ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 27-02-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 04/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುನೀಲ್ ಕುಮಾರ ಚವ್ಹಾಣ ತಂದೆ ವೀರಪಾಲ್ ಸಿಂಗ್, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ಅವೋಗಿಪುರ ಅಲಿಘಡ್, ಉತ್ತರ ಪ್ರದೇಶ-202132 (ಕಂಟೇನರ್ ಲಾರಿ ನಂ: ಆರ್.ಜೆ-10/ಜಿ.ಬಿ-3074 ನೇದರ ಚಾಲಕ). ದಿನಾಂಕ: 27-02-2021 ರಂದು ಬೆಳಗ್ಗೆ 07-55 ಗಂಟೆಯಲ್ಲಿ ಪಿರ್ಯಾದಿಯು ತನ್ನ ಮೋಟಾರ್ ಸೈಕಲ್ ನಂ: ಜಿ.ಎ-08/ಎ.ಪಿ-2639 ನೇದನ್ನು ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಕಾರವಾರದಿಂದ ಅಂಕೋಲಾ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಬಂದ ಕಂಟೇನರ್ ಲಾರಿ ನಂ: ಆರ್.ಜೆ-10/ಜಿ.ಬಿ-3074 ನೇದರ ಆರೋಪಿ ಚಾಲಕನು ತನ್ನ ಕಂಟೇನರ್ ಲಾರಿಯನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ಕಾರವಾರ ಬಿಣಗಾ ಘಟ್ಟದ ಡಿವೈಡರ್ ಹತ್ತಿರ ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಹೋಗುವ ಏಕಮುಖ ಸಂಚಾರ ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಪಿರ್ಯಾದಿಯವರ ಮೋಟಾರ್ ಸೈಕಲಿನ ಮುಂದಿನ ಭಾಗಕ್ಕೆ ತನ್ನ ಕಂಟೇನರ್ ಲಾರಿಯಿಂದ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಗೆ ಎಡಗಾಲಿನ ಮಂಡಿಯ ಕೆಳಗೆ ತೆರಚಿದ ಗಾಯ ಹಾಗೂ ಬಲಗಾಲಿನ ಮಂಡಿಯ ಕೆಳಗೆ ಒಳನೋವು ಒಳನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಡೇಲ್ ಏಡ್ಮಂಡ್ ಬ್ರಿಟೋ ತಂದೆ ಮಾರಿಯೋ ಬ್ರಿಟೋ, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| #103ಡಿ, ರಂಕಾ ಪ್ಲಾಜಾ-157, ವಿಲ್ಲರ್ ರೋಡ್, ಫ್ರೇಜರ್ ಟೌನ್, ಬೆಂಗಳೂರು ನಾರ್ಥ್ ರವರು ದಿನಾಂಕ: 27-02-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 39/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಆಕಾಶ ಜೆ. ಜೈನ್ ತಂದೆ ಎಸ್. ಎನ್. ಜಿನೇಂದ್ರಕುಮಾರ, ಪ್ರಾಯ-29 ವರ್ಷ, ವೃತ್ತಿ-ಐಟಿ ಯಲ್ಲಿ ಕೆಲಸ, ಸಾ|| ಮನೆ ನಂ: 141, 6 ನೇ ಮುಖ್ಯ ರಸ್ತೆ, ಎ.ಜಿ.ಬಿ ಲೇಔಟ್, ಬೆಂಗಳೂರು-90 (ಕಾರ್ ನಂ: ಕೆ.ಎ-04/ಎಮ್.ಎಸ್-8817 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 27-02-2021 ರಂದು ಬೆಳಗಿನ ಜಾವ 03-00 ಗಂಟೆಗೆ ತನ್ನ ಕಾರ್ ನಂ: ಕೆ.