ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕe:- 29-07-2021
at 00:00 hrs to 24:00 hrs
ಕಾರವಾರ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 34/2021, ಕಲಂ: 279, 337 ಐಪಿಸಿ ಸಹಿತ 134 (ಎ)&(ಬಿ) ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಟಾಟಾ ಏಸ್ ವಾಹನ ನಂ: ಕೆ.ಎ-30/9379 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 29-07-2021 ರಂದು 17-30 ಗಂಟೆಯ ಸಮಯಕ್ಕೆ ತನ್ನ ಬಾಬ್ತು ಟಾಟಾ ಏಸ್ ವಾಹನ ನಂ: ಕೆ.ಎ-30/9379 ನೇದನ್ನು ಕಾರವಾರ ಕಡೆಯಿಂದ ಶಿರವಾಡ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಕಾರವಾರದ ಶೇಜವಾಡ ದೇವಸ್ಥಾನದ ಕೆರೆಯ ಹತ್ತಿರದ ಕಾರವಾರ-ಕೈಗಾ ರಾಜ್ಯ ಹೆದ್ದಾರಿ ಸಂಖ್ಯೆ-06 ರಲ್ಲಿ ಶಿರವಾಡ ಕಡೆಯಿಂದ ಕಾರವಾರ ಕಡೆಗೆ ತನ್ನ ಹೀರೋ ಹೋಂಡಾ ಫ್ಯಾಷನ್ ಮೋಟಾರ್ ಸೈಕಲ್ ನಂ: ಜಿ.ಎ-08/ಜೆ-1318 ನೇದನ್ನು ಸವಾರಿ ಮಾಡಿಕೊಂಡು ಬರುತ್ತಿದ್ದ ಪಿರ್ಯಾದಿಯವರ ಚಿಕ್ಕಪ್ಪನ ಮಗನಾದ ಸದಾನಂದ ತಂದೆ ನರಹರಿ ಸಾಳುಂಕೆ, ಪ್ರಾಯ-49 ವರ್ಷ, ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅವರ ತಲೆಗೆ, ಕಾಲಿಗೆ ಹಾಗೂ ಕೈಗೆ ಗಾಯನೋವು ಪಡಿಸಿ, ಆರೋಪಿ ಚಾಲಕನು ತನ್ನ ವಾಹನ ಸಮೇತ ಚಲಾಯಿಸಿಕೊಂಡು ಪರಾರಿಯಾದ ಬಗ್ಗೆ ಪಿರ್ಯಾದಿ ಶ್ರೀ ಲಕ್ಷ್ಮಣ ತಂದೆ ಮುರಾರಿ ಸಾಳುಂಕೆ, ಪ್ರಾಯ-51 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಧೇವಾಡಾ, ಅಸ್ನೋಟಿ, ಕಾರವಾರ ರವರು ದಿನಾಂಕ: 29-07-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಕಾರವಾರ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 66/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ಯಾಮ @ ನಾಗಾನಾಥ ತಂದೆ ನಾಗಪ್ಪ ಗೌಡ, ಪ್ರಾಯ-37 ವರ್ಷ, ಸಾ|| ಮನೆ ನಂ: 1743/ಝೆಡ್/2/4, ಹರಿದೇವನಗರ, ಹಬ್ಬುವಾಡಾ, ಕಾರವಾರ. ಪಿರ್ಯಾದಿ ಮಗನಾದ ಈತನು ಸರಾಯಿ ಕುಡಿಯುವ ಚಟದವನಾಗಿದ್ದು, ಸರಾಯಿ ಕುಡಿದಾಗಲೆಲ್ಲಾ ಗಲಾಟೆ ಮಾಡುತ್ತಿದ್ದವನು, ದಿನಾಂಕ: 27-07-2021 ರಂದು ಮಧ್ಯಾಹ್ನ 11-00 ಘಂಟೆಯ ಸುಮಾರಿಗೆ ಸರಾಯಿ ಕುಡಿದು ಪೋನಿನಲ್ಲಿ ಜೋರಾಗಿ ಮಾತಾಡುತ್ತಿದ್ದವನಿಗೆ, ಪಿರ್ಯಾದಿಯು ‘ಯಾರ ಪೋನ್?’ ಅಂತಾ ಕೇಳಿದ್ದಕ್ಕೆ ‘ನಿನಗೆ ಯಾಕೆ ಹೇಳಬೇಕು?’ ಅಂತಾ ಹೇಳಿ ಸಿಟ್ಟಿನಿಂದ ಪೋನನ್ನು ನೆಲಕ್ಕೆ ಬಡಿದು ಅದರೊಳಗಿದ್ದ ಸಿಮ್ ಕಾರ್ಡ್ ಅನ್ನು ಹಲ್ಲಿನಿಂದ ಕಚ್ಚಿ ತುಂಡು ಮಾಡಿ ನೆಲಕ್ಕೆ ಒಗೆದು, ಕಾರವಾರ ಕಡೆಗೆ ಹೋದವನನ್ನು ಸಂಬಂಧಿಗಳ ಮನೆಯಲ್ಲಿ ಹಾಗೂ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಸದರಿ ಕಾಣೆಯಾದ ತನ್ನ ಮಗನನ್ನು ಹುಡುಕಿ ಕೊಡಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಜ್ಯೋತಿ ನಾಗಪ್ಪ ಗೌಡ, ಪ್ರಾಯ-60 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮನೆ ನಂ: 1743/ ಝೆಡ್/2/4, ಹರಿದೇವನಗರ, ಹಬ್ಬುವಾಡಾ, ಕಾರವಾರ ರವರು ದಿನಾಂಕ: 29-07-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಅಂಕೋಲಾ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 114/2021, ಕಲಂ: 279, 304(ಎ) ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ವಾಹನ ಚಾಲಕನಾಗಿದ್ದು, ವಾಹನದ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 28-07-2021 ರಂದು ಸಂಜೆ 18-00 ಗಂಟೆಯಿಂದ ದಿನಾಂಕ: 29-07-2021 ರಂದು