ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 27-10-2021
at 00:00 hrs to 24:00 hrs
ಸಂಚಾರ ಪೊಲೀಸ್ ಠಾಣೆ ಕಾರವಾರ
ಅಪರಾಧ ಸಂಖ್ಯೆಃ 22/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ವಿನೋದ ತಂದೆ ಚೌಂಡು ಹರಿಕಂತ್ರ, ಪ್ರಾಯ-38 ವರ್ಷ, ವೃತ್ತಿ-ಮೀನುಗಾರಿಕೆ ಕೆಲಸ, ಸಾ|| ಸರ್ವೋದಯ ನಗರ, ಕಾರವಾರ (ಮೋಟಾರ್ ಸ್ಕೂಟರ್ ನಂ: ಕೆ.ಎ-30/ಎಸ್-7421 ನೇದರ ಸವಾರ). ಈತನು ಪಿರ್ಯಾದಿಯ ಕೇರಿಯವನಾಗಿದ್ದು, ದಿನಾಂಕ: 27-10-2021 ರಂದು ರಾತ್ರಿ 19-10 ಗಂಟೆಗೆ ತನ್ನ ಮೋಟಾರ್ ಸ್ಕೂಟರ್ ನಂ: ಕೆ.ಎ-30/ಎಸ್-7421 ನೇದರ ಹಿಂದಿನ ಸೀಟಿನಲ್ಲಿ ಓರ್ವ ಮಹಿಳೆಯನ್ನು ಕೂಡ್ರಿಸಿಕೊಂಡು ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಸರ್ವೀಸ್ ರಸ್ತೆಯಲ್ಲಿ ತನ್ನ ಮೋಟಾರ್ ಸ್ಕೂಟರನ್ನು ಅಡ್ಡಾದಿಡ್ಡಿಯಾಗಿ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ವಿವೇಕಾನಂದ ನಗರದ ಕ್ರಾಸ್ ಹತ್ತಿರ ವಿವೇಕಾನಂದ ನಗರದ ಕಡೆಯಿಂದ ಯಾವುದೋ ಒಂದು ಬೀಡಾಡಿ ದನ ರಸ್ತೆಯಲ್ಲಿ ಅಡ್ಡ ಬಂದಿದ್ದರಿಂದ ತನ್ನ ಸ್ಕೂಟರಿನ ವೇಗವನ್ನು ನಿಯಂತ್ರಿಸಲಾಗದೇ ದಿಢೀರ್ ಅಂತಾ ಬ್ರೇಕ್ ಹಾಕಿ ತಾನು ಹಾಗೂ ಮೋಟಾರ್ ಸ್ಕೂಟರಿನ ಹಿಂದಿನ ಸೀಟಿನಲ್ಲಿ ಕುಳಿತ ಮಹಿಳೆಯ ಸಮೇತ ರಸ್ತೆಯ ಮೇಲೆ ಬೀಳುವಂತೆ ಮಾಡಿ ಅಪಘಾತ ಪಡಿಸಿ, ಮೋಟಾರ್ ಸ್ಕೂಟರ್ ಹಿಂಬದಿ ಸವಾರಳಾದ ಪಿರ್ಯಾದಿಯ ಅತ್ತಿಗೆಯಾದ ಶ್ರೀಮತಿ ಕಮಲಾ ಇವರಿಗೆ ತಲೆಯ ಒಳಭಾಗದಲ್ಲಿ ಭಾರೀ ಗಾಯವಾಗಿ, ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಸುರಿಯುವಂತೆ ಹಾಗೂ ಬಲಕಿವಿಗೆ ರಕ್ತಗಾಯ ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸ್ಕೂಟರ್ ಸವಾರನು ತನಗೂ ಸಹ ಬಲಗೈ ಮುಷ್ಠಿಯ ಹತ್ತಿರ ತೆರಚಿದ ಗಾಯ, ಮುಖದಲ್ಲಿ ಗದ್ದದ ಹತ್ತಿರ ರಕ್ತಗಾಯ ಹಾಗೂ ಬಲಗಾಲಿನ ಹೆಬ್ಬೆರಳಿಗೆ ರಕ್ತಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಅಣ್ಣಪ್ಪ ತಂದೆ ಟೊಂಕು ಕುಡ್ತಲಕರ, ಪ್ರಾಯ-45 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಸರ್ವೋದಯ ನಗರ, ಕಾರವಾರ ರವರು ದಿನಾಂಕ: 27-10-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕಾರವಾರ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 