ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 28-05-2021
at 00:00 hrs to 24:00 hrs
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 89/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತೆ ನಾಗರತ್ನಾ ಈಶ್ವರ ನಾಯ್ಕ, ಪ್ರಾಯ-31 ವರ್ಷ, ಸಾ|| ಶೆಟಗೇರಿ, ತಾ: ಅಂಕೋಲಾ (ಕಾರ್ ನಂ: ಕೆ.ಎ-22/ಎಮ್.ಬಿ-3842 ನೇದರ ಚಾಲಕಿ). ಇವಳು ದಿನಾಂಕ: 28-05-2021 ರಂದು 15-10 ಗಂಟೆಗೆ ತನ್ನ ಕಾರ್ ನಂ: ಕೆ.ಎ-22/ಎಮ್.ಬಿ-3842 ನೇದನ್ನು ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸಂಚಾರಿ ನಿಯಮಗಳನ್ನು ಪಾಲಿಸದೇ ಮಹಾಮಾಯಾ ದೇವಸ್ಥಾನದ ಕಡೆಗೆ ಒಮ್ಮೇಲೆ ತಿರುಗಿಸಿ ಶೆಟಗೇರಿ ಕಡೆಯಿಂದ ಅಂಕೋಲಾದ ಕಡೆಗೆ ತಮ್ಮ ಮೋಟಾರ್ ಸೈಕಲ್ ನಂ: ಕೆ.ಎ-30/ಎಸ್-6222 ನೇದರ ಮೇಲೆ ಬರುತ್ತಿದ್ದ ಗಾಯಾಳು ಸಂತೋಷ ಯಳಗದ್ದೆ ರವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಗಾಯಾಳುವಿನ ಬಲಗಾಲಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾಳೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪಾಂಡುರಂಗ ತಂದೆ ಈಶ್ವರ ಹರಿಕಂತ್ರ, ಪ್ರಾಯ-64 ವರ್ಷ, ವೃತ್ತಿ-ನಿವೃತ ಶಿಕ್ಷಕರು, ಸಾ|| ಪುರ್ಲಕ್ಕಿಬೇಣ, ತಾ: ಅಂಕೋಲಾ ರವರು ದಿನಾಂಕ: 28-05-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಭಟ್ಕಳ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 67/2021, ಕಲಂ: 4, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಮತ್ತು ಕಲಂ: 11(1)(D) PREVENTION OF CRUELTY TO ANIMALS ACT-1960 ಹಾಗೂ ಕಲಂ: 192(ಎ) ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮೊಹಮ್ಮದ್ ಮುತಲಿಬ್ ಗಂಗಾವಳಿ ತಂದೆ ಕಾದೀರಬಾಷಾ ಗಂಗಾವಳಿ, ಪ್ರಾಯ-33 ವರ್ಷ, ವೃತ್ತಿ-ದನದ ಮಾಂಸದ ವ್ಯಾಪಾರ, ಸಾ|| ನ್ಯಾಶನಲ್ ರೋಡ್, ಮಗ್ದುಂ ಕಾಲೋನಿ, ತಾ: ಭಟ್ಕಳ, 2]. ಅಕೀಬ್ ತಾಹೀರಾ ತಂದೆ ಶಾಹೂಲ್ ಹಮೀದ್ ತಾಹೀರಾ, ಪ್ರಾಯ-24 ವರ್ಷ, ವೃತ್ತಿ-ವ್ಯಾಪಾರ, ಸಾ|| ರೋಶನ್ ಮಂಜಿಲ್, ಮದೀನಾ ಕಾಲೋನಿ, ಮೊಹಿದ್ದೀನ್ ಸ್ಟ್ರೀಟ್, 2 ನೇ ಕ್ರಾಸ್, ತಾ: ಭಟ್ಕಳ. ಈ ನಮೂದಿತ ಆರೋಪಿತರು ವಧೆ ಮಾಡುವ ಉದ್ದೇಶದಿಂದ 15,000/- ರೂಪಾಯಿ ಮೌಲ್ಯದ 02 ಜಾನುವಾರು (2 ಹೋರಿ ಕರು) ಗಳನ್ನು ಯಾವುದೇ ಪಾಸ್ ಯಾ ಪರವಾನಿಗೆ ಇಲ್ಲದೇ ಬಿಳಿ ಬಣ್ಣದ ಮಹೀಂದ್ರಾ ಬೊಲೆರೋ ವಾಹನ ನಂ: ಕೆ.