ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 28-08-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂದೀಪ ತಂದೆ ಅಚ್ಚುತ ಮಾಳದೋಳ್ಕರ, ಸಾ|| ಗೋಪಶಿಟ್ಟಾ, ಕಾರವಾರ (ಸ್ಕೂಟರ್ ನಂ: ಕೆ.ಎ-30/ಎ-3515 ನೇದರ ಸವಾರ). ದಿನಾಂಕ: 28-08-2021 ರಂದು ಪಿರ್ಯಾದಿಯು ತನ್ನ ಸ್ಕೂಟರ್ ನಂ: ಜಿ.ಎ-10/ಡಿ-0074 ನೇದರ ಮೇಲೆ ತನ್ನ ಪರಿಚಯದ ಸಂತೋಷ ತಂದೆ ಪ್ರಕಾಶ ಮೊಳೆಕರ ರವರನ್ನು ಕೂಡ್ರಿಸಿಕೊಂಡು ಬೈರಾದಿಂದ ಕಾರವಾರ ಕಡೆಗೆ ಬರುತ್ತಿರುವಾಗ ಗೋಪಶಿಟ್ಟಾದ ತಿರುವಿನಲ್ಲಿ ಬಸ್ ಸ್ಟ್ಯಾಂಡ್ ಹತ್ತಿರ ತಲುಪಿದಾಗ ಕಾರವಾರ ಕಡೆಯಿಂದ ಬಂದ ಟಾಟಾ ಎಕ್ಸೆಸ್ ವಾಹನ ನಂ: ಕೆ.ಎ-30/ಎ-3515 ನೇದರ ಆರೋಪಿತ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ತನ್ನ ಬದಿಯನ್ನು ಬಿಟ್ಟು ಪಿರ್ಯಾದಿಯು ಹೋಗುತಿದ್ದ ಎಡಬದಿಗೆ ಬಂದು 10-20 ಗಂಟೆಗೆ ಪಿರ್ಯಾದಿಯ ಸ್ಕೂಟರಿಗೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರಿಂದ ಪಿರ್ಯಾದಿ ಹಾಗೂ ಪಿರ್ಯಾದಿಯ ಸ್ಕೂಟರಿನ ಹಿಂದೆ ಕುಳಿತಿದ್ದ ಸಂತೋಷ ಇಬ್ಬರೂ ಸಹ ಸ್ಕೂಟರ್ ಸಮೇತ ಕಚ್ಚಾ ರಸ್ತೆಯ ಮೇಲೆ ಬಿದ್ದಿದ್ದರಿಂದ ಪಿರ್ಯಾದಿಯು ಹೆಲ್ಮೆಟ್ ಹಾಕಿದ್ದರೂ ಸಹ ಹೆಲ್ಮೆಟ್ ಕಳಚಿ ಹೋಗಿ ತಲೆಯ ಭಾಗಕ್ಕೆ ತೆರಚಿದ ಗಾಯ ಹಾಗೂ ಬಲಗಾಲಿಗೆ ಮತ್ತು ಬಲಗೈಗೆ ಒಳಗಾಯವಾಗಿದ್ದು ಹಾಗೂ ಸಂತೋಷ ಈತನಿಗೆ ಎರಡು ಕಾಲುಗಳಿಗೆ ತೆರಚಿದ ಗಾಯವಾದ ಬಗ್ಗೆ ಪಿರ್ಯಾದಿ ಶ್ರೀ ಸಾಗರ ತಂದೆ ರಾಜೇಂದ್ರ ಮಾಳ್ಸೇಕರ, ಪ್ರಾಯ-29 ವರ್ಷ, ವೃತ್ತಿ-ಕಾಣಕೋಣದ HDFC ಬ್ಯಾಂಕಿನಲ್ಲಿ ಕೆಲಸ, ಸಾ|| ಮರಾಠವಾಡ, ಬೈರಾ, ಕದ್ರಾ, ಕಾರವಾರ ರವರು ದಿನಾಂಕ: 28-08-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 153/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದಿನೇಶ ತಂದೆ ರಾಮಾ ಮುಕ್ರಿ, ಸಾ|| ಮಾಸ್ತಿಹಳ್ಳ, ಕತಗಾಲ, ತಾ: ಕುಮಟಾ (ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-3584 ನೇದರ ಚಾಲಕ). ಈತನು ದಿನಾಂಕ: 27-08-2021 ರಂದು 19-00 ಗಂಟೆಯ ವೇಳೆಗೆ ತಾನು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-3584 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಹೋಗಲು ಅತೀವೇಗವಾಗಿ ಸವಾರಿ ಮಾಡಿಕೊಂಡು ಬಂದು, ಕುಮಟಾ ಪಟ್ಟಣದ ಮೂರೂರು ಕ್ರಾಸ್ ಹತ್ತಿರ ರಸ್ತೆಯ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ವಸಂತ ತಂದೆ ನಾಗೇಶ ಹೊಸಕಟ್ಟಾ, ಸಾ|| ಮಾದನಕೇರಿ, ಬಳಲೆ, ತಾ: ಅಂಕೋಲಾ ಇವರಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ವಸಂತ ಈತನಿಗೆ ತಲೆಗೆ ಹಾಗೂ ಬಲ ಭುಜಕ್ಕೆ ಸಾದಾ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸೂರಜ ತಂದೆ ಗೋಪಾಲ ಹೊಸಕಟ್ಟಾ, ಪ್ರಾಯ-22 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಮಾದನಕೇರಿ, ಬಳಲೆ, ತಾ: ಅಂಕೋಲಾ ರವರು ದಿನಾಂಕ: 28-08-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 227/2021, ಕಲಂ: 78(ಎ)(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸೀತಾರಾಮ ತಂದೆ ಮಾದೇವ ನಾಯ್ಕ, ಪ್ರಾಯ-53 ವರ್ಷ, ವೃತ್ತಿ-ಪಾನಬೀಡಾ ಅಂಗಡಿ ವ್ಯಾಪಾರ, ಸಾ|| ಕುಂಬಾರಮಕ್ಕಿ, ಹಳದೀಪುರ, ತಾ: ಹೊನ್ನಾವರ. ಈತನು ದಿನಾಂಕ: 28-08-2021 ರಂದು 12-50 ಗಂಟೆಗೆ ಹೊನ್ನಾವರ ತಾಲೂಕಿನ ಹಳದೀಪುರ ಅಗ್ರಹಾರದ ಚಿಪ್ಪೆಹಕ್ಕಲ್ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದು ಓ.ಸಿ ಅಂಕೆ-ಸಂಖ್ಯೆಗಳ ಮೇಲೆ ಪಂಥವನ್ನಾಗಿ ಕಟ್ಟಿಸಿಕೊಂಡು ಓ.ಸಿ ಮಟ್ಕಾ ಜುಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ ಆರೋಪಿತನು ತನ್ನ ತಾಬಾ 1). ಒಟ್ಟು ನಗದು ಹಣ 750/- ರೂಪಾಯಿ, 2). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, 3). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಉದಯ ನಾಯಕ, ಪಿ.ಎಸ್.ಐ (ತನಿಖೆ-01), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 28-08-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 228/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಜೇಶ ತಂದೆ ನಾರಾಯಣ ನಾಯ್ಕ, ಪ್ರಾಯ-27 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಬೈಲೂರ, ಮುರ್ಡೇಶ್ವರ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ವಿ-9756 ನೇದರ ಸವಾರ). ಈತನು ದಿನಾಂಕ: 28-08-2021 ರಂದು ಮಧ್ಯಾಹ್ನ 13-15 ಗಂಟೆಗೆ ರಾ ಹೆ ಸಂಖ್ಯೆ-66 ಹೊನ್ನಾವರ ತಾಲೂಕಿನ ಕರ್ಕಿ ಕರ್ನಾಟಕ ಬ್ಯಾಂಕ್ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-47/ವಿ-9756 ನೇದನ್ನು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದಿನಿಂದ ಹೋಗುತ್ತಿದ್ದ ಒಂದು ಕಾರನ್ನು ಓವರಟೇಕ್ ಮಾಡುವ ಪ್ರಯತ್ನದಲ್ಲಿ ತನ್ನ ಮೋಟಾರ್ ಸೈಕಲನ್ನು ಒಮ್ಮೇಲೆ ರಸ್ತೆಯ ಬಲಕ್ಕೆ ಚಲಾಯಿಸಿ, ಗಾಯಾಳು ವಿನುತ್ ತಂದೆ ಶ್ರೀಪಾದ ಶೆಟ್ಟಿ, ಪ್ರಾಯ-27 ವರ್ಷ, ವೃತ್ತಿ-ಬ್ಯಾಂಕ್ ನೌಕರ, ಸಾ|| ಸುವರ್ಣಗದ್ದೆ, ಹೊಳೆಗದ್ದೆ, ತಾ: ಕುಮಟಾ ಈತನು ತನ್ನ ಮೋಟಾರ್ ಸೈಕಲ್ ಹಿಂಬದಿಯಲ್ಲಿ ತಿಮ್ಮಪ್ಪ ತಂದೆ ಮಂಜುನಾಥ ಶೆಟ್ಟಿ, ಪ್ರಾಯ-87 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಸುವರ್ಣಗದ್ದೆ, ಹೊಳೆಗದ್ದೆ, ತಾ: ಕುಮಟಾ ಇವರನ್ನು ಕೂಡ್ರಿಕೊಂಡು ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-7200 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ವಿನುತ್ ತಂದೆ ಶ್ರೀಪಾದ ಶೆಟ್ಟಿ ಈತನಿಗೆ ಬಲಗೈ ಬೆರಳಿಗೆ ಹಾಗೂ ಎಡಗಾಲಿನ ಬೆರಳಿಗೆ ಗಾಯ ಮತ್ತು ತಿಮ್ಮಪ್ಪ ತಂದೆ ಮಂಜುನಾಥ ಶೆಟ್ಟಿ ಇವರಿಗೆ ಬಲ ಮೊಣಗಂಟಿಗೆ ಗಾಯ ಹಾಗೂ ಬಲಭುಜಕ್ಕೆ ಪೆಟ್ಟು ಪಡಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತಾನು ಸಹ ತಲೆಯ ಹಿಂಬದಿಗೆ ಪೆಟ್ಟು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ನಾಗೇಶ ವೈದ್ಯ, ಪ್ರಾಯ-26 ವರ್ಷ, ವೃತ್ತಿ-ಅಟೋ ಚಾಲಕ, ಸಾ|| ಸುವರ್ಣಗದ್ದೆ, ಹೊಳೆಗದ್ದೆ, ತಾ: ಕುಮಟಾ ರವರು ದಿನಾಂಕ: 28-08-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 77/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ತಿಮ್ಮಯ್ಯ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಗೂಡಂಗಡಿ ವ್ಯಾಪಾರ, ಸಾ|| ಮದಗಾರ ಮನೆ, ಪೋ: ಬೆಳ್ಕೆ, ತಾ: ಭಟ್ಕಳ. ಈತನು ದಿನಾಂಕ: 28-08-2021 ರಂದು 19-15 ಗಂಟೆಗೆ ಮುರ್ಡೇಶ್ವರ ಠಾಣಾ ವ್ಯಾಪ್ತಿಯ ಮಠದಹಿತ್ಲ ಪೋಸ್ಟ್ ಆಫೀಸ್ ಸಮೀಪದ ಗೂಡಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ ಬರ-ಹೋಗುವ ಸಾರ್ವಜನಿಕರನ್ನು ಸೇರಿಸಿಕೊಂಡು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿರುವಾಗ ಪಿರ್ಯಾದಿಯವರು ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ಆರೋಪಿತನು ತನ್ನ ತಾಬಾ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ ಅಂಕೆ-ಸಂಖ್ಯೆ ಬರೆದ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 1,800/- ರೂಪಾಯಿದೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಎಮ್. ಬಿರಾದಾರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 28-08-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 