ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 27-03-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಪಾಂಡುರಂಗ ತಂದೆ ನಾಗಪ್ಪ ಪಟಗಾರ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೊರಬಾ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 27-03-2021 ರಂದು 14-45 ಗಂಟೆಗೆ ಕುಮಟಾ ತಾಲೂಕಿನ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಮೊರಬಾ ಗ್ರಾಮದ ಮೀನು ಮಾರ್ಕೆಟ್ ಹತ್ತಿರ ತನ್ನ ತಾಬಾ ಯಾವುದೇ ಪಾಸ್ ಅಥವಾ ಪರವಾನಿಗೆ ಇಲ್ಲದೇ ಕರ್ನಾಟಕ ರಾಜ್ಯದಲ್ಲಿ ಮಾರಾಟಕ್ಕಿರುವ HAYWARDS CHEERS WHISKY ಅಂತಾ ಬರೆದಿರುವ 90 ML ನ 65 ಬಾಟಲ್ ಗಳು, ಅ||ಕಿ|| 2,283/- ರೂಪಾಯಿ, BAGPIPER DELUXE WHISKY ಅಂತಾ ಬರೆದಿರುವ 180 ML ನ 09 ಪ್ಯಾಕೆಟ್ ಗಳು, ಅ||ಕಿ|| 956/- ರೂಪಾಯಿ, OLD TAVERN WHISKY ಅಂತಾ ಬರೆದಿರುವ 180 ML ನ 14 ಪ್ಯಾಕೆಟ್ ಗಳು ಅ||ಕಿ|| 1,214/- ರೂಪಾಯಿ. ಹೀಗೆ ಒಟ್ಟೂ 4,453/- ರೂಪಾಯಿ ಮೌಲ್ಯದ ಕರ್ನಾಟಕ ರಾಜ್ಯದ ಸರಾಯಿ ಪ್ಯಾಕೆಟ್/ಬಾಟಲ್ ಗಳನ್ನು (ಮದ್ಯವನ್ನು) ಅಕ್ರಮವಾಗಿ ಮಾರಾಟ ಮಾಡಲು ತನ್ನ ವಶದಲ್ಲಿಟ್ಟುಕೊಂಡಾಗ ದಾಳಿಯ ಕಾಲಕ್ಕೆ ಕೈಯಲ್ಲಿದ್ದ ಚೀಲಗಳನ್ನು ಅಲ್ಲೇ ಬಿಸಾಡಿ ಆರೋಪಿತನು ತಪ್ಪಿಸಿಕೊಂಡು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪಿ.ಎಸ್.ಐ, ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 27-03-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 69/2021, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಶಂಕರ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮೂಡಕೇರಿ, ಹೆಗಡೆ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 26-03-2021 ರಂದು 18-45 ಗಂಗೆ ಪಿರ್ಯಾದಿಯು ತನ್ನ ಮನೆಯಿಂದ ಹೆಗಡೆಯ ಶಾಂತಿಕಾ ಪರಮೇಶ್ವರಿ ದೇವಸ್ಥಾನಕ್ಕೆ ಹೋಗಲು ತನ್ನ ಮನೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿತನು ಪಿರ್ಯಾದಿಯ ಹಿಂದಿನಿಂದ ಬಂದು ವಿನಾಕಾರಣ ಏಕಾಏಕಿ ಪಿರ್ಯಾದಿಯ ತಲೆಯ ಮೇಲೆ ತೆಂಗಿನ ಮರದ ಹೆಡೆಪೆಂಟೆಯಿಂದ ಹೊಡೆದು ಗಾಯ ಪಡಿಸಿದ್ದಲ್ಲದೇ, ಪಿರ್ಯಾದಿಯು ‘ತನಗೆ ಏಕೆ ಹೊಡೆಯುತ್ತಿದ್ದೀಯಾ? ಅಂತಾ ಕೇಳಿದಕ್ಕೆ ‘ಬೋಳಿ ಮಗನೆ ನಿನ್ನನ್ನು ಈಗ ಬಿಡುವುದಿಲ್ಲ. ಕೊಲೆ ಮಾಡುತ್ತೇನೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಹೊಡೆಯಲು ಬಂದಾಗ ಪಿರ್ಯಾದಿಯು ತಪ್ಪಿಸಿಕೊಂಡಾಗ ‘ನಿನ್ನನ್ನು ಇನ್ನೊಂದು ದಿನ ನೋಡಿಕೊಳ್ಳುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ರಾಮನಾಥ ತಂದೆ ಹನುಮಂತ ನಾಯ್ಕ, ಪ್ರಾಯ-72 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮೂಡಕೇರಿ, ಹೆಗಡೆ, ತಾ: ಕುಮಟಾ ರವರು ದಿನಾಂಕ: 27-03-2021 ರಂದು 12-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 70/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪುರುಷೋತ್ತಮ ತಂದೆ ನರೇಂದ್ರ ಪಾಲೇಕರ, ಪ್ರಾಯ-20 ವರ್ಷ, ಸಾ|| ಹಳಕಾರ ಕ್ರಾಸ್, ಚಿತ್ರಗಿ, ತಾ: ಕುಮಟಾ (ಮೋಟಾರ್ ಸೈಕಲ್ ನಂ: ಕೆ.ಎ-47/ವಿ-2949 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 26-03-2021 ರಂದು 21-30 ಗಂಟೆಗೆ ತಾನು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-2949 ನೇದನ್ನು ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಹೋಗಲು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಕುಮಟಾ ಪಟ್ಟಣದ ಹೆಗಡೆ ಕ್ರಾಸ್ ಹತ್ತಿರ ನಡೆದುಕೊಂಡು ರಸ್ತೆ ದಾಟುತ್ತಿದ್ದ ಪಿರ್ಯಾದಿಯವರ ಮಗ ಮಣಿಕಂಠ ತಂದೆ ಗೋಪಾಲ ಅಂಬಿಗ, ಪ್ರಾಯ-26 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಾರಿಬಾಗಿಲು, ಹೆಗಡೆ, ತಾ: ಕುಮಟಾ ಈತನಿಗೆ ನಿಷ್ಕಾಳಜಿಯಿಂದ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮಣಿಕಂಠ ಈತನ ಎಡಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿದು ಭಾರೀ ಗಾಯವಾಗಲು ಆರೋಪಿ ಮೋಟಾರ್ ಸೈಕಲ್ ಸವಾರನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಗೋಪಾಲ ತಂದೆ ಜಟ್ಟಿ ಅಂಬಿಗ, ಪ್ರಾಯ-57 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ತಾರಿಬಾಗಿಲು, ಹೆಗಡೆ, ತಾ: ಕುಮಟಾ ರವರು ದಿನಾಂಕ: 27-03-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಮಚಂದ್ರ ತಂದೆ ಸುಬ್ಬಾ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಚಾಲಕ, ಸಾ|| ಬೆಳಕೆ, ತಾ: ಭಟ್ಕಳ (ಬೊಲೆರೋ ವಾಹನ ನಂ: ಕೆ.ಎ-47/ಎ-1683 ನೇದರ ಚಾಲಕ). ದಿನಾಂಕ: 26-03-2021 ರಂದು ಪಿರ್ಯಾದಿಯ ಸಂಬಂಧಿಕರಾದ ಗಾಯಾಳು ಮಂಜುನಾಥ ತಂದೆ ಕುಪ್ಪಾ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಸಾಬಿತ್ಲ ಮನೆ, ದೊಡ್ಡಬಲಸೆ, ಬೈಲೂರು, ತಾ: ಭಟ್ಕಳ ಇವರು ತಮ್ಮ ಹೀರೋ ಹೋಂಡಾ ಫ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ: ಕೆ.