ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 29-03-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 21/2021, ಕಲಂ: 279, 337, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತನು ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-0908 ನೇದರ ಸವಾರನಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆ.ಎ-42/ಎಫ್-973 ನೇದರ ಚಾಲಕನಾಗಿದ್ದು, ದಿನಾಂಕ: 10-03-2021 ರಂದು ಬೆಳಗಿನ ಜಾವ 06-15 ಗಂಟೆಗೆ ಸದ್ರಿ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಅವರು ವಿಜಯಪುರದಿಂದ ಚಲಾಯಿಸಿಕೊಂಡು ಬಂದವರು 15-25 ಗಂಟೆಯ ಸಮಯಕ್ಕೆ ಅಂಕೋಲಾ ಬಸ್ ಸ್ಟ್ಯಾಂಡಿಗೆ ತಲುಪಿ, ಅಲ್ಲಿಂದ ಕಾರವಾರ ಕಡೆಗೆ ಸದ್ರಿ ಬಸ್ಸನ್ನು ಎಚ್ಚರಿಕೆಯಿಂದ ಹಾಗು ಸಂಚಾರ ನಿಯಮವನ್ನು ಗಮನಿಸಿಕೊಂಡು ಚಲಾಯಿಸಿಕೊಂಡು ಬರುತ್ತಿರುವಾಗ ಸುಮಾರು 16-10 ಗಂಟೆಯ ಸಮಯಕ್ಕೆ ಕಾರವಾರದ ಅಮದಳ್ಳಿ ಗ್ರಾಮ ಹಾರವಾಡ ಘಟ್ಟದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ನೇದರಲ್ಲಿ ಎದುರಿನಿಂದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಂ: ಕೆ.ಎ-47/ಡಬ್ಲ್ಯೂ-0908 ನೇದರ ಆರೋಪಿ ಸವಾರನು ತನ್ನ ಮೋಟಾರ್ ಸೈಕಲನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದವನು, ಪಿರ್ಯಾದಿಯವರು ಚಲಾಯಿಸಿಕೊಂಡಿದ್ದ ಬಸ್ಸನ್ನು ಗಮನಿಸದೆ ಮೀನು ಲಾರಿಯನ್ನು ಓವರಟೇಕ್ ಮಾಡಿಕೊಂಡು ತನ್ನ ಬಲಬದಿಗೆ ಸವಾರಿ ಮಾಡಿಕೊಂಡು ಬಂದು ಬಸ್ಸನ್ನು ನೋಡಿ ಒಮ್ಮೆಲೆ ಬ್ರೇಕ್ ಅನ್ನು ಒತ್ತಿಕೊಂಡು ಮೋಟಾರ್ ಸೈಕಲ್ ನಿಯಂತ್ರಣಕ್ಕೆ ಸಿಗದೆ ಸ್ಕಿಡ್ಡಾಗಿ ಹೆದ್ದಾರಿಯಲ್ಲಿ ಬಿದ್ದು ಗಾಯಗೊಂಡು ಮರಣಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಹನುಮಂತಪ್ಪಾ ತಂದೆ ಸಂಗಪ್ಪಾ ಭಜಂತ್ರಿ, ಪ್ರಾಯ-34 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ, ಸಾ|| ತುಂಬ ಗ್ರಾಮ, ತಾ: ಹುನಗುಂದ, ಜಿ: ಬಾಗಲಕೋಟೆ, ಹಾಲಿ ಸಾ|| ಹಬ್ಬುವಾಡಾ, ಕಾರವಾರ ರವರು ದಿನಾಂಕ: 29-03-2021 ರಂದು 16-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 55/2021, ಕಲಂ: 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಣೇಶ ತಂದೆ ಲಕ್ಷ್ಮಣ ನಾಯಕ, ಪ್ರಾಯ-25 ವರ್ಷ, 2]. ಹರೀಶ ತಂದೆ ಲಕ್ಷ್ಮಣ ನಾಯಕ, ಪ್ರಾಯ-29 ವರ್ಷ, ಸಾ|| (ಇಬ್ಬರೂ) ಸಣ್ಣ ಅಲಗೇರಿ, ಅಲಗೇರಿ, ತಾ: ಅಂಕೋಲಾ. ಈ ನಮೂದಿತ ಆರೋಪಿತರು ಪಿರ್ಯಾದಿಯವರ ಊರಿನವರಾಗಿದ್ದು, ಆರೋಪಿ 1 ನೇಯವರಿಗೂ ಮತ್ತು ಪಿರ್ಯಾದಿಯವರಿಗೆ ದಿನಾಂಕ: 21-03-2021 ರಂದು ಮಾತಿಗೆ ಮಾತಾಗಿ ಜಗಳವಾಗಿದ್ದು, ಅದೇ ಜಗಳದ ವಿಷಯವಾಗಿ ದಿನಾಂಕ: 28-03-2021 ರಂದು ರಾತ್ರಿ ಸುಮಾರು 10-30 ಗಂಟೆಗೆ ಆರೋಪಿ 1 ನೇಯವನು ‘ನೀನೇನ್ ಶೆಂಟಾ ಮಾಡಿದೆ, ಬೋಳಿ ಮಗನೆ’ ಅಂತಾ ಹೇಳಿ ದೂಡಿ ಕೆಡವಿ, ಬ್ಲೇಡಿನಿಂದ ಪಿರ್ಯಾದಿಯವರ ಎಡಭುಜಕ್ಕೆ ಹೊಡೆದಿದ್ದು, ಆಗ ಆರೋಪಿ 2 ನೇಯವನು ಬಂದು ಪಿರ್ಯಾದಿಯವರಿಗೆ ಸೊಟ್ಟೆಯಿಂದ ಹೊಡೆದನು, ಆರೋಪಿ 1 ನೇಯವನು ‘ನಿನಗೆ ಇಷ್ಟಕ್ಕೆ ಬಿಟ್ಟಿದ್ದೇನೆ. ಮುಂದೊಂದು ದಿನ ನಿನ್ನ ಸಾಯಿಸದೇ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ಗಿರಿಯಣ್ಣ ನಾಯಕ, ಪ್ರಾಯ-42 ವರ್ಷ, ವೃತ್ತಿ-ವ್ಯಾಪಾರ, ಸಾ|| ಸಣ್ಣ ಅಲಗೇರಿ, ಅಲಗೇರಿ, ತಾ: ಅಂಕೋಲಾ ರವರು ದಿನಾಂಕ: 29-03-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 56/2021, ಕಲಂ: 323, 427, 447, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುರೇಶ ರಾಮಚಂದ್ರ ನಾಯಕ, ಪ್ರಾಯ-42 ವರ್ಷ, ವೃತ್ತಿ-ವ್ಯಾಪಾರ, 2]. ಸಾಕ್ಷಿತ್ ಸುರೇಶ ನಾಯಕ, ಪ್ರಾಯ-22 ವರ್ಷ, ಸಾ|| (ಇಬ್ಬರೂ) ಸಣ್ಣ ಅಲಗೇರಿ, ಅಲಗೇರಿ, ತಾ: ಅಂಕೋಲಾ. ಈ ನಮೂದಿತ ಆರೋಪಿತರು ಯಾವುದೋ ಕಾರಣಕ್ಕೆ ಪಿರ್ಯಾದಿಯ ಮೇಲೆ ದ್ವೇಷದಿಂದ ಇದ್ದವರು, ದಿನಾಂಕ: 28-03-2021 ರಂದು 23-30 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಭಾವಿಕೇರಿಯ ಸಣ್ಣ ಅಲಗೇರಿ ರಸ್ತೆಯಲ್ಲಿರುವ ಪಿರ್ಯಾದಿಯ ಬಾಗಾಯತ್ ದಲ್ಲಿ ಅಕ್ರಮ ಪ್ರವೇಶ ಮಾಡಿಕೊಂಡು ಬಂದವರು, ಪಿರ್ಯಾದಿಯ ಮನೆಯ ಬಾಗಿಲನ್ನು ಒಡೆದು, ಪಿರ್ಯಾದಿಗೆ ಮತ್ತು ಪಿರ್ಯಾದಿಯ ಮಗ ರಾಜೇಶನಿಗೆ ‘ಮನೆಯಿಂದ ಹೊರಗೆ ಬನ್ನಿ, ನಿಮಗೆ ಹೊಡೆಯುತ್ತೇವೆ’ ಎಂದು ಪಿರ್ಯಾದಿ ಮತ್ತು ಪಿರ್ಯಾದಿಯ ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದಿಯ ಮಗನಿಗೆ ‘ಬೋಳಿ ಮಗನೆ, ಸೂಳೆ ಮಗನೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದಿಯ ಮನೆಯ ಮುಂದೆ ರಸ್ತೆಯಲ್ಲಿ ನಿಲ್ಲಿಸಿದ ಪಿರ್ಯಾದಿಯ ಕಾರ್ ನಂ: ಕೆ.ಎ-19/ಎಮ್.ಸಿ-3379 ನೇದು ಮತ್ತು ಪಿರ್ಯಾದಿಯ ಅಳಿಯನ ಕಾರ್ ನಂ: ಕೆ.ಎ-03/ಎಮ್.ಕ್ಯೂ-7778 ನೇದಕ್ಕೆ ಇಬ್ಬರೂ ಕಲ್ಲನ್ನು ಎತ್ತಿ ಹಾಕಿ ಕಾರುಗಳನ್ನು ಡ್ಯಾಮೇಜ್ ಪಡಿಸಿದ್ದಲ್ಲದೇ, ಅದನ್ನು ಕೇಳಲು ಹೋದ ಪಿರ್ಯಾದಿಯ ಅಳಿಯ ಮಹೇಂದರ ಇವರಿಗೆ ಇಬ್ಬರೂ ಆರೋಪಿತರು ಸೇರಿ ದೂಡಿ ಹಾಕಿದ್ದಲ್ಲದೇ, ಆರೋಪಿ 2 ನೇಯವನು ಕೈಯಿಂದ ಹೊಡೆದು ದುಃಖಾಪತ್ ಪಡಿಸಿ, ಆರೋಪಿತರಿಬ್ಬರೂ ಸೇರಿ ‘ಕೊಲೆ ಮಾಡದೇ ಬಿಡುವುದಿಲ್ಲ’ ಅಂತಾ ಬೆದರಿಕೆ ಹಾಕಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ರಜನಿ ವೆಂಕಟ್ರಾಯ ನಾಯಕ, ಪ್ರಾಯ-67 ವರ್ಷ, ವೃತ್ತಿ-ಗೃಹಿಣಿ, ಸಾ|| ಸಣ್ಣ ಅಲಗೇರಿ ರಸ್ತೆ, ಭಾವಿಕೇರಿ, ತಾ: ಅಂಕೋಲಾ ರವರು ದಿನಾಂಕ: 29-03-2021 ರಂದು 14-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 57/2021, ಕಲಂ: 323, 341, 353, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಬೊಮ್ಮಯ್ಯ ತಂದೆ ಸಣ್ಣಪ್ಪ ನಾಯಕ ಸಾ|| ಸಣ್ಣ ಅಲಗೇರಿ, ತಾ: ಅಂಕೋಲಾ, 2]. ಸುರೇಶ ರಾಮಚಂದ್ರ ನಾಯಕ, ಸಾ|| ಸಣ್ಣ ಅಲಗೇರಿ, ತಾ: ಅಂಕೋಲಾ, 3]. ಗೋಪಾಲ ಗಿರಿಯಣ್ಣ ನಾಯಕ, ಸಾ|| ಪುರ್ಲಕ್ಕಿಬೇಣ, ತಾ: ಅಂಕೋಲಾ, 4]. ಸುರೇಶ ಗಿರಿಯಣ್ಣ ನಾಯಕ, ಸಾ|| ಸಣ್ಣ ಅಲಗೇರಿ, ತಾ: ಅಂಕೋಲಾ. ಈ ನಮೂದಿತ ಆರೋಪಿತರು ದಿನಾಂಕ: 29-03-2021 ರಂದು ಬೆಳಿಗ್ಗೆ ಸುಮಾರು 10-30 ಗಂಟೆಗೆ ಸಂಗನಮತ ಮಾಡಿಕೊಂಡು ಸ್ಕಾರ್ಪಿಯೋ ವಾಹನ ನಂ: ಕೆ.