ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 28-03-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುಚಿತ ತಂದೆ ರಾಮ ಕಲ್ಗುಟಕರ, ಸಾ|| ಕೋಡಿಬಾಗ, ಕಾರವಾರ (ಎಸ್.ಆರ್.ಎಸ್ ಖಾಸಗಿ ಬಸ್ ನಂ: ಕೆ.ಎ-51/ಎ.ಜಿ-0248 ನೇದರ ಚಾಲಕ). ದಿನಾಂಕ: 28-03-2021 ರಂದು ಬೆಳಿಗ್ಗೆ 06-25 ಗಂಟೆಗೆ ಪಿರ್ಯಾದಿಯವರು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-63/ಎಚ್-8411 ನೇದನ್ನು ಅಂಕೋಲಾದ ಬಾಳೆಗುಳಿಯ ಫ್ಲೈ-ಓವರ್ ಪಾಸ್ ಮಾಡಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲಾಗಿ ಕಾರವಾರ ರಸ್ತೆ ಕಡೆಗೆ ಹೋಗಲು ರಸ್ತೆಯ ತನ್ನ ಎಡಸೈಡಿಗೆ ಬಂದು ಹೋಗುತ್ತಿರುವಾಗ, ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಹೋಗಲು ಬಂದ ಎಸ್.ಆರ್.ಎಸ್ ಖಾಸಗಿ ಬಸ್ ನಂ: ಕೆ.ಎ-51/ಎ.ಜಿ-0248 ನೇದರ ಆರೋಪಿ ಚಾಲಕನು ತನ್ನ ಬಸ್ಸನ್ನು ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯವರ ಮೋಟಾರ್ ಸೈಕಲ್ ನಂ: ಕೆ.ಎ-63/ಎಚ್-8411 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ಪಿರ್ಯಾದಿಯ ಎಡಗೈ ಮೊಣಗಂಟಿನ ಹತ್ತಿರ ಒಳನೋವು ಹಾಗೂ ಎರಡು ಕೈಗಳ ಮೊಣಗಂಟಿನ ಹತ್ತಿರ ತೆರಚಿದ ಗಾಯ, ಹಣೆಯ ಬಲಕ್ಕೆ ತೆರಚಿದ ಗಾಯನೋವು ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಹಿಂದಿನ ಸವಾರನಾದ ಪಿರ್ಯಾದಿಯ ಗೆಳೆಯ ಪರಶುರಾಮ @ ರಮೇಶ ತಂದೆ ಸಂಜೀವಪ್ಪ ಶಿರಗುಪ್ಪಿ, ಪ್ರಾಯ-35 ವರ್ಷ, ವೃತ್ತಿ-ಕಾರ್ ಚಾಲಕ, ಸಾ|| ಭಾರತ್ ಮಿಲ್, 4 ನೇ ಅಡ್ಡ ರಸ್ತೆ, ಗಿರಣಿಚಾಳ, ಕಾರವಾರ ರಸ್ತೆ, ಹುಬ್ಬಳ್ಳಿ, ಧಾರವಾಡ ಈತನ ಬಲಗೈ ಮೊಣಗಂಟಿನ ಹತ್ತಿರ ಹಾಗೂ ಹೊಟ್ಟೆಗೆ ಭಾರೀ ಗಾಯನೋವು ಪಡಿಸಿದವನಿಗೆ ಚಿಕಿತ್ಸೆಗಾಗಿ ಅಂಕೋಲಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 09-30 ಗಂಟೆಗೆ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಿರುಪಾದಿ ತಂದೆ ಕುಬೇರಪ್ಪ ಭಂಡಾರಿ, ಪ್ರಾಯ-32 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಭಾರತ್ ಮಿಲ್, 4 ನೇ ಅಡ್ಡ ರಸ್ತೆ, ಗಿರಣಿಚಾಳ, ಕಾರವಾರ ರಸ್ತೆ, ಹುಬ್ಬಳ್ಳಿ, ಧಾರವಾಡ ರವರು ದಿನಾಂಕ: 28-03-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 26/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾರುತಿ ತಂದೆ ನರಸಿಂಹ ನಾಯ್ಕ, ಪ್ರಾಯ-58 ವರ್ಷ, ಸಾ|| ಬೆಟ್ಕುಳಿ, ತಾ: ಕುಮಟಾ (ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-6788 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 12-03-2021 ರಂದು 06-40 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಮಾದನಗೇರಿಯಿಂದ ಗೋಕರ್ಣಕ್ಕೆ ಬರುವ ರಾಜ್ಯ ಹೆದ್ದಾರಿ ಸಂಖ್ಯೆ-143 ನೇದರಲ್ಲಿ ಮಾದನಗೇರಿ ರೈಲ್ವೇ ಸ್ವೇಷನಗೆ ಹೋಗುವ ಕ್ರಾಸ್ ಸಮೀಪ ತನ್ನ ಮೋಟಾರ್ ಸೈಕಲ್ ನಂ: ನಂ: ಕೆ.ಎ-47/ಡಬ್ಲ್ಯೂ-6788 ನೇದರ ಮೇಲೆ ಹಿಂದುಗಡೆಯ ಸೀಟಿನಲ್ಲಿ ತನ್ನ ಹೆಂಡತಿ ಗಾಯಾಳು ಶ್ರೀಮತಿ ಹೇಮಾ ಮಾರುತಿ ನಾಯ್ಕ ಇವಳಿಗೆ ಕೂರಿಸಿಕೊಂಡು ಬೆಟ್ಕುಳಿ ಊರಿನಿಂದ ಗೋಕರ್ಣಕ್ಕೆ ಶಿವರಾತ್ರಿ ಪ್ರಯುಕ್ತ ಪೂಜೆಗೆ ಬರಲು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಲ್ಲಿ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡಬದಿಗೆ ಪಲ್ಟಿ ಕೆಡವಿ, ತನ್ನ ಹೆಂಡತಿಯ ತಲೆಗೆ ಭಾರೀ ಗಾಯ ಪಡಿಸಿದ್ದಲ್ಲದೇ, ತಾನು ಕೂಡಾ ಕೈಗೆ ಮತ್ತು ಕಾಲಿಗೆ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ವೆಂಕಟ್ರಮಣ ತಂದೆ ಕೃಷ್ಣಾ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬೆಟ್ಕುಳಿ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 28-03-2021 ರಂದು 18-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 27-03-2021 ರಾತ್ರಿ ರಂದು 11-30 ಗಂಟೆಯಿಂದ 28-03-2021 ರಂದು ಬೆಳಿಗ್ಗೆ 06-30 ಗಂಟೆಯ ನಡುವಿನ ಅವಧಿಯಲ್ಲಿ ಮಾಳ್ಕೋಡ ಗ್ರಾಮದ ಹೊಸ್ಮನೆಯಲ್ಲಿ ಪಿರ್ಯಾದಿಯು ಈ ಬಾರಿ ಅಡಿಕೆ ಫಸಲನ್ನು ಕೆಲಸಗಾರರಿಂದ ಕೊಯ್ದು, ಅವುಗಳನ್ನು ಮನೆಯ ಮೇಲ್ಛಾವಣಿಯಲ್ಲಿ ಒಣಗಿಸಲು ಹಾಕಿಟ್ಟ ಸುಮಾರು 35,000/- ರೂಪಾಯಿ ಬೆಲೆಬಾಳುವ ಸುಮಾರು 20,000 ಅಡಿಕೆಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ತಂದೆ ಗಣೇಶ ಹೆಗಡೆ, ಪ್ರಾಯ-66 ವರ್ಷ, ವೃತ್ತಿ-ನಿವೃತ್ತ ಶಿಕ್ಷಕ, ಸಾ|| ಹೊಸ್ಮನೆ, ಮಾಳ್ಕೋಡ, ಕೆಳಗಿನ ಇಡಗುಂಜಿ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 28-03-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 50/2021, ಕಲಂ: 324, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ವಾಂಚ್ಯಾ @ ಪಕ್ಕೀರಾ ಸಿದ್ದಿ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉದ್ಯಮ ನಗರ, ಮಹಮ್ಮದ್ ಗೌಸ್ ರವರ ಫ್ಯಾಕ್ಟರಿಯಲ್ಲಿ ವಾಸ, ತಾ: ಯಲ್ಲಾಪುರ. ನಮೂದಿತ ಆರೋಪಿತನು ಪಿರ್ಯಾದಿಯ ಅಣ್ಣನಿದ್ದು, ಸದರಿಯವನು ಪರ ಸ್ತ್ರೀಯರೊಂದಿಗೆ ಸುತ್ತಾಡುವುದು, ಮಾತಾಡುವುದು ಮಾಡುತ್ತಿದ್ದರಿಂದ ಪಿರ್ಯಾದಿಯವರು ಈ ಹಿಂದೆ ಆರೋಪಿತನಿಗೆ ‘ಪರ ಸ್ತ್ರೀಯರೊಂದಿಗೆ ಸುತ್ತಾಡಬೇಡಾ ಜನ ತಪ್ಪು ತಿಳಿಯುತ್ತಾರೆ’ ಅಂತಾ ಬುದ್ಧಿವಾದ ಹೇಳಿದಕ್ಕೆ ಸಿಟ್ಟಾದ ಆರೋಪಿತನು ದಿನಾಂಕ: 26-03-2021 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿಯವರು ತನ್ನ ಗಳೆಯ ಸಾಕ್ಷಿದಾರ ರಾಬರ್ಟ್ ರೊಡ್ರಿಗೀಸ್ ರವರೊಂದಿಗೆ ಯಲ್ಲಾಪುರ ಪಟ್ಟಣದ ಉದ್ಯಮ ನಗರದ ಮುರಾರ್ಜಿ ಶಾಲೆಯ ಹತ್ತಿರ ಬೀದಿ ದೀಪದ ವಿದ್ಯುತ್ ಬೆಳಕಿನಲ್ಲಿ ಮರದ ಕೆಳಗೆ ಮಾತಾಡುತ್ತಾ ಕುಳಿತಾಗ ಆರೋಪಿತನು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಅಲ್ಲಿಗೆ ಬಂದವನಿಗೆ ಪಿರ್ಯಾವರು ‘ಯಾಕೋ ಅಣ್ಣ ಇಲ್ಲಿ ಬಂದಿ?’ ಅಂತಾ ಕೇಳಿದಕ್ಕೆ ಸಿಟ್ಟಾದ ಆರೋಪಿತನು ಪಿರ್ಯಾದಿಗೆ ಉದ್ದೇಶಿಸಿ ‘ಬೋಳಿ ಮಗನೆ’ ಅಂತಾ ಅವಾಚ್ಯವಾಗಿ ಬೈಯ್ದು, ದೊಣ್ಣೆಯಿಂದ ತಲೆಯ ಮೇಲೆ ಹೊಡೆದು ಗಟಾರಿನಲ್ಲಿ ಬೀಳಿಸಿ, ಸೊಂಟ ಮತ್ತು ಎಡ ಬೆನ್ನಿಗೆ ಸಾದಾ ಗಾಯನೋವು ಪಡಿಸಿದಲ್ಲದೇ, ಬಿಡಿಸಲು ಮುಂದಾದ ಪಿರ್ಯಾದಿ ಗೆಳೆಯ ರಾಬರ್ಟ್ ರವರಿಗೂ ಸಹ ಅದೇ ದೊಣ್ಣೆಯಿಂದ ಎಡ ತಲೆಗೆ ಹಾಗೂ ಎಡಗೈ ಮುಂಗೈಗೆ ಹೊಡೆದು ಸಾದಾ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಪ್ರಕಾಶ ತಂದೆ ಪರಮೇಶ್ವರ ಸಿದ್ದಿ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉದ್ಯಮ ನಗರ, ಮುರಾರ್ಜಿ ಶಾಲೆಯ ಹತ್ತಿರ, ತಾ: ಯಲ್ಲಾಪುರ ರವರು ದಿನಾಂಕ: 28-03-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 15/2021, ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಸುಕುಮಾರ ತಂದೆ ತೇಜಪ್ಪ ಶೆಟ್ಟಿ, ಪ್ರಾಯ-28 ವರ್ಷ, ವೃತ್ತಿ-ವ್ಯಾಪಾರ, ಸಾ|| ಮಾರಣಕಟ್ಟೆ, ಮುಡಮುಂದಾ, ತಾ: ಕುಂದಾಪುರ, ಜಿ: ಉಡುಪಿ, ಹಾಲಿ ಸಾ|| ಅಗಸೇಬಾಗಿಲ, ಚರ್ಚ್ ಹತ್ತಿರ, ತಾ: ಶಿರಸಿ. ನಮೂದಿತ ಆರೋಪಿತನು ಶಿರಸಿ ಶಹರದ ಅಗಸೇಬಾಗಿಲಿನ ನ್ಯೂ ಫಿಷ್ ಲ್ಯಾಂಡ್ ಹೊಟೇಲಿನ ಮಾಲೀಕನಿದ್ದು, ದಿನಾಂಕ: 28-03-2021 ರಂದು 19-45 ಗಂಟೆಗೆ ತನ್ನ ಹೊಟೇಲಿನ ಒಳಗೆ ತನ್ನ ಅನ್ಯಾಯದ ಲಾಭಕ್ಕೋಸ್ಕರ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಮಾರಾಟ ಮಾಡಿ ಮದ್ಯ ಕುಡಿಯಲು ತನ್ನ ಹೊಟೇಲಿನ ಒಳಗೆ ಅನುವು ಮಾಡಿಕೊಟ್ಟು, 1,638/- ರೂಪಾಯಿಯ McDowells No.1 PREMIER WHISKY ಅಂತಾ ಲೇಬಲ್ ಇದ್ದ 90 ML ಅಳತೆಯ 20 ಮದ್ಯದ ಪ್ಯಾಕೆಟ್ ಗಳು, McDowells No.1 PREMIER WHISKY ಅಂತಾ ಲೇಬಲ್ ಇದ್ದ 90 ML ಅಳತೆಯ ಖಾಲಿ ಪ್ಯಾಕೆಟ್-01, ಅ||ಕಿ|| 00.00/- ರೂಪಾಯಿ ಹಾಗೂ ಮದ್ಯವನ್ನು ಕುಡಿಯಲು ಬಳಸಿದ ಪ್ಲಾಸ್ಟಿಕ ಗ್ಲಾಸ್-01, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯವನ್ನು ಮಾರಾಟ ಮಾಡುತ್ತಿರುವಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ (ಕಾ&ಸು), ಶಿರಸಿ ನಗರ ಪೊಲೀಸ್ ಠಾಣೆ ರವರು ದಿನಾಂಕ: 28-03-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 38/2021, ಕಲಂ: 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ಶ್ರೀಮತಿ ಮೆಹರುನ್ನೀಸಾ ಕೋಂ. ಗುಡುಸಾಬ್ ಬಾವನ್ನನವರ, ಪ್ರಾಯ-26 ವರ್ಷ, ಸಾ|| ಗಣೇಶ ನಗರ, ದಾಂಡೇಲಿ (ಲಾರಿ ನಂ: ಕೆ.ಎ-53/8887 ನೇದರ ಮಾಲಿಕರು). ಮೃತ ಶ್ರೀ ಮಹಮ್ಮದ್ ಇಸಾಕ್ ತಂದೆ ಗೌಸ್ ಸಾಬ್ ಮದೇಹಳ್ಳಿ, ಪ್ರಾಯ-42 ವರ್ಷ, ಸಾ|| ಡಿ.ಎಸ್.ಪಿ ಆಫೀಸ್ ಹತ್ತಿರ, ಹಳೇ ದಾಂಡೇಲಿ, ದಾಂಡೇಲಿ. ಈತನು ದಿನಾಂಕ: 27-03-2021 ರಂದು 16-30 ಗಂಟೆಯ ಸುಮಾರಿಗೆ ದಾಂಡೇಲಿಯ ಡಬ್ಲೂ.ಸಿ.ಪಿ.ಎಮ್ ನ ಮೇನ್ ಗೇಟ್ ಒಳಗೆ ಲಾರಿ ನಂ: ಕೆ.ಎ-53/8887 ನೇದರಲ್ಲಿದ್ದ ಗ್ರಾನೈಟ್ ಗಳನ್ನು ಖಾಲಿ ಮಾಡುತ್ತಿರುವಾಗ ಸುಮಾರು 4-5 ಗ್ರಾನೈಟ್ ಗಳು ಮಹಮ್ಮದ್ ಇಸಾಕ್ ಮದೇಹಳ್ಳಿ ಈತನ ಮೈ ಮೇಲೆ ಬಿದ್ದು ಕೈಗೆ ಹಾಗೂ ಬೆನ್ನಿಗೆ ಭಾರೀ ಗಾಯ ಮಾಡಿಕೊಂಡವನಿಗೆ ಚಿಕಿತ್ಸೆಯ ಕುರಿತು ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದವನು ದಿನಾಂಕ: 27-03-2021 ರಂದು ರಾತ್ರಿ 09-30 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು, ಮೃತನ ಮರಣಕ್ಕೆ ಲಾರಿ ನಂ: ಕೆ.ಎ-53/8887 ನೇದರ ಮಾಲಿಕಳಾದ ನಮೂದಿತ ಆರೋಪಿತಳ ನಿರ್ಲಕ್ಷ್ಯತನದಿಂದಲೇ ಈ ಸಾವು ಸಂಭವಿಸಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಆಯುಬ್ ಅಲಿ ತಂದೆ ಗೌಸ್ ಸಾಬ್ ಮದೇಹಳ್ಳಿ, ಪ್ರಾಯ-54 ವರ್ಷ, ವೃತ್ತಿ-ಚಾಲಕ, ಸಾ|| ಡಿ.ಎಸ್.