ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 29-04-2021

at 00:00 hrs to 24:00 hrs

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 77/2021, ಕಲಂ: 323, 324, 341, 504, 506, 109 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಮತಿ ವಿಕ್ಟೋರಿಯಾ ಕೋಂ. ಫೆಲಿಕ್ಸ್ ಫರ್ನಾಂಡೀಸ್, ಪ್ರಾಯ-30 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಉದ್ಯಮ ನಗರ, ಯಲ್ಲಾಪುರ ಪಟ್ಟಣ, 2]. ಕು: ಡೆನಿಸ್ ಡಿಸೋಜಾ, ಪ್ರಾಯ-26 ವರ್ಷ, ಸಾ|| ಕೊಂಡೆಮನೆ, ಯಲ್ಲಾಪುರ, 3]. ಕು: ಅಂಥೋನಿ ಫರ್ನಾಂಡೀಸ್, ಪ್ರಾಯ-22 ವರ್ಷ, ಸಾ|| ವಲೀಶಾ ಗಲ್ಲಿ, ಯಲ್ಲಾಪುರ, 4]. ಶ್ರೀಮತಿ ಸಿಸಿಲಿಯಾ ಲೀಮಾ, ಪ್ರಾಯ-53 ವರ್ಷ, ಸಾ|| ಯಲ್ಲಾಪುರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವಳು ಪಿರ್ಯಾದಿಯ ಹೆಂಡತಿಯಾಗಿದ್ದು, ಸದರಿಯವಳು ಕಳೆದ ಎರಡು ವರ್ಷಗಳಿಂದ ಆರೋಪಿ 2 ಮತ್ತು 3 ನೇಯವರೊಂದಿಗೆ ಸೇರಿ ಸರಾಯಿ ಕುಡಿದು ತಡ ರಾತ್ರಿ ಮನೆಗೆ ಬರುತ್ತಿದ್ದರಿಂದ ಕಳೆದ 2 ತಿಂಗಳ ಹಿಂದೆ ಪಿರ್ಯಾದಿಯವರು ಆರೋಪಿ 2 ಮತ್ತು 3 ನೇಯವರಿಗೆ ಭೇಟಿಯಾಗಿ ‘ತನ್ನ ಹೆಂಡತಿಗೆ ಸರಾಯಿ ಕುಡಿಸಬೇಡಿ’ ಅಂತಾ ವಿನಂತಿಸಿಕೊಂಡಾಗ ಸದರಿಯವರಿಬ್ಬರೂ ಪಿರ್ಯಾದಿಗೆ ಕೋಲಿನಿಂದ ಹೊಡೆದು ‘ನಿನಗೆ ಮತ್ತು ನಿನ್ನ ಮಕ್ಕಳಿಗೆ ಸಾಯಿಸುತ್ತೇವೆ’ ಎನ್ನುವುದಾಗಿ ಕೊಲೆ ಬೆದರಿಕೆ ಹಾಕಿದ್ದಲ್ಲದೇ, ಆರೋಪಿ 1 ನೇಯವರು ಸರಾಯಿ ಕುಡಿದು ತಡರಾತ್ರಿ ಮನೆಗೆ ಬಂದು ಪಿರ್ಯಾದಿ ಮತ್ತು ಪಿರ್ಯಾದಿಯ ತಾಯಿ ಸಾಕ್ಷಿದಾರರಾದ ಶ್ರೀಮತಿ  ಜೊಕಿನಾ @ ಪ್ಲೋರಿನಾ ಕೆ. ಬ್ರಿಟೋ ರವರಿಗೆ ಅವಾಚ್ಯವಾಗಿ ಬೈಯ್ದು, ಮಾನಸಿಕವಾಗಿ ತೊಂದರೆ ಕೊಡುತ್ತಿದ್ದವಳು, ದಿನಾಂಕ: 28-04-2021 ರಂದು ರಾತ್ರಿ 10-30 ಗಂಟೆಗೆ ಪಿರ್ಯಾದಿಯ ಮನೆಯಲ್ಲಿ ಪಿರ್ಯಾದಿಗೆ ಹಾಗೂ ಸಾಕ್ಷಿದಾರ ಕು: ರೊನಾಲ್ಡ್ ದಾಸ್ ರವರ ಮೇಲೆ ಹಲ್ಲೆ ಮಾಡಿ ಸಾದಾ ಗಾಯನೋವು ಪಡಿಸಿದ್ದಲ್ಲದೇ, ಜಗಳ ಮಾಡುವುದು ಬೇಡಾ ಅಂತಾ ಪಿರ್ಯಾದಿಯು ತನ್ನ ಮನೆಯಿಂದ ಹೊರಗೆ ಹೋಗುವಾಗ ಪಿರ್ಯಾದಿಗೆ ಅಡ್ಡಗಟ್ಟಿ ತಡೆದು ‘ನಿನಗೆ ಮತ್ತು ನಿಮ್ಮ ತಾಯಿಗೆ ಕೊಲೆ ಮಾಡುತ್ತೇನೆ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಫೆಲಿಕ್ಸ್ ತಂದೆ ಸೈಮನ್ ಫರ್ನಾಂಡೀಸ್, ಪ್ರಾಯ-34 ವರ್ಷ ವೃತ್ತಿ-ಯಲ್ಲಾಪುರ ಸಮೃದ್ಧಿ ಕೋ ಆಫ್ ಸೊಸೈಟಿಯಲ್ಲಿ ಮ್ಯಾನೇಜರ್ ಕೆಲಸ, ಸಾ|| ಉದ್ಯಮ ನಗರ, ಯಲ್ಲಾಪುರ ಪಟ್ಟಣ ರವರು ದಿನಾಂಕ: 29-04-2021 ರಂದು 10-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 27/2021, ಕಲಂ: 4,12 The Karanatak Prevention of Slaughter And Preservation of Cattale Ordinance–2020 ಮತ್ತು ಕಲಂ: 51(b) The Disaster Management Act-2005 ಹಾಗೂ ಕಲಂ: 192(A) ಐ.ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಬ್ಬೀರ್ ತಂದೆ ಹುಸೇನ್ ಪಟೇಲ್, ಪ್ರಾಯ-58 ವರ್ಷ, ವೃತ್ತಿ-ಚಾಲಕ, ಸಾ|| ಕೋಗಿಲಬನ, ದಾಂಡೇಲಿ, 2]. ಸಮೀರ ತಂದೆ ಶರೀಫಸಾಬ್ ಚೌದರಿ, ಪ್ರಾಯ-40 ವರ್ಷ, ವೃತ್ತಿ-ಚಿಕನ್ ವ್ಯಾಪಾರ, ಸಾ|| ಲಮಾಣಿ ಚಾಳ, ಹಳೇ ದಾಂಡೇಲಿ, ದಾಂಡೇಲಿ. ಈ ನಮೂದಿತ ಆರೋಪಿತರು ದಿನಾಂಕ: 29-04-2021 ರಂದು ಬೆಳಿಗ್ಗೆ 07-00 ಗಂಟೆಯ ಸಮಯಕ್ಕೆ ತಮ್ಮ ತಾಬಾ ಯಾವುದೆ ಪಾಸ್ ಯಾ ಪರ್ಮಿಟ್ ಇಲ್ಲದೇ ಸುಮಾರು 02 ವರ್ಷದ ಹೋರಿಯನ್ನು ಗಾಂವಣಾಣದಿಂದ ದಾಂಡೇಲಿಗೆ ಬಲಿ ಕೊಡುವ ಉದ್ದೇಶದಿಂದ ಅಶೋಕ ಲೈಲ್ಯಾಂಡ್ ದೋಸ್ತ್ ಎಲ್‍ಎಸ್ ವಾಹನ ನಂ: ಕೆ.ಎ-22/ಸಿ-2073 ನೇದರಲ್ಲಿ ಹೋರಿಯ ಕಾಲುಗಳನ್ನು ಹಗ್ಗದಿಂದ ಕಟ್ಟಿ ವಾಹನದಲ್ಲಿ ತುಂಬಿಕೊಂಡು ಅದಕ್ಕೆ ನೀರು ಮತ್ತು ಮೇವು ಇಡದೆ ಹಿಂಸಾತ್ಮಕವಾಗಿ ಹಗ್ಗದಿಂದ ವಾಹನದ ಬಾಡಿಯ ಭಾಗಕ್ಕೆ ಕಟ್ಟಿ ಅಪಾಯಕಾರಿ ರೀತಿಯಲ್ಲಿ ವಾಹನವನ್ನು ಚಲಾಯಿಸಿಕೊಂಡು ರಾಜ್ಯ ಸರಕಾರವು ದಿನಾಂಕ: 27-04-2021 ರಂದು ರಾತ್ರಿ ಲಾಕಡೌನ್ ಆದೇಶ ಹೊರಡಿಸಿದ್ದರೂ ಸಹ ಲಾಕಡೌನ್ ಆದೇಶವನ್ನು ಉಲ್ಲಂಘಿಸಿ ಸಾಗಾಟ ಮಾಡುತ್ತಿರುವಾಗ ಗಾಂವಠಾಣಾ ಕ್ರಾಸ್ ಹತ್ತಿರ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಐ. ಆರ್. ಗಡ್ಡೇಕರ, ಪಿ.ಎಸ್.