ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 27-06-2021

at 00:00 hrs to 24:00 hrs

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 76/2021, ಕಲಂ: 457, 380, 511 ಸಹಿತ 427 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 26-06-2021 ರಂದು ರಾತ್ರಿ 09-00 ಗಂಟೆಯಿಂದ ದಿನಾಂಕ:27-06-2021 ರಂದು ಬೆಳಗಿನ ಜಾವ 09-00 ಗಂಟೆಯ ನಡುವಿನ ಅವಧಿಯಲ್ಲಿ ಕಳುವು ಮಾಡುವ ಉದ್ದೇಶದಿಂದ ಭಟ್ಕಳದ ಕೊಟೇಶ್ವರ ಸ್ಟ್ರೀಟ್ ನಲ್ಲಿರುವ ಶ್ರೀ ದಂಡಿನದುರ್ಗಾ ದೇವಸ್ಥಾನದ ಹಿಂದಿನ ಬಾಗಿಲಿನ ಬೀಗವನ್ನು ಬಲವಾದ ವಸ್ತುವಿನಿಂದ ಒಡೆದು ದೇವಸ್ಥಾನದ ಒಳ ಹೊಕ್ಕು ದೇವಸ್ಥಾನಕ್ಕೆ ಅಳವಡಿಸಿದ ಸಿ.ಸಿ ಕ್ಯಾಮೆರಾವನ್ನು ಒಡೆದು ಹಾನಿ ಪಡಿಸಿ, ದೇವಸ್ಥಾನದ ಒಳಗಡೆ ಇದ್ದ ಕಾಣಿಕೆ ಡಬ್ಬಿಯಲ್ಲಿನ ಹಣವನ್ನು ಕಳುವು ಮಾಡಲು ಕಾಣಿಕೆ ಡಬ್ಬಿಯನ್ನು ಒಡೆಯಲು ಪ್ರಯತ್ನಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮೋಹನ ತಂದೆ ಭದ್ರಾ ಶಿರಾಲೇಕರ, ಪ್ರಾಯ-54 ವರ್ಷ, ವೃತ್ತಿ-ಚಪ್ಪಲಿ ಅಂಗಡಿ ಕೆಲಸ, ಸಾ|| ಹಿಂದೂ ಕಾಲೋನಿ, ತಾ: ಭಟ್ಕಳ ರವರು ದಿನಾಂಕ: 27-06-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 76/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜಿಯಾವರ್ ರೆಹಮಾನ್ ತಂದೆ ಯೂಸೂಫ್ ಪೊಥಕರ್, ಪ್ರಾಯ-30  ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ತೆಂಗಿನಗುಂಡಿ, ಹೆಬಳೆ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-6609 ನೇದರ ಸವಾರ). ಈತನು ದಿನಾಂಕ: 24-06-2021 ರಂದು 16-30 ಗಂಟೆಯ ಸುಮಾರಿಗೆ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ತೆಂಗಿನಗುಂಡಿ ಕ್ರಾಸ್ ಹತ್ತಿರ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-6609 ನೇದನ್ನು ಶಿರಾಲಿ ಕಡೆಯಿಂದ ಕುಂದಾಪುರದ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಪೂರ್ವ ಬದಿಯಲ್ಲಿ ರಸ್ತೆಯನ್ನು ದಾಟಲು ರಸ್ತೆಯ ಅಂಚಿನಲ್ಲಿ ನಿಂತುಕೊಂಡಿದ್ದ ಪಿರ್ಯಾದಿಯ ಅಳಿಯ: ಸೈಯದ್ ಇಬ್ರಾಹಿಮ್ ತಂದೆ ಸೈಯದ್ ಅಬ್ದುಲ್ ರೆಹಮಾನ್ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅವರ ಬಲಗಾಲಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಇಬ್ರಾಹಿಮ್ ತಂದೆ ಸೈಯದ್ ಅಬ್ದುಲ್ ರೆಹಮಾನ್, ಪ್ರಾಯ-38 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಮುಸ್ಬಾ ಹೌಸ್, ಖಾಜಿಯಾ ಸ್ಟ್ರೀಟ್, ತಾ: ಭಟ್ಕಳ, ಹಾಲಿ ಸಾ|| ಜಾಮಿಯಾ ಕಾಂಪ್ಲೆಕ್ಸ್, ಆಯಿಶಾ ಪ್ಲಾಜಾ ಹತ್ತಿರ, ತಾ: ಭಟ್ಕಳ ರವರು ದಿನಾಂಕ: 27-06-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 90/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ರಮೇಶ ತಂದೆ ಸೋಮಯ್ಯಾ ಗೊಂಡ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಟಗಾರಕೊಪ್ಪ, ಹಲ್ಲಂದಿ, ಮುರ್ಡೇಶ್ವರ, ತಾ: ಭಟ್ಕಳ, 2]. ಗಣಪತಿ ಕುಪ್ಪಾ ನಾಯ್ಕ, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಿರಾಲಿ, ತಾ: ಭಟ್ಕಳ, 3]. ರಮೇಶ ಮಂಜಪ್ಪ ನಾಯ್ಕ, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಂದ್ರಹಿತ್ತಲು, ಮುರ್ಡೇಶ್ವರ, ತಾ: ಭಟ್ಕಳ, 4]. ಉದಯ ಜಟ್ಟಾ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಂದ್ರಹಿತ್ತಲು, ಚರ್ಚ ಕ್ರಾಸ್, ಮುರ್ಡೇಶ್ವರ, ತಾ: ಭಟ್ಕಳ, 5]. ಅಬ್ದುಲ್ ಅಲಿಮ್ ತಂದೆ ಸಲಾವುದ್ದಿನ್ ಜಬಾಲಿ, ಪ್ರಾಯ-21 ವರ್ಷ, ವೃತ್ತಿ-ಬೆಂಗಳೂರಿನ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ, ಸಾ|| ಮುಗಳಿಹೊಂಡಾ, 3 ನೇ ಕ್ರಾಸ್, ತಾ: ಭಟ್ಕಳ, 6]. ರಮೇಶ ತಂದೆ ಮಾದೇವ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೊಣಾರ, ಗಾಳಿಕಟ್ಟೆ, ತಾ: ಭಟ್ಕಳ, 7]. ರಾಮಚಂದ್ರ ಮಾದೇವ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಾಳಿಕಟ್ಟೆ, ತಾ: ಭಟ್ಕಳ, 8]. ರಾಮಾ ಮಾಸ್ತಿ ಗೊಂಡ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಟಗಾರಕೊಪ್ಪ, ಹಲ್ಲಂದಿ, ಮುರ್ಡೇಶ್ವರ, ತಾ: ಭಟ್ಕಳ, 9]. ಇರ್ಷಾದ್ ತಂದೆ ಅಬ್ದುಲ್ ಭಾಷಾ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಯೋಜನಾ ನಗರ, ತಾ: ಬೈಂದೂರು, ಜಿ: ಉಡುಪಿ. ಈ ನಮೂದಿತ ಆರೋಪಿತರು ದಿನಾಂಕ: 27-06-2021 ರಂದು ಸಾಯಂಕಾಲ 