ಪಿ ಆಫೀಸ್ ಹತ್ತಿರ, ಹಳೇ ದಾಂಡೇಲಿ, ದಾಂಡೇಲಿ ರವರು ದಿನಾಂಕ: 28-03-2021 ರಂದು 08-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 28-03-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 15/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಮಂಜುನಾಥ ತಂದೆ ಜಟ್ಟಿ ಆಗೇರ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಆಗೇರಕೊಪ್ಪ, ಮೊಗಟಾ, ತಾ: ಅಂಕೋಲಾ. ನಮೂದಿತ ಈತನಿಗೆ ದಿನಾಲೂ ವಿಪರೀತ ಸರಾಯಿ ಕುಡಿಯು ಚಟವಿದ್ದು, ಸರಾಯಿ ಕುಡಿದು ಬಂದು ತನ್ನ ಹೆಂಡತಿ ಮಕ್ಕಳಿಗೆ ಬೈಯ್ಯುವುದು ಮತ್ತು ಹೊಡೆಯುವುದು ಮಾಡುತ್ತಿದ್ದವನು, ಅದರಂತೆ ದಿನಾಂಕ: 23-03-2021 ರಂದು ರಾತ್ರಿ ಸರಾಯಿ ಕುಡಿದು ಬಂದು ತನ್ನ ಹೆಂಡತಿಗೆ ಹೊಡೆಬಡೆ ಮಾಡಿದವನು, ದಿನಾಂಕ: 24-03-2021 ರಂದು ಮಧ್ಯಾಹ್ನ ಸರಾಯಿ ಕುಡಿದು ಮನೆಗೆ ಬಂದವನು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ನೋಡಿ ಸಮಯ 16-15 ಗಂಟೆಗೆ ತಾನು ವಾಸವಾಗಿರುವ ಮನೆಯ ಜಂತಿಗೆ ತನ್ನ ಶರ್ಟಿನಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಂಗಾಧರ ತಂದೆ ಜಟ್ಟಿ ಆಗೇರ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಆಗೇರಕೊಪ್ಪ, ಮೊಗಟಾ, ತಾ: ಅಂಕೋಲಾ ರವರು ದಿನಾಂಕ: 28-03-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಗಣೇಶ ತಂದೆ ಶಿವು ಗೌಡ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಿಪ್ಪಿಹಕ್ಕಲ, ತಾ: ಹೊನ್ನಾವರ. ನಮೂದಿತ ಈತನು ವಿಪರೀತ ಸರಾಯಿ ಕುಡಿಯುವ ಚಟದವನಿದ್ದು, ತನಗೆ ಇರುವ ಲಿವರ್ ತೊಂದರೆಯಿಂದ ಬೇಸರದಲ್ಲಿದ್ದವನು, ಅದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 28-03-2021 ರಂದು 12-00 ಗಂಟೆಯಿಂದ 13-30 ಗಂಟೆಯ ನಡುವಿನ ಅವಧಿಯಲ್ಲಿ ಚಿಪ್ಪಿಹಕ್ಕಲದಲ್ಲಿರುವ ತನ್ನ ಮನೆಯ ಅಡುಗೆ ಕೋಣೆಯಲ್ಲಿ ಪಕಾಸಿಗೆ ರನ್ನಿಂಗ್ ಬಲ್ಬ್ ನ ವೈರ್ ನಿಂದ ಕುತ್ತಿಗೆಗೆ ಕಟ್ಟಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಈ ಕುರಿತು ಮೃತನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಭವಾನಿ ಕೋಂ. ಶಿವು ಗೌಡ, ಪ್ರಾಯ-56 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಿಪ್ಪಿಹಕ್ಕಲ, ತಾ: ಹೊನ್ನಾವರ ರವರು ದಿನಾಂಕ: 28-03-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ಇತ್ತೀಚಿನ ನವೀಕರಣ​ : 29-03-2021 01:07 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080