ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 28-09-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 70/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 27-09-2021 ರಂದು ರಾತ್ರಿ 20-00 ಗಂಟೆಯಿಂದ ದಿನಾಂಕ: 28-09-2021 ರಂದು ಬೆಳಿಗ್ಗೆ 07-30 ಗಂಟೆಯ ನಡುವಿನ ಅವಧಿಯಲ್ಲಿ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ತದಡಿ ಗ್ರಾಮದ ಬೇಲೇಖಾನ್ ದಲ್ಲಿರುವ ಪಿರ್ಯಾದಿಯವರ ಬಾಬ್ತು ಕೋಲ್ಡ್ರಿಂಕ್ಸ್ ಅಂಗಡಿಯ ಬಾಗಿಲಿನ ಚಾವಿಯನ್ನು ಯಾವುದೇ ಆಯುಧದಿಂದ ಮುರಿದು ಒಳ ಹೊಕ್ಕು ಅಂಗಡಿಯ ಒಳಗಡೆ ಇರುವ ಟೇಬಲ್ ಡ್ರಾವರಿನ ಕೆಳಗಡೆ ಬಾಕ್ಸ್ ನಲ್ಲಿ ಬಟ್ಟೆಯ ಚೀಲದಲ್ಲಿ ಪಿರ್ಯಾದಿಯು ಈ ಹಿಂದೆ ತನ್ನ ಸ್ವಂತ ಜಮೀನಿನ ಸರ್ವೇ ನಂ: 1225/2 ನೇದರಲ್ಲಿಯ 6 ಗುಂಟೆ ಜಮೀನಿನಲ್ಲಿ 4 ಗುಂಟೆ ಜಮೀನಿನನ್ನು ಬೆಳಗಾವಿಯ ಸುನೀಲ್ ಪಾಟೀಲ್ ಎಂಬುವವರಿಗೆ 12 ಲಕ್ಷ ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಿ 5 ಲಕ್ಷ ರೂಪಾಯಿ ಹಣವನ್ನು ಮಾರ್ಚ್-2021 ರಲ್ಲಿ ಮುಂಗಡ ಪಡೆದುಕೊಂಡಿದ್ದು, ಜಮೀನಿನ ದಸ್ತಾವೇಜನ್ನು ಕಳೆದ 2 ತಿಂಗಳ ಹಿಂದೆ ಮಾಡಿದ್ದು, ನಂತರದಲ್ಲಿ ಅವರಿಂದ ಬರತಕ್ಕ 7 ಲಕ್ಷ ರೂಪಾಯಿ ಹಣವನ್ನು ಸ್ವೀಕರಿಸಿ, ಒಟ್ಟೂ 12 ಲಕ್ಷ ರೂಪಾಯಿ ಹಣದಲ್ಲಿ ಬ್ಯಾಂಕಿನ ಸಾಲ ಹಾಗೂ ಇತರೇ ಖರ್ಚಿಗೆ ಸುಮಾರು 2 ಲಕ್ಷ ರೂಪಾಯಿಯನ್ನು ಖರ್ಚು ಮಾಡಿ, ಉಳಿದ 10 ಲಕ್ಷ ರೂಪಾಯಿಯನ್ನು ತನ್ನ ಅಂಗಡಿಯ ಟೇಬಲ್ ಡ್ರಾವರಿನ ಕೆಳಗಡೆಯ ಬಾಕ್ಸ್ ನಲ್ಲಿ ಇಟ್ಟಿದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶ್ರೀಧರ ತಂದೆ ಅನಂತ ನಾಯ್ಕ, ಪ್ರಾಯ-45 ವರ್ಷ, ವೃತ್ತಿ-ವ್ಯಾಪಾರ, ಸಾ|| ಬೇಲೇಖಾನ್, ತದಡಿ, ತಾ: ಕುಮಟಾ ರವರು ದಿನಾಂಕ: 28-09-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 168/2021, ಕಲಂ: 143, 147, 341, 323, 504 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಲಕ್ಷ್ಮೀಕಾಂತ ದಾಮೋದರ ಲಕ್ಕುಮನೆ, 2]. ದಾಮೋದರ ಗಣಪತಿ ಲಕ್ಕುಮನೆ, 3]. ಲಂಬೋದರ ಗಂಗಾಧರ ನಾಯ್ಕ, 4]. ಚವಾನ್ ಬಾಬು ನಾಯ್ಕ, 5]. ಕುಮಾರ ಸೋಫಾ ನಾಯ್ಕ, ಸಾ|| (ಎಲ್ಲರೂ) ಬಿಳಿಹೊಯ್ಗಿ, ಅಘನಾಶಿನಿ, ತಾ: ಕುಮಟಾ. ದಿನಾಂಕ: 27-09-2021 ರಂದು 17-00 ಗಂಟೆಗೆ ಕುಮಟಾದ ಅಘನಾಶಿನಿಯಲ್ಲಿರುವ ನಾಮಧಾರಿ ಸಭಾಭವನದ ಹತ್ತಿರ ನಿಂತಿದ್ದ ಚಿಪ್ಪಿ ತುಂಬಿದ ಲಾರಿಯನ್ನು ಪಿರ್ಯಾದಿಯವರು ನೋಡಿ ಅದರ ಚಾಲಕನಿಗೆ ‘ಚಿಪ್ಪಿಯನ್ನು ಸಾಗಾಟ ಮಾಡಲು ನಿಮಗೆ ಗ್ರಾಮ ಪಂಚಾಯತಿಯಿಂದ ಪರ್ಮಿಶನ್ ಕೊಟ್ಟಿರುತ್ತಾರೆಯೇ ಹೇಗೆ?’ ಎಂದು ವಿಚಾರಿಸುತ್ತಿದ್ದಾಗ. ಅಲ್ಲಿಯೇ ನಿಂತಿದ್ದ ಆರೋಪಿತರೆಲ್ಲರೂ ಸೇರಿ ಪಿರ್ಯಾದಿಯ ಮೇಲೆ ಸಿಟ್ಟಾಗಿ, ಎಲ್ಲರೂ ಸೇರಿ ಪಿರ್ಯಾದಿ ಮತ್ತು ಅವರ ಜೊತೆಯಲ್ಲಿದ್ದ ಶ್ರೀ ಹರೀಶ್ಚಂದ್ರ ಶಂಕರ ಹರಿಕಂತ್ರ ಇವರುಗಳಿಗೆ ಅಡ್ಡಗಟ್ಟಿ ತಡೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದಿಗೆ ಕೈಯಿಂದ ಎಡಗಣ್ಣಿನ ಹತ್ತಿರ ಹಾಗೂ ಎಡಗೆನ್ನೆಗೆ ಹೊಡೆದು ನೆಲಕ್ಕೆ ದೂಡಿ ಹಾಕಿ ಗಾಯ ಪಡಿಸಿದ್ದಲ್ಲದೇ, ಹರೀಶ್ಚಂದ್ರ ಹರಿಕಂತ್ರ ಇವರಿಗೆ ಕೈಯಿಂದ ಕೆನ್ನೆಯ ಮೇಲೆ ಮತ್ತು ಬೆನ್ನಿನ ಮೇಲೆ ಹೊಡೆದು ಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸಂದೀಪ ತಂದೆ ವೆಂಕಟೇಶ ಲಕ್ಕುಮನೆ, ಪ್ರಾಯ-30 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಿಳಿಹೊಯ್ಗಿ, ಅಘನಾಶಿನಿ, ತಾ: ಕುಮಟಾ ರವರು ದಿನಾಂಕ: 28-09-2021 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 169/2021, ಕಲಂ: 143, 147, 341, 323, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸಂದೀಪ ವೆಂಕಟೇಶ ಲಕ್ಕುಮನೆ, ಪ್ರಾಯ-32 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಅಘನಾಶಿನಿ, ತಾ: ಕುಮಟಾ, 2]. ಹರೀಶ್ಚಂದ್ರ ಶಂಕರ ಹರಿಕಂತ್ರ, ಪ್ರಾಯ-39 ವರ್ಷ, ಸಾ|| ಅಘನಾಶಿನಿ, ತಾ: ಕುಮಟಾ, 3]. ದುರ್ಗು ಗಣಪು ಹರಿಕಂತ್ರ, ಪ್ರಾಯ-38 ವರ್ಷ, ವೃತ್ತಿ ಮೀನುಗಾರಿಕೆ, ಸಾ|| ಅಘನಾಶಿನಿ, ತಾ: ಕುಮಟಾ, 4]. ರಾಮಕೃಷ್ಣ ಲಕ್ಷ್ಮಣ ಹರಿಕಂತ್ರ, ಪ್ರಾಯ-53 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಅಘನಾಶಿನಿ, ತಾ: ಕುಮಟಾ, 5]. ಬಾಬು ಶಿವು ಹರಿಕಂತ್ರ, ಪ್ರಾಯ-52 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಅಘನಾಶಿನಿ, ತಾ: ಕುಮಟಾ. ದಿನಾಂಕ: 27-09-2021 ರಂದು 17-00 