17-30 ಗಂಟೆಗೆ ಭಟ್ಕಳ ತಾಲೂಕಿನ ಕೋಣಾರ ಗ್ರಾಮದ ಸಬ್ಬತ್ತಿ, ಲೊಕಟ್ಟೆಯಲ್ಲಿರುವ ಅರಣ್ಯ ಪ್ರದೇಶದಲ್ಲಿ ತಮ್ಮ ತಮ್ಮ ಸ್ವಂತ ಲಾಭಕ್ಕೋಸ್ಕರ ಕೋಳಿ ಹುಂಜಗಳ ಕಾಲುಗಳಿಗೆ ಕತ್ತಿ ಕಟ್ಟಿ ಕಾದಾಟಕ್ಕೆ ಬಿಟ್ಟು ಅದರ ಮೇಲೆ ಹಣವನ್ನು ಪಂಥ ಕಟ್ಟಿ ಜೂಗಾರಾಟ ಆಡುತ್ತಿದ್ದಾಗ ಒಟ್ಟು ನಗದು ಹಣ 4,200/- ರೂಪಾಯಿ, 3 ಕೋಳಿ ಹುಂಜಗಳು (ಅ||ಕಿ|| 1,200/- ರೂಪಾಯಿ), 3 ಕೋಳಿ ಕತ್ತಿಗಳು (ಅ||ಕಿ|| 60/- ರೂಪಾಯಿ) ಮತ್ತು 3 ದಾರ (ಅ||ಕಿ|| 00.00/- ರೂಪಾಯಿ). ಇವುಗಳೊಂದಿಗೆ ಒಟ್ಟು 09 ಜನ ಆರೋಪಿತರು ಸ್ಥಳದಲ್ಲಿ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 27-06-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ರಾಮವ್ವ ತಿಮ್ಮಣ್ಣ ಸವಣೂರ, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಾರುತಿ ಗಲ್ಲಿ, ಕೆ.ಇ.ಬಿ, ಶಿರಸಿ, ಹಾಲಿ ಸಾ|| ವಡ್ಡರ ಓಣಿ, ಗಣೇಶ ನಗರ, ತಾ: ಶಿರಸಿ. ಪಿರ್ಯಾದಿಯ ಗಂಡನ ತಂಗಿಯಾದ ಇವಳು ಮೂಕಿಯಾಗಿರುತ್ತಾಳೆ. ಇವಳು ಪಿರ್ಯಾದಿಯ ಕುಟುಂಬಸ್ತರೊಂದಿಗೆ ವಾಸವಾಗಿದ್ದವಳು, ದಿನಾಂಕ: 24-06-2021 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ತಾನು ವಾಸವಿದ್ದ ಗಣೇಶನಗರದ ಪಿರ್ಯಾದಿಯ ಮನೆಯಿಂದ ಹೇಳದೇ ಹೋದವಳು, ರಾತ್ರಿಯಾದರೂ ಮನೆಗೆ ಬಂದಿರುವುದಿಲ್ಲ. ಅವಳು ಎಲ್ಲಿಯೋ ಕೆಲಸಕ್ಕೆ ಹೋಗಿ ಅಲ್ಲಿಯೇ ಉಳಿದುಕೊಂಡಿರಬಹುದು ಅಂತಾ ಭಾವಿಸಿ ಸುಮ್ಮನಿದ್ದು, ದಿನಾಂಕ: 25-06-2021 ರಂದು ಸಹ ಮನೆಗೆ ಬಾರದೇ ಇದ್ದುದರಿಂದ, ಪಿರ್ಯಾದಿ ಮತ್ತು ಪಿರ್ಯಾದಿಯ ಮನೆಯ ಜನರು ಸಂಬಂಧಿಕರು, ಪರಿಚಯದವರ ಮನೆಗಳಿಗೆ ಮತ್ತು ಅವಳು ಕೆಲಸಕ್ಕೆ ಹೋಗುತ್ತಿದ್ದ ಕಡೆಗಳಲ್ಲಿ ವಿಚಾರಿಸಿದರಲ್ಲಿ ಈವರೆಗೆ ಪತ್ತೆಯಾಗಿರುವುದಿಲ್ಲ. ಕಾರಣ ಕಾಣೆಯಾದ ತನ್ನ ಸಂಬಂಧಿಯಾದ ಶ್ರೀಮತಿ ರಾಮವ್ವ ತಿಮ್ಮಣ್ಣ ಸವಣೂರ ಇವಳನ್ನು ಈವರೆಗೆ ಹುಡುಕಿ ಪತ್ತೆಯಾಗದೇ ಇರುತ್ತಿದ್ದರಿಂದ ಕಾಣೆಯಾದವಳನ್ನು ಹುಡುಕಿ ಕೊಡಬೇಕೆಂದು ವಿನಂತಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀಮತಿ ಶಾಂತವ್ವ ಕೋಂ. ಹನುಮಂತ ಶಿಗ್ಗಾಂವ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ವಡ್ಡರ ಓಣಿ, ಗಣೇಶ ನಗರ, ತಾ: ಶಿರಸಿ ರವರು ದಿನಾಂಕ: 