ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 28-11-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 101/2021, ಕಲಂ: 193, 420, 423, 464, 468, 469, 470, 471, 120(ಬಿ) ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗೀತಾ ಕೋಂ. ಶಂಕರ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಹೊಸಮನೆ, ಪೋ: ಚಿಪಗಿ, ತಾ: ಶಿರಸಿ, 2]. ಶಂಕರ ತಂದೆ ಮಹಾದೇವ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೊಸಮನೆ, ಪೋ: ಚಿಪಗಿ, ತಾ: ಶಿರಸಿ. ಪಿರ್ಯಾದಿಯವರು ಬೆಂಗಳೂರಿನಲ್ಲಿ ವೈದ್ಯಕೀಯ ವೃತ್ತಿ ಮಾಡಿಕೊಂಡಿದ್ದು, ತಮ್ಮ ಬಾಬ್ತು ಅಂಕೋಲಾ ತಾಲೂಕಿನ ಬೆಲೇಕೇರಿ ಗ್ರಾಮದ ಬೆರಡೆ ಗ್ರಾಮದ ಸರ್ವೇ ನಂ: 1 ಕ್ಷೇತ್ರ 9ಎ-35ಗು, ಸರ್ವೇ ನಂ: 2 ಕ್ಷೇತ್ರ 6ಎ-22ಗು ಮತ್ತು ಸರ್ವೇ ನಂ: 3 ಕ್ಷೇತ್ರ 3ಎ-24ಗು ರಲ್ಲಿ ನಮೂದಿಸಿದ ಜಮೀನಿನ ಮಾಲಿಕರಾಗಿದ್ದು, ಸದರ ಜಮೀನುಗಳ ಅಭಿವೃದ್ದಿ ಹಾಗೂ ದೇಖರೇಖ್ ನೋಡಿಕೊಳ್ಳಲು ಹಾಗೂ ತಮ್ಮ ಪರವಾಗಿ ನ್ಯಾಯಾಲಯಗಳಲ್ಲಿ ಹಾಜರಾಗಿ ಪ್ರತಿನಿಧಿಸಲು ಮತ್ತು ಸರ್ಕಾರಿ ಕಛೇರಿಗಳಲ್ಲಿ ಕಾಗದ ಪತ್ರ ವ್ಯವಹಾರ ನಡೆಸಲು ಆರೋಪಿತೆ 1 ನೇಯವಳನ್ನು ನೇಮಿಸಿಕೊಂಡು ದಿನಾಂಕ: 16-11-2015 ರಂದು ಮೊಕ್ತ್ಯಾರನಾಮೆ ಮಾಡಿಕೊಟ್ಟಿದ್ದು ಇರುತ್ತದೆ. ಪಿರ್ಯಾದಿಯವರು ಆರೋಪಿತೆ 1 ನೇಯವಳಿಗೆ ತಮ್ಮ ಜಮೀನುಗಳನ್ನು ಮಾರಾಟ ವ ಪರಭಾರೆ ಮಾಡಲು ಹಾಗೂ ತಮ್ಮ ಪರವಾಗಿ ಜಮೀನು ಖರೀದಿ ದಸ್ತಾವೇಜಿಗೆ ಸಹಿ ಮಾಡಲು ಯಾವುದೇ ತರಹದ ಅಧಿಕಾರ ನೀಡದೇ ಇದ್ದರೂ ಸಹ ಪಿರ್ಯಾದಿಯವರಿಗೆ ಯಾವುದೇ ಮಾಹಿತಿ ನೀಡದೇ ಸದರ ಆರೋಪಿತಳು ಪಿರ್ಯಾದಿಯವರು ಬರೆದುಕೊಟ್ಟ ಮೊಕ್ತ್ಯಾರನಾಮೆಯನ್ನು ದುರುಪಯೋಗ ಪಡಿಸಿಕೊಂಡು ಪಿರ್ಯಾದಿಯವರ ಬಾಬ್ತು ಬೆರಡೆ ಗ್ರಾಮದ ಸರ್ವೇ ನಂ: 2 ಕ್ಷೇತ್ರ 6ಎ-22ಗು ನೇ ಜಮೀನನ್ನು ಕಾರವಾರ ಉಪನೋಂದಣಾಧಿಕಾರಿಯವರಿಗೆ ಸುಳ್ಳು ಮಾಹಿತಿ ನೀಡಿ, ಆರೋಪಿ 2 ನೇಯವನ ಹೆಸರಿಗೆ ಖರೀದಿ ಪತ್ರ ದಸ್ತಾವೇಜು ಮಾಡಿಸಿ ಕೊಟ್ಟು, ಪಿರ್ಯಾದಿಯವರಿಗೆ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಡಾ: ನಾಗರಾಜ ತಂದೆ ನಾರಾಯಣ ನಾಯ್ಕ, ಪ್ರಾಯ-47 ವರ್ಷ, ವೃತ್ತಿ-ವೈದ್ಯಕೀಯ ವೃತ್ತಿ, ಸಾ|| ಬಂಡಿ ಬಜಾರ್, ತಾ: ಅಂಕೋಲಾ ರವರು ದಿನಾಂಕ: 28-11-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 177/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದಾಸಪ್ಪಾ ತಂದೆ ತಿಮ್ಮಪ್ಪಾ, ಪ್ರಾಯ-36 ವರ್ಷ, ವೃತ್ತಿ-ಕಾರ್ ಚಾಲಕ, ಸಾ|| ಹನುಮಾನ್ ಟಾಕೀಸ್ ಹಿಂದುಗಡೆ, ಕೊತ್ತಾಪೇಟಾ, ರಾಯಚೂರು (ಮಾರುತಿ ಸುಜುಕಿ ಎರ್ಟಿಗಾ ಕಾರ್ ನಂ: ಕೆ.ಎ-51/ಸಿ-8418 ನೇದರ ಚಾಲಕ). ಈತನು ದಿನಾಂಕ: 27-11-2021 ರಂದು ಮುಂಜಾನೆ 06-15 ಗಂಟೆಗೆ ಅಂಕೋಲಾ ತಾಲೂಕಿನ ಹೆಬ್ಬುಳ ಬಳಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯ ಮೇಲೆ ತನ್ನ ಮಾರುತಿ ಸುಜುಕಿ ಎರ್ಟಿಗಾ ಕಾರ್ ನಂ: ಕೆ.ಎ-51/ಸಿ-8418 ನೇದನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿನ ಚಾಲನೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ತೀರಾ ಬಲಕ್ಕೆ ಹೋಗಿ ಕಾರನ್ನು ಪಲ್ಟಿ ಮಾಡಿ  ಅಪಘಾತ ಪಡಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಸಂಧ್ಯಾ ರಾಘವೇಂದ್ರ ಬಳ್ಳಾರಿ, ಪ್ರಾಯ-28 ವರ್ಷ, ಸಾ|| ಕಮಲಾಪುರ, ಹಂಪಿ ಹತ್ತಿರ, ವಿಜಯನಗರ, ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ತಂದೆ ಜಯರಾಮುಲು ದಾಸರಿ, ಪ್ರಾಯ-36 ವರ್ಷ, ವೃತ್ತಿ-ರಾಯಚೂರ ಟಿ.ಎಮ್.ಸಿ ಯಲ್ಲಿ ಎಸ್.ಡಿ.ಎ ಕೆಲಸ, ಸಾ|| ತಿಮ್ಮಾಪುರಪೇಟ್, ವಾರ್ಡ್ ನಂ: 06, ಬ್ಲಾಕ್ ನಂ: 08, ರಾಯಚೂರು, ಹಾಲಿ ಸಾ|| ಡೋರ್ ನಂ: ಟಿ2 ಅಪಾರ್ಟಮೆಂಟ್, ಆರೋ ವಾಟರ್ ಪ್ಲಾಂಟ್ ಹತ್ತಿರ, ಜವಾರ ನಗರ, ರಾಯಚೂರು ರವರು ದಿನಾಂಕ: 28-11-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 178/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 25-11-2021 ರಂದು ಸಾಯಂಕಾಲ 