ಎ-31/8416 ನೇದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ತುಂಬಿ ಸಾಗಾಟ ಮಾಡಿಕೊಂಡು ಬಂದು ಭಟ್ಕಳ ಶಹರದ ಮಗ್ದುಂ ಕಾಲೋನಿಯ ನ್ಯಾಶನಲ್ ರೋಡಿನಲ್ಲಿ ದಿನಾಂಕ: 28-05-2021 ರಂದು ಸಾಯಂಕಾಲ 18-30 ಗಂಟೆಯ ಸುಮಾರಿಗೆ ಪಿರ್ಯಾದಿಯವರ ದಾಳಿಯ ಕಾಲಕ್ಕೆ ಹೋರಿ ಕರುಗಳನ್ನು ಸ್ಥಳದಲ್ಲಿಯೇ ಬಿಟ್ಟು ವಾಹನವನ್ನು ಚಲಾಯಿಸಿಕೊಂಡು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ಸುಮ ಬಿ, ಡಬ್ಲ್ಯೂ.ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 28-05-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಯಲ್ಲಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 91/2021, ಕಲಂ: 279, 283 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರಕಾಶ ತಂದೆ ವಿಜಯಕುಮಾರ ಹಳಗಡಿ, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ನಾಗಲಿಂಗೇಶ್ವರ ದೇವಸ್ದಾನ ಹತ್ತಿರ, ಉಮರ್ಗ, ತಾ: ಉಸ್ಮನಬಾದ್, ಜಿ: ಉಸ್ಮನ್ ಬಾದ್, ಮಹರಾಷ್ಟ್ರ ರಾಜ್ಯ (ಲಾರಿ ನಂ: ಕೆ.ಎ-32/ಡಿ-3514 ನೇದರ ಚಾಲಕ), 2]. ಅಮರೇಗೌಡ ತಂದೆ ಸಿದ್ದನಗೌಡ ರಾಮಶೆಟ್ಟಿ, ಪ್ರಾಯ-35 ವರ್ಷ, ವೃತ್ತಿ-ಚಾಲಕ, ಸಾ|| ನಾಗೂರು, ತಾ: ಹುನುಗುಂದ, ಜಿ: ಬಾಗಲಕೋಟೆ (ಸಿಮೆಂಟ್ ಬಲ್ಕರ್ ವಾಹನ ನಂ: ಕೆ.ಎ-52/ಬಿ-0303 ನೇದರ ಚಾಲಕ). ಈ ನಮೂದಿತ ಆರೋಪಿತರ ಪೈಕಿ ಆರೋಪಿ 2 ನೇಯವನು ತನ್ನ ಬಾಬ್ತು ಸಿಮೆಂಟ್ ಬಲ್ಕರ್ ವಾಹನ ನಂ: ಕೆ.ಎ-52/ಬಿ-0303 ನೇದನ್ನು ದಿನಾಂಕ: 27-05-2021 ರಂದು ಬೆಳಿಗ್ಗೆ 10-00 ಗಂಟೆಗೆ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಚಲಾಯಿಸಿಕೊಂಡು ಬಂದವನು, ಯಾವುದೇ ಸಿಗ್ನಲ್ ಲೈಟ್ ಹಾಕದೇ ಒಮ್ಮೆಲೇ ರಸ್ತೆಯ ಮೇಲೆ ನಿಲ್ಲಿಸಿದ್ದರಿಂದ ಅದೇ ವೇಳೆಗೆ ಪಿರ್ಯಾದಿಯು ತನ್ನ ಬಾಬ್ತು ವಾಹನ ನಂ: ಕೆ.ಎ-21/ಬಿ-4028 ನೇದನ್ನು ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಚಲಾಯಿಸಿಕೊಂಡು ಬಂದವರು ತನ್ನ ವಾಹನಕ್ಕೆ ಬ್ರೇಕ್ ಹಾಕಿ ನಿಲ್ಲಿಸುವಷ್ಟರಲ್ಲಿ ಆರೋಪಿ 1 ನೇಯವನು ತನ್ನ ಬಾಬ್ತು ಲಾರಿ ನಂ: ಕೆ.ಎ-32/ಡಿ-3514 ನೇದನ್ನು ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದವನು ಪಿರ್ಯಾದಿಯ ಬಾಬ್ತು ವಾಹನಕ್ಕೆ ಹಿಂದಿನಿಂದ ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದರಿಂದ ಅಪಘಾತದ ರಭಸಕ್ಕೆ ಪಿರ್ಯಾದಿಯ ಬಾಬ್ತು ವಾಹನದ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಮುಂದೆ ನಿಂತ ಲಾರಿಯ ಹಿಂದಿನ ಭಾಗಕ್ಕೆ ಅಪ್ಪಳಿಸಿ, ಈ ಅಪಘಾತದಿಂದಾಗಿ ಮೂರು ವಾಹನಗಳು ಜಖಂಗೊಂಡಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಿಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಂಗಾಧರ ತಂದೆ ನಾಗಪ್ಪ ಗೌಡ, ಪ್ರಾಯ-40 