ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 26-09-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 80/2021, ಕಲಂ: 326, 354 ಐಪಿಸಿ ನೇದ್ದರ ವಿವರ...... ನಮೂದಿತ ಯಾರೋ ಆರೋಪಿತನು ಅಪರಿಚಿತನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 25-09-2021 ರಂದು 22-00 ಗಂಟೆಯಿಂದ ದಿನಾಂಕ: 26-09-2021 ರಂದು 06-30 ಗಂಟೆಯ ನಡುವಿನ ಅವಧಿಯಲ್ಲಿ ಕಾರವಾರದ ಸರ್ದಾರ್ಜಿ ಪೆಟ್ರೋಲ್ ಪಂಪ್ ಹತ್ತಿರ ಕಾರವಾರ ನಗರದಲ್ಲಿ ಭಿಕ್ಷೆ ಬೇಡುವ ಲಕ್ಷ್ಮೀ ಇವಳಿಗೆ ನಮೂದಿತ ಯಾರೋ ಆರೋಪಿತನು ಯಾವುದೋ ಹರಿತವಾದ ವಸ್ತುವಿನಿಂದ ಆಕೆಯ ಕುತ್ತಿಗೆಯ ಬಲಬದಿಯಲ್ಲಿ ದೊಡ್ಡದಾದ ಗಾಯನೋವು ಪಡಿಸಿದ್ದು, ಅದೇ ಕಾರಣದಿಂದ ಆಕೆಯು ಅಸ್ವಸ್ಥಳಾಗಿ ಕಾರವಾರ ಬಸ್ ನಿಲ್ದಾಣದ ಬಳಿ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಶಿವರಾಜ ತಂದೆ ಶಿವಾ ನಾಯರ್, ಪ್ರಾಯ-50 ವರ್ಷ, ವೃತ್ತಿ-ವ್ಯಾಪಾರ, ಸಾ|| ಅಮಿನಾಬಿ ಅಪಾರ್ಟ್‍ಮೆಂಟ್, ಲಿಂಗನಾಯ್ಕವಾಡಾ, ಕಾರವಾರ ರವರು ದಿನಾಂಕ: 26-09-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 130/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಇಬ್ರಾಹಿಂ ಖಾನ್ ತಂದೆ ಸಾದಿಕ್ ಖಾನ್, ಪ್ರಾಯ-20 ವರ್ಷ, ವೃತ್ತಿ-ವ್ಯಾಪಾರ, ಸಾ|| ಆಜಾದ್ ನಗರ, 6 ನೇ ಕ್ರಾಸ್, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಎಕ್ಸ್-0742 ನೇದರ ಸವಾರ). ಈತನು ದಿನಾಂಕ: 24-09-21 ರಂದು ರಾತ್ರಿ 22-45 ಗಂಟೆಯ ಸುಮಾರಿಗೆ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯಲ್ಲಿ ಜಾಲಿ ಕ್ರಾಸ್ ಹತ್ತಿರ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಎಕ್ಸ್-0742 ನೇದರ ಹಿಂಬದಿಯಲ್ಲಿ ಶ್ರೀ ಅಥಪಾಲ್ ತಂದೆ ಆಯುಬ್ ಖಾನ್, ಪ್ರಾಯ-20 ವರ್ಷ, ಸಾ|| ಆಜಾದ್ ನಗರ, 6 ನೇ ಕ್ರಾಸ್, ತಾ: ಭಟ್ಕಳ ಇವರನ್ನು ಕೂಡ್ರಿಸಿಕೊಂಡು ಸದ್ರಿ ಮೋಟಾರ್ ಸೈಕಲನ್ನು ಬಟ್ಕಳ ಶಹರದ ಶಂಷುದ್ದೀನ್ ಸರ್ಕಲ್ ಕಡೆಯಿಂದ ಜಾಲಿ ಕ್ರಾಸ್ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದವನು, ರಸ್ತೆಯ ಬಲಕ್ಕೆ ಹೋಗಿ ಭಟ್ಕಳ ಶಹರದ ಜಾಲಿ ಕ್ರಾಸ್ ಕಡೆಯಿಂದ ಶಂಷುದ್ದೀನ್ ಸರ್ಕಲ್ ಕಡೆಗೆ ಪಿರ್ಯಾದಿಯರು ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-4333 