ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 27-05-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 436, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಿತ್ಯಾನಂದ ತಂದೆ ವಿಠ್ಠಲ ರೇವಣಕರ, ಪ್ರಾಯ-34 ವರ್ಷ, ವೃತ್ತಿ-ಅಕ್ಕಸಾಲಿಗ, ಸಾ|| ಅಗ್ರಗೋಣ, ತಾ: ಕುಮಟಾ, ಹಾಲಿ ಸಾ|| ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಹತ್ತಿರ, ಹಬ್ಬುವಾಡ, ಕಾರವಾರ. ಈತನು ಪಿರ್ಯಾದಿಯವರ ಅಕ್ಕನ ಮಗನಾಗಿದ್ದು, ಕಳೆದ 2 ತಿಂಗಳಿನಿಂದ ಪಿರ್ಯಾದಿಯವರೊಂದಿಗೆ ವಾಸ ಮಾಡಿಕೊಂಡಿದ್ದವನು, ಪಿರ್ಯಾದಿಯವರ ಪಿತ್ರಾರ್ಜಿತ ಆಸ್ತಿಯಲ್ಲಿ ತನ್ನ ತಾಯಿಯ ಆಸ್ತಿಯ ಪಾಲನ್ನು ನೀಡುವಂತೆ ಪಿರ್ಯಾದಿಯವರನ್ನು ಒತ್ತಾಯ ಪಡಿಸಿದ್ದು, ಪಿರ್ಯಾದಿಯವರು ಆಸ್ತಿಯನ್ನು ಪಾಲು ಮಾಡಿದಾಗ ನೀಡುವುದಾಗಿ ತಿಳಿಸಿದ್ದು, ಆದರೂ ಆರೋಪಿತನು ಪಿರ್ಯಾದಿಯವರ ಮಾತನ್ನು ಕೇಳದೇ ಆಸ್ತಿಯ ವಿಷಯವಾಗಿ ಪದೇ ಪದೇ ಪಿರ್ಯಾದಿಯವರಿಗೆ ಕಿರುಕುಳ ನೀಡುತ್ತಿದ್ದವನು, ದಿನಾಂಕ: 20-05-2021 ರಂದು ಪಿರ್ಯಾದಿ ಹಾಗೂ ಅವರ ಹೆಂಡತಿ ಊರಿನಿಂದ ಅವರ ಮನೆಗೆ ಬಂದಾಗ ಆರೋಪಿತನು ಪಿರ್ಯಾದಿಗೆ ಕೆಟ್ಟ ಕೆಟ್ಟ ಶಬ್ದಗಳಿಂದ ಬೈಯ್ದು, ಜೀವದ ಬೆದರಿಕೆಯನ್ನು ಹಾಕಿ ತನ್ನ ಆಸ್ತಿಯ ಪಾಲನ್ನು ನೀಡಿ ಆಮೇಲೆ ಮನೆಯ ಒಳಗೆ ಬರುವಂತೆ ಹೇಳಿದ್ದನು. ಅದಕ್ಕೆ ಪಿರ್ಯಾದಿಯು ಆರೋಪಿತನಿಗೆ ಹೆದರಿ ದಿನಾಂಕ: 20-05-2021 ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರನ್ನು ನೀಡಿದ್ದರು, ದೂರು ನೀಡಿದ ವಿಷಯ ತಿಳಿದು ಆರೋಪಿತನು ಪಿರ್ಯಾದಿಗೆ ಆಸ್ತಿಯನ್ನು ನೀಡದೇ ಹೋದರೆ ಪಿರ್ಯಾದಿ ಹಾಗೂ ಅವರ ಕುಟುಂಬದವರನ್ನು ಸುಟ್ಟು ಮನೆಗೆ ಬೆಂಕಿ ಹಾಕಿ ಸುಡುವುದಾಗಿ ಬೆದರಿಕೆ ಹಾಕಿದ್ದವನು, ದಿನಾಂಕ: 26-05-2021 ರಂದು ರಾತ್ರಿ 22-30 ಗಂಟೆಗೆ ತನಗೆ ಆಸ್ತಿಯಲ್ಲಿ ಪಾಲು ನೀಡಲಿಲ್ಲ ಅಂತಾ ಸಿಟ್ಟಿನಿಂದ ಪಿರ್ಯಾದಿಯ ವಾಸದ ಮನೆಗೆ ಬೆಂಕಿಯನ್ನು ಹಚ್ಚಿ ಸುಟ್ಟಿರುವ ಬಗ್ಗೆ ಪಿರ್ಯಾದಿ ಶ್ರೀ ಉಲ್ಲಾಸ ತಂದೆ ಶಂಕರ ನೇತಾಳಕರ, ಪ್ರಾಯ-64 ವರ್ಷ, ವೃತ್ತಿ-ಅಕ್ಕಸಾಲಿಗ, ಸಾ|| ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಹತ್ತಿರ, ಹಬ್ಬುವಾಡ, ಕಾರವಾರ ರವರು ದಿನಾಂಕ: 27-05-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: 341, 353, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಘು ನಾಯ್ಕ, ಸಾ|| ತೇಲಂಗ ರಸ್ತೆ, ಕಾರವಾರ. ಪಿರ್ಯಾದಿಯವರು ಜಿಲ್ಲಾ ಸರಕಾರಿ ಆಸ್ಪತ್ರೆ, ಕಾರವಾರದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿ ಸರಕಾರಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ: 27-05-2021 ರಂದು ಬೆಳಿಗ್ಗೆ ಸುಮಾರು 10-30 ಗಂಟೆಗೆ ಪಿರ್ಯಾದಿಯವರು ತಮ್ಮ ಸರಕಾರಿ ಕರ್ತವ್ಯದ ನಿಮಿತ್ತ ಜಿಲ್ಲಾ ಸರಕಾರಿ ಆಸ್ಪತ್ರೆ ಕಾರವಾರದಿಂದ ಮೆಡಿಕಲ್ ಕಾಲೇಜಿನ ಕೋವಿಡ್ ಐ.ಸಿ.