ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 27-07-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2021, ಕಲಂ: 454, 457, 380, 511 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 26-07-2021 ರಂದು ಎಂದಿನಂತೆ ಪಿರ್ಯಾದಿಯು ತನ್ನ ದೈನಂದಿನ ಕರ್ತವ್ಯ ಮುಗಿಸಿ ಸಾಯಂಕಾಲ 17-00 ಗಂಟೆಗೆ ಹೋಗುವಾಗ ಬ್ಯಾಂಕಿನ ಎಲ್ಲಾ ಕಿಡಕಿ ಬಾಗಿಲುಗಳನ್ನು ಪರಿಶೀಲಿಸಿ ಬಂದ್ ಮಾಡಿ ಹೋಗಿ ಮನೆಯಲ್ಲಿರುವಾಗ ದಿನಾಂಕ: 27-07-2021 ರಂದು ಬ್ಯಾಂಕಿನಲ್ಲಿ ಅಟೆಂಡರ್ ಕೆಲಸಕ್ಕೆ ಬಂದ ರವೀಶ ರವರು 09-00 ಗಂಟೆಗೆ ಬ್ಯಾಂಕಿಗೆ ಬಂದು ಕ್ಲೀನ್ ಮಾಡಲು ಬ್ಯಾಂಕಿನ ಡೋರ್ ತೆಗೆದು ಕ್ಲೀನ್ ಮಾಡುತ್ತಿದ್ದಾಗ ಬ್ಯಾಂಕಿನ ಕಟ್ಟಡದ ಹೆಂಚು ತೆಗೆದಿರುವ ಬಗ್ಗೆ ಕಂಡು ಬಂದ ಬಗ್ಗೆ ವಿಷಯವನ್ನು ಪೋನ್ ಮಾಡಿ ನನಗೆ ತಿಳಿಸಿದಾಗ ನಾನು  ಕಾರವಾರದಿಂದ ಕೂಡಲೇ ಬ್ಯಾಂಕಿಗೆ ಬಂದು ನೋಡಿದಾಗ ಬ್ಯಾಂಕಿನ ಹಾಲ್ ನಲ್ಲಿ ಮೇಲೆ ಯಾರೋ ಹೆಂಚು ತೆಗೆದ ಬಗ್ಗೆ ಕಂಡು ಬರುತಿದ್ದು ಹಾಗೂ ಬ್ಯಾಂಕನ್ನು ಎಲ್ಲಾ ಕಡೆಗೆ ನೋಡಿದಾಗ ಸೇಫ್ಟಿ ಲಾಕರ್ ಅನ್ನು ಪರಿಶೀಲಿಸಿದಾಗ ಸುಸ್ಥಿತಿಯಲ್ಲಿತ್ತು. ಸೇಫ್ಟಿ ಲಾಕರ್ ನ ಹಿಂದಿನ ಬಾತ್ ರೂಮಿನ ಕಿಡಕಿಯ ಒಂದು ರಾಡ್ ಅನ್ನು ಹೊರಗಡೆ ಮೇಲ್ಗಡೆ ಬಗ್ಗಿಸಿದ ಬಗ್ಗೆ ಕಂಡು ಬರುತಿದ್ದು, ಹಾಗೂ ಬ್ಯಾಂಕಿನ ಹಣವನ್ನು ಸೇಫ್ಟಿ ಲಾಕರ್ ನಲ್ಲಿ ಇರಿಸಿದ್ದರಿಂದ ಹಣವಾಗಲಿ ಅಥವಾ ಸ್ವತ್ತಾಗಲಿ ಕಳ್ಳತನವಾಗಿದ್ದು ಇರುವುದಿಲ್ಲ. ಆದರೆ ದಿನಾಂಕ: 26-07-2021 ರ 17-00 ಗಂಟೆಯಿಂದ ದಿನಾಂಕ: 27-07-2021 ರಂದು 09-00 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತ ಯಾರೋ ಕಳ್ಳರು ಬ್ಯಾಂಕಿನ ಒಳಗಡೆ ಪ್ರವೇಶಿಸಿ, ಕಳ್ಳತನಕ್ಕೆ ಪ್ರಯತ್ನ ಪಟ್ಟಿದ್ದರಿಂದ ಸದರಿಯವರ ವಿರುದ್ಧ ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಂಜಿತಕುಮಾರ ವಿ. ಎಸ್. ತಂದೆ ಸುಕುಮಾರನ್, ಪ್ರಾಯ-37 ವರ್ಷ, ಸಾ|| ವ್ಯವಸ್ಥಾಪಕರು, ಕೆನರಾ ಬ್ಯಾಂಕ್ ಹಳಗಾ ಶಾಖೆ, ಕಾರವಾರ ರವರು ದಿನಾಂಕ: 27-07-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 197/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಘು ತಂದೆ ಬೀರಪ್ಪ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ರಿಕ್ಷಾ ಚಾಲಕ, ಸಾ|| ಶಶಿಹಿತ್ತಲ, ತಾ: ಕುಮಟಾ (ಆಟೋ ರಿಕ್ಷಾ ನಂ: ಕೆ.