ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 29-06-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 125/2021, ಕಲಂ: 4, 7, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಹಾಗೂ ಕಲಂ: 192(A) ಐ.ಎಮ್.ವಿ ಎಕ್ಟ್-1988 ಮತ್ತು ಕಲಂ: 429 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹಮ್ಮದ್ ಶಾಹೀದ್ ತಂದೆ ಮರ್ಧನ್‍ಸಾಬ್ ಅಲ್ಲಾಪುರ, ಪ್ರಾಯ-29 ವರ್ಷ, ವೃತ್ತಿ-ಚಾಲಕ, ಸಾ|| ಕೊಟ್ಟಿಗೇರಿ, ಬಂಕಾಪುರ, ತಾ: ಶಿಗ್ಗಾಂವ್, ಜಿ: ಹಾವೇರಿ, 2]. ಅಬ್ದುಲ್ ರಶೀದ್ ತಂದೆ ಅಲ್ಲಾಬಕ್ಷ್ ಬೇಪಾರಿ, ಸಾ|| ಹುಬ್ಬಳ್ಳಿ, 3]. ಕಾಶೀಪ್ ಮಸೂತಿ ಖಾನಿ, ಸಾ|| ಹಾನಗಲ್. ಈ ನಮೂದಿತ ಆರೋಪಿತರು ಸೇರಿಕೊಂಡು ಜಾನುವಾರುಗಳನ್ನು ಎಲ್ಲಿಯೋ ವಧೆ ಮಾಡಿ ಸುಮಾರು 4 ಲಕ್ಷ ಮೌಲ್ಯದ ಸುಮಾರು 3 ಟನ್ ಆಗುವಷ್ಟು (3000 ಕೆ.ಜಿ) ದನದ ಮಾಂಸವನ್ನು ಈಚರ್ ಕಂಪನೀಯ ಲಾರಿ ನಂ: ಕೆ.ಎ-25/ಸಿ-6531 ನೇದರಲ್ಲಿ ತುಂಬಿ ಮಾರಾಟ ಮಾಡುವ ಉದ್ದೇಶದಿಂದ ಸಕ್ಷಮ ಪ್ರಾಧಿಕಾರದಿಂದ ಸಾಗಾಟ ಮಾಡಲು ಪರವಾನಿಗೆ ಪಡೆಯದೇ ವಾಹನದಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದಾಗ ದಿನಾಂಕ: 29-06-2021 ರಂದು ಬೆಳಿಗ್ಗೆ 08-00 ಸಮಯಕ್ಕೆ ವಾಹನ ಹಾಗೂ ದನದ ಮಾಂಸದ ಸಮೇತ ಹೊಳೆಗದ್ದೆ ಟೋಲ್ ನಾಕಾ ಹತ್ತಿರ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಗುಡ್ಡಿ, ಪಿ.ಎಸ್.ಐ (ಕಾ&ಸು-02), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 29-06-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 173/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮಹಮ್ಮದ್ ರಷೀದ್ ತಂದೆ ಅಬ್ದುಲ್ ಖಾದಿರ್ ಘನಿ, ಪ್ರಾಯ-49 ವರ್ಷ, ವೃತ್ತಿ-ವ್ಯಾಪಾರ, ಸಾ|| ಸುಲ್ತಾನಿ ಮೊಹಲ್ಲಾ, ಚಂದಾವರ, ತಾ: ಹೊನ್ನಾವರ, 2]. ಮಹಮ್ಮದ್ ಪಯಾಜ್ ತಂದೆ ಮಹಮ್ಮದ್ ಯಾಕೂಬ್ ಸಿಕಂದರ್, ಪ್ರಾಯ-50 ವರ್ಷ, ವೃತ್ತಿ-ಚಾಲಕ, ಸಾ|| ನೂರಾನಿ ಮೊಹಲ್ಲಾ, ಚಂದಾವರ, ತಾ: ಹೊನ್ನಾವರ, 3]. ಅಲ್ತಾಫ್ ತಂದೆ ಮಹಮ್ಮದ್ ಬಸೀರ್ ಘನಿ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಕಾಲೋನಿ, ಚಂದಾವರ, ತಾ: ಹೊನ್ನಾವರ, 4]. ಮಹಮ್ಮದ್ ಇರ್ಪಾನ್ ತಂದೆ ಅಬ್ದುಲ್ ಖಾದಿರ್ ಘನಿ, ಪ್ರಾಯ-45 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜನತಾ ಕಾಲೋನಿ, ಚಂದಾವರ, ತಾ: ಹೊನ್ನಾವರ, 