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರಿಗೆ ಎಡಗೈಗೆ ಮತ್ತು ಬಲಗಾಲಿಗೆ ಹಾಗೂ ಅಪಘಾತ ಪಡಿಸಿ, ಮೋಟಾರ್ ಸೈಕಲ್ ಹಿಂಬದಿಯ ಸವಾರ ಶ್ರೀ ಅಥಪಾಲ್ ತಂದೆ ಆಯುಬ್ ಖಾನ್ ಇವರಿಗೆ ಎಡಗೈಗೆ ಮತ್ತು ತಲೆಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ಮಾಜಿದ್ ಶಾಬಾಂದ್ರಿ ತಂದೆ ಅಹ್ಮದ್ ಶಾಬಾಂದ್ರಿ, ಪ್ರಾಯ-54 ವರ್ಷ, ವೃತ್ತಿ-ವ್ಯಾಪಾರ, ಸಾ|| ಎ.ಎಮ್ ಶಾಬಾಂದ್ರಿ, ಅಳ್ವಾ ಸ್ಟ್ರೀಟ್, ತಾ: ಭಟ್ಕಳ ರವರು ದಿನಾಂಕ: 26-09-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 153/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಯಮನೂರ ತಂದೆ ಹನುಮಂತಪ್ಪಾ ಬೋವಿವಡ್ಡರ್, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಳಮ್ಮ ನಗರ, ತಾ: ಯಲ್ಲಾಪುರ, 2]. ಮಂಜುನಾಥ ತಂದೆ ಪರಮೇಶ್ವರ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಳಮ್ಮ ನಗರ, ತಾ: ಯಲ್ಲಾಪುರ, 3]. ಮರ್ದಾನ್ ಸಾಬ್ ತಂದೆ ಅಮೀರ್ ಶೇಖ್, ಪ್ರಾಯ-44 ವರ್ಷ, ವೃತ್ತಿ-ಚಾಲಕ/ಕೂಲಿ ಕೆಲಸ, ಸಾ|| ಕಾಳಮ್ಮ ನಗರ, ತಾ: ಯಲ್ಲಾಪುರ, 4]. ಮಹಮ್ಮದ್ ರಫೀಕ್ ತಂದೆ ಅಬ್ದುಲ್ ರಹೆಮಾನ್ ಸೈಯ್ಯದ್, ಪ್ರಾಯ-42 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ನೂತನನಗರ, ತಾ: ಯಲ್ಲಾಪುರ, 5]. ಶಫಿ ತಂದೆ ಮಹಮ್ಮದ್ ಶೇಖ್ ಪ್ರಾಯ-42 ವರ್ಷ, ವೃತ್ತಿ-ವ್ಯಾಪಾರ, ಸಾ|| ನೂತನನಗರ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರು ದಿನಾಂಕ: 26-09-2021 ರಂದು ಸಾಯಂಕಾಲ 16-45 ಗಂಟೆಗೆ ಯಲ್ಲಾಪುರ ಪಟ್ಟಣದ ನೂತನನಗರದ ಬಡಾವಣೆಯಲ್ಲಿ ಇರುವ ಅರಣ್ಯದಲ್ಲಿಯ ಸಾರ್ವಜನಿಕ ಸ್ಧಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಅಂದರ್-ಬಾಹರ್ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿ ಆರೋಪಿತರೆಲ್ಲರೂ ನಗದು ಹಣ 2,800/- ರೂಪಾಯಿ ಹಾಗೂ ಜೂಗಾರಟದ ಸಲಕರಣೆಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಕು: ಪ್ರಿಯಾಂಕಾ ನ್ಯಾಮಗೌಡ, ಡಬ್ಲ್ಯೂ.ಪಿ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 26-09-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 119/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 04-08-2021 ರಂದು ಸಂಜೆ 07-30 ಗಂಟೆಯಿಂದ ರಾತ್ರಿ 09-00 ಗಂಟೆಯ ನಡುವಿನ ಅವಧಿಯಲ್ಲಿ ಮುಂಡಗೋಡ ಪಟ್ಟಣದ ವಾಯ್.