ಗಂಟೆಗೆ ಕುಮಟಾದ ಅಘನಾಶಿನಿಯಲ್ಲಿರುವ ನಾಮಧಾರಿ ಸಭಾಭವನದ ಹತ್ತಿರ ನಿಂತಿದ್ದ ಚಿಪ್ಪಿ ತುಂಬಿದ ಲಾರಿಯನ್ನು ಸಾಗಾಟ ಮಾಡುತ್ತಿದ್ದ ವಿಚಾರದಲ್ಲಿ ನಮೂದಿತ ಆರೋಪಿತರು ತೊಂದರೆ ಕೊಡುತ್ತಿದ್ದ ವಿಚಾರ ತಿಳಿದು ಪಿರ್ಯಾದಿಯವರು ಆರೋಪಿತರಿಗೆ ಬುದ್ಧಿಮಾತು ಹೇಳಿದಕ್ಕೆ ಸಿಟ್ಟಾದ ಆರೋಪಿತರೆಲ್ಲಾ ಸೇರಿಕೊಂಡು ‘ನಮಗೆ ಹೇಳಲು ನೀನ್ಯಾರು?’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಆರೋಪಿ 1 ನೇಯವನು ಪಿರ್ಯಾದಿಯ ಎದೆಗೆ ಕೈ ಹಾಕಿ ರಸ್ತೆಯಲ್ಲಿ ದೂಡಿ ಹಾಕಿ, ಪಿರ್ಯಾದಿಯು ಎದ್ದೇಳಲು ಪ್ರಯತ್ನಿಸಿದಾಗ ಆರೋಪಿತರೆಲ್ಲರೂ ಸೇರಿಕೊಂಡು ಅವರನ್ನು ಅಡ್ಡಗಟ್ಟಿ ತಡೆದು ‘ನೀವು ಹೇಗೆ ಚಿಪ್ಪಿಯನ್ನು ಲಾರಿಯಲ್ಲಿ ತುಂಬುತ್ತಿರಿ ಅಂತಾ ನಾವು ನೋಡಿಕೊಳ್ಳುತ್ತೇವೆ’ ಅಂತಾ ಬೆದರಿಸಿದ ಬಗ್ಗೆ ಪಿರ್ಯಾದಿ ಶ್ರೀ ದಾಮೋದರ ತಂದೆ ಗಣಪತಿ ಲಕ್ಕುಮನೆ, ಪ್ರಾಯ-58 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಅಘನಾಶಿನಿ, ತಾ: ಕುಮಟಾ ರವರು ದಿನಾಂಕ: 28-09-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 252/2021, ಕಲಂ: 447, 307, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುಬ್ರಾಯ ತಂದೆ ಗಣೇಶ ಹೆಗಡೆ, ಪ್ರಾಯ-45 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನೀಲ್ಕೋಡ, ತಾ: ಹೊನ್ನಾವರ. ಈತನು ಪಿರ್ಯಾದಿಯ ದಾಯಾದಿ ಸಂಬಂಧಿಯಾಗಿದ್ದು, ಆರೋಪಿತನು ಈ ಹಿಂದಿನಿಂದಲೂ ಪಿರ್ಯಾದಿ ಹಾಗೂ ಪಿರ್ಯಾದಿಯ ತಂದೆ ದತ್ತಾತ್ರೇಯ ಪರಮೇಶ್ವರ ಹೆಗಡೆ, ಪ್ರಾಯ-72 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನೀಲ್ಕೋಡ, ತಾ: ಹೊನ್ನಾವರ ಇವರಿಗೆ ಕೊಲೆ ಮಾಡುವುದಾಗಿ ಪಿರ್ಯಾದಿಯ ಮನೆಯ ಮುಂದೆ ಬಂದು ಗಲಾಟೆ ಮಾಡುತ್ತಾ ಬಂದವನು, ದಿನಾಂಕ: 27-09-2021 ರಂದು ರಾತ್ರಿ 09-45 ಗಂಟೆಗೆ ಆರೋಪಿತನು ತನ್ನ ಮನೆಯ ಮುಂದೆ ಪಿರ್ಯಾದಿ ಹಾಗೂ ಪಿರ್ಯಾದಿಯ ಮನೆಯವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿರುವಾಗ ಪಿರ್ಯಾದಿಯ ತಂದೆ ದತ್ತಾತ್ರೇಯ ಪರಮೇಶ್ವರ ಹೆಗಡೆ ಇವರು ತಮ್ಮ ಮನೆಯ ಮುಂದಿನ ಅಂಗಳದಲ್ಲಿ ನಿಂತು ಆರೋಪಿತನಿಗೆ ‘ಯಾಕೆ ಈ ರೀತಿ ಬೈಯ್ದು ಕೂಗಾಡುತ್ತಿಯಾ?’ ಅಂತಾ ಕೇಳಿದಾಗ ಆರೋಪಿತನು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಪಿರ್ಯಾದಿಯ ಮನೆಯ ಅಂಗಳಕ್ಕೆ ಬಂದು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿಯ ತಂದೆಗೆ ಕತ್ತಿಯಿಂದ ಎಡಗೈಯ ಬೆರಳಿಗೆ, ಎಡಗೈಯ ಮಣಿಕಟ್ಟಿಗೆ, ತಲೆಗೆ ಹಾಗೂ ಎಡಭುಜಕ್ಕೆ ಹೊಡೆದು ತೀವ್ರ ತರಹದ ರಕ್ತದ ಗಾಯನೋವು ಪಡಿಸಿದಾಗ ಇದನ್ನು ನೋಡಿದ ಪಿರ್ಯಾದಿ ಹಾಗೂ ಮನೆಯವರು ಬಂದು ಆರೋಪಿತನು ಪಿರ್ಯಾದಿಯ ತಂದೆಗೆ ಹೊಡೆಯುವುದನ್ನು ತಪ್ಪಿಸಿದಾಗ, ಆರೋಪಿತನು ಪಿರ್ಯಾದಿ ಹಾಗೂ ಪಿರ್ಯಾದಿಯ ಮನೆಯವರನ್ನು ಉದ್ದೇಶಿಸಿ ‘ಬೋಳಿ ಮಕ್ಕಳಾ, ಸೂಳಾ ಮಕ್ಕಳಾ, ನಿಮ್ಮನ್ನು ಇಷ್ಕಕ್ಕೆ ಬಿಡುವುದಿಲ್ಲ. ಮತ್ತೊಂದು ದಿನ ನಿಮ್ಮನ್ನು ಕೊಂದು ಹಾಕುತ್ತೇನೆ’ ಅಂತಾ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ದತ್ತಾತ್ರೇಯ ಹೆಗಡೆ, ಪ್ರಾಯ-38 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ನೀಲ್ಕೋಡ, ತಾ: ಹೊನ್ನಾವರ ರವರು ದಿನಾಂಕ: 28-09-2021 ರಂದು 23-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದನ್ನು ಅಪರಾಧ ಸಂಖ್ಯೆ: 252/2021, ಕಲಂ: 447, 307, 504. 506 ಐಪಿಸಿ ನೇದರಂತೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಈ ಪ್ರಕರಣವು ತನಿಖೆಯಲ್ಲಿರುವಾಗ ದಿನಾಂಕ: 28-9-2021 ರಂದು ಘಟನಾ ಸ್ಥಳದ ಪಂಚನಾಮೆ ಕೈಗೊಂಡು ಪ್ರಕರಣದ ಆರೋಪಿತನಿಗೆ ಅರೇಅಂಗಡಿ ಸರ್ಕಲ್ ಹೊನ್ನಾವರದಲ್ಲಿ 10-30 ಗಂಟೆಗೆ ಸಿಕ್ಕವನಿಗೆ ವಶಕ್ಕೆ ಪಡೆದು ಠಾಣೆಗೆ ತಂದು 11-45 ಗಂಟೆಗೆ ವಿಚಾರಣೆಯಿಂದ ದಸ್ತಗಿರಿ ನಿಯಮ ಪಾಲಿಸಿದ್ದು, ಹಾಗೆ ಕೃತ್ಯಕ್ಕೆ ಬಳಸಿದ ಆಯುಧ ಕತ್ತಿಯನ್ನು ಹಾಗೂ ಕೃತ್ಯದ ವೇಳೆ ಧರಿಸಿದ್ದ ಬಟ್ಟೆಯನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ. ಆರೋಪಿತನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ್ದು ಇರುತ್ತದೆ. ಅದರಂತೆ ಪ್ರಕರಣದ ಗಾಯಾಳು ಶ್ರೀ ದತ್ತಾತ್ರೇಯ ತಂದೆ ಪರಮೇಶ್ವರ ಹೆಗಡೆ, ಇವರಿಗೆ ದಿನಾಂಕ: 28-9-2021 ರಂದು ಸೇಂಟ್ ಇಗ್ನೇಶಿಯಸ್ ಆಸ್ಪತ್ರೆ ಹೊನ್ನಾವರದಿಂದ ಹೆಚ್ಚಿನ ಚಿಕಿತ್ಸೆಯ ಸಲುವಾಗಿ ಮಣಿಪಾಲಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಭಟ್ಕಳ ಸಮೀಪ ಹೋದಾಗ ಗಾಯಾಳುವಿನಲ್ಲಿ ಯಾವುದೇ ಚಲನೆ ಕಂಡು ಬರದಿದ್ದಾಗ ಗಾಯಾಳುವನ್ನು ಭಟ್ಕಳದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು 19-41 ಗಂಟೆಗೆ ಪರೀಕ್ಷಿಸಿ, ಈಗಾಗಲೇ ಮೃತಪಟ್ಟ ಬಗ್ಗೆ ತಿಳಿಸಿದ್ದು, ನಮೂದಿತ ಆರೋಪಿತನು ತನ್ನ ತಂದೆಗೆ ಕತ್ತಿಯಿಂದ ಹೊಡೆದು ತೀವ್ರತರಹದ ಗಾಯನೋವು ಪಡಿಸಿ ಕೊಲೆ ಮಾಡಿರುತ್ತಾನೆ ಅಂತಾ ಪಿರ್ಯಾದಿಯು ಹೇಳಿಕೆ ನೀಡಿದ್ದು ಇರುತ್ತದೆ. ಪಿರ್ಯಾದಿಯ ಹೇಳಿಕೆಯಂತೆ ಮಾನ್ಯ ನ್ಯಾಯಾಲಯಕ್ಕೆ ಕಲಂ: 302 ಐಪಿಸಿ ನೇದನ್ನು ಅಳವಡಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲು ಅನುಮತಿ ಕೋರಿ ಅನುಮತಿ ಪಡೆದುಕೊಂಡು ಮೂಂದಿನ ತನಿಖೆ ಕೈಗೊಂಡಿದ್ದು ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 131/2021, ಕಲಂ: 8(ಸಿ), 20(ಬಿ) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಬ್ದುಲ್ ರಷೀದ್ ತಂದೆ ಹಜರತಸಾಬ್ ಶಿರಗೋಡ, ಪ್ರಾಯ-32 ವರ್ಷ, ಸಾ|| ಗಣೇಶನಗರ, ಪುರವರ್ಗ, ತಾ: ಭಟ್ಕಳ, 2]. ಮಹಮ್ಮದ್ ಇರ್ಷಾದ್ ತಂದೆ ಹಸನಸಾಬ್, ಪ್ರಾಯ-31 ವರ್ಷ, ಸಾ|| ಮನೆ ನಂ: 5, ಕೆಳದಿ ರಸ್ತೆ, ತಾ: ಸಾಗರ, ಜಿ: ಶಿವಮೊಗ್ಗ, ಹಾಲಿ ಸಾ|| ಜಾಮೀಯಾ ಮಸೀದಿ ಹತ್ತಿರ, ಗಾಂಧಿನಗರ, ಹೆಬಳೆ, ತಾ: ಭಟ್ಕಳ. ಈ ನಮೂದಿತ ಆರೋಪಿತರುಗಳು ದಿನಾಂಕ: 28-09-2021 ರಂದು 21-30 ಗಂಟೆಯ ಸಮಯಕ್ಕೆ ಭಟ್ಕಳದ ಶಹರದ ಮುಟ್ಟಳ್ಳಿ ರೈಲ್ವೇ ನಿಲ್ದಾಣದ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸುಮಾರು 20,000/- ರೂಪಾಯಿ ಬೆಲೆಯ 560 ಗ್ರಾಂ ತೂಕದ ಗಾಂಜಾವನ್ನು ಪಾಸ್ ಯಾ ಪರ್ಮಿಟ್ ಇಲ್ಲದೇ ಮಾರಾಟ ಮಾಡುವ ಉದ್ದೇಶದಿಂದ ತಾಬಾದಲ್ಲಿ ಇಟ್ಟುಕೊಂಡಿದ್ದಾಗ ಗಾಂಜಾ ಸ್ವತ್ತಿನೊಂದಿಗೆ ಪಿರ್ಯಾದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನಿತ್ಯಾನಂದ ಪಂಡಿತ್, ಪೊಲೀಸ್ ನಿರೀಕ್ಷಕರು, ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆ ಕಾರವಾರ ರವರು ದಿನಾಂಕ: 28-09-2021 ರಂದು 23-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 155/2021, ಕಲಂ: 25(1ಬಿ) ಭಾರತ ಆಯುಧ ಕಾಯ್ದೆ-1959 ನೇದ್ದರ ವಿವರ...... ನಮೂದಿತ ಆರೋಪಿತ ಭೂಪತಿ ತಂದೆ ಬಾಬಸ್ಯಾ ಸಿದ್ದಿ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೊಣಗಾರ, ತಾ: ಯಲ್ಲಾಪುರ. ಈತನು ಯಾವುದೇ ಅಧೀಕೃತ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಒಂಟಿ ನಳಿಕೆಯ ನಾಡ ಬಂದೂಕನ್ನು ತನ್ನ ತಾಬಾದಲ್ಲಿ ಇಟ್ಟುಕೊಂಡವನಿಗೆ ದಿನಾಂಕ: 28-09-2021 ರಂದು 08-10 ಗಂಟೆಗೆ ಯಲ್ಲಾಪುರ ತಾಲೂಕಿನ ದೊಣಗಾರ ಊರಿನಲ್ಲಿ ಪಿರ್ಯಾದಿ ಹಾಗೂ ಸಿಬ್ಬಂದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಕು: ಪ್ರಿಯಾಂಕಾ ನ್ಯಾಮಗೌಡ, ಪಿ.ಎಸ್.ಐ-2, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 28-09-2021 ರಂದು 10-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 28-09-2021

at 00:00 hrs to 24:00 hrs

 

ಬನವಾಸಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 16/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರವಿಕಾಂತ ತಂದೆ ಈಶ್ವರ ಗೌಡ, ಪ್ರಾಯ-22 ವರ್ಷ, ವೃತ್ತಿ-ಖಾಸಗಿ ಆಸ್ಪತ್ರೆಯಲ್ಲಿ ಕೆಲಸ, ಸಾ|| ಹುಡೇಲಕೊಪ್ಪ, ತಾ: ಶಿರಸಿ. ಈತನು ಮನೆಯಲ್ಲಿ ಒಬ್ಬನೇ ಕೆಲಸ ಮಾಡುವವನಿದ್ದು, ಮನೆಯ ಜವಾಬ್ದಾರಿ ತನ್ನ ಮೇಲಿದ್ದು, ಹೊಸದಾಗಿ ಕಟ್ಟುತ್ತಿರುವ ಮನೆಯು ಅರ್ಧ ಆಗಿದ್ದರ ಬಗ್ಗೆ ಮಾನಸಿಕವಾಗಿ ನೊಂದಿದ್ದವನು ಜೀವನದಲ್ಲಿ ಜಿಗುಪ್ಸೆ ಹೊಂದಿ, ದಿನಾಂಕ: 28-09-2021 ರಂದು ಮಧ್ಯಾಹ್ನ 03-00 ಗಂಟೆಯಿಂದ ಸಾಯಂಕಾಲ 07-30 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಅಡುಗೆ ಕೋಣೆಯ ಪಕಾಶಿಗೆ ನೈಲಾನ್ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ಉರುಳು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಇದರ ಹೊರತು ಅವನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಗೌರಿ ಕೋಂ. ಈಶ್ವರ ಗೌಡ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹುಡೇಲಕೊಪ್ಪ, ತಾ: ಶಿರಸಿ ರವರು ದಿನಾಂಕ: 28-09-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 29-09-2021 01:37 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080