ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 29-12-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 111/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹಾಂತೇಶ ಯಲ್ಲಪ್ಪ ಬಾವಿಕಟ್ಟಿ, ಪ್ರಾಯ-37 ವರ್ಷ, ವೃತ್ತಿ-ವ್ಯಾಪಾರ, ಸಾ|| ಹುನಗುಂದ, ಬಾಗಲಕೋಟೆ, ಹಾಲಿ ಸಾ|| ಕುಟಿನ್ಹೋ ರಸ್ತೆ, ಕಾರವಾರ, 2]. ವಿನಾಯಕ ಹರಿಕಂತ್ರ @ ಕಿಂಗ್, ಸಾ|| ಸದಾಶಿವಗಡ, ಕಾರವಾರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 29-12-2021 ರಂದು ಸಾಯಂಕಾಲ 18-30 ಘಂಟೆಗೆ ತನ್ನ ಲಾಭದ ಸಲುವಾಗಿ ಕಾರವಾರ ಕುಟಿನ್ಹೋ ರಸ್ತೆಯ ತುಳಸಿದಾಸ ಹೋಟೆಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವ ಷರತ್ತಿನ ಮೇಲೆ ಓ.ಸಿ ಮಟಕಾ ಜೂಜಾಟದ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಓ.ಸಿ ಚೀಟಿ ಬರೆದುಕೊಟ್ಟು ಓ.ಸಿ ಮಟಕಾ ಜೂಜಾಟ ನಡೆಸುತ್ತಿರುವಾಗ ದಾಳಿಯ ಕಾಲ ಅಂಕೆ-ಸಂಖ್ಯೆ ಬರೆದ ಕಾಗದ, ಬಾಲ್ ಪೆನ್ ಮತ್ತು ನಗದು ಹಣ 5,780/- ರೂಪಾಯಿಯೊಂದಿಗೆ ಸಿಕ್ಕಿದ್ದು, ಮತ್ತು ಓ.ಸಿ ಮಟಕಾ ಜೂಜಾಟದಿಂದ ಸಂಪಾದಿಸಿದ ಹಣವನ್ನು ಆರೋಪಿ 2 ನೇಯವನಿಗೆ ಕೊಡುತ್ತಿದ್ದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸಿದ್ದಪ್ಪಾ ಎಸ್. ಬೀಳಗಿ, ಪೊಲೀಸ್ ನಿರೀಕ್ಷಕರು, ಕಾರವಾರ ಶಹರ ಪೊಲೀಸ್ ಠಾಣೆ ರವರು ದಿನಾಂಕ: 29-12-2021 ರಂದು 20-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 229/2021, ಕಲಂ: 324, 447, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಇಸ್ಮಾಯಿಲ್ ಮಹಮ್ಮದ್ ಅಲಿಖಾನ್, ಪ್ರಾಯ-38 ವರ್ಷ, ಸಾ|| ನೂರಾನಿ ಮುಲ್ಲಾ, ಚಂದಾವರ, ತಾ: ಹೊನ್ನಾವರ, 2]. ಷರೀಫ್ ಮಹಮ್ಮದ್ ಅಲಿಖಾನ್, ಪ್ರಾಯ-33 ವರ್ಷ, ವೃತ್ತಿ-ಸೈಬರ್ ಶಾಫ್ ನಲ್ಲಿ ಕೆಲಸ, ಸಾ|| ನೂರಾನಿ ಮುಲ್ಲಾ, ಚಂದಾವರ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ಪಿರ್ಯಾದುದಾರರ ಅಕ್ಕನ ಮಗಳ ಗಂಡನಿದ್ದು, ಈ ಬಗ್ಗೆ ಡೈವೋರ್ಸ್ ವಿಚಾರದಲ್ಲಿ ಪಿರ್ಯಾದಿಯೊಂದಿಗೆ ದ್ವೇಷದಿಂದ ಇದ್ದವರಿದ್ದು, ಪಿರ್ಯಾದುದಾರರು ದಿನಾಂಕ: 25-12-2021ರಂದು ಮಧ್ಯಾಹ್ನ ಕುಮಟಾದಿಂದ ತಮ್ಮ ಮನೆ ಕೂಜಳ್ಳಿಗೆ ಹೋಗುತ್ತಿರುವಾಗ 12-10 ಗಂಟೆಗೆ ಹೆರವಟ್ಟಾ ಹತ್ತಿರ ಆರೋಪಿ 1 ನೇಯವನು ಪಿರ್ಯಾದಿಯನ್ನು ಉದ್ದೇಶಿಸಿ ಕೆಟ್ಟದಾಗಿ ಬೈಯ್ದು, ಬೆದರಿಕೆಯನ್ನು ಹಾಕಿದ ಬಗ್ಗೆ ಕುಮಟಾ ಠಾಣೆಯಲ್ಲಿ ಅಸಂಜ್ಞೇಯ ದೂರನ್ನು ದಾಖಲಿಸಿದ ವಿಷಯವನ್ನು ತಿಳಿದು ಆರೋಪಿತರಿಬ್ಬರೂ ಸೇರಿಕೊಂಡು ದಿನಾಂಕ: 27-12-2021 ರಂದು 16-00 ಗಂಟೆಗೆ ಪಿರ್ಯಾದಿಯ ಮನೆಯ ಅಂಗಳದ ಹತ್ತಿರ ಬಂದು ಪಿರ್ಯಾದಿಗೆ ‘ಕ್ಯಾರೇ ಮಾದರ್ ಚೋರ್, ಮೇರಾ ಊಪರ್ ಕುಮಟಾ ಸ್ಟೇಷನ್ ಮೇ ಕಂಪ್ಲೇಂಟ್ ದಿಯಾ ಹೈ ಕ್ಯಾರೇ, ರಾಂಡಕೇ, ಚಿನಾಲಿಕೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಬಡಿಗೆಯಿಂದ ಪಿರ್ಯಾದಿಗೆ ಬಲಗಾಲಿಕೆ ಹೊಡೆದು ಹಿಡಿದು ಬೆನ್ನಿನ ಮೇಲೆ ಗುದ್ದಿ, ದೂಡಿ ಹಾಕಿ ‘ತುಜೇ ಫಿರ್ ನಹಿ ಚೋಡುಂಗಾ ತುಜೆ ಕತ್ರುಂಗ್ ಅಬಿ ತೂ ಬಚಗಯಾ, ಕರಕೆ ಸೋಚ್ ಮತ್ ತುಜೇ ಫಿರ್ ಹೈ’ ಅಂತಾ ಜೀವ ಬೆದರಿಕೆಯನ್ನು ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಮಹಮ್ಮದ್ ಸಮೀರ್ ತಂದೆ ಮಹಮ್ಮದ್ ಇಲಿಯಾಸ್ ಮುಲ್ಲಾ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಶೇಡಿಮನೆ, ಘಟಗಿ, ಕೂಜಳ್ಳಿ, ತಾ: ಕುಮಟಾ ರವರು ದಿನಾಂಕ: 29-12-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 155/2021, ಕಲಂ: 323, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪರಮೇಶ್ವರ ತಂದೆ ಲಕ್ಷ್ಮಣ ನಾಯ್ಕ, ಪ್ರಾಯ-28 ವರ್ಷ, ಸಾ|| ಜಡ್ಡಿ, ಮಾವಿನಕುಳಿ, ತಾ: ಹೊನ್ನಾವರ. ಈತನು ದಿನಾಂಕ: 28-12-2021 ರಂದು 22-30 ಗಂಟೆಗೆ ತಾಳಮಕ್ಕಿಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯಕ್ಷಗಾನ ನೋಡಲು ಪಿರ್ಯಾದಿಯು ನಡೆದುಕೊಂಡು ಹೋಗುತ್ತಿದ್ದಾಗ ಹತ್ತಿರ ಪಿರ್ಯಾದಿಗೆ ಮುಂದೆ ಹೋಗದಂತೆ ಅಡ್ಡಗಟ್ಟಿ ತಡೆದು, ಪಿರ್ಯಾದಿಗೆ ಉದ್ದೇಶಿಸಿ ‘ತನಗೆ ಕೊಡಬೇಕಾದ 2,000/- ರೂಪಾಯಿ ಕೊಡು’ ಅಂತಾ ಹೇಳಿದಾಗ ಪಿರ್ಯಾದಿಯು ‘ಈಗ ತನ್ನ ಹತ್ತಿರ ಹಣ ಇಲ್ಲಾ. ಎರಡು ದಿನ ಬಿಟ್ಟು ಕೊಡುತ್ತೇನೆ’ ಅಂತಾ ಹೇಳುತ್ತಿದ್ದಂತೆ ಸಿಟ್ಟಾದ ಆರೋಪಿತನು ‘ಹಣ ಕೊಡುವಂತೆ ಪೋನ್ ಮಾಡಿದಾಗಲೆಲ್ಲಾ ಇದೇ ರೀತಿ ಮಾಡುತ್ತಿಯಾ. ಬೋಳಿ ಮಗನೆ, ಸೂಳಾ ಮಗನೆ’ ಅಂತಾ ಅವಾಚ್ಯವಾಗಿ ಬೈಯ್ದವನೇ, ಒಮ್ಮೆಲೇ ತನ್ನ ಪ್ಯಾಂಟ್ ಕಿಸೆಯಲ್ಲಿದ್ದ ಸುತ್ತಿಗೆಯಿಂದ ಪಿರ್ಯಾದಿಯ ತಲೆಯ ಮೇಲೆ ಎರಡು ಸಲ ಹಾಗೂ ಬಲಗೆನ್ನೆಯ ಮೇಲೆ ಒಂದು ಸಲ ಹೊಡೆದು ರಕ್ತ ಗಾಯನೋವು ಪಡಿಸಿದ್ದಲ್ಲದೇ, ಪಿರ್ಯಾದಿಯು ಕೂಗಾಡುತ್ತಿದ್ದಾಗ ಪಿರ್ಯಾದಿಗೆ ಕಾಲಿನಿಂದ ತುಳಿದು ಕೈಯಿಂದ ದೂಡಿ ಹಾಕಿದ್ದು, ಅಷ್ಟರಲ್ಲಿ ಅದೇ ರಸ್ತೆಯಲ್ಲಿ ಬಂದ ಪ್ರಶಾಂತ ನಾಯ್ಕ ಮತ್ತು ಸುಬ್ರಹ್ಮಣ್ಯ ನಾಯ್ಕ ಇವರು ಜಗಳ ಬಿಡಿಸಿದ್ದು, ಆರೋಪಿತನು ಅಲ್ಲಿಂದ ಹೋಗುವಾಗ ಪಿರ್ಯಾದಿಗೆ ಉದ್ದೇಶಿಸಿ ‘ಹಣ ಕೊಡದಿದ್ದರೆ ನಿನಗೆ ಬಿಡುವುದಿಲ್ಲ. ಮುಂದೊಂದು ದಿನ ನಿನ್ನನ್ನು ಮುಗಿಸಿ ಬಿಡುತ್ತೇನೆ’ ಅಂತಾ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಾಯ ತಂದೆ ಮಂಜುನಾಥ ನಾಯ್ಕ, ಪ್ರಾಯ-47 ವರ್ಷ, ವೃತ್ತಿ-ಚಾಲಕ, ಸಾ|| ಜಡ್ಡಿ ಕನ್ನಡ ಶಾಲೆಯ ಹತ್ತಿರ, ತಾಳಮಕ್ಕಿ, ತಾ: ಹೊನ್ನಾವರ ರವರು ದಿನಾಂಕ: 29-12-2021 ರಂದು 00-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 156/2021, ಕಲಂ: 447, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಉಲ್ಲಾಸ ತಂದೆ ಸಾಲ್ವದೋರ್ ರೋಡ್ರಗೀಸ್, ಪ್ರಾಯ-35 ವರ್ಷ, ಸಾ|| ಚರ್ಚ್ ಕೇರಿ, ಕೆಳಗಿನೂರು, ತಾ: ಹೊನ್ನಾವರ. ಈತನು ದಿನಾಂಕ: 29-12-2021 ರಂದು 10-00 ಗಂಟೆಗೆ ಪಿರ್ಯಾದಿಯ ಕಬ್ಜಾದಲ್ಲಿರುವ ಕೆಳಗಿನೂರು ಗ್ರಾಮದ ಸರ್ವೇ ನಂ: 155 ಹಿಸ್ಸಾ2ಅ ನೇದರಲ್ಲಿನ ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿಯ ಕಬ್ಜಾ ಬೋಗವಟೆಗೆ ಆತಂಕ ಪಡಿಸುತ್ತಿದ್ದವನಿಗೆ ಪಿರ್ಯಾದಿಯು ‘ಯಾಕೆ ಹಾಗೆ ಮಾಡುತ್ತಿಯಾ?’ ಅಂತಾ ಕೇಳಿದಕ್ಕೆ, ಆರೋಪಿತನು ಪಿರ್ಯಾದಿಗೆ ಹಾಗೂ ಪಿರ್ಯಾದಿಯ ಅಣ್ಣ ಸಾಲ್ವದೋರ್ ತಂದೆ ಜುವಾಂವ್ ಲುಂದ್ರಿಗ್, ಇವರಿಗೆ ಧಮಕಿ ಹಾಕಿ ಜೀವ ಭಯ ಒಡ್ಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸಾಲ್ವದೋರ್ ತಂದೆ ಡುಮಿಂಗ್ ರೋಡ್ರಗೀಸ್, ಪ್ರಾಯ-64 ವರ್ಷ, ವೃತ್ತಿ-ಮನೆಯಲ್ಲಿ ಕೆಲಸ, ಸಾ|| ಕೆಳಗಿನೂರು, ತಾ: ಹೊನ್ನಾವರ ರವರು ದಿನಾಂಕ: 29-12-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 241/2021, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ-2021 ನೇದ್ದರ ವಿವರ...... ನಮೂದಿತ ಆರೋಪಿತ ಪ್ರಕಾಶ ತಂದೆ ಜಟ್ಟಪ್ಪ ಪಟಗಾರ, ಪ್ರಾಯ-44 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಿತ್ಲಳ್ಳಿ, ಪೋ: ಹಿತ್ಲಳ್ಳಿ, ತಾ: ಯಲ್ಲಾಪುರ. ಈತನು ದಿನಾಂಕ: 29-12-2021 ರಂದು ತನ್ನ ಲಾಭಕ್ಕಾಗಿ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ದಳದಲ್ಲಿ ಓ.ಸಿ ಮಟಕಾ ಎಂಬ ಜೂಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸಿ ಅವರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಎಂಬ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 1,050/- ರೂಪಾಯಿ ಮತ್ತು ಓ.ಸಿ ಅಂಕೆ-ಸಂಖ್ಯೆ ಬರೆದ ಪೇಪರ್-01 ಹಾಗೂ ಬಾಲ್ ಪೆನ್-01 ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜುನಾಥ ಎಸ್. ಗೌಡರ್, ಪಿ.ಎಸ್.ಐ-1, ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 29-12-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 242/2021, ಕಲಂ: ಯುವತಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಯುವತಿ ಕುಮಾರಿ: ದವಲಬೀ @ ಫರ್ಜಾನಾ ತಂದೆ ರಿಯಾಜ್ ಅಹ್ಮದ್ ಕುನ್ನೂರು, ಪ್ರಾಯ-18 ವರ್ಷ, 10 ತಿಂಗಳು, ವೃತ್ತಿ-ವಿದ್ಯಾರ್ಥಿ, ಸಾ|| ನೂತನ ನಗರ, ಜಡ್ಡಿ, ತಾ: ಯಲ್ಲಾಪುರ. ಪಿರ್ಯಾದುದಾರರ ಮಗಳಾದ ಕುಮಾರಿ ಇವಳು ದಿನಾಂಕ: 28-12-2021 ರಂದು ಮಧ್ಯಾಹ್ನ 15-00 ಗಂಟೆಗೆ ‘ತಾನು ಕಂಪ್ಯೂಟರ್ ಕ್ಲಾಸಿಗೆ ಹೋಗಿ ಬರುತ್ತೇನೆ’ ಅಂತಾ ಹೇಳಿ ಹೋದವಳು, ಈವರೆಗೆ ಮರಳಿ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಿಯಾಜ್ ಅಹ್ಮದ್ ತಂದೆ ಮೌಲಾಸಾಬ್ ಕುನ್ನೂರು, ಪ್ರಾಯ–42 ವರ್ಷ, ವೃತ್ತಿ-ಹಣ್ಣಿನ ವ್ಯಾಪಾರ, ಸಾ|| ನೂತನ ನಗರ, ಜಡ್ಡಿ, ತಾ: ಯಲ್ಲಾಪುರ ರವರು ದಿನಾಂಕ: 29-12-2021 ರಂದು 19-40 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 29-12-2021

at 00:00 hrs to 24:00 hrs

 

No Cases Reported....

 

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 31-12-2021 10:17 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080