ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 27-09-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 143/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ಈಶ್ವರ ಅಂಬಿಗ, ಪ್ರಾಯ-29 ವರ್ಷ, ಸಾ|| ಕೊಡ್ಕಣಿ, ತಾ: ಕುಮಟಾ (407 ಲಾರಿ ನಂ: ಕೆ.ಎ-25/ಸಿ-5172 ನೇದರ ಚಾಲಕ). ಈತನು ಬಾಬ್ತು ತನ್ನ 407 ಲಾರಿ ನಂ: ಕೆ.ಎ-25/ಸಿ-5172 ನೇದರಲ್ಲಿ ಆಕ್ಸಿಜನ್ ಸಿಲೆಂಡರನ್ನು ಲೋಡ್ ಮಾಡಿಕೊಂಡು ಬೆಟ್ಕುಳಿಯಿಂದ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಹೋಗುತ್ತಿರುವಾಗ ತನ್ನ ಅತೀವೇಗದ ಹಾಗೂ ನಿರ್ಲಕ್ಷ್ಯತನದ ಚಾಲನೆಯಿಂದ ದಿನಾಂಕ: 27-09-2021 ರಂದು ಮಧ್ಯಾಹ್ನ 13-30 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಬೆಳಸೆಯ ರೈಲ್ವೇ ಬ್ರಿಡ್ಜ್ ಹತ್ತಿರ ತಲುಪಿದಾಗ ಸಿಲೆಂಡರ್ ತುಂಬಿದ ವಾಹನವನ್ನು ಪಲ್ಟಿ ಪಡಿಸಿ, ಪಿರ್ಯಾದಿಯ ತಲೆಗೆ ಹಾಗೂ ಬಲಭುಜಕ್ಕೆ ಸಾದಾ ಗಾಯವನ್ನುಂಟು ಮಾಡಿ, ಕೈ ಕಾಲಿಗೆ ಒಳನೋವನ್ನುಂಟು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನ್ನ ಕಾಲಿಗೂ ಸಹ ಸಾದಾ ಸ್ವರೂಪದ ನೋವನ್ನುಂಟು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಜಗದೀಶ ತಂದೆ ಅಚ್ಯುತ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬರ್ಗಿ, ತಾ: ಕುಮಟಾ ರವರು ದಿನಾಂಕ: 27-09-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 166/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕಲ್ಲೇಶ ಎಸ್. ಕೆ. ತಂದೆ ಕಾಂತರಾಜ ಎಸ್. ಕೆ, ಸಾ|| ಕೋಟೆ ಬಾಣಾವರ, ತಾ ಅರಸೀಕೆರೆ, ಜಿ: ಹಾಸನ (ಕಾರ್ ನಂ: ಕೆ.ಎ-18/ಸಿ-6240 ನೇದರ ಚಾಲಕ). ಈತನು ದಿನಾಂಕ: 27-09-2021 ರಂದು 07-30 ಗಂಟೆಯ ವೇಳೆಗೆ ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-18/ಸಿ-6240 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಹೋಗಲು ಅತೀವೇಗವಾಗಿ ಚಲಾಯಿಸಿ, ಕುಮಟಾ ತಾಲೂಕಿನ ಮಿರ್ಜಾನ ಹತ್ತಿರ ರಸ್ತೆಗೆ ಅಡ್ಡ ಬಂದ ಆಕಳನ್ನು ತಪ್ಪಿಸಲು ಕಾರನ್ನು ಒಮ್ಮೇಲೆ ನಿಷ್ಕಾಳಜಿಯಿಂದ ಬ್ರೇಕ್ ಹಾಕಿ ಕಾರನ್ನು ಪಲ್ಟಿ ಕೆಡವಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿಗೆ ಎಡಗೈ ಮೊಣಗಂಟಿಗೆ ಗಾಯವಾಗಲು, ಉಳಿದ ಪ್ರಯಾಣಿಕರಾದ ವಿನಯ ತಂದೆ ಕಸ್ತೂರಪ್ಪಾ, ಇವರಿಗೆ ಎದೆಗೆ ನೋವು ಆಗಲು, ರಘೂ ಬಿ. ಆರ್, ಇವರಿಗೆ ಸೊಂಟಕ್ಕೆ ನೋವಾಗಲು, ಸುಜನ್ ಇವರಿಗೆ ಬಲಗಾಲಿನ ಮೊಣಗಂಟಿಗೆ, ಎಡಗೈಗೆ, ತಲೆಗೆ ಹಾಗೂ ಸೊಂಟಕ್ಕೆ ಗಾಯನೋವು ಆಗಲು ಕಾರಣವಾಗಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹಾ ಬಲಗಾಲಿನ ಮೊಣಗಂಟಿಗೆ ಗಾಯವಾಗಲು ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣಮೂರ್ತಿ ಬಿ. ಆರ್. ತಂದೆ ರಂಗಸ್ವಾಮಿ ಬಿ. ಆರ್, ಪ್ರಾಯ-26 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಪೇಟೆ ಬಾಣಾವರ, ತಾ, ಅರಸೀಕೆರೆ, ಜಿ: ಹಾಸನ ರವರು ದಿನಾಂಕ: 27-09-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 167/2021, ಕಲಂ: 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 24-09-2021 ರಂದು 16-30 ರಿಂದ ದಿನಾಂಕ: 25-09-2021 ರಂದು ಬೆಳಿಗ್ಗೆ 10-00 ಗಂಟೆಯ ನಡುವಿನ ಅವಧಿಯಲ್ಲಿ ಕುಮಟಾ ತಾಲೂಕಿನ ತಲಗೋಡದ ಕಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದ ಅಡುಗೆ ಕೋಣೆಯ ಬೀಗ ಮುರಿದು ಒಳ ಹೊಕ್ಕಿ, ಅಲ್ಲಿದ್ದ ಸುಮಾರು 3,500/- ರೂಪಾಯಿ ಬೆಲೆಬಾಳುವ ಸಾಮಗ್ರಗಳಾದ 1). ಅಲ್ಯೂಮಿನಿಯಂ ತಪ್ಪಲಿ (ದೊಡ್ಡದು)-2, 2). ಅಲ್ಯೂಮಿನಿಯಂ ತಪ್ಪಲಿ (ಸಣ್ಣದು)-2, 3). ಸ್ಟೀಲ್ ಡ್ರಮ್-1, 4). ಗ್ಯಾಸ್ ಒಲೆ-1, 5). ಸ್ಟೀಲ್ ಬುಟ್ಟಿ-1, 6). ಸ್ಪ್ರಿಂಗ್ ತೂಕ-1, 7). ಬಾಂಡ್ಲಿ-1, 8). ಅನ್ನದ ಜಾಳಿಗೆ-1, 9). ಮಿಕ್ಸರ್-1 ಇವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ತಂದೆ ಸುಕ್ರು ಪಟಗಾರ, ಪ್ರಾಯ-51 ವರ್ಷ, ವೃತ್ತಿ-ಮುಖ್ಯಾಧ್ಯಾಪಕರು, ಕಿರಿಯ ಪ್ರಾಥಮಿಕ ಶಾಲೆ, ತಲಗೋಡ, ತಾ: ಕುಮಟಾ, ಸಾ|| ಗಾಂಧಿನಗರ, ಹೆಗಡೆ, ತಾ: ಕುಮಟಾ ರವರು ದಿನಾಂಕ: 27-09-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 251/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 20-09-2021 ರಂದು 16-00 ಗಂಟೆಯಿಂದ ದಿನಾಂಕ: 21-09-2021 ರಂದು 09-30 ಗಂಟೆಯ ನಡುವಿನ ಅವಧಿಯಲ್ಲಿ ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡಬಾಳ, ಕೋಟೆಬೈಲ್ ಸರಕಾರಿ ಪ್ರೌಢ ಶಾಲೆಯ ಮೇಲ್ಛಾವಣಿಯ ಮೇಲೆ ಅಳವಡಿಸಿದ್ದ ಅಂದಾಜು 10,000/- ರೂಪಾಯಿ ಬೆಲೆಯ ಸೋಲಾರ್ ಪ್ಯಾನೆಲ್ ಬೋರ್ಡ್-1 ನೇದನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಗೀತಾ ಉಮೇಶ ಚಂದಾವರ, ಪ್ರಾಯ-56 ವರ್ಷ, ವೃತ್ತಿ-ಮುಖ್ಯಾಧ್ಯಾಪಕರು, ಸರಕಾರಿ ಪ್ರೌಢ ಶಾಲೆ, ಕೋಟೆಬೈಲ್, ಸಾ|| ಪ್ರಭಾತನಗರ, ತಾ: ಹೊನ್ನಾವರ ರವರು ದಿನಾಂಕ: 27-09-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 252/2021, ಕಲಂ: 447, 307, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುಬ್ರಾಯ ತಂದೆ ಗಣೇಶ ಹೆಗಡೆ, ಪ್ರಾಯ-45 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನೀಲ್ಕೋಡ, ತಾ: