ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 29-08-2021

at 00:00 hrs to 24:00 hrs

 

ಮಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್- 1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಂಜುನಾಥ ತಂದೆ ಮಧು ಪಾಗಿ ಪ್ರಾಯ-37 ವರ್ಷ, ವೃತ್ತಿ-ಮೀನುಗಾರಿಕೆ ಸಾ|| ನೈತಿಸಾವರ, ಪಾಗಿವಾಡ, ಕಾರವಾರ, 2]. ಉಲ್ಲಾಸ ತಂದೆ ಆನಂದ ಬಾಂದೇಕರ, ಪ್ರಾಯ-50 ವರ್ಷ, ಕೂಲಿ ಕೆಲಸ, ಸಾ|| ನೈತಿಸಾವರ, ದೇವಳಮಕ್ಕಿ, ಕಾರವಾರ, 3]. ರವಿಕಾಂತ ತಂದೆ ವಿನಾಯಕ ಪಾಗಿ, ಪ್ರಾಯ-28 ವರ್ಷ, ಸಾ|| ನೈತಿಸಾವರ, ದೇವಳಮಕ್ಕಿ, ಕಾರವಾರ, 4]. ಸಂತೋಷ ತಂದೆ ನಾರಾಯಣ ಗೌಡ, ಪ್ರಾಯ-41 ವರ್ಷ, ವೃತ್ತಿ-ಚಾಲಕ, ಸಾ|| ನೈತಿಸಾವರ ದೇವಳಮಕ್ಕಿ, ಕಾರವಾರ. ಈ ನಮೂದಿತ ಆರೋಪಿತರು ದಿನಾಂಕ: 29-08-2021 ರಂದು 17-20 ಗಂಟೆಗೆ ನೈತಿಸಾವರ ನಾರಾಯಣ ಪ್ರೌಢ ಶಾಲೆಯ ಹಿಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕುಳಿತು ಮದ್ಯದಲ್ಲಿ ಒಂದು ಪಾಲಿಥಿನ್ ಚೀಲವನ್ನು ಹಾಸಿ, ತಮ್ಮ ತಮ್ಮ ಲಾಭಕ್ಕೋಸ್ಕರ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳ ಮೇಲೆ ಅಂದರ್-ಬಾಹರ್ ಜುಗಾರಾಟ ಆಡುತ್ತಿದ್ದಾಗ ನಗದು ಹಣ 1,060/- ರೂಪಾಯಿ ಹಾಗೂ ಇಸ್ಪೀಟ್ ಜುಗಾರಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಹಾಗೂ ಪಾಲಿಥಿನ್ ಚೀಲದ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪ ಗುಡಿ, ಪಿ.ಎಸ್.ಐ, ಮಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 29-08-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 154/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮೋಹನ ವಿ. ಪಟಗಾರ, ಸಾ|| ಬಾಡ, ತಾ: ಕುಮಟಾ (ಲಗೇಜ್ ಗೂಡ್ಸ್ ರಿಕ್ಷಾ ನಂ: ಕೆ.ಎ-47/0050 ನೇದರ ಚಾಲಕ). ಈತನು ದಿನಾಂಕ: 29-08-2021 ರಂದು-13-30 ಗಂಟೆಗೆ ಕುಮಟ–ಅಘನಾಶಿನಿ ಡಾಂಬರ್ ರಸ್ತೆಯ ಮೇಲೆ ತಾನು ಚಲಾಯಿಸುತ್ತಿದ್ದ ಲಗೇಜ್ ಗೂಡ್ಸ್ ರಿಕ್ಷಾ ನಂ: ಕೆ.ಎ-47/0050 ನೇದನ್ನು ಕುಮಟಾ ಕಡೆಯಿಂದ ಅಘನಾಶಿನಿ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು ಕುಮಟಾದ ಹೊಲನಗದ್ದೆ ಬಸ್ ಸ್ಟಾಪ್ ಹತ್ತಿರ ತಾನು ಚಲಾಯಿಸುತ್ತಿದ್ದ ಲಗೇಜ್ ಗೂಡ್ಸ್ ರಿಕ್ಷಾವನ್ನು ನಿಷ್ಕಾಳಜಿತನದಿಂದ ಬಲಕ್ಕೆ ಚಲಾಯಿಸಿ, ತನ್ನ ಮುಂದಿನಿಂದ ಅಂದರೆ ಅಘನಾಶಿನಿ ಕಡೆಯಿಂದ ಕುಮಟಾ ಕಡೆಗೆ ಪಿರ್ಯಾದಿಯ ತಮ್ಮ ಶ್ರೀ ಜೀವನ ತಂದೆ ಗಂಗಾಧರ ನಾಯ್ಕ, ಈತನು ಚಲಾಯಿಸುತ್ತಿದ್ದ ಸ್ಕೂಟರ್ ನಂ: ಕೆ.ಎ-47/ಯು-9383 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ವಾಹನ ಜಖಂ ಆಗಲು ಕಾರಣವಾಗಿರುವುದಲ್ಲದೇ, ಸ್ಕೂಟರ್ ಸವಾರ ಶ್ರೀ ಜೀವನ ತಂದೆ ಗಂಗಾಧರ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಆರ್ಮಿಯಲ್ಲಿ ಕೆಲಸ, ಸಾ|| ಅಘನಾಶಿನಿ, ತಾ: ಕುಮಟಾ ಈತನಿಗೆ ಬಲಗಾಲ ಮೊಣಗಂಟಿನ ಹತ್ತಿರ ತೆರಚಿದ ಗಾಯ ಪಡಿಸಿದ್ದು ಹಾಗೂ ಬಲಗೈ ಮಣಿಕಟ್ಟಿನ ಹತ್ತಿರ ಮೂಳೆ ಮುರಿದು ತೀವೃ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಲಂಬೋದರ ತಂದೆ ಗಂಗಾಧರ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಅಘನಾಶಿನಿ, ತಾ: ಕುಮಟಾ ರವರು ದಿನಾಂಕ: 29-08-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 229/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಯ್ಯಪ್ಪ ರೆಡ್ಡಿ ತಂದೆ ರಾಮಕೃಷ್ಣಯ್ಯ ಬಂಡಾರು, ಪ್ರಾಯ-27 ವರ್ಷ, ವೃತ್ತಿ-ಸಾಫ್ಟವೇರ್ ಇಂಜೀನಿಯರ್, ಸಾ|| ಕೊಂಡಾ ರೆಡ್ಡಿ ಸ್ಟ್ರೀಟ್, ರಾಯಚೋಟಿ, ಕಡಪಾ, ಆಂಧ್ರಪ್ರದೇಶ (ಕಾರ್ ನಂ: ಕೆ.ಎ-51/ಎ.ಸಿ-6509 ನೇದರ ಚಾಲಕ). ಈತನು ದಿನಾಂಕ: 29-08-2021 ರಂದು ರಾತ್ರಿ 22-00 ಗಂಟೆಯ ಸುಮಾರಿಗೆ ತನ್ನ ಕಾರ್ ನಂ: ಕೆ.ಎ-51/ಎ.ಸಿ-6509 ನೇದರಲ್ಲಿ ಪಿರ್ಯಾದಿ ಹಾಗೂ ಪಿರ್ಯಾದಿಯ ಮಕ್ಕಳಾದ ಕಾವ್ಯ ತಂದೆ ಸುಬ್ರಮಣ್ಯಂ ಕೊವುರು, ಪ್ರಾಯ-26 ವರ್ಷ, ವೃತ್ತಿ-ಸಾಫ್ಟವೇರ್ ಇಂಜೀನಿಯರ್, ಸಾ|| ಕೋಟಾ, ನೆಲ್ಲೂರ, ಆಂಧ್ರಪ್ರದೇಶ, ಹಾಲಿ ಸಾ|| ಭಟ್ಟರ ಹಳ್ಳಿ, ಟಿನ್ ಫ್ಯಾಕ್ಟರಿ ಹತ್ತಿರ, ಬೆಂಗಳೂರು, ದಿವ್ಯಾ ತಂದೆ ಸುಬ್ರಮಣ್ಯಂ ಕೊವುರು, ಪ್ರಾಯ-24 ವರ್ಷ, ವೃತ್ತಿ-ಸಾಫ್ಟವೇರ್ ಇಂಜೀನಿಯರ್, ಸಾ|| ಕೋಟಾ, ನೆಲ್ಲೂರ, ಆಂಧ್ರಪ್ರದೇಶ, ಹಾಲಿ ಸಾ|| ಭಟ್ಟರ ಹಳ್ಳಿ, ಟಿನ್ ಫ್ಯಾಕ್ಟರಿ ಹತ್ತಿರ, ಬೆಂಗಳೂರು ಹಾಗೂ ಪಿರ್ಯಾದಿಯ ಸಂಬಂಧಿಯಾದ ಸಿ. ಪುಷ್ಪಾ ತಂದೆ ಮಧುಸೂದನ ರಾವ್, ಪ್ರಾಯ-60 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕೋಟಾ, ನೆಲ್ಲೂರ, ಆಂಧ್ರಪ್ರದೇಶ, ಇವರಿಗೆ ಕೂಡ್ರಿಸಿಕೊಂಡು ತನ್ನ ಕಾರನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ರ ರಸ್ತೆಯಲ್ಲಿ ಸಾಗರ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಕಾರನ್ನು ಪಲ್ಟಿ ಕೆಡವಿ ಅಪಘಾತ ಪಡಿಸಿ, ಕಾರಿನಲ್ಲಿದ್ದ ಪಿರ್ಯಾದಿಗೆ ಬಲಗಾಲಿನ ಪಾದಕ್ಕೆ ಗಾಯ ಪಡಿಸಿ, ಗಾಯಾಳುಗಳಾದ ಪಿರ್ಯಾದಿಯ ಮಕ್ಕಳಾದ ಕಾವ್ಯ ತಂದೆ ಸುಬ್ರಮಣ್ಯಂ ಕೊವುರು ಇವಳಿಗೆ ಬೆನ್ನಿಗೆ ಪೆಟ್ಟನ್ನುಂಟು ಪಡಿಸಿದ್ದಲ್ಲದೇ, ದಿವ್ಯಾ ತಂದೆ ಸುಬ್ರಮಣ್ಯಂ ಕೊವುರು ಇವಳಿಗೆ ಎಡ ಹಾಗೂ ಬಲ ಭುಜಕ್ಕೆ ಪೆಟ್ಟನ್ನುಂಟು ಪಡಿಸಿ, ಪಿರ್ಯಾದಿಯ ಸಂಬಂಧಿಯಾದ ಸಿ. ಪುಷ್ಪಾ ತಂದೆ ಮಧುಸೂದನ ರಾವ್ ಇವರಿಗೆ ಬೆನ್ನಿಗೆ ಪೆಟ್ಟನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಮಣ್ಯಂ ತಂದೆ ಕೃಷ್ಣಯ್ಯ ಕೊವುರು, ಪ್ರಾಯ-54 ವರ್ಷ, ವೃತ್ತಿ-ಟೇಲರ್, ಸಾ|| ಕೋಟಾ, ನೆಲ್ಲೂರ, ಆಂಧ್ರಪ್ರದೇಶ, ಹಾಲಿ ಸಾ|| ಭಟ್ಟರ ಹಳ್ಳಿ, ಟಿನ್ ಫ್ಯಾಕ್ಟರಿ ಹತ್ತಿರ, ಬೆಂಗಳೂರು ರವರು ದಿನಾಂಕ: 29-08-2021 ರಂದು 01-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 230/2021, ಕಲಂ: 279, 427 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಜೇಂದ್ರ ಸಿಂಗ್ ತಂದೆ ತೇಜ್ ಸಿಂಗ್, ಪ್ರಾಯ-45 ವರ್ಷ, ವೃತ್ತಿ-ಚಾಲಕ, ಸಾ|| ಮಹೇಪಾ ಜಾಗೀರ್, ಸಿಕಂದರಾಬಾದ್, ಬುಲಂದಶಹರ, ಉತ್ತರ ಪ್ರದೇಶ (ಲಾರಿ ನಂ: ಯು.ಕೆ-08/ಸಿ.ಬಿ-0448 ನೇದರ ಚಾಲಕ). ಈತನು ದಿನಾಂಕ: 29-08-2021 ರಂದು ಬೆಳಿಗ್ಗೆ 08-30 ಗಂಟೆಯ ಸುಮಾರಿಗೆ ತನ್ನ ಲಾರಿ ನಂ: ಯು.ಕೆ-08/ಸಿ.ಬಿ-0448 ನೇದನ್ನು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದವನು ನಿಷ್ಕಾಳಜಿತನದಿಂದ ಲಾರಿಯನ್ನು ರಸ್ತೆಯ ಬಲಕ್ಕೆ ಚಲಾಯಿಸಿ, ಶಾರದಾ ನರ್ಸಿಂಗ್ ಹೋಮ್ ಹತ್ತಿರ ಮಠದಕೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಪಕ್ಕದಲ್ಲಿರುವ ಪಿರ್ಯಾದಿಯ ಬಾಬ್ತು ಕಿರಾಣಿ ಅಂಗಡಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಬಾಬ್ತು ಕಿರಾಣಿ ಅಂಗಡಿಯ ಗೋಡೆ ಜಖಂ ಪಡಿಸಿ, ಅಂಗಡಿಯಲ್ಲಿದ್ದ ಕಿರಾಣಿ ಸಾಮಾನುಗಳು ಕೆಳಗೆ ಬಿದ್ದು ಹಾಳಾಗಿ, ಕರೆಂಟ್ ವೈರಿಂಗ್ ಜಖಂ ಪಡಿಸಿ, ಪಿರ್ಯಾದಿಯವರಿಗೆ ಅಂದಾಜು ಸುಮಾರು ಒಂದೂವರೆ ಲಕ್ಷ ರೂಪಾಯಿ ಲುಕ್ಸಾನ್ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ದಿನಕರ ತಂದೆ ಬಾಬುರಾಯ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ವ್ಯಾಪಾರ, ಸಾ|| ತೊಪ್ಪಲಕೇರಿ, ಕರ್ಕಿ, ತಾ: ಹೊನ್ನಾವರ ರವರು ದಿನಾಂಕ: 29-08-2021 ರಂದು 13-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 231/2021, ಕಲಂ: 4, 7, 12 THE KARNATAKA PREVENTION OF COW SLAUGHTER AND PRESERVATION OF CATTLE ORDINANCE-2020 ಮತ್ತು ಕಲಂ: 184 ಐ.ಎಮ್.ವಿ ಎಕ್ಟ್-1988 ಸಹಿತ ಕಲಂ: 34 ಐ.ಪಿ.ಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮೌಲಾಲಿ ತಂದೆ ಬಾಷಾಸಾಬ್ ತೋಟದ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ಕರಗುದ್ರಗಿ, ತಾ: ಹಾನಗಲ್, ಜಿ: ಹಾವೇರಿ, 2]. ಮಂಜುನಾಥ ತಂದೆ ಲಕ್ಷ್ಮಣ ಓಲೇಕಾರ, ಪ್ರಾಯ-25 ವರ್ಷ, ವೃತ್ತಿ-ಟೈಲ್ಸ್ ಕೆಲಸ, ಸಾ|| ಕರಗುದ್ರಗಿ, ತಾ: ಹಾನಗಲ್, ಜಿ: ಹಾವೇರಿ. ಈ ನಮೂದಿತ ಆರೋಪಿತರು ಸುಮಾರು 17,000/- ರೂಪಾಯಿ ಮೌಲ್ಯದ ಸುಮಾರು 170 ಕೆ.ಜಿ ಆಗುವಷ್ಟು ದನದ ಮಾಂಸವನ್ನು ಮಾರುತಿ ಸ್ವಿಫ್ಟ್ ಡಿಸೈರ್ ಕಂಪನಿಯ ಬಿಳಿ ಬಣ್ಣದ ಕಾರ್ ನಂ: ಕೆ.ಎ-02/ಎ.ಜಿ-9586 ನೇದರಲ್ಲಿ ತುಂಬಿ ಮಾರಾಟ ಮಾಡುವ ಉದ್ದೇಶದಿಂದ ಸಕ್ಷಮ ಪ್ರಾಧಿಕಾರದಿಂದ ಸಾಗಾಟ ಮಾಡಲು ಪರವಾನಿಗೆ ಪಡೆಯದೇ ವಾಹನದಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದಾಗ ದಿನಾಂಕ: 29-08-2021 ರಂದು ಸಾಯಂಕಾಲ 18-30 ಸಮಯಕ್ಕೆ ವಾಹನ ಹಾಗೂ ದನದ ಮಾಂಸ ಸಮೇತ ಹೊನ್ನಾವರ ಶಹರದ ಗೇರುಸೊಪ್ಪಾ ಸರ್ಕಲ್ ಹತ್ತಿರ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಉದಯ ನಾಯಕ, ಪಿ.ಎಸ್.ಐ (ತನಿಖೆ-1), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 29-08-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 53/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಡಿವಾಳಪ್ಪಾ ತಂದೆ ಹನುಮಂತಪ್ಪಾ ವಣ್ಣೂರ, ಪ್ರಾಯ-45 ವರ್ಷ, ಸಾ|| ಬಡಸೆ ಕೆ.ಎಚ್, ತಾ: ಖಾನಾಪುರ, ಜಿ: ಬೆಳಗಾವಿ (ಕಾರ್ ನಂ: ಕೆ.