ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 27-12-2021

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: ಹುಡುಗ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗ ಕುಮಾರ: ನಿಶಾಂತ ತಂದೆ ಪ್ರಭಾಕರನ್ ಪಿ, ಪ್ರಾಯ-12 ವರ್ಷ, ವೃತ್ತಿ-ವಿದ್ಯಾರ್ಥಿ ಸಾ|| ಸಿ-8, 8/3 ಮಲ್ಟಿ, ಮಲ್ಲಾಪುರ, ಕಾರವಾರ. ಈತನು ದಿನಾಂಕ: 26-12-2021 ರಂದು ಬೆಳಿಗ್ಗೆ 11-00 ಗಂಟೆಗೆ ತನ್ನ ಗೆಳೆಯರಾದ ಆಕಾಶ್ ಆರ್ ಹಾಗೂ ಭರತ್ ತಂದೆ ಪ್ರಕಾಶ ಬರೋಡೆ, ಇವರ ಜೊತೆಗೆ ಸಿ-4, ಸಿ-5, ಸಿ-6 ಮಲ್ಟಿ, ಮಲ್ಲಾಪುರ ವಸತಿ ಗೃಹದ ಹತ್ತಿರ ಹರಿದಿರುವ ಕಾಳಿ ನದಿಯಲ್ಲಿ ಈಜಾಡುತ್ತಿರುವಾಗ ಆಕಸ್ಮಾತ್ ಆಗಿ ನೀರಿನ ಅಲೆಯ ರಭಸಕ್ಕೆ ಸಿಲುಕಿ ಮುಳುಗಿ ಹೋಗಿ ಈವರೆಗೂ ಸಿಗದೇ ಕಾಣೆಯಾಗಿದ್ದು, ಸದ್ರಿ ಕಾಣೆಯಾದವನನ್ನು ಪತ್ತೆ ಮಾಡಿಕೊಡಲುವ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ: ಪ್ರಭಾಕರನ್ ಪಿ ತಂದೆ ಪರಮೇಶ್ವರಪ್ಪ, ಪ್ರಾಯ-50 ವರ್ಷ, ವೃತ್ತಿ-ಎನ್.ಪಿ.ಸಿ.ಐ.ಎಲ್ ನೌಕರ, ಸಾ|| ಸಿ-8, 8/3 ಮಲ್ಟಿ, ಮಲ್ಲಾಪುರ, ಕಾರವಾರ ರವರು ದಿನಾಂಕ: 27-12-2021 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 91/2021, ಕಲಂ: 143, 147, 148, 341, 323, 324, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಣೇಶ ಗಣಪತಿ ಮುಕ್ರಿ, 2]. ನಾಗೇಂದ್ರ ಗಣಪತಿ ಮಕ್ರಿ. 3]. ನಾಗಮ್ಮ ಗಂಡ ಗಣಪತಿ ಮುಕ್ರಿ, 4]. ಭವ್ಯಾ ಗಣಪತಿ ಮುಕ್ರಿ, 5]. ಉಷಾ ಗಣಪತಿ ಮುಕ್ರಿ. 6]. ಲಕ್ಷ್ಮೀ ಮುಕ್ರಿ, ಸಾ|| (ಎಲ್ಲರೂ) ಬೇಲೆಹಿತ್ತಲ್, ದಂಡೇಬಾಗ, ಗೋಕರ್ಣ, ತಾ: ಕುಮಟಾ. ಗೋಕರ್ಣದ ಬೇಲೆಹಿತ್ತಲ್ ದಂಡೇಭಾಗ ಗ್ರಾಮದ ಪಿರ್ಯಾದಿಯವರು ಮತ್ತು ಅವರ ಕುಟುಂಬದವರು ನಡೆದಾಡುವ ರಸ್ತೆಯ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ: 27-12-2021 ರಂದು ಸಾಯಂಕಾಲ 18-30 ಗಂಟೆಗೆ ಪಿರ್ಯಾದಿಯ ಮಗ ನಿತೀಶ ಈತನು ಸದರ ರಸ್ತೆಯ ಮೇಲಿಂದ ನಡೆದಾಡಿಕೊಂಡು ಬರುತ್ತಿದ್ದಾಗ ನಮೂದಿತ ಆಆರೋಪಿತರಲ್ಲಿ ಆರೋಪಿ 1 ನೇಯವನು ನಿತೀಶ ಈತನಿಗೆ ರಸ್ತೆಯಲ್ಲಿ ಅಡ್ಡಗಟ್ಟಿ ‘ಬೋಳಿ ಮಕ್ಕಳಾ, ನಿಮಗೆ ಎಷ್ಟು ಸಲ ಹೇಳಬೇಕು. ಈ ರಸ್ತೆಯಲ್ಲಿ ತಿರುಗಾಡಬಾರದೆಂದು’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಲ್ಲದೇ, ಕೈಯಿಂದ ಮುಖದ ಮೇಲೆ ಹೊಡೆದಿದ್ದಲ್ಲದೇ ಉಳಿದ ಆರೋಪಿತರು ಸಂಗನಮತ ಮಾಡಿಕೊಂಡು ಬಂದು ಪಿರ್ಯಾದಿಗೆ ಮತ್ತು ಪಿರ್ಯಾದಿಯ ಮಗನಾದ ನಿತೀಶ ಈತನಿಗೆ ಕೆಟ್ಟ ಕೆಟ್ಟ ಶಬ್ದಗಳಿಂದ ಬೈಯ್ದಿದ್ದಲ್ಲದೇ, ಆರೋಪಿ 1 ನೇಯವನು ಕಟ್ಟಿಗೆಯ ಸೊಟ್ಟೆಯನ್ನು ತೆಗೆದುಕೊಂಡು ಪಿರ್ಯಾದಿಯ ಮಗನಾದ ನಿತೀಶ ಈತನ ಎಡ ಕುತ್ತಿಗೆಯ ಹತ್ತಿರ ಹೊಡೆದು ಗಾಯನೋವು ಪಡಿಸಿದ್ದು, ಆಗ ಪಿರ್ಯಾದಿಯವರು ಜಗಳವನ್ನು ಬಿಡಿಸಲು ಹೋದಾಗ ಆರೋಪಿ 2 ನೇಯವನು ಚೀರೆ ಕಲ್ಲನ್ನು ಬೀಸಿ ಒಗೆದಿದ್ದು, ಅದು ಪಿರ್ಯಾದಿಯವರ ಮೂಗಿಗೆ ತಾಗಿ ರಕ್ತ ಬಂದಿದ್ದು, ಆಗ ಆರೋಪಿತರು ಪಿರ್ಯಾದಿ ಮತ್ತು ಪಿರ್ಯಾದಿಯ ಮಗನಿಗೆ ಉದ್ದೇಶಿಸಿ ‘ಮತ್ತೆ ನೀವು ಈ ರಸ್ತೆಯ ಮೇಲಿಂದ ನಡೆದಾಡಿದರೆ ನಿಮಗೆ ಕೊಲೆ ಮಾಡುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ನಾಗಮ್ಮ ಗೋವಿಂದ ಮುಕ್ರಿ, ಪ್ರಾಯ-40 ವರ್ಷ, ವೃತ್ತಿ-ಹೋಟೆಲಿನಲ್ಲಿ ಕೆಲಸ, ಸಾ|| ಬೇಲೆಹಿತ್ತಲ್, ದಂಡೇಬಾಗ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 27-12-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 226/2021, ಕಲಂ: 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾರಾಯಣ ದೇವಪ್ಪ ನಾಯ್ಕ, 2]. ಗುರುನಂದನ ನಾರಾಯಣ ನಾಯ್ಕ, 3]. ನಾರಾಜ ದೇವಪ್ಪ ನಾಯ್ಕ, ಸಾ|| (ಎಲ್ಲರೂ) ಹುಬ್ಬಣಗೇರಿ, ತಾ: ಕುಮಟಾ. ಈ ನಮೂದಿತ ಆರೋಪಿತರ ಮತ್ತು ಪಿರ್ಯಾದಿಯವರ ನಡುವೆ ‘ಸ್ಟೇ ಹೋಂ’ ಗೆ ಹೋಗುವ ದಾರಿಯ ವಿಚಾರವಾಗಿ ಈ ಹಿಂದಿನಿಂದಲೂ ಪಿರ್ಯಾದಿಯ ಮೇಲೆ ಜಗಳ ದ್ವೇಷದಿಂದ ಇದ್ದವರು, ದಿನಾಂಕ: 26-12-2021 ರಂದು 10-30 ಗಂಟೆಗೆ ಪಿರ್ಯಾದಿಯು ತಮ್ಮ ‘ಸ್ಟೇ ಹೋಂ’ ಗೆ ಹೋದಾಗ ಆರೋಪಿತರೆಲ್ಲರೂ ಸೇರಿಕೊಂಡು ಪಿರ್ಯಾದಿಯನ್ನು ಅಡ್ಡಗಟ್ಟಿ ತಡೆದು ‘ಈ ದಾರಿಯಲ್ಲಿ ನೀನು ತಿರುಗಾಡಬೇಡ, ಈ ದಾರಿಯಲ್ಲಿ ನಿಮ್ಮ ‘ಸ್ಟೇ ಹೋಂ’ ಗೆ ಬರುವ ಜನರು ತಿರುಗಾಡಲು ಬಿಡುವುದಿಲ್ಲ, ಬೋಳಿ ಮಗನೆ, ಸೂಳೆ ಮಗನೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದುದಾರರು ‘ನಾನು ನನ್ನ ಜಾಗದಲ್ಲಿ ದಾರಿ ಮಾಡಿಕೊಂಡಿರುತ್ತೇನೆ. ಅದನ್ನು ಕೇಳಲು ನೀವ್ಯಾರು?’ ಅಂತಾ ಕೇಳಿದಾಗ ಆರೋಪಿ 1 ನೇಯವನು ‘ನಾನು ಯಾರು ಅಂತಾ ಕೇಳುತ್ತಿಯಾ, ಬೋಳಿ ಮಗನೆ ನಿನನ್ನು ಭೂಮಿಯಲ್ಲಿ ಇಲ್ಲದಂತೆ ಮಾಡುತ್ತೇನೆ’ ಅಂತಾ ಪಿಕಾಸಿಯಿಂದ ಹೊಡೆಯಲು ಬಂದಾಗ ಪಿರ್ಯಾದುದಾರರು ತಪ್ಪಿಸಿಕೊಂಡು ಹೋಗಿದ್ದು, ಆರೋಪಿತರೆಲ್ಲರೂ ಪುನಃ ಸಂಜೆ 16-00 ಗಂಟೆಗೆ ಬಂದು ‘ಈ ಜಾಗದ ಬಗ್ಗೆ ಕೋರ್ಟಿಗೆ ಹೋಗಿ ದಾವೆ ಹಾಕುತ್ತಿಯಾ’ ಅಂತಾ ಪಿಕಾಸಿ, ದೊಣ್ಣೆಯನ್ನು ಹಿಡಿದುಕೊಂಡು ಬಂದು ಪಿರ್ಯಾದುದಾರರಿಗೆ ‘ಕಡಿದು ತುಂಡು ಮಾಡಿ ಸಮುದ್ರ ತೀರದ ಮೇಲೆ ಹೂತು ಹಾಕುತ್ತೇವೆ’ ಅಂತಾ ಜೀವ ಬೆದರಿಕೆಯನ್ನು ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಶಿವಾನಂದ ತಂದೆ ಪರಮೇಶ್ವರ ನಾಯ್ಕ, ಪ್ರಾಯ-62 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹುಬ್ಬಣಗೇರಿ, ತಾ: ಕುಮಟಾ ರವರು ದಿನಾಂಕ: 27-12-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 158/2021, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ ವಿಧೇಯಕ) ಕಾಯ್ದೆ-2021 ನೇದ್ದರ ವಿವರ...... ನಮೂದಿತ ಆರೋಪಿತ ಈಶ್ವರ ತಂದೆ ನಾಗಪ್ಪ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ವ್ಯಾಪಾರ, ಸಾ|| ಮಣ್ಕುಳಿ, ರಘುನಾಥ ರೋಡ್, ತಾ: ಭಟ್ಕಳ. ಈತನು ದಿನಾಂಕ: 27-12-2021 ರಂದು 13-30 ಗಂಟೆಯ ಸಮಯಕ್ಕೆ ಶಿರಾಲಿಯ ಚಂದನ ಹೋಟೆಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 70/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ದಾಳಿಯ ವೇಳೆ ಓ.ಸಿ ಮಟಕಾ ಜೂಗಾರಾಟದ ಸಾಮಗ್ರಿಗಳಾದ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 590/- ರೂಪಾಯಿಯೊಂದಿಗೆ ಆರೋಪಿತನು ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 27-12-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 239/2021, ಕಲಂ: 279, 283 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಂಕರ ವಿ. ತಂದೆ ಗುರುವಯ್ಯ, ಪ್ರಾಯ-38 ವರ್ಷ, ವೃತ್ತಿ-ಚಾಲಕ, ಸಾ|| ಅಮ್ಮಲೂರ್, ತಾ: ಗುರಾಮಪೊಂಡು, ಜಿ: ನಲಗೊಂಡ, ಆಂಧ್ರಪ್ರದೇಶ ರಾಜ್ಯ (ಲಾರಿ ನಂ: ಟಿ.