Daily District Crime Report
Date:- 28-10-2021
at 00:00 hrs to 24:00 hrs
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 283/2021, ಕಲಂ: 143, 144, 147, 148, 323, 354, 307, 504, 506 ಸಹಿತ 149 ಐಪಿಸಿ ಹಾಗೂ ಕಲಂ: 25 ಭಾರತೀಯ ಆಯುಧ ಅಧಿನಿಯಮ-1959 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮೋಹನ ನಾರಾಯಣ ಗೌಡ, ಪ್ರಾಯ-29 ವರ್ಷ, ಸಾ|| ಕೇರಿಮನೆ, ಮಾವಿನಕುರ್ವಾ, ತಾ: ಹೊನ್ನಾವರ, 2]. ಅಂಕುಶ ನಾರಾಯಣ ಗೌಡ, ಪ್ರಾಯ-30 ವರ್ಷ, ಸಾ|| ಕೇರಿಮನೆ, ಮಾವಿನಕುರ್ವಾ, ತಾ: ಹೊನ್ನಾವರ, 3]. ಮಾರುತಿ ಗಣಪಯ್ಯ ಗೌಡ, ಪ್ರಾಯ-29 ವರ್ಷ, ಸಾ|| ಕೇರಿಮನೆ, ಮಾವಿನಕುರ್ವಾ, ತಾ: ಹೊನ್ನಾವರ, 4]. ಪವನ ರಾಮ ಗೌಡ, ಪ್ರಾಯ-28 ವರ್ಷ, ಸಾ|| ಗದ್ದೆಮನೆ, ಮಾವಿನಕುರ್ವಾ, ತಾ: ಹೊನ್ನಾವರ, 5]. ರಾಜೇಶ ರಾಮಾ ಗೌಡ, ಪ್ರಾಯ-25 ವರ್ಷ, ಸಾ|| ಬೆಲೇಕೇರಿ, ಮಾವಿನಕುರ್ವಾ, ತಾ: ಹೊನ್ನಾವರ, 6]. ಗೋಪಾಲ ಲಕ್ಷ್ಮಣ ಗೌಡ, ಪ್ರಾಯ-26 ವರ್ಷ, ಸಾ|| ಗದ್ದೆಮನೆ, ಮಾವಿನಕುರ್ವಾ, ತಾ: ಹೊನ್ನಾವರ ಹಾಗೂ ಇತರ ಕೆಲವರು. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ಹಾಗೂ 2 ನೇಯವರು ಪಿರ್ಯಾದಿಗೆ ಮೂರು ವರ್ಷಗಳ ಹಿಂದೆ ಹೊಡೆ ಬಡೆ ಮಾಡಿ ಎಳೆದುಕೊಂಡು ಹೋಗಿದ್ದರ ಬಗ್ಗೆ ಪಿರ್ಯಾದಿಯು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇದ್ದಿದ್ದು, ಅಂದಿನಿಂದ ಪಿರ್ಯಾದಿಯ ಮೇಲೆ ಸಣ್ಣ ಸಣ್ಣ ವಿಷಯಕ್ಕೆ ಜಗಳ ತೆಗೆಯುತ್ತಾ ತೊಂದರೆ ನೀಡುತ್ತಾ ಬಂದಿದ್ದವರು. ಹಾಗೆಯೇ ಪಿರ್ಯಾದಿಯು ಗ್ರಾಮ ಪಂಚಾಯತ ಚುನಾವಣೆಯಲ್ಲಿ ಜಿ. ಜಿ. ಶಂಕರ ಬಣಕ್ಕೆ ಸಪೋರ್ಟ್ ಮಾಡಿರುತ್ತಾನೆ ಅಂತಾ ಪಿರ್ಯಾಯ ಮೇಲೆ ದ್ವೇಷ ಸಾಧಿಸುತ್ತಿದ್ದವರು, ದಿನಾಂಕ: 28-10-2021 ರಂದು ಬೆಳಿಗ್ಗೆ 09-30 ಗಂಟೆಯ ಸಮಯಕ್ಕೆ ಪಿರ್ಯಾದಿಯು ತಮ್ಮ ಮನೆಯ ಮುಂದಿನ ರಸ್ತೆಯಲ್ಲಿ ತಮ್ಮ ನಾಯಿಗೆ ಬರ್ಹಿದೆಸೆಗೆ ಕರೆದುಕೊಂಡು ಹೋಗಿದ್ದಾಗ. ಆ ವೇಳೆಗೆ ಆರೋಪಿ 1 ನೇಯವನು ತನ್ನ ಮೋಟಾರ್ ಸೈಕಲ್ ಮೇಲೆ ಹೊಸಾಡ ಕಡೆಯಿಂದ ಮಾವಿನಕುರ್ವಾ ಕಡೆಗೆ ಹೊರಟಿದ್ದವನು, ಪಿರ್ಯಾದಿಯನ್ನು ನೋಡಿ ಎಂಜಲು ಉಗಿದಾಗ ಪಿರ್ಯಾದಿಯು ಅವನ ಕಡೆ ನೋಡಿದಾಗ ಅವನು ತನ್ನ ಮೋಟಾರ್ ಸೈಕಲನ್ನು ತಿರುಗಿಸಿಕೊಂಡು ಬಂದು ಪಿರ್ಯಾದಿಯ ಸುತ್ತಲೂ ರೌಂಡ್ ಹೊಡೆಸಿ ‘ನಿನಗೆ ಮುಂದೆ ಇದೆ ಮಾರಿ ಹಬ್ಬ. ನಮ್ಮ ಹಳೆಯ ರೌಡಿಸಂ ಅನ್ನು ಮತ್ತೆ ತೋರಿಸುತ್ತೇವೆ. ನಿನಗೆ ಸುಮ್ಮನೆ ಬಿಡುವುದಿಲ್ಲ, ಬರುತ್ತೇವೆ’ ಅಂತ ಹೇಳಿ ಬೆದರಿಸಿ ಅಲ್ಲಿಂದ ಹೋಗಿದ್ದನು. ಪಿರ್ಯಾದಿಯು ತನ್ನ ತಾಯಿ ಮತ್ತು ತನ್ನ ಮಗನಾದ ಜಾಕ್ಸನ್ ರೊಂದಿಗೆ ಮಧ್ಯಾಹ್ನ ಊಟ ಮಾಡಿ ಮನೆಯಲ್ಲಿ ಇದ್ದಾಗ ಸುಮಾರು 15-00 ಗಂಟೆಯ ಸಮಯಕ್ಕೆ ನಮೂದಿತ ಆರೋಪಿತರು ಹಾಗೂ ಇತರ ಕೆಲವರು ಗುಂಪು ಕಟ್ಟಿಕೊಂಡು ಪಿರ್ಯಾದಿಯ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ‘ಬೋಳಿ ಮಗ ನವೀನ ಎಲ್ಲಿದ್ದಿಯಾ? ನಿನಗೆ ಇವತ್ತು ಬಿಡುವುದಿಲ್ಲ’ ಅಂತ ಕೂಗುತ್ತಾ ಬಂದವರು. ಆರೋಪಿ 1, 2 ಹಾಗೂ 3 ನೇಯವರು ತಮ್ಮ ಕೈಯ್ಯಲ್ಲಿ ಮಾರಕ ಆಯುಧವಾದ ಸುಮಾರು ಎರಡೂವರೆ ಅಡಿ ಉದ್ದದ ತಲವಾರ್ ಅನ್ನು ಹಿಡಿದುಕೊಂಡು ಬಂದವರು, ಪಿರ್ಯಾದಿಯ ಮನೆಯಿಂದ ಹೊರಗೆ ಬಂದು ‘ಯಾಕೆ ಅಂಗಳಕ್ಕೆ ನುಗ್ಗುತ್ತಿದ್ದೀರಿ?’ ಅಂತಾ ಕೇಳಿದಾಗ ಆರೋಪಿ 1, 2 ಹಾಗೂ 3 ನೇಯವರು ‘ಇವತ್ತು ನಿನಗೆ ಕೊಲೆ ಮಾಡದೇ ಬಿಡುವುದಿಲ್ಲ. ಸಾಯಿಸಿ ಹಾಕುತ್ತೇವೆ’ ಅಂತ ತಮ್ಮ ಕೈಯ್ಯಲ್ಲಿದ್ದ ತಲವಾರ್ ಅನ್ನು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿಯ ಕಡೆ ಬೀಸಿ ಹೊಡೆದಾಗ ಪಿರ್ಯಾದಿಯು ತಪ್ಪಿಸಿಕೊಂಡು ಮನೆಯೊಗಳಗೆ ಕೂಗುತ್ತಾ ಓಡಿದಾಗ ನಮೂದಿತ ಆರೋಪಿತರು ಪಿರ್ಯಾದಿಯ ಹಿಂದೆ ಬರ ತೊಡಗಿದಾಗ ಪಿರ್ಯಾದಿ ತಾಯಿ ಪುಲ್ಲಾ ರವರು ‘ನನ್ನ ಮಗನಿಗೆ ಸಾಯಿಸಬೇಡಿ. ಕೈ ಮುಗಿಯುತ್ತೇನೆ’ ಅಂತಾ ಕೂಗುತ್ತಾ ಅವರಿಗೆ ಅಡ್ಡವಾಗಿ ನಿಂತಾಗ ನಮೂದಿರ ಆರೋಪಿತರು ಪಿರ್ಯಾದಿಯ ತಾಯಿಯವರನ್ನ ಕೈ ಹಿಡಿದು ಎಳೆದಾಡಿ ದೂಡಿ ಅವರಿಗೆ ಕುಂದುಂಟು ಮಾಡಿದ್ದಲ್ಲದೇ, ಆಗ ಊರಿನವರಾದ ಮಾರುತಿ ಮಾದೇವ ಗೌಡ ಹಾಗೂ ಅರುಣ ಮಂಜುನಾಥ ಗೌಡ ಹಾಗೂ ಇತರ ಜನರು ಬಂದಿದ್ದನ್ನು ನೋಡಿ ಆರೋಪಿತರು ಪಿರ್ಯಾದಿಗೆ ‘ಸೂಳಾ ಮಗನೆ, ನಿನಗೆ ಇಷ್ಟಕ್ಕೆ ಬಿಡುವುದಿಲ್ಲ. ನಿನ್ನನ್ನು ಕೊಂದು ಬಿಸಾಡುತ್ತೇವೆ’ ಅಂತ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ನವೀನ ತಂದೆ ಜೋನ್ ರೋಡ್ರಗೀಸ್, ಪ್ರಾಯ-47 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗದ್ದೆಮನೆ, ಮಾವಿನಕುರ್ವಾ, ತಾ: ಹೊನ್ನಾವರ ರವರು ದಿನಾಂಕ: 28-10-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹೊನ್ನಾವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 284/2021, ಕಲಂ: 143, 144, 147, 148, 341, 323, 324, 307, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ವಿಘ್ನೇಶ್ವರ ಮಾನಿ, ಗ್ರಾಮ ಪಂಚಾಯತ ಅದ್ಯಕ್ಷರು, ಸಾ|| ಗ್ರಾಮ ಪಂಚಾಯತ, ಚಿಕ್ಕನಕೋಡ, ತಾ: ಹೊನ್ನಾವರ ಹಾಗೂ ಇನ್ನೂ 5 ರಿಂದ 6 ಜನ ಆರೋಪಿತರು. ನಮೂದಿತ ಆರೋಪಿತ ವಿಘ್ನೇಶ ಮಾನಿ, ಈತನು ಈ ಹಿಂದಿನಿಂದಲೂ ಪಿರ್ಯಾದಿಯೊಂದಿಗೆ ರಾಜಕೀಯವಾಗಿ ದ್ವೇಷದಿಂದ ಇದ್ದವನು, ದಿನಾಂಕ: 28-10-2021 ರಂದು 21-20 ರಿಂದ 21-25 ಗಂಟೆಯ ನಡುವಿನ ಅವಧಿಯ ಸುಮಾರಿಗೆ ಪಿರ್ಯಾದಿಯು ಹೊನ್ನಾವರದಿಂದ ತನ್ನ ಸ್ಕೂಟಿ ನಂ: ಕೆ.ಎ-47/ಕೆ-1555 ನೇದರಲ್ಲಿ ಕರ್ಕಿ ನಡುಚಿಟ್ಟೆಯಲ್ಲಿರುವ ತನ್ನ ಮನೆಗೆ ಹೋಗುತ್ತಿರುವಾಗ ಕರ್ನಲ್ ಕಂಬದ ಸ್ವಲ್ಪ ಹಿಂದೆ ಇರುವ ಪಂಕ್ಚರ್ ಅಂಗಡಿಯ ಹತ್ತಿರ ಕೆಂಪು ಬಣ್ಣದ ಕಾರಿನ ಹತ್ತಿರ ನಿಂತಿದ್ದ ಆರೋಪಿ ವಿಷ್ನೇಶ್ವರ ಮಾನಿ, ಈತನು ಪಿರ್ಯಾದಿಯು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟಿಗೆ ಕೈ ಅಡ್ಡ ಹಾಕಿ ‘ಬೋಸಡಿ ಮಗನೇ ನಿಲ್ಲಿಸು, ನಿನಗೆ ಇವತ್ತು ಬಿಡುವುದಿಲ್ಲ. ಒಂದು ಗತಿ ಕಾಣಿಸುತ್ತೇನೆ’ ಅಂತಾ ಜೋರಾಗಿ ಬೈಯ್ದಿದ್ದು, ಆಗ ಪಿರ್ಯಾದಿಯು ತನ್ನ ಸ್ಕೂಟಿಯನ್ನು ನಿಲ್ಲಿಸದೇ ಮುಂದೆ ಕರ್ಕಿ ಕಡೆಗೆ ಹೋಗುತ್ತಿದ್ದಾಗ ಸ್ವಲ್ಪ ದೂರದಲ್ಲಿ ಕರ್ನಲ್ ಹಿಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಂಪು ಬಣ್ಣದ ಕಾರ್ ಹಾಗೂ ಇನ್ನೊಂದು ಕಪ್ಪು ಬಣ್ಣದ ಕಾರಿನಲ್ಲಿ ಬಂದ ಆರೋಪಿತರು ಪಿರ್ಯಾದಿಯು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟಿಗೆ ಅಡ್ಡ ಹಾಕಿ ನಿಲ್ಲಿಸಿ, ಕೆಂಪು ಬಣ್ಣದ ಕಾರಿನಿಂದ ಆರೋಪಿತ ವಿಷ್ನೇಶ್ವರ ಮಾನಿ ಇಳಿದು ಬಂದಿದ್ದು, ಎರಡು ಕಾರಿನಿಂದ 5 ರಿಂದ 6 ಜನ ಆರೋಪಿತರು ಕೆಳಗೆ ಇಳಿದು ಪಿರ್ಯಾದಿಯ ಬಳಿ ಬಂದು ‘ಬೋಸಡಿ ಮಗನೆ ಏನು ನೀನು ರಾಜಕಾರಣ ಮಾಡುತ್ತಿಯಾ? ದೊಡ್ಡ ಮಾತನಾಡುತ್ತಿಯಾ?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಆರೋಪಿತರೆಲ್ಲರೂ ಸೇರಿ ಪಿರ್ಯಾದಿಗೆ ಕೈಗಳಿಂದ ಹೊಡೆದಿದ್ದು, ಅಲ್ಲದೇ ಕಲ್ಲಿನಿಂದ ಪಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ಲಾರಿಗಳು ಗಲಾಟೆಯನ್ನು ನೋಡಿ ನಿಲ್ಲಿಸಿದಾಗ ಆರೋಪಿತರು ಪಿರ್ಯಾದಿಗೆ ‘ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ಇವತ್ತು ನೀನು ಉಳಿದುಕೊಂಡೆ. ನಿನಗೆ ಒಂದು ಗತಿ ಕಾಣಿಸುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿ, ಆರೋಪಿತರೇಲ್ಲರೂ ಸೇರಿ ತಾವು ತಂದಿದ್ದ ಕೆಂಪು ಮತ್ತು ಕಪ್ಪು ಬಣ್ಣದ ಕಾರಿನಲ್ಲಿ ಹೋಗಿದ್ದು, ಆರೋಪಿತರೆಲ್ಲರೂ ಕೊಲೆ ಮಾಡುವ ಉದ್ದೇಶದಿಂದಲೇ ತನ್ನ ಮೇಲೆ ಹಲ್ಲೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ತುಕಾರಾಮ ತಂದೆ ಹನಮಂತ ನಾಯ್ಕ, ಪ್ರಾಯ-61 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕರ್ಕಿ, ನಡುಚಿಟ್ಟೆ, ತಾ: ಹೊನ್ನಾವರ ರವರು ದಿನಾಂಕ: 28-10-2021 ರಂದು 22-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಭಟ್ಕಳ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 140/2021, ಕಲಂ: 143, 147, 323, 341, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಫಾತಿಮಾ ಜೋಹರ್, 2]. ಮೊಹಮ್ಮದ್ ಹುಸೇನ್, 3]. ಬಲ್‍ಕಿಸ್, 4]. ರವೂಫ್, 5]. ಸುಪಿಯಾನ್, 6]. ಸುಹಾನ್, 7]. ಇಬ್ರಾಹಿಮ್, 8]. ಯಾಸ್ಮೀನ್, 9]. ಹಜೀರಾ, 10]. ಸುಹಾನಾ, ಸಾ|| (ಎಲ್ಲರೂ) ನಗೀನಾ ಸ್ಟ್ರೀಟ್, ಮುಗ್ದುಮ್ ಕಾಲೋನಿ, ತಾ: ಭಟ್ಕಳ. ಈ ನಮೂದಿತ1 ಆರೋಪಿತರು ಪಿರ್ಯಾದಿಯ ಮನೆಯ ಪಕ್ಕದವರಿದ್ದು, ರಸ್ತೆಯ ಮೇಲೆ ಕಸವನ್ನು ಹಾಕುವ ವಿಷಯವಾಗಿ ದಿನಾಂಕ: 27-10-2021 ರಂದು ಸಂಜೆ 18-00 ಗಂಟೆಯ ಸುಮಾರಿಗೆ ಗಲಾಟೆಯಾಗಿದ್ದು ಇರುತ್ತದೆ. ಅದೇ ವಿಷಯವಾಗಿ ದಿನಾಂಕ: 28-10-2021 ರಂದು 10-15 ಗಂಟೆಯ ಸಮಯಕ್ಕೆ ಮನೆಯ ಮುಂದಿನ ರಸ್ತೆಯ ಮೇಲೆ ಇರುವಾಗ ಪಿರ್ಯಾದಿಯನ್ನು ಉದ್ದೇಶಿಸಿ ಆರೋಪಿ 1 ನೇಯವರು ‘ನಿಮ್ಮ ಮೇಲೆ ಪೊಲೀಸ್ ಠಾಣೆಯಲ್ಲಿ ಕಂಪ್ಲೇಟ್ ಮಾಡಿದ್ದು, ನಿಮ್ಮ ಆಟ ಇನ್ನೂ ಮುಂದೆ ನಡೆಯುವುದಿಲ್ಲ’ ಅಂತಾ ಹೇಳಿದಾಗ ಪಿರ್ಯಾದಿ ಹಾಗೂ ಅವರ ಸಂಬಂಧಿಕರಾದ 1) ಫಾತೀಮಾ ಮತ್ತು 2) ಪೌಜಿಯಾ ಇವರ ಜೊತೆ ಆರೋಪಿ 1 ನೇಯವಳ ಹತ್ತಿರ ಹೋಗಿ ‘ನೀನು ಯಾಕೆ ಪೊಲೀಸ್ ಠಾಣೆಯಲ್ಲಿ ಕಂಪ್ಲೇಟ್ ಮಾಡಿದಿಯಾ? ಈ ವಿಷಯದ ಕುರಿತು ನಾವು ಇಲ್ಲೇ ಹರಿಹಾರ ಮಾಡಿಕೊಳ್ಳಬಹುದಿತ್ತು’ ಅಂತಾ ಹೇಳಿದಾಗ ಆರೋಪಿ 1 ನೇಯವಳು ಉಳಿದ ಆರೋಪಿತರಾದ 2 ರಿಂ 9 ನೇಯವರುಗಳನ್ನು ಕರೆಯಿಸಿ, ಅವರು ಗುಂಪು ಕಟ್ಟಿ ಬಂದು ಪಿರ್ಯಾದಿಯವರಿಗೆ ಏಕಾಏಕಿ ಅಡ್ಡಗಟ್ಟಿ ಹಿಡಿದು, ಆರೋಪಿ 1 ನೇಯವಳು ಪಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯವಾಗಿ ಬೈಯ್ದು ‘ನೀನು ಉದ್ಧಾರ ಆಗುವುದಿಲ್ಲ. ನೀನು ಹಾಳಾಗಿ ಹೋಗುತ್ತಿಯಾ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ದೂಡಿ ಹಾಕಿ, ನೆಲದ ಮೇಲೆ ಬೀಳುವಂತೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಹಸೀನಾ ಶೇಖ್ ಕೋಂ. ಮೊಹಿದ್ದೀನ್ ಶೇಕ್, ಪ್ರಾಯ-35 ವರ್ಷ, ವೃತ್ತಿ-ಮನೆ ಕೆಲಸ, ಸಾ|| ನಗೀನಾ ಸ್ಟ್ರೀಟ್, ಮುಗ್ದುಮ್ ಕಾಲೋನಿ, ತಾ: ಭಟ್ಕಳ ರವರು ದಿನಾಂಕ: 28-10-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 71/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶಾಂತಾರಾಮ ತಂದೆ ಮಾವಳು ರಂಗಾವರ, ಸಾ|| ಮುರ್ಕವಾಡ, ತಾ: ಹಳಿಯಾಳ (ಮೋಟಾರ್ ಸೈಕಲ್ ನಂ: ಕೆ.ಎ-31/ಯು-7267 ನೇದರ ಚಾಲಕ). ಈತನು ದಿನಾಂಕ: 28-10-2021 ರಂದು ಸಂಜೆ 06-20 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-31/ಯು-7267 ನೇದನ್ನು ಜಾವಳ್ಳಿ ಕಡೆಯಿಂದ ಹಳಿಯಾಳ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಾ ಹಳಿಯಾಳ ಕಡೆಯಿಂದ ಜಾವಳ್ಳಿ ಕಡೆಗೆ ಬರುತ್ತಿದ್ದ ಪಿರ್ಯಾದಿಯ ಕಾರ್ ನಂ: ಕೆ.ಎ-25/ಎಮ್.ಬಿ-5727 ನೇದಕ್ಕೆ ಜಾವಳ್ಳಿ ಕೆರೆಯ ಕ್ರಾಸ್ ಹತ್ತಿರ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸ್ವಯಂಕೃತ ಅಪಘಾತದಿಂದ ತನ್ನ ಬಲಗಾಲಿನ ಮೂಳೆ ಮುರಿಯುವಂತೆ ಮಾಡಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿಜಯ ತಂದೆ ವಿರೂಪಾಕ್ಷ ತೇಲಿ, ಪ್ರಾಯ-35 ವರ್ಷ, ವೃತ್ತಿ-ದಾಂಡೇಲಿ ಬಂಗೂರನಗರ ಶಾಲೆಯ ಉಪನ್ಯಾಸಕರು, ಸಾ|| ಕೆಂಪವಾಡ, ತಾ: ಕಾಗವಾಡ, ಜಿ: ಬೆಳಗಾಂವ, ಹಾಲಿ ಸಾ|| ಕೆ.