103/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಾಜೀಪ್ ತಂದೆ ಜಾವೀದ್ ಮುಕ್ರಿ, ವೃತ್ತಿ-ವಿದ್ಯಾರ್ಥಿ, ಸಾ|| ಉಮರ್ ಸ್ಟ್ರೀಟ್, ಮದೀನಾ ಕಾಲೋನಿ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-47/ಯು-0367 ನೇದರ ಸವಾರ). ಈತನು ದಿನಾಂಕ: 27-08-2021 ರಂದು 19-35 ಗಂಟೆಯ ಸುಮಾರಿಗೆ ಭಟ್ಕಳ ಶಹರದ ನವಾಯತ್ ಕಾಲೋನಿಯ ಅಮೀನುದ್ದೀನ್ ರಸ್ತೆಯ ಕಾಸ್ಮೋಡಿಸ್ ಅಂಗಡಿಯ ಎದುರು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಯು-0367 ನೇದನ್ನು ಭಟ್ಕಳ ಶಹರದ ಮದೀನಾ ಕಾಲೋನಿ ಕಡೆಯಿಂದ ಭಟ್ಕಳ ಶಹರದ ಆಜಾದ್ ನಗರದ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ, ಶ್ರೀ ಮೊಹಮ್ಮದ್ ಇಮ್ರಾನ್ ತಂದೆ ಮೊಹಮ್ಮದ್ ಜಾಪರ್, ಪ್ರಾಯ-41 ವರ್ಷ, ಸಾ|| ಮುಗ್ದುಮ್ ಕಾಲೋನಿ, ತಾ: ಭಟ್ಕಳ ಇವರು ತನ್ನ ಹೆಂಡತಿ ಶ್ರೀಮತಿ ಬೀಬಿ ಫಾತೀಮಾ ಗಂಡ ಮೊಹಮ್ಮದ್ ಇಮ್ರಾನ್, ಪ್ರಾಯ-35 ವರ್ಷ, ಸಾ|| ಮುಗ್ದುಮ್ ಕಾಲೋನಿ, ತಾ: ಭಟ್ಕಳ ಇವರನ್ನು ಹಿಂಬದಿಯಲ್ಲಿ ಕೂಡ್ರಿಸಿಕೊಂಡು ಆಜಾದ್ ನಗರದ ಕಡೆಯಿಂದ ಮದೀನಾ ಕಾಲೋನಿಯ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಜಿ.ಎ-01/ಎಫ್-2718 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರ ಶ್ರೀ ಮೊಹಮ್ಮದ್ ಇಮ್ರಾನ್ ಇವರ ತಲೆಯ ಬಲಬದಿಗೆ ತೀವ್ರ ಸ್ವರೂಪದ ಹಾಗೂ ಹಿಂಬದಿಯ ಸವಾರರಾದ ಶ್ರೀಮತಿ ಬೀಬಿ ಫಾತೀಮಾ ಇವರಿಗೆ ಸಾದಾ ಸ್ವರೂಪದ ಗಾಯ ಪಡಿಸಿದವರಿಗೆ, ಹೆಚ್ಚಿನ ಉಪಚಾರಕ್ಕೆ ಭಟ್ಕಳದಿಂದ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು, ಗಾಯಾಳು ಮೋಟಾರ್ ಸೈಕಲ್ ನಂ: ಜಿ.ಎ-01/ಎಫ್-2718 ನೇದರ ಸವಾರನಾದ ಶ್ರೀ ಮೊಹಮ್ಮದ್ ಇಮ್ರಾನ್ ಇವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 28-08-2021 ರಂದು ಬೆಳಗಿನ ಜಾವ 03-10 ಗಂಟೆಯ ಸುಮಾರಿಗೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಯೀಸ್ ಅಹ್ಮದ್ ತಂದೆ ಹಸನ್ ಶಬ್ಬರ್ ಕುಂದುನುಡಾ, ಪ್ರಾಯ-41 ವರ್ಷ, ವೃತ್ತಿ-ಚಾಲಕ, ಸಾ|| ಸೀಮಾ ಮ್ಯಾನ್ಷನ್, ಉಮರ್ ಸ್ಟ್ರೀಟ್, ಮದೀನಾ ಕಾಲೋನಿ, ತಾ: ಭಟ್ಕಳ ರವರು ದಿನಾಂಕ: 28-08-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 28-08-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

ಇತ್ತೀಚಿನ ನವೀಕರಣ​ : 30-08-2021 05:50 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080