ಎಸ್-05/ಯು.ಸಿ-2799 ನೇದರ ಚಾಲಕ). ಈತನು ದಿನಾಂಕ: 26-12-2021 ರಂದು ಸಮಯ ಸುಮಾರು 07-30 ಗಂಟೆಗೆ ಯಲ್ಲಾಪುರ ತಾಲೂಕಿನ ಅರಬೈಲ್ ಎಸ್ ಕ್ರಾಸಿನಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಲಾರಿ ನಂ: ಟಿ.ಎಸ್-05/ಯು.ಸಿ-2799 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು, ಲಾರಿಯ ಮೇಲಿನ ನಿಯಂತ್ರಣ ತಪ್ಪಿ ರಸ್ತೆ ಬಲ ಮಗ್ಗಲಾಗಿ ಪಲ್ಟಿ ಕೆಡವಿ ಅಪಘಾತ ಪಡಿಸಿದ್ದು, ಈ ಅಪಘಾತದಿಂದ ರಸ್ತೆಯ ಪಕ್ಕದ ಸೈಡಿನಲ್ಲಿ ಪಿರ್ಯಾದಿಯವರು ಅಂಕೋಲಾ ಕಡೆಗೆ ಮುಖಮಾಡಿ ನಿಲ್ಲಿಸಿಟ್ಟ ಮೋಟಾರ್ ಸೈಕಲ್ ನಂ: ಕೆ.ಎ-31/ಎಕ್ಸ್-3451 ನೇದನು ಜಖಂಗೊಳಿಸಿದ್ದಲ್ಲದೇ, ಲಾರಿಯನ್ನು ಪಲ್ಟಿ ಕೆಡವಿದ್ದರಿಂದ ಇತರೇ ವಾಹನಗಳ ಸಂಚಾರಕ್ಕೆ ಅಡೆತಡೆಯಾಗುವಂತೆ ಮಾಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅವಿನಾಶ ತಂದೆ ಹರೀಶ ಗೋಸಾವಿ, ಪ್ರಾಯ-25 ವರ್ಷ, ವೃತ್ತಿ-ಚಾಲಕ, ಸಾ|| ರವೀಂದ್ರ ನಗರ, ತಾ: ಯಲ್ಲಾಪುರ ರವರು ದಿನಾಂಕ: 27-12-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 240/2021, ಕಲಂ: 279, 283 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಶ್ರೀನಿವಾಸ ನಾಯ್ಕ, ಪ್ರಾಯ-46 ವರ್ಷ, ಸಾ|| ಬಾಳಗಿಮನೆ, ಉದ್ಯಮನಗರ, ತಾ: ಯಲ್ಲಾಪುರ (ಲಾರಿ ನಂ: ಕೆ.ಎ-23/ಎ-1215 ನೇದರ ಚಾಲಕ). ಈತನು ದಿನಾಂಕ: 26-12-2021 ರಂದು 02-50 ಗಂಟೆಗೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ತಿರುವಿನ ರಸ್ತೆಯಲ್ಲಿ ತನ್ನ ಬಾಬ್ತು ಲಾರಿ ನಂ: ಕೆ.ಎ-23/ಎ-1215 ನೇದನ್ನು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ, ಲಾರಿಯ ಮೇಲಿನ ನಿಯಂತ್ರಣ ತಪ್ಪಿ ಕ್ಲೀನರ್ ಬದಿಯಲ್ಲಿ ಓರೆಯಾಗುವಂತೆ ಮಾಡಿ ಅಪಘಾತ ಪಡಿಸಿ, ಲಾರಿಯಲ್ಲಿ ಲೋಡ್ ಇದ್ದ ಫೋಲ್ಸ್ ಗಳನ್ನು ಕೆಳಕ್ಕೆ ಬೀಳುವಂತೆ ಮಾಡಿ, ಇತರೇ ವಾಹನಗಳ ಸಂಚಾರಕ್ಕೆ ಅಡೆತಡೆಯಾಗುವಂತೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ದೀಪಕ ಕೃಷ್ಣಾ ನಾಯ್ಕ, ಎ.ಎಸ್.ಐ, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 27-12-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 81/2021, ಕಲಂ: 341, 504, 307 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕುಮಾರ ತಂದೆ ಶಿವಾಜಿ ಪೂಜಾರಿ, ಪ್ರಾಯ-25 ವರ್ಷ, ಸಾ|| ನವಗ್ರಾಮ, ಗಾಂವಠಾಣ, ತಾ: ದಾಂಡೇಲಿ. ಈತನು ಹಾಗೂ ಪಿರ್ಯಾದಿಯವರು ಅಕ್ಕಪಕ್ಕದ ಮನೆಯವರಾಗಿದ್ದು, ಆರೋಪಿತನು ತನ್ನ ಹಾಗೂ ಪಿರ್ಯಾದಿಯ ಮನೆಯ ಮಧ್ಯದ ಗೋಡೆಯ ಜಾಗದ ತಕರಾರಿನ ಕುರಿತು ಪಿರ್ಯಾದಿಯೊಂದಿಗೆ ಹಿಂದಿನಿಂದ ದ್ವೇಷದಿಂದ ಇದ್ದವನು, ದಿನಾಂಕ: 27-12-2021 ರಂದು ಸಂಜೆ 07-00 ಗಂಟೆಯ ಸುಮಾರಿಗೆ ಪಿರ್ಯಾದಿಯವರು ದಾಂಡೇಲಿ ತಾಲೂಕಿನ ಗಾಂವಠಾಣ ನವಗ್ರಾಮದ ತಮ್ಮ ಮನೆಯ ಹತ್ತಿರದ ಸಿಮೆಂಟ್ ರಸ್ತೆಯ ಮೇಲೆ ನಡೆದುಕೊಂಡು ತಮ್ಮ ಮನೆಗೆ ಹೋಗುತ್ತಿರುವಾಗ ಪಿರ್ಯಾದಿಯ ಹಿಂದಿನಿಂದ ನಡೆದುಕೊಂಡು ಬಂದು ಆರೋಪಿತನು ಪಿರ್ಯಾದಿಯನ್ನು ಅಡ್ಡಗಟ್ಟಿ ‘ಚಿನಾಲಿ ಮಗನೆ, ರಂಡಿ ಮಗನೆ’ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು, ನಿನಗೆ ಸಾಯಿಸಿಯೇ ಬಿಡುತ್ತೇನೆ’ ಅಂತಾ ತನ್ನ ಕೈಯಲ್ಲಿದ್ದ ಚಾಕುವಿನಿಂದ ಪಿರ್ಯಾದಿಯ ಎಡಬದಿಯ ಸೊಂಟದ ಹತ್ತಿರ ಹೊಟ್ಟೆಗೆ ಚುಚ್ಚಿ ರಕ್ತದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಗೌಸಖಾನ್ ತಂದೆ ಮೊಹ್ಮದಖಾನ್ ಪಟೇಲ್, ಪ್ರಾಯ-45 ವರ್ಷ, ವೃತ್ತಿ-ಸೆಂಟ್ರಿಂಗ್ ಕೆಲಸ, ಸಾ: ನವಗ್ರಾಮ, ಗಾಂವಠಾಣ, ತಾ: ದಾಂಡೇಲಿ ರವರು ದಿನಾಂಕ: 27-12-2021 ರಂದು 21-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 81/2021, ಕಲಂ: 427 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಸರಕಾರಿ ಮರಮುಟ್ಟುಗಳ ಸಂಗ್ರಹಾಲಯ ದಾಂಡೇಲಿ ಡಿಪೋದ ಆವರಣದಲ್ಲಿ ದಿನಾಂಕ: 13-11-2021 ರಂದು ದೇಶಪಾಂಡೆ ನಗರ, ಹಳೆ ರೈಲ್ವೇ ಸ್ಟೇಶನ್ ಹತ್ತಿರ ಹಾಗೂ ಕೆ.ಎಸ್.ಎಫ್.ಐ.