ಪಿ.ಸಿ ಕ್ವಾರ್ಟರ್ಸ್, ಲೆನಿನ್ ರಸ್ತೆ, ತಾ: ದಾಂಡೇಲಿ ರವರು ದಿನಾಂಕ: 28-10-2021 ರಂದು 20-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 163/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ವಿಜಯಕುಮಾರ್ ತಂದೆ ಸಿದ್ರಾಯ್ ಕಾಕತಿಕರ, ಪ್ರಾಯ-45 ವರ್ಷ, ವೃತ್ತಿ-ಪಾನ್ ಶಾಪ್, ಸಾ|| ಹೊರಗಿನ ಗುತ್ತಿಗೇರಿ, ಹಳಿಯಾಳ ಶಹರ. ಈತನು ದಿನಾಂಕ: 28-10-2021 ರಂದು 13-00 ಗಂಟೆಗೆ ಹಳಿಯಾಳ ಶಹರದ ಅಳ್ನಾವರ ರಸ್ತೆಯ ಗಣೇಶ ಕಲ್ಯಾಣ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ಅಕ್ರಮ ಲಾಭಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ನಿಂತು ಬರ-ಹೋಗುವ ಜನರಿಗೆ ಕರೆದು, ಅದೃಷ್ಟ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿರಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಹಣ ಕೊಡುತ್ತೇನೆ ಅಂತಾ ಜನರ ಮನವೊಲಿಸಿ, ಅವರಿಂದ ಹಣ ಪಡೆದು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ, ದಾಳಿಯ ಕಾಲಕ್ಕೆ ಜೂಗಾರಾಟದ ಸಾಮಗ್ರಿಗಳಾದ 1). ನಗದು ಹಣ 1,100/- ರೂಪಾಯಿ, 2). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, 3) ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-1, ಅ||ಕಿ|| 00.00/- ರೂಪಾಯಿ, 4). ಸಣ್ಣ ಕಾಗದದ ತುಣುಕುಗಳು-11, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಪಿರ್ಯಾದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ (ಎಲ್&ಓ), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 28-10-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಹಳಿಯಾಳ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 164/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಅಕೇಶ ತಂದೆ ವಸಂತ ಕೊಪ್ಪದ, ಪ್ರಾಯ-23 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೇಶಪಾಂಡೆ ನಗರ, ಹಳಿಯಾಳ ಶಹರ. ಈತನು ದಿನಾಂಕ: 28-10-2021 ರಂದು 15-30 ಗಂಟೆಗೆ ಹಳಿಯಾಳ ಶಹರದ ಮೇನ್ ಬಜಾರ್ ದಲ್ಲಿರುವ ಫಡ್ನೀಸ್ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ಅಕ್ರಮ ಲಾಭಕ್ಕೋಸ್ಕರ ಬರ-ಹೋಗುವ ಜನರನ್ನು ಕರೆದು ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿರಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಆಸೆ ಆಮಿಷ ತೋರಿಸಿ ಕೂಗಿ ಕರೆದು, ಬಂದಂತಹ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳನ್ನು ಚೀಟಿಯಲ್ಲಿ ಬರೆದು ಕೊಡುತ್ತಾ, ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ದಾಳಿ ಕಾಲಕ್ಕೆ ಓ.