86/2021, ಕಲಂ: 406, 409, 420, 468 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಂದೀಪ ಸಿ. ಹರಿಜನ, ಪ್ರಾಯ-31 ವರ್ಷ, ಸಾ|| ಹರಿಜನ ಲೇನ್, ಸುತಕಟ್ಟಿ, ಹಲಗಿಮರಡಿ, ತಾ: ಬೆಂಡಿಗೇರಿ, ಜಿ: ಬೆಳಗಾವಿ, 2]. ಶ್ರೀಮತಿ ಉಮಾ ವಸಂತ ನಾಯ್ಕ್, ಸಾ|| ಕೆರೆಮನೆ, ಬೆಳಗದ್ದೆ, ಹೆಬಳೆ, ತಾ: ಭಟ್ಕಳ ಹಾಗೂ ಇತರರು. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಈ ಹಿಂದೆ ನ್ಯಾಬ್ ಫಿನ್ಸ್ ಸಂಸ್ಥೆ ಕಾರವಾರದಲ್ಲಿ ಎಫ್.ಎಸ್.ಓ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಭಟ್ಕಳದ ಪ್ರಗತಿ ಸಿ.ಎಮ್.ಆರ್.ಸಿ ಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯಾದ ಆರೋಪಿತೆ 2 ನೇಯವಳು ಸ್ವಸಹಾಯ ಸಂಘಗಳಿಂದ ನಗದು ರೂಪದಲ್ಲಿ ಪಡೆದ ಸಾಲದ ಮರು ಪಾವತಿ ಹಣವನ್ನು ನಿಗದಿತ ಬ್ಯಾಂಕ್ ಗಳಿಗೆ ಭರಣ ಮಾಡದೇ ನ್ಯಾಬ್ ಫಿನ್ಸ್ ರವರ ನಿಯಮಗಳಿಗೆ ವಿರುದ್ಧವಾಗಿ ಆರೋಪಿ 1 ನೇಯವನ ಬ್ಯಾಂಕ್ ಖಾತೆಗೆ ಜಮಾ ಮಾಡಿ, ಆರೋಪಿ 1 ಹಾಗೂ 2 ನೇವರು ತಮ್ಮ ಸ್ವಂತಕ್ಕೆ ಬಳಸಿಕೊಂಡು, ಕಾರವಾರದ ನವೋದಯ ಸಂಪನ್ಮೂಲ ಕೇಂದ್ರ, ಮನುವಿಕಾಸ ಬಿ&ಡಿಸಿ, ಸ್ಕೋಡವೇಸ್ ಬಿ&ಡಿಸಿ ಹಾಗೂ ಅಂಕೋಲಾ ನಿಸರ್ಗ ಸಂಪನ್ಮೂಲ ಕೇಂದ್ರ ದವರು ಸ್ವ-ಸಹಾಯ ಸಂಘದವರಿಂದ ಸಾಲದ ಮರು ಪಾವತಿ ಹಣ ಪಡೆದು ಅದನ್ನು ನಿಗದಿತ ಬ್ಯಾಂಕಿಗೆ ಭರಣ ಮಾಡಿದ್ದನ್ನು, ಆರೋಪಿ 1 ನೇಯವನು ಸಂಸ್ಥೆಯ ಸಿ.ಎಮ್.ಎಸ್ ತಂತ್ರಾಂಶದಲ್ಲಿ ಹಣ ಮರು ಪಾವತಿಯ ಲೆಕ್ಕಗಳನ್ನು ಭರಣ ಮಾಡುವಾಗ ಸಂಸ್ಥೆಗೆ ಮೋಸ ಮಾಡುವ ಉದ್ದೇಶದಿಂದ ಭಟ್ಕಳದ ಸಿ.ಎಮ್.ಆರ್.ಸಿ ಯವರು ಸಾಲ ಮರು ಪಾವತಿಯ ಹಣ ಭರಣ ಮಾಡಿದ ಲೆಕ್ಕಗಳಿಗೆ ಕಾರವಾರದ ನವೋದಯ ಸಂಪನ್ಮೂಲ ಕೇಂದ್ರ, ಮನುವಿಕಾಸ ಬಿ&ಡಿಸಿ, ಸ್ಕೋಡವೇಸ್ ಬಿ&ಡಿಸಿ ಹಾಗೂ ಅಂಕೋಲಾ ನಿಸರ್ಗ ಸಂಪನ್ಮೂಲ ಕೇಂದ್ರ ದವರು ಭರಣ ಮಾಡಿದ ಹಣವನ್ನು ಸರಿದೂಗಿಸಿ, ಕಾರವಾರದ ನವೋದಯ ಸಂಪನ್ಮೂಲ ಕೇಂದ್ರ, ಮನುವಿಕಾಸ ಬಿ&ಡಿಸಿ, ಸ್ಕೋಡವೇಸ್ ಬಿ&ಡಿಸಿ ಹಾಗೂ ಅಂಕೋಲಾ ನಿಸರ್ಗ ಸಂಪನ್ಮೂಲ ಕೇಂದ್ರದ ಸಾಲದ ಮರು ಪಾವತಿಯನ್ನು ಭಟ್ಕಳ ಸಿ.ಎಮ್.ಆರ್.