ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 27-08-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 14/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹಮ್ಮದ್ ಶೆಫಿನ್ ತಂದೆ ಕಬೀರ್ ಖಾನ್ ಪಿ. ಬಿ, ಪ್ರಾಯ-27 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಮೂವತ್ತುಪುಜಾ, ಕೇರಳಾ (ಕಾರ್ ನಂ: ಕೆ.ಎಲ್-58/ಎಸ್-4656 ನೇದರ ಚಾಲಕ). ದಿನಾಂಕ: 27-08-2021 ರಂದು ಮಧ್ಯಾಹ್ನ 13-15 ಗಂಟೆಗೆ ಪಿರ್ಯಾದಿಯು ಬಸ್ ನಿರ್ವಾಹಕಿಯಾಗಿ ಕರ್ತವ್ಯದಲ್ಲಿ ಪ್ರಯಾಣಿಸುತ್ತಿದ್ದ ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ. ಬಸ್ ನಂ: ಕೆ.ಎ-42/ಎಫ್-857 ನೇದನ್ನು ಬಸ್ ಚಾಲಕನಾದ ಶ್ರೀ ಪರಸಪ್ಪ ತಂದೆ ನೀಲಪ್ಪ ಹೊಸಮನಿ, ಈತನು ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಕಾರವಾರದಿಂದ ಅಂಕೋಲಾ ಕಡೆಗೆ ಬಸ್ಸನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಬಿಣಗಾ ಘಟ್ಟದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ ಘಟ್ಟದ ಇಳಿಜಾರಿನ ತಿರುವಿನಲ್ಲಿ ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಬಂದ ಕಾರ್ ನಂ: ಕೆ.ಎಲ್-58/ಎಸ್-4656 ನೇದರ ಆರೋಪಿ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ತಿರುವು ರಸ್ತೆಯಲ್ಲಿ ತನ್ನ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ಒಮ್ಮೇಲೆ ರಸ್ತೆಯ ತೀರಾ ಬಲಕ್ಕೆ ತನ್ನ ಕಾರನ್ನು ಚಲಾಯಿಸಿ, ಪಿರ್ಯಾದಿಯು ಪ್ರಯಾಣಿಸುತ್ತಿದ್ದ ಬಸ್ಸಿನ ಮುಂದಿನ ಬಲಭಾಗಕ್ಕೆ ತನ್ನ ಕಾರಿನ ಮುಂದಿನ ಬಲಭಾಗದಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯು ಪ್ರಯಾಣಿಸುತ್ತಿದ್ದ ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-42/ಎಫ್-857 ನೇದರ ಬಲಭಾಗದಲ್ಲಿ ಹಾಗೂ ಹಿಂದಿನ ಬಲಬದಿಯ ಟೈಯರಿಗೆ ಜಖಂ ಪಡಿಸಿದ್ದಲ್ಲದೇ, ಆರೋಪಿ ಕಾರ್ ಚಾಲಕನು ತನ್ನ ಕಾರಿನ ಮುಂದಿನ ಬಲಭಾಗದಲ್ಲಿ ಜಖಂ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀಮತಿ ವೀರಮ್ಮ ಕೋಂ. ಶಿವಮೂರ್ತಯ್ಯ ಹಿರೇಮಠ, ಪ್ರಾಯ-38 ವರ್ಷ, ವೃತ್ತಿ-ಬಸ್ ನಿರ್ವಾಹಕರು, ಕಾರವಾರ ಡಿಪೋ (ಬ್ಯಾಡ್ಜ್ ನಂ: 2200), ಸಾ|| ಸಿಂಗರಿಹಳ್ಳಿ, ತಾ: ಹರಪ್ಪನಹಳ್ಳಿ, ಜಿ: ದಾವಣಗೆರೆ, ಹಾಲಿ ಸಾ|| ರವೀಂದ್ರ ನಗರ, ತಾ: ಯಲ್ಲಾಪುರ ರವರು ದಿನಾಂಕ: 27-08-2021 ರಂದು 18-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 72/2021, ಕಲಂ: 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗೋವಿಂದ ಸುಧಾಮ ಕಾಂಬಳೆ, ಸಾ|| ನಂದನಗದ್ದಾ, ಕಾರವಾರ, 2]. ನರ್ಮದಾ ಗೋವಿಂದ ಕಾಂಬಳೆ, ಸಾ|| ನಂದನಗದ್ದಾ, ಕಾರವಾರ. ದಿನಾಂಕ: 27-08-2021 ರಂದು 07-30 ಗಂಟೆಗೆ ಪಿರ್ಯಾದಿಯ ಹೆಂಡತಿ ದಿಶಾ ಇವಳು ತಮ್ಮ ಮನೆಯ ಹಿಂದಿನ ಕಸ ತೆಗೆಯುತ್ತಿರುವಾಗ ನಮೂದಿತ ಆರೋಪಿತರ ಮನೆಯ ನಾಯಿಗಳು ಹೊಲಸು ಮಾಡಿದ್ದರಿಂದ, ‘ನಾಯಿಯನ್ನು ಯಾಕೆ ಕಟ್ಟುವುದಿಲ್ಲ?’ ಅಂತಾ ವಿಚಾರಿಸಿದ್ದಕ್ಕೆ ಆರೋಪಿ 1 ನೇಯವನು ಪಿರ್ಯಾದಿಗೆ ಹಾಗೂ ಪಿರ್ಯಾದಿಯ ಹೆಂಡತಿಗೆ ಅವಾಚ್ಯವಾಗಿ ಬೈಯ್ದು, ಬಡಿಗೆಯಿಂದ ಪಿರ್ಯಾದಿಗೆ ಹಾಗೂ ಅವರ ಹೆಂಡತಿಗೆ ತಲೆಯ ಮೇಲೆ ಮತ್ತು ಭುಜದ ಮೇಲೆ ಹೊಡೆದು ಗಾಯ ಪಡಿಸಿ, ‘ತಮ್ಮ ತಂಟೆಗೆ ಬಂದರೆ ಕೊಂದು ಹಾಕುತ್ತೇವೆ’ ಎನ್ನುವುದಾಗಿ ಜೀವದ ಬೆದರಿಕೆ ಹಾಕಿದರೆ, ಆರೋಪಿ 2 ನೇಯವಳು ಪಿರ್ಯಾದಿಯ ಹೆಂಡತಿಗೆ ಅವಾಚ್ಯವಾಗಿ ಬೈಯ್ದಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಧೀನು ತಂದೆ ಪರಮೇಶ್ವರ ಸಾಗೇಕರ್, ಪ್ರಾಯ-59 ವರ್ಷ, ವೃತ್ತಿ-ನಿರುದ್ಯೋಗಿ, ಸಾ|| ನಂದನಗದ್ದಾ, ಗಣಪತಿ ದೇವಸ್ಥಾನದ ಹತ್ತಿರ, ಕಾರವಾರ ರವರು ದಿನಾಂಕ: 27-08-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 73/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು ಸಂತೋಷ ತಂದೆ ದುಮ್ಮಾ ತಾಂಡೇಲ್, ಪ್ರಾಯ-37 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಐ.ಎನ್.ಪಿ ರಸ್ತೆ, ಬೈತಕೂಲ್, ಕಾರವಾರ. ಈತನು ದಿನಾಂಕ: 27-08-2021 ರಂದು 11-45 ಘಂಟೆಗೆ ಬೈತಕೋಲ್ ಐ.ಎನ್.ಪಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ತನ್ನ ತಾಬಾ ಯಾವುದೇ ಪಾಸ್ ಅಥವಾ ಪರ್ಮಿಟ್ ಪಡೆದುಕೊಳ್ಳದೇ, ಗೋವಾ ರಾಜ್ಯ ತಯಾರಿಕೆಯ LIGHT HORSE Premium blended malt WHISKY-750 ML, For sale in Goa ಅಂತಾ ನಮೂದಿರುವ ಸುಮಾರು 2,800/- ರೂಪಾಯಿ ಬೆಲೆಬಾಳುವ 14 ಗೋವಾ ರಾಜ್ಯ ಸರಾಯಿ ತುಂಬಿದ ಬಾಟಲಿಗಳನ್ನು ತನ್ನ ತಾಬಾ ಇಟ್ಟುಕೊಂಡು ಸಾಗಾಟ ಮಾಡುವ ತಯಾರಿಯಲ್ಲಿದ್ದವನು, ಸರಾಯಿ ತುಂಬಿದ ಬಾಟಲಿಗಳಿದ್ದ ನೈಲಾನ್ ಚೀಲದೊಂದಿಗೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಸ್. ಬಿ. ಪೂಜಾರಿ, ಪಿ.ಎಸ್.ಐ, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 27-08-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 128/2021, ಕಲಂ: 4, 5, 7, 12 THE KARNATAKA PREVENTION OF COW SLAUGHTER AND PRESERVATION OF CATTLE ORDINANCE-2020 ಹಾಗೂ ಕಲಂ: 11(1)(d) The Prevention of Cruelty to Animal Act-1960 ಮತ್ತು ಕಲಂ: 192(A) ಎಮ್.ವಿ ಎಕ್ಟ್ ಹಾಗೂ ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾಗರಾಜ ತಂದೆ ಫಕೀರಪ್ಪ ಕಟ್ಟಿಮನಿ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಮಡಿಕೆಹೊನ್ನಳ್ಳಿ, ದಾಸ್ತಿಕೊಪ್ಪ, ತಾ: ಕಲಘಟಗಿ, ಜಿ: ಧಾರವಾಡ, 2]. ಬಸವಣ್ಣಯ್ಯ ತಂದೆ ವೀರಭದ್ರಯ್ಯ ಹಿರೇಮಠ, ಪ್ರಾಯ-30 ವರ್ಷ, ವೃತ್ತಿ-ಹಾಲಿನ ವ್ಯಾಪಾರ, ಸಾ|| ಬೆಂಡಗೇರಿ ಓಣಿ, ತಾ: ಕಲಘಟಗಿ, ಜಿ: ಧಾರವಾಡ. ಈ ನಮೂದಿತ ಆರೋಪಿತರು ದಿನಾಂಕ: 27-08-2021 ರಂದು 21-00 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಶಿರಕುಳಿಯ ವರದರಾಜ ಹೊಟೇಲ್ ಹತ್ತಿರ ಸುಮಾರು 18,000/- ರೂಪಾಯಿ ಮೌಲ್ಯದ ಒಂದು ಎಮ್ಮೆಯನ್ನು ಎಲ್ಲಿಂದಲೋ ಕಳುವು ಮಾಡಿಕೊಂಡು ತಂದು, ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ಎಮ್ಮೆಯನ್ನು ವಧೆ ಮಾಡುವ ಉದ್ದೇಶದಿಂದ ಮಾರಾಟ ಮಾಡುವ ಸಲುವಾಗಿ ಯಾವುದೇ ಸುರಕ್ಷತೆ ಇಲ್ಲದೇ, ಹಿಂಸಾತ್ಮಕವಾದ ರೀತಿಯಲ್ಲಿ ಟಾಟಾ ಏಸ್ ವಾಹನ ನಂ: ಕೆ.ಎ-25/ಸಿ-5774 ನೇದರಲ್ಲಿ ತುಂಬಿಕೊಂಡು ಅದಕ್ಕೆ ಸೇವಿಸಲು ನೀರು, ಹುಲ್ಲು ನೀಡದೇ, ಗಾಳಿ, ಬೆಳಕು ತಾಗದಂತೆ ಕಾಲು ಮತ್ತು ತಲೆಯನ್ನು ಹಗ್ಗದಿಂದ ಗಟ್ಟಿಯಾಗಿ ಕಟ್ಟಿ ಸಂಪೂರ್ಣವಾಗಿ ಮುಚ್ಚಿಕೊಂಡು ಸಾಗಾಟ ಮಾಡಿಕೊಂಡು ಹೋಗುತ್ತಿದ್ದಾಗ ದಾಳಿ ಕಾಲಕ್ಕೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರವೀಣಕುಮಾರ ಆರ್, ಪಿ.