ಹೊನ್ನಾವರ. ಈತನು ಪಿರ್ಯಾದಿಯ ದಾಯಾದಿ ಸಂಬಂಧಿಯಾಗಿದ್ದು, ಆರೋಪಿತನು ಈ ಹಿಂದಿನಿಂದಲೂ ಪಿರ್ಯಾದಿ ಹಾಗೂ ಪಿರ್ಯಾದಿಯ ತಂದೆ ದತ್ತಾತ್ರೇಯ ಪರಮೇಶ್ವರ ಹೆಗಡೆ, ಪ್ರಾಯ-72 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನೀಲ್ಕೋಡ, ತಾ: ಹೊನ್ನಾವರ ಇವರಿಗೆ ಕೊಲೆ ಮಾಡುವುದಾಗಿ ಪಿರ್ಯಾದಿಯ ಮನೆಯ ಮುಂದೆ ಬಂದು ಗಲಾಟೆ ಮಾಡುತ್ತಾ ಬಂದವನು, ದಿನಾಂಕ: 27-09-2021 ರಂದು ರಾತ್ರಿ 09-45 ಗಂಟೆಗೆ ಆರೋಪಿತನು ತನ್ನ ಮನೆಯ ಮುಂದೆ ಪಿರ್ಯಾದಿ ಹಾಗೂ ಪಿರ್ಯಾದಿಯ ಮನೆಯವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿರುವಾಗ ಪಿರ್ಯಾದಿಯ ತಂದೆ ದತ್ತಾತ್ರೇಯ ಪರಮೇಶ್ವರ ಹೆಗಡೆ ಇವರು ತಮ್ಮ ಮನೆಯ ಮುಂದಿನ ಅಂಗಳದಲ್ಲಿ ನಿಂತು ಆರೋಪಿತನಿಗೆ ‘ಯಾಕೆ ಈ ರೀತಿ ಬೈಯ್ದು ಕೂಗಾಡುತ್ತಿಯಾ?’ ಅಂತಾ ಕೇಳಿದಾಗ ಆರೋಪಿತನು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಪಿರ್ಯಾದಿಯ ಮನೆಯ ಅಂಗಳಕ್ಕೆ ಬಂದು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿಯ ತಂದೆಗೆ ಕತ್ತಿಯಿಂದ ಎಡಗೈಯ ಬೆರಳಿಗೆ, ಎಡಗೈಯ ಮಣಿಕಟ್ಟಿಗೆ, ತಲೆಗೆ ಹಾಗೂ ಎಡಭುಜಕ್ಕೆ ಹೊಡೆದು ತೀವ್ರ ತರಹದ ರಕ್ತದ ಗಾಯನೋವು ಪಡಿಸಿದಾಗ ಇದನ್ನು ನೋಡಿದ ಪಿರ್ಯಾದಿ ಹಾಗೂ ಮನೆಯವರು ಬಂದು ಆರೋಪಿತನು ಪಿರ್ಯಾದಿಯ ತಂದೆಗೆ ಹೊಡೆಯುವುದನ್ನು ತಪ್ಪಿಸಿದಾಗ, ಆರೋಪಿತನು ಪಿರ್ಯಾದಿ ಹಾಗೂ ಪಿರ್ಯಾದಿಯ ಮನೆಯವರನ್ನು ಉದ್ದೇಶಿಸಿ ‘ಬೋಳಿ ಮಕ್ಕಳಾ, ಸೂಳಾ ಮಕ್ಕಳಾ, ನಿಮ್ಮನ್ನು ಇಷ್ಕಕ್ಕೆ ಬಿಡುವುದಿಲ್ಲ. ಮತ್ತೊಂದು ದಿನ ನಿಮ್ಮನ್ನು ಕೊಂದು ಹಾಕುತ್ತೇನೆ’ ಅಂತಾ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ದತ್ತಾತ್ರೇಯ ಹೆಗಡೆ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನೀಲ್ಕೋಡ, ತಾ: ಹೊನ್ನಾವರ ರವರು ದಿನಾಂಕ: 27-09-2021 ರಂದು 23-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 90/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮೋಹನ ತಂದೆ ನಾರಾಯಣ ನಾಯ್ಕ, ಪ್ರಾಯ-27 ವರ್ಷ, ವೃತ್ತಿ-ಟಿಪ್ಪರ್ ಚಾಲಕ, ಸಾ|| ಜನತಾ ಕಾಲೋನಿ, ತೆರ್ನಮಕ್ಕಿ, ತಾ: ಭಟ್ಕಳ (ಟಿಪ್ಪರ್ ವಾಹನ ನಂ: ಕೆ.ಎ-47/4643 ನೇದರ ಚಾಲಕ). ಪಿರ್ಯಾದಿಯು ಸಾಕಲು ದನ ಖರೀದಿ ಮಾಡಲು ಅಂತಾ ದಿನಾಂಕ: 27-09-2021 ರಂದು ಮಧ್ಯಾಹ್ನ ತನ್ನ ಬಾಬ್ತು ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-1954 ನೇದರಲ್ಲಿ ಕೊಳಕಿ ರಸ್ತೆಯಲ್ಲಿ ಕರೂರು ಗ್ರಾಮಕ್ಕೆ ಹೋಗಿ, ಕರೂರು ಗ್ರಾಮದ ಮಾದೇವ ತಂದೆ ಸೋಮಯ್ಯ ಗೊಂಡ ಇವರ ಮನೆಯ ಸಮೀಪ ಕಚ್ಚಾ ರಸ್ತೆಯ ಬದಿಯಲ್ಲಿ ಮೋಟಾರ್ ಸೈಕಲನ್ನು ನಿಲ್ಲಿಸಿ, ತನ್ನ ಗೆಳೆಯನ ಹತ್ತಿರ ಹೋಗಿ ಕೆಲಸ ಮುಗಿಸಿಕೊಂಡು ಮರಳಿ, ಮೋಟಾರ್ ಸೈಕಲ್ ನಿಲ್ಲಿಸಿದ್ದ ಸ್ಥಳದ ಕಡೆಗೆ ಬರುತ್ತಿದ್ದಾಗ, ಮೋಟಾರ್ ಸೈಕಲ್ ನಿಲ್ಲಿಸಿದ್ದ ಸ್ಥಳದ ಸ್ವಲ್ಪ ಹಿಂದೆ ನಿಂತಿದ್ದ ಟಿಪ್ಪರ್ ವಾಹನ ನಂ: ಕೆ.