ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 28-12-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 191/2021, ಕಲಂ: 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಯಾರೋ ಅಪರಿಚಿತ ವ್ಯಕ್ತಿಯಾಗಿದ್ದು, ಹೆಸರು ವಿಳಸ ತಿಳಿದು ಬಂದಿರುವುದಿಲ್ಲ. ದಿನಾಂಕ: 21-12-2021 ರಂದು ಮಧ್ಯಾಹ್ನ 12-30 ಗಂಟೆಯಿಂದ 01-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರ ಮಗ ವಿಜೇತನು ಅಂಕೋಲಾ ಕೆ.ಸಿ ರಸ್ತೆಯಲ್ಲಿರುವ ಎಸ್.ಬಿ.ಐ ಬ್ಯಾಂಕ್ ಎ.ಟಿ.ಎಮ್ ದಿಂದ ಹಣ ತೆಗೆಯಲು ಹೋದ ವೇಳೆ, ಎ.ಟಿ.ಎಮ್ ಆವರಣದೊಳಗಿದ್ದ ಯಾರೋ ಆರೋಪಿತನು ಪಿರ್ಯಾದಿಯವರ ಮಗನಿಗೆ ವಂಚಿಸಿ, ಆತನಿಂದ ಪಿರ್ಯಾದಿಯವರ ಬ್ಯಾಂಕ್ ಎ.ಟಿ.ಎಮ್ ಕಾರ್ಡ್ ಅನ್ನು ಪಡೆದುಕೊಂಡು, ಕಾರ್ಯಸ್ಥಿತಿಯಲ್ಲಿ ಇಲ್ಲದೇ ಇರುವ ಮಹಾರಾಷ್ಟ್ರ ರಾಜ್ಯದ ಇನ್ನೊಂದು ಎ.ಟಿ.ಎಮ್ ಕಾರ್ಡನ್ನು ವಿಜೇತನಿಗೆ ಕೊಟ್ಟು, ಆ ನಂತರದಲ್ಲಿ ಪಿರ್ಯಾದಿಯವರ ಬ್ಯಾಂಕ್ ಅಕೌಂಟಿನಲ್ಲಿದ್ದ 44,000/- ರೂಪಾಯಿಗಳನ್ನು ಎ.ಟಿ.ಎಮ್ ದಿಂದ ತೆಗೆದುಕೊಂಡು ವಂಚಿಸಿದ ಬಗ್ಗೆ ಪಿರ್ಯಾದಿ ಶ್ರೀ ಕಿಶೋರ ತಂದೆ ವಿಠ್ಠಲ್ ನಾಯಕ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬೋಳೆ, ಪಿ.ಡಬ್ಲ್ಯೂ.ಡಿ ಐ.ಬಿ ಹತ್ತಿರ, ತಾ: ಅಂಕೋಲಾ ರವರು ದಿನಾಂಕ: 28-12-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 227/2021, ಕಲಂ: 447, 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹೇಶ ಪರಮಶ್ವರ ನಾಯ್ಕ, ಸಾ|| ಹುಬ್ಬಣಗೇರಿ, ಬಾಡ, ತಾ: ಕುಮಟಾ, 2]. ಹರೀಶ ನಾಯ್ಕ, ಸಾ|| ಕಲಭಾಗ, ತಾ: ಕುಮಟಾ. ಪಿರ್ಯಾದಿಯವರು ಆರೋಪಿ 1 ನೇಯವನ ಹೆಂಡತಿಯಾದ ಶಿಕ್ಷಕಿ ಶ್ರೀಮತಿ ಭಾರತಿ ನಾಯ್ಕ ಇವರ ಬಗ್ಗೆ ಮಾಹಿತಿ ಹಕ್ಕಿನಡಿಯಲ್ಲಿ ಮಾಹಿತಿಯನ್ನು ಕೇಳಿದ್ದು, ಈ ವಿಷಯದಲ್ಲಿ ದ್ವೇಷದಿಂದ ಇದ್ದ ಆರೋಪಿ 1 ನೇಯವನು ದಿನಾಂಕ: 28-12-2021 ರಂದು ಬೆಳಿಗ್ಗೆ 09-00 ಗಂಟೆಗೆ ಪಿರ್ಯಾದುದಾರರು ಪಿತ್ರಾರ್ಜಿತ ಜಮೀನು ಹುಬ್ಬಣಗೇರಿಯ ಸರ್ವೇ ನಂ: 56/01 ನೇದರಲ್ಲಿ ತೆಂಗಿನ ಮರಕ್ಕೆ ನೀರನ್ನು ಬಿಡುತ್ತಿರುವಾಗ ನಮೂದಿತ ಆರೋಪಿತರು ಸೇರಿಕೊಂಡು ಪಿರ್ಯಾದಿಯ ಜಮೀನನ್ನು ಅಕ್ರಮ ಪ್ರವೇಶವನ್ನು ಮಾಡಿ, ಆರೋಪಿ 2 ನೇಯವನು ಪಿರ್ಯಾದಿಯ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಾಗ ಆರೋಪಿ 1 ನೇಯವನು ಕಾಲಿನಿಂದ ಒದ್ದು, ಬೇಲಿ ಗುಟ್ಟದಿಂದ ಬೆನ್ನಿನ ಮೇಲೆ ಹೊಡೆದು ’ಬೋಳಿ ಮಗನೆ ನನ್ನ ಹೆಂಡತಿಯ ವಿರುದ್ಧ ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕುತ್ತಿಯಾ?’ ಅಂತಾ ಅವಾಚ್ಯವಾಗಿ ಬೈಯ್ದು ‘ಮತ್ತೆ ನನ್ನ ಹೆಂಡತಿಯ ವಿರುದ್ಧ ಮಾಹಿತಿ ಹಕ್ಕ್ಕಿನಲ್ಲಿ ಅರ್ಜಿ ಹಾಕಿದರೆ ನಿನ್ನನ್ನು ಕೊಲೆ ಮಾಡಿಸುತ್ತೇನೆ. ಅಲ್ಲದೇ ಬೆಂಗಳೂರಿನಿಂದ ರೌಡಿಗಳನ್ನು ಕರೆಸಿ ನಿನನ್ನು ಶೂಟ್ ಮಾಡಿಸುತ್ತೇನೆ’ ಅಂತಾ ಜೀವ ಬೆದರಿಕೆಯನ್ನು ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಗುರುನಂದ ತಂದೆ ನಾರಾಯಣ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಆರ್.ಟಿ.ಐ ಕಾರ್ಯಕರ್ತ, ಸಾ|| ಹುಬ್ಬಣಗೇರಿ, ಬಾಡ, ತಾ: ಕುಮಟಾ ರವರು ದಿನಾಂಕ: 28-12-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 228/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಜೇಶ ತಂದೆ ಪುರುಷೋತ್ತಮ ನಾಯ್ಕ, ಪ್ರಾಯ-34 ವರ್ಷ, ಸಾ|| ಗುಡ್ನಕಟ್ಟು, ಕಡತೋಕಾ, ತಾ: ಹೊನ್ನಾವರ (ಟಿಪ್ಪರ್ ಲಾರಿ ನಂ: ಕೆ.ಎ-47/1605 ನೇದರ ಚಾಲಕ). ದಿನಾಂಕ: 28-12-2021 ರಂದು 12-45 ಗಂಟೆಯ ಸುಮಾರಿಗೆ ಪಿಯಾದಿಯು ತನ್ನ ಮೋಟಾರ್ ಸೈಕಲ್ ಮೇಲಾಗಿ ಚಂದಾವರ ಕಡೆಯಿಂದ ಕುಮಟಾ ಕಡೆಗೆ ಬರುತ್ತಿರುವಾಗ ಹೆರವಟ್ಟಾ ರೈಲ್ವೇ ಬ್ರಿಡ್ಜ್ ಹತ್ತಿರ ನಮೂದಿತ ಆರೋಪಿತನು ತನ್ನ ಟಿಪ್ಪರ್ ಲಾರಿ ನಂ: ಕೆ.ಎ-47/1605 ನೇದನ್ನು ಕುಮಟಾ ಕಡೆಯಿಂದ ಚಂದಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಒಮ್ಮೆಲೇ ಬಲಕ್ಕೆ ಬಂದು ತನ್ನ ಮುಂದಿನಿಂದ ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-6135 ನೇದನ್ನು ಚಲಾಯಿಸಿಕೊಂಡು ಕುಮಟಾ ಕಡೆಗೆ ಹೋಗುತ್ತಿದ್ದ ನಿಲೇಶ ತಂದೆ ದತ್ತ ಗೌಡಾ, ಪ್ರಾಯ-24 ವರ್ಷ, ಸಾ|| ಅಂಸಳ್ಳಿ, ನವಿಲಗೋಣ, ತಾ: ಹೊನ್ನಾವರ ಈತನ ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬೀಳುವಂತೆ ಮಾಡಿ, ಆತನ ತಲೆಗೆ ಗಾಯ ಪಡಿಸಿದ್ದಲ್ಲದೇ, ಆತನ ಬಲಗಾಲ ತೊಡೆಯ ಎಲುಬು ಮುರಿಯುವಂತೆ ಮಾಡಿ ಗಂಭೀರ ಸ್ವರೂಪದ ಗಾಯ ಪಡಿಸಿದ್ದು, ಆತನಿಗೆ ಉಪಚಾರದ ಕುರಿತು ಕುಮಟಾದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ ಹೆಚ್ಚಿನ ಉಪಚಾರಕ್ಕಾಗಿ ಮಣಿಪಾಲದ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೇಲೆ ಒಯ್ಯುತ್ತಿದ್ದಾಗ ಮುರ್ಡೇಶ್ವರದ ಸರ್ಕಲ್ ಹತ್ತಿರ ನಿಲೇಶ ಗೌಡಾ ಈತನು ಮಧ್ಯಾಹ್ನ 02-15 ಗಂಟೆಗೆ ಮೃತಪಡುವಂತೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ಮಂಜುನಾಥ ದೇಶಭಂಡಾರಿ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕರ್ಕಿ, ಮೂಡಗಣಪತಿ, ತಾ: ಹೊನ್ನಾವರ ರವರು ದಿನಾಂಕ: 28-12-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 116/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅನೀಶ್ ತಂದೆ ಅಂತೋನ್, ಸಾ|| ಉತ್ತರಕೊಪ್ಪಾ, ತಾ: ಭಟ್ಕಳ (ಹೋಂಡಾ ಡ್ರೀಮ್ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-1084 ನೇದರ ಚಾಲಕ). ಈತನು ದಿನಾಂಕ: 08-12-2021 ರಂದು 12-30 ಗಂಟೆಗೆ ತಾನು ಚಲಾಯಿಸುತ್ತಿದ್ದ ಹೋಂಡಾ ಡ್ರೀಮ್ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-1084 ನೇದನ್ನು ಉತ್ತರಕೊಪ್ಪಾ ವಂದಲ್ಸೆ ಚರ್ಚ್ ಕಡೆಯಿಂದ ಬಸ್ತಿ ಉತ್ತರಕೊಪ್ಪಾ ಡಾಂಬರ್ ರಸ್ತೆಯ ಕ್ರಾಸ್ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಉತ್ತರಕೊಪ್ಪಾ ವಂದಲ್ಸೆ ಕ್ರಾಸ್ ಹತ್ತಿರ ಬಸ್ತಿ ಮುರ್ಡೆಶ್ವರದ ಕಡೆಯಿಂದ ಉತ್ತರಕೊಪ್ಪಾದ ತನ್ನ ಮನೆಯ ಕಡೆಗೆ ಹೋಗುತ್ತಿದ ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-8985 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅದರ ಚಾಲಕ ವಿಠ್ಠಲ ತಂದೆ ರಾಮಾ ದೇವಾಡಿಗ, ಈತನಿಗೆ  ಹಣೆಗೆ ಹಾಗೂ ಮೂಗಿಗೆ ಗಾಯನೋವು ಪಡಿಸಿದಲ್ಲದೇ, ಆರೋಪಿ ಚಾಲಕನು ತಾನೂ ಸಹ ತನ್ನ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು ಮೈ ಮೇಲೆ ಅಲ್ಲಲ್ಲಿ ಗಾಯ ಪಡಿಸಿಕೊಂಡವರಿಗೆ ಪಿರ್ಯಾದಿ ಮತ್ತು ಪಿರ್ಯಾದಿಯ ಅಣ್ಣನ ಮಗ ನಾಗರಾಜ ಹಾಗೂ ಚರ್ಚ್ ಫಾದರ್ ಕಾರಿನಲ್ಲಿ ಉಪಚಾರದ ಕುರಿತು ಆರ್.