ಸಿ ಮಟಕಾ ಜೂಗಾರಾಟದ ನಗದು ಹಣ 1,200/- ರೂಪಾಯಿ ಮತ್ತು ಸಾಮಗ್ರಿಗಳಾದ 1). ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-1, 2). ಬಾಲ್ ಪೆನ್-01 ಇವುಗಳೊಂದಿಗೆ ಆರೋಪಿತನು ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ಕೆ. ನಾವದಗಿ, ಪಿ.ಎಸ್.ಐ (ಎಲ್&ಓ), ಹಳಿಯಾಳ ರವರು ದಿನಾಂಕ: 28-10-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 134/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮಾಬ್ಲೇಶ್ವರ ತಂದೆ ಜನ್ನಾ ಗೌಡ, ಪ್ರಾಯ-41 ವರ್ಷ, ವೃತ್ತಿ-ಕೃಷಿ ಹಾಗೂ ಹೊಟೇಲ್ ವ್ಯಾಪಾರ, ಸಾ|| ದೊಂಬೆ ಕ್ರಾಸ್, ಹೇರೂರು, ತಾ: ಸಿದ್ದಾಪುರ. ಈತನು ದಿನಾಂಕ: 28-10-2021 ರಂದು ಮಧ್ಯಾಹ್ನ 15-00 ಗಂಟೆಗೆ ಸಿದ್ದಾಪುರದ ಹೇರೂರು ಗ್ರಾಮದ ದೊಂಬೆ ಬಸ್ ನಿಲ್ದಾಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಜನರಿಂದ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಅವರಿಗೆ ಓ.ಸಿ ಮಟಕಾ ಜುಗಾರಾಟದ ಅಂಕೆ-ಸಂಖ್ಯೆಗಳ ಚೀಟಿಯನ್ನು ಬರೆದು ಕೊಟ್ಟು ಓ.ಸಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದಾಗ ಆರೋಪಿತನು ದಾಳಿಯ ಕಾಲಕ್ಕೆ ಓ.ಸಿ ಜುಗಾರಾಟದ ಸಲಕರಣೆಗಳಾದ 1). ಬಾಲ್ ಪೆನ್-1, 2). ಓ.ಸಿ ಚೀಟಿ-1 ಮತ್ತು 3). ನಗದು ಹಣ 1,320/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 28-10-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 135/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಶಾಂತಾರಾಮ ತಂದೆ ಗಣಪತಿ ಶೇಟ್, ಪ್ರಾಯ-28 ವರ್ಷ, ವೃತ್ತಿ-ಸೈಕಲ್ ರಿಪೇರಿ, ಸಾ|| ಹೆಗ್ಗರಣೆ, ತಾ: ಸಿದ್ದಾಪುರ. ಈತನು ದಿನಾಂಕ: 28-10-2021 ರಂದು 19-00 ಗಂಟೆಗೆ ಸಿದ್ದಾಪುರ ತಾಲೂಕಿನ ಹೆಗ್ಗರಣೆಯ ಸರ್ಕಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ತನ್ನ ಅನ್ಯಾಯದ ಲಾಭಕ್ಕೋಸ್ಕರ ಓ.ಸಿ ಅಂಕೆ-ಸಂಖ್ಯೆಗಳ ಅದೃಷ್ಟದ ಮೇಲೆ ಜನರಿಂದ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಜೂಗಾರಾಟ ನಡೆಸುತ್ತಿದ್ದ ಬಗ್ಗೆ ಮಾಹಿತಿ ಕಲೆ ಹಾಕಿ ಪಿರ್ಯಾದಿಯವರಿಗೆ ದಾಳಿ ಕೈಗೊಳ್ಳಲು ಸೂಚಿಸಿದಂತೆ ಪಿ.ಎಸ್.ಐ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸಿದ್ದಾಪುರ ತಾಲೂಕಿನ ಹೆಗ್ಗರಣೆಯ ಸರ್ಕಲ್ ಬಳಿ ಹೋಗಿ ದಿನಾಂಕ: 28-10-2021 ರಂದು 19-30 ಗಂಟೆಗೆ ದಾಳಿ ಮಾಡಿದಾಗ ಆರೋಪಿತನು ದಾಳಿಯ ಕಾಲಕ್ಕೆ ಓ.ಸಿ ಜುಗಾರಾಟದ ಸಲಕರಣೆಗಳಾದ 1). ಬಾಲ್ ಪೆನ್-1, 2). ಓ.