ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 28-02-2021

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 07/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಶಿಕಾಂತ ತಂದೆ ಚಂದ್ರಕಾಂತ ಕೊಳಂಬಕರ, ಪ್ರಾಯ-35 ವರ್ಷ, ಸಾ|| ಕೋಡಿಭಾಗ, ಕಾರವಾರ (ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-30/ಡಬ್ಲ್ಯೂ-0362 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 28-02-2021 ರಂದು 16-30 ಗಂಟೆಗೆ ತನ್ನ ಬಾಬ್ತು ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-30/ಡಬ್ಲ್ಯೂ-0362 ನೇದರ ಮೇಲೆ ಹಿಂಬದಿಯಲ್ಲಿ ಪಿರ್ಯಾದಿಯನ್ನು ಕೂಡ್ರಿಸಿಕೊಂಡು ಮೋಟಾರ್ ಸೈಕಲನ್ನು ಕೈಗಾ ಟೌನಶಿಫ್ ಮೇನ್ ಗೇಟ್ ಕಡೆಯಿಂದ ಕುರ್ನಿಪೇಟೆ ಕಡೆಗೆ ಹೋಗಲು ರಾಜ್ಯ ಹೆದ್ದಾರಿ ರಸ್ತೆಯ ಮೇಲಿಂದ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಎಸ್.ಬಿ.ಐ ಬ್ಯಾಂಕ್ ಎದುರು ರಸ್ತೆಯ ಮೇಲೆ ತನ್ನ ಚಾಲನೆಯ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದು ತನ್ನ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತ ಪಿರ್ಯಾದಿಗೆ ಸಾದಾ ಸ್ವರೂಪದ ಗಾಯ ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ತನ್ನ ತಲೆಗೆ ಮತ್ತು ಮುಖಕ್ಕೆ ಭಾರೀ ಗಾಯ ಪಡಿಸಿಕೊಂಡು ಮರಣಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ದೇವೇಂದ್ರ ತಂದೆ ರಾಜಕುಮಾರ ಕುಸುವಾ, ಪ್ರಾಯ-21 ವರ್ಷ, ವೃತ್ತಿ-ಕೈಗಾದಲ್ಲಿ ದಿನಗೂಲಿ ಕೆಲಸ, ಸಾ|| ಲಕ್ಷ್ಮೀನಗರ, ಮಲ್ಲಾಪುರ, ಕಾರವಾರ ರವರು ದಿನಾಂಕ: 28-02-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 52/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದೇವೇಂದ್ರ ತಂದೆ ಓಂಕಾರ ಟಿ. ಎನ್, ಪ್ರಾಯ-38 ವರ್ಷ, ವೃತ್ತಿ-ಶಿಕ್ಷಕ, ಸಾ|| ತೆಕಲೆ, ಪೋ: ತುಂಬ್ರಿ. ತಾ: ಸಾಗರ, ಜಿ: ಶಿವಮೊಗ್ಗ, ಹಾಲಿ ಸಾ|| ಹುಲಿದೇವರಬನ, ತಾ: ಸಾಗರ, ಜಿ: ಶಿವಮೊಗ್ಗ (ಮೋಟಾರ್ ಸೈಕಲ್ ನಂ: ಕೆ.ಎ-14/ಇ.ಬಿ-1120 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 28-02-2021 ರಂದು 20-00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರಲ್ಲಿ ಹೊನ್ನಾವರದ ಹಡಿನಬಾಳ ಬ್ರಿಡ್ಜ್ ಹತ್ತಿರ ತನ್ನ ಬಾಬ್ತು ಮೋಟಾರ್ ಸೈಕಲ್ ನಂ: ಕೆ.ಎ-14/ಇ.ಬಿ-1120 ನೇದನ್ನು ಹೊನ್ನಾವರ ಕಡೆಯಿಂದ ಗೇರುಸೊಪ್ಪ ಕಡೆಗೆ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ, ಮೋಟಾರ್ ಸೈಕಲನ್ನು ಒಮ್ಮೇಲೆ ರಸ್ತೆಯ ಬಲಕ್ಕೆ ಚಲಾಯಿಸಿ ಗೇರುಸೊಪ್ಪ ಕಡೆಯಿಂದ ಹೊನ್ನಾವರ ಕಡೆಗೆ ಗಾಯಾಳು ಸುಬ್ರಮಣ್ಯ ತಂದೆ ರಾಮಚಂದ್ರ ಹೆಗಡೆ ಚಿಟ್ಟಾಣಿ, ಪ್ರಾಯ-60 ವರ್ಷ, ವೃತ್ತಿ-ಯಕ್ಷಗಾನ ಕಲಾವಿದ, ಸಾ|| ಮೊಗೆಹಳ್ಳ, ಗೇರುಸೊಪ್ಪ, ತಾ: ಹೊನ್ನಾವರ ಈತನು ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟರ್ ನಂ: ಕೆ.ಎ-47/ಎಸ್-3710 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸುಬ್ರಮಣ್ಯ ತಂದೆ ರಾಮಚಂದ್ರ ಹೆಗಡೆ, ಈತನ ಮುಖಕ್ಕೆ ಗಾಯ ಪಡಿಸಿ, ಮೂಗಿನಿಂದ ರಕ್ತ ಸೋರುವಂತೆ ಮಾಡಿದ್ದಲ್ಲದೇ ತಲೆಗೆ ಪೆಟ್ಟು ಪಡಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತಾನೂ ಸಹ ತನ್ನ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು ತನ್ನ ಎಡಹುಬ್ಬಿಗೆ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯ ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಜಗದೀಶ ತಂದೆ ಸೊಮಯ್ಯ ಗೌಡ, ಪ್ರಾಯ-30 ವರ್ಷ, ವೃತ್ತಿ-ವ್ಯಾಪಾರ, ಸಾ|| ಜನಕಡಕ್ಕಲ್, ಪೋ: ಮುಟ್ಟಾ, ತಾ: ಹೊನ್ನಾವರ ರವರು ದಿನಾಂಕ: 28-02-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೊಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 10/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ದತ್ತಾ ತಂದೆ ಲಕ್ಷ್ಮಣ ದೇಸಾಯಿ, ಪ್ರಾಯ-ಅಂದಾಜು 60 ವರ್ಷ, ಸಾ|| ಉಳವಿ, ತಾ: ಜೊಯಿಡಾ. ನಮೂದಿತ ಆರೋಪಿತನು ದಿನಾಂಕ: 28-02-2021 ರಂದು 15-05 ಗಂಟೆಗೆ ಯಾವುದೇ ರೀತಿಯ ಅಧೀಕೃತ ಪಾಸ್ ಯಾ ಪರ್ಮಿಟ್ ಇಲ್ಲದೇ ಅನಧೀಕೃತವಾಗಿ ಗೋವಾ ರಾಜ್ಯದಿಂದ 1). 750 ML ನ Royal Queen Whisky-01, ಅ||ಕಿ|| 98/- ರೂಪಾಯಿ, 2). 500 ML ನ KingFisher Beer-10, ಅ||ಕಿ|| 650/- ರೂಪಾಯಿ, 3). ಕೆಂಪು ಬಣ್ಣದ ದ್ರವ ಸಾರಾಯಿ ತುಂಬಿದ 180 ML ನ Doctors interchoice Brandy-01, ಅ||ಕಿ|| 30/- ರೂಪಾಯಿ, 4). ಬಿಳಿ ಬಣ್ಣದ ದ್ರವ ಸಾರಾಯಿ ತುಂಬಿದ 180 ML ನ Doctors interchoice Brandy-01, ಅ||ಕಿ|| 30/- ರೂಪಾಯಿ, 5). ಒಂದು ಲೀಟರ್ ನೀರಿನ ಬಾಟಲಿಯಲ್ಲಿ ಪೂರ್ಣ ತುಂಬಿದ ಉರಾಖ್ ಸಾರಾಯಿ, ಅ||ಕಿ|| 100/- ರೂಪಾಯಿ. ಇವುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಉಳವಿಯ ಹಳೇ ಹೈಸ್ಕೂಲ್ ಹಿಂದುಗಡೆ ಗದ್ದೆ ಬಯಲಿನಲ್ಲಿರುವಾಗ ದಾಳಿಯ ಕಾಲಕ್ಕೆ ಆರೋಪಿತನು ದಸ್ತಗಿರಿಗೆ ಸಿಗದೆ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಲಕ್ಷ್ಮಣ ಎಲ್. ಪೂಜಾರಿ, ಪಿ.ಎಸ್.ಐ, ಜೊಯಿಡಾ ಪೊಲೀಸ್ ಠಾಣೆ ರವರು ದಿನಾಂಕ: 28-02-2021 ರಂದು 18-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 31/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅನೀಲ್ ಕುಮಾರ ತಂದೆ ವಿಕ್ಟೋರಿಯಾ ಮೇಲಂ, ಪ್ರಾಯ-21 ವರ್ಷ, ವೃತ್ತಿ-ವ್ಯಾಪಾರ, ಸಾ|| ಮಂಟೂರ ರಸ್ತೆ, ಹುಬ್ಬಳ್ಳಿ (ಆಟೋ ರಿಕ್ಷಾ ನಂ: ಕೆ.ಎ-63/7300 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 19-02-2021 ರಂದು 10-15 ಗಂಟೆಯ ಸುಮಾರಿಗೆ ತನ್ನ ಆಟೋ ರಿಕ್ಷಾ ನಂ: ಕೆ.ಎ-63/7300 ನೇದರಲ್ಲಿ ಗಾಯಾಳು ಸಾಕ್ಷಿದಾರ ಶ್ರೀ ಮುರಾಧ್ ತಂದೆ ಅಮೀರಜಾನ್ ಬೇಪಾರಿ ಹಾಗೂ ಇತರೇ 3 ಜನ ಸಾಕ್ಷಿದಾರರನ್ನು ಕೂಡ್ರಿಸಿಕೊಂಡು ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ಹುಬ್ಬಳಿ ಕೆಡಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ, ಆಟೋ ರಿಕ್ಷಾವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳದೇ ಹುಬ್ಬಳ್ಳಿ ರಸ್ತೆಯ ಅರಳಿಕೊಪ್ಪಾ ಕ್ರಾಸ್ ಸಮೀಪದ ತಿರುವಿನಲ್ಲಿ ತನ್ನ ಆಟೋ ರಿಕ್ಷಾವನ್ನು ಪಲ್ಟಿ ಕೆಡವಿ ಅಪಘಾತ ಪಡಿಸಿ, ಪಿರ್ಯಾದುದಾರರ ಮಗನಾದ ಸಾಕ್ಷಿದಾರ ಶ್ರೀ ಮುರಾಧ್ ರವರ ಬಲಗಾಲಿನ ತೊಡೆಗೆ ಭಾರೀ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಮೀರಜಾನ್ ತಂದೆ ಬಾಬುಸಾಬ್ ಬೇಪಾರಿ, ಪ್ರಾಯ-51 ವರ್ಷ, ವೃತ್ತಿ-ವ್ಯಾಪಾರ, ಸಾ|| ಮಂಟೂರ ರಸ್ತೆ, ಹುಬ್ಬಳ್ಳಿ ರವರು ದಿನಾಂಕ: 28-02-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 28-02-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

 

======||||||||======

 

 

 

 

 

ಇತ್ತೀಚಿನ ನವೀಕರಣ​ : 01-03-2021 02:01 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080