27-06-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 62/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಸುನೀತಾ ಕೋಂ. ಕೃಷ್ಣಮೂರ್ತಿ ವಡ್ಡರ, ಪ್ರಾಯ-37 ವರ್ಷ, ವೃತ್ತಿ-ಗೃಹಿಣಿ, ಸಾ|| ಮಾರುತಿ ನಗರ, ದಾಂಡೇಲಿ. ಪಿರ್ಯಾದುದಾರರ ಹೆಂಡತಿಯಾದ ಇವಳು ದಿನಾಂಕ: 26-06-2021 ರಂದು ಬೆಳಿಗ್ಗೆ 10-00 ಗಂಟೆಗೆ ಇ.ಎಸ್.ಐ ಆಸ್ಪತ್ರೆಯ ಕ್ವಾರ್ಟರ್ಸ್ ನಲ್ಲಿರುವ ಪಿರ್ಯಾದಿಯ ತಂಗಿಯ ಮನೆಯಿಂದ ಮಾರ್ಕೆಟಿಗೆ ಹೋಗಿ ಅಲ್ಲಿಂದ ಮಾರುತಿ ನಗರದಲ್ಲಿರುವ ನಮ್ಮ ಮನೆಗೆ ಹೋಗುತ್ತೇನೆ ಅಂತಾ ಹೇಳಿ ಹೋದವಳು, ಮಾರುತಿ ನಗರದಲ್ಲಿರುವ ಪಿರ್ಯಾದಿಯವರ ಮನೆಗೂ ಹೋಗದೇ, ಪಿರ್ಯಾದಿಯವರ ತಂಗಿಯ ಮನೆಗೂ ಬಾರದೇ, ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ಪಿರ್ಯಾದಿಯ ಹೆಂಡತಿಯನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣಮೂರ್ತಿ ತಂದೆ ಕರಿಯಪ್ಪ ವಡ್ಡರ ಪ್ರಾಯ-38 ವರ್ಷ, ವೃತ್ತಿ-ಡಬ್ಲ್ಯೂ.ಸಿ.ಪಿ.ಎಮ್ ನಲ್ಲಿ ಕೆಲಸ, ಸಾ|| ಮಾರುತಿ ನಗರ, ದಾಂಡೇಲಿ ರವರು ದಿನಾಂಕ: 27-06-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 77/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ನಾಗೇಶ ತಂದೆ ಗಣಪತಿ ಕೊಡಿಯಾ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕರ್ಕಿಹಕ್ಕಲು, ಮಣಿಗಾರ ಗ್ರಾಮ, ತಾ: ಸಿದ್ದಾಪುರ. ಈತನು ದಿನಾಂಕ: 27-06-2021 ರಂದು 19-30 ಗಂಟೆಗೆ ಸಿದ್ದಾಪುರ ತಾಲೂಕಿನ ಕರ್ಕಿಹಕ್ಕಲು ಊರಿನಲ್ಲಿರುವ ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). HAYWARDS CHEERS WHISKY, 90 ML ಅಂತಾ ಬರೆದ ಮದ್ಯ ತುಂಬಿದ 4 ಟೆಟ್ರಾ ಪ್ಯಾಕೆಟ್ ಗಳು, 2). HAYWARDS CHEERS WHISKY, 90 ML ಅಂತಾ ಬರೆದ ಖಾಲಿ 2 ಮದ್ಯದ ಟೆಟ್ರಾ ಪ್ಯಾಕೆಟ್ ಗಳು, 3). 2 ಪ್ಲಾಸ್ಟಿಕ್ ಗ್ಲಾಸುಗಳು. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 27-06-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 27-06-2021

at 00:00 hrs to 24:00 hrs