ಸಿ ಸ್ವಾಮಿಲ್ ಹತ್ತಿರ ನಾಟಾ, ಅರಣ್ಯ ಸಂರಕ್ಷಣೆ ಹಾಗೂ ಅನಧೀಕೃತ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಅರಣ್ಯ ಇಲಾಖೆಯಿಂದ ನಿರ್ಮಿಸಿದ್ದ ಆರ್.ಸಿ.ಸಿ ತಡೆಗೋಡೆಯನ್ನು ದಿನಾಂಕ: 19-12-2021 ರಂದು ಮಧ್ಯಾಹ್ನ 03-00 ಗಂಟೆಯಿಂದ ಸಾಯಂಕಾಲ 05-00 ಗಂಟೆಯ ನಡುವೆ ನಮೂದಿತ ಆರೋಪಿತರು ಕೆಡವಿ ತೆರವುಗೊಳಿಸಿ, ಸರಕಾರಕ್ಕೆ ಅಂದಾಜು 60,000/- ರೂಪಾಯಿಗಳಷ್ಟು ನಷ್ಟ ಉಂಟು ಮಾಡಿದ ಬಗ್ಗೆ ಪಿರ್ಯಾದಿ ರಶ್ಮಿ ದೇಸಾಯಿ, ವಲಯ ಅರಣ್ಯಾಧಿಕಾರಿಗಳು, ದಾಂಡೇಲಿ ರವರು ದಿನಾಂಕ: 27-12-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 27-12-2021

at 00:00 hrs to 24:00 hrs

 

ಶಿರಸಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 10/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಶಿವಪ್ಪಾ ತಂದೆ ಓಂಕಾರಪ್ಪಾ ಬೋವಿವಡ್ಡರ, ಪ್ರಾಯ-70 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಾರುತಿ ದೇವಸ್ಥಾನ ಹತ್ತಿರ, ಗಣೇಶ ನಗರ, ತಾ: ಶಿರಸಿ. ಈತನು ದಿನಾಂಕ: 22-12-2021 ರಂದು ಮಧ್ಯಾಹ್ನ 16-00 ಗಂಟೆಯ ಸುಮಾರಿಗೆ ತನ್ನ ಮನೆಯಲ್ಲಿ ಮಲಗಿಕೊಂಡು ಬೀಡಿ ಸೇದಲು ಬೆಂಕಿ ಕಡ್ಡಿಯನ್ನು ಗೀರಿ ಬೀಡಿ ಹತ್ತಿದ ನಂತರ ಬೆಂಕಿ ಕಡ್ಡಿಯನ್ನು ಎಸೆಯುವಾಗ ಆಕಸ್ಮಾತ್ ಆಗಿ ಅದು ಅವನು ಹೊದ್ದುಕೊಂಡಿದ್ದ ಚಾದರಿಗೆ ತಗುಲಿ ಬೆಂಕಿ ಹೊತ್ತಿಕೊಂಡು ಅದರಿಂದ ಮೈ ಮೇಲೆ ಸುಟ್ಟ ಗಾಯಗಳಾದವನಿಗೆ ಚಿಕಿತ್ಸೆಯ ಕುರಿತು ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದವನು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 27-12-2021 ರಂದು 16-30 ಗಂಟೆಗೆ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬಸವರಾಜ ತಂದೆ ದೊಡ್ಡಬಸಪ್ಪಾ ಬೋವಿವಡ್ಡರ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ ಸಾ|| ಮಾರುತಿ ದೇವಸ್ಥಾನ ಹತ್ತಿರ, ಗಣೇಶ ನಗರ, ತಾ: ಶಿರಸಿ ರವರು ದಿನಾಂಕ: 27-12-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 29-12-2021 06:02 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080