ಎ-04/ಎಮ್.ಎಸ್-8817 ನೇದನ್ನು ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಅಂಕೋಲಾ ತಾಲೂಕಿನ ಜಮಗೋಡ ಗ್ರಾಮದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯಲ್ಲಿ ತನ್ನ ಕಾರಿನ ಚಾಲನೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಅಪಘಾತ ಪಡಿಸಿ, ಕಾರಿನಲ್ಲಿದ್ದವರಿಗೆ ಮತ್ತು ತನಗೆ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪರೇಶ ಪಿ. ತಂದೆ ಪಚೇಶ್ ಎಚ್. ಡಿ, ಪ್ರಾಯ-26 ವರ್ಷ, ವೃತ್ತಿ-ಇನ್ಸೂರೆನ್ಸ್ ನಲ್ಲಿ ಕೆಲಸ, ಸಾ|| ಪಾರ್ಶ್ವನಾಥ ಬಿಲ್ಡಿಂಗ್, ಗಾಂಧಿಬಜಾರ, ಹಾಸನ ರವರು ದಿನಾಂಕ: 27-02-2021 ರಂದು 13-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 38/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ದಿನೇಶ ಕೃಷ್ಣ ಪಟಗಾರ, ಪ್ರಾಯ-30 ವರ್ಷ, ಸಾ|| ಹಣ್ಣೆಮಠ, ತಾ: ಕುಮಟಾ (ಮೋಟಾರ್ ಸೈಕಲ್ ನಂ: ಕೆ.ಎ-47/ಕೆ-5954 ನೇದರ ಸವಾರ), 2]. ಏಕನಾಥ ದುರ್ಗು ಅಂಬಿಗ, ಪ್ರಾಯ-30 ವರ್ಷ, ಸಾ|| ಹೊಂಡದ ಹಕ್ಕಲು, ಅಂತ್ರವಳ್ಳಿ, ತಾ: ಕುಮಟಾ (ಮೋಟಾರ್ ಸೈಕಲ್ ನಂ: ಕೆ.ಎ-31/ಇಎ-8672 ನೇದರ ಸವಾರ). ಈ ನಮೂದಿತ ಆರೋಪಿತರ ಪೈಕಿ ಆರೋಪಿ 1 ನೇಯವನು ದಿನಾಂಕ: 27-02-2021 ರಂದು 09-30 ಗಂಟೆಗೆ ಮೋಟಾರ್ ಸೈಕಲ್ ನಂ: ಕೆ.ಎ-47/ಕೆ-5954 ನೇದನ್ನು ಕುಮಟಾ ಕಡೆಯಿಂದ ಕತಗಾಲ ಕಡೆಗೆ ಹಾಗೂ ಆರೋಪಿ 2 ನೇಯವನು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಇಎ-8672 ನೇದನ್ನು ಅಂತ್ರವಳ್ಳಿ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎರಡು ಮೋಟಾರ್ ಸೈಕಲ್ ಸವಾರರು ರಾಜ್ಯ ಹೆದ್ದಾರಿ ಸಂಖ್ಯೆ-69 ರ ಮೇಲೆ ಅಂತ್ರವಳ್ಳಿಯ ಸಿಳ್ಳೆ ಊರಿನ ಹತ್ತಿರ ತಮ್ಮ ತಮ್ಮ ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸಲಾಗದೇ ಒಬ್ಬರಿಗೊಬ್ಬರೂ ಮುಖಾಮುಖಿಯಾಗಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಅಪಘಾತ ಪಡಿಸಿದ ಪರಿಣಾಮವಾಗಿ ಅಪಘಾತದ ರಭಸಕ್ಕೆ ಎರಡು ಮೋಟಾರ್ ಸೈಕಲಿನಲ್ಲಿದ್ದವರು ಮೋಟಾರ್ ಸೈಕಲ್ ಸಮೇತ ಡಾಂಬರ್ರಸ್ತೆಯ ಮೇಲೆ ಬಿದ್ದ ಪರಿಣಾಮವಾಗಿ ಆರೋಪಿ 1 ನೇಯವನ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತ ಉಮೇಶ ತಂದೆ ರಾಮಪ್ಪ ಪಟಗಾರ ಈತನಿಗೆ ಬಲಗೈಗೆ, ಎಡಗೈಗೆ, ಹಣೆಗೆ ಹಾಗೂ ಎಡಗಾಲಿನ ಮೂಳೆ ಮುರಿದು ಗಂಭೀರ ಗಾಯವಾಗಿರುವುದಲ್ಲದೇ, ಆರೋಪಿ 2 ನೇಯವನ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತ ಶಶಾಂಕ ತಂದೆ ಮಂಜುನಾಥ ಅಂಬಿಗ ಈತನ ತಲೆಗೆ, ಎರಡು ಕೈಗಳಿಗೆ ಗಾಯ, ಎಡಗಾಲಿನ ಹಾಗೂ ಎಡಗೈನ ಮೂಳೆ ಮುರಿದು ಗಂಭೀರ ಗಾಯವಾಗಿರುವುದಲ್ಲದೇ, ಎರಡು ಮೋಟಾರ್ ಸೈಕಲ್ ಸವಾರರಿಗೂ ಸಹ ತಲೆಗೆ, ಹಣೆಗೆ ಮತ್ತು ಕೈಕಾಲುಗಳಿಗೆ ಗಾಯವಾಗಿರುವುದಲ್ಲದೇ, ಎರಡು ಜನರ ಎಡಗಾಲಿನ ಮೂಳೆ ಮುರಿದು ಗಂಭೀರ ಗಾಯವಾಗಲು ಮತ್ತು ಎರಡು ಮೋಟಾರ್ ಸೈಕಲಗಳು ಜಖಂ ಆಗಲು ಆರೋಪಿ ಎರಡು ಮೋಟಾರ್ ಸೈಕಲ್ ಸವಾರರೇ ಕಾರಣರಾದ ಬಗ್ಗೆ ಪಿರ್ಯಾದಿ ಶ್ರೀ ಸತೀಶ ತಂದೆ ಅನಂತ ಅಂಬಿಗ, ಪ್ರಾಯ-29 ವರ್ಷ, ವೃತ್ತಿ-ದೇವಸ್ಥಾನದ ಅರ್ಚಕರು, ಸಾ|| ಹೊಂಡದ ಹಕ್ಕಲು, ಅಂತ್ರವಳ್ಳಿ, ತಾ: ಕುಮಟಾ ರವರು ದಿನಾಂಕ: 27-02-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 39/2021, ಕಲಂ: 409, 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಶಾಂತ ತಂದೆ ವಿನಾಯಕ ಪಟಗಾರ, ಎಮ್.ಎಫ್ ನಂ: 30547, ಪ್ರಾಯ-32 ವರ್ಷ, ವೃತ್ತಿ-ಮಾಜಿ ಶಾಖಾಧಿಕಾರಿ, ಮುತ್ತೂಟ್ ಫೈನಾನ್ಸ್, ಕುಮಟಾ, ಸಾ|| ಬರ್ಗಿ, ತಾ: ಕುಮಟಾ. ನಮೂದಿತ ಆರೋಪಿತನು ಕಳೆದ ದಿನಾಂಕ: 07-02-2018 ರಿಂದ 10-09-2020 ರವರೆಗೆ ಮುತ್ತೂಟ್ ಫೈನಾನ್ಸ್ ಕುಮಟಾ ಶಾಖೆಯಲ್ಲಿ ಶಾಖಾ ಪ್ರಬಂಧಕರಾಗಿ ಕರ್ತವ್ಯ ನಿರ್ವಹಿಸಿದ್ದು, ದಿನಾಂಕ: 07-12-2019 ರಂದು ಗಜಾನನ ಅನುಪ ನಾಯ್ಕ, ದಿನಾಂಕ: 03-01-2020 ರಂದು ಕೃಷ್ಣಮೂರ್ತಿ ಸೋಮನಾಥ ನಾಯ್ಕ, ದಿನಾಂಕ: 25-06-2020 ರಂದು ದಿನೇಶ ದುರ್ಗು ಹರಿಕಾಂತ, ದಿನಾಂಕ: 13-08-2020 ರಂದು ದಿನೇಶ ದುರ್ಗು ಹರಕಾಂತ, ಗಣೇಶ ಶ್ರೀಧರ ಶೇಟ್ ಹಾಗೂ ವಸಂತ ವಿನಯ ಪಟಗಾರ ಇವರುಗಳು ಗಿರವಿ ಇಟ್ಟ 246.9 ಗ್ರಾಂ ತೂಕದ 7,72,350/- ರೂಪಾಯಿ ಮೌಲ್ಯದ ಬಂಗಾರದ ಆಭರಣಗಳ ಪ್ಯಾಕೆಟ್ ಗಳನ್ನು ಕತ್ತರಿಸಿ ಮೂಲ ಬಂಗಾರದ ಆಭರಣಗಳನ್ನು ತೆಗೆದು ಅದರಲ್ಲಿ ನಕಲಿ ಆಭರಣಗಳನ್ನು ಇಟ್ಟು, ಮೂಲ ಬಂಗಾರದ ಆಭರಣಗಳನ್ನು ದುರುಪಯೋಗ ಪಡಿಸಿಕೊಂಡು, ಫೈನಾನ್ಸ್ ಗ್ರಾಹಕರಿಗೂ ಮತ್ತು ಕೆಲಸ ಮಾಡಿದ ಫೈನಾನ್ಸ್ ಗೂ ದ್ರೋಹ ಮತ್ತು ಮೋಸ ಮಾಡಿರುವ ಬಗ್ಗೆ ಪಿರ್ಯಾದಿ ಶ್ರೀ ಸ್ಯಾಮ್ಸನ್ ತಂದೆ ಡ್ಯಾನಿಯಲ್ ತಲಪಾಟಿ, ಎಮ್.ಎಫ್ ನಂ: 43513, ಪ್ರಾಯ-32 ವರ್ಷ, ವೃತ್ತಿ-ಎಚ್.