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 16/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಜಟ್ಟಿ ತಂದೆ ನಾರಾಯಣ ಮೊಗೇರ, ಪ್ರಾಯ-61 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕನ್ನಿಮನೆ, ಕಿಸಗಾರಮಕ್ಕಿ, ಮಾವಳ್ಳಿ-01, ಮುರ್ಡೇಶ್ವರ, ತಾ: ಭಟ್ಕಳ. ಪಿರ್ಯಾದಿಯ ತಂದೆಯಾದ ಇವರು ಹಾಗೂ ಪಿರ್ಯಾದಿಯವರು ಸೇರಿಕೊಂಡು ದಿನಾಂಕ: 27-06-2021 ರಂದು ಮಧ್ಯಾಹ್ನ 03-30 ಗಂಟೆಗೆ ತಮ್ಮ ಮನೆಯಿಂದ ಮೀನುಗಾರಿಕೆಗೆ ತೂದಳ್ಳಿ ಅರಬ್ಬೀ ಸಮುದ್ರದ ದಡಕ್ಕೆ ಹೋಗಿ ಸಮುದ್ರದ ದಡದಲ್ಲಿ ಮೀನು ಬಲೆಯನ್ನು ಬಿಡುವಾಗ ಸುಮಾರು ಸಾಯಂಕಾಲ 05-45 ಗಂಟೆಯಿಂದ 06-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ತಂದೆಗೆ ದಿಢೀರನೆ ಎದೆನೋವು ಬಂದಂತಾಗಿ ಸಮುದ್ರದ ದಡದಲ್ಲಿ ಕುಸಿದು ಬಿದ್ದರು. ಪಿರ್ಯಾದಿಯವರು ತಂದೆಯವರಿಗೆ ನೀರು ಕುಡಿಸಲು ಪ್ರಯತ್ನಿಸಿದರೂ ಸಹ ಆರೋಗ್ಯದಲ್ಲಿ ಚೇತರಿಕೆ ಕಂಡುಬಾರದಿದ್ದರಿಂದ ಸ್ವಲ್ಪ ಹೊತ್ತಿನಲ್ಲಿ ಪಿರ್ಯಾದಿಯವರ ತಂದೆಯವರಿಗೆ ಮುರ್ಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟ ಬಗ್ಗೆ ತಿಳಿಸಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಜಟ್ಟಿ ಮೊಗೇರ, ಪ್ರಾಯ-33 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕನ್ನಿಮನೆ, ಕಿಸಗಾರಮಕ್ಕಿ, ಮಾವಳ್ಳಿ-01, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 27-06-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಜ್ಯೋತಿ ಕೋಂ. ಚೆನ್ನವೀರ ಗಾಣಿಗೇರ, ಪ್ರಾಯ-34 ವರ್ಷ, ವೃತ್ತಿ-ಗೃಹಿಣಿ, ಸಾ|| ಕೆ.ಎಚ್.ಬಿ ಕಾಲೋನಿ, ತಾ: ಶಿರಸಿ. ಪಿರ್ಯಾದಿಯವರ ಮಗಳಾದ ಇವಳಿಗೆ ಸಿಜೇರಿಯನ್ ಮೂಲಕ ಎರಡು ಹೆರಿಗೆಯಾಗಿದ್ದು, ಅದರಿಂದ ಕಳೆದ ಮೂರು ವರ್ಷಗಳಿಂದ ಹೊಟ್ಟೆನೋವು ಅಂತಾ ಬಳಲುತ್ತಿದ್ದವಳಿಗೆ ಮಂಗಳೂರಿನ ಕೆ.ಎಸ್ ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಹೊಟ್ಟೆನೋವು ಕಡಿಮೆಯಾಗದೇ ಇರುತ್ತಿದ್ದರಿಂದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 27-06-2021 ರಂದು ಬೆಳಿಗ್ಗೆ 06-00 ಗಂಟೆಯಿಂದ 06-30 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿಯ ಕೆ.ಎಚ್.