ಎ-22/ಸಿ-5529 ನೇದರ ಚಾಲಕ). ಈತನು ದಿನಾಂಕ: 29-08-2021 ರಂದು 12-30 ಗಂಟೆಗೆ ಜೋಯಿಡಾ ತಾಲೂಕಿನ ಪೊಟೋಳಿ ಸರ್ಕಲ್ ಫಾರೆಸ್ಟ್ ಚೆಕಪೋಸ್ಟ್ ನಿಂದ ಉಳವಿಗೆ ಕಡೆಗೆ ಸುಮಾರು 3 ಕಿ.ಮೀ ದೂರುದಲ್ಲಿ ತಿರುವಿನಿಂದ ಕೂಡಿದ ಡಾಂಬರ್ ರಸ್ತೆಯ ಮೇಲೆ ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-22/ಸಿ-5529 ನೇದನ್ನು ಉಳವಿ ಕಡೆಯಿಂದ ದಾಂಡೇಲಿ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ, ಮಾನವಿಯ ಪ್ರಾಣಕ್ಕೆ ಅಪಾಯಕಾರಿಯಾಗುವಂತೆ ಚಲಾಯಿಸಿಕೊಂಡು ಬಂದು, ಎದುರಿನಿಂದ ಅಂದರೆ ದಾಂಡೇಲಿ ಕಡೆಯಿಂದ ಉಳವಿಗೆ ಕಡೆಗೆ ಹೋಗುತ್ತಿದ್ದ ಕಾರ್ ನಂ: ಕೆ.ಎ-63/ಎಮ್-9191 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದು, ಅಪಘಾತ ಪಡಿಸಿ, ತನ್ನ ಕಾರಿನಲ್ಲಿದ್ದ ಜಗದೀಶ ತಂದೆ ನೀಲಕಂಠ ಕಡಕೋಳ, ಇವರಿಗೆ ಹಣೆ, ಮೂಗಿಗೆ ತೆರಚಿದ ರಕ್ತಗಾಯ, ಎದೆಗೆ ಹಾಗೂ ಎಡಗಣ್ಣಿಗೆ ಒಳಗಾಯ, ಮಹಾಂತೇಶ ತಂದೆ ಶಿವಲಿಂಗ ಹಂಜಿ, ಇವರಿಗೆ ಎಡಬದಿಯ ಹಣೆಗೆ ಹಾಗೂ ತಲೆಗೆ ಭಾರೀ ಸ್ವರೂಪದ ರಕ್ತಗಾಯ. ಎಡಗಾಲು ಮೊಣಕಾಲ ಕೆಳಗೆ ಫ್ರ್ಯಾಕ್ಚರ್ ಪಡಿಸಿ, ಕಾರ್ ನಂ: ಕೆ.ಎ-63/ಎಮ್-9191 ನೇದರಲ್ಲಿದ್ದ ಪ್ರಯಾಣಿಕರಾದ ಬಸವರಾಜ ತಂದೆ ಮಲ್ಲಪ್ಪಾ ಕೊಪ್ಪದ ರವರಿಗೆ ಬಾಯಿಗೆ ಸಾದಾ ಸ್ವರೂಪದ ಒಳಗಾಯ, ಬಸವರಾಜ ತಂದೆ ತೀರಕಪ್ಪಾ ಬಾಳಿಕಾಯಿ ರವರಿಗೆ ಎಡಭುಜಕ್ಕೆ ಒಳ ಗಾಯನೋವು ಹಾಗೂ ಶಿವಪ್ಪಾ ತಂದೆ ಶಂಕ್ರೆಪ್ಪಾ ಗಂಗಾಯಿ ರವರಿಗೆ ಹಣೆಗೆ ರಕ್ತಗಾಯ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಬಸವರಾಜ ತಂದೆ ಮಲ್ಲಪ್ಪಾ ಕೊಪ್ಪದ, ಪ್ರಾಯ-57 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಶಿವಾಜಿನಗರ ಕಿಲ್ಲಾ, ತಾ: ಕುಂದಗೋಳ, ಜಿ: ಧಾರವಾಡ ರವರು ದಿನಾಂಕ: 29-08-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 105/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಚಂದನ್ ತಂದೆ ಈರಪ್ಪಾ ಸ್ವಾಮಿ, ಪ್ರಾಯ-20 ವರ್ಷ, ಸಾ|| ಜಂಬೂರ ಮನೆ, ತಾ: ಸಾಗರ, ಜಿ: ಶಿವಮೊಗ್ಗ (ಮೋಟಾರ್ ಸೈಕಲ್ ನಂ; ಕೆ.ಎ-15/ಎಂ-3959 ನೇದರ ಸವಾರ). ಈತನು ದಿನಾಂಕ: 29-08-2021 ರಂದು 15-30 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ; ಕೆ.