5]. ಅಹಮ್ಮದಸಾಬ್ ಶೇಖಸಾಬ್ ಅಂಕೋಲಾ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನೂರಾನಿ ಮೊಹಲ್ಲಾ, ಚಂದಾವರ, ತಾ: ಹೊನ್ನಾವರ, 6]. ಮೊಹಮ್ಮದ ಮತೀನ್ ತಂದೆ ನಜೀರ್ ಘನಿ, ಪ್ರಾಯ-32 ವರ್ಷ, ವೃತ್ತಿ-ವ್ಯಾಪಾರ, ಸಾ|| ಸುಲ್ತಾನಿ ಮೊಹಲ್ಲಾ, ಚಂದಾವರ, ತಾ: ಹೊನ್ನಾವರ, 7]. ಆರೀಪ್ ತಂದೆ ಪೈದಾರ್ ಸಿದ್ದಿ ಬಾಡಿ, ಪ್ರಾಯ-28 ವರ್ಷ, ವೃತ್ತಿ-ವ್ಯಾಪಾರ, ಸಾ|| ಸುಲ್ತಾನಿ ಮೊಹಲ್ಲಾ, ಚಂದಾವರ, ತಾ: ಹೊನ್ನಾವರ, 8]. ಗುಲ್ಜಾರ್ ತಂದೆ ಮಾಮುದ್ ಸಾಬ್, ಪ್ರಾಯ-30 ವರ್ಷ, ವೃತ್ತಿ-ವ್ಯಾಪಾರ, ಸಾ|| ನೂರಾನಿ ಮೊಹಲ್ಲಾ, ಚಂದಾವರ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 28-06-2021 ರಂದು 18-50 ಗಂಟೆಗೆ ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದಿಂದ ಹೊದ್ಕೆಶಿರೂರ ಕಡೆಗೆ ಹೋಗುವ ರಸ್ತೆಯ ಬದಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿ ತಮ್ಮ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಅಂದರ್-ಬಾಹರ್ ಜುಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ 1). ನಗದು ಹಣ 5,700/- ರೂಪಾಯಿ, 2). ಇಸ್ಪೀಟ ಎಲೆಗಳು ಒಟ್ಟು-52, ಅ||ಕಿ|| 00.00/- ರೂಪಾಯಿ, 3). ಕಪ್ಪು ಬಣ್ಣದ ಪ್ಲಾಸ್ಟಿಕ ತಾಡಪಲ-01, ಅ||ಕಿ|| 00.00/- ರೂಪಾಯಿ ನೇದವುಗಳೊಂದಿಗೆ ಆರೋಪಿ 1 ರಿಂದ 3 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 4 ರಿಂದ 8 ನೇಯವರು ಓಡಿ ಹೋಗಿ ತಪ್ಪಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಉದಯ ನಾಯಕ, ಪಿ.ಎಸ್.ಐ (ಕಾ&ಸು-02), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 29-06-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

                      

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 174/2021, ಕಲಂ: 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಚಿನ ತಂದೆ ವಿರುಪಾಕ್ಷ ರಾಮಾಪುರ, ಸಾ|| ಹೆರೂರ, ತಾ: ಹಾನಗಲ್, ಜಿ: ಹಾವೇರಿ. ಈತನು ಸಂಶಯುತ ಆರೋಪಿತನಾಗಿದ್ದು, ಪಿರ್ಯಾದಿಯವರೊಂದಿಗೆ ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಕಿ ತೊಪ್ಪಲಕೇರಿ ಗುರುಪಾದ ನಾಯ್ಕ ಇವರ ಮನೆಯಲ್ಲಿ ಬಾಡಿಗೆಗೆ ವಾಸ ಮಾಡಿಕೊಂಡಿದ್ದು, ದಿನಾಂಕ: 02-05-2021 ರಂದು 06-30 ಗಂಟೆಯಿಂದ 