ಯು ವಾರ್ಡಿಗೆ ಮೇಲ್ವಿಚಾರಣೆಗೆ ಹೋಗುತ್ತಿರುವಾಗ ನಮೂದಿತ ಆರೋಪಿತನು ಜಿಲ್ಲಾ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ಅಡುಗೆ ಮನೆಯ ಹತ್ತಿರ ಬಂದವನು, ಪಿರ್ಯಾದಿಯವರನ್ನು ತಡೆದು ಅಡ್ಡಗಟ್ಟಿ ನಿಲ್ಲಿಸಿ ‘ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಗಳಿಗೆ ಸರಿಯಾಗಿ ಸಂಬಳ ನೀಡದೆ ಸತಾಯಿಸುತ್ತೀಯಾ? ಈ ಬಗ್ಗೆ ವಿಡಿಯೋ ಮಾಡಿ ಅಪಲೋಡ್ ಮಾಡಿದರೂ ನೀನು ಮರ್ಯಾದೆ ಬಿಟ್ಟು ಮತ್ತೆ ಕೆಲಸಕ್ಕೆ ಬಂದಿದ್ದಿಯಾ’ ಎಂದು ಕೆಟ್ಟದಾಗಿ ಮಾತನಾಡಿದಾಗ, ಪಿರ್ಯಾದಿಯವರು ತಾನು ಕೋವಿಡ್ ವಾರ್ಡಿಗೆ ಕರ್ತವ್ಯಕ್ಕೆ ಹೋಗುವುದಾಗಿ ತಿಳಿಸಿದರೂ ಸಹ ಅವರಿಗೆ ಕೊಂಕಣಿ ಭಾಷೆಯಲ್ಲಿ ‘ರಾಂಡೆಚಾ’ ಅಂತ ಅವಾಚ್ಯವಾಗಿ ಬೈಯ್ದು ಬೆದರಿಕೆ ಹಾಕಿ, ಪಿರ್ಯಾದಿಯವರ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಪಿರ್ಯಾದಿ ಡಾ|| ಶಿವಾನಂದ ಕುಡ್ತಲಕರ, ಪ್ರಾಯ-51 ವರ್ಷ, ವೃತ್ತಿ-ವೈದ್ಯಾಧಿಕಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಸಾ|| ಜಿಲ್ಲಾ ಸರಕಾರಿ ಆಸ್ಪತ್ರೆ, ಕಾರವಾರ ರವರು ದಿನಾಂಕ: 27-05-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 80/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಶ್ರೀಮತಿ ಪಲ್ಲವಿ ಕೋಂ. ಧರ್ಮಾ ಖಾರ್ವಿ, ಪ್ರಾಯ-25 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೇವರಗದ್ದೆ, ಮಡಿ, ಮಂಕಿ, ತಾ: ಹೊನ್ನಾವರ. ಪಿರ್ಯಾದಿಯ ಹೆಂಡತಿಯಾದ ಇವಳು ದಿನಾಂಕ: 18-05-2021 ರಂದು ರಾತ್ರಿ 22-00 ಗಂಟೆಯಿಂದ ದಿನಾಂಕ: 19-05-2021 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಈವರೆಗೂ ವಾಪಸ್ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಧರ್ಮಾ ತಂದೆ ಲಕ್ಷ್ಮಣ ಖಾರ್ವಿ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೇವರಗದ್ದೆ, ಮಡಿ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 27-05-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 27/2021, ಕಲಂ: 323, 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಉಮೇಶ ತಂದೆ ಸುರೇಶ ದೇಸಾಯಿ, ಅಂದಾಜು ಪ್ರಾಯ-32 ವರ್ಷ, ವೃತ್ತಿ-ಭಾರತೀಯ ಸೇನೆಯಲ್ಲಿ ಸೈನಿಕ, ಸಾ|| ನ್ಯೂ ಟೌನಶಿಪ್, ತಾ: ಜೋಯಿಡಾ. ಪಿರ್ಯಾದಿಯು ದಿನಾಂಕ: 24-05-2021 ರಂದು ಒಂದು ಕಬ್ಬಿಣದ ರಾಡನ್ನು ಕೆಲಸಕ್ಕೆಂದು ಆರೋಪಿತನಿಗೆ ಕೊಟ್ಟಿದ್ದು, ದಿನಾಂಕ: 25-05-2021 ರಂದು 20-30 ಗಂಟೆಗೆ ಆರೋಪಿತನು ಪಿರ್ಯಾದಿಗೆ ಪಿರ್ಯಾದಿಯ ತಮ್ಮನ ಮನೆಯ ಹತ್ತಿರ ಸಿಕ್ಕಾಗ, ಪಿರ್ಯಾದಿಯು ಆರೋಪಿತನಿಗೆ ಉದ್ದೇಶಿಸಿ ‘ನಿನ್ನೆ ಕೊಟ್ಟಿದ್ದ ಕಬ್ಬಿಣದ ರಾಡು ವಾಪಸ್ ಕೊಡು’ ಅಂತಾ ಕೇಳಿದ್ದಕ್ಕೆ ಆರೋಪಿತನು ಏಕಾಏಕಿ ಪಿರ್ಯಾದಿಗೆ ಅಡ್ಡಗಟ್ಟಿ ‘ಬೋಸಡಿಚ್ಯಾ, ರಾಂಡಿಚ್ಯಾ’ ಅಂತಾ ಕೊಂಕಣಿ ಭಾಷೆಯಲ್ಲಿ ಅವಾಚ್ಯವಾಗಿ ಬೈಯುತ್ತಾ, ಪಿರ್ಯಾದಿಗೆ ದೂಡಿ ನೆಲದ ಮೇಲೆ ಬೀಳಿಸಿ, ಕೈಯಿಂದ ಹೊಡೆದು, ಕಾಲಿನಿಂದ ಸಿಕ್ಕ ಸಿಕ್ಕಲ್ಲಿಗೆ ಒದ್ದು, ಪಿರ್ಯಾದಿಗೆ ಗಾಯಪೆಟ್ಟು ಉಂಟು ಮಾಡಿ ದುಃಖಾಪತ್ ಪಡಿಸಿ, ಜೀವದ ಬೆದರಿಕೆ ಹಾಕಿರುವ ಬಗ್ಗೆ ಪಿರ್ಯಾದಿ ಶ್ರೀ ಸಂದೀಪ ತಂದೆ ದತ್ತಾ ಸಾವಂತ, ಪ್ರಾಯ-38 ವರ್ಷ, ವೃತ್ತಿ-ಚಾಲಕ, ಸಾ|| ನ್ಯೂ ಟೌನಶಿಪ್, ತಾ: ಜೋಯಿಡಾ ರವರು ದಿನಾಂಕ: 27-05-2021 ರಂದು 19-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 90/2021, ಕಲಂ: 307, 324, 379, 504, 506 ಐಪಿಸಿ ಹಾಗೂ ಕಲಂ: 3(1)(r), 3(1)(s), 3(1)(u), 3(2)(va) SC & ST (Prevention of Atrocities) Amendment Act-2015 ನೇದ್ದರ ವಿವರ...... ನಮೂದಿತ ಆರೋಪಿತ ಸಜ್ಜೀಮೋಹನ ತಂದೆ ಕೃಷ್ಣ ನಾಯರ, ಪ್ರಾಯ-45 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ, ಸಾ|| ಉಮ್ಮಚಗಿ, ತಾ: ಯಲ್ಲಾಪುರ. ಈತನು ಪಿರ್ಯಾದಿಯ ತಂದೆಯು ಆರೋಪಿತನ ಅಂಗಡಿಯಿಂದ ಗ್ರ್ಯಾಂಡಿಂಗ್ ಮಷೀನ್ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ ಅಂತಾ ತಿಳಿದುಕೊಂಡು ವಿನಾಕಾರಣ ಪಿರ್ಯಾದಿಗೆ ತೊಂದರೆ ಕೊಡುವ ಉದ್ದೇಶದಿಂದ ಪಿರ್ಯಾದಿಯು ತನ್ನ ಮನೆಯ ಹತ್ತಿರ ನಿಲ್ಲಿಸಿಟ್ಟ ಪಿರ್ಯಾದಿಯ ಮೋಟಾರ್ ಸೈಕಲ್ ನಂ: ಕೆ.ಎ-31/ಆರ್-8258 ನೇದನ್ನು ಪಿರ್ಯಾದಿಗೆ ಹೇಳದೇ ಕೇಳದೇ ತೆಗೆದುಕೊಂಡು ಹೋಗಿ, ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದನ್ನು ಕೇಳಲು ಪಿರ್ಯಾದಿಯು ದಿನಾಂಕ: 25-05-2021 ರಂದು ರಾತ್ರಿ 09-40 ಗಂಟೆಯ ಸುಮಾರಿಗೆ ಆರೋಪಿತನ ಮನೆಯ ಹತ್ತಿರ ಹೋದಾಗ, ಆರೋಪಿತನು ಪಿರ್ಯಾದಿಯು ಜಾತಿಯಿಂದ ಬೋವಿವಡ್ಡರ, ಎಸ್.ಸಿ ಜಾತಿಗೆ ಸೇರಿದವನು ಅಂತಾ ತಿಳಿದೂ ಸಹ ಆರೋಪಿತನು ಪಿರ್ಯಾದಿಗೆ ಅವಮಾನಿಸುವ ಉದ್ದೇಶದಿಂದ ಪಿರ್ಯಾದಿಯ ಜಾತಿಯ ಹೆಸರಿನಲ್ಲಿ ಅವಾಚ್ಯವಾಗಿ ಬೈಯ್ದು, ಜಾತಿ ನಿಂದನೆ ಮಾಡಿ, ಪಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ಆರೋಪಿತನು ತನ್ನ ಮನೆಯಲ್ಲಿದ್ದ ತಲವಾರ್ (ಚೂರಿ) ಅನ್ನು ತಂದು ಪಿರ್ಯಾದಿಯ ಕುತ್ತಿಗೆಗೆ ಬೀಸಿದಾಗ ಪಿರ್ಯಾದಿಯು ತಪ್ಪಿಸಿಕೊಳ್ಳಲು ಮುಂದಾದಾಗ ಪಿರ್ಯಾದಿಯ ಎಡಗೈ ಮತ್ತು ಎಡಗಾಲಿಗೆ ಭಾರೀ ರಕ್ತಗಾಯ ಪಡಿಸಿದ್ದಲ್ಲದೇ, ಪಿರ್ಯಾದಿಗೆ ಅವಾಚ್ಯವಾಗಿ ಬೈಯ್ದು ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ತಿಮ್ಮಣ್ಣ ಬೋವಿವಡ್ಡರ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಂಕದಗುಂಡಿ, ಉಮ್ಮಚಗಿ ಗ್ರಾಮ, ತಾ: ಯಲ್ಲಾಪುರ ರವರು ದಿನಾಂಕ: 27-05-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 34/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರಕಾಶ ತಂದೆ ಬಂಗಾರ್ಯಾ ನಾಯ್ಕ, ಪ್ರಾಯ-37 ವರ್ಷ, ಸಾ|| ಕಾನಸೂರ, ತಾ: ಸಿದ್ದಾಪುರ (ಟ್ರಕ್ ನಂ: ಕೆ.ಎ-31/ಎ-6363 ನೇದರ ಚಾಲಕ). ಈತನು ದಿನಾಂಕ: 27-05-2021 ರಂದು 12-15 ಗಂಟೆಯ ಸುಮಾರಿಗೆ ಶಿರಸಿ ಶಹರದ ಚರ್ಚ್ ರೋಡಿನ ಆವೇಮರಿಯಾ ಶಾಲೆಯ ಹತ್ತಿರ ತನ್ನ ಟ್ರಕ್ ನಂ: ಕೆ.ಎ-31/ಎ-6363 ನೇದನ್ನು ಝೂ ಸರ್ಕಲ್ ಕಡೆಯಿಂದ ಐದು ರಸ್ತೆ ಕಡೆಗೆ ಹೋಗಲು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಪೂರ್ತಿ ತನ್ನ ಬಲ ಸೈಡಿಗೆ ರಸ್ತೆ ಮಧ್ಯದಲ್ಲಿ ಚಲಾಯಿಸಿಕೊಂಡು ಬಂದವನು, ಪಿರ್ಯಾದಿಯು ಐದು ರಸ್ತೆ ಕಡೆಯಿಂದ ಝೂ ಸರ್ಕಲ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರ್ ನಂ: ಕೆ.ಎ-31/ಎಮ್-5834 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಎದೆಗೆ ಮತ್ತು ಕುತ್ತಿಗೆಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ವಸಂತ ತಂದೆ ಕೃಷ್ಣಾ ನಾಯಕ, ಪ್ರಾಯ 54 ವರ್ಷ, ವೃತ್ತಿ-ಪ್ರಾಧ್ಯಾಪಕರು, ಸಾ|| ಹನುಮಾನ ವ್ಯಾಯಾಮ ಶಾಲೆಯ ಹತ್ತಿರ, ತಾ: ಶಿರಸಿ ರವರು ದಿನಾಂಕ: 27-05-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 72/2021, ಕಲಂ: 420 ಐಪಿಸಿ ಹಾಗೂ ಕಲಂ: 66(ಸಿ), 66(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಯಾರೋ ಆರೋಪಿತರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತರು ಪಿರ್ಯಾದಿಯ ಮೊಬೈಲ್ ನಂಬರಿಗೆ ಕರೆ ಮಾಡಿ ಡಾಕ್ಯುಮೆಂಟ್ ಅನ್ನು ಆನಲೈನ್ ಅಪ್ಡೇಟ್ ಮಾಡಿಸಬೇಕೆಂದು ಹೇಳಿ, ಪಿರ್ಯಾದಿಗೆ ನಂಬಿಸಿ, ಪಿರ್ಯಾದಿಯಿಂದ ಓಟಿಪಿ ಯನ್ನು ಪಡೆದುಕೊಂಡು ಪಿರ್ಯಾದಿಯ ಅಕೌಂಟಿನಿಂದ ಒಟ್ಟೂ 72,969/- ರೂಪಾಯಿ ಹಣವನ್ನು ಬೇರೆ ಬೇರೆ ಯಾರದೋ ವ್ಯಾಲೆಟ್ ಗೆ ವರ್ಗಾವಣೆ ಮಾಡಿಕೊಂಡಿದ್ದು ಇರುತ್ತದೆ. RAJ*DHANIMUMBAIIN ಎಂಬ ಹೆಸರಿನ ವ್ಯಾಲೆಟ್ ಗೆ 69,969/- ರೂಪಾಯಿಗಳು ಹಾಗೂ RELIANCERETAILLIMI ಎಂಬ ವ್ಯಾಲೆಟ್ ಗೆ 3,000/- ರೂಪಾಯಿ ಹಣ. ಹೀಗೆ ಒಟ್ಟೂ 72,969 /- ರೂಪಾಯಿ ಹಣವನ್ನು ಪಿರ್ಯಾದಿಯ ಅಕೌಂಟಿನಿಂದ ಡ್ರಾ ಮಾಡಿಕೊಂಡು ಪಿರ್ಯಾದಿಗೆ ಮೋಸ ವಂಚನೆ ಮಾಡಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪರಮೇಶ್ವರ ದಾಸಪ್ಪ, ಪ್ರಾಯ-38 ವರ್ಷ, ವೃತ್ತಿ-ಸರ್ಕಾರಿ ವಲಯ ಅರಣ್ಯಾಧಿಕಾರಿ, ಸಾ|| ಅಮ್ಮನಘಟ್ಟಾ ಗ್ರಾಮ, ತಾ: ಗುಬ್ಬಿ, ಜಿ: ತುಮಕೂರು, ಹಾಲಿ ಸಾ|| ವಿವೇಕಾನಂದ ನಗರ, ತಾ: ಮುಂಡಗೋಡ ರವರು ದಿನಾಂಕ: 27-05-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 103/2021, ಕಲಂ: 143, 147, 269, 271, 323, 341, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಾರಾಯಣ ಅಂತ್ರೋಳಕರ, 2]. ಕೃಷ್ಣಾ ಅಂತ್ರೋಳಕರ, 3]. ಮಹಾಂತೇಶ ಕುಂಬಾರ, 4]. ಶಂಕರ ಕುಂಬಾರ, ಸಾ|| (ಎಲ್ಲರೂ) ಹಳಿಯಾಳ ಹಾಗೂ ಇನ್ನೂ 6 ಜನರು. ಪಿರ್ಯಾದಿಯವರು ಹಳಿಯಾಳ ಶಹರದ ಗುತ್ತಿಗೇರಿಯಲ್ಲಿರುವ ತಮ್ಮ ಸಂಬಂಧಿಕರಿಗೆ ಆರಾಮ ಇಲ್ಲದ ಕಾರಣ ದಿನಾಂಕ: 26-05-2021 ರಂದು 21-15 ಗಂಟೆಗೆ ತಮ್ಮ ಮೋಟಾರ್ ಸೈಕಲ್ ಮೇಲಾಗಿ ಪಿರ್ಯಾದಿ ಮತ್ತು ಗಾಯಾಳು 2 ನೇಯವರಾದ ಶೈಬಾಜ್ ತಂದೆ ಮುಕ್ತುಮ್ ಹುಸೇನ್ ಮುಲ್ಲಾ, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಹೊಸುರು ಗಲ್ಲಿ ಪ್ಲಾಟ್, ಹಳಿಯಾಳ ಶಹರ ರವರು ಅವರ ಮನೆಗೆ ಹೋಗಿ ಪರತ್ ಹೊಸೂರು ಗಲ್ಲಿಯ ತಮ್ಮ ಮನೆಗೆ ಬರುತ್ತಿರುವಾಗ ಡೌಗೇರಾ ಕೆರೆಯ ಹತ್ತಿರ ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಕೊರೋನಾ ರೋಗವು ಎಲ್ಲಾ ಕಡೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಹಳಿಯಾಳ ಶಹರವನ್ನು ಲಾಕಡೌನ್ ಆದೇಶ ಮಾಡಿ ವಿಶೇಷ ಕಂಟೈನಮೆಂಟ್ ಜೋನ್ ಅಂತಾ ಘೋಷಣೆ ಮಾಡಿದ್ದಾಗಲೂ ಕೂಡಾ ಅದನ್ನು ಉಲ್ಲಂಘನೆ ಮಾಡಿ ನಮೂದಿತ ಆರೋಪಿತರು ಹಾಗೂ ಇನ್ನೂ 6 ಜನ ಆರೋಪಿತರು ಸಂಘನಮತ ಮಾಡಿಕೊಂಡು ಬಂದು ಪಿರ್ಯಾದಿ ಹಾಗೂ ಗಾಯಳು 2 ನೇಯವರಾದ ಶೈಬಾಜ್ ತಂದೆ ಮುಕ್ತುಮ್ ಹುಸೇನ್ ಮುಲ್ಲಾ ರವರಿಗೆ ರಸ್ತೆಯ ಮೇಲೆ ಅಡ್ಡಗಟ್ಟಿ ನಿಲ್ಲಿಸಿ ‘ರಾಂಡೇಚಾ, ಬೋಸುಡಿಚಾ’ ಅಂತಾ ಅವಾಚ್ಯವಾಗಿ ಬೈಯ್ದು ಕೈಯಿಂದ ಮತ್ತು ಕಾಲಿನಿಂದ ಒದಿಯುತ್ತಿರುವಾಗ, ಬಿಡಿಸಲು ಬಂದ ಗಾಯಾಳು 3 ನೇಯವರಾದ ಶಾಹಿಲ್ ತಂದೆ ಮುಕ್ತುಮ್ ಹುಸೇನ್ ಮುಲ್ಲಾ, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಹೊಸುರು ಗಲ್ಲಿ ಪ್ಲಾಟ್, ಹಳಿಯಾಳ ಶಹರ ರವರಿಗೂ ಸಹ ಕೈಯಿಂದ ಮತ್ತು ಕಾಲಿನಿಂದ ಹೊಡೆಬಡೆ ಮಾಡಿ ದುಃಖಾಪತ್ ಪಡಿಸಿದ್ದಲ್ಲದೇ, ಅಲ್ಲಿಂದ ಹೋಗುವಾಗ ಪಿರ್ಯಾದಿ ಹಾಗೂ ಅವರ ಮನೆಯ ಜನರಿಗೆ ಎಲ್ಲಾ ಆರೋಪಿತರು ‘ಈ ಬಾರಿ ನಮ್ಮ ಕೈಯಿಂದ ಉಳಿದುಕೊಂಡಿದ್ದೀರಿ. ಇನ್ನೊಮ್ಮೆ ಸಿಕ್ಕಲ್ಲಿ ನಿಮಗೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಮುಕ್ತುಮ್ ಹುಸೇನ್ ತಂದೆ ಬುಡ್ಡೇಸಾಬ್ ಮುಲ್ಲಾ, ಪ್ರಾಯ-43 ವರ್ಷ, ವೃತ್ತಿ-ಅಡುಗೆ ಕೆಲಸ, ಸಾ|| ಹೊಸುರು ಗಲ್ಲಿ ಪ್ಲಾಟ್, ಹಳಿಯಾಳ ಶಹರ ರವರು ದಿನಾಂಕ: 27-05-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 104/2021, ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹಿದಾಯತುಲ್ಲಾಖಾನ್ ತಂದೆ ಗಫರಖಾನ್ ಸಾಹುಕಾರ, ಸಾ|| ಆಜಾದ್ ಗಲ್ಲಿ, ಹಳಿಯಾಳ ಶಹರ. ಜಗತ್ತಿನಾದ್ಯಂತ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡಿಕೊಂಡಿದ್ದು, ಅದು ಭಾರತ ದೇಶದಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಅದರಂತೆ ಕರ್ನಾಟಕ ರಾಜ್ಯ ಸರಕಾರವು ಜನತಾ ಲಾಕಡೌನ್ ಘೊಷಣೆ ಮಾಡಿ ಆದೇಶಿಸಿದ್ದು, ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ದಿನಾಂಕ: 16-05-2021 ರಿಂದ 24-05-2021 ಮತ್ತು 07-06-2021 ರವರೆಗೆ ಹೆಚ್ಚುವರಿ ಕ್ರಮ ಕೈಗೊಳ್ಳಲು ಆದೇಶಿಸಿ, ಹಳಿಯಾಳ ಶಹರವನ್ನು ವಿಶೇಷ ಕಂಟೈನಮೆಂಟ್ ಜೋನ್ ಆಗಿ ಘೋಷಿಸಿ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟನ್ನು ನಿಷೇಧಿಸಿದ್ದು ಇರುತ್ತದೆ. ಅದರಂತೆ ಪಿರ್ಯಾದಿಯವರು ಪುರಸಭೆಯ ಮುಖ್ಯಾಧಿಕಾರಿ ಇದ್ದು, ತಮ್ಮ ಸಂಗಡ ಸಿಬ್ಬಂದಿಗಳನ್ನು ಕರೆದುಕೊಂಡು ಹಳಿಯಾಳ ಶಹರದಲ್ಲಿ ತಮ್ಮ ಮೇಲಾಧಿಕಾರಿಗಳ ಮೌಖಿಕ ಆದೇಶದಂತೆ ತಿರುಗಾಡುತ್ತಿದ್ದಾಗ, ದಿನಾಂಕ: 27-05-2021 ರಂದು ಮಧ್ಯಾಹ್ನ 01-30 ಗಂಟೆಗೆ ನಮೂದಿತ ಆರೋಪಿತನು ಹಳಿಯಾಳ ಶಹರದ ಗಣಪತಿ ಗಲ್ಲಿಯಲ್ಲಿನ ತನ್ನ ‘ಭಾರತ್ ಟ್ರೇಡಿಂಗ್ ಕಂಪನಿ’ ಅಂಗಡಿಯನ್ನು ಆರೋಪಿತ ತೆರೆದು ವ್ಯಾಪಾರ ಮಾಡುತ್ತಿದ್ದಾಗ, ಪಿರ್ಯಾದಿಯವರು ಸದರ ಆರೋಪಿತರಿಗೆ ‘ಜಗತ್ತಿನಾದ್ಯಂತ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡಿಕೊಂಡಿದ್ದು, ಅದು ಭಾರತ ದೇಶದಲ್ಲಿಯೂ ವ್ಯಾಪಕವಾಗಿ ಹರಡುತ್ತಿದ್ದು, ಅದರಂತೆ ಕರ್ನಾಟಕ ರಾಜ್ಯ ಸರಕಾರವು ಜನತಾ ಲಾಕಡೌನ್ ಘೊಷಣೆ ಮಾಡಿ ಆದೇಶಿಸಿದ ಬಗ್ಗೆ ನಿಮಗೆ ತಿಳಿದಿಲ್ಲವೇ?’ ಅಂತಾ ಹೇಳಿದ್ದಕ್ಕೆ ಪಿರ್ಯಾದಿಯವರಿಗೆ ಉದ್ದೇಶಿಸಿ, ‘ನಾವು ನಮ್ಮ ಅಂಗಡಿಯನ್ನು ತೆರೆದು ವ್ಯಾಪಾರ ಮಾಡುತ್ತೇವೆ. ನೀವು ಏನು ಬೇಕಾದರೂ ಮಾಡಿಕೊಳ್ಳಿ’ ಅಂತಾ ಹೇಳಿರುತ್ತಾನೆ. ಕಾರಣ ಜಗತ್ತಿನಾದ್ಯಂತ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡಿಕೊಂಡಿದ್ದು, ಅಲ್ಲದೇ ಹಳಿಯಾಳ ಶಹರವನ್ನು ವಿಶೇಷ ಕಂಟೈನ್ ಮೆಂಟ್ ಜೋನ್ ಅಂತಾ ಘೋಷಣೆ ಮಾಡಿದ ವಿಷಯ ತಿಳಿದೂ ಸಹ ಆರೋಪಿತನು  ತನ್ನ ಅಂಗಡಿ ತೆರೆದು ವ್ಯಾಪಾರ ವಹಿವಾಟು ಮಾಡಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವ ಬಗ್ಗೆ ತಿಳಿದಿದ್ದದರೂ ಸಹ ನಿರ್ಲಕ್ಷ್ಯತನದಿಂದ ವ್ಯಾಪಾರ ವಹಿವಾಟು ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಕೇಶವ ಎಮ್, ಚೌಗಲೆ, ಮುಖ್ಯಾಧಿಕಾರಿಗಳು, ಪುರಸಭೆ, ಹಳಿಯಾಳ ಶಹರ ರವರು ದಿನಾಂಕ: 27-05-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 60/2021, ಕಲಂ: 143, 147, 148, 323, 324, 341, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹಾಬಲೇಶ್ವರ ತಂದೆ ಕನ್ನಾ ನಾಯ್ಕ, 2]. ಪವನ ತಂದೆ ಮಹಾಬಲೇಶ್ವರ ನಾಯ್ಕ, 3]. ಹರೀಶ ತಂದೆ ಗಣಪತಿ ನಾಯ್ಕ, 4]. ದರ್ಶನ ತಂದೆ ಕೃಷ್ಣ ನಾಯ್ಕ, 5]. ಗೌರೀಶ ತಂದೆ ತಿಮ್ಮಾ ನಾಯ್ಕ, 6]. ಮನೋಜ ತಂದೆ ತಿಮ್ಮಾ ನಾಯ್ಕ, ಸಾ|| (ಎಲ್ಲರೂ) ಕಾನಗೋಡ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ಮತ್ತು 2 ನೇಯವರು ತಂದೆ ಹಾಗೂ ಮಗನಾಗಿದ್ದು ಮತ್ತು ಪಿರ್ಯಾದಿ ಹಾಗೂ ಗಾಯಾಳು ಮಂಜುನಾಥ ತಂದೆ ಕೀರಾ ನಾಯ್ಕ, ಪ್ರಾಯ-52 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾನಗೋಡ, ತಾ: ಸಿದ್ದಾಪುರ ಇವರು ತಂದೆ ಮಗ ಆಗಿರುತ್ತಾರೆ. ಆರೋಪಿ 1 ನೇಯವನ ಮತ್ತು ಗಾಯಾಳು ಇವರ ಜಮೀನು ಅಕ್ಕ ಪಕ್ಕ ಇರುತ್ತದೆ. ಪಿರ್ಯಾದಿಯ ಕಡೆಯವರು ‘ಜಮೀನಿಗೆ ಹೋಗಲು ದಾರಿ ಕೊಡುತ್ತಿಲ್ಲ’ ಅಂತಾ ಆರೋಪಿ 1 ನೇಯವರ ಕಡೆಯವರು ಪಿರ್ಯಾದಿಯ ಕಡೆಯವರೊಂದಿಗೆ ದ್ವೇಷ ಸಾಧಿಸುತ್ತಾ ಬಂದವರಿರುತ್ತಾರೆ. ದಿನಾಂಕ: 27-05-2021 ರಂದು ಪಿರ್ಯಾದಿ ಹಾಗೂ ಪಿರ್ಯಾದಿಯ ತಂದೆ 407 ವಾಹನವೊಂದರಲ್ಲಿ ಅವರ ಗದ್ದೆಯ ಪಕ್ಕದ ಹಳ್ಳದಿಂದ ಹೊಳೆಗೊಚ್ಚು ತುಂಬಿಕೊಂಡು ಮನೆಗೆ ಹೋಗುತ್ತಿದ್ದಾಗ ಸಮಯ 12-45 ಗಂಟೆಯ ಸುಮಾರಿಗೆ ಆರೋಪಿ 1 ಮತ್ತು 2 ನೇಯವರು ಇತರೆ ಆರೋಪಿತರೊಂದಿಗೆ ಸೇರಿ ಸಂಗನಮತ ಮಾಡಿಕೊಂಡು ಐಗೋಡದಲ್ಲಿರುವ ಆರೋಪಿ 1 ನೇಯವನ ಮನೆಯ ಹತ್ತಿರ 407 ವಾಹನವನ್ನು ಅಡ್ಡಗಟ್ಟಿ ತಡೆದು, ವಾಹನದಲ್ಲಿದ್ದ ಪಿರ್ಯಾದಿಯ ತಂದೆಯನ್ನು ಕೆಳಗೆ ಎಳೆದು ‘ತಮ್ಮ ಹೊಲದಿಂದ ಯಾಕೆ ಗೊಚ್ಚು ತುಂಬಿಕೊಂಡು ಬಂದಿ ಸೂಳೆ ಮಗನೆ, ಬೋಳಿ ಮಗನೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಆರೋಪಿ 3 ನೇಯವನು ಬಡಿಯಿಂದ ಕೈಗೆ ಹೊಡೆದಾಗ ಪಿರ್ಯಾದಿಯು ಮಧ್ಯ ಪ್ರವೇಶಿಸಿ ಬಿಡಿಸಲು ಹೋದಾಗ ಆರೋಪಿ 1 ಮತ್ತು 2 ನೇಯವರು ಪಿರ್ಯಾದಿಯನ್ನು ಹಿಡಿದುಕೊಂಡಾಗ ಆರೋಪಿ 3 ನೇಯವನು ಪಿರ್ಯಾದಿಯ ತಲೆಗೆ ಬಡಿಗೆಯಿಂದ ಹೊಡೆದು ರಕ್ತಗಾಯ ಪಡಿಸಿದ್ದಲ್ಲದೇ, ಆರೋಪಿ 5 ಮತ್ತು 6 ನೇಯವರು ಕೈಯಿಂದ ಪಿರ್ಯಾದಿಗೆ ಹೊಡೆಯ ತೊಡಗಿದಾಗ ಪಿರ್ಯಾದಿಯ ತಂದೆಯು ಬಿಡಿಸಲು ಹೋದಾಗ ಆರೋಪಿತರೆಲ್ಲರೂ ಸೇರಿ ಪಿರ್ಯಾದಿಯ ತಂದೆಗೆ ಕೈಯಿಂದ ಹೊಡೆದು ದೂಡಿ ಹಾಕಿದ್ದಲ್ಲದೇ, ಆರೋಪಿತರೆಲ್ಲರೂ ಪಿರ್ಯಾದಿ ಹಾಗೂ ಪಿರ್ಯಾದಿಯ ತಂದೆಗೆ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ಮಂಜುನಾಥ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಾನಗೋಡ, ತಾ: ಸಿದ್ದಾಪುರ ರವರು ದಿನಾಂಕ: 27-05-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: 269, 270, 336 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಿವಾನಂದ ಬಸವರಾಜ ಚನ್ನಯ್ಯ, ಪ್ರಾಯ-22 ವರ್ಷ, ವೃತ್ತಿ-ಕೂಲಿ ಕೆಲಸ, 2]. ಮಂಜು ಬಸವ ಚನ್ನಯ್ಯ, ಪ್ರಾಯ-28 ವರ್ಷ, ವೃತ್ತಿ-ಕೂಲಿ ಕೆಲಸ, 3]. ನವೀನ ನಾಗರಾಜ ಚನ್ನಯ್ಯ, ಪ್ರಾಯ-20 ವರ್ಷ, ವೃತ್ತಿ-ಕೂಲಿ ಕೆಲಸ, 4]. ದುರ್ಗೇಶ ಸುರೇಶ ಚನ್ನಯ್ಯ, ಪ್ರಾಯ-22 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| (ಎಲ್ಲರೂ) ಹೂವಿನ ಕೊಪ್ಪಲಕೇರಿ, ಬನವಾಸಿ, ತಾ: ಶಿರಸಿ. ಈ ನಮೂದಿತ ಆರೋಪಿತರು ದೇಶಾದ್ಯಂತ ಕೊರೋನಾ ಕರ್ಫ್ಯೂ (ಲಾಕಡೌನ್) ಆದೇಶ ಇದ್ದರೂ ಸಹ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ, ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗವನ್ನು ಹರಡಲು ಮುಂಜಾಗೃತಾ ಕ್ರಮವಾದ ಮುಖಕ್ಕೆ ಮಾಸ್ಕ್ ಧರಿಸಿದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ದಿನಾಂಕ: 27-05-2021 ರಂದು 19-25 ಗಂಟೆಗೆ ದ್ವೇಷಪೂರ್ವಕವಾಗಿ ಅನಗತ್ಯವಾಗಿ ಕದಂಬ ಮೈದಾನದಲ್ಲಿ ಒಬ್ಬರಿಗೊಬ್ಬರು ತಾಗಿಕೊಂಡು ಕುಳಿತು ಹರಟೆ ಹೊಡೆಯುತ್ತಾ ನಿರ್ಲಕ್ಷ್ಯತನ ತೋರಿದವರಲ್ಲಿ ಆರೋಪಿ 1 ನೇಯವನು ಸ್ಥಳದಲ್ಲೇ ಸೆರೆ ಸಿಕ್ಕು ಹಾಗೂ ಉಳಿದ ಆರೋಪಿತರಾದ 2, 3 ಹಾಗೂ 4 ನೇಯವರು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಎಸ್. ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 27-05-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 27-05-2021

at 00:00 hrs to 24:00 hrs

 

ಮುರ್ಡೇಶ್ವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 14/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ರವೀಂದ್ರ ತಂದೆ ಶಂಕರ ಶೇಟ್, ಪ್ರಾಯ-55 ವರ್ಷ, ವೃತ್ತಿ-ಬ್ಯಾಂಕ್ ನೌಕರ, ಸಾ|| ಜನತಾ ಕಾಲೋನಿ, ತೆರ್ನಮಕ್ಕಿ, ಪೋ: ಕಾಯ್ಕಿಣಿ, ತಾ: ಭಟ್ಕಳ. ಈತನು ಪಿರ್ಯಾದಿಯ ಬ್ಯಾಂಕಿನಲ್ಲಿ ಕಳೆದ ಒಂದು ವರ್ಷದ ಹಿಂದೆ ವಿ.ಆರ್.ಎಸ್ ನಿವೃತ್ತ ಉದ್ಯೋಗಿಯಾಗಿದ್ದು, ತೆರ್ನಮಕ್ಕಿಯ ಜನತಾ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಒಂದು ವಾರದ ಹಿಂದಿನಿಂದ ಅವರಿಗೆ ಬಿಕ್ಕಳಿಕೆ ಉಂಟಾಗಿ ಶಿರಾಲಿಯ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು. ಹೀಗಿರುತ್ತಾ ದಿನಾಂಕ: 27-05-2021 ರಂದು ರಾತ್ರಿ 02-15 ಗಂಟೆಯ ಸುಮಾರಿಗೆ ಹೃದಯಘಾತದಿಂದಲೋ ಅಥವಾ ಇನ್ನಾವುದೋ ಕಾಯಿಲೆಯಿಂದಲೋ ಮೃತಪಟ್ಟಿದ್ದದ್ದು, ಮೃತದೇಹವು