ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 28-06-2021

at 00:00 hrs to 24:00 hrs

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 4, 5, 7, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಹಾಗೂ ಕಲಂ: 11(1) & (D) PREVENTION OF CRUELTY TO ANIMALS ACT-1960 ಮತ್ತು ಕಲಂ: 192 ಐ.ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಕ್ಸೂದ್ ತಂದೆ ಮೂಸಾ ಫರಾಸ್, ಸಾ|| ಕ್ರಿಶ್ಚಿಯನಕೇರಿ, ಬೈಲೂರು, ತಾ: ಭಟ್ಕಳ, 2]. ಮಹಮ್ಮದ್ ಪರ್ವೇಜ್ ತಂದೆ ಹುಸೇನಸಾಬ್ ಶೇಖ್, ಪ್ರಾಯ-40 ವರ್ಷ, ವೃತ್ತಿ-ಬಟ್ಟೆ ವ್ಯಾಪಾರ, ಸಾ|| ನ್ಯಾಶನಲ್ ಕಾಲೋನಿ, ಮಾವಳ್ಳಿ-01, ಮುರ್ಡೇಶ್ವರ, ತಾ: ಭಟ್ಕಳ, ಹಾಲಿ ಸಾ|| ಅಲಫಲ್ ಕಾಲೋನಿ, ಬಸ್ತಿಮಕ್ಕಿ, ಮಾವಳ್ಳಿ-01, ಮುರ್ಡೇಶ್ವರ, ತಾ: ಭಟ್ಕಳ, 3]. ಗಣಿ ಶೇಖ್, ಸಾ|| ನ್ಯಾಶನಲ್ ಕಾಲೋನಿ, ಮಾವಳ್ಳಿ-01, ಮುರ್ಡೇಶ್ವರ, ತಾ: ಭಟ್ಕಳ. ಈ ನಮೂದಿತ ಆರೋಪಿತರು ಸೇರಿಕೊಂಡು ದಿನಾಂಕ: 28-06-2021 ರಂದು ಬೆಳಿಗ್ಗೆ 06-40 ಗಂಟೆಗೆ ಹೋರಿಯನ್ನು ವಧೆ ಮಾಡುವ ಉದ್ದೇಶದಿಂದ ಜಾನುವಾರು ಸಾಗಾಟ ಮಾಡಲು ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಪಾಸ್ ಯಾ ಪರ್ಮಿಟ್ ಇಲ್ಲದೇ ಹೋರಿಯನ್ನು ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಮಾರುತಿ ಓಮಿನಿ ವಾಹನ ನಂ: ಕೆ.ಎ-20/ಎಮ್-8510 ನೇದರಲ್ಲಿ  ತುಂಬಿ ತೂದಳ್ಳಿ ಕಡೆಯಿಂದ ಮುರ್ಡೇಶ್ವರ ಕಡೆಗೆ ಸಾಗಾಟ ಮಾಡುತ್ತಾ ಆರೋಪಿ 2 ನೇಯವನು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 1 ಮತ್ತು 3 ನೇಯವರು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವೀಂದ್ರ ಎಮ್. ಬಿರಾದರ, ಪಿ.ಎಸ್.ಐ (ಕಾ&ಸು), ಮುರ್ಡೇಶ್ವರ ಪೊಲೀಸ್ ಠಾಣೆ ರವರು ದಿನಾಂಕ: 28-06-2021 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಕಳೆದ 2011 ನೇ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಎಚ್.ಸಿ.ಎಲ್ ಕಂಪನಿಯ 05 ಕಂಪ್ಯೂಟರ್ ಮಾನಿಟರ್ ಹಾಗೂ 05 ಸಿ.ಪಿ.ಯು ಗಳನ್ನು ರಾಮನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಲಾಗಿದ್ದು, ಸದರ ಕಂಪ್ಯೂಟರ್ ಗಳನ್ನು ಪ್ರತ್ಯೇಕ ಕೋಣೆಯಲ್ಲಿ ಇಟ್ಟು, ಸದರ ರೂಮಿಗೆ ಬೀಗವನ್ನು ಹಾಕಲಾಗಿತ್ತು. ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 26-06-2021 ರಂದು ಬೆಳಿಗ್ಗೆ 10-00 ಗಂಟೆಯಿಂದ ದಿನಾಂಕ: 27-06-2021 ರಂದು ಮಧ್ಯಾಹ್ನ 03-30 ಗಂಟೆಯ ನಡುವಿನ ಅವಧಿಯಲ್ಲಿ ರಾಮನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪ್ಯೂಟರ್ ಕೊಠಡಿಯ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಕೊಠಡಿಯಲ್ಲಿದ್ದ ಅಂದಾಜು 20,000/- ರೂಪಾಯಿ ಮೌಲ್ಯದ ಎಚ್.