ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 28-07-2021
at 00:00 hrs to 24:00 hrs
ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 64/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಭಿಷೇಕ ತಂದೆ ತುಕಾರಾಮ ಪಾಲೇಕರ, ಪ್ರಾಯ-25 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಜೋಡುಕಟ್ಟೆ ಹತ್ತಿರ, ಮರಾಠಿಕೊಪ್ಪ, ತಾ: ಶಿರಸಿ (ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-5319 ನೇದರ ಚಾಲಕ). ಪಿರ್ಯಾದಿಯವರು ದಿನಾಂಕ: 28-07-20211 ರಂದು ಮಧ್ಯಾಹ್ನ ಶಿರಸಿಯ ಅಶ್ವಿನಿ ಸರ್ಕಲ್ ಹತ್ತಿರ ಇರುವ ತಾನು ಕೆಲಸ ಮಾಡುವ ಎಸ್.ಬಿ.ಐ ಬ್ಯಾಂಕಿನಲ್ಲಿ ಕೆಲಸ ನಿರ್ವಹಿಸಿ, ಮಧ್ಯಾಹ್ನ ಊಟಕ್ಕೆ ಹೋಗಲು ತನ್ನ ಬಾಬ್ತು ಕಾರ್ ನಂ: ಕೆ.ಎ-31/ಎನ್-6064 ನೇದನ್ನು ಮರಾಠಿಕೊಪ್ಪ ರಸ್ತೆಯಲ್ಲಿ ಚಲಾಯಿಸಿಕೊಂಡು ಶಿರಸಿ-ಯಲ್ಲಾಪುರ ರಸ್ತೆಯಿಂದ ಜೋಡುಕಟ್ಟೆ ಕಡೆಗೆ ಹೋಗುತ್ತಾ ಮಧ್ಯಾಹ್ನ 14-15 ಗಂಟೆಯ ಸುಮಾರಿಗೆ ನಿತ್ಯಾನಂದ ಮಠದ ಹತ್ತಿರ ತಲುಪಿದಾಗ ಎದುರಿನಿಂದ ನಮೂದಿತ ಆರೋಪಿತನು ಮೋಟಾರ್ ಸೈಕಲ್ ನಂ: ಕೆ.ಎ-47/ಎಚ್-5319 ನೇದನ್ನು ಜೋಡುಕಟ್ಟೆ ಕಡೆಯಿಂದ ಶಿರಸಿ-ಯಲ್ಲಾಪುರ ರಸ್ತೆಯ ಕಡೆಗೆ ಮರಾಠಿಕೊಪ್ಪ ರಸ್ತೆಯಲ್ಲಿ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ತನ್ನ ಮುಂದೆ ಹೋಗುತ್ತಿದ್ದ ಕಾರನ್ನು ಓವರಟೇಕ್ ಮಾಡಲು ರಸ್ತೆಯಲ್ಲಿ ತನ್ನ ಬದಿಯನ್ನು ಬಿಟ್ಟು ಬಲಬದಿಗೆ ತನ್ನ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿಯವರ ಕಾರಿನ ಮುಂಭಾಗಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತಾನು ರಸ್ತೆಯಲ್ಲಿ ಬಿದ್ದು ಗಾಯನೋವುಂಟು ಮಾಡಿಕೊಂಡು, ಪಿರ್ಯಾದಿಯವರ ಹಣೆಗೆ ಸಾದಾ ಸ್ವರೂಪದ ಗಾಯನೋವುಂಟು ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ನಾರಾಯಣ ತಂದೆ ಮಹಾಬಲೇಶ್ವರ ಭಟ್, ಪ್ರಾಯ-45 ವರ್ಷ, ವೃತ್ತಿ- ಅಸಿಸ್ಟೆಂಟ್ ಮ್ಯಾನೇಜರ್, ಎಸ್.ಬಿ.