ಎ-47/ಕೆ-0363 ನೇದರ ಮೇಲೆ ಹೊನ್ನಾವರಕ್ಕೆ ಮದುವೆ ಕಾರ್ಯಕ್ಕೆ ಹೋದವರು, ಮದುವೆ ಕಾರ್ಯ ಮುಗಿಸಿಕೊಂಡು ವಾಪಸ್ ತಮ್ಮ ಮೋಟಾರ್ ಸೈಕಲ್ ಮೇಲೆ ಪರಿಚಯದ ಒಬ್ಬರಿಗೆ ಕರೆದುಕೊಂಡು ಬಸ್ತಿಗೆ ಹೋಗಿ ಅವರನ್ನು ಬಿಟ್ಟು ವಾಪಸ್ ತಮ್ಮ ಮನೆಗೆ ಬರುವ ಸಲುವಾಗಿ ಬಸ್ತಿ ಕಡೆಯಿಂದ ಮುರ್ಡೇಶ್ವರ ನಾಕಾ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ತಮ್ಮ ಬದಿಯಿಂದ ಮೋಟಾರ ಸೈಕಲನ್ನು ಚಲಾಯಿಸಿಕೊಂಡು ಆರ್.ಎನ್.ಎಸ್ ಶೋ-ರೂಮ್ ಎದುರಿಗೆ ತಲುಪಿದಾಗ ಸುಮಾರು 17-30 ಗಂಟೆಗೆ ನಮೂದಿತ ಆರೋಪಿತನು ತನ್ನ ಬೊಲೆರೊ ವಾಹನ ನಂ: ಕೆ.ಎ-47/ಎ-1683 ನೇದನ್ನು ಮುರ್ಡೇಶ್ವರ ನಾಕಾ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತನ್ನ ಬದಿಯ ಹೆದ್ದಾರಿಯನ್ನು ಬಿಟ್ಟು ವಿರುದ್ಧ ದಿಕ್ಕಿನಲ್ಲಿ ಬಂದವನು, ಮಂಜುನಾಥ ಕುಪ್ಪಾ ನಾಯ್ಕ ಇವರ ಮೋಟಾರ್ ಸೈಕಲಿಗೆ ಎದುರಿನಿಂದ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಅವರ ಎಡಗಾಲು ಮೊಣಗಂಟಿನ ಕೆಳಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಎಡಗಾಲು ಪಾದದ ಮೇಲೆ ಹಾಗೂ ಹಿಮ್ಮಡಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಹರೀಶ ತಂದೆ ಮಾದೇವ ನಾಯ್ಕ, ಪ್ರಾಯ-27 ವರ್ಷ, ವೃತ್ತಿ-ಕೇಬಲ್ ಆಪರೇಟರ್ ಕೆಲಸ, ಸಾ|| ಸಾಬಿತ್ಲ ಮನೆ, ದೊಡ್ಡಬಲಸೆ, ಬೈಲೂರು, ತಾ: ಭಟ್ಕಳ ರವರು ದಿನಾಂಕ: 27-03-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಕಮಲಸಾಬದ ತಂದೆ ಖಾಸಿಂಸಾಬದ ಸೀಗಳ್ಳಿ, ಪ್ರಾಯ-50 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಾವಲವಾಡ, ತಾ: ಹಳಿಯಾಳ (ನೋಂದಣಿಯಾಗದ ಹೊಸ ಸ್ಕೂಟಿ ಚಾಲಕ). ನಮೂದಿತ ಆರೋಪಿತನು ದಿನಾಂಕ: 14-03-2021 ರಂದು 17-00 ಗಂಟೆಗೆ ತನ್ನ ನೋಂದಣಿಯಾಗದ ಹೊಸ ಸ್ಕೂಟಿ ಮೇಲಾಗಿ ಪಿರ್ಯಾದಿಯನ್ನು ಹಿಂಬದಿ ಕೂರಿಸಿಕೊಂಡು ಕಾವಲವಾಡ ಬದಿಯಿಂದ ಕಲಘಟಗಿ ಬದಿಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಾವಲವಾಡ ಗ್ರಾಮದ ಕೆ.ಇ.ಬಿ ಗ್ರಿಡ್ ಹತ್ತಿರ ಸ್ಕೂಟಿಯನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಸ್ಕಿಡ್ಡಾಗಿ ಕೆಡವಿ ಅಪಘಾತ ಪಡಿಸಿ, ಪಿರ್ಯಾದಿಗೆ ಸಾದಾ ಸ್ವರೂಪದ ಗಾಯನೋವು ಹಾಗೂ ವಾಹನವನ್ನು ಜಖಂಗೊಳಿಸಿದ್ದಲ್ಲದೇ, ತನಗೂ ಸಹ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮೆಹಬೂಬ್ ಸಾಬ್ ತಂದೆ ದುಲೇಸಾಬ್ ದೊಟೇಗಾರ, ಪ್ರಾಯ-37 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಕಾವಲವಾಡ, ತಾ: ಹಳಿಯಾಳ ರವರು ದಿನಾಂಕ: 15-03-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರು ದಾಖಲಿಸಿದನ್ನು ಗುನ್ನಾ ನಂ: 57/2021, ಕಲಂ: 279, 337 ಐಪಿಸಿ ನೇದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