ವರ್ಷ, ಚಾಲಕ, ಸಾ|| ಹಿರೇಬಂಡಾಡಿ, ಪೋ: ಹಿರೇಬಂಡಾಡಿ, ತಾ: ಪುತ್ತೂರ, ಜಿ: ಮಂಗಳೂರು ರವರು ದಿನಾಂಕ: 28-05-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 32/2021, ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಲ್ಲೇಶಪ್ಪಾ ತಂದೆ ಶಿವಪ್ಪ ಗಿರಿಯಣ್ಣವರ, ಪ್ರಾಯ-55 ವರ್ಷ, ವೃತ್ತಿ-ಕಿರಾಣಿ ಅಂಗಡಿ ವ್ಯಾಪಾರ, ಸಾ|| ಪ್ರಧಾನಿ, ತಾ: ಜೋಯಿಡಾ. ವಿಶ್ವವ್ಯಾಪಿಯಾಗಿ ಹರಡುತ್ತಿರುವ ಮಹಾಮಾರಿ ಕೊರೋನಾ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಯಲು ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ಆದೇಶದಂತೆ ನಿಷೇಧಾಜ್ಞೆಯು ದಿನಾಂಕ: 07-06-2021 ರವರೆಗೆ ಜಾರಿಯಲ್ಲಿದ್ದು, ಅದರಂತೆ ದಿನಸಿ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟನ್ನು ನಿಷೇಧಿಸಿದ್ದರೂ ಸಹ ನಮೂದಿತ ಆರೋಪಿತನು ತನ್ನ ದಿನಸಿ ಅಂಗಡಿ ತೆರೆದು, ತನ್ನ ಅಂಗಡಿಗೆ ಬಂದ ಗ್ರಾಹಕರಿಗೆ ದಿನಸಿ ಸಾಮಾನುಗಳನ್ನು ಮಾರಾಟ ಮಾಡಿದರೆ ಅಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ, ಸಾಂಕ್ರಾಮಿಕ ರೋಗ ಒಬ್ಬರಿಂದ ಒಬ್ಬರಿಗೆ ಹರಡಿ ಪ್ರಾಣಕ್ಕೆ ತೊಂದರೆ ಆಗಬಹುದು ಅಂತಾ ಗೊತ್ತಿದ್ದರೂ ಸಹ ಲಾಕಡೌನ್ ಮತ್ತು ಸರ್ಕಾರದ ಆದೇಶವನ್ನು ಪಾಲನೆ ಮಾಡದೇ ಉದ್ದೇಶ ಪೂರ್ವಕವಾಗಿ ದಿನಾಂಕ: 28-05-2021 ರಂದು 14-30 ಗಂಟೆಯಿಂದ 14-45 ಗಂಟೆಯವರೆಗೆ ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪ್ರಧಾನಿ ಗ್ರಾಮದ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ತನ್ನ ದಿನಸಿ ಅಂಗಡಿಯನ್ನು ತೆರೆದು ವ್ಯಾಪಾರ ವಹಿವಾಟು ನಡೆಸಿದ ಬಗ್ಗೆ ಪಿರ್ಯಾದಿ ಶ್ರೀ ಆನ್ಸನ್ ತಂದೆ ಗೀವರ್ಗೀಸ್, ಪ್ರಾಯ-29 ವರ್ಷ, ವೃತ್ತಿ-ಗ್ರೇಡ್-2 ಕಾರ್ಯದರ್ಶಿ, ಪ್ರಧಾನಿ ಗ್ರಾಮ ಪಂಚಾಯತ, ಸಾ|| ಗ್ರಾಮ ಪಂಚಾಯತ ಕಾರ್ಯಾಲಯ, ಪ್ರಧಾನಿ, ತಾ: ಜೋಯಿಡಾ ರವರು ದಿನಾಂಕ: 28-05-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಬನವಾಸಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 55/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದೇವರಾಜ ತಂದೆ ಲಕ್ಷ್ಮಣ ಚನ್ನಯ್ಯ, ಸಾ|| ದೊಡ್ಡಕೇರಿ, ಬನವಾಸಿ, ತಾ: ಶಿರಸಿ (ಮಹೀಂದ್ರಾ ಪಿಕ್ಅಪ್ ವಾಹನ ನಂ: ಕೆ.ಎ-31/9286 ನೇದರ ಚಾಲಕ). ಈತನು ದಿನಾಂಕ: 28-05-2021 ರಂದು ತಾನು ಚಲಾಯಿಸುತ್ತಿದ್ದ ಮಹೀಂದ್ರಾ ಪಿಕ್ಅಪ್ ವಾಹನ ನಂ: ಕೆ.