17-00 ಗಂಟೆಯಿಂದ ದಿನಾಂಕ: 27-11-2021 ರಂದು ಬೆಳಿಗ್ಗೆ 09-00 ಗಂಟೆಯ ನಡುವಿನ ಅವದಿಯಲ್ಲಿ ಪಿರ್ಯಾದಿಯವರ ತೋಟದಲ್ಲಿ ಬೆಳೆದಿದ್ದ ಅಡಿಕೆ ಮರಗಳಿಂದ ಕೊಯ್ದು ಇಟ್ಟಿದ್ದ ಸುಮಾರು 30 ಅಡಿಕೆ ಗೊನೆಗಳು ಮತ್ತು ಅಡಿಕೆ ತೋಟದಲ್ಲಿ ಬಿದ್ದ ಅಡಿಕೆ ಆರಿಸಿ ತುಂಬಿಟ್ಟಿದ್ದ ಸುಮಾರು 10 ಅಡಿಕೆ ಚೀಲಗಳನ್ನು ಅ||ಕಿ|| 35,000/- ರೂಪಾಯಿ ಬೆಲೆಯ ಹಣ್ಣು ಅಡಿಕೆಯನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ರಾಮಚಂದ್ರ ತಂದೆ ವಿಶ್ವೇಶ್ವರ ಹೆಗಡೆ, ಪ್ರಾಯ-50 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹಳೆತೋಟ, ಕೊಡ್ಲಗದ್ದೆ, ತಾ: ಅಂಕೋಲಾ ರವರು ದಿನಾಂಕ: 28-11-2021 ರಂದು 19-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 141/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಆಕಾಶ ತಂದೆ ಸಂಜಯ ಸೋನವಾಲ್ಕರ್, ಸಾ|| ಬಿಜಾಪುರ (ಕಾರ್ ನಂ: ಕೆ.ಎ-05/ಎ.ಜಿ-4119 ನೇದರ ಚಾಲಕ). ಈತನು ದಿನಾಂಕ: 28-11-2021 ರಂದು ಬೆಳಿಗ್ಗೆ 09-45 ಗಂಟೆಯ ಸುಮಾರಿಗೆ ಮಂಕಿಯ ಎಳ್ಳಿಮಕ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಹಂಪ್ಸ್ ನಲ್ಲಿ ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-05/ಎ.ಜಿ-4119 ನೇದನ್ನು ಹೊನ್ನಾವರ ಕಡೆಯಿಂದ ಮುರ್ಡೇಶ್ವರ ಕಡೆಗೆ ಹೋಗಲು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಕಾರಿನ ವೇಗವನ್ನು ನಿಯಂತ್ರಿಸಲಾಗದೇ, ಅದೇ ರಸ್ತೆಯಲ್ಲಿ ತನ್ನ ಮುಂದೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-7688 ನೇದರ ಸವಾರನು ನಿಧಾನವಾಗಿ ರಸ್ತೆಯ ಮೇಲಿನ ಹಂಪ್ಸ್ ದಾಟುತ್ತಿದ್ದಾಗ, ಆರೋಪಿ ಕಾರ್ ಚಾಲಕನು ಅಂತರವನ್ನು ಕಾಯ್ದುಕೊಳ್ಳದೇ ಮೋಟಾರ್ ಸೈಕಲಿನ ಹಿಂಬದಿಗೆ ಡಿಕ್ಕಿ ಹೊಡೆದು, ಮೋಟಾರ್ ಸೈಕಲ್ ಸವಾರರಿಗೆ ಕೆಳಗೆ ಬೀಳಿಸಿ, ಅದೇ ವೇಗದಲ್ಲಿ ಮೋಟಾರ್ ಸೈಕಲನ್ನು ಉಜ್ಜಿಕೊಂಡು ಮುಂದಕ್ಕೆ ಹೋಗಿ, ರಸ್ತೆಯ ಬದಿಯಲ್ಲಿದ್ದ ಮಣ್ಣಿನ ಗುಡ್ಡಕ್ಕೆ ಡಿಕ್ಕಿ ಹೊಡೆದು ಕಾರನ್ನು ಪಲ್ಟಿ ಪಡಿಸಿದ್ದಲ್ಲದೇ, ಮೋಟಾರ್ ಸೈಕಲ್ ಸವಾರನಾದ ರಮೇಶ ತಂದೆ ಹನುಮಂತ ನಾಯ್ಕ, ಇವನಿಗೆ ಎಡಭುಜದ ಹತ್ತಿರ ಒಳನೋವು ಮತ್ತು ಮೈಕೈಗೆ ಒಳನೋವು ಹಾಗೂ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತ ಗಣೇಶ ತಂದೆ ರಮೇಶ ನಾಯ್ಕ, ಈತನಿಗೆ ಮೈಕೈಗೆ ಗಾಯನೋವು ಪಡಿಸಿ, ಆರೋಪಿ ಚಾಲಕನು ತನಗೂ ಸಹ ಬಲಗೈಗೆ ಸಣ್ಣಪುಟ್ಟ ತೆರಚಿದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣ ತಂದೆ ಗಣಪತಿ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ರೈಲ್ವೇ ನೌಕರಿ, ಸಾ|| ಶೇಡಿಮೂಲೆ, ಪೋ: ಅನಂತವಾಡಿ, ತಾ: ಹೊನ್ನಾವರ ರವರು ದಿನಾಂಕ: 28-11-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 143/2021, ಕಲಂ: 143, 147, 447, 427, 504, 506(2) ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ವಸಂತ ಕೃಷ್ಣಪ್ಪ ನಾಯ್ಕ, 2] ನವೀನ ಮಾದೇವ ನಾಯ್ಕ, 3]. ಮಾದೇವ ರಾಮ ನಾಯ್ಕ, 4]. ರಾಜೇಶ ನಾರಾಯಣ  ಗೌಡ, 5]. ನಮೀತ ರಾಜೇಶ ಗೌಡ, 6]. ಕವಿತಾ ಜಗದೀಶ ನಾಯ್ಕ, ಸಾ|| (ಎಲ್ಲರೂ) ಬಳ್ಕೂರ, ಹೊಸಹಿತ್ಲ, ತಾ: ಹೊನ್ನಾವರ. ಈ ನಮೂದಿತ ಆರೋಪಿತರೆಲ್ಲರೂ ಅಕ್ರಮವಾಗಿ ಗುಂಪು ಕಟ್ಟಿಕೊಂಡು ದಿನಾಂಕ: 28-11-2021 ರಂದು 18-50 ಗಂಟೆಗೆ ವಾಹನ ನಂ: ಕೆ.ಎ-20/ಸಿ-4371 ನೇದರಲ್ಲಿ ಪಿರ್ಯಾದಿಗೆ ಸೇರಿದ ಬಳ್ಕೂರ ಸರ್ವೇ ನಂ: 137 ಹಿಸ್ಸಾ 7 ರಲ್ಲಿ  ಅಕ್ರಮವಾಗಿ ಬಂದು ಸದ್ರಿ ಜಾಗದಲ್ಲಿ ಬೆಳೆದ ಪಿರ್ಯಾದಿಗೆ ಸೇರಿದ ಅಡಿಕೆ ಗಿಡಗಳನ್ನು ಕಿತ್ತು ರೋಡಿಗೆ ಹಾಕಿ, ‘ಬೋಳಿ ಮಗನೆ, ಸೂಳೆ ಮಗನೆ’ ಅಂತಾ ಕೆಟ್ಟ ಕೆಟ್ಟ ಶಬ್ದಗಳಿಂದ ಬೈಯ್ಯುತ್ತಾ ‘ಕೊಲೆ ಮಾಡುತ್ತೇವೆ’ ಅಂತಾ ಕತ್ತಿ ಮತ್ತು ದೊಣ್ಣೆಯನ್ನು ಹಿಡಿದುಕೊಂಡು ಪಿರ್ಯಾದಿಯ ಮೈ ಮೇಲೆ ಬಿದ್ದು, ಪಿರ್ಯಾದಿಗೆ ಹೊಡೆಯಲು ಬಂದಿದ್ದಲ್ಲದೇ, ‘ಕೊಲೆ ಮಾಡುತ್ತೇವೆ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಮಾದೇವಿ ನಾಗಪ್ಪ ನಾಯ್ಕ, ಪ್ರಾಯ-56 