ಬಿ ಕಾಲೋನಿಯ ತನ್ನ ವಾಸದ ಮನೆಯ ಬೆಡ್ ರೂಮಿನ ಸೀಲಿಂಗ್ ಫ್ಯಾನಿಗೆ ಸೀರೆಯಿಂದ  ನೇಣು ಹಾಕಿಕೊಂಡು ತೀವೃ ಅಸ್ವಸ್ಥಳಾದವಳಿಗೆ ಚಿಕಿತ್ಸೆಯ ಕುರಿತು ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಪರಿಶೀಲಿಸಿದ ವೈದ್ಯರು ಬೆಳಿಗ್ಗೆ 07-25 ಗಂಟೆಗೆ ಮೃತಪಟ್ಟ ಬಗ್ಗೆ ತಿಳಿಸಿದ್ದು, ಇದರ ಹೊರತು ಮೃತ ತನ್ನ ಮಗಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಪ್ರೇಮಾ ಕೋಂ. ಕಾಳಪ್ಪ ಬಡಿಗೇರ, ಪ್ರಾಯ-57 ವರ್ಷ, ವೃತ್ತಿ-ಶಿರಸಿ ಕೆ.ಇ.ಬಿ ಯಲ್ಲಿ ಜ್ಯೂನಿಯರ್ ಅಸಿಸ್ಟೆಂಟ್, ಸಾ|| ಅಶೋಕ ಕುಮಾರ ಆಸ್ಪತ್ರೆಯ ಹತ್ತಿರ, ಮರಾಠಿಕೊಪ್ಪ, ತಾ: ಶಿರಸಿ ರವರು ದಿನಾಂಕ: 27-06-2021 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ನಿಂಗಪ್ಪ ತಂದೆ ಕೆರಿಯಾ ನಾಯ್ಕ, ಪ್ರಾಯ-67 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮನೆ ನಂ: 2, ಬಂಕನಾಳ, ತಾ: ಶಿರಸಿ. ಪಿರ್ಯಾದಿಯ ತಂದೆಯಾದ ಈತನು ತನ್ನ ಮಗಳಾದ ಸುನೀತಾ ಇವಳಿಗೆ ಶಿವಮೊಗ್ಗ ಜಿಲ್ಲೆಯ ಸೊರಬಾ ತಾಲೂಕಿನ ಚಿತ್ರಟ್ಟೆ ಗ್ರಾಮದ ವಿಜಯಕುಮಾರ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, 2 ಮಕ್ಕಳಿರುತ್ತಾರೆ. ಅಳಿಯ: ವಿಜಯಕುಮಾರ ಈತನು ಕಳೆದ 1 ತಿಂಗಳ ಹಿಂದೆ ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿರುತ್ತಾನೆ. ಮೃತ ನಿಂಗಪ್ಪ ಈತನು ಈ ಮೊದಲಿನಿಂದಲೂ ಸರಾಯಿ ಕುಡಿಯುವ ಚಟ ಹೊಂದಿದವನು, ಅಳಿಯನ ಸಾವಿನಿಂದ ಹಾಗೂ ಮಗಳ ಮುಂದಿನ ಜೀವನದ ಬಗ್ಗೆ ಮಾನಸಿಕವಾಗಿ ನೊಂದು ವಿಪರೀತ ಸರಾಯಿ ಕುಡಿಯುವ ಚಟ ಬೆಳೆಸಿಕೊಂಡು ಬಂದಿದ್ದನು. ಹೀಗಿದ್ದು, ದಿನಾಂಕ: 24-06-2021 ರಂದು ರಾತ್ರಿ 22-30 ಗಂಟೆಗೆ ಮನೆಯ ಜನರು ಊಟ ಮಾಡಿ ಮಲಗುವ ತಯಾರಿಯಲ್ಲಿದ್ದಾಗ ಮೃತನು ಕಟ್ಟಿಗೆಯ ಮನೆಯಲ್ಲಿ ಜೋರಾಗಿ ಕೂಗಾಡುವ ಶಬ್ದ ಕೇಳಿ ಮನೆಯ ಜನರು ಓಡಿ ಹೋಗಿ ನೋಡಿದಾಗ ಸದರಿಯವನ ಬಾಯಿಂದ ಕಳೆನಾಶಕದ ಘಾಟು ವಾಸನೆ ಬರುತ್ತಿತ್ತು. ಕೂಡಲೇ ಚಿಕಿತ್ಸೆಯ ಕುರಿತು ಶಿರಸಿಯ ಮಾರಿಕಾಂಬಾ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಉಪಚರಿಸಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡಿದ್ದು, ಚಿಕಿತ್ಸೆಯಲ್ಲಿರುವಾಗ ಮೃತನು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 