ಸಿ.ಎಲ್ ಕಂಪನಿಯ ಒಂದು ಸೆಟ್ ಕಂಪ್ಯೂಟರ್ ಮಾನಿಟರ್ ಹಾಗೂ ಸಿ.ಪಿ.ಯು ವನ್ನು ಕಳ್ಳತನ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಪುಂಡ್ಲೀಕ ತಂದೆ ಗಣಬಾ ಮಿರಾಶಿ, ಪ್ರಾಯ-58 ವರ್ಷ, ವೃತ್ತಿ-ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ರಾಮನಗರ, ಸಾ|| ಗಣೇಶ ಗಲ್ಲಿ, ರಾಮನಗರ, ತಾ: ಜೋಯಿಡಾ ರವರು ದಿನಾಂಕ: 28-06-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 28-06-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಚಮನಸಾಬ್ ತಂದೆ ರಾಜೇಸಾಬ್ ಮೇಳಗಟ್ಟಿ, ಪ್ರಾಯ-ಸುಮಾರು 44 ವರ್ಷ, ಸಾ|| ದೇವಿ ಹೊಸೂರ, ಹಾವೇರಿ ಎನ್ನುವ ಹೆಸರಿರಬಹುದಾದ ಅಪರಿಚಿತನಾಗಿದ್ದು, ಈತನು ದಿನಾಂಕ: 27-06-2021 ರಂದು 22-30 ಗಂಟೆಯಿಂದ ದಿನಾಂಕ: 28-06-2021 ರಂದು ಬೆಳಿಗ್ಗೆ 08-30 ಗಂಟೆಯ ನಡುವಿನ ಅವಧಿಯಲ್ಲಿ ಎಲ್ಲಿಂದಲೋ ಬಂದವನು ಕಾರವಾರ, ಶಿರವಾಡ, ಜಾಂಬಾ ಕ್ರಾಸ್, ಇಂಡಸ್ಟ್ರೀಯಲ್ ಏರಿಯಾ ಹತ್ತಿರ ಗಿಡಗಂಟಿಗಳ ಖುಲ್ಲಾ ಸ್ಥಳದಲ್ಲಿ ಮಲಗಿಕೊಂಡ ರೀತಿಯಲ್ಲಿ ಯಾವುದೋ ಖಾಯಿಲೆಯಿಂದ ಮರಣಪಟ್ಟಿರಬಹು ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಕಬೂಲ್ ತಂದೆ ಕಲಂದರಸಾಬ್ ಸವಣೂರ, ಪ್ರಾಯ-51 ವರ್ಷ, ವೃತ್ತಿ-ಗುಜರಿ ವ್ಯಾಪಾರ, ಸಾ|| ಇಂಡಸ್ಟ್ರೀಯಲ್ ಏರಿಯಾ ಹತ್ತಿರ, ಜಾಂಬಾ ಕ್ರಾಸ್, ಶಿರವಾಡ, ಕಾರವಾರ ರವರು ದಿನಾಂಕ: 28-06-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಚಿತ್ತಾಕುಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಾಜೇಂದ್ರ ತಂದೆ ಇರು ನಾಗೇಕರ್, ಪ್ರಾಯ-58 ವರ್ಷ, ವೃತ್ತಿ-ನಿರುದ್ಯೋಗಿ, ಸಾ|| ಕಿನ್ನರ, ಅಂಬೆಜೋಗ, ಕಾರವಾರ, ಹಾಲಿ ಸಾ|| ಸೋನಾರವಾಡಾ, ರಾಮಸೀತಾ ದೇವಸ್ಥಾನದ ಹತ್ತಿರ, ಸದಾಶಿವಗಡ, ಕಾರವಾರ. ಪಿರ್ಯಾದಿಯ ತಂದೆಯಾದ ಈತನು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಔಷಧೋಪಚಾರ ಮಾಡುತ್ತಿದ್ದವನು ಮಾನಸಿಕವಾಗಿ ಖಿನ್ನನಾಗಿದ್ದನು. ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 28-06-2021 ರಂದು 14-00 ಘಂಟೆಗೆ ಹೊರಗಡೆ ಹೋಗಿ ತಿರುಗಾಡಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೊರಗೆ ಹೋದವನು, ಅಸ್ನೋಟಿ ರೈಲ್ವೇ ಸ್ಟೇಷನ್ ಹತ್ತಿರ ಅಕೇಶಿಯಾ ಮರಕ್ಕೆ ನೈಲಾನ್ ಹಾಗೂ ಕತ್ತದ ಹಗ್ಗದಿಂದ ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹೊರತು ತನ್ನ ತಂದೆಯ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಜೇಶ ತಂದೆ ರಾಜೇಂದ್ರ ನಾಗೇಕರ್, ಪ್ರಾಯ-32 ವರ್ಷ, ವೃತ್ತಿ-ಕೈಗಾದಲ್ಲಿ ಕಾಂಟ್ರ್ಯಾಕ್ಟರ್ ಹತ್ತಿರ ಕೆಲಸ, ಸಾ|| ಕಿನ್ನರ, ಅಂಬೆಜೋಗ, ಕಾರವಾರ. ಹಾಲಿ ಸಾ|| ಸೋನಾರವಾಡಾ, ರಾಮಸೀತಾ ದೇವಸ್ಥಾನದ ಹತ್ತಿರ, ಸದಾಶಿವಗಡ, ಕಾರವಾರ ರವರು