ಎಸ್.ಐ, ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 27-08-2021 ರಂದು 23-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 151/2021, ಕಲಂ: 279, 337, 304(ಎ) ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಮೀನು ಲಾರಿ ನಂ: ಕೆ.ಎ-20/ಡಿ-6955 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 27-08-2021 ರಂದು 11-00 ಗಂಟೆಯ ಸುಮಾರಿಗೆ ತಾನು ಚಲಾಯಿಸುತ್ತಿದ್ದ ಮೀನು ಲಾರಿ ನಂ: ಕೆ.ಎ-20/ಡಿ-6955 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಹೋಗಲು ಅತೀವೇಗವಾಗಿ ಚಲಾಯಿಸಿಕೊಂಡು ಬಂದು, ದಿವಯಗಿ ಹರ್ಕಡೆ ಕ್ರಾಸ್ ಹತ್ತಿರ ಮೀನು ಲಾರಿಯನ್ನು ನಿಷ್ಕಾಳಜಿಯಿಂದ ರಸ್ತೆಯ ಬಲಕ್ಕೆ ಚಲಾಯಿಸಿ, ಅದೇ ವೇಳೆಗೆ ಎದುರಿನಿಂದ ಅಂದರೆ ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಗಾಯಾಳು ಸತ್ಯಪ್ರಮೋದ ತಂದೆ ರಾಘವೇಂದ್ರ ಈತನು ಸವಾರಿ ಮಾಡಿಕೊಂಡು ಹೊರಟ ಮೋಟಾರ್ ಸೈಕಲ್ ನಂ: ಕೆ.ಎ-36/ಇ.ಟಿ-4269 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರ ಸತ್ಯಪ್ರಮೋದ ಈತನಿಗೆ ಸೊಂಟಕ್ಕೆ ಹಾಗೂ ಬೆನ್ನಿಗೆ ಗಾಯನೋವು ಪಡಿಸಿದ್ದು ಹಾಗೂ ಮೋಟಾರ್ ಸೈಕಲ್ ಹಿಂಬದಿ ಸವಾರ ಅವಿನಾಶ ಜಿ. ತಂದೆ ಮುರುಳಿಕೃಷ್ಣಾ, ಈತನಿಗೆ ತಲೆಗೆ ಮತ್ತು ಮುಖಕ್ಕೆ ಗಂಭೀರ ಗಾಯನೋವು ಪಡಿಸಿ ಸ್ಥಳದಲ್ಲಿಯೇ ಮೃತಪಡಲು ಕಾರಣವಾಗಿದ್ದಲ್ಲದೇ, ಆರೋಪಿ ಮೀನು ಲಾರಿ ಚಾಲಕನು ಲಾರಿಯನ್ನು ಅಪಘಾತ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀ ರಾಜೀವ ತಂದೆ ದೇವಯ್ಯ ಅಂಬಿಗ, ಪ್ರಾಯ-31 ವರ್ಷ, ವೃತ್ತಿ-ಬೋಟ್ ಮೆಕ್ಯಾನಿಕ್, ಸಾ|| ತಂಡ್ರಕುಳಿ, ತಾ: ಕುಮಟಾ ರವರು ದಿನಾಂಕ: 27-08-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 152/2021, ಕಲಂ: 324, 447, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಣೇಶ ರಾಮಚಂದ್ರ ಭಟ್ಟ, ಪ್ರಾಯ-35 ವರ್ಷ, ಸಾ|| ಹಂದಿಗೋಣ, ತಾ: ಕುಮಟಾ, 2]. ಶ್ರೀಮತಿ ಶ್ವೇತಾ ಗಣೇಶ ಭಟ್ಟ, ಸಾ|| ಹಂದಿಗೋಣ, ತಾ: ಕುಮಟಾ. ಈ ನಮೂದಿತ ಆರೋಪಿತರು ಪಿರ್ಯಾದಿಯವರ ಸರ್ವೇ ನಂ: 246/2, 246/7 ನೇದರಲ್ಲಿ ಓಡಾಡುವ ದಾರಿಯ ವಿಚಾರವಾಗಿ ಈ ಹಿಂದಿನಿಂದಲೂ ಪಿರ್ಯಾದಿಯೊಂದಿಗೆ ಜಗಳ ಮಾಡಿಕೊಂಡು, ತೊಂದರೆಯನ್ನು ನೀಡುತ್ತಾ ಬಂದವರಿದ್ದು, ದಿನಾಂಕ: 26-08-2021 ರಂದು 16-00 ಗಂಟೆಗೆ ಆರೋಪಿತರಿಬ್ಬರು ಸೇರಿಕೊಂಡು ಪಿರ್ಯಾದಿಯ ಜಮೀನನ್ನು ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿಯೊಂದಿಗೆ ಜಗಳ ತೆಗೆದು ಪಿರ್ಯಾದಿಯನ್ನು ದೂಡಿ ಹಾಕಿ, ಕಲ್ಲಿನಿಂದ ಪಿರ್ಯಾದಿಗೆ ಸೊಂಟಕ್ಕೆ, ಕಾಲಿನ ತೊಡೆಯ ಭಾಗಕ್ಕೆ ಹಾಗೂ ಮುಖಕ್ಕೆ ಹೊಡೆದು ಗಾಯನೋವು ಪಡಿಸಿದ್ದಲ್ಲದೇ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸುಧಾ ಗಣಪತಿ ಭಟ್ಟ, ಪ್ರಾಯ-70 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹಂದಿಗೋಣ, ತಾ: ಕುಮಟಾ ರವರು ದಿನಾಂಕ: 27-08-2021 ರಂದು 16-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 136/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಅಶ್ವಿನಿ ತಂದೆ ಆನಂದ ನಾಯ್ಕ, ಪ್ರಾಯ-18 ವರ್ಷ, 5 ತಿಂಗಳು, ವೃತ್ತಿ-ಮನೆ ಕೆಲಸ, ಸಾ|| ಹುಬ್ನಳ್ಳಿ, ಹುತ್ಕಂಡ ಗ್ರಾಮ, ತಾ: ಯಲ್ಲಾಪುರ. ಪಿರ್ಯಾದುದಾರರ ಮಗಳಾದ ಇವಳು ದಿನಾಂಕ: 26-08-2021 ರಂದು ಬೆಳಿಗ್ಗೆ ಯಲ್ಲಾಪುರ ತಾಲೂಕಿನ ಹುತ್ಕಂಡ ಗ್ರಾಮದ ಹುಬ್ನಳ್ಳಿ ಊರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರಕ್ಷಾಬಂಧನದ ಕಾರ್ಯಕ್ರಮಕ್ಕೆ ಹೋದವಳು, ಮಧ್ಯಾಹ್ನ 15-00 ಗಂಟೆಯ ಸುಮಾರಿಗೆ ಶಾಲೆಯಿಂದ ಯಾರಿಗೂ ಹೇಳದೇ ಹೋದವಳು, ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಆನಂದ ತಂದೆ ಪಾಂಡುರಂಗ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹುಬ್ನಳ್ಳಿ, ಹುತ್ಕಂಡ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 27-08-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 139/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಸೋಮನಿಂಗ ತಂದೆ ಅಂಬು ಗೌಡಾ, ಪ್ರಾಯ-61 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನವನಗರ, ಮುರ್ಕವಾಡ, ತಾ: ಹಳಿಯಾಳ. ಪಿರ್ಯಾದಿಯವರ ಗಂಡನಾದ ಈತನು ತನ್ನ ಎರಡು ಜನ ಗಂಡು ಮಕ್ಕಳು ಈಗ 5-6 ವರ್ಷಗಳ ಹಿಂದೆ ತೀರಿಕೊಂಡಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಯಾವಾಗಲೂ ಚಿಂತೆ ಮಾಡುತ್ತಿದ್ದವನು, ಕಳೆದ 3-4 ತಿಂಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು, ದಿನಾಂಕ: 24-08-2021 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದ ತನ್ನ ಮನೆಯಿಂದ ಮುರ್ಕವಾಡ ಬಸ್ ಸ್ಟ್ಯಾಂಡ್ ಕಡೆಗೆ ಹೋದವನು, ವಾಪಸ್ ಮನೆಗೆ ಬಾರದೇ, ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ. ಸದ್ರಿ ಕಾಣೆಯಾದವನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಮಲ್ಪೂರಿ ಕೋಂ. ಸೋಮನಿಂಗ ಗೌಡಾ, ಪ್ರಾಯ-54 ವರ್ಷ, ವೃತ್ತಿ-ಮನೆ ಕೆಲಸ, ಸಾ|| ನವನಗರ, ಮುರ್ಕವಾಡ, ತಾ: ಹಳಿಯಾಳ ರವರು ದಿನಾಂಕ: 27-08-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 103/2021, ಕಲಂ: 425, 427, 441, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹಾಬಲೇಶ್ವರ ತಂದೆ ವೆಂಕಪ್ಪ ಹೆಗಡೆ, ಪ್ರಾಯ-80 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಸಿರಿವನ, ಪೋ: ಸಂಪಗೋಡ, ತಾ: ಸಿದ್ದಾಪುರ, 2]. ರಾಘವೇಂದ್ರ ತಂದೆ ಮಹಾಬಲೇಶ್ವರ ಹೆಗಡೆ, ಪ್ರಾಯ-54 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಸಿರಿವನ, ಪೋ: ಸಂಪಗೋಡ, ತಾ: ಸಿದ್ದಾಪುರ. ದಿನಾಂಕ: 24-08-2021 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿಯು ವಹಿವಾಟು ಮಾಡಿಕೊಂಡು ಬಂದಿರುವನೆಂದು ಹೇಳಲಾಗಿರುವ ಜಮೀನಿನ (ಭಂಡಾರಕೇರಿ ಗ್ರಾಮ ಸರ್ವೇ ನಂ: 238 ಹಿಸ್ಸಾ-03, ಕ್ಷೇತ್ರ-0-28-12, ಸರ್ವೇ ನಂ: 238, ಹಿಸ್ಸಾ-04, ಕ್ಷೇತ್ರ-0-27-8 ಮತ್ತು ಬೆಟ್ಟ ಸರ್ವೇ ನಂ: 256) ವ್ಯಾಪ್ತಿಯಲ್ಲಿ ಪಿರ್ಯಾದಿಯು ದನ-ಕರುಗಳನ್ನು ಮೇಯಿಸಲು ಹೊಡೆದುಕೊಂಡು ಹೋಗಿದ್ದು, ಇದೇ ವೇಳೆಗೆ ನಮೂದಿತ ಆರೋಪಿತರು 7-8 ಜನ ಕೂಲಿ ಆಳುಗಳೊಂದಿಗೆ ಪಿರ್ಯಾದಿಯು ವಹಿವಾಟು ಮಾಡಿಕೊಂಡು ಬಂದಿರುವ ಸದರ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ, ಮರಗಳನ್ನು ಮತ್ತು ಸೊಪ್ಪನ್ನು ಕಡಿಯುತ್ತಿದ್ದು, ಆಗ ಪಿರ್ಯಾದಿಯು ಆರೋಪಿತರಿಗೆ ‘ನಮ್ಮ ಹಕ್ಕು ಮತ್ತು ವಹಿವಾಟಿನಲ್ಲಿರುವ ಮರ ಮತ್ತು ಸೊಪ್ಪನ್ನು ಯಾಕೆ ಕಡಿಯುತ್ತೀರಿ?’ ಅಂತಾ ಕೇಳಿದಾಗ, ಆರೋಪಿತರು ‘ನಿಮ್ಮ ಜಾಗದಲ್ಲಿರುವ ಮರಗಳನ್ನು ಕಡಿಯುತ್ತೇವೆ. ನಿಮ್ಮ ಹತ್ತಿರ ಏನೂ  ಮಾಡಲು ಆಗುವುದಿಲ್ಲ. ನೀವು ನಮ್ಮನ್ನು ತಡೆಯಲು ಬಂದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಧಮಕಿ ಹಾಕಿದ್ದಲ್ಲದೇ, ಪಿರ್ಯಾದಿಗೆ ಸೇರಿದ ಸ್ವತ್ತನ್ನು ನಷ್ಟ ಪಡಿಸಿ, ಕತ್ತರಿಸಿದ ಮರ ಮತ್ತು ಸೊಪ್ಪನ್ನು ಆರೋಪಿತರು 7-8 ಜನ ಕೂಲಿ ಆಳುಗಳೊಂದಿಗೆ ಹೊತ್ತೊಯ್ದ ಬಗ್ಗೆ ಪಿರ್ಯಾದಿ ಶ್ರೀ ಮಧುಕೇಶ್ವರ ತಂದೆ ರಾಮಕೃಷ್ಣ ಹೆಗಡೆ, ಪ್ರಾಯ-53 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಕ್ಕೆಮನೆ, ಪೋ: ಕೋಡ್ಸರ, ಮುಟ್ಠಳ್ಳಿ, ತಾ: ಸಿದ್ದಾಪುರ ರವರು ದಿನಾಂಕ: 27-08-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 27-08-2021

at 00:00 hrs to 24:00 hrs

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 29/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸಂಜಯ ತಂದೆ ಹನುಮಂತಪ್ಪ ಸುಬ್ಬಾಯವರ್, ಪ್ರಾಯ-32 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಾಳಗನಕೊಪ್ಪ, ತಾ: ಮುಂಡಗೋಡ. ಈತನು ದಿನಾಂಕ: 27-08-2021 ರಂದು ಸಾಯಂಕಾಲ 05-15 ಗಂಟೆಯ ಸುಮಾರಿಗೆ ಮುಂಡಗೋಡ ತಾಲೂಕಿನ ಕಾಳಗಿನಕೊಪ್ಪ ಗ್ರಾಮದ ಹತ್ತಿರ ಇರುವ ಪಿರ್ಯಾದಿಯ ಹೊಲದ ಪಕ್ಕದ ಕೆರೆಯಲ್ಲಿ ಎತ್ತುಗಳಿಗೆ ನೀರು ಕುಡಿಸಲು ಹೋದವನು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯಲ್ಲಿ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಹನುಮಂತಪ್ಪ ಸುಬ್ಬಾಯವರ್, ಪ್ರಾಯ-39 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಾಳಗನಕೊಪ್ಪ, ತಾ: ಮುಂಡಗೋಡ ರವರು ದಿನಾಂಕ: 27-08-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ಇತ್ತೀಚಿನ ನವೀಕರಣ​ : 28-08-2021 12:41 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080