26-06-2021 ರಂದು 22-52 ಗಂಟೆಗೆ ಮೃತಪಟ್ಟಿದ್ದು, ಮೃತನು ತನ್ನ ಅಳಿಯನ ಸಾವಿನಿಂದ ಹಾಗೂ ಮಗಳ ಮುಂದಿನ ಜೀವನದ ವಿಷಯದಲ್ಲಿ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಕಳೆನಾಶಕ ಔಷಧ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಯೇ ಹೊರತು ಮೃತನ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ನಿಂಗಪ್ಪ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮನೆ ನಂ: 2, ಬಂಕನಾಳ, ತಾ: ಶಿರಸಿ ರವರು ದಿನಾಂಕ: 27-06-2021 ರಂದು 01-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 10/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಲೋಕೇಶ ತಂದೆ ಮಾಸ್ತಪ್ಪ ಮಾದರ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಾದರಕೇರಿ, ಬನವಾಸಿ, ತಾ: ಶಿರಸಿ. ಪಿರ್ಯಾದಿಯ ತಂದೆಯಾದ ಈತನು ಕಳೆದ 6 ತಿಂಗಳಿನಿಂದ ಮಾನಸಿಕ ಖಾಯಿಲೆಯಿಂದ ಬಟ್ಟೆ-ಬರೆ ಧರಿಸದೇ ಅಲ್ಲಲ್ಲಿ ಅಡ್ಡಾಡುತ್ತಿದ್ದವನು, ಕಳೆದ ದಿನಾಂಕ: 13-06-2021  ರಂದು 12-30 ಗಂಟೆಯಿಂದ ದಿನಾಂಕ: 27-06-2021 ರಂದು 14-00 ಗಂಟೆಯ ನಡುವಿನ ಅವಧಿಯಲ್ಲಿ ಭಾಶಿ-ಮುಗವಳ್ಳಿ ರಸ್ತೆಯಲ್ಲಿ ಹೋಗಿ ಭಾಶಿ ಗ್ರಾಮದಲ್ಲಿ ರಸ್ತೆ ಬದಿಯ ಆಳವಾದ ಗಟಾರದ ಬಳಿ ಮೂತ್ರ ವಿಸರ್ಜನೆಗಾಗಿ ಅಥವಾ ಮಲ ವಿಸರ್ಜನೆಗಾಗಿ ಹೋದವನು, ಆಕಸ್ಮಿಕವಾಗಿ ರಸ್ತೆ ಬದಿಯ ಆಳವಾದ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದು, ಮೃತನ ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದು, ಮೃತನು ಧರಿಸಿದ್ದ ಟೀ-ಶರ್ಟ್ ಮತ್ತು ಸೊಂಟದಲ್ಲಿರುವ ದಾರ ಇವುಗಳಿಂದ ಮೃತನ ಕಡೆಯವರು ಗುರುತಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಶಶಿಕಲಾ @ ರೇಣವ್ವ ಕೋಂ. ಸೋಮಣ್ಣ ಹರಿಜನ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಾಂವಸಗಿ, ತಾ: ಹಾನಗಲ್, ಜಿ: ಹಾವೇರಿ ರವರು ದಿನಾಂಕ: 27-06-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

ಇತ್ತೀಚಿನ ನವೀಕರಣ​ : 01-07-2021 07:04 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080