ಬಿ ರೋಡಿನಲ್ಲಿರುವ ಪಿರ್ಯಾದಿಯ ಮನೆಯ ಮುಂದೆ ನಿಲ್ಲಿಸಿಟ್ಟ ಪಿರ್ಯಾದಿಯ ಬಾಬ್ತು ಅ||ಕಿ|| 25,000/- ರೂಪಾಯಿ ಬೆಲೆಬಾಳುವ ಹೋಂಡಾ ಎಕ್ಟಿವಾ 125 ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ–8370 (ಚಾಸಿಸ್ ನಂ: ME4JF493GF8012435 ಹಾಗೂ ಇಂಜಿನ್ ನಂ: JF49E81015984) ನೇದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನನ್ನೇಸಾಬ್ ತಂದೆ ಮರ್ದಾನಸಾಬ್ ಅಂದಲಗಿ, ಪ್ರಾಯ-42 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ವಾಯ್.ಬಿ ರೋಡ್, ತಾ: ಮುಂಡಗೋಡ ರವರು ದಿನಾಂಕ: 26-09-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 123/2021, ಕಲಂ: 3, 7 ಅವಶ್ಯ ವಸ್ತುಗಳ ಕಾಯ್ದೆ-1955 ಹಾಗೂ ಕಲಂ: 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ 1]. ಭಾವಾ ಪಕೀರ ಸಾಬ್, ಸಾ|| ಅಮೀನಾ ಸರ್ಕಲ್, ತಾ: ಸಿದ್ದಾಪುರ, 2]. ಅರವಿಂದ ಶೇಷಗಿರಿ ಭಟ್, ಸಾ|| ಸಿದ್ದಾಪುರ, 3]. ಅಶೋಕ ತಂದೆ ಶ್ರೀನಿವಾಸ ಗೌಡ, ಸಾ|| ಪಿ.ಕೆ ಲೇಔಟ್, ಮೈಸೂರು. ಈ ನಮೂದಿತ ಆರೋಪಿತರಲ್ಲಿ ಆರೋಪಿ 2 ನೇಯವನು ಆರೋಪಿ 1 ನೇಯವನ ಮನೆಯಲ್ಲಿ ಅ||ಕಿ|| 1,73,952/- ರೂಪಾಯಿ ಬೆಲೆಬಾಳುವ 81.40 ಕ್ವಿಂಟಾಲ್ ಅಕ್ಕಿಯನ್ನು ತಲಾ 50 ಕೆ.ಜಿ ಯ 163 ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದವನು, ದಿನಾಂಕ: 25-09-2021 ರಂದು 13-00 ಗಂಟೆ ಸುಮಾರಿಗೆ ಆರೋಪಿ 3 ನೇಯವನ ಲಾರಿ ನಂ: ಕೆ.ಎ-14/ಎ-6167 ನೇದರಲ್ಲಿ ಮಹಾರಾಷ್ಟ್ರಕ್ಕೆ ಸಾಗಾಟ ಮಾಡಲು ಲೋಡ್ ಮಾಡಿಟ್ಟುಕೊಂಡಿದ್ದಾಗ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು, ಕೊಂಡ್ಲಿ, ಸಿದ್ದಾಪುರ ರವರು ದಾಳಿ ಮಾಡಿಕೊಂಡು ವಶಕ್ಕೆ ಪಡೆದುಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ಟಿ ತಂದೆ ನೀಲಪ್ಪ ಎಂ, ಪ್ರಾಯ-35 ವರ್ಷ, ವೃತ್ತಿ-ಆಹಾರ ನಿರೀಕ್ಷಕರು, ತಹಶೀಲ್ದಾರ ಕಚೇರಿ, ತಾ: ಸಿದ್ದಾಪುರ ರವರು ದಿನಾಂಕ: 26-09-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 26-09-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 55/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪುರಂದರ ತಂದೆ ಶಿವಾನಂದ ನಾಯ್ಕ, ಪ್ರಾಯ-40 ವರ್ಷ, ವೃತ್ತಿ-ನೇವಲ್ ಬೇಸ್ ನಲ್ಲಿ ಫ್ಯಾಬ್ರಿಕೇಶನ್ ಕೆಲಸ, ಸಾ|| ಭಾವಿಕೇರಿ, ತಾ: ಅಂಕೋಲಾ. ಸುದ್ಧಿದಾರರಾದ ಚಿಕ್ಕಪ್ಪನಾದ ಈತನು ದಿನಾಂಕ: 26-09-2021 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮದಲ್ಲಿರುವ ಅರಬ್ಬಿ ಸಮುದ್ರದ ತೀರಕ್ಕೆ ವಾಕಿಂಗ್ ಮಾಡಲು ಗೆಳೆಯರೊಂದಿಗೆ ಹೋದವನು, ಅದೇ ಸಮುದ್ರದಲ್ಲಿ ತನ್ನ ಗೆಳೆಯರು ಮೀನು ಹಿಡಿಯುತ್ತಿರುವುದನ್ನು ನೋಡಲು ಸಮುದ್ರದ ತೀರಕ್ಕೆ ಹೋದವನು, ಆಕಸ್ಮಿಕವಾಗಿ ಸಮುದ್ರದ ಅಲೆಗೆ ಸಿಕ್ಕಿ ಕೊಚ್ಚಿಕೊಂಡು ಹೋಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದವನು,  ದಿನಾಂಕ: 26-09-2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹವು ಸಿಕ್ಕಿರುತ್ತದೆ. ಈ ಕುರಿತು ಮುಂದಿನ ಕ್ರಮವನ್ನು ಕೈಗೊಂಡು ಮೃತದೇಹವನ್ನು ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಂಜಯ ತಂದೆ ಮನೊಹರ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಾವಿಕೇರಿ, ತಾ: ಅಂಕೋಲಾ ರವರು ದಿನಾಂಕ: 26-09-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಪುಂಡಲಿಕ ತಂದೆ ಗೋವಿಂದ ಅಂಬಿಗ, ಪ್ರಾಯ-32 ವರ್ಷ, ವೃತ್ತಿ-ಬಾರ್ ಬೆಂಡಿಂಗ್ ಕೆಲಸ, ಸಾ|| ರವೀಂದ್ರನಗರ, ಗಂಗಾಂಬಿಕಾ ದೇವಸ್ಥಾನದ ಹತ್ತಿರ, ತಾ: ಸಿದ್ದಾಪುರ. ಈತನು ಕಳೆದ 2-3 ತಿಂಗಳಿನಿಂದ ದೇವರು, ದೆವ್ವ ಅಂತಾ ಹೇಳುತ್ತಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದವನು, ಅದನ್ನೇ ಮನಸ್ಸ್ಸಿಗೆ ಹಚ್ಚಿಕೊಂಡಿದ್ದವನು, ದಿನಾಂಕ: 22-09-2021 ರಂದು 11-30 ಗಂಟೆಯಿಂದ ದಿನಾಂಕ: 26-09-2021 ರಂದು 11-30 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ಶಹರದಲ್ಲಿ ಭೂತೇಶ್ವರ ಕಾಲೋನಿಯ ರಾಘವೇಂದ್ರ ಶೇಟ್ ಇವರಿಗೆ ಸೇರಿದ ಜಾಗದಲ್ಲಿ ಇರುವ ಬಾವಿಯಲ್ಲಿ ಬಿದ್ದು ನೀರು ಕುಡಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಗೋವಿಂದ ತಂದೆ ರಾಮ ಅಂಬಿಗ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರವೀಂದ್ರನಗರ, ಗಂಗಾಂಬಿಕಾ ದೇವಸ್ಥಾನದ ಹತ್ತಿರ, ತಾ: ಸಿದ್ದಾಪುರ ರವರು ದಿನಾಂಕ: 26-09-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 28-09-2021 10:32 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080