09-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯು ಆತನ ಹೆಂಡತಿ ಮಕ್ಕಳೊಂದಿಗೆ ಆಸ್ಪತ್ರೆಗೆ ಹೋಗಿ ಬರುವುದೊರಳಗೆ ಮನೆಯ ಅಡುಗೆ ಕೋಣೆಯಲ್ಲಿ ಡ್ರಮ್ ನಲ್ಲಿಟ್ಟಿದ್ದ ಬ್ಯಾಗಿನಲ್ಲಿದ್ದ 1). ಸುಮಾರು 25 ಗ್ರಾಂ. ತೂಕದ ಬಂಗಾರದ ಕುತ್ತಿಗೆಯ ಸರ-1, ಅ||ಕಿ|| 1,00,000/- ರೂಪಾಯಿ, 2). ನಗದು ಹಣ 10,000/- ರೂಪಾಯಿ  ಕಳುವು ಆಗಿದ್ದು, ಅದನ್ನು ನಮೂದಿತ ಆರೋಪಿತನೇ ಕಳವು ಮಾಡಿರುವ ಸಂಭವ ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣ ತಂದೆ ಜಟ್ಟಿ ಪಟಗಾರ, ಪ್ರಾಯ-38 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ಹೊಲನಗದ್ದೆ, ತಾ: ಕುಮಟಾ, ಹಾಲಿ ಸಾ|| ತೊಪ್ಪಲಕೇರಿ, ಕರ್ಕಿ, ತಾ: ಹೊನ್ನಾವರ ರವರು ದಿನಾಂಕ: 29-06-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮೊಹಮ್ಮದ್ ಇರ್ಷಾದ್ ತಂದೆ ಮೊಹಮ್ಮದ್ ಇರ್ಫಾನ್ ಶೇಖ್, ಪ್ರಾಯ-26 ವರ್ಷ, ಸಾ|| ಮುಗ್ದುಂ ಕಾಲೋನಿ, ತಾ: ಭಟ್ಕಳ (ಮೋಟಾರ್ ಸೈಕಲ್ ನಂ: ಕೆ.ಎ-19/ಇ.ವಿ-7303 ನೇದರ ಸವಾರ). ಈತನು ದಿನಾಂಕ: 28-06-2021 ರಂದು 15-30 ಗಂಟೆಯ ಸುಮಾರಿಗೆ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಕರಾವಳಿ ಹೊಟೇಲ್ ಎದುರಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-19/ಇ.ವಿ-7303 ನೇದನ್ನು ಕರಾವಳಿ ಹೊಟೇಲ್ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಸಂಶುದ್ದೀನ್ ಸರ್ಕಲ್ ಬದಿಯಿಂದ ಕುಂದಾಪುರ ಬದಿಗೆ ಹೋಗುತ್ತಿರುವ ಮೋಟಾರ್ ಸೈಕಲ್ ನಂ: ಕೆ.ಎ-20/ವ್ಹಾಯ್-3096 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಸ್ನೇಹಿತ ಮನೋಜ ತಂದೆ ತಿಮ್ಮಯ್ಯ ನಾಯ್ಕ ಇವರ ಬಲಗೈ ಬೆರಳುಗಳಿಗೆ, ಕೈ ಕಾಲುಗಳಿಗೆ ಹಾಗೂ ತಲೆಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಕೂಡಾ ಕೈ ಕಾಲುಗಳಿಗೆ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಜನಾರ್ಧನ ತಂದೆ ರಾಮಾ ಮೊಗೇರ, ಪ್ರಾಯ-23 ವರ್ಷ, ವೃತ್ತಿ-ಜಿಯೋ ಕಂಪನಿಯಲ್ಲಿ ಕೆಲಸ, ಸಾ|| ಕರಿಕಲ್, ತಾ: ಭಟ್ಕಳ ರವರು ದಿನಾಂಕ: 29-06-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 104/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ಹಮ್ಮಣ್ಣ ನಾಯಕ, ಪ್ರಾಯ-50 ವರ್ಷ, ವೃತ್ತಿ-ಚಾಲಕ, ಸಾ|| ಹಿರೇಗುತ್ತಿ, ತಾ: ಕುಮಟಾ (ಕಾರ್ ನಂ: ಕೆ.ಎ-47/ಎಮ್-6068 ನೇದರ ಚಾಲಕ). ಈತನು ದಿನಾಂಕ: 28-06-2021 ರಂದು ಸಮಯ ಸುಮಾರು 18-30 ಗಂಟೆಗೆ ಯಲ್ಲಾಪುರ ಪಟ್ಟಣದ ಕಾಮಾಕ್ಷಿ ಪೆಟ್ರೋಲ್ ಬಂಕ್ ಸಮೀಪ ಹಾದು ಹೋದ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಕಾರ್ ನಂ: ಕೆ.ಎ-47/ಎಮ್-6068 ನೇದನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು, ತನ್ನ ವಾಹನವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಅದೇ ವೇಳೆ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ತನ್ನ ರಸ್ತೆಯ ಸೈಡಿನಿಂದ ಪಿರ್ಯಾದಿಯವರ ವಾಹನದ ಮುಂದೆ ಹೋಗುತ್ತಿದ್ದ ಬೊಲೆರೂ ಪಿಕ್‍ಆಪ್ ವಾಹನ ನಂ: ಕೆ.ಎ-31/ಎ-0216 ನೇದಕ್ಕೆ ಎದರುನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅದೇ ವೇಗದಲ್ಲಿ ಮುಂದೆ ಹೋಗಿ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ತನ್ನ ರಸ್ತೆಯ ಸೈಡಿನಿಂದ ಪಿರ್ಯಾದಿಯವರು ಪ್ರಯಾಣಿಸುತ್ತಿದ್ದ ಕಾರ್ ನಂ: ಕೆ.ಎ-50/ಎಮ್.ಎ-3132 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಬೊಲೆರೋ ಪಿಕ್‍ಆಪ್ ವಾಹನದಲ್ಲಿದ್ದ ಸಾಕ್ಷಿದಾರರಾದ ಕುಮಾರಿ: ಆಶಾ ತಂದೆ ವಿಠ್ಠು ಎಡಿಗೆ, ಸಾ|| ಗಾಂವಠಾಣ, ತಾ: ಯಲ್ಲಾಪುರ ಇವರ ಮೈಕೈಗೆ ಗಾಯನೋವು ಪಡಿಸಿ, ಮೂರು ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ವೆಂಕೇಶ್ವರರಾವ್ ತಂದೆ ರಾಮಮೂರ್ತಿ, ಪ್ರಾಯ-54 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ರಂಗಾಪುರ ಕ್ಯಾಂಪ್, ಪೋ: ಗಾಂಧಿನಗರ, ತಾ: ಸಿಂಧನೂರು, ಜಿ: ರಾಯಚೂರು ರವರು ದಿನಾಂಕ: 29-06-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 105/2021, ಕಲಂ: 30, 324 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಮತಿ ಭವ್ಯಾ ಸಿದ್ಧಿ, 2]. ಶ್ರೀಮತಿ ಭಾಗಿರಥಿ ಸಿದ್ಧಿ, ಸಾ|| (ಇಬ್ಬರೂ) ಬೆಳಗುಂದ್ಲಿ, ತಾರೆಹಳ್ಳಿ ಗ್ರಾಮ, ತಾ: ಯಲ್ಲಾಪುರ. ಈ ನಮೂದಿತ ಆರೋಪಿತರು ತಾರೆಹಳ್ಳಿ ಗ್ರಾಮದ ಬೆಳಗುಂದ್ಲಿಯ ನಿವಾಸಿಯವರಾಗಿದ್ದು, ತಮ್ಮ ಊರಿನ ತೋಟ ಕಾವಲು ಕಾಯುತ್ತಿದ್ದ ಮೃತಪಟ್ಟ ಶ್ರೀ ಕೃಷ್ಣ ತಂದೆ ರಾಮಾ ನಾಯ್ಕ, ಪ್ರಾಯ-52 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆಳಲೆ, ಪೋ: ಅರಸಾಪುರ, ತಾ: ಶಿರಸಿ ಯವರು ಯಾವುದೋ ಕಾರಣದಿಂದ ದಿನಾಂಕ: 05-06-2021 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಬೆಳಗುಂದ್ಲಿ ಗ್ರಾಮದ ಆರೋಪಿತರ ಮನೆಗೆ ಹೋದಾಗ ಆರೋಪಿತರಿಬ್ಬರೂ ಮೃತನ ಮೈಮೇಲೆ ಬಿಸಿ ನೀರು ಎರಚಿ, ಪೊರಕೆ ಮತ್ತು ಕೋಲಿನಿಂದ ಹಲ್ಲೆ ಮಾಡಿ ಅವಮಾನ ಪಡಿಸಿದ್ದರಿಂದ ಮನನೊಂದ ಮೃತನು ಅಲ್ಲಿಂದ ತನ್ನ ಮೋಟಾರ್ ಸೈಕಲ್ ಮೇಲೆ ಆರೋಪಿತರ ಮನೆಯ ಸಮೀಪ ಇರುವ ಬೆಳಗುಂದ್ಲಿ ಕೆರೆಯ ಹತ್ತಿರ ಬಂದು ತನ್ನ ಮೋಟಾರ್ ಸೈಕಲನ್ನು ರಸ್ತೆಯ ಪಕ್ಕ ನಿಲ್ಲಿಸಿ, ತಾನು ಮನೆಯಿಂದ ತಂದ ಹಗ್ಗದಿಂದ ಬೆಳಗುಂದ್ಲಿ ಕೆರೆಯ ದಡದಲ್ಲಿರುವ ಕಾಡು ಜಾತಿಯ ಮರಕ್ಕೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟವನ ಶವವನ್ನು ದಿನಾಂಕ: 06-06-2021 ರಂದು 00-30 ಗಂಟೆಗೆ ಪಿರ್ಯಾದಿ ಮತ್ತು ಸಂಬಂಧಿಕರು ನೋಡಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮನೋಹರ ತಂದೆ ಕೃಷ್ಣ ನಾಯ್ಕ, ಪ್ರಾಯ-21 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಬೆಳಲೆ, ಪೋ: ಅರಸಾಪುರ, ತಾ: ಶಿರಸಿ ರವರು ದಿನಾಂಕ: 29-06-2021 ರಂದು 12-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 29-06-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 33/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಸುಧಾಕರ ತಂದೆ ದುರ್ಗಾ ಹರಿಕಂತ್ರ, ಪ್ರಾಯ-37 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಹರಿಕಂತ್ರವಾಡ, ಬಾವಿಕೇರಿ, ತಾ: ಅಂಕೋಲಾ. ಈತನು ದಿನಾಂಕ: 29-06-2021 ರಂದು ಬೆಳಿಗ್ಗೆ ಸುಮಾರು 07-10 ಗಂಟೆಗೆ ಹರಿಕಂತ್ರವಾಡದ ಹತ್ತಿರದ ಸಮುದ್ರದಲ್ಲಿ ಪಾತಿ ದೋಣಿ ಪಲ್ಟಿಯಾಗಿ ಸಮುದ್ರದಲ್ಲಿ ಬಿದ್ದು ನೀರಿನಲ್ಲಿ ಮುಳುಗಿದ್ದು, ನಂತರ ಅಂಕೋಲಾದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಉಪಚರಿಸಿದ ವೈದ್ಯರು ಬೆಳಿಗ್ಗೆ 07-55 ಗಂಟೆಗೆ ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ. ಮೃತನ ಮೃತದೇಹವು ಅಂಕೋಲಾದ ಸರಕಾರಿ ಆಸ್ಪತ್ರೆಯಲ್ಲಿ ಇದ್ದು ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡು ಮೃತದೇಹವನ್ನು ಬಿಟ್ಟು ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜಾನು ತಂದೆ ಶಿವು ಬಲೆಗಾರ, ಪ್ರಾಯ-47 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಹರಿಕಂತ್ರವಾಡಾ, ಬಾವಿಕೇರಿ, ತಾ: ಅಂಕೋಲಾ ರವರು ದಿನಾಂಕ: 29-06-2021 ರಂದು 08-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 34/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ದೇವೇಂದ್ರ ತಂದೆ ಜಾನು ಗೌಡ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮುಡ್ರಾಣಿ, ಬೆಳಂಬಾರ, ತಾ: ಅಂಕೋಲಾ. ಈತನು ದಿನಾಂಕ: 27-06-2021 ರಂದು ಬೆಳಿಗ್ಗೆ 05-00 ಗಂಟೆಗೆ ಮನೆಯಿಂದ ಕೃಷಿ ಕೆಲಸಕ್ಕೆ ಹೋದವನು ದಿನಾಂಕ: 29-06-2021 ರಂದು ಸಾಯಂಕಾಲ 15-00 ಗಂಟೆಗೆ ಅಂಕೋಲಾ ತಾಲೂಕಿನ ತೆಂಕಣಕೇರಿಯ ಶ್ರೀ ಶ್ರೀಧರ ಪೊಕ್ಕಾ ನಾಯ್ಕ ರವರ ಜಮೀನಿನ ಬಾವಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟು ಸಿಕ್ಕಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಂಡು ಮೃತದೇಹವನ್ನು ಬಿಟ್ಟು ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಪ್ರವೀಣ ತಂದೆ ಜಾನು ಗೌಡ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮುಡ್ರಾಣಿ, ಬೆಳಂಬಾರ, ತಾ: ಅಂಕೋಲಾ ರವರು ದಿನಾಂಕ: 29-06-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಜೋಯಿಡಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 05/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ಶಿವಲೀಲಾ @ ಅನ್ನಪೂರ್ಣ ತಂದೆ ಈರಯ್ಯ ಹಿರೇಮಠ, ಪ್ರಾಯ-14 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ವಡಕಲ್, ಉಳವಿ, ತಾ: ಜೋಯಿಡಾ. ಪಿರ್ಯಾದುದಾರಳ ಮಗಳಾದ ಇವಳು ಕಳೆದ ಎರಡು ವರ್ಷದಿಂದ ಹೊಟ್ಟೆನೋವು ಅಂತಾ ಬಳಲುತ್ತಿದ್ದವಳಿಗೆ, ಪಿರ್ಯಾದಿಯವರು ಗಾಂವಟಿ ಔಷಧಿಯ ಚಿಕಿತ್ಸೆಯನ್ನು ಕೊಡಿಸಿದ್ದು, ಆದರೂ ಸಹ ಹೊಟ್ಟೆನೋವು ಕಡಿಮೆ ಆಗದೆ ಇದ್ದುದರಿಂದ ಹೊಟ್ಟೆನೋವು ತಾಳಲಾರದೆ ಮೃತೆ: ಕು|| ಶಿವಲೀಲಾ @ ಅನ್ನಪೂರ್ಣ ಇವಳು ದಿನಾಂಕ: 29-06-2021 ರಂದು 20-00 ಗಂಟೆಯಿಂದ 20-30 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಮನೆಯ ಕಿಟಕಿಗೆ ತನ್ನ ಚೂಡಿದಾರ ವೇಲ್ ಕಟ್ಟಿಕೊಂಡು, ತನ್ನ ಕೊರಳಿಗೆ ಕಟ್ಟಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಇದರ ಹೊರತು ಅವಳ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಜ್ಯೋತಿ ಕೋಂ. ಈರಯ್ಯ ಹಿರೇಮಠ, ಪ್ರಾಯ-35 ವರ್ಷ, ವೃತ್ತಿ-ಮನೆ ಕೆಲಸ, ಸಾ|| ವಡಕಲ್, ಉಳವಿ, ತಾ: ಜೋಯಿಡಾ ರವರು ದಿನಾಂಕ: 29-06-2021 ರಂದು 23-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 02-07-2021 11:04 AM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080