ಎ-47/ಎ-1525 ನೇದರ ಚಾಲಕ). ಈತನು ದಿನಾಂಕ: 26-7-2021 ರಂದು ರಾತ್ರಿ 21-30 ಗಂಟೆಯ ಸಮಯಕ್ಕೆ ಹೊನ್ನಾವರ ತಾಲೂಕಿನ ಚಂದಾವರದ ಚಂದಾವರ-ಸಂತೆಗುಳಿ ರಸ್ತೆಯಲ್ಲಿ ತಾನು ಚಲಾಯಿಸುತ್ತಿದ್ದ ಆಟೋ ರಿಕ್ಷಾ ನಂ: ಕೆ.ಎ-47/ಎ-1525 ನೇದನ್ನು ಚಂದಾವರ ಕಡೆಯಿಂದ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಸಂತೆಗುಳಿ ಕಡೆಗೆ ಚಲಾಯಿಸಿಕೊಂಡು ಹೋಗಿ ಜಿಬ್ರಾಹಳ್ಳ ಸೇತುವೆಯಿಂದ ಆಟೋ ರಿಕ್ಷಾವನ್ನು ಹಳ್ಳದ ನೀರಿನಲ್ಲಿ ಪಲ್ಟಿಗೊಳಿಸಿ ಅಪಘಾತ ಪಡಿಸಿ, ಆಟೋ ರಿಕ್ಷಾ ಪ್ರಯಾಣಿಕನಾದ ಶ್ರೀ ಅಬ್ದುಲ್ ರಶೀದ್ ಶೇಖ್ ತಂದೆ ಅಲಿಯಾರ್ ಶೇಖ್, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬತ್ತಿದೆವಾಸ, ಸಂತೆಗುಳಿ, ತಾ: ಕುಮಟಾ ಇವರಿಗೆ ಸ್ಥಳದಲ್ಲಿಯೇ ಮರಣವನ್ನನುಂಟು ಪಡಿಸಿದ್ದಲ್ಲದೇ, ಆರೋಪಿ ಆಟೋ ರಿಕ್ಷಾ ಚಾಲಕನು ತನಗೂ ಸಹ ದುಃಖಾಪತ್ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಜಮಾಲ್ ಸಾಬ್ ತಂದೆ ಹಸನ್ ಸಾಬ್, ಪ್ರಾಯ-42 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ಬೆಳಗಲಗದ್ದೆ, ಸಂತೆಗುಳಿ, ತಾ: ಕುಮಟಾ ರವರು ದಿನಾಂಕ: 27-07-2021 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 198/2021, ಕಲಂ: 279 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಬೊಲೆರೋ ಮಾದರಿಯ ವಾಹನದ ಚಾಲಕನಾಗಿದ್ದು, ಹೆಸರು ವಿಳಾಸ ತಿಳದು ಬಂದಿರುವುದಿಲ್ಲ. ಪಿರ್ಯಾದುದಾರರು ದಿನಾಂಕ: 26-07-2021 ರಂದು ರಾತ್ರಿ ಹೊನ್ನಾವರ ತಾಲೂಕಿನ ಗೇರುಸೊಪ್ಪ ಸಮೀಪದ ಸೂಳೆಮುರ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಕಬ್ಬಿಣದ ಲೋಡ್ ತುಂಬಿದ ಭಾರೀ ಗಾತ್ರದ ಲಾರಿಯ ಎಕ್ಸೆಲ್ ಕಟ್ ಆಗಿ ಪ್ರಪಾತಕ್ಕೆ ಬೀಳುವ ಸ್ಥಿತಿಯಲ್ಲಿ ರಸ್ತೆಗೆ ಅಡ್ಡವಾಗಿ ನಿಂತಿದ್ದು, ರಸ್ತೆ ಸಂಚಾರಕ್ಕೆ ಅಡಚಣೆಯಾಗಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ಪಿರ್ಯಾದಿಯವರು ಠಾಣಾ ಜೀಪ್ ನಂ: ಕೆ.