆ ಓಡಾಡುತ್ತಿರಿ?’ ಅಂತಾ ಹೇಳಿ ಎಲ್ಲರೂ ಸೇರಿ ಪಿರ್ಯಾದಿಗೆ ಕೈಯಿಂದ ಹೊಡೆದು, ಕಾಲಿನಿಂದ ಒದ್ದಿದ್ದು, ಅದೇ ಸಮಯಕ್ಕೆ ಪಿರ್ಯಾದಿಯ ಚಿಕ್ಕಪ್ಪ ಆರೋಪಿ 1 ನೇಯವನು ಒಂದು ದೊಣ್ಣೆಯಿಂದ ಪಿರ್ಯಾದಿಯ ಬೆನ್ನಿನ ಮೇಲೆ ಹೊಡೆದಿದ್ದು, ಪಿರ್ಯಾದಿಯು ನೋವಿನಿಂದ ಕೂಗಿಕೊಂಡಿದ್ದನ್ನು ಕೇಳಿ ಸ್ಥಳಕ್ಕೆ ಬಂದ ಪಿರ್ಯಾದಿಯ ತಮ್ಮ ಪ್ರದೀಪ ತಂದೆ ಜಯಂತ ನಾಯ್ಕ, ಪ್ರಾಯ-25 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಅಂದಬಳ್ಳಿ, ಹಿರೇಬೈಲ್, ತಾ: ಹೊನ್ನಾವರ ಈತನನ್ನೂ ಉದ್ಧೇಶಿಸಿ 4 ಜನ ಆರೋಪಿತರು ಸೇರಿ ‘ಬೋಳಿ ಮಗನೆ ತಪ್ಪಿಸಲಿಕ್ಕೆ ಬಂದೆಯಾ?’ ಅಂತಾ ಹೇಳಿ ಅವನಿಗೂ ಸಹ ಕೈಯಿಂದ ಹೊಡೆದು, ಕಾಲಿನಿಂದ ಒದ್ದು, ಪಿರ್ಯಾದಿಯ ದೊಡ್ಡಪ್ಪನ ಮಗ ಆರೋಪಿ 2 ನೇಯವನು ದೊಣ್ಣೆಯಿಂದ ಪಿರ್ಯಾದಿಯ ತಮ್ಮ ಪ್ರದೀಪನಿಗೆ ತಲೆಗೆ ಹೊಡೆದು ತಮ್ಮನ ತಲೆಗೆ ರಕ್ತಗಾಯ ಪಡಿಸಿ, ಇಬ್ಬರಿಗೂ ಗಾಯನೋವು ಪಡಿಸಿ, ಆರೋಪಿತರೆಲ್ಲರೂ ಸೇರಿ ಪಿರ್ಯಾದಿ ಮತ್ತು ಪಿರ್ಯಾದಿಯ ತಮ್ಮನನ್ನು ಉದ್ದೇಶಿಸಿ, ‘ಇವತ್ತು ತಪ್ಪಿಸಿಕೊಂಡಿರಿ. ಇನ್ನೊಮ್ಮೆ ಸಿಕ್ಕಾಗ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ. ಕೊಂದು ಹಾಕುತ್ತೇವೆ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಪ್ರಮೋದ ತಂದೆ ಜಯಂತ ನಾಯ್ಕ, ಪ್ರಾಯ-29 ವರ್ಷ, ವೃತ್ತಿ-ಹೊಟೇಲಿನಲ್ಲಿ ಕೆಲಸ, ಸಾ|| ಅಂದಬಳ್ಳಿ, ಹಿರೇಬೈಲ್, ತಾ: ಹೊನ್ನಾವರ ರವರು ದಿನಾಂಕ: 26-10-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 69/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಅಪರಿಚಿತ ಲಾರಿಯ ಚಾಲಕನಾಗಿದ್ದು, ಲಾರಿ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 26-10-2021 ರಂದು ಸಂಜೆ 05-45 ಗಂಟೆಯ ಸುಮಾರಿಗೆ ತನ್ನ ಲಾರಿಯನ್ನು ದಾಂಡೇಲಿ ಕಡೆಯಿಂದ ಹಳಿಯಾಳ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ, ಹಳಿಯಾಳ ಕಡೆಯಿಂದ ದಾಂಡೇಲಿ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-9679 ನೇದಕ್ಕೆ ಕೆರವಾಡ ಕ್ರಾಸಿನಿಂದ ದಾಂಡೇಲಿ ಕಡೆಗೆ 01 ಕಿ.ಮೀ ರಸ್ತೆಯ ಮೇಲೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ನಾಗು ತಂದೆ ಕೊಂಡು ಬಿಚ್ಚುಕಲೆ, ಈತನಿಗೆ ಬಲಗಾಲಿನ ಮೊಣಕಾಲ ಹಾಗೂ ಮೊಣಕಾಲಿನ ಕೆಳಗೆ ಮತ್ತು ಬಲಗೈ ಮುಂಗೈನ ಎಲುಬು ಮುರಿಯುವಂತೆ ಭಾರೀ ಸ್ವರೂಪದ ಗಾಯ ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಹಿಂದೆ ಕುಳಿತ ಶ್ರೀಮತಿ ಬಮ್ಮಿಬಾಯಿ ನಾಗು ಬಿಚ್ಚುಕಲೆ, ಇವಳಿಗೆ ಮೈಮೇಲೆ ಅಲ್ಲಲ್ಲಿ ಸಾದಾ ಸ್ವರೂಪದ ಗಾಯನೋವು ಪಡಿಸಿ, ಆರೋಪಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ರಾಮು ತಂದೆ ವಿಠ್ಠಲ ಎಡಗೆ, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಡ್ಡಿಗೇರಿ, ಭಾಗವತಿ, ತಾ: ಹಳಿಯಾಳ ರವರು ದಿನಾಂಕ: 26-10-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿ. 

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 80/2021, ಕಲಂ: 2(32), 9, 51 ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ಮತ್ತು ಕಲಂ: 420 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಂತೋಷ ತಂದೆ ಬಾಲಚಂದ್ರ ಕಾಮತ್, ಪ್ರಾಯ-43 ವರ್ಷ, ವೃತ್ತಿ-ವ್ಯಾಪಾರ, ಸಾ|| ಅವರ್ಸಾ, ತಾ: ಅಂಕೋಲಾ, ಹಾಲಿ ಸಾ|| ಬೆಳಗಾವಿ, 2]. ರಾಜೇಶ ಮಂಜುನಾಥ ನಾಯ್ಕ, ಪ್ರಾಯ-32 ವರ್ಷ, ಸಾ|| ಮರಾಠಿಕೊಪ್ಪ, ತಾ: ಶಿರಸಿ, 3]. ಅನ್ನಪೂರ್ಣ, ಸಾ|| ಹಾವೇರಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 3 ನೇಯವಳು ಮಾರಾಟ ಮಾಡಲು ನೀಡಿದ 05 ಕೆ.ಜಿ 50 ಗ್ರಾಂ ತೂಕದ ಅಂಬರ ಗ್ರೀಸ್ (ತಿಮಿಂಗಲ ವಾಂತಿ) ಯಂತಹ ವಸ್ತು, ಅಂದಾಜು ಕಿಮ್ಮತ್ತು 5,00,00,000/- (ಐದು ಕೋಟಿ) ರೂಪಾಯಿ ನೇದನ್ನು ಆರೋಪಿ 1 ಮತ್ತು 2 ನೇಯವರು ಸೇರಿಕೊಂಡು ದಿನಾಂಕ: 25-10-2021 ರಂದು ರಾತ್ರಿ 23-00 ಗಂಟೆಗೆ ಶಿರಸಿ ನಗರದ ಮರಾಠಿಕೊಪ್ಪದ 10 ನೇ ಅಡ್ಡ ರಸ್ತೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಮೋಸದಿಂದ ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಮಾರುತಿ ಸ್ವಿಫ್ಟ್ ಕಾರ್ ನಂ: ಎಮ್.ಎಚ್-04/ಡಿ,ಬಿ-3713 ನೇದರಲ್ಲಿ ಇಟ್ಟುಕೊಂಡು ಸಾಗಾಟ ಮಾಡುತ್ತಿರುವಾಗ ಪಿರ್ಯಾದಿಯವರು ಪಂಚರು, ವ್ಯಾಪಾರಿ ಮತ್ತು ಸಿಬ್ಬಂದಿಗಳೊಂದಿಗೆ ಸೇರಿ ಮಾಡಿದ ದಾಳಿಯ ಕಾಲಕ್ಕೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಡಿ. ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಶಿರಸಿ ಉಪ ವಿಭಾಗ, ಶಿರಸಿ ರವರು ದಿನಾಂಕ: 26-10-2021 ರಂದು 01-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 107/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಜ್ಯೋತಿ ವಿನಾಯಕ ಪೂಜಾರಿ, ಪ್ರಾಯ-28 ವರ್ಷ, ಸಾ|| ನಿಡಗೋಡ, ಪೋ: ತಾರಗೋಡ, ತಾ: ಶಿರಸಿ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 08-10-2021 ರಂದು 12-30 ಗಂಟೆಗೆ ತನ್ನ ಗಂಡನ ಮನೆಯಾದ ನಿಡಗೋಡನಿಂದ ಯಾರಿಗೂ ಹೇಳದೇ ಕೇಳದೇ ಹೊರಗಡೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಶ್ರೀಮತಿ ಕುಸುಮಾ ದೇವೇಂದ್ರ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಗೃಹಿಣಿ, ಸಾ|| 3 ನೇ ಕ್ರಾಸ್, ಮುಸ್ಲಿಂ ಗಲ್ಲಿ, ತಾ: ಶಿರಸಿ ರವರು ದಿನಾಂಕ: 26-10-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 138/2021, ಕಲಂ: ಹೆಂಗಸು ಮತ್ತು ಮಗು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದವರು 1]. ಶ್ರೀಮತಿ ಜಯಮ್ಮ ಕೋಂ. ಶೇಟೆಪ್ಪ ಭೋವಿವಡ್ಡರ, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರಾಮಾಪುರ, ತಾ: ಮುಂಡಗೋಡ, 2]. ಕುಮಾರ: ಆದರ್ಶ ತಂದೆ ಶೇಟೆಪ್ಪ ಭೋವಿವಡ್ಡರ, ಪ್ರಾಯ-08 ವರ್ಷ, ಸಾ|| ರಾಮಾಪುರ, ತಾ: ಮುಂಡಗೋಡ. ಈ ನಮೂದಿತ ಕಾಣೆಯಾದವರಲ್ಲಿ ಶ್ರೀಮತಿ ಜಯಮ್ಮ ಭೋವಿವಡ್ಡರ ಇವಳು ಪಿರ್ಯಾದಿಯ ಹೆಂಡತಿಯಾಗಿದ್ದು, ಇವಳು ತನ್ನ ಮಗ ಕುಮಾರ: ಆದರ್ಶ ಈತನನ್ನು ಕರೆದುಕೊಂಡು ಮುಂಡಗೋಡಿಗೆ ಆಧಾರ್ ಕಾರ್ಡ್ ಮಾಡಿಸಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ದಿನಾಂಕ: 18-10-2021 ರಂದು ಬೆಳಿಗ್ಗೆ 11-00 ಗಂಟೆಗೆ ರಾಮಾಪುರದಿಂದ ಹೋದವರು, ಇದುವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ. ಸದ್ರಿ ಕಾಣೆಯಾದವರಿಗೆ ಇದುವರೆಗೂ ಹುಡುಕಾಡಿ ಪತ್ತೆಯಾಗದೇ ಇದ್ದುದರಿಂದ ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶೇಟೆಪ್ಪ ತಂದೆ ಹನುಮಂತಪ್ಪ ಭೋವಿವಡ್ಡರ, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರಾಮಾಪುರ, ತಾ: ಮುಂಡಗೋಡ ರವರು ದಿನಾಂಕ: 26-10-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 162/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಸುಜನ್ ತಂದೆ ಪ್ರಕಾಶ್ ಕಿತ್ತೂರು, ಪ್ರಾಯ-19 ವರ್ಷ, ವೃತ್ತಿ-ಎಲ್.ಎಲ್.ಬಿ ವಿದ್ಯಾರ್ಥಿ, ಸಾ|| ಬಸವರಾಜ ಗಲ್ಲಿ, ಹಳಿಯಾಳ ಶಹರ. ಪಿರ್ಯಾದಿಯವರ ತಮ್ಮನಾದ ಈತನು ದಿನಾಂಕ: 22-10-2021 ರಂದು ಬೆಳಿಗ್ಗೆ 08-00 ಗಂಟೆಯ ಸುಮಾರಿಗೆ ‘ತಾನು ಧಾರವಾಡ ಕಾಲೇಜಿಗೆ ಹೋಗಿ ಬರುತ್ತೇನೆ’ ಅಂತಾ ಹಳಿಯಾಳ ಶಹರದ ಬಸವರಾಜ ಗಲ್ಲಿಯಲ್ಲಿರುವ ತಮ್ಮ ಮನೆಯಲ್ಲಿ ಹೇಳಿ ಹೋದವನು, ಇಲ್ಲಿಯವರೆಗೆ ವಾಪಸ್ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ. ಸದ್ರಿ ಕಾಣೆಯಾದವನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕರುಣ್ ತಂದೆ ಪ್ರಕಾಶ ಕಿತ್ತೂರ, ಪ್ರಾಯ-25 ವರ್ಷ, ವೃತ್ತಿ-ಪೆಟ್ರೋಲ್ ಪಂಪ್ ವ್ಯವಹಾರ, ಸಾ|| ಬಸವರಾಜ ಗಲ್ಲಿ, ಹಳಿಯಾಳ ಶಹರ ರವರು ದಿನಾಂಕ: 26-10-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 26-10-2021

at 00:00 hrs to 24:00 hrs

 

ಜೋಯಿಡಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಾಣಿಕ್ಯಂ ತಂದೆ ವೀರಸ್ವಾಮಿ ಗೌಡರ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಕಾಲೋನಿ, ಕುಂಬಾರವಾಡ, ತಾ: ಜೋಯಿಡಾ. ಪಿರ್ಯಾದಿಯ ಅಳಿಯನಾದ ಈತನು ತನ್ನ ಹೆಂಡತಿ ಮೃತಪಟ್ಟಿದಾಗಿನಿಂದಲೂ ಜೀವನದಲ್ಲಿ ಜಿಗುಪ್ಸೆಗೊಂಡಿದ್ದವನು, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 25-10-2021 ರಂದು 20-00 ಗಂಟೆಯಿಂದ ದಿನಾಂಕ: 26-10-2021 ರಂದು 11-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ವಾಸದ ಮನೆಯ ಹಾಲ್ ನಲ್ಲಿ ಮನೆಯ ಜಂತಿಗೆ ನೈಲಾನ್ ಹಗ್ಗವನ್ನು ಕಟ್ಟಿ ಕೊರಳಿಗೆ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ. ಇದರ ಹೊರತು ಅವನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಶೋಭಾ ಕೋಂ. ಆನಂದು ಬಾಂದೇಕರ, ಪ್ರಾಯ-60 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಜನತಾ ಕಾಲೋನಿ, ಕುಂಬಾರವಾಡ, ತಾ: ಜೋಯಿಡಾ ರವರು ದಿನಾಂಕ: 26-10-2021 ರಂದು 14-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 11/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಕುಮಾರ: ಮೊಹಿನ್ ತಂದೆ ಮೆಹಮೂದ್ ಗುಲ್ಬುರ್ಗಾ, ಪ್ರಾಯ-15 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| 3 ನಂಬರ ಗೇಟ್, ವಿನಾಯಕ ನಗರ, ತಾ: ದಾಂಡೇಲಿ. ಸುದ್ದಿದಾರರ ಮಗನಾದ ಈತನು ದಿನಾಂಕ: 24-10-2021 ರಂದು ಬೆಳಿಗ್ಗೆ 10-00 ಗಂಟೆಯಿಂದ 12-30 ಗಂಟೆಯ ಅವಧಿಯಲ್ಲಿ ಪಿರ್ಯಾದುದಾರರ ಮನೆಯ ಹತ್ತಿರದ ಕಾಳಿ ನದಿಯ ದಂಡೆಯಿಂದ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದವನು, ದಿನಾಂಕ: 26-10-2021 ರಂದು ಬೆಳಿಗ್ಗೆ 10-45 ಗಂಟೆಯ ಸಮಯಕ್ಕೆ ದಾಂಡೇಲಿಯ ವಿನಾಯಕ ನಗರದ ಪಕ್ಕದಿಂದ ಹಾಯ್ದಿರುವ ಕಾಳಿ ನದಿಯ ನೀರಿನಲ್ಲಿ ಮೊಸಳೆಗಳ ದಾಳಿಯಿಂದಾಗಿ ಮೃತಪಟ್ಟ ಸ್ಥಿತಿಯಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಮೆಹಮೂದ್ ತಂದೆ ಅಲಿಮಿಯಾ ಗುಲ್ಬುರ್ಗಾ, ಪ್ರಾಯ-45 ವರ್ಷ, ವೃತ್ತಿ-ಆಟೋ ಚಾಲಕ, ಸಾ|| 3 ನಂಬರ ಗೇಟ್, ವಿನಾಯಕ ನಗರ, ತಾ: ದಾಂಡೇಲಿ ರವರು ದಿನಾಂಕ: 26-10-2021 ರಂದು 11-25 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 27-10-2021 01:36 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080