ಎನ್.ಎಸ್ ಆಸ್ಪತ್ರೆ  ಮುರ್ಡೇಶ್ವರಕ್ಕೆ ಕರೆದುಕೊಂಡು ಹೋಗಿ ಇಬ್ಬರಿಗೂ ತುರ್ತು ಚಿಕಿತ್ಸೆ ನೀಡಿದ್ದು, ವೈದ್ಯರ ಸಲಹೆಯ ಮೇರೆಗೆ ಕೆ.ಎಮ್.ಸಿ ಮಣಿಪಾಲ ಆಸ್ಪತ್ರೆಗೆ ಒಂದು ಆಂಬ್ಯುಲೆನ್ಸ್ ಮೇಲಾಗಿ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 28-12-2021 ರಂದು ಪಿರ್ಯಾದಿಯ ಅಣ್ಣ ವಿಠ್ಠಲ ತಂದೆ ರಾಮಾ ದೇವಾಡಿಗ, ಈತನು ಬೆಳಿಗ್ಗೆ 06-45 ಗಂಟೆಗೆ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಶಿವಾನಂದ ತಂದೆ ರಾಮ ದೇವಾಡಿಗ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉತ್ತರಕೊಪ್ಪಾ, ತಾ: ಭಟ್ಕಳ ರವರು ದಿನಾಂಕ: 28-12-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 159/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಬಿಬಿ ಜೈನಾಬ್ ಕೋಂ. ಅಹ್ಮದ್ ಬಂಡಿ, ಪ್ರಾಯ-74 ವರ್ಷ, ಸಾ|| ಜಾಮಿಯಾಬಾದ್, ಹೆಬಳೆ, ತಾ: ಭಟ್ಕಳ. ಪಿರ್ಯಾದಿಯ ಅಕ್ಕಳಾದ ಇವಳು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಇವಳಿಗೆ ಆಸ್ಪತ್ರೆ ತೋರಿಸಿದ್ದರೂ ಸಹ ಕಡಿಮೆಯಾಗಿರಲಿಲ್ಲ. ಹೀಗಿರುತ್ತಾ ದಿನಾಂಕ: 08-12-2021 ರಂದು ಬೆಳಿಗ್ಗೆ 08-00 ಗಂಟೆಯ ಸಮಯಕ್ಕೆ ಮನೆಯಿಚಿದ ಹೋದವಳು ಸಂಬಂಧಿಕರ ಮನೆಗೂ ಹೋಗದೇ, ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಅಕ್ಕಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬಂಗಾಲಿ ಜಾಫ್ರಿ ತಂದೆ ಅಲಿ ಮೂಸಾ, ಪ್ರಾಯ-69 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ದಾರುಲ್ ಹಸನಾಥ್, ಫಿರ್ದೌಸ್ ನಗರ, ಹೆಬಳೆ, ತಾ: ಭಟ್ಕಳ ರವರು ದಿನಾಂಕ: 28-12-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 169/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂದೇಶ ತಂದೆ ಸೋಮಶೇಖರ ಕುರುಬ, ಸಾ|| ಮರಾಠಿಕೊಪ್ಪ, ತಾ: ಶಿರಸಿ (ಬೊಲೆರೋ ವಾಹನ ನಂ: ಕೆ.ಎ-31/ಎ-0917 ನೇದರ ಚಾಲಕ). ಈತನು ದಿನಾಂಕ: 22-12-2021 ರಂದು 16-30 ಗಂಟೆಗೆ ತನ್ನ ಬೊಲೆರೋ ವಾಹನ ನಂ: ಕೆ.