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬಳ್ಕೂರ, ತಾ: ಹೊನ್ನಾವರ ರವರು ದಿನಾಂಕ: 28-11-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 103/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹಮ್ಮದ್ ಸುಹಾನ್ ತಂದೆ ಹುಸೈನ್ ಮುಲ್ಲಾ, ಪ್ರಾಯ-22 ವರ್ಷ, ವೃತ್ತಿ-ವ್ಯಾಪಾರ, ಸಾ|| ದಾಲ್ಜಿರಕೇರಿ, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ (ಸುಜುಕಿ ಎಕ್ಸೆಸ್ ಸ್ಕೂಟಿ ನಂ: ಕೆ.ಎ-47/ವಿ-6295 ನೇದರ ಸವಾರ). ಈತನು ದಿನಾಂಕ: 28-11-2021 ರಂದು 13-00 ಗಂಟೆಗೆ ತಾನು ಚಲಾಯಿಸುತ್ತಿದ್ದ ಸುಜುಕಿ ಎಕ್ಸೆಸ್ ಸ್ಕೂಟಿ ನಂ: ಕೆ.ಎ-47/ವಿ-6295 ನೇದನ್ನು ಮನಾಲಿ ಗಾರ್ಡನ್ ಕಡೆಯಿಂದ ಮುರ್ಡೇಶ್ವರದ ಅರಬ್ಬಿ ಸಮುದ್ರದ ಕಡೆಗೆ ಕಚ್ಚಾ ಮಣ್ಣಿನ ರಸ್ತೆಯ ಮೇಲೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಮನಾಲಿ ಗಾರ್ಡನ್ ಮಣ್ಣಿನ ರಸ್ತೆಯ ಮೇಲೆ ತನ್ನ ಎಡಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿಯ ಅಣ್ಣನ ಮಗನಾದ ಪಾದಚಾರಿ ಹರ್ಷ ತಂದೆ ಮಂಜನಾಥ ಹರಿಕಾಂತ, ಪ್ರಾಯ-9 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಮನಾಲಿ ಗಾರ್ಡನ್, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ, ಈತನಿಗೆ ಹಿಂದಿನಿಂದ ಢಿಕ್ಕಿ ಹೊಡೆದು, ಆತನ ಎಡಗಾಲ ಮೊಣಗಂಟಿನ ಕೆಳಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಘು ತಂದೆ ಈಶ್ವರ ಹರಿಕಾಂತ, ಪ್ರಾಯ-33 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಮನಾಲಿ ಗಾರ್ಡನ್, ಮಾವಳ್ಳಿ-1, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 28-11-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 145/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರೋಶನ ತಂದೆ ಗಂಗಾಧರ ಖಾರ್ವಿ, ಪ್ರಾಯ-25 ವರ್ಷ, ವೃತ್ತಿ-ಟೊಯೋಟಾ ಕಂಪನಿಯಲ್ಲಿ ಕೆಲಸ, ಸಾ|| ಕಾಂಜನ ಮನೆ, ಅಮ್ಮನವರ ತೊಪ್ಪಲು, ಉಪ್ಪುಂದ, ತಾ: ಬೈಂದೂರು, ಜಿ: ಉಡುಪಿ (ಹೀರೋ ಮಾಯೆಸ್ಟ್ರೋ ಸ್ಕೂಟಿ ನಂ: ಕೆ.