ಎ-31/9286 ನೇದರಲ್ಲಿ ಅನಾನಸ್ ಹಣ್ಣುಗಳನ್ನು ಸೊರಬಾದಲ್ಲಿ ಲೋಡ್ ಮಾಡಿಕೊಂಡು ವಾಹನದ ಕ್ಯಾಬಿನ್ ನಲ್ಲಿ ಹಾಗೂ ಅನಾನಸ್ ಲೋಡಿನ ಮೇಲ್ಭಾಗದಲ್ಲಿ ಹಮಾಲಿ ಜನರನ್ನು ಕೂಡ್ರಿಸಿಕೊಂಡು, ಸೊರಬಾ ಕಡೆಯಿಂದ ಬನವಾಸಿ ಕಡೆಗೆ ವಾಹನವನ್ನು ನಿರ್ಲಕ್ಷ್ಯತನದಿಂದ ಹಾಗೂ ಅತೀವೇಗವಾಗಿ ಚಲಾಯಿಸಿ ನರೂರ ಗ್ರಾಮದ ಬಳಿ ಮಧ್ಯಾಹ್ನ 01-15 ಗಂಟೆಗೆ ವಾಹನದ ವೇಗದಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆಯ ಮೇಲೆ ವಾಹನವನ್ನು ಪಲ್ಟಿ ಮಾಡಿ ಅಪಘಾತ ಪಡಿಸಿ, ವಾಹನದ ಮೇಲ್ಭಾಗದಲ್ಲಿ ಕುಳಿತಿದ್ದ ಪಿರ್ಯಾದಿ ಹಾಗೂ ಮಾಲತೇಶ ನಾಗಪ್ಪ ಉಪ್ಪಾರ, ಮಧುಕೇಶ್ವರ ಗಣಪತಿ ಉಪ್ಪಾರ ಇವರುಗಳಿಗೆ ಮೈಮೇಲೆ ಅಲ್ಲಲ್ಲಿ ಸಾದಾ ಸ್ವರೂಪದ ಗಾಯಗಳಾಗುವಂತೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಉಮೇಶ ತಂದೆ ವೆಂಕಟೇಶ ಉಪ್ಪಾರ, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಉಪ್ಪಾರಕೇರಿ, ಬನವಾಸಿ, ತಾ: ಶಿರಸಿ ರವರು ದಿನಾಂಕ: 28-05-2021 ರಂದು 20-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 28-05-2021
at 00:00 hrs to 24:00 hrs
ಸಿದ್ದಾಪುರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 23/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಜಟ್ಟಮ್ಮಾ ಕೆರಿಯಾ ಬೋವಿ, ಪ್ರಾಯ-52 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಾಳೆಕೊಪ್ಪಾ, ತಾ: ಸಿದ್ದಾಪುರ. ಇವಳು ಸುದ್ದಿದಾರನ ಹೆಂಡತಿಯಿದ್ದು, ಸೈನಿಕನಾಗಿ ಕೆಲಸ ಮಾಡುತ್ತಿರುವ ತನ್ನ ಎರಡನೇ ಮಗನು ತನ್ನ ಮಾತನ್ನು ವಿರೋಧಿಸಿ ಹುಡುಗಿಯೋರ್ವಳನ್ನು ಪ್ರೀತಿಸಿ ಮದುವೆಯಾಗಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಗಂಡನೊಂದಿಗೆ ‘ವಿಷ ಕುಡಿದು ಸಾಯುವಾ ಬಾ’ ಅಂತಾ ಹೇಳುತ್ತಾ ಬೇಜಾರಿನಲ್ಲಿದ್ದವಳು. ಇದಲ್ಲದೇ ದಿನಾಂಕ: 26-05-2021 ರಂದು ಸಂಜೆ ಕಟ್ಟಿಗೆ ತರುವ ವಿಷಯವಾಗಿ ಗಂಡ (ಸುದ್ದಿದಾರ) ನೊಂದಿಗೆ ಜಗಳವಾಗಿ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಊಟ ಮಾಡದೇ ಮಲಗಿದ್ದವಳು, ದಿನಾಂಕ: 27-5-2021 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಮನೆಯಿಂದ ಹೋದವಳು, ದಿನಾಂಕ: 28-05-2021 ರಂದು ಬೆಳಿಗ್ಗೆ 10-30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಿಂದ ಸುಮಾರು 1 ಕಿ.ಮೀ ಅಂತರದಲ್ಲಿರುವ ಬಾಂಬು ಪ್ಲಾಂಟೇಶನ್ ದಲ್ಲಿನ ನೇರಳೆ ಮರದ ಅಡ್ಡ ಟೊಂಗೆಗೆ ನೈಲಾನ್ ಬಳ್ಳಿಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಕೆರಿಯಾ ತಂದೆ ಬೂರ್ಯಾ ಬೋವಿ, ಪ್ರಾಯ-62 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬಾಳೆಕೊಪ್ಪಾ, ತಾ: ಸಿದ್ದಾಪುರ ರವರು ದಿನಾಂಕ: 28-05-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======