ಸಿ ಯವರ ಮರು ಪಾವತಿ ಎಂದು ತೋರಿಸಿ, ಕಾರವಾರದ ನವೋದಯ ಸಂಪನ್ಮೂಲ ಕೇಂದ್ರದ 2,57,874/- ರೂಪಾಯಿ, ಮನುವಿಕಾಸ ಬಿ&ಡಿಸಿ ಯವರ 58,667/- ರೂಪಾಯಿ, ಸ್ಕೋಡವೇಸ್ ಬಿ&ಡಿಸಿ ಯವರ 52,061/- ರೂಪಾಯಿ ಹಾಗೂ ಅಂಕೋಲಾ ನಿಸರ್ಗ ಸಂಪನ್ಮೂಲ ಕೇಂದ್ರದ 08,64,749/- ರೂಪಾಯಿ. ಹೀಗೆ ಒಟ್ಟು 16,37,809/- ರೂಪಾಯಿ ನ್ಯಾಬ್ ಫಿನ್ಸ್ ರವರ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡು ನ್ಯಾಬ್ ಫಿನ್ಸ್ ಸಂಸ್ಥೆಗೆ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಮಧುಕರ ತಂದೆ ಗೋಪಾಲಕೃಷ್ಣ ಯಾದವ, ಪ್ರಾಯ-42 ವರ್ಷ, ವೃತ್ತಿ-ಪ್ರಾದೇಶಿಕ ವ್ಯವಸ್ಥಾಪಕರು, ನ್ಯಾಬ್ ಫಿನ್ಸ್, ಸಾ|| ಬೆಳಗಾವಿ ರವರು ದಿನಾಂಕ: 27-10-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಗೋಕರ್ಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 76/2021, ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ನಾಗೇಶ ತಂದೆ ಚಂದ್ರು ಗೌಡ, ಪ್ರಾಯ-38 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ಬಾವಿಕೊಡ್ಲ, ಗೋಕರ್ಣ, ತಾ: ಕುಮಟಾ. ಈತನು ದಿನಾಂಕ: 27-10-2021 ರಂದು 18-45 ಗಂಟೆಗೆ ಬಾವಿಕೊಡ್ಲ ಗ್ರಾಮದ ಪತಂಗ ಬೀಚ್ ರೆಸಾರ್ಟ್ ಕ್ರಾಸ್ ಹತ್ತಿರ ಕಿರಾಣಿ ಅಂಗಡಿಯ ಪಕ್ಕದ ತಾತ್ಕಾಲಿಕ ಶೆಡ್ ಒಳಗೆ ಸಾರ್ವಜನಿಕರಿಗೆ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾದಿ ಮತ್ತು ಅವರ ಸಿಬ್ಬಂದಿಯವರು ಕೂಡಿ ಮುತ್ತಿಗೆ ಹಾಕಿ ದಾಳಿ ಮಾಡಿದಾಗ ORIGINAL CHOICE WHISKY, 90 ML ಅಂತಾ ಬರೆದ 03 ಪ್ಯಾಕೆಟ್ ಗಳು (ಪೌಚ್ ಗಳು), ಅ||ಕಿ|| 105.39/- ರೂಪಾಯಿ ಹಾಗೂ ORIGINAL CHOICE WHISKY, 90 ML ಅಂತಾ ಲೇಬಲ್ ಇರುವ 1 ಖಾಲಿ ಪೌಚ್ ಮತ್ತು 2 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಹಾಗೂ ನಗದು ಹಣ 80/- ರೂಪಾಯಿಗಳೊಂದಿಗೆ ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪಿ.ಎಸ್.ಐ (ಕಾ&ಸು), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 27-10-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕುಮಟಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 181/2021, ಕಲಂ: 9(ಬಿ) ಎಕ್ಸಪ್ಲೋಸಿವ್ ಎಕ್ಟ್-1884 ಹಾಗೂ ಕಲಂ: 4, 5, 6 ಎಕ್ಸಪ್ಲೋಸಿವ್ ಸಬಸ್ಟಾನ್ಸಸ್ ಎಕ್ಟ್-1908 ನೇದ್ದರ ವಿವರ...... ನಮೂದಿತ ಯಾರೋ ಆರೋಪಿತರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 27-10-2021 ರಂದು ಸಾಯಂಕಾಲ 06-20 ಗಂಟೆಯ ಸುಮಾರಿಗೆ ಪಿರ್ಯಾದಿಯವರು ಠಾಣಾ ಪ್ರಭಾರದಲ್ಲಿರುವಾಗ ತಮ್ಮ ಠಾಣೆಯ ಸಿ.