ಎ-20/ಇ.ಎಚ್-1202 ನೇದರ ಸವಾರ). ಈತನು ದಿನಾಂಕ: 27-11-2021 ರಂದು 11-00 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ಹೀರೋ ಮಾಯೆಸ್ಟ್ರೋ ಸ್ಕೂಟಿ ನಂ: ಕೆ.ಎ-20/ಇ.ಎಚ್-1202 ನೇದನ್ನು ಸೋಡಿಗದ್ದೆ ದೇವಸ್ಥಾನದ ಕಮಾನಿನಿಂದ ಸೋಡಿಗದ್ದೆ ದೇವಸ್ಥಾನದ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಸ್ಕೂಟಿಯ ವೇಗವನ್ನು ನಿಯಂತ್ರಿಸದೇ ಆಂಜನೇಯ ದೇವಸ್ಥಾನಕ್ಕೆ ಹೋಗುವ ರಸ್ತೆಯ ಕ್ರಾಸ್ ಹತ್ತಿರ ತನ್ನ ಸ್ಕೂಟಿ ಹಿಂಬದಿ ಕುಳಿತ ಶ್ರೀವ್ಮತಿ ಸರೋಜಾ ಗಂಗಾಧರ ಖಾರ್ವಿ, ಪ್ರಾಯ-41 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಕಾಂಜನ ಮನೆ, ಅಮ್ಮನವರ ತೊಪ್ಪಲು, ಉಪ್ಪುಂದ, ತಾ: ಬೈಂದೂರು, ಜಿ: ಉಡುಪಿ ಇವಳಿಗೆ ತನ್ನ ಸ್ಕೂಟಿಯಿಂದ ಕೆಡವಿ ಅಪಘಾತ ಪಡಿಸಿ, ಅವಳ ತಲೆಯ ಹಿಂಬದಿಗೆ ಸಾದಾ ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಕಿರಣ ತಂದೆ ನಾಗಪ್ಪ ಹರಿಕಂತ್ರ, ಪ್ರಾಯ-27 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬೆಳ್ನಿ ಶಾಲೆಯ ಹತ್ತಿರ, ತಾ: ಭಟ್ಕಳ ರವರು ದಿನಾಂಕ: 28-11-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 95/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮುಬಾರಕ್ ತಂದೆ ಮೆಹಬೂಬಸಾಬ್ ಯರಗಟ್ಟಿ, ಪ್ರಾಯ-20 ವರ್ಷ, ಸಾ|| ಭಾಗ್ಯಮಂದಿರ, 14 ನೇ ಬ್ಲಾಕ್, ತಾ: ದಾಂಡೇಲಿ (ಮೋಟಾರ್ ಸೈಕಲ್ ನಂ: ಕೆ.ಎ-65/ಜೆ-3129 ನೇದರ ಚಾಲಕ). ಈತನು ದಿನಾಂಕ: 28-11-2021 ರಂದು 17-00 ಗಂಟೆಯ ಸುಮಾರಿಗೆ ದಾಂಡೇಲಿಯ ಪರಿಜ್ಞಾನ ಶಾಲೆಯ ಹತ್ತಿರದ ಡಾಂಬರ್ ರಸ್ತೆಯ ಮೇಲೆ ತನ್ನ ಬಾಬ್ತು ಮೋಟಾರ ಸೈಕಲ್ ನಂ: ಕೆ.