     ಸದರ ಆರೋಪಿತ ಗಾಯಾಳು ಕಮಲಸಾಬ್ ಈತನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಉಪಚಾರದಲ್ಲಿರುತ್ತಾ, ಉಪಚಾರ ಫಲಕಾರಿಯಾಗದೇ ದಿನಾಂಕ: 27-03-2021 ರಂದು ಬೆಳಗ್ಗೆ 05-00 ಗಂಟೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆದ್ದರಿಂದ ಸದರ ಪ್ರಕರಣಕ್ಕೆ ಕಲಂ: 304(ಎ) ಐಪಿಸಿ ನೇದನ್ನು ಅಳವಡಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: 13(1)(ಎ)(ಎಫ್), 15, 32 ಕರ್ನಾಟಕ ಅಬಕಾರಿ ಕಾಯ್ದೆ ಹಾಗೂ ಕಲಂ: 328 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ವಾಸು ತಂದೆ ಅಣ್ಣಪ್ಪ ಪಾಟೀಲ್, ಪ್ರಾಯ-58 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕನ್ನಡ ಶಾಲೆ ಹತ್ತಿರ, ಮುರ್ಕವಾಡ, ತಾ: ಹಳಿಯಾಳ, 2]. ಪರಶುರಾಮ ಸುಳಗೇಕರ, ಸಾ|| ಮುರ್ಖವಾಡ, ತಾ: ಹಳಿಯಾಳ. ದಿನಾಂಕ: 27-03-2021 ರಂದು 10-30 ಗಂಟೆಗೆ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿರುವ ಆರೋಪಿ 3 ನೇಯವನ ಹೊಲದಲ್ಲಿ ಆರೋಪಿ 1 ನೇಯವನು ಮಾನವ ಆರೋಗ್ಯಕ್ಕೆ ಹಾನಿ ಉಂಟು ಮಾಡಿ ಪ್ರಾಣಕ್ಕೆ ಅಪಾಯ ಒಡ್ಡುವ ಕಳ್ಳಭಟ್ಟಿ ಸರಾಯಿಯನ್ನು ಮಾರಾಟ ಮಾಡುವ ಉದ್ದೇಶದಿಂದ ಅನಧೀಕೃತವಾಗಿ ತಯಾರಿಸುತ್ತಿದ್ದಾಗ, ದಾಳಿಯ ಕಾಲಕ್ಕೆ 1). 01 ಲೀಟರ್ ದಷ್ಟು ಕಳ್ಳಭಟ್ಟಿ ಸರಾಯಿ, ಅ||ಕಿ|| 1,000/- ರೂಪಾಯಿ, 2). 02 ಲೀಟರ್ ದಷ್ಟು ಕಳ್ಳಭಟ್ಟಿ ಸರಾಯಿ, ಅ||ಕಿ|| 2,000/- ರೂಪಾಯಿ, 3). ಸ್ಟೀಲ್ ಕೊಡ-02, ಅ||ಕಿ|| 20/- ರೂಪಾಯಿ, 4). ತಗಡಿನ ಡಬ್ಬಿ-1, ಅ||ಕಿ|| 00.00/- ರೂಪಾಯಿ, 5). ಕೆಂಪು ಪ್ಲಾಸ್ಟಿಕ್ ಕೊಡ-01, ಅ||ಕಿ|| 00.00/- ರೂಪಾಯಿ, 6). ಹಸಿರು ಪ್ಲಾಸ್ಟಿಕ್ ಕೊಡ-01, ಅ||ಕಿ|| 00.00/- ರೂಪಾಯಿ, 7). ಎರಡು ಪ್ಲಾಸ್ಟಿಕ್ ಪೈಪ್, ಅ||ಕಿ|| 00.00/- ರೂಪಾಯಿ, 8). ಒಲೆ ಹಚ್ಚಿದ್ದ ಸುಟ್ಟ ಕಟ್ಟಿಗೆ ತುಂಡು-02, ಅ||ಕಿ|| 00.00/- ರೂಪಾಯಿ, 9). ನೀಲಿ ಪ್ಲಾಸ್ಟಿಕ್ ಕ್ಯಾನ್-01, ಅ||ಕಿ|| 00.00/- ರೂಪಾಯಿ, 10). ನೀಲಿ ಬಣ್ಣದ ಪ್ಲಾಸ್ಟಿಕ್ ಬ್ಯಾರೆಲ್-02, ಅ||ಕಿ|| 100/- ರೂಪಾಯಿ, 11). ಸನ್ಣ ಬಿದಿರಿನ ತಟ್ಟೆ-01, ಅ||ಕಿ|| 00.00/- ರೂಪಾಯಿ, 12). ಕಟ್ಟಿಗೆ ಹಿಡಿಕೆ ಇರುವ ಪ್ಲಾಸ್ಟಿಕ್ ಚಮಚ-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಪಿರ್ಯಾದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರಾಜಕುಮಾರ, ಪಿ.