ದಿನಾಂಕ: 28-06-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಜಗದೀಶ ತಂದೆ ಬೀರಾ ಗೌಡ, ಪ್ರಾಯ-26 ವರ್ಷ ವೃತ್ತಿ-ರೈತಾಬಿ ವ ಕೂಲಿ ಕೆಲಸ, ಸಾ|| ಹಾರುಮಾಸ್ಕೇರಿ, ತಾ: ಕುಮಟಾ. ಈತನು ಕಳೆದ ಒಂದುವರೆ ವರ್ಷದಿಂದ ಮಾನಸಿಕ ಖಾಯಿಲೆಗೆ ಒಳಗಾಗಿ ಖಿನ್ನತೆಯಿಂದ ಬಳಲುತ್ತಿದ್ದವನು, ದಿನಾಂಕ: 27-06-2021 ರಂದು ರಾತ್ರಿ, 22-00 ಗಂಟೆಯಿಂದ ದಿನಾಂಕ: 28-06-2021 ರ ಬೆಳಿಗ್ಗೆ 06-30 ರ ನಡುವಿನ ಅವಧಿಯಲ್ಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನ ಮನೆಯಾದ ಹಾರುಮಾಸ್ಕೇರಿಯ ಸಮೀಪದಲ್ಲಿರುವ ಹಳಿಕಟ್ಟಿ ಹೊಳೆಯ ದಡದಲ್ಲಿದ್ದ ಅಕೇಶಿಯಾ ಮರಕ್ಕೆ ಟವೆಲಿನಿಂದ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಇದರ ಹೊರತು ಮೃತನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಮೇಶ ತಂದೆ ಬೀರಾ ಗೌಡ, ಪ್ರಾಯ-36 ವರ್ಷ, ವೃತ್ತಿ-ನಿವೃತ್ತ ಇಂಡಿಯನ್ ಆರ್ಮಿ ನೌಕರ, ಸಾ|| ಹಾರುಮಾಸ್ಕೇರಿ, ತಾ: ಕುಮಟಾ ರವರು ದಿನಾಂಕ: 28-06-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ವಿನಾಯಕ @ ವಿನಯ ತಂದೆ ಆನಂದಕುಮಾರ ಪಾಟೀಲ್, ಪ್ರಾಯ-30 ವರ್ಷ, ವೃತ್ತಿ-ಪ್ಲಂಬಿಂಗ್ ಮತ್ತು ಇಲೆಕ್ಟ್ರಿಕಲ್ ಕೆಲಸ, ಸಾ|| ಗಣೇಶ ನಗರ, ಕನ್ನಡ ಶಾಲೆಯ ಹತ್ತಿರ, ತಾ: ಶಿರಸಿ. ಪಿರ್ಯಾದಿಯ ಮಗನಾದ ಈತನು ಪಿರ್ಯಾದಿಯ ಮಗನಿದ್ದು, ಸದ್ರಿಯವನು ಪ್ಲಂಬಿಂಗ್ ಮತ್ತು ಇಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದವನು, ದಿನಾಂಕ: 25-06-2021 ರಂದು ಕಸ್ತೂರಬಾ ನಗರದ ಸ್ವಸ್ತಿಕ್ ಬಡಾವಣೆಯಲ್ಲಿನ ನಾಗರಾಜ ಪಾವಸ್ಕರ ಇವರ ನಿರ್ಮಾಣ ಹಂತದ ಮನೆಯ ವಾಟರ್ ಟ್ಯಾಂಕಿಗೆ ತನ್ನ ಸಹದ್ಯೋಗಿ ಪ್ರವೀಣ ಗೌಡ ಈತನೊಂದಿಗೆ ಸೇರಿ ಪೈಪ್ ಜೋಡಣೆ ಕಾರ್ಯದಲ್ಲಿರುವಾಗ 16-15 ಗಂಟೆಯ ಸುಮಾರಿಗೆ ಆಕಸ್ಮಿಕವಾಗಿ ಕಾಲು ಜಾರಿ ಕಟ್ಟಡದ ಮೇಲಿನಿಂದ ಬಿದ್ದು ತಲೆಗೆ ತೀವೃವಾಗಿ ಗಾಯಗೊಂಡವನಿಗೆ, ಶಿರಸಿಯ ಟಿ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಉಪಚಾರದ ಕುರಿತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವನು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 28-06-2021 ರಂದು ಬೆಳಿಗ್ಗೆ 08-15 ಗಂಟೆಗೆ ಮೃತಪಟ್ಟಿದ್ದು, ಇದರ ಹೊರತು ಮೃತ ತನ್ನ ಮಗನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಕಸ್ತೂರಿ ಕೋಂ. ಆನಂದಕುಮಾರ ಪಾಟೀಲ್, ಪ್ರಾಯ-53 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಗಣೇಶ ನಗರ, ಕನ್ನಡ ಶಾಲೆ ಹತ್ತಿರ, ತಾ: ಶಿರಸಿ ರವರು ದಿನಾಂಕ: 28-06-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

ಇತ್ತೀಚಿನ ನವೀಕರಣ​ : 01-07-2021 07:11 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080