ಎ-65/ಜೆ-3129 ನೇದನ್ನು ಮಾರುತಿ ನಗರದ ಕಡೆಯಿಂದ ಗಾಂಧಿನಗರದ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು, ಮೋಟಾರ್ ಸೈಕಲನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ರಸ್ತೆಯ ಪಕ್ಕದಲ್ಲಿ ಆಟ ಆಡುತ್ತಿದ್ದ ಪಿರ್ಯಾದಿಯ ಮಗನಾದ ಕು: ಅಭಿಷೇಕ ಆರ್ಯ, ಪ್ರಾಯ-5 ವರ್ಷ, 6 ತಿಂಗಳು, ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅಭಿಷೇಕ ಈತನಿಗೆ ಮೂಗಿಗೆ, ಗಲ್ಲಕ್ಕೆ ಹಾಗೂ ಎಡಗಾಲಿನ ಪಾದಕ್ಕೆ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶೇಖರ ತಂದೆ ದೇವದಾನಮ್ ಆರ್ಯ, ಪ್ರಾಯ-33 ವರ್ಷ, ವೃತ್ತಿ-ಡಬ್ಲ್ಯೂ.ಸಿ.ಪಿ.ಎಮ್ ನಲ್ಲಿ ದಿನಗೂಲಿ ಕೆಲಸ, ಸಾ|| ಪರಿಜ್ಞಾನ ಶಾಲೆಯ ಹತ್ತಿರ, ಗಾಂಧಿನಗರ, ತಾ: ದಾಂಡೇಲಿ ರವರು ದಿನಾಂಕ: 28-11-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 148/2021, ಕಲಂ: 5, 25(1)(b), 27(1) ಭಾರತ ಆಯುಧ ಕಾಯ್ದೆ-1959 ಹಾಗೂ ಕಲಂ: 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ದಿನಾಂಕ: 28-11-2021 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ದನಗಳನ್ನು ಹುಡುಕಲು ಮನೆಯಿಂದ ಹೋಗಿದ್ದವರು, ಸಮಯ 10-30 ಗಂಟೆಯ ಸುಮಾರಿಗೆ ಮನೆಯ ಹತ್ತಿರದ ಗವಿನಸರದ ಕಾನಗದ್ದೆಯ ನೀಲಗಿರಿ ಗುಡ್ಡದಲ್ಲಿ ದನಗಳನ್ನು ಹುಡುಕುತ್ತಾ ನಡೆದುಕೊಂಡು ಹೋಗುತ್ತಿದ್ದಾಗ ಯಾರೋ ಆರೋಪಿತರು ಕಾಡು ಪ್ರಾಣಿಗಳನ್ನು ಬೇಟೆಯಾಡುವ ಉದ್ದೇಶದಿಂದಲೋ ಅಥವಾ ಇನ್ಯಾವುದೋ ಉದ್ದೇಶದಿಂದ ಯಾವುದೋ ನಮೂನೆಯ ಬಂದೂಕು ಅಥವಾ ಗುಂಡು ಹಾರಿಸುವ ಆಯುಧದಿಂದ ನಿಷ್ಕಾಳಜೀತನದಿಂದ ಗುಂಡು ಹಾರಿಸಿದ ಪರಿಣಾಮ ಬಂದೂಕಿನ ಗುಂಡು ಪಿರ್ಯಾದಿಗೆ ಬಲಗಾಲಿನ ತೊಡೆ ಹಾಗೂ ಮೀನು ಖಂಡದ ಹತ್ತಿರ ಬಡಿದು ಗಾಯನೋವು ಆದ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ಮಾದೇವ ಪೂಜಾರಿ, ಪ್ರಾಯ-36 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಗವಿನಸರ, ಪೋ: ದೇವಿಸರ, ಗಿರಗಡ್ಡೆ ಗ್ರಾಮ, ತಾ: ಸಿದ್ದಾಪುರ ರವರು ದಿನಾಂಕ: 28-11-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 28-11-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 15/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿಯು ಸುಮಾರು 45 ರಿಂದ 50 ವರ್ಷ ಪ್ರಾಯದ ಅಪರಿಚಿತ ಗಂಡಸ್ಸಾಗಿದ್ದು, ಬಲಗೈಯಲ್ಲಿ ‘ಪಿ.