ಚ್.ಸಿ-853 ಶ್ರೀ ಪ್ರಕಾಶ ನಾಯ್ಕ ಇವರು ಪಿರ್ಯಾದಿಯವರಿಗೆ ಮೊಬೈಲ್ ಮೂಲಕ ಕರೆ ಮಾಡಿ, ತನ್ನ ಪರಿಚಯದವರಾದ ಜನಾರ್ಧನ ಗಣಪತಿ ನಾಯ್ಕ, ಸಾ|| ವಿವೇಕನಗರ, ತಾ: ಕುಮಟಾ ಇವರು ವಿವೇಕನಗರದ ಪಾಲಿಟೆಕ್ನಿಕ್ ಕಾಲೇಜ್ ಹಿಂಭಾಗದ ಗುಡ್ಡದ ಮೇಲೆ ವಾಯುವಿಹಾರ ಮಾಡುತ್ತಿರುವಾಗ ಸದರ ಗುಡ್ಡದ ಮೇಲೆ ಯಾವುದೋ ಸ್ಫೋಟಕ ನಮೂನೆಯ ವಸ್ತು ಇರುವ ಬಗ್ಗೆ ಫೋನ್ ಮಾಡಿ ತಿಳಿಸಿರುವುದಾಗಿ ಮಾಹಿತಿ ನೀಡಿದರು. ಆ ಮಾಹಿತಿ ಮೇರೆಗೆ ಕೂಡಲೇ ಪಿರ್ಯಾದಿಯವರು ಈ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ, ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಪಾಲಿಟೆಕ್ನಿಕ್ ಕಾಲೇಜ್ ಹತ್ತಿರ ಮಾಹಿತಿ ಬಂದ ಸ್ಥಳಕ್ಕೆ ಹೋಗಿ, ಅಲ್ಲಿದ್ದ ಜನಾರ್ಧನ ಗಣಪತಿ ನಾಯ್ಕ ಮತ್ತು ವಿಷ್ಣು ಹೊಸ್ಕಟ್ಟಾ, ನಿವೃತ್ತ ಕಂದಾಯ ನೌಕರರು, ತಾ: ಕುಮಟಾ ಇವರುಗಳಿಂದ ಮಾಹಿತಿ ಪಡೆದುಕೊಂಡು, ಮೊದಲ ಬಾರಿಗೆ ಆ ವಸ್ತುವನ್ನು ದಿನಾಂಕ: 27-10-2021 ರಂದು ಸಾಯಂಕಾಲ 06-15 ಗಂಟೆಯ ಸುಮಾರಿಗೆ ವಿಷ್ಣು ಹೊಸ್ಕಟ್ಟಾ ರವರು ನೋಡಿ, ಆ ವಿಷಯವನ್ನು ಜನಾರ್ಧನ ನಾಯ್ಕ ರವರಿಗೆ ತಿಳಿಸಿದ ಬಗ್ಗೆ ತಿಳಿದು ಬಂದಿದ್ದು. ನಂತರ ಸದರಿ ಸ್ಥಳದಲ್ಲಿ ಯಾವುದೋ ಸ್ಫೋಟಕ ನಮೂನೆಯ ವಸ್ತು ಬಿದ್ದುಕೊಂಡಿದ್ದು, ಅದಕ್ಕೆ ಇಲೆಕ್ಟ್ರಿಕ್ ವಾಯರ್ ಮತ್ತು ಎರಡು ಸಣ್ಣ ಬ್ಯಾಟರಿಗಳು ಹಾಗೂ ಇತರೆ ವಸ್ತುಗಳನ್ನು ಅಳವಡಿಸಿರುವುದು ಕಂಡು ಬಂದಿರುತ್ತದೆ. ಮೇಲ್ನೋಟಕ್ಕೆ ಅದು ಯಾವುದೋ ಸುಧಾರಿತ ಸ್ಪೋಟಕ ವಸ್ತು (ಐ.ಇ.ಡಿ) ವಿನಂತೆ ಕಂಡು ಬಂದಿರುತ್ತದೆ. ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷತೆಯ ದೃಷ್ಟಿಯಿಂದ ಸದರಿ ಸ್ಥಳವನ್ನು ಸಂರಕ್ಷಿಸಲಾಗಿರುತ್ತದೆ. ಸದರಿ ಸ್ಥಳವು ಗುಡ್ಡ ಪ್ರದೇಶವಾಗಿದ್ದು, ಅಲ್ಲಿಂದ ಸುಮಾರು 150 ಮೀಟರ್ ದೂರದಲ್ಲಿ ಕುಮಟಾದ ರೈಲ್ವೇ ನಿಲ್ದಾಣ ಇರುತ್ತದೆ. ಸದರಿ ವಸ್ತು ಇರುವ ಗುಡ್ಡದ ಕೆಳಭಾಗದಲ್ಲಿ ಸುಮಾರು 60 ಮೀಟರ್ ದೂರದಲ್ಲಿ ಕೊಂಕಣ ರೈಲ್ವೇ ಮಾರ್ಗ ಹಾದು ಹೋಗಿರುತ್ತದೆ. ಯಾರೋ ಆರೋಪಿತ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಸದರಿ ಸುಧಾರಿತ ಸ್ಫೋಟಕ ನಮೂನೆಯ ವಸ್ತುವನ್ನು ಯಾವುದೋ ಕಾರಣಕ್ಕೆ ದಿನಾಂಕ: 27-10-2021 ರಂದು ಸಾಯಂಕಾಲ 06-15 ಗಂಟೆಯ ಪೂರ್ವದಲ್ಲಿ ಸ್ಥಳದಲ್ಲಿ ಇಟ್ಟಿದ್ದರಿಂದ ಸದರಿ ಆರೋಪಿತ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 27-10-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 280/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುರೇಶ ತಂದೆ ನಾರಾಯಣ ಗೌಡ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಊರುಕೇರಿ, ತಲಗೋಡ, ತಾ: ಕುಮಟಾ (ಸ್ಕೂಟರ್ ನಂ: ಕೆ.ಎ-47/ಡಬ್ಲ್ಯೂ-7616 ನೇದರ ಸವಾರ). ಈತನು ದಿನಾಂಕ: 27-10-2021 ರಂದು 15-00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊನ್ನಾವರದ ಕರ್ಕಿ ಮಠದಕೇರಿ ಕ್ರಾಸ್ ಹತ್ತಿರ ತನ್ನ ಬಾಬ್ತು ಸ್ಕೂಟರ್ ನಂ: ಕೆ.ಎ-47/ಡಬ್ಲ್ಯೂ-7616 ನೇದನ್ನು ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ತನ್ನ ಮುಂದಿನಿಂದ ಅಂದರೆ ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಟ್ಯಾಂಕರ್ ಲಾರಿ ನಂ: ಕೆ.ಎ-19/ಎ.ಡಿ-3766 ನೇದರ ಚಾಲಕನು ಚಲಾಯಿಸಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಲಾರಿಯನ್ನು ಹಿಂದಿಕ್ಕುವ ಪ್ರಯತ್ನದಲ್ಲಿ ಟ್ಯಾಂಕರ್ ಲಾರಿಯ ಹಿಂಬದಿಯ ಬಲಬದಿ ಟಾಯರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದಲ್ಲದೇ, ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಒಮ್ಮೇಲೆ ತನ್ನ ಸ್ಕೂಟರನ್ನು ರಸ್ತೆಯ ಬಲಕ್ಕೆ ಚಲಾಯಿಸಿ, ಪಿರ್ಯಾದಿಯು ಕರ್ಕಿ ಕಡೆಯಿಂದ ಹೊನ್ನಾವರ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಪಿರ್ಯಾದಿಯ ಬಾಬ್ತು ಆಟೋ ರಿಕ್ಷಾ ನಂ: ಕೆಎ-47/5537 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಜಖಂ ಪಡಿಸಿದ್ದಲ್ಲದೇ, ಆರೋಪಿ ಸ್ಕೂಟರ್ ಸವಾರನು ತಾನೂ ಸಹ ತನ್ನ ಸ್ಕೂಟರ್ ಸಮೇತ ರಸ್ತೆಯ ಮೇಲೆ ಬಿದ್ದು ತನ್ನ ತಲೆಗೆ, ಬಲಗೈ ಭುಜಕ್ಕೆ, ಬಲಗೈ ಮೊಣಗಂಟಿಗೆ ಹಾಗೂ ಮೈ ಮೇಲೆ ಅಲ್ಲಲ್ಲಿ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಹನುಮಂತ ತಂದೆ ಗಣಪು ಮುಕ್ರಿ, ಪ್ರಾಯ-46 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಕರ್ಕಿ, ಕೋಣಕಾರ, ತಾ: ಹೊನ್ನಾವರ ರವರು ದಿನಾಂಕ: 27-10-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 281/2021, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಮೋಟಾರ್ ಸೈಕಲ್ ನಂ: ಕೆ.ಎ-30/ಜೆ-218 ನೇದರ ಚಾಲಕನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 27-10-2021 ರಂದು ಹೊನ್ನಾವರದ ಕಾಮತ್ ಹೊಟೇಲ್ ಎದುರು ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-30/ಜೆ-218 ನೇದನ್ನು ಹೊನ್ನಾವರದ ಗೇರುಸೊಪ್ಪ ಸರ್ಕಲ್ ಕಡೆಯಿಂದ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಯಾವುದೇ ಸಿಗ್ನಲ್ ತೋರಿಸದೇ ಹೆದ್ದಾರಿ ಪಶ್ಚಿಮ ಬದಿಯ ಕಾಮತ್ ಹೊಟೇಲ್ ಪಕ್ಕದ ರಸ್ತೆ ಕಡೆಗೆ ಮೋಟಾರ ಸೈಕಲ್ ಚಲಾಯಿಸಿ, ತನ್ನ ಬದಿಯಿಂದ ಅಂದರೆ ಶರಾವತಿ ಸರ್ಕಲ್ ಕಡೆಯಿಂದ ಗೇರುಸೊಪ್ಪ ಸರ್ಕಲ್ ಕಡೆಗೆ ಪಿರ್ಯಾದಿ ಮಗ ಸಂತೋಷ ತಂದೆ ಗಣೇಶ ಶೇಟ್, ಪ್ರಾಯ-24 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ಕರ್ಕಿ, ತಾ: ಹೊನ್ನಾವರ ಇವರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್ ನಂ: ಕೆ.ಎ-47/ಯು-2959 ನೇದಕ್ಕೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿ, ಸಂತೋಷ ಶೇಟ್ ಇವರ ಬಲಗೈಗೆ ದುಖಾಪತ್ ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ಅಪಘಾತದ ನಂತರ ಅಪಘಾತದ ಸ್ಥಳದಲ್ಲಿ ತನ್ನ ಮೋಟಾರ ಸೈಕಲ್ ಬಿಟ್ಟು ಸ್ಥಳದಿಂದ ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ಮಾಬ್ಲೇಶ್ವರ ಶೇಟ್, ಪ್ರಾಯ-58 ವರ್ಷ, ವೃತ್ತಿ-ಬಂಗಾರ ಕೆಲಸ, ಸಾ|| ಮಠದ ಹತ್ತಿರ, ಕರ್ಕಿ, ತಾ: ಹೊನ್ನಾವರ ರವರು ದಿನಾಂಕ: 27-10-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 282/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹನುಮಂತ ತಂದೆ ಗಣಪು ಮುಕ್ರಿ, ಪ್ರಾಯ-46 ವರ್ಷ, ವೃತ್ತಿ-ಆಟೋ ಚಾಲಕ, ಸಾ|| ಕರ್ಕಿ, ಕೋಣಕಾರ, ತಾ: ಹೊನ್ನಾವರ (ಆಟೋ ರಿಕ್ಷಾ ನಂ: ಕೆ.