ಎ-15/ಡಿ-4104 ನೇದರ ಹಿಂದಿನ ಸೀಟಿನಲ್ಲಿ ಜಗದೀಶ ತಂದೆ ತಿಕ್ಕಪ್ಪಾ ಎಂಬಾತನಿಗೆ ಕೂಡ್ರಿಸಿಕೊಂಡು ಜೋಗ ಕಡೆಯಿಂದ ಸಾಗರ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಾ ಸಿದ್ದಾಪುರ ತಾಲೂಕಿನ ಮುಸವಳ್ಳಿ ಕ್ರಾಸ್ ಹತ್ತಿರ ರಸ್ತೆಯ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಕಾರ್ ನಂ: ಕೆ.ಎ-15/ಎಂ-3959 ನೇದಕ್ಕೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಆರೋಪಿ ಮೋಟಾರ್ ಸೈಕಲ್ ಸವಾರನು ತನ್ನ ತಲೆಗೆ ಹಾಗೂ ಕೈ ಕಾಲುಗಳಿಗೆ ಮತ್ತು ಮೋಟಾರ್ ಸೈಕಲ್ ಹಿಂದಿನ ಸವಾರನಾದ ಜಗದೀಶನಿಗೆ ಕಾಲುಗಳಿಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಜಯಂತ ತಂದೆ ದ್ಯಾವಾ ಗೌಡ, ಪ್ರಾಯ-40 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಮುಸವಳ್ಳಿ ಕ್ರಾಸ್, ತಾ: ಸಿದ್ದಾಪುರ ರವರು ದಿನಾಂಕ: 29-08-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 106/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಭೈರಪ್ಪ ತಂದೆ ಮಂಜಾ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಟೇಲರಿಂಗ್ ಕೆಲಸ, ಸಾ|| ಹಸ್ವಂತೆ, ತಾ: ಸಿದ್ದಾಪುರ. ಈತನು ದಿನಾಂಕ: 28-08-2021 ರಂದು 18-45 ಗಂಟೆಗೆ ಸಿದ್ದಾಪುರ ತಾಲೂಕಿನ ಹಸ್ವಂತೆಯಲ್ಲಿರುವ ತನ್ನ ಕಿರಾಣಿ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 06 ಟೆಟ್ರಾ ಪ್ಯಾಕೆಟ್ ಗಳು, 2). 02 ಪ್ಲಾಸ್ಟಿಕ್ ಗ್ಲಾಸುಗಳು. 3). Original Choice Deluxe Whisky 90 ML ಅಂತಾ ಬರೆದ 02 ಮದ್ಯದ ಕಾಲಿ ಟೆಟ್ರಾ ಪ್ಯಾಕೆಟ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 29-08-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 107/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುರೇಶ ಗಣಪತಿ ಕೊಂಡ್ಲಿ, ಪ್ರಾಯ-36 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಕೊಂಡ್ಲಿ, ತಾ: ಸಿದ್ದಾಪುರ, 2]. ಗಿರೀಶ ಸುಬ್ರಾಯ ಅಂಬಿಗ, ಪ್ರಾಯ-34 ವರ್ಷ, ವೃತ್ತಿ-ಕೂಲಿ ಕೆಲಸ, ಗಂಗಾಮಾತಾ ಗಲ್ಲಿ, ತಾ: ಸಿದ್ದಾಪುರ, 3]. ಶೇಖರ ಶಿವಾ ಅಂಬಿಗ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಂಗಾಮಾತಾ ಗಲ್ಲಿ, ತಾ: ಸಿದ್ದಾಪುರ, 4]. ಮಾರುತಿ ಹನುಮಂತ ಅಂಬಿಗ, ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಐ.ಬಿ ಹತ್ತಿರ, ತಾ: ಸಿದ್ದಾಪುರ, 5]. ಅಭಿಷೇಕ ಸದಾನಂದ ಬಂಡಿಗಡ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ ಸಾ|| ಲಕ್ಷ್ಮೀ ನಗರ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ದಿನಾಂಕ: 29-08-2021 ರಂದು 17-45 ಗಂಟೆಗೆ ಸಿದ್ದಾಪುರ ಶಹರದ ಸಾಗರ ರಸ್ತೆಯ ಅಂಚಿನಲ್ಲಿರುವ ಸಾಗರ ಹೊಟೇಲ್ ಹಿಂದಿರುವ ಸಾರ್ವಜನಿಕ ಸ್ಥಳದಲ್ಲಿ ಅಂದರ-ಬಾಹರ್ ಇಸ್ಪೀಟ್ ಜುಗಾರಾಟ ಆಡುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸೇರಿ ದಾಳಿ ಮಾಡಿದಾಗ ಆರೋಪಿತರು 1). ನಗದು ಹಣ 1,820/- ರೂಪಾಯಿ, 2). 52 ಇಸ್ಪೀಟ್ ಎಲೆಗಳು, 3). ಮಂಡಕ್ಕೆ ಹಾಸಿದ್ದ ಒಂದು ಪ್ಲಾಸ್ಟಿಕ್ ಚೀಲ, ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕುಮಾರ ಕೆ, ಪೊಲೀಸ್ ನಿರೀಕ್ಷಕರು, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 29-08-2021 ರಂದು 21-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 29-08-2021

at 00:00 hrs to 24:00 hrs

 

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 19/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿಯು ಸುಮಾರು 40 ರಿಂದ 45 ವರ್ಷದ ಅಪರಿಚಿತ ಗಂಡಸ್ಸಾಗಿದ್ದು, ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ಕಳೆದ 02-03 ದಿನಗಳ ಹಿಂದೆ ಎಲ್ಲಿಯೋ ಸಮುದ್ರದಲ್ಲಿ ಅಥವಾ ಗಂಗಾವಳಿ ನದಿಯಲ್ಲಿ ಬಿದ್ದು ಮುಳುಗಿ ಮೃತಪಟ್ಟು ದಿನಾಂಕ: 29-08-2021 ರಂದು ಬೆಳಿಗ್ಗೆ 08-00 ಗಂಟೆಯ ಸುಮಾರಿಗೆ ಗಂಗೆಕೊಳ್ಳ ಜಟ್ಟಿಯ ಸಮೀಪ ಸಮುದ್ರ ಮತ್ತು ಗಂಗಾವಳಿ ನದಿ ಸೇರುವ ಸಂಗಮ ತೀರದ ದಡದಲ್ಲಿ ಶವವಾಗಿ ಸಿಕ್ಕಿರುತ್ತಾನೆ. ಈ ಕುರಿತು ಮುಂದಿನ ಕ್ರಮ ಕಾನೂನು ಕ್ರಮ ಕೈಗೊಳ್ಳಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ಸುರೇಶ ತಾಂಡೇಲ, ಪ್ರಾಯ-35 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಗಂಗೆಕೊಳ್ಳ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 29-08-2021 ರಂದು 09-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 