ಎ-30/ಜಿ-0367 ನೇದರಲ್ಲಿ ಜೀಪ್ ಚಾಲಕರಾದ ಶ್ರೀ ಶಿವಾನಂದ ಚಿತ್ರಗಿ (ಸಿ.ಎಚ್.ಸಿ-1416) ಹಾಗೂ ಶ್ರೀ ಶಿವಾನಂದ ಮರಿತಮ್ಮಣ್ಣನವರ (ಸಿ.ಪಿ.ಸಿ-1068) ಇವರೊಂದಿಗೆ ಗೇರುಸೊಪ್ಪಕ್ಕೆ ಹೋಗಿ ವಾಹನಗಳ ಸಂಚಾರ ಸುವ್ಯವಸ್ಥೆ ಪಾಲನೆಯ ಕರ್ತವ್ಯ ನಿರ್ವಹಿಸಿ, ದಿನಾಂಕ: 27-07-2021 ರಂದು ಬೆಳಗಿನ ಜಾವ ವಾಪಸ್ ಜೀಪ್ ಮೇಲೆ ಬರುತ್ತಿದ್ದಾಗ ಬೆಳಿಗ್ಗೆ 04-00 ಗಂಟೆಯ ಸುಮಾರಿಗೆ ನಮ್ಮ ಜೀಪ್ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ನೇದರಲ್ಲಿ ಹೊಸಾಕುಳಿ ಗ್ರಾಮದ ಗುಡ್ಡೆಬಾಳ ಕ್ರಾಸ್ ಹತ್ತಿರ ತಲುಪಿದಾಗ ಎದುರಿನಿಂದ ಅಂದರೆ ಹೊನ್ನಾವರ ಕಡೆಯಿಂದ ಗೇರುಸೊಪ್ಪ ಕಡೆಗೆ ಬರುತ್ತಿದ್ದ ಬೊಲೆರೋ ಮಾದರಿಯ ವಾಹನದ ಆರೋಪಿ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ತನ್ನ ಬಲಬದಿಯ ರಸ್ತೆಗೆ ಬಂದು ಪೊಲೀಸ್ ಜೀಪಿಗೆ ಮುಖಾಮುಖಿಯಾಗಿ ಅಪಘಾತ ಪಡಿಸುವ ರೀತಿಯಲ್ಲಿ ಪೊಲೀಸ್ ಜೀಪಿನ ಎದುರಿಗೆ ಬಂದಾಗ ಪೊಲೀಸ್ ಜೀಪ್ ಚಾಲಕನು ಎಡಬದಿಗೆ ರಸ್ತೆಯ ಪಕ್ಕದಲ್ಲಿ ಪ್ರಪಾತ ಇರುವುದರಿಂದ ಹಾಗೂ ಎದುರಿನಿಂದ ಬರುತ್ತಿದ್ದ ಬೊಲೆರೋ ಮಾದರಿಯ ವಾಹನದ ಆರೋಪಿ ಚಾಲಕನು ಪೊಲೀಸ್ ಜೀಪಿಗೆ ಅಪಘಾತ ಪಡಿಸುವುದನ್ನು ತಪ್ಪಿಸುವ ಸಲುವಾಗಿ ಪೊಲೀಸ್ ಜೀಪಿನ ಚಾಲಕನು ಒಮ್ಮೇಲೆ ರಸ್ತೆಯ ಬಲಬದಿಗೆ ತೆಗೆದುಕೊಂಡಿದ್ದು, ಮಳೆಯಿಂದಾಗಿ ತೇವಾಂಶ ಇದ್ದುದರಿಂದ ವಾಹನ ನಿಯಂತ್ರಣಕ್ಕೆ ಸಿಗದೇ ಪೊಲೀಸ್ ಜೀಪ್ ರಸ್ತೆಯ ಬಲಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ತಾಗಿ ರಸ್ತೆ ಬಲಬದಿಯ ಸುಮಾರು 25 ಅಡಿ ಆಳದ ಪ್ರಪಾತಕ್ಕೆ ಬಿದ್ದು ಪೊಲೀಸ್ ಜೀಪ್ ಜಖಂಗೊಂಡಿದ್ದಲ್ಲದೇ, ಈ ಅಪಘಾತಕ್ಕೆ ಕಾರಣನಾದ ಬೊಲೆರೋ ಮಾದರಿಯ ವಾಹನ ಚಾಲಕನಾದ ನಮೂದಿತ ಆರೋಪಿತನು ಅಪಘಾತದ ನಂತರ ತನ್ನ ವಾಹನ ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಹಾಂತೇಶ ಯು. ನಾಯಕ್, ಪಿ.ಎಸ್.ಐ (ಕಾ&ಸು-2), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 27-07-2021 ರಂದು 06-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 67/2021, ಕಲಂ: ಹುಡುಗಿ ಕಾಣೆ  ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ನಯನಾ ತಂದೆ ನಾಗಪ್ಪ ನಾಯ್ಕ, ಪ್ರಾಯ-22 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕುಚ್ಚನಮನೆ, ದಿವಗೇರಿ, ಮಾವಳ್ಳಿ-02, ಮುರ್ಡೇಶ್ವರ, ತಾ: ಭಟ್ಕಳ. ಪಿರ್ಯಾದಿಯ ಮಗಳಾದ ಇವಳು ಈ ಹಿಂದೆ ಮುರ್ಡೇಶ್ವರ ದೇವಸ್ಥಾನದ ರಸ್ತೆಯ ಪಕ್ಕದಲ್ಲಿದ್ದ ಪ್ರಭು ಝೆರಾಕ್ಸ್ ಸೆಂಟರ್ ನಲ್ಲಿ ಸುಮಾರು 6 ತಿಂಗಳ ಕಾಲ ಕೆಲಸ ಮಾಡಿಕೊಂಡಿದ್ದು, ಕೊರೋನಾ ಲಾಕಡೌನ್ ಆಗಿರುವುದರಿಂದ ಕಳೆದ 3 ತಿಂಗಳಿನಿಂದ ಎಲ್ಲಿಯೂ ಕೆಲಸಕ್ಕೆ ಹೋಗದೆ, ಮನೆಯಲ್ಲಿಯೇ ಉಳಿದುಕೊಂಡಿದ್ದವಳು, ದಿನಾಂಕ: 26-07-2021 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 27-07-2021 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಮಲಗಿಕೊಂಡಿದ್ದವಳು, ಮನೆಯಲ್ಲಿ ಯಾರಿಗೂ ಹೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದರಿಯವಳನ್ನು ಎಲ್ಲಾ ಕಡೆ ಹುಡುಕಾಡಿ, ಸಂಬಂಧಿಕರಲ್ಲಿ ಫೋನ್ ಮೂಲಕ ವಿಚಾರಿಸಿ ಪತ್ತೆಯಾಗದೇ ಇರುವುದರಿಂದ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಲಲೀತಾ ಕೋಂ. ನಾಗಪ್ಪ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕುಚ್ಚನಮನೆ, ದಿವಗೇರಿ, ಮಾವಳ್ಳಿ-02, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 27-07-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 88/2021, ಕಲಂ: 381 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮುಕುಂದ ಮಡಿವಾಳ, ಸಾ|| ಬೇಡ್ಕಣಿ, ತಾ: ಸಿದ್ದಾಪುರ, 2]. ಚಂದ್ರು ಮಲ್ಲೇಶಪ್ಪ ತಿಟ್ಟೆನವರ, ಸಾ|| ಬಿಳಗಿ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ಇಂಡೇನ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡಿಕೊಂಡಿರುವ ಕೆಲಸಗಾರರಾಗಿದ್ದು, ಸದರಿಯವರು ಬಿಳಗಿಯಲ್ಲಿರುವ ಗ್ಯಾಸ್ ಗೋಡೌನಿನಿಂದ ತುಂಬಿದ ಸಿಲಿಂಡರಗಳನ್ನು ವಾಹನದಲ್ಲಿ ಹೇರಿಕೊಂಡು ಬಂದು ಸಿದ್ದಾಪುರ ಶಹರದ ಸಾಯಿನಗರದಲ್ಲಿರುವ ಇಂಡೇನ್ ಗ್ಯಾಸ್ ಏಜೆನ್ಸಿಯ ಕಚೇರಿಯ ಹತ್ತಿರ ಸಿಲಿಂಡರಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡುತ್ತಿರುತ್ತಾರೆ, ದಿನಾಂಕ: 26-07-2021 ರಂದು ಇಂಡೇನ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಆರೋಪಿತರಿಬ್ಬರೂ ಸಹ ಕೆಲಸಕ್ಕೆ ಬಂದಿರುವುದಿಲ್ಲ. ಅವರಿಬ್ಬರೂ ಸೇರಿಕೊಂಡು ದಿನಾಂಕ: 26-07-2021 ರಂದು ಬೆಳಿಗ್ಗೆ 10-00 ಗಂಟೆಯ ಸಮಯಕ್ಕೆ ಆರೋಪಿ 1 ನೇಯವನ ಮೋಟಾರ್ ಸೈಕಲ್ ಮೇಲೆ ಇಂಡೇನ್ ಗ್ಯಾಸ್ ಸಿಲಿಂಡರ್ ಒಂದನ್ನು ಇಟ್ಟುಕೊಂಡು ಬಿಳಗಿಯಿಂದ ಸಿದ್ದಾಪುರ ಕಡೆಗೆ ಹೋಗುತ್ತಿರುವುದನ್ನು ಪಿರ್ಯಾದಿಯವರು ನೋಡಿರುತ್ತಾರೆ. ಪಿರ್ಯಾದಿಯವರಿಗೆ ಅವರ ಮೇಲೆ ಸಂಶಯ ಬಂದು ಅವರ ಮೊಬೈಲಿಗೆ ಕರೆ ಮಾಡಿದ್ದು, ಅವರ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಪಿರ್ಯಾದಿಯವರು ಗ್ಯಾಸ್ ಏಜೆನ್ಸಿಗೆ ಬಂದು ರಜಿಸ್ಟರ್ ಚೆಕ್ ಮಾಡಲಾಗಿ ದಿನಾಂಕ: 25-06-2021 ರಿಂದ ದಿನಾಂಕ: 26-07-2021 ರವರೆಗಿನ ಒಂದು ತಿಂಗಳ ನಡುವಿನ ಅವಧಿಯಲ್ಲಿ ಇಂಡೇನ್ ಗ್ಯಾಸ್ ಕಂಪನಿಯ 18 ಖಾಲಿ ಸಿಲಿಂಡರಗಳು ಕಳ್ಳತನವಾಗಿರುವುದು ಕಂಡು ಬಂದಿರುತ್ತದೆ. ಇಂಡೇನ್ ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುವ ಕೆಲಸಗಾರರಾದ ಆರೋಪಿತರಿಬ್ಬರೂ ಸೇರಿಕೊಂಡು ದಿನಾಂಕ: 25-06-2021 ರಂದು ಬೆಳಿಗ್ಗೆ 10-00 ಗಂಟೆಯಿಂದ ದಿನಾಂಕ: 26-07-2021 ರಂದು ರಾತ್ರಿ 08-00 ಗಂಟೆಯವರೆಗೆ ನಮ್ಮ ಇಂಡೇನ್ ಗ್ಯಾಸ್ ಏಜೆನ್ಸಿಗೆ ಸಂಬಂಧಿಸಿದ ಕಳ್ಳತನವಾಗಿರುವ ಒಟ್ಟು 18 ಸಿಲಿಂಡರಗಳನ್ನು ಕಳ್ಳತನ ಮಾಡಿರುವ ಬಗ್ಗೆ ಸಂಶಯವಿರುತ್ತದೆ. ಕಳುವಾದ ಒಟ್ಟು 18 ಸಿಲಿಂಡರಗಳ ಒಟ್ಟು ಮೌಲ್ಯ 41,400/- ರೂಪಾಯಿ ಆಗುತ್ತದೆ. ಕಾರಣ ಕಳುವಾದ 18 ಇಂಡೇನ್ ಕಂಪನಿಯ ಖಾಲಿ ಗ್ಯಾಸ್ ಸಿಲೆಂಡರಗಳನ್ನು ಪತ್ತೆ ಹಚ್ಚಿ ಗ್ಯಾಸ್ ಸಿಲಿಂಡರಗಳನ್ನು ಕಳುವು ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಫಕೀರಪ್ಪ ತಂದೆ ತಿಪ್ಪಣ್ಣ ವಾಲ್ಮೀಕಿ, ಪ್ರಾಯ-43 ವರ್ಷ, ವೃತ್ತಿ-ವಾಲ್ಮಿಕಿ ಇಂಡೇನ್ ಗ್ಯಾಸ್ ಏಜೆನ್ಸಿ ಮಾಲೀಕರು, ಸಾ|| ಬಿಳಗಿ, ತಾ: ಸಿದ್ದಾಪುರ ರವರು ದಿನಾಂಕ: 27-07-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 27-07-2021

at 00:00 hrs to 24:00 hrs

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 18/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಅಕ್ಷತಾ @ ಅಂಜಲಿ ಕೋಂ. ಬಸವರಾಜ ಬಡಿಗೇರ, ಪ್ರಾಯ-22 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬೆಳವಟಿಗಿ, ತಾ: ಹಳಿಯಾಳ. ಪಿರ್ಯಾದಿಯವರ ಮಗಳಾದ ಇವಳಿಗೆ ದಿನಾಂಕ: 10-05-2021 ರಂದು ಹಳಿಯಾಳ ತಾಲೂಕಿನ ಬೆಳವಟಿಗಿ ಗ್ರಾಮದ ಬಸವರಾಜ ಬಡಿಗೇರ ಇವರೊಂದಿಗೆ ಮದುವೆ ಆಗಿದ್ದು ಇರುತ್ತದೆ. ಮತ್ತು ಸದರಿಯವಳು ಕಳೆದ 15 ದಿನಗಳ ಹಿಂದೆ ತನ್ನ ಗಂಡನ ಮನೆಯಾದ ಬೆಳವಟಿಗಿಯಿಂದ ಹಳಿಯಾಳ ತಾಲೂಕಿನ ತನ್ನ ತವರು ಮನೆಯಾದ ಯಡೋಗಾ ಗ್ರಾಮಕ್ಕೆ ಬಂದು ಉಳಿದುಕೊಂಡವಳು, ಯಾವುದೋ ವಿಷಯನ್ನು ಮನಸ್ಸಿಗೆ ಹಚ್ಚಿಕೊಂಡು, ಜೀವನದಲ್ಲಿ ಜಿಗುಪ್ಸೆಗೊಂಡವಳು, ದಿನಾಂಕ: 27-07-2021 ರಂದು ಬೆಳಗ್ಗೆ 09-00 ಗಂಟೆಯಿಂದ 10-00 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ತಾಲೂಕಿನ ಯಡೋಗಾ ಗ್ರಾಮದ ತನ್ನ ತವರು ಮನೆಯಲ್ಲಿ ಮನೆಯ ಅಟ್ಟದ ಮೇಲೆ ಕಟ್ಟಿಗೆಯ ಬೆಲಗಿಗೆ ವೇಲ್ ನಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ. ಇದರ ಹೊರತು ಮೃತಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ರುಕ್ಮಾ ಕೋಂ. ಕೃಷ್ಣಾ ಬಡಗಿ, ಪ್ರಾಯ-45 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಯಡೋಗಾ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 27-07-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 


 

ಇತ್ತೀಚಿನ ನವೀಕರಣ​ : 28-07-2021 01:13 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080