ಎ-47/5537 ನೇದರ ಚಾಲಕ). ಈತನು ದಿನಾಂಕ: 27-10-2021 ರಂದು 15-00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊನ್ನಾವರದ ಕರ್ಕಿ ಮಠದಕೇರಿ ಕ್ರಾಸ್ ಹತ್ತಿರ ತನ್ನ ಬಾಬ್ತು ಆಟೋ ರಿಕ್ಷಾ ನಂ: ಕೆ.ಎ-47/5537 ನೇದನ್ನು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಗಾಯಾಳು ಸುರೇಶ ತಂದೆ ನಾರಾಯಣ ಗೌಡ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಊರುಕೇರಿ, ತಲಗೋಡ, ತಾ: ಕುಮಟಾ ಈತನು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್ ನಂ: ಕೆ.ಎ-47/ಡಬ್ಲ್ಯೂ-7616 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸ್ಕೂಟರ್ ಸವಾರನಾದ ಸುರೇಶ ತಂದೆ ನಾರಾಯಣ ಗೌಡ, ಈತನ ತಲೆಗೆ, ಬಲಗೈ ಭುಜಕ್ಕೆ, ಬಲಗೈ ಮೊಣಗಂಟಿಗೆ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಮಾ ತಂದೆ ಜಟ್ಟು ಗೌಡ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಗ್ರಹಾರ, ಹಳದಿಪುರ, ತಾ: ಹೊನ್ನಾವರ ರವರು ದಿನಾಂಕ: 27-10-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 70/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶ್ರೇಯಸ ಮಾಲಗತ್ತಿ, ಸಾ|| ವಿದ್ಯಾನಗರ, ಹುಬ್ಬಳ್ಳಿ (ಕಾರ್ ನಂ: ಜಿ.ಎ-04/ಸಿ-1812 ನೇದರ ಚಾಲಕ). ಈತನು ದಿನಾಂಕ: 26-10-2021 ರಂದು ಮಧ್ಯಾಹ್ನ 15-30 ಗಂಟೆಯ ಸಮಯಕ್ಕೆ ತನ್ನ ಕಾರ್ ನಂ: ಜಿ.ಎ-04/ಸಿ-1812 ನೇದರಲ್ಲಿ ಗಾಯಾಳುಗಳಾದ 1). ಪಿರ್ಯಾದಿ, 2). ಶ್ರೇಯಾ ಪಾಟೀಲ, ಸಾ|| ಹುಬ್ಬಳ್ಳಿ ಹಾಗೂ 3). ಮೃತ: ವಿಕ್ರಮ ತಂದೆ ವೀರಣ್ಣಗೌಡ ಪಾಟೀಲ್, ಪ್ರಾಯ-20 ವರ್ಷ, ಸಾ|| ವಿಶ್ವೇಶ್ವರನಗರ, ಹುಬ್ಬಳ್ಳಿ ಇವರನ್ನು ಕೂಡ್ರಿಸಿಕೊಂಡು ದಾಂಡೇಲಿಯಿಂದ ಹಳಿಯಾಳ ಕಡೆಗೆ ಕಾರನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ, ದಾಂಡೇಲಿ-ಹಳಿಯಾಳ ರಾಜ್ಯ ಹೆದ್ದಾರಿ ಸಂಖ್ಯೆ-46 ರಲ್ಲಿ ಬರುವ ಕರ್ಕಾ ನಾಕಾದಿಂದ ಸ್ವಲ್ಪ ದೂರ ಹಳಿಯಾಳ ಕಡೆಗೆ ರಸ್ತೆ ದಾಟುತ್ತಿದ್ದ ಉಡ ವನ್ನು ತಪ್ಪಿಸಲು ಹೋಗಿ ಕಾರ್ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿ ಇದ್ದ 1). ಪಿರ್ಯಾದಿ, 2). ಶ್ರೇಯಾ ಪಾಟೀಲ ಹಾಗೂ ತನಗೂ ಸಹ ರಕ್ತಗಾಯ ಪಡಿಸಿಕೊಂಡು, ಕಾರಿನಲ್ಲಿದ್ದ 3). ಮೃತ: ವಿಕ್ರಮ ತಂದೆ ವೀರಣ್ಣಗೌಡ ಪಾಟೀಲ್, ಈತನಿಗೆ ಗಂಭೀರ ಸ್ವರೂಪದ ರಕ್ತಗಾಯ ಪಡಿಸಿದ್ದು, ಈತನಿಗೆ ಚಿಕಿತ್ಸೆಗಾಗಿ ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆಗೆ ದಾಖಲಿಸಿದ್ದಾಗ ಈತನಿಗೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 26-10-2021 ರಂದು 18-55 ಗಂಟೆಗೆ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ರುಚಿತ ತಂದೆ ರಂಗನಾಥ ತಿಳುವಳ್ಳಿ, ಪ್ರಾಯ-20 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ರಾಜಧಾನಿ ಕಾಲೋನಿ, ಗೋಕುಲ್ ರಸ್ತೆ, ಹುಬ್ಬಳ್ಳಿ ರವರು ದಿನಾಂಕ: 27-10-2021 ರಂದು 10-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 27-10-2021
at 00:00 hrs to 24:00 hrs
ಗೋಕರ್ಣ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 24/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ವಿನಿತಾ ಗಂಡ ವಿನಾಯಕ ರಾನಡೆ, ಪ್ರಾಯ-72 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮನೆ ನಂ: 2/ಎ, ರಾಜಧಾನಿ ಕಾಲೋನಿ, ಕಲಂದಾಣಿ ಆಸ್ಪತ್ರೆ ಹತ್ತಿರ, ಗೋಕುಲ್ ರಸ್ತೆ, ಹುಬ್ಬಳ್ಳಿ. ಪಿರ್ಯಾದಿಯವರ ತಾಯಿಯಾದ ಇವರು ದಿನಾಂಕ: 26-10-2021 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ‘ಗುಡಿಗೆ ಹೋಗಿ ಬರುತ್ತೇನೆ’ ಅಂತಾ ಹುಬ್ಬಳ್ಳಿಯಲ್ಲಿರುವ ತನ್ನ ಮನೆಯಿಂದ ಹೋದವಳು, ಗೋಕರ್ಣಕ್ಕೆ ಬಂದು ಗೋಕರ್ಣದ ಮೇನ್ ಬೀಚ್ ಸಮುದ್ರ ತೀರದಲ್ಲಿ ಸ್ನಾನಕ್ಕೆಂದು ಹೋದವಳು ಸಮುದ್ರದ ಅಲೆಗೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟು ದಿನಾಂಕ:-27-10-2021 ರಂದು ಮಧ್ಯರಾತ್ರಿ 00-15 ಗಂಟೆಗೆ ಶವವಾಗಿ ಮೇನ್ ಬೀಚ್ ದಡದಲ್ಲಿ ಸಿಕ್ಕಿರುತ್ತಾಳೆ. ಇದರ ಹೊರತು ಅವಳ ಮರಣದಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕಿರಣ ತಂದೆ ವಿನಾಯಕ ರಾನಡೆ, ಪ್ರಾಯ-51 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಮನೆ ನಂ: 2/ಎ, ರಾಜಧಾನಿ ಕಾಲೋನಿ, ಕಲಂದಾಣಿ ಆಸ್ಪತ್ರೆ ಹತ್ತಿರ, ಗೋಕುಲ್ ರಸ್ತೆ, ಹುಬ್ಬಳ್ಳಿ ರವರು ದಿನಾಂಕ: 27-10-2021 ರಂದು 07-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======