ಐ, ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 29-04-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 66/2021, ಕಲಂ: 302 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ 2 ಜನ ಅಪರಿಚಿತರಾಗಿದ್ದು, ಹೆಸರಿ ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತರು ದಿನಾಂಕ: 29-04-2021 ಸಂಜೆ 17-30 ಗಂಟೆಯ ಸುಮಾರಿಗೆ ನೀಲಿ ಬಣ್ಣದ ಮಾರುತಿ ಎಸ್ ಕ್ರಾಸ್ ಕಾರಿನಲ್ಲಿ ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆಗೆ ಚಲಾಯಿಸಿಕೊಂಡು ಬಂದು ಹರ್ಷಾ ಬಿಂದ್ರಾಳ ಇವರು ಪಿರ್ಯಾದಿಯನ್ನು ಹಿಂಬದಿಯಲ್ಲಿ ಕೂಡ್ರಿಸಿಕೊಂಡು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ವೈ-5450 ನೇದಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದು ಮೋಟಾರ್ ಸೈಕಲ್ ಮೇಲಿದ್ದವರಿಗೆ ನೆಲಕ್ಕೆ ಕಡವಿ ಇಬ್ಬರಿಗೂ ಗಾಯನೋವು ಪಡಿಸಿ, ಆರೋಪಿತರು ತಮ್ಮ ಕೈಯಲ್ಲಿದ್ದ ಕಬ್ಬಿಣದ ರಾಡ್ ಹಾಗೂ ದೊಡ್ಡ ಚಾಕುವಿನಿಂದ ಹರ್ಷಾ ಬಿಂದ್ರಾಳ ಇವರಿಗೆ ಯಾವುದೋ ಹಿಂದಿನ ದ್ವೇಷದಿಂದ ಹಲ್ಲೆ ಮಾಡಿ ಅವರ ಕೊಲೆ ಮಾಡಿರುತ್ತಾರೆ. ಈ ಕುರಿತು ಮುಂದಿನ ಕಾನೂನು ತನಿಖೆಯಾಗಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕೇಶವ ತಂದೆ ಯಲ್ಲಪ್ಪ ಪುಲಿ, ಪ್ರಾಯ-27 ವರ್ಷ, ವೃತ್ತಿ-ಸಿ.ಸಿ.ಟಿವಿ ಕೆಲಸ, ಸಾ|| ಸಪ್ತಗಿರಿ ಶಾಲೆಯ ಹತ್ತಿರ, ಕುಂದವಾಡ ರಸ್ತೆ, ದಾವಣಗೆರೆ, ಹಾಲಿ ಸಾ|| ಬೃಂದಾವನ ಲೇಔಟ್, ತಾ: ಮುಂಡಗೋಡ ರವರು ದಿನಾಂಕ: 29-04-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 29-04-2021

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಪ್ರಕಾಶ ಎಚ್. ಎಸ್. ತಂದೆ ಹನುಮಂತಪ್ಪ ಎಚ್. ಎಸ್, ಪ್ರಾಯ-38 ವರ್ಷ, ವೃತ್ತಿ-ಸೀನಿಯರ್ ಇಂಜೀನಿಯರ್, ಸಾ|| ವಿಜಯನಗರ ಬಡಾವಣೆ, ತಾ: ಹೂವಿನಹಡಗಲಿ, ಜಿ: ಬಳ್ಳಾರಿ. ಮೃತ ಈತನಿಗೆ ದಿನಾಂಕ: 28-04-2021 ರಂದು ರಾತ್ರಿ 02-00 ಗಂಟೆಗೆ ಎದೆನೋವು ಕಾಣಿಸಿಕೊಂಡಿದ್ದು, ಪಿರ್ಯಾದಿಯು ಸದ್ರಿಯವರಿಗೆ ನೋವಿನ ಸ್ಪ್ರೇ ಮಾಡಿದ್ದು, ಸ್ವಲ್ಪ ಸಮಯದ ನಂತರ ಪ್ರಕಾಶ ಎಚ್. ಎಸ್. ಇವರಿಗೆ ಎದೆನೋವು ಜಾಸ್ತಿಯಾಗಿದ್ದರಿಂದ ಪ್ರಕಾಶ ಎಚ್. ಎಸ್. ಇವರಿಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ತಂದು ಉಪಚಾರಕ್ಕೆ ದಾಖಲು ಪಡಿಸಿದಾಗ ಆತನಿಗೆ ಪರೀಕ್ಷಿಸಿದ ವೈದ್ಯರು ಮೃತಪಟ್ಟ ಬಗ್ಗೆ ತಿಳಿಸಿದ್ದು, ಮೃತನು ಎದೆನೋವಿನಿಂದಾದ ಹೃದಯಾಘಾತದಿಂದಲೋ ಅಥವಾ ಬೇರಾವುದೋ ಖಾಯಿಲೆಯಿಂದಲೋ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಟಿ. ಜಿ. ಸತ್ಯಗಣೇಶ ತಂದೆ ಟಿ. ಎ. ಗಂಗಾಧರ, ಪ್ರಾಯ-27 ವರ್ಷ, ವೃತ್ತಿ-ಕೆ.ವಿ.ಆರ್ ಕನಸ್ಟ್ರಕ್ಷನ್ ಕಂಪನಿಯ ಇಂಜೀನಿಯರ್, ಸಾ|| ಡಿ.ಪಿ ಕಾಲೋನಿ, ತಾ: ಭಟ್ಕಳ, ಹಾಲಿ ಸಾ|| ಸುಭದ್ರಾ ಹೊಟೇಲ್, ರೂಮ್ ನಂ: 336, ಕುರ್ನಿಪೇಟ್, ಮಲ್ಲಾಪುರ, ಕಾರವಾರ ರವರು ದಿನಾಂಕ: 29-04-2021 ರಂದು 09-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಕುಮಾರ: ನಾರಾಯಣ ತಂದೆ ಮಲ್ಲೇಶಿ ಪಿಂಪಳಕರ, ಪ್ರಾಯ-10 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಗುಂಡೋಳ್ಳಿ ಗ್ರಾಮ, ತಾ: ಹಳಿಯಾಳ. ಪಿರ್ಯಾದಿಯ ಮಗನಾದ ಈತನು ದಿನಾಂಕ: 29-04-2021 ರಂದು ಮಧ್ಯಾಹ್ನ 01-00 ಗಂಟೆಯಿಂದ 02-30 ಗಂಟೆಯ ನಡುವಿನ ಅವಧಿಯಲ್ಲಿ ಗುಂಡೋಳ್ಳಿ ಗ್ರಾಮದ ಸುರೇಶ ಮಡಿವಾಳ ಇವರ ಜಮೀನಿನಲ್ಲಿನ ಗೇರು ಬೀಜವನ್ನು ಕೀಳಲು ಹೋದವನು, ಗಾಳಿಗೆ ಗೇರು ಗಿಡದ ಟೊಂಗೆಯೂ ಪಕ್ಕದಲ್ಲಿ ಹಾಯ್ದು ಹೋದ ವಿದ್ಯುತ್ ತಂತಿಯ ಮೇಲೆ ಬಿದ್ದು, ಅದೇ ಗಿಡದಲ್ಲಿದ್ದ ನಾರಾಯಣನ ಕೈಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಾಗಿ ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆ. ಇದರ ಹೊರತು ಮೃತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಲ್ಲೇಶಿ ತಂದೆ ಮಾರುತಿ ಪಿಂಪಳಕರ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗುಂಡೋಳ್ಳಿ ಗ್ರಾಮ, ತಾ: ಹಳಿಯಾಳ ರವರು ದಿನಾಂಕ: 29-04-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 30-04-2021 11:48 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080