ಎಸ್.ಐ (ಕ್ರೈಂ), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 27-03-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: 323, 394, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಕೃಷ್ಣಾ ತಂದೆ ಮಾರುತಿ ಹುಲಸ್ವಾರ, ಸಾ|| ಹೊಸುರು, ತತ್ವಣಗಿ, ತಾ: ಹಳಿಯಾಳ, 2]. ಶಬ್ಬೀರ್ ತಂದೆ ಬಾಬಾಸಾಬ್ ಕಕ್ಕೇರಿ, ಸಾ|| ಹೊಸುರು, ತತ್ವಣಗಿ, ತಾ: ಹಳಿಯಾಳ, 3]. ಬಾಬಾಸಾಬ್ ತಂದೆ ರಾಜೇಸಾಬ್ ಕಕ್ಕೇರಿ, ಸಾ|| ಹೊಸುರು, ತತ್ವಣಗಿ, ತಾ: ಹಳಿಯಾಳ. ಪಿರ್ಯಾದಿಯವರು ಹಳಿಯಾಳ ತಾಲೂಕಿನ ತತ್ವಣಗಿ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಒಳಪಡುವ ಹೊಸೂರ ಗ್ರಾಮದಲ್ಲಿ ಸಿಮೆಂಟ್ ರಸ್ತೆಯ ಕಾಮಗಾರಿಯ ಗುತ್ತಿಗೆಯನ್ನು ಪಡೆದಿದ್ದು ಇರುತ್ತದೆ. ದಿನಾಂಕ: 27-03-2021 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ಪಿರ್ಯಾದಿಯ ಜೊತೆ ಕೆಲಸ ಮಾಡುವ ರಾಜು ತಂದೆ ಶಿವಾಜಿ ಡಾಂಗೆ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ ಸಾ|| ತತ್ವಣಗಿ, ತಾ: ಹಳಿಯಾಳ ಈತನು ಹಳಿಯಾಳ ತಾಲೂಕಿನ ತತ್ವಣಗಿ ಗ್ರಾಮದ ಹೊಸೂರು ಸಿಮೆಂಟ್ ರಸ್ತೆಯ ಕಾಮಗಾರಿಯ ಕೆಲಸದಲ್ಲಿದ್ದಾಗ ನಮೂದಿತ ಆರೋಪಿತರೆಲ್ಲರೂ ಬಂದು ‘ನೀನು ಹಾಗೂ ಸುಭಾನಿ ನಾಯ್ಕ (ಪಿರ್ಯಾದಿ) ಈ ರಸ್ತೆ ಕೆಲಸ ಮಾಡುತ್ತಿದ್ದೀರಿ, ಇದರಲ್ಲಿ ನೀವು ಬೇಕಾದಷ್ಟು ಹಣ ಗಳಿಸಿದ್ದೀರಿ. ನಮಗೂ ಸಹ ಹಣ ಬೇಕಾಗಿದೆ. ನಿನ್ನ ಹತ್ತಿರವಿದ್ದ ಹಣ ಕೊಡು. ಇಲ್ಲವಾದರೆ ಸುಭಾನಿ ಇವನಿಂದ ಹಣ ಕೊಡಿಸು’ ಅಂತಾ ಮೂವರು ಸೇರಿ ‘ಸೂಳೆ ಮಗನೇ, ರಂಡೆ ಮಗನೇ’ ಎಂದು ಬೈಯ್ದು, ಮೈಮೇಲೆ ಅಲ್ಲಲ್ಲಿ ಹೊಡೆದು, ತಲೆಗೆ ಮತ್ತು ಬೆನ್ನಿಗೆ ಒಳನೋವು ಪಡಿಸಿದ್ದಲ್ಲದೇ, ‘ಹಣ ಇಲ್ಲ’ ಎಂದು ಹೇಳಿದಾಗ ಆರೋಪಿ 1 ನೇಯವನು ರಾಜು ಇವನ ಕೈಯಲ್ಲಿದ್ದ ಮೊಬೈಲನ್ನು ಬಲವಂತವಾಗಿ ಕಸಿದುಕೊಂಡಿರುತ್ತಾನೆ. ಮತ್ತು ‘ಈ ದಿವಸ ನೀನು ಉಳಿದುಕೊಂಡಿದ್ದಿ, ಇನ್ನೊಮ್ಮೆ ಸಿಕ್ಕರೆ ನಿನಗೆ ಜೀವ ಸಹಿತ ಬಿಡುವುದಿಲ್ಲ’ ಎಂದು ಧಮಕಿ ಹಾಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಭಾನಿ ತಂದೆ ಹುಸೇನಸಾಬ್ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ಕಾಂಟ್ರ್ಯಾಕ್ಟರ್, ಸಾ|| ತತ್ವಣಗಿ, ತಾ: ಹಳಿಯಾಳ ರವರು ದಿನಾಂಕ: 27-03-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 33/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಸಂಗೀತಾ ತಂದೆ ಶಂಕರ ಮಲ್ಲೂರ, ಪ್ರಾಯ-19 ವರ್ಷ, ವೃತ್ತಿ-ಮನೆ ಕೆಲಸ, ಸಾ|| ದನಗನಹಳ್ಳಿ, ಪೋ: ದಾಸನಕೊಪ್ಪ, ತಾ: ಶಿರಸಿ. ಕಾಣೆಯಾದ ಇವಳು ಶಿರಸಿ ತಾಲೂಕಿನ ಇಸಳೂರು ಪ್ರೌಢಶಾಲೆಯಲ್ಲಿ 10 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ, ಪರೀಕ್ಷೆಯಲ್ಲಿ ಫೇಲಾಗಿದ್ದರಿಂದ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡು ಇದ್ದವಳು, ದಿನಾಂಕ: 26-03-2021 ರಂದು 19-45 ಗಂಟೆಗೆ ತನ್ನ ಮನೆಯಿಂದ ಬಹಿರ್ದೆಸೆಗೆ ಅಂತಾ ಮನೆಯಿಂದ ಹೊರಗೆ ಹೋದವಳು ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ಹುಡುಕಿಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಂಕರ ತಂದೆ ಗುಡ್ಡಪ್ಪ ಮಲ್ಲೂರ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದನಗನಹಳ್ಳಿ, ಪೋ: ದಾಸನಕೊಪ್ಪ, ತಾ: ಶಿರಸಿ ರವರು ದಿನಾಂಕ: 27-03-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 27-03-2021

at 00:00 hrs to 24:00 hrs

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಡಾಕ್ಲು ತಂದೆ ಶಾಮು ಜೋರೆ, ಪ್ರಾಯ-32 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಾಳೆಹಳ್ಳಿ, ತಾ: ಮುಂಡಗೋಡ. ಸುದ್ದಿದಾರನಾದ ಮಗನಾದ ಈತನು ಈ ವರ್ಷದ (2021 ನೇ) ಸಾಲಿನಲ್ಲಿ  ಆನೆ ಹಾವಳಿಯಿಂದ ಬೆಳೆ ಹಾಳಾಗಿದ್ದಕ್ಕೆ, ಅಲ್ಲದೇ ಅಲ್ಲಲ್ಲಿ ಕೈಗಡ ಸಾಲ ಮಾಡಿಕೊಂಡಿದ್ದವನು ಅಥವಾ ಬೇರೇ ಯಾವುದೋ ಕಾರಣಕ್ಕೆ ದಿನಾಂಕ: 27-03-2021 ರಂದು ಬೆಳಿಗ್ಗೆ 08-00 ಗಂಟೆಯಿಂದ 09-00 ಗಂಟೆಯ ನಡುವಿನ ಅವಧಿಯಲ್ಲಿ ಬಾಳೆಹಳ್ಳಿ ಗ್ರಾಮದ ಹತ್ತಿರದ ಅರಣ್ಯದಲ್ಲಿನ ಸಾಗುವಾನಿ ಮರದ ಟೊಂಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ. ಅವನ ಮೃತದೇಹವು ಸ್ಥಳದಲ್ಲಿಯೇ ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶಾಮು ತಂದೆ ನಾವು ಜೋರೆ, ಪ್ರಾಯ-75 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಾಳೆಹಳ್ಳಿ, ತಾ: ಮುಂಡಗೋಡ ರವರು ದಿನಾಂಕ: 27-03-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ಇತ್ತೀಚಿನ ನವೀಕರಣ​ : 29-03-2021 11:04 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080