ಆರ್ ಮ್ಯಾನೇಜರ್, ಮುತ್ತೂಟ್ ಫೈನಾನ್ಸ್, ರೀಜನಲ್ ಆಫೀಸ್, ಹುಬ್ಬಳ್ಳಿ, ಸಾ|| 92/95, ನ್ಯೂ ಕನ್ಯಾನಗರ, ಗದಗ ರೋಡ್, ಹುಬ್ಬಳ್ಳಿ ರವರು ದಿನಾಂಕ: 27-02-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಶ್ವನಾಥ ತಂದೆ ಮರ್ತು ನಾಯ್ಕ, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಗುಳ್ಳದಕೇರಿ, ಮಂಕಿ, ತಾ: ಹೊನ್ನಾವರ (ಬುಲೆಟ್ ಮೋಟಾರ್ ಸೈಕಲ್ ಚಾಸಿಸ್ ನಂ: ME3U3S5F2MA080221, ಇಂಜಿನ್ ನಂ: U3S5F1MA701689 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 27-2-2021 ರಂದು 10-15 ಗಂಟೆಯ ಸಮಯಕ್ಕೆ ಹೊನ್ನಾವರದ ಟೊಂಕಾ ಕಾಸರಕೋಡದಲ್ಲಿ ತಾನು ಚಲಾಯಿಸುತ್ತಿದ್ದ ಬುಲೆಟ್ ಮೋಟಾರ್ ಸೈಕಲ್ ಚಾಸಿಸ್ ನಂ: ME3U3S5F2MA080221, ಇಂಜಿನ್ ನಂ: U3S5F1MA701689 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಮಂಕಿ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಯತನದಿಂದ ಚಲಾಯಿಸಿಕೊಂಡು ಬಂದು ಹೆದ್ದಾರಿಯ ಬದಿಯಲ್ಲಿ ನಿಂತಿದ್ದ  ಶ್ರೀ ನಾರಾಯಣ ತಂದೆ ಶಂಭು ಗೌಡ, ಪ್ರಾಯ-48 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ಹಾವಳಿಮನೆ, ಹೊಸಪಟ್ಟಣ, ತಾ: ಹೊನ್ನಾವರ ಇವರಿಗೆ ಡಿಕ್ಕಿ ಪಡಿಸಿ, ತಲೆ ಹಾಗೂ ಬಲತೊಡೆಗೆ ಗಾಯ ಪಡಿಸಿದ್ದಲ್ಲದೇ, ತನಗೂ ಸಹ ಎರಡೂ ಕೈಗಳಿಗೆ ಹಾಗೂ ಗಲ್ಲಕ್ಕೆ ಮತ್ತು ಎಡಹುಬ್ಬಿನ ಹತ್ತಿರ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಸತೀಶ ತಂದೆ ಮಹಾಬ್ಲೇಶ್ವರ ಕೊಡಿಯಾ, ಪ್ರಾಯ-49 ವರ್ಷ, ವೃತ್ತಿ-ಕ್ಷೌರಿಕ, ಸಾ|| ಕಾಸರಕೋಡ, ಹಿರೇಮಠ, ತಾ: ಹೊನ್ನಾವರ ರವರು ದಿನಾಂಕ: 27-02-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 51/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ತರವಿಜ್ ತಂದೆ ಅಬ್ದುಲ್ ರೆಹಮಾನ್, ಪ್ರಾಯ-26 ವರ್ಷ, ಸಾ|| ಎಸ್.ಎಸ್ ರೋಡ್, ಹೆಜ್ಮಾಡಿ, ಉಡುಪಿ (ಕಾರ್ ನಂ: ಕೆ.ಎ-19/ಎಮ್.ಕೆ-3288 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 27-02-2021 ರಂದು 14-20 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊನ್ನಾವರದ ಶರವಾತಿ ಬ್ರಿಡ್ಜ್ ಮೇಲೆ ತನ್ನ ಬಾಬ್ತು ಕಾರ್ ನಂ: ಕೆ.ಎ-19/ಎಮ್.ಕೆ-3288 ನೇದನ್ನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೊನ್ನಾವರ ಕಡೆಯಿಂದ ಮಂಕಿ ಕಡೆಗೆ ಗಾಯಾಳು ನಾಗರಾಜ ತಂದೆ ಗಣಪಯ್ಯ ಹಳ್ಳೇರ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಳಲೆ, ಮಾದನಗೇರಿ, ತಾ: ಅಂಕೋಲಾ ಈತನು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-30/ಎಸ್-2949 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ನಾಗರಾಜ ತಂದೆ ಗಣಪಯ್ಯ ಹಳ್ಳೇರ ಈತನ ತಲೆಗೆ ಹಾಗೂ ಎಡಗಾಲಿಗೆ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಮುನ್ನಾ ಹಸ್ಲರ್, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕುಂಬಾರಕೇರಿ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 27-02-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 29/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 24-02-2021ರಂದು 01-00 ಗಂಟೆಗೆ ಪಿರ್ಯಾದಿಯವರು ಟ್ರೇನ್ ನಂ: 09557 (TEN JAM EXPRSS) ಕೋಚ್ ನಂ: D-04 ನೇದರಲ್ಲಿ ಪ್ರಯಾಣಿಸುತ್ತಿದ್ದಾಗ ಮಂಕಿಯ ರೈಲ್ವೇ ಸ್ಟೇಷನ್ ಹತ್ತಿರ ಸದ್ರಿಯವರ 15,000/- ರೂಪಾಯಿ ಮೌಲ್ಯದ ಸ್ಯಾಮ್ಸಂಗ್ ಕಂಪನಿಯ ಮೊಬೈಲನ್ನು ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ಪಿರ್ಯಾದಿ ಶ್ರೀ ಇಸಾಕ್ಕಿ ಮುತ್ತಯ್ಯ, ಸಾ|| 5ಬಿ-7, ನೇಹಾ ಮಜಿದಿಯಾ ಪಾಠಿರ್ï, ನಾಲಾಸುಪುರ, ವಸೈ ರೋಡ್, ಪೂರ್ವ ಮುಂಬೈ, ಮಹರಾಷ್ಟ್ರ-401200 ರವರು ದಿನಾಂಕ: 27-02-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ (ರೈಲ್ವೇ ಟಿ.ಟಿ.ಇ ಮಡಗಾಂ ರವಲ್ಲಿ ನೀಡಿದ ದೂರನ್ನು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಭಟ್ಕಳ ರವರ ಮುಖಾಂತರ ಮುಂದಿನ ಕ್ರಮಕ್ಕಾಗಿ ಸರಹದ್ದಿನ ಆಧಾರದ ಮೇಲೆ ಮಂಕಿ ಪೊಲೀಸ್ ಠಾಣೆಗೆ ಕಳುಹಿಸಿದ ದೂರನ್ನು ಸ್ವೀಕರಿಸಿ ದಾಖಲಿಸಿಕೊಂಡಿದ್ದು ಇರುತ್ತದೆ). 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 06/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿಠ್ಠಲ ತಂದೆ ಕಾಮಗೊಂಡ ಐಹೊಳೆ, ಸಾ|| ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ, ದಾಂಡೇಲಿ (ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-25/ಎಫ್-3549 ಚಾಲಕ). ನಮೂದಿತ ಆರೋಪಿತನು ದಿನಾಂಕ: 27-02-2021 ರಂದು ಬೆಳಿಗ್ಗೆ 08-50 ಗಂಟೆಯ ಸುಮಾರಿಗೆ ತಾನು ಚಾಲನೆ ಮಾಡುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-25/ಎಫ್-3549 ನೇದನ್ನು ದಾಂಡೇಲಿ ಕಡೆಯಿಂದ ಹಳಿಯಾಳ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಾಲನೆ ಮಾಡಿಕೊಂಡು ಹೋಗಿ ಹಳಿಯಾಳ ಕಡೆಯಿಂದ ದಾಂಡೇಲಿ ಕಡೆಗೆ ಚಾಲನೆ ಮಾಡಿಕೊಂಡು ಬರುತ್ತಿದ್ದ ಟಾಟಾ ಏಸ್ ವಾಹನ ನಂ: ಕೆ.ಎ-25/ಸಿ-5901 ನೇದಕ್ಕೆ ಕರ್ಕಾ ಚೆಕಪೋಸ್ಟ್ ಹತ್ತಿರ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಟಾಟಾ ಏಸ್ ಚಾಲಕನಾದ ಇರ್ಫಾನ್ ತಂದೆ ಮಹ್ಮದರಫಿ ಹುಲಮನಿ, ಸಾ|| ನೆಹರೂ ನಗರ, ಹಳಿಯಾಳ ರಸ್ತೆ, ಧಾರವಾಡ ಈತನ ಎಡಗೈ ಮುಂಗೈ ಹತ್ತಿರ ಮತ್ತು ಬಲಗಾಲ ಮೊಣಕಾಲಿಗೆ ಸಾದಾ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ನಾಮದೇವ ಒಟ್ಲೇಕರ, ಪ್ರಾಯ-32 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಸಾತ್ಮನಿ, ತಾ: ಹಳಿಯಾಳ ರವರು ದಿನಾಂಕ: 27-02-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 49/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಮದೇವ ತಂದೆ ಪುಂಡಲೀಕ ಕುಂಬಾರ, ಪ್ರಾಯ-20 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಳಗಿಕೊಪ್ಪ, ತಾ: ಹಳಿಯಾಳ (ಮೋಟಾರ್ ಸೈಕಲ ನಂ: ಕೆ.ಎ-65/ಎಚ್-7368 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 18-02-2021 ರಂದು ಬೆಳಿಗ್ಗೆ 08-00 ಗಂಟೆಗೆ ಹಳಿಯಾಳ ತಾಲೂಕಿನ ಮಲವಡಿ ಬಸ್ ನಿಲ್ದಾಣ ಹತ್ತಿರ ಹಳಿಯಾಳ-ಕಾಳಗಿನಕೊಪ್ಪ ಡಾಂಬರ್ ರಸ್ತೆಯಲ್ಲಿ ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-7368 ನೇದರ ಹಿಂಬದಿಯಲ್ಲಿ ಶ್ರೀಮತಿ ರೇಣುಕಾ ಕೃಷ್ಣ ಜಾಧವ ಇವರಿಗೆ ಕೂಡ್ರಿಸಿಕೊಂಡು ಕಾಳಗಿನಕೊಪ್ಪ ಕಡೆಯಿಂದ ಹಳಿಯಾಳ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದವನು, ಅದೇ ವೇಗದಲ್ಲಿ ರೋಡ್ ಹಂಪ್ಸ್ ದಾಟಿಸಿದ್ದರಿಂದ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತಿದ್ದ ರೇಣುಕಾ ಇವಳು ಪುಟಿದು ಡಾಂಬರ್ ರಸ್ತೆಯಲ್ಲಿ ಬಿದ್ದು ತಲೆಗೆ ಮತ್ತು ಕೈ ಕಾಲಿಗೆ ಪೆಟ್ಟಾಗಿದ್ದವರು, ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದವರು, ಉಪಚಾರ ಫಲಕಾರಿಯಾಗದೇ ದಿನಾಂಕ: 27-02-2021 ರಂದು ಬೆಳಗಿನ ಜಾವ 04-30 ಗಂಟೆಗೆ ಮೃತಪಟ್ಟಿರುತ್ತಾಳೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ಯಲ್ಲಪ್ಪ ರಂಗಣ್ಣವರ, ಪ್ರಾಯ-32 