ಸಿ ಚೀಟಿ-1 ಮತ್ತು 3). ನಗದು ಹಣ 1,250/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ (ತನಿಖೆ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 28-10-2021 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಬನವಾಸಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 100/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಈಶ್ವರ ತಂದೆ ದಾಸಪ್ಪ ಬೇಡರ, ಪ್ರಾಯ-38 ವರ್ಷ, ವೃತ್ತಿ-ವ್ಯಾಪಾರ, ಸಾ|| ದಾಸನಕೊಪ್ಪ, ತಾ: ಶಿರಸಿ. ಈತನು ದಿನಾಂಕ: 28-10-2021 ರಂದು ಬೆಳಿಗ್ಗೆ 08-00 ಗಂಟೆಗೆ ತನ್ನ ಅಕ್ರಮ ಲಾಭಕೋಸ್ಕರ ದಾಸನಕೊಪ್ಪ-ಶಿರಸಿ ರಸ್ತೆಯ ದಾಸನಕೊಪ್ಪದ ಮುತ್ತುರಾಯನ ಹೊಂಡದ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ದಾಳಿ ಮಾಡಿ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳಾದ 1). ಓ.ಸಿ ಚೀಟಿ-01 2). ನಗದು ಹಣ 1,010/- ರೂಪಾಯಿ, 3). ಬಾಲ್ ಪೆನ್-01 ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಹಣಮಂತ ಬಿರಾದಾರ, ಪಿ.ಎಸ್.ಐ (ಕಾ&ಸು), ಬನವಾಸಿ ಪೊಲೀಸ್ ಠಾಣೆ ರವರು ದಿನಾಂಕ: 28-10-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ರಾಮನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 78/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಬಾಬು ತಂದೆ ವಿಠ್ಠು ಕೊಕರೆ, ಪ್ರಾಯ-30 ವರ್ಷ, ಸಾ|| ಕೂಡಲಗಾಂವ, ಗೌಳಿವಾಡಾ, ತಾ: ಜೋಯಿಡಾ (ಮೋಟಾರ್ ಸೈಕಲ್ ನಂ: ಕೆ.ಎ-65/ಜೆ-7155 ನೇದರ ಚಾಲಕ). ಈತನು ದಿನಾಂಕ: 26-10-2021 ರಂದು ಸಾಯಂಕಾಲ 07-15 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-65/ಜೆ-7155 ನೇದರ ಹಿಂಬದಿಯಲ್ಲಿ ತನ್ನ ತಮ್ಮ ಜಾನು ತಂದೆ ವಿಠ್ಠು ಕೊಕರೆ, ಈತನನ್ನು ಕೂಡ್ರಿಸಿಕೊಂಡು ಸಿಂಗರಗಾಂವದಿಂದ ಕೂಡಲಗಾಂವಗೆ ಹೋಗುತ್ತಿರುವಾಗ ಸಿಂಗರಗಾಂವದಿಂದ 1 ಕಿ.ಮೀ ಅಂತರದಲ್ಲಿ ನೇರವಾಗಿರುವ ಕಾಡಿನ ಮಧ್ಯದ ರಸ್ತೆಯಲ್ಲಿ ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುವಾಗ ಕಾಡಿನೊಳಗಿಂದ ಹಂದಿಯೊಂದು ಅಡ್ಡ ಬಂದಾಗ ತಪ್ಪಿಸಲೆಂದು ಒಮ್ಮೇಲೆ ಬ್ರೇಕ್ ಹಾಕಿದಾಗ ಮೋಟಾರ್ ಸೈಕಲ್ ಸ್ಕಿಡ್ಡಾಗಿ ಇಬ್ಬರು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ಮೋಟಾರ್ ಸೈಕಲ್ ಹಿಂದುಗಡೆ ಕುಳಿತಿದ್ದ ಜಾನು ತಂದೆ ವಿಠ್ಠು ಕೊಕರೆ, ಈತನು ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಬಡಿಯಿಸಿಕೊಂಡು ತನ್ನ ತಲೆಯ ಎಡಭಾಗದಲ್ಲಿ, ಎಡಗೈ ಭುಜಕ್ಕೆ ಹಾಗೂ ಎಡಗಾಲಿನ ಮೋಣಗಂಟಿನ ಭಾಗದಲ್ಲಿ ಪೆಟ್ಟು ಮಾಡಿಕೊಂಡಿದ್ದು, ಆರೋಪಿ ಮೋಟಾರ್ ಸೈಕಲ್ ಸವಾರನು ತನ್ನ ಬಲಗಾಲಿಗೆ ದುಃಖಾಪತ್ ಪಡಿಸಿಕೊಂಡವರಿಗೆ ಪಿರ್ಯಾದಿಯವರು ತಾನು ಉಪಚಾರಕ್ಕೆ ಸೇರಿಸಿದ್ದು. ಈ ಅಪಘಾತವು ಮೋಟಾರ್ ಸೈಕಲ್ ನಂ: ಕೆ.ಎ-65/ಜೆ-7155 ನೇದರ ಚಾಲಕನಾದ ನಮೂದಿತ ಆರೋಪಿತನ ಅತೀವೇಗದ ಹಾಗೂ ಅಜಾಗರೂಕತೆಯ ಚಾಲನೆಯಿಂದ ಸಂಭವಿಸಿದ ಬಗ್ಗೆ ಪಿರ್ಯಾದಿ ಶ್ರೀ ಬಾಪು ತಂದೆ ವಿಠೋಬಾ ಪಾಯಸವಾಡಕರ, ಪ್ರಾಯ-42 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೂಡಲಗಾಂವ, ತಾ: ಜೋಯಿಡಾ ರವರು ದಿನಾಂಕ: 28-10-2021 ರಂದು 10-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
Daily District U.D Report
Date:- 28-10-2021
at 00:00 hrs to 24:00 hrs
ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 15/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಂಜುನಾಥ ತಂದೆ ರಾಚಯ್ಯ ಪೇಟಿಮಠ, ಪ್ರಾಯ-58 ವರ್ಷ, ವೃತ್ತಿ-ಹಮಾಲಿ ಕೆಲಸ, ಸಾ|| ಕರಿಗುಂಡಿ ರಸ್ತೆ, 12 ನೇ ಕ್ರಾಸ್, ತಾ: ಶಿರಸಿ. ಇವರು ಪಿರ್ಯಾದಿಯ ತಂದೆಯವರಿದ್ದು, ಸದ್ರಿಯವರು ವೀಪರಿತ ಮದ್ಯ ಕುಡಿಯುವ ಚಟದವರಾಗಿದ್ದು, ದಿನಾಂಕ: 28-10-2021 ರಂದು ಮಧ್ಯಾಹ್ನ ವಿಪರೀತ ಮದ್ಯವನ್ನು ಕುಡಿದು ಮನೆಗೆ ಬಂದು ಊಟ ಮಾಡಿ ಮಲಗಿದ್ದವರು, 17-30 ಗಂಟೆಯ ಸುಮಾರಿಗೆ ಎದ್ದು ಮೂತ್ರ ವಿಸರ್ಜನೆ ಮಾಡಲು ಮನೆಯ ಹತ್ತಿರ ಇರುವ ಗಟಾರದ ಬಳಿ ಹೋದವರು, ಗಟಾರದಲ್ಲಿ ಬಿದ್ದುಕೊಂಡಿರುವುದನ್ನು ಪಿರ್ಯಾದಿಯ ತಾಯಿಯವರಾದ ನಾಗರತ್ನಾ ರವರು ನೋಡಿ ಕೂಗಿಕೊಂಡಾಗ ಪಿರ್ಯಾದಿ ಮತ್ತು ಪಿರ್ಯಾದಿಯ ಮನೆಯವರು ಹಾಗೂ ಅಕ್ಕಪಕ್ಕದವರು ಹೋಗಿ ನೋಡಲಾಗಿ ಗಟಾರದಲ್ಲಿ ಮುಖ ಕೆಳಗಾಗಿ ಬಿದ್ದುಕೊಂಡಿದ್ದು, ಗಟಾರದ ನೀರಿನಲ್ಲಿ ಮುಖವು ಮುಳಗಿದ್ದು, ಕೂಡಲೇ ಪಿರ್ಯಾದಿ ಮತ್ತು ಮನೆಯ ಜನರು ಗಟಾರದಿಂದ ಮೇಲಕ್ಕೆ ಎತ್ತಿ ನೋಡಲಾಗಿ ತಲೆಯ ಬಲ ಭಾಗದಲ್ಲಿ ಪೆಟ್ಟಾಗಿದ್ದು, ಮಾತನಾಡುತ್ತಿರಲಿಲ್ಲ. ನಂತರ ಪಿರ್ಯಾದಿ ಮತ್ತು ಪಿರ್ಯಾದಿಯ ಮನೆಯವರು ಸೇರಿ ಪಿರ್ಯಾದಿಯ ತಂದೆಯವರಿಗೆ ಚಿಕಿತ್ಸೆಗಾಗಿ ಶಿರಸಿಯ ಸಾರ್ವಜನಿಕ ಆಸ್ಪತ್ರೆಗೆ 18-40 ಗಂಟೆಯ ಸುಮಾರಿಗೆ ಕರೆದುಕೊಂಡು ಹೋದಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವ ಬಗ್ಗೆ ತಿಳಿಸಿದ್ದು, ಮೃತ ತನ್ನ ತಂದೆಯವರು ವಿಪರೀತ ಮದ್ಯವನ್ನು ಕುಡಿದು ನಶೆಯಲ್ಲಿ ಗಟಾರದ ಅಂಚಿನಲ್ಲಿ ಕಾಲು ಜಾರಿ ಗಟಾರಕ್ಕೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡು ಮತ್ತು ಗಟಾರದ ನೀರಿನಲ್ಲಿ ಮುಖ ಮುಳಗಿ ಉಸಿರುಗಟ್ಟಿ ಮೃತಪಟ್ಟಿದ್ದು, ಇದರ ಹೊರತು ತನ್ನ ತಂದೆಯವರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಜೇಶ ತಂದೆ ಮಂಜುನಾಥ ಪೇಟಿಮಠ, ಪ್ರಾಯ-30 ವರ್ಷ, ವೃತ್ತಿ-ಹಮಾಲಿ ಕೆಲಸ, ಸಾ|| ಕರಿಗುಂಡಿ ರಸ್ತೆ, 12 ನೇ ಅಡ್ಡ ರಸ್ತೆ, ತಾ: ಶಿರಸಿ ರವರು ದಿನಾಂಕ: 28-10-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======