14/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಾದೇವ ತಂದೆ ಸಣ್ಣಮಂಜು ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ಹಮಾಲಿ ಕೆಲಸ, ಸಾ|| ಹರಕಲಿ, ಶಿರಾಲಿ-2, ತಾ: ಭಟ್ಕಳ. ಈತನು ಕಳೆದ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಈ ಬಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವನು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 29-08-2021 ರಂದು ಮಧ್ಯಾಹ್ನ 14-30 ಗಂಟೆಯಿಂದ 15-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಮನೆಯ ಹಾಲ್ ನ ಆರ್.ಸಿ.ಸಿ ಕಬ್ಬಿಣದ ಹುಕ್ಕಿಗೆ ಪ್ಲಾಸ್ಟಿಕ್ ಹಗ್ಗ ಕಟ್ಟಿ ಅದೇ ಹಗ್ಗವನ್ನು ಉರುಳು ಮಾಡಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಇದರ ಹೊರತು ಅವನ ಮರಣದಲ್ಲಿ ಬೇರೆ ಏನು ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಣೇಶ ತಂದೆ ಮಾದೇವ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಶಿಕ್ಷಕ, ಸಾ|| ಹರಕಲಿ, ಶಿರಾಲಿ-2, ತಾ: ಭಟ್ಕಳ ರವರು ದಿನಾಂಕ: 29-08-2021 ರಂದು 16-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮಹೇಶ ತಂದೆ ಮನೋಹರ ಭೋವಿ, ಪ್ರಾಯ-37 ವರ್ಷ, ವೃತ್ತಿ-ಡಬ್ಲ್ಯೂ.ಸಿ.ಪಿ.ಎಮ್ ನೌಕರ, ಸಾ|| ಆಶ್ರಯ ಕಾಲೋನಿ, ಗಾಂಧಿನಗರ, ದಾಂಡೇಲಿ. ಪಿರ್ಯಾದಿಯ ತಮ್ಮನಾದ ಈತನು ದಿನಾಂಕ: 29-08-2021 ರಂದು ಸಾಯಂಕಾಲ 05-30 ಗಂಟೆಯ ಸುಮಾರಿಗೆ ಚಹಾ ಕುಡಿಯುತ್ತಾ ಮನೆಯ ಕಟ್ಟೆಯ ಮೇಲೆ ಕಾಲು ಇಡಲು ಹೋಗಿ ಆಕಸ್ಮಾತ್ ಆಗಿ ಕಾಲು ಜಾರಿ ನೆಲಕ್ಕೆ ಬಿದ್ದವನಿಗೆ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದು, ಇದರ ಹೊರತು ಮೃತನ ಸಾವಿನಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಬಾಲಚಂದ್ರ ತಂದೆ ಮನೋಹರ ಭೋವಿ, ಪ್ರಾಯ-38 ವರ್ಷ, ವೃತ್ತಿ-ಡಬ್ಲ್ಯೂ.ಸಿ.ಪಿ.ಎಮ್ ನೌಕರ, ಸಾ|| ಆಶ್ರಯ ಕಾಲೋನಿ, ಗಾಂಧಿನಗರ, ದಾಂಡೇಲಿ ರವರು ದಿನಾಂಕ: 29-08-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ಇತ್ತೀಚಿನ ನವೀಕರಣ​ : 31-08-2021 12:43 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080