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಕಾಳಗಿನಕೊಪ್ಪ, ತಾ: ಹಳಿಯಾಳ ರವರು ದಿನಾಂಕ: 27-02-2021 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಶ್ರದ್ಧಾ ತಂದೆ ರಾಜಕುಮಾರ ಮಿರಾಶಿ, ಪ್ರಾಯ-19 ವರ್ಷ, ವೃತ್ತಿ-ಮನೆ ಕೆಲಸ, ಸಾ|| ತೇರಗಾಂವ ಗ್ರಾಮ, ತಾ: ಹಳಿಯಾಳ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 24-02-2021 ರಂದು ಮಧ್ಯಾಹ್ನ 12-30 ಗಂಟೆಗೆ ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ ತನ್ನ ಮನೆಯಿಂದ ತಾನು ತನ್ನ ಗೆಳತಿಯ ಮದುವೆಯ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಂದ ಹೋದವಳು, ವಾಪಸ್ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಅವಳನ್ನು ಹುಡುಕಿಕೊಡುವಂತೆ ಹಾಗೂ ಎಲ್ಲ ಕಡೆ ಹುಡುಕಿ ಬಂದು ದೂರು ನೀಡಲು ವಿಳಂಬವಾದ ಬಗ್ಗೆ ಪಿರ್ಯಾದಿ ಶ್ರೀ ರಾಜಕುಮಾರ ತಂದೆ ಪದ್ಮಣ್ಣ ಮಿರಾಶಿ, ಪ್ರಾಯ-48 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ತೇರಗಾಂವ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 27-02-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 27-02-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮಂಜುನಾಥ ತಂದೆ ಜಟ್ಟಿ ನಾಯ್ಕ, ಪ್ರಾಯ-65 ವರ್ಷ, ಸಾ|| ತೊಪ್ಪಲಕೇರಿ, ಕರ್ಕಿ ತಾ: ಹೊನ್ನಾವರ. ಪಿರ್ಯಾದಿಯ ಚಿಕ್ಕಪ್ಪನಾದ ಈತನು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದವನು, ದಿನಾಂಕ: 27-02-2021 ರಂದು ಬೆಳಗ್ಗೆ 06-00 ಗಂಟೆಗೆ ಅನಾರೋಗ್ಯದಿಂದ ಅಸ್ವಸ್ಥಗೊಂಡು ಬಿದ್ದವನಿಗೆ ಹೊನ್ನಾವರ ತಾಲೂಕಾ ಆಸ್ಪತ್ರೆಗೆ ಕರೆತಂದಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಸದರಿಯವನು ಮಾರ್ಗಮಧ್ಯದಲ್ಲಿಯೇ 06-30 ಗಂಟೆಯ ಪೂರ್ವದಲ್ಲಿ ಮೃತಪಟ್ಟ ಬಗ್ಗೆ ತಿಳಿಸಿದ್ದು. ಇದರ ಹೊರತು ತನ್ನ ಚಿಕ್ಕಪ್ಪನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ವಾಮನ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಚಾಲಕ, ಸಾ|| ತೊಪ್ಪಲಕೇರಿ, ಕರ್ಕಿ, ತಾ: ಹೊನ್ನಾವರ ರವರು ದಿನಾಂಕ: 27-02-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ಇತ್ತೀಚಿನ ನವೀಕರಣ​ : 01-03-2021 01:42 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080