ಎ-47/4643 ನೇದರ ಆರೋಪಿ ಚಾಲಕನು ತನ್ನ ವಾಹನವನ್ನು 13-00 ಗಂಟೆಗೆ ಒಮ್ಮೇಲೆ ಹಿಮ್ಮುಖವಾಗಿ ವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ಪಿರ್ಯಾದಿಯ ಮೋಟಾರ್ ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲನ್ನು ಸಂಪೂರ್ಣ ಡ್ಯಾಮೇಜ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ವೀರೇಂದ್ರ ತಂದೆ ಮಂಜಯ್ಯ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪದುಮನೆ, ಮಾವಿನಕಟ್ಟಾ, ಕೋಕ್ತಿ, ಬೆಂಗ್ರೆ-2, ತಾ: ಭಟ್ಕಳ ರವರು ದಿನಾಂಕ: 27-09-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 154/2021, ಕಲಂ: 279, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಕಿರಣ ತಂದೆ ನಾಗೇಶ ಬೋವಿವಡ್ಡರ, ಪ್ರಾಯ-28 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಮುಂಡಗೋಡ ರೋಡ್, ರವೀಂದ್ರನಗರ, ತಾ: ಯಲ್ಲಾಪುರ (ಹೀರೋ ಹೋಂಡಾ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಎ-8396 ನೇದರ ಸವಾರ), 2]. ಶ್ರೀಕಾಂತ ತಂದೆ ಈಶ್ವರ ಚೌಗುಲೆ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಸಳೇಬೈಲ್, ಹುಣಶೆಟ್ಟಿಕೊಪ್ಪಾ, ತಾ: ಯಲ್ಲಾಪುರ (ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಬಿ-8457 ನೇದರ ಸವಾರ). ಈ ನಮೂದಿತ ಆರೋಪಿತರು ದಿನಾಂಕ: 26-09-2021 ರಂದು ರಾತ್ರಿ ಸುಮಾರು 22-15 ಗಂಟೆಯ ಸುಮಾರಿಗೆ ಬಿ.ಎಸ್.ಎನ್.ಎಲ್ ಕಚೇರಿಯ ಹತ್ತಿರ ಮುಂಡಗೋಡ-ಯಲ್ಲಾಪುರ ರಸ್ತೆಯ ಮೇಲೆ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಬಿ-8457 ನೇದರ ಸವಾರನಾದ ಆರೋಪಿ 2 ನೇಯವನು ಹಾಗೂ ಹೀರೋ ಹೋಂಡಾ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಎ-8396 ನೇದರ ಸವಾರನಾದ ಆರೋಪಿ 1 ನೇಯವನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ರಸ್ತೆಯ ಮಧ್ಯದಲ್ಲಿ ಮುಖಾಮುಖಿಯಾಗಿ ಡಿಕ್ಕಿ ಮಾಡಿ ಅಪಘಾತ ಪಡಿಸಿಕೊಂಡಿದ್ದರಿಂದಲೇ ಈ ಅಪಘಾತವಾಗಿ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಬಿ-8457 ನೇದರ ಸವಾರನಾದ ಆರೋಪಿ 2 ನೇಯವನಿಗೆ ತಲೆಗೆ ಹಾಗೂ ಬಲಗಾಲಿಗೆ ಭಾರೀ ಪೆಟ್ಟು ಬಿದ್ದು ರಕ್ತ ಬಂದು ಸ್ಥಳದಲ್ಲಿಯೇ ಮರಣ ಪಟ್ಟಿದ್ದಲ್ಲದೇ, ಹೀರೋ ಹೋಂಡಾ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಎ-8396 