ಐ ಬ್ಯಾಂಕ್, ಶಿರಸಿ, ಸಾ|| ಹಿತ್ಲಕೈ, ಪೋ: ಹಸರಗೋಡ, ತಾ: ಸಿದ್ದಾಪುರ ರವರು ದಿನಾಂಕ: 28-07-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 74/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಯಾಜ್ ಹುಸೇನಸಾಬ್ ಪಟ್ಟೇಗಾರ್, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೃಂದಾವನ ಕಾಲೋನಿ, ಕಸ್ತೂರಬಾ ನಗರ, ತಾ: ಶಿರಸಿ, 2]. ನಜೀರ್ ರಾಜೇಸಾಬ್ ಕೊಡಬಾಳ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಲಮಾಣಿ ಓಣಿ, ಕಸ್ತೂರಬಾ ನಗರ, ತಾ: ಶಿರಸಿ, 3]. ಅಬ್ದುಲ್ ರಜಾಕ್ ಹಜಾರೇಸಾಬ್ ಹತ್ತಿಮಟ್ಟೂರ್, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಲಮಾಣಿ ಓಣಿ, ಕಸ್ತೂರಬಾ ನಗರ, ತಾ: ಶಿರಸಿ, 4]. ಮಹಮ್ಮದಗೌಸ್ ಹಜಾರೇಸಾಬ್ ಹತ್ತಿಮಟ್ಟೂರ್, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಲಮಾಣಿ ಓಣಿ, ಕಸ್ತೂರಬಾ ನಗರ, ತಾ: ಶಿರಸಿ, 5]. ಮಹಮ್ಮದಗೌಸ್ ಹುಸೇನಸಾಬ್ ಬೆನ್ನಟ್ಟಿ, ಪ್ರಾಯ-34 ವರ್ಷ, ಸಾ|| ಗರೀಬ್ ನವಾಜ್ ಮಸೀದಿ ಹತ್ತಿರ, ಕಸ್ತೂರಬಾ ನಗರ, ತಾ: ಶಿರಸಿ. ಈ ನಮೂದಿತ ಆರೋಪಿತರು ದಿನಾಂಕ: 28-07-2021 ರಂದು 01-30 ಗಂಟೆಗೆ ಶಿರಸಿ ತಾಲೂಕಿನ ಬಚಗಾಂವ್ ಬಸ್ ನಿಲ್ದಾಣದ ಹಿಂದಿನ ಅರಣ್ಯ ಪ್ರದೇಶದಲ್ಲಿ ಅದೃಷ್ಟದ ಆಟವಾದ ಇಸ್ಪೀಟ್ ಎಲೆಗಳ ಅಂದರ್-ಬಾಹರ್ ಜೂಗಾರಾಟದ ಮೇಲೆ ತಮ್ಮ ತಮ್ಮ ಲಾಭಕ್ಕಾಗಿ ಹಣವನ್ನು ಪಂಥ ಕಟ್ಟಿ ಆಡುತ್ತಿದ್ದಾಗ ಜೂಗಾರಾಟದ ಸಲಕರಣೆಗಳಾದ ಇಸ್ಪೀಟ್ ಎಲೆಗಳು-52, ಅ||ಕಿ|| 00.00/- ರೂಪಾಯಿ, ನಗದು ಹಣ 5,730/- ರೂಪಾಯಿ, ತಿಳಿ ಹಸಿರು ಬಣ್ಣದ ಚಾಪೆ-01, ಅ||ಕಿ|| 00.00/- ರೂಪಾಯಿ, ಸ್ವಲ್ಪ ಉರಿದ ಮೇಣದ ಬತ್ತಿ-02, ಅ||ಕಿ|| 00.00/- ರೂಪಾಯಿ ಹಾಗೂ ಇವುಗಳೊಂದಿಗೆ ಆರೋಪಿತರ ತಾಬಾ ಸಿಕ್ಕಂತಹ ಒಪ್ಪೋ ಕಂಪನಿಯ ಮೊಬೈಲ್-01, ಅ||ಕಿ|| 6,000/- ರೂಪಾಯಿ, ರಿಯಲ್ ಮಿ ಕಂಪನಿಯ ಮೊಬೈಲ್-01, ಅ||ಕಿ|| 3,000/- ರೂಪಾಯಿ, ಐಟೆಲ್ ಕಂಪನಿಯ ಕೀ-ಪ್ಯಾಡ್ ಮೊಬೈಲ್-02, ಅ||ಕಿ|| 2,000/- ರೂಪಾಯಿ. ಇವುಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಈರಯ್ಯ ಡಿ. ಎನ್, ಪಿ.ಎಸ್.ಐ (ಕಾ&ಸು), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 28-07-2021 ರಂದು 03-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 130/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಬಸಯ್ಯ ಹಿರೇಮಠ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ದಾಂಡೇಲಿ (ಕಾರ್ ನಂ: ಕೆ.ಎ-65/0814 ನೇದರ ಚಾಲಕ). ಈತನು ದಿನಾಂಕ: 28-07-2021 ರಂದು 15-00 ಗಂಟೆಗೆ ತನ್ನ ಕಾರ್ ನಂ: ಕೆ.ಎ-65/0814 ನೇದನ್ನು ದಾಂಡೇಲಿ ಬದಿಯಿಂದ ಹಳಿಯಾಳ ಬದಿಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಕಾರನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಹಳಿಯಾಳ ತಾಲೂಕಿನ ಕೆಸರೊಳ್ಳಿ ಗ್ರಾಮದ ಮಂಜುನಾಥ ಬಾಲಕೇರ ಇವರ ಜಮೀನಿನ ಹತ್ತಿರದ ರಸ್ತೆಯ ತಿರುವಿನಲ್ಲಿ ಡಾಂಬರ್ ರಸ್ತೆಯ ಪಕ್ಕದ ಬ್ರಿಡ್ಜ್ ಕಟ್ಟೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ತನ್ನ ಕಾರನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿನಯಕುಮಾರ ತಂದೆ ಭೀಮಸಿ ಬೆಳವಡಿ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| 3 ನಂಬರ್ ಗೇಟ್ ಹತ್ತಿರ, ದಾಂಡೇಲಿ ರವರು ದಿನಾಂಕ: 28-07-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 89/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತೆ ಕಾಣೆಯಾದ ಹೆಂಗಸು ಶ್ರೀಮತಿ ರೇಖಾ ವಿನಾಯಕ ಹೆಗಡೆ, ಪ್ರಾಯ-26 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಬಿಳೇಕಲ್, ಸರಕುಳಿ ಗ್ರಾಮ, ತಾ: ಸಿದ್ದಾಪುರ. ನಮೂದಿತೆ ಕಾಣೆಯಾದವಳನ್ನು ಪಿರ್ಯಾದಿಯು ಕಳೆದ 2013 ರ ಜುಲೈ ತಿಂಗಳಲ್ಲಿ ಮದುವೆಯಾಗಿದ್ದು, ಇತ್ತೀಚೆಗೆ ರೇಖಾ ಇವಳು ಯಾರೊಂದಿಗೋ ಪೋನಿನಲ್ಲಿ ತುಂಬಾ ಹೊತ್ತು ಮಾತನಾಡುತ್ತಾ ಇರುತ್ತಿದ್ದಳು. ಈ ಬಗ್ಗೆ ತಾನು ಹಾಗೂ ರೇಖಾಳ ತವರು ಮನೆಯವರು ಅವಳಿಗೆ ಬುದ್ಧಿಮಾತು ಹೇಳಿದ್ದು, ಆದರೂ ಸಹ ಅವಳು ಅದೇ ರೀತಿ ಪೋನಿನಲ್ಲಿ ಮಾತನಾಡುವುದನ್ನು ಮುಂದುವರೆಸಿದ್ದರಿಂದ ಕಳೆದ ದಿನಾಂಕ: 19-07-20211 ರಂದು ಅವಳ ತವರು ಮನೆಯವರು ಬಂದು ಮತ್ತೆ ಬುದ್ಧಿಮಾತು ಹೇಳಿ ಅವಳು ಬಳಸುತ್ತಿದ್ದ ಸಿಮ್ ಅನ್ನು ಮುರಿದು ಹಾಕಿ ಹೋಗಿದ್ದರು. ಹೀಗಿರುತ್ತಾ ದಿನಾಂಕ: 25-07-20211 ರಂದು ರಾತ್ರಿ ಊಟ ಮಾಡಿ ಮಲಗಿದ್ದವಳು, ಬೆಳಿಗ್ಗೆ 06-00 ಗಂಟೆಯ ಒಳಗೆ ತನ್ನ ಎರಡೂ ಬ್ಯಾಗ್ ಗಳೊಂದಿಗೆ ಮನೆ ಬಿಟ್ಟು ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡಬೇಕೆಂದು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ವಿನಾಯಕ ತಂದೆ ವಿಶ್ವೇಶ್ವರ ಹೆಗಡೆ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಬಿಳೆಕಲ್, ಸರಕುಳಿ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 28-07-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 90/2021, ಕಲಂ: 341, 323, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ಈಶ್ವರ ನಾಯ್ಕ, ಪ್ರಾಯ-36 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹಳಗೋಡ ಮನೆ, ಕುಳಿಬೀಡು ಗ್ರಾಮ, ತಾ: ಸಿದ್ದಾಪುರ. ಈತನು ಪಿರ್ಯಾದುದಾರನ ಅಣ್ಣನ ಮಗನಿದ್ದು ಹಾಗೂ ಪಿರ್ಯಾದಿಯ ತೋಟದ ಪಕ್ಕದವನು ಇದ್ದು, ಪಿರ್ಯಾದಿಯೊಂದಿಗೆ ನೀರು ಹಾಗೂ ಜಮೀನಿನ ಸಲುವಾಗಿ ತೊಂದರೆ ಕೊಡುತ್ತಾ ಬಂದಿರುತ್ತಾನೆ. ಹೀಗಿರುವಲ್ಲಿ ಕಳೆದ ಕೆಲವು ದಿವಸಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಿರ್ಯಾದಿ ಹಾಗೂ ಆರೋಪಿತನ ತೋಟದಲ್ಲಿ ಮಳೆಯಿಂದ ಮಣ್ಣು ಕೊಚ್ಚಿಕೊಂಡು ಹೋಗಿ ಹಾನಿಯಾಗಿರುತ್ತದೆ. ಹೀಗಿರುವಲ್ಲಿ ದಿನಾಂಕ: 24-07-2021 ರಂದು ಬೆಳಿಗ್ಗೆ 11-00 ಗಂಟೆಗೆ ಆರೋಪಿತನು ತನ್ನ ತೋಟದಲ್ಲಿ ನಿಂತುಕೊಂಡು ಪಿರ್ಯಾದುದಾರನಿಗೆ ‘ಬೋಳಿ ಮಗನೇ, ಸೂಳೆ ಮಗನೇ, ನೀನೇ ಉದ್ದೇಶಪೂರ್ವಕವಾಗಿ ಏರಿ ಒಡೆದು ನಮ್ಮ ತೋಟವನ್ನು ನಾಶ ಮಾಡಿದ್ದೀಯಾ' ಅಂತಾ ಪಿರ್ಯಾದಿಗೆ ಅವಾಚ್ಯವಾಗಿ ಬೈಯ್ದಾಗ, ಪಿರ್ಯಾದಿಯು ‘ಯಾಕೆ ಬೈಯ್ಯುತ್ತಿಯಾ?’ ಅಂತಾ ಕೇಳಿದ್ದಕ್ಕೆ ಆರೋಪಿತನು ಪಿರ್ಯಾದಿಯ ಮೈಮೇಲೆ ಏರಿ ಬಂದು ಪಿರ್ಯಾದಿಗೆ ಎಲ್ಲಿಗೂ ಹೋಗದಂತೆ ಗಟ್ಟಿಯಾಗಿ ಹಿಡಿದು ನೆಲಕ್ಕೆ ಕೆಡವಿ, ಅಲ್ಲೇ ಇದ್ದ ಬಡಿಗೆಯಿಂದ ಪಿರ್ಯಾದಿಯ ಕೈ ಕಾಲುಗಳಿಗೆ ಹಾಗೂ ಮೈ ಮೇಲೆ ಹೊಡೆದಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕನ್ನಾ ತಂದೆ ರಾಮಾ ನಾಯ್ಕ, ಪ್ರಾಯ-60 ವರ್ಷ, ಸಾ|| ಕುಳಿಬೀಡು ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 28-07-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 28-07-2021
at 00:00 hrs to 24:00 hrs
ಪ್ರಕರಣಗಳು ದಾಖಲಾಗಿರುವುದಿಲ್ಲ....
======||||||||======