ಎ-31/ಎ-0917 ನೇದನ್ನು ಶಿರಸಿ ಕಡೆಯಿಂದ ಮುಂಡಗೋಡ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಸವಾರ ಮಾಡಿಕೊಂಡು ಬಂದು, ರಸ್ತೆಯ ಪಕ್ಕದಿಂದ ನಡೆದುಕೊಂಡು ಹೋಗುತ್ತಿದ್ದ ಬಾಬಾಜಾನ್ ತಂದೆ ನನ್ನೆಸಾಬ್ ಶೇಖ್, ಪ್ರಾಯ-72 ವರ್ಷ, ವೃತ್ತಿ-ವ್ಯಾಪಾರ, ಸಾ|| ಸಿದ್ದಾಪುರ ಓಣಿ, ತಾ: ಮುಂಡಗೋಡ ಇವರಿಗೆ  ಹಿಂದಿನಿಂದ  ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಅವರ ತಲೆಗೆ, ಎಡಗಾಲಿಗೆ ಮತ್ತು ಬೆನ್ನಿನ ಭಾಗಕ್ಕೆ ಸಾದಾ ಗಾಯ ಹಾಗೂ ಎಡಗೈಗೆ ಭಾರೀ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಇಸ್ಮಾಯಿಲ್ ತಂದೆ ಬಾಬಾಜಾನ್ ಶೇಖ್, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಿದ್ದಾಪುರ ಓಣಿ, ತಾ: ಮುಂಡಗೋಡ ರವರು ದಿನಾಂಕ: 28-12-2021 ರಂದು 15-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 28-12-2021

at 00:00 hrs to 24:00 hrs

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 35/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳು ಅಂದಾಜು 60 ರಿಂದ 65 ವರ್ಷ ಪ್ರಾಯದ ಭಿಕ್ಷೆ ಬೇಡುವ ಅಪರಿಚಿತ ಹೆಂಗಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಇವಳು ದಿನಾಂಕ: 27-12-2021 ರಂದು ರಾತ್ರಿ 21-00 ಗಂಟೆಯಿಂದ ದಿನಾಂಕ: 28-12-2021 ರಂದು ಬೆಳಿಗ್ಗೆ 9-00 ಗಂಟೆಯ ನಡುವಿನ ಅವಧಿಯಲ್ಲಿ ಎಲ್ಲಿಂದಲೋ ಬಂದು ಹಳಿಯಾಳ ತಾಲೂಕಿನ ಕರ್ಲಕಟ್ಟಾ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್ ಗೋಡೆಯ ಹತ್ತಿರ ಹೃದಯಾಘಾತದಿಂದಲೋ ಅಥವಾ ಇನ್ನಾವುದೋ ಕಾರಣದಿಂದಲೋ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬಸವರಾಜ ತಂದೆ ಸಿದ್ದಪ್ಪ ಕಿತ್ತೂರ, ಪ್ರಾಯ-50 ವರ್ಷ, ವೃತ್ತಿ-ಸಿಪಾಯಿ ಕೆಲಸ (ಸಾಂಬ್ರಾಣಿ ಗ್ರಾಮ ಪಂಚಾಯತ್), ಸಾ|| ಸಾಂಬ್ರಾಣಿ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 28-12-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ಇತ್ತೀಚಿನ ನವೀಕರಣ​ : 29-12-2021 06:02 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080