ಎ-30/ಎಮ್-8074, ಬುಲೆಟ್ ಮೋಟಾರ್ ಸೈಕಲ್ ನಂ: ಕೆ.ಎ-30/ಡಬ್ಲ್ಯೂ-1348 ಹಾಗೂ ಇನ್ನೊಂದು ಮೋಟಾರ್ ಸೈಕಲ್ ನಂ: ಕೆ.ಎ-30/ಆರ್-6064 ನೇದರ ಮೇಲೆ ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಹೋಗಲು ಟೋಲ್ ಗೇಟ್ ಹತ್ತಿರ ಬಂದವರು ಟೋಲ್ ಗೇಟಿನ ಕರ್ತವ್ಯದಲ್ಲಿದ್ದ ಪಿರ್ಯಾದಿಗೆ ಹಾಗೂ ಸೆಕ್ಯೂರಿಟಿ ಸಿಬ್ಬಂದಿಗೆ ‘ನೀವು ಲೋಕಲ್ ನವರ ಕಡೆಯಿಂದ ಹಣ ಪಡೆಯುತ್ತೀರಾ, ಬೋಳಿ ಮಕ್ಕಳಾ, ಸೂಳೆ ಮಕ್ಕಳಾ. ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲ’ ಅಂತಾ ಅವಾಚ್ಯವಾಗಿ ಬೈಯ್ದು ಟೋಲ್ ಗೇಟ್ ಕರ್ತವ್ಯದಲ್ಲಿದ್ದ ಪಿರ್ಯಾದಿಗೆ ಮತ್ತು ಸೆಕ್ಯೂರಿಟಿ ಸಿಬ್ಬಂದಿಗೆ ಸ್ಟಾಫ್ ರೂಮ್ ಕಡೆಗೆ ಹೋಗದಂತೆ ಅಡಗಟ್ಟಿ ದೂಡಿ ಹಾಕಿ, ಸ್ಕಾರ್ಪಿಯೋ ಮತ್ತು ಮೋಟಾರ್ ಸೈಕಲ್ ನವರು ಕೂಡಿ ಅವರೊಂದಿಗೆ ಜಗಳ ಮಾಡುತ್ತಿರುವಾಗ ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಹೋಗುವ ಒಂದು ಪೊಲೀಸ್ ವಾಹನದಲ್ಲಿದ್ದ ಪೊಲೀಸರು ಅಲ್ಲಿಗೆ ಬಂದು ಕೂಗಾಡುತ್ತಿದ್ದ ಅವರಿಗೆ ‘ಏನು ಆಯಿತು?’ ಅಂತಾ ಕೇಳಿದಾಗ, ‘ನಮಗೆ ಕೇಳುವವರು ನೀವು ಯಾರು?’ ಅಂತಾ ಹೇಳಿ ಪೊಲೀಸರು ಸ್ಕಾರ್ಪಿಯೋ ವಾಹನ, ಮೋಟಾರ್ ಸೈಕಲ್ ನಿಲ್ಲಿಸಲು ಪ್ರಯತ್ನಿಸಿದರೂ ಸಹ ನಿಲ್ಲಿಸದೆ, ಮೋಟಾರ್ ಸೈಕಲ್ ನಂ: ಕೆ.ಎ-30/ಆರ್-6064 ನೇದನ್ನು ಅಲ್ಲಿಯೇ ಬಿಟ್ಟು ಸ್ಕಾರ್ಪಿಯೋ ವಾಹನ ಮತ್ತು ಬುಲೆಟ್ ಮೋಟಾರ್ ಸೈಕಲಿನ ಮೇಲೆ ಹೊರಟು ಹೋದ ಬಗ್ಗೆ ಪಿರ್ಯಾದಿ ಶ್ರೀ ನವೀನ ತಂದೆ ಮುರುಳೀಧರ ಗುಪ್ತಾ, ಪ್ರಾಯ-29 ವರ್ಷ, ವೃತ್ತಿ-ಹಟ್ಟಿಕೇರಿಯಲ್ಲಿರುವ ಐ.ಆರ್.ಬಿ ಟೋಲ್ ಗೇಟಿನಲ್ಲಿ ಗೇಟ್ ಆಪರೇಟರ್ ಕೆಲಸ, ಸಾ|| ಸತ್ಯನಾರಾಯಣ ನಿಲಯ, ವಾಸವಿ ಶಾಲೆಯ ಹಿಂಭಾಗ, ಖಾಜಿ ಮೊಹಲ್ಲಾ, ಚಿತ್ರದುರ್ಗ ರವರು ದಿನಾಂಕ: 29-03-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 72/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹ್ಮದ್ ಹಾಷಮ್ ತಂದೆ ಕಮಾಲುದ್ದೀನ್ ಶೇಖ್, ಪ್ರಾಯ-27 ವರ್ಷ, ವೃತ್ತಿ-ಬ್ಯಾಂಕ್ ಕೆಲಸ, ಸಾ|| ಇಂದಿರಾ ನಗರ, ಹುಬ್ಬಳ್ಳಿ ರೋಡ್, ತಾ: ಶಿರಸಿ (ಕಾರ್ ನಂ: ಕೆ.ಎ-21/ಎನ್-8703 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 27-03-2021 ರಂದು 13-30 ಗಂಟೆಗೆ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-69 ನೇದರಲ್ಲಿ ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-21/ಎನ್-8703 ನೇದನ್ನು ಶಿರಸಿ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ದೇವಿಮನೆ ರಸ್ತೆಯ ತಿರುವಿನಲ್ಲಿ ಕುಮಟಾ ಕಡೆಯಿಂದ ಶಿರಸಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಪಿರ್ಯಾದಿಯ ಭಾವನಾದ ಶ್ರೀನಿವಾಸ| ಗುಡಿಗಾರ ಇವರ ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-7500 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುವುದರಿಂದ ಮೋಟಾರ್ ಸೈಕಲ್ ಸಮೇತವಾಗಿ ರಸ್ತೆಯಲ್ಲಿ ಬಿದ್ದು, ಶ್ರೀನಿವಾಸ ಇವರ ಬಲಗಾಲು ಮುರಿಯಲು ಹಾಗೂ ವಾಹನಗಳು ಜಖಂ ಆಗಲು ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ರಮೇಶ ಗುಡಿಗಾರ, ಪ್ರಾಯ-39 ವರ್ಷ, ವೃತ್ತಿ-ಗುಡಿಗಾರ, ಸಾ|| ತೆರ್ನಮಕ್ಕಿ, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 29-03-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 54/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಫಕ್ಕಿರಪ್ಪ ಶಿಗ್ಗಾವಿ, ಸಾ|| ಎಲ್.ಐ.ಜಿ-12, ನ್ಯೂ ಕಾಲೋನಿ, ಹಬ್ಬುವಾಡ, ಕಾರವಾರ (ಮೋಟಾರ್ ಸೈಕಲ್ ನಂ: ಕೆ.ಎ-30/ಆರ್-4417 ನೇದರ ಸವಾರ). ನಮೂದಿತ ಆರೋಪಿತನು ದಿನಾಂಕ: 29-03-2021 ರಂದು 16-30 ಗಂಟೆಗೆ ಮಂಕಿಯ ಜಡ್ಡಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ತಿರುವಿನಲ್ಲಿ ತನ್ನ ಮೋಟಾರ್ ಸೈಕಲ್  ನಂ: ಕೆ.ಎ-