ಬೆಳಿಗ್ಗೆ 09-30 ಗಂಟೆಯ ನಡುವಿನ ಅವಧಿಯಲ್ಲಿ ಅಂಕೋಲಾ ತಾಲೂಕಿನ ಹೊನ್ನಳ್ಳಿ ಶಾಲೆಯ ಹತ್ತಿರ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯಲ್ಲಿ ಯಾವುದೋ ವಾಹನದ ಆರೋಪಿ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು, ರಸ್ತೆಯಲ್ಲಿ ತನ್ನ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಮನೋಹರ ತಂದೆ ಬೀರಾ ಗೌಡ, ಪ್ರಾಯ-28 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೊನ್ನಳ್ಳಿ, ತಾ: ಅಂಕೋಲಾ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಆತನ ಹಣೆಗೆ ಹಾಗೂ ತಲೆಗೆ ಭಾರೀ ಗಾಯನೋವು ಪಡಿಸಿ, ಸ್ಥಳದಲ್ಲಿಯೇ ಮರಣವನ್ನುಂಟು ಪಡಿಸಿದ್ದಲ್ಲದೆ, ಆರೋಪಿ ಚಾಲಕನು ಅಪಘಾತದ ಸ್ಥಳದಲ್ಲಿ ತನ್ನ ವಾಹನವನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಯೋಗೇಶ ತಂದೆ ಬೀರಾ ಗೌಡ, ಪ್ರಾಯ-25 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೊನ್ನಳ್ಳಿ, ತಾ: ಅಂಕೋಲಾ ರವರು ದಿನಾಂಕ: 29-07-2021 ರಂದು 10-55 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ನಗರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 45/2021, ಕಲಂ: 379 ಐಪಿಸಿನೇದ್ದರ ವಿವರ...... ನಮೂದಿತೆ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 10-07-2021 ರಂದು 21-00 ಗಂಟೆಯಿಂದ ದಿನಾಂಕ: 11-07-2021 ರಂದು ಬೆಳಿಗ್ಗೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಶ್ರೀರಾಮ ಕಾಲೋನಿಯ ಕನ್ನಡ ಶಾಲೆಯ ಹತ್ತಿರದಿಂದ ಪಿರ್ಯಾದಿಯವರ ಮಾಲಿಕತ್ವದ 10 ವರ್ಷದ ಕಪ್ಪು ಬಣ್ಣದ ಜರ್ಸಿ ಆಕಳು-01, ಅ||ಕಿ|| 15,000/- ರೂಪಾಯಿ. 1 ವರ್ಷದ ಕಂದು ಬಣ್ಣದ ಆಕಳು ಕರು-01, ಅ||ಕಿ|| 4,000/- ರೂಪಾಯಿ ಮೌಲ್ಯದವುಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಕೃಷ್ಣಪ್ಪ ನಾಯ್ಕ, ಪ್ರಾಯ-25 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಶ್ರೀರಾಮ ಕಾಲೋನಿ, ತಾ: ಶಿರಸಿ ರವರು ದಿನಾಂಕ: 29-07-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 65/2021, ಕಲಂ: 379 ಐಪಿಸಿ ಹಾಗೂ ಕಲಂ: 5, 12 ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ-2020 ಹಾಗೂ ಕಲಂ: 11(1)(ಡಿ) ಪ್ರಾಣಿ ಹಿಂಸಾ ನಿರ್ಮೂಲನಾ ಕಾಯ್ದೆ-1960 ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ 04 ಜನ ಕಳ್ಳರಾಗಿದ್ದು, ಈ ನಮೂದಿತ ಆರೋಪಿತರು ದಿನಾಂಕ: 07-07-2021 ರಂದು 04-00 ಗಂಟೆಯ ಸುಮಾರಿಗೆ ಶಿರಸಿಯ ವಿವೇಕಾನಂದ ನಗರದ ಗಣಪತಿ ದೇವಸ್ಥಾನದ ಹತ್ತಿರ ಪಿರ್ಯಾದಿಯವರ ಮಾಲಿಕತ್ವದ 10 ವರ್ಷದ ಕೆಂಪು ಬಣ್ಣದ ಎತ್ತು-01, ಅ||ಕಿ|| 15,000/- ರೂಪಾಯಿ ಮೌಲ್ಯದನ್ನು ಕೊಂದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಕಳ್ಳತನ ಮಾಡಿಕೊಂಡು, ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ಹೋಗಿದ್ದು, ಆರೋಪಿತರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಪ್ರಭಾಕರ ತಂದೆ ಮಂಜಾ ದೇವಾಡಿಗ, ಪ್ರಾಯ-48 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಎಸಳೆ, ಪೋ: ಚಿಪಗಿ, ತಾ: ಶಿರಸಿ ರವರು ದಿನಾಂಕ: 29-07-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 29-07-2021
at 00:00 hrs to 24:00 hrs
ಪ್ರಕರಣಗಳು ದಾಖಲಾಗಿರುವುದಿಲ್ಲ....
======||||||||=====
=