ಕೆ.ಮಹೀಮ’ ಅಂತಾ ಅಚ್ಚೆ ಹಾಕಿಸಿಕೊಂಡಿರುತ್ತಾನೆ. ಈತನು ದಿನಾಂಕ: 28-11-2021 ರಂದು ಮಧ್ಯಾಹ್ನ ಸುಮಾರು 12-15 ಗಂಟೆಯ ಸುಮಾರು ಎರಡು ದಿನದ ಮೊದಲು ಕಾರವಾರ ತಾಲೂಕಿನ ತೋಡುರು ಜ್ವಾಲನಮಡಿ ಬೆಟ್ಟದ ಹರಿಯುವ ಹಳ್ಳದಲ್ಲಿಯ ಕಲ್ಲು ಬಂಡೆಯಲ್ಲಿ ಯಾವುದೋ ಕಾರಣಕ್ಕೆ ಬಂದು ಹೇಗೋ ನೀರಿನಲ್ಲಿ ಮರಣಪಟ್ಟಿರಬಹುದು ಎಂಬ ಬಗ್ಗೆ ಪಿರ್ಯಾದಿ ಶ್ರೀ ಪೇರು ತಂದೆ ಲಿಂಗಾ ಗೌಡಾ, ಪ್ರಾಯ-41 ವರ್ಷ, ವೃತ್ತಿ-ಅಧ್ಯಕ್ಷರು, ತೋಡುರು ಗ್ರಾಮ ಪಂಚಾಯತ್, ಸಾ|| ಸೀ-ಬರ್ಡ್ ಕಾಲೋನಿ, ತೋಡುರು, ಕಾರವಾರ ರವರು ದಿನಾಂಕ: 28-11-2021 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 06/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಶ್ರೀಪಾದ ತಂದೆ ಬಾಬಣಿ ಬಲಿಯೇ, ಪ್ರಾಯ-61 ವರ್ಷ, ವೃತ್ತಿ-ಹೋಟೆಲ್ ವ್ಯವಹಾರ, ಸಾ|| ರಾಮನಗರ, ಹುಲೇಕಲ್ ರಸ್ತೆ, ತಾ: ಶಿರಸಿ. ಪಿರ್ಯಾದಿಯ ತಂದೆಯಾದ ಈತನು ದಿನಾಂಕ: 28-11-2021 ರಂದು 14-15 ಗಂಟೆಯ ಸುಮಾರಿಗೆ ತನ್ನ ಮನೆಯ ಹಿಂಬದಿಯಲ್ಲಿರುವ ಬಾವಿಯಲ್ಲಿ ನೀರು ತೆಗೆಯಲು ಹೋದಾಗ ಆಯ ತಪ್ಪಿ ಬಾವಿಯಲ್ಲಿ ಬಿದ್ದು ನೀರು ಕುಡಿದು ಅಸ್ವಸ್ತನಾದವನಿಗೆ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ 15-21 ಗಂಟೆಗೆ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಗೌರವ ತಂದೆ ಶ್ರೀಪಾದ ಬಲಿಯೇ, ಪ್ರಾಯ-18 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ರಾಮನಗರ, ಹುಲೇಕಲ್ ರಸ್ತೆ, ತಾ: ಶಿರಸಿ ರವರು ದಿನಾಂಕ: 28-11-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

ಇತ್ತೀಚಿನ ನವೀಕರಣ​ : 29-11-2021 01:00 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080