ಜನತಾ ಕಾಲೋನಿಯ ತೆರ್ನಮಕ್ಕಿಯ ಬಾಡಿಗೆ ಮನೆಯಲ್ಲಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ಜಟ್ಟಾ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಬ್ಯಾಂಕ್ ನೌಕರ, ಸಾ|| ತೆರ್ನಮಕ್ಕಿ, ಪೋ: ಕಾಯ್ಕಿಣಿ, ತಾ: ಭಟ್ಕಳ. ರವರು ದಿನಾಂಕ: 27-05-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 10/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಚಂದ್ರಶೇಖರ ತಂದೆ ಅಣ್ಣಪ್ಪ ಶೆಟ್ಟಿ, ಪ್ರಾಯ-49 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮಾರುಕೇರಿ, ಹೂತ್ಕಳ, ತಾ: ಭಟ್ಕಳ. ಈತನು ದಿನಾಂಕ: 27-05-2021 ರಂದು ಬೆಳಿಗ್ಗೆ 10-00 ಗಂಟೆಯ ಸಮಯಕ್ಕೆ ತಮ್ಮ ತೋಟದ ಅಡಿಕೆ ಮರ ಹತ್ತಿ ಔಷಧ ಸಿಂಪಡಿಸುತ್ತಿರುವಾಗ ಆಕಸ್ಮಿಕವಾಗಿ ಅಡಿಕೆ ಮರ ಮುರಿದು ಮರದಿಂದ ಕೆಳಗೆ ಬಿದ್ದು, ತಲೆ ಹಾಗೂ ಬೆನ್ನಿನ ಭಾಗದಲ್ಲಿ ಒಳ ಪೆಟ್ಟಾದವನಿಗೆ ಉಪಚಾರದ ಕುರಿತು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಕೋಟಾ ಆಚಾರ್ಯ ಆಸ್ಪತ್ರೆಯ ಹತ್ತಿರ ಸಮಯ 12-45 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು, ಇದರ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶರಣೇಶ ತಂದೆ ಚಂದ್ರಶೇಖರ ಶೆಟ್ಟಿ, ಪ್ರಾಯ-23 ವರ್ಷ, ವೃತ್ತಿ-ಕೆ.ಇ.ಬಿ ದಿನಗೂಲಿ ನೌಕರ, ಸಾ|| ಮಾರುಕೇರಿ, ಹೂತ್ಕಳ, ತಾ: ಭಟ್ಕಳ ರವರು ದಿನಾಂಕ: 27-05-2021 ರಂದು 14-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 22/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಕೃಷ್ಣ ತಂದೆ ಶ್ರೀನಿವಾಸ ಗಾಣಿಗ, ಪ್ರಾಯ-29 ವರ್ಷ, ವೃತ್ತಿ-ಚಾಲಕ, ಸಾ|| ಕೊಂಡ್ಲಿ, ಮಾರಿಕಾಂಬಾ ನಗರ, ಸಿದ್ದಾಪುರ ಶಹರ. ಈತನು ಪಿರ್ಯಾದಿಯವರ ಮಗ ಇದ್ದು. ಸಿದ್ದಾಪುರ ಶಹರದ ಕೃಷ್ಣ ಐಸಕ್ರೀಮ್ ಗಾಡಿಯ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದವನು. ಸದ್ಯ ಕೊರೋನಾ ರೋಗ ಹರಡುವಿಕೆಯ ಪರಿಣಾಮ ಲಾಕಡೌನ್ ಆದಾಗಿನಿಂದ ಕೆಲಸ ಇಲ್ಲದೇ ಮನೆಯಲ್ಲಿಯೇ ಇರುತ್ತಿದ್ದರಿಂದ ಹಾಗೂ ಆತನಿಗಿದ್ದ ಎಡಭುಜದ ಕೀಲು ತಪ್ಪುವ ಸಮಸ್ಯೆಯನ್ನು ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿದ್ದವನು. ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 27-05-2021 ರಂದು ಸಂಜೆ 18-00 ಗಂಟೆಯಿಂದ 19-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ವಾಸದ ಮನೆಯಲ್ಲಿ ಆತನು ನಿತ್ಯ ಮಲಗುವ ಕೋಣೆಯಲ್ಲಿನ ಪಕಾಶಿಗೆ ಪಂಚೆಯನ್ನು ಕಟ್ಟಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಶ್ರೀನಿವಾಸ ತಂದೆ ಕೃಷ್ಣ ಗಾಣಿಗ, ಪ್ರಾಯ-58 ವರ್ಷ, ವೃತ್ತಿ-ಚಾಲಕ, ಸಾ|| ಕೊಂಡ್ಲಿ, ಮಾರಿಕಾಂಬಾ ನಗರ, ಸಿದ್ದಾಪುರ ಶಹರ ರವರು ದಿನಾಂಕ: 27-05-2021 ರಂದು 23-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 28-05-2021 01:26 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080