ನೇದರ ಸವಾರನಾದ ಆರೋಪಿ 1 ನೇಯವನಿಗೆ ತಲೆಗೆ ಭಾರೀ ರಕ್ತದ ಗಾಯ ಪೆಟ್ಟು ಆಗಿದ್ದಲ್ಲದೇ, ಎರಡು ಮೋಟಾರ್ ಸೈಕಲಗಳು ಜಖಂ ಆಗಿರುತ್ತವೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪರಶುರಾಮ ತಂದೆ ಹುಚ್ಚಪ್ಪಾ ಕಟ್ಟಿಮನಿ, ಪ್ರಾಯ-44 ವರ್ಷ, ವೃತ್ತಿ-ಕಾರ್ ಚಾಲಕ, ಸಾ|| ಮುಂಡಗೋಡ ರೋಡ್, ರವೀಂದ್ರನಗರ, ತಾ: ಯಲ್ಲಾಪುರ ರವರು ದಿನಾಂಕ: 27-09-2021 ರಂದು 00-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 96/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಕೇಶವ ತಂದೆ ನಾರಾಯಣ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹುಕ್ಕಳೆಬೈಲ್, ಪೋ: ದೇವನಳ್ಳಿ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-31/ಎಸ್-0409 ನೇದರ ಸವಾರ). ಈತನು ಪಿರ್ಯಾದಿಯ ತಂದೆಯಾಗಿದ್ದು ದಿನಾಂಕ: 26-09-2021 ರಂದು 17-20 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆಎ-31 ಎಸ್-0409 ನೇದರ ಹಿಂಬದಿಗೆ ಅಕ್ಕಿ ಚೀಲವನ್ನು ಕಟ್ಟಿಕೊಂಡು ದೇವನಳ್ಳಿಯಿಂದ ಮನೆಗೆ ಬರುತ್ತಿದ್ದವನು, ಮೋಟಾರ್ ಸೈಕಲನ್ನು ದೇವನಳ್ಳಿ ಕಡೆಯಿಂದ ಮಂಜಗುಣಿ ಕ್ರಾಸ್ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸಲಾಗದೇ ಮಂಜಗುಣಿ ಕ್ರಾಸ್ ಹತ್ತಿರ ಮೋಟಾರ್ ಸೈಕಲ್ ಸ್ಕಿಡ್ ಮಾಡಿಕೊಂಡು ರಸ್ತೆಯ ಮೇಲೆ ಬಿದ್ದಿದ್ದರಿಂದ, ತಲೆಯ ಹಿಂಬದಿಗೆ ಗಂಭೀರ ಸ್ವರೂಪದ ಗಾಯನೋವಾಗಿ ರಕ್ತ ಸುರಿಯುತ್ತಿದ್ದವರಿಗೆ, ಚಿಕಿತ್ಸೆಯ ಕುರಿತು ಶಿರಸಿಯ ಪಂಡಿತ ಆಸ್ಪತ್ರೆಗೆ ದಾಖಲಿಸಿ, ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಟಿ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಿದಾಗ, ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಹೆಚ್ಚಿನ ಉಪಚಾರದ ಕುರಿತು ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆಗೆ ಹೋಗಲು ತಿಳಿಸಿದ ಮೇರೆಗೆ, ಪಿರ್ಯಾದಿಯ ತಂದೆಗೆ ಧಾರವಾಡ ಎಸ್.ಡಿ.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ಇರುತ್ತದೆ. ಆಸ್ಪತ್ರೆಯಲ್ಲಿ ವೈದ್ಯರು ತಮ್ಮ ತಂದೆಗೆ ಚಿಕಿತ್ಸೆ ನೀಡಿ ತುಂಬಾ ರಕ್ತಸ್ರಾವವಾಗಿದ್ದರಿಂದ ಬದುಕುವುದಿಲ್ಲ ತೆಗೆದುಕೊಂಡು ಹೋಗಿ ಎಂದು ಹೇಳಿದರು. ಆಗ ತಾವು ತಮ್ಮ ತಂದೆಯು ಬದುಕಿರುವಷ್ಟು ದಿನ ಪಂಡಿತ ಸರ್ಕಾರಿ ಆಸ್ಪತ್ರೆ ಶಿರಸಿಯಲ್ಲಿ ಇರಲಿ ಎಂದು ದಿನಾಂಕ: 27-09-2021 ರಂದು ಧಾರವಾಡದಿಂದ ಆಂಬ್ಯುಲೆನ್ಸ್ ಮೇಲೆ ಶಿರಸಿಗೆ ಕರೆದುಕೊಂಡು ಬರುತ್ತಿರುವಾಗ, ಶಿರಸಿಯ ಗೌಡಳ್ಳಿ ಹತ್ತಿರ ಮಾರ್ಗಮಧ್ಯದಲ್ಲಿ ಬೆಳಗಿನ ಜಾವ ಸುಮಾರು 6-30 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಕಾರಣ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗೌತಮ ತಂದೆ ಕೇಶವ ನಾಯ್ಕ ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹುಕ್ಕಳೆಬೈಲ್, ಪೊ: ದೇವನಳ್ಳಿ, ತಾ: ಶಿರಸಿ ರವರು ದಿನಾಂಕ: 27-09-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 97/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರತೀಕ ದಿನಕರ ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ಕುಚ್ಚಿಕಾಡ ಕಲ್ಪನೆ, ಕುಲಶೇಖರ, ಮಂಗಳೂರು (ಟಾಟಾ ಜೆಸ್ಟ್ ಕಾರ್ ನಂ:  ಕೆ.ಎ-19/ಎ.ಬಿ-8961 ನೇದರ ಚಾಲಕ). ಈತನು ಇಂದು ದಿನಾಂಕ: 27-09-2021 ರಂದು 14:30 ಗಂಟೆಗೆ ತನ್ನ ಟಾಟಾ ಜೆಸ್ಟ್ ಕಾರ್ ನಂ: ಕೆ.ಎ-19/ಎ.ಬಿ-8961 ನೇದನ್ನು ಸಿದ್ದಾಪುರ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ಅಲ್ಲಿದ್ದ ತಿರುವಿನ ರಸ್ತೆಯಲ್ಲಿ ತಾನು ಚಲಾಯಿಸುತ್ತಿದ್ದ ಕಾರಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ, ಎದುರುಗಡೆ ಶಿರಸಿ ಕಡೆಯಿಂದ ಸಿದ್ದಾಪುರ ಕಡೆಗೆ ಚಲಾಯಿಸಿಕೊಂಡು ಹೊರಟಿದ್ದ ಪಿರ್ಯಾದಿಯ ಓಮಿನಿ ವಾಹನ ನಂ: ಕೆ.ಎ-15/ಎಮ್-8584 ನೇದಕ್ಕೆ ಡಿಕ್ಕಿ ಹೊಡೆದಿದ್ದಲ್ಲದೇ, ಅದೇ ವೇಳೆ ಪಿರ್ಯಾದಿಯ ಓಮಿನಿ ವಾಹನದ ಹಿಂದಿನಿಂದ ಚಲಾಯಿಸಿಕೊಂಡು ಹೊರಟಿದ್ದ ಸಾಕ್ಷಿದಾರ ರಾಮಕೃಷ್ಣ ಪರಮೇಶ್ವರ ಹೆಗಡೆ ಇವರ ಸುಜುಕಿ ಜೆನ್ ಕಾರ್ ನಂ: ಕೆಎ-02/ಪಿ-7173 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ವಾಹನಗಳೆರಡನ್ನು ಜಖಂಗೊಳಿಸಿ, ತನ್ನ ಕಾರಿನಲ್ಲಿದ್ದ ಶ್ರೀಮತಿ ಶೈಲಜಾ ಸುಬ್ರಹ್ಮಣ್ಯ ಭಟ್ ಹಾಗೂ ಸುಜುಕಿ ಜೆನ್ ಕಾರಿನ ಚಾಲಕ ಸಾಕ್ಷಿದಾರ ರಾಮಕೃಷ್ಣ ಪರಮೇಶ್ವರ ಹೆಗಡೆ ಇವರ ಹಣೆಯ ಬಲಬದಿಗೆ, ಬಲಗೈ ತೋಳಿಗೆ, ಎಡಗಾಲಿನ ಮೊಣಗಂಟು ಹಾಗೂ ಬಲ ತೊಡೆಗೆ ಸಾದಾ ಸ್ವರೂಪ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಜು ಎಚ್. ಸಿ ತಂದೆ ಚಂದ್ರಶೇಖರ ಬಿ, ಪ್ರಾಯ-37 ವರ್ಷ, ವೃತ್ತಿ-ಕೃಷಿ ಕೆಲಸ, ಸಾ||  ಮಳಲಿಕೊಪ್ಪ, ಪೋ: ಕಮ್ಮಚ್ಚಿ, ತಾ: ಹೊಸನಗರ, ಜಿ: ಶಿವಮೊಗ್ಗ ರವರು ದಿನಾಂಕ: 27-09-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 124/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ನಾರಾಯಣ ತಂದೆ ತಿಮ್ಮಾ @ ಶೇಷಗಿರಿ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೊಂಬಳಿ, ಕೊಡಂಬಿ ಗ್ರಾಮ, ತಾ: ಸೊರಬಾ, ಜಿ: ಶಿವಮೊಗ್ಗ. ಈತನು ದಿನಾಂಕ: 27-09-2021 ರಂದು 16-30 ಗಂಟೆಗೆ ಸಿದ್ದಾಪುರ ತಾಲೂಕಿನ 16 ನೇ ಮೈಲುಗಲ್ಲು ಬಸ್ ನಿಲ್ದಾಣದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಯೊಂದಿಗೆ ಸೇರಿ ದಾಳಿ ಮಾಡಿದಾಗ, 1). HAYWARDS CHEERS WHISKY HAYWARDS CHEERS WHISKY 90 ML ಅಂತಾ ಬರೆದ ಮದ್ಯ ತುಂಬಿದ 4 ಟೆಟ್ರಾ ಪ್ಯಾಕೆಟ್ ಗಳು 2). HAYWARDS CHEERS WHISKY 90 ML ಅಂತಾ ಬರೆದ ಖಾಲಿ 2 ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಮತ್ತು ಪ್ಲಾಸ್ಟಿಕ್‍ ಗ್ಲಾಸುಗಳು-2 ಹಾಗೂ ಪ್ಲಾಸ್ಟಿಕ್ ಚೀಲ ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ಚಂದಾವರ, ಪಿ.ಎಸ್.ಐ (ತನಿಖೆ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 27-09-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 27-09-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 28/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಂಜುನಾಥ ತಂದೆ ಹನುಮಂತಪ್ಪ ಬಂಡಿವಡ್ಡರ, ಪ್ರಾಯ-28 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಹಿರೆವಡ್ಡಟ್ಟಿ, ತಾ: ಮುಂಡರಗಿ, ಜಿ: ಗದಗ, ಹಾಲಿ ಸಾ|| ಬ್ರಹ್ಮಕೊಣ್ಣ ಆಸ್ಪತ್ರೆ ಹಿಂದುಗಡೆ, ನಂದನಗದ್ದಾ, ಕಾರವಾರ. ಈತನು ಕುಡಿತದ ಚಟದವನಿದ್ದು, ಕಳೆದ ಕೆಲವು ದಿನಗಳಿಂದ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಅದನ್ನು ಮನೆಯವರಿಗೆ ಹೇಳದೇ ದಿನಾಂಕ: 27-09-2021 ರಂದು 10-30 ಗಂಟೆಯಿಂದ 11-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದೇ ಇದ್ದ ವೇಳೆಯಲ್ಲಿ ಮನೆಯ ಅಡುಗೆ ಕೋಣೆಯ ಮೇಲ್ಛಾವಣಿಯ ಪಕಾಶಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಜ್ಯೋತಿ ಕೋಂ. ಮಂಜುನಾಥ ಬಂಡಿವಡ್ಡರ, ಪ್ರಾಯ-23 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಹಿರೆವಡ್ಡಟ್ಟಿ, ತಾ: ಮುಂಡರಗಿ, ಜಿ: ಗದಗ, ಹಾಲಿ ಸಾ|| ಬ್ರಹ್ಮಕೊಣ್ಣ ಆಸ್ಪತ್ರೆ ಹಿಂದುಗಡೆ, ನಂದನಗದ್ದಾ, ಕಾರವಾರ ರವರು ದಿನಾಂಕ: 27-09-2021 ರಂದು 11-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 56/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗಣಪತಿ ತಂದೆ ಬೆಚ್ಚು ಗೌಡ, ಪ್ರಾಯ-61 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶಶಿಹಿತ್ತಲ್, ಬೆಳಂಬಾರ, ತಾ: ಅಂಕೋಲಾ. ಇವರು ದಿನಾಂಕ: 27-09-2021 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮದಲ್ಲಿರುವ ಅರಬ್ಬಿ ಸಮುದ್ರದ ತೀರಕ್ಕೆ ಮೀನು ಹಿಡಿಯಲು ಬೀಸುವ ಬಲೆಯನ್ನು ತೆಗೆದುಕೊಂಡು ಹೋದವರು, ಮೀನು ಬಲೆಯನ್ನು ಬೀಸುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿನಲ್ಲಿ ಬಿದ್ದು ಮುಳುಗಿ ನಾಪತ್ತೆಯಾದವರು, ಸುಮಾರು 11-20 ಗಂಟೆಯ ಸುಮಾರಿಗೆ ಮೃತಪಟ್ಟ ಸ್ಥಿತಿಯಲ್ಲಿ ಬೆಳಂಬಾರದ ಅರಬ್ಬಿ ಸಮುದ್ರದ ತೀರದಲ್ಲಿ ಸಿಕ್ಕಿರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಂಡು ಮೃತದೇಹವನ್ನು ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ಗಣಪತಿ ಗೌಡ, ಪ್ರಾಯ-33 ವರ್ಷ, ವೃತ್ತಿ-ಚಾಲಕ, ಸಾ|| ಶಶಿಹಿತ್ತಲ್, ಬೆಳಂಬಾರ, ತಾ: ಅಂಕೋಲಾ ರವರು ದಿನಾಂಕ: 27-09-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 26/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸೋಮನಿಂಗ ತಂದೆ ಅಮೃತ ಗೌಡ, ಪ್ರಾಯ-65 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ನವಗ್ರಾಮ, ಮುರ್ಕವಾಡ ಗ್ರಾಮ, ತಾ: ಹಳಿಯಾಳ. ಪಿರ್ಯಾದಿಯವರ ಗಂಡನಾದ ಈತನಿಗೆ ಎರಡು ಜನ ಮಕ್ಕಳಿದ್ದು, ಅದರಲ್ಲಿ ಸಂಜು ಈತನು ಕಳೆದ 10 ವರ್ಷಗಳ ಹಿಂದೆ ಅವನು 10 ರಿಂದ 12 ವರ್ಷ ವಯಸ್ಸಿನವನಿದ್ದಾಗ ಅನಾರೋಗ್ಯದಿಂದ ಮೃತಪಟ್ಟಿದ್ದನು ಹಾಗೂ ಹಿರಿಯ ಮಗ ಮಂಜುನಾಥ ಈತನು ಕಳೆದ ಸುಮಾರು 7 ವರ್ಷಗಳ ಹಿಂದೆ ಸುಮಾರು 19 ವರ್ಷದವನಿದ್ದಾಗ ಕ್ರಿಮಿನಾಶ ಔಷಧಿ ಸೇವಿಸಿ ಮೃತಪಟ್ಟಿದ್ದನು. ಈ ವಿಷಯವಾಗಿ ಮೃತನು ತನ್ನ ಇಬ್ಬರೂ ಮಕ್ಕಳು ತೀರಿಕೊಂಡಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಯಾವಾಗಲೂ ಚಿಂತೆ ಮಾಡುತ್ತಾ ಕೊರಗುತಿದ್ದವನು, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 24-08-2021 ರಂದು ಬೆಳಿಗ್ಗೆ 09-30 ಗಂಟೆಯಿಂದ 19-00 ಗಂಟೆಯ ಅವಧಿಯಲ್ಲಿ ಕಾಣೆಯಾಗಿದ್ದವನು, ದಿನಾಂಕ: 27-09-2021 ರ ಬೆಳಗಿನ 07-00 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದ ಶ್ರೀ ಪರಶುರಾಮ ಅಪ್ಪರಾವ್ ಪಾಟೀಲ್ ಇವರ ಕಬ್ಬಿನ ಹೊಲದ ಬದುವಿನಲ್ಲಿನ ಅತ್ತಿಯ ಮರದ ಟೊಂಗೆಗೆ ಕಪ್ಪು ನೂಲಿನ ಮುಕಾಡಿಕಿ (ಹಗ್ಗ) ದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಅವನ ಮೃತದೇಹವನ್ನು ಯಾವುದೋ ಕಾಡು ಪ್ರಾಣಿಗಳು ತಿಂದು ಅವನ ಎಲುಬುಗಳನ್ನು ಅಲ್ಲಿ ಇಲ್ಲಿ ಚೆಲ್ಲಾಪಿಲ್ಲಿಯಾಗಿ ಮಾಡಿದ್ದು ಇರುತ್ತದೆ. ಇದರ ಹೊರತು ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಮಲ್ಪೂರಿ ಕೋಂ. ಸೋಮನಿಂಗ ಗೌಡಾ, ಪ್ರಾಯ-54 ವರ್ಷ, ವೃತ್ತಿ-ಮನೆ ಕೆಲಸ, ಸಾ|| ನವನಗರ, ಮುರ್ಕವಾಡ, ತಾ: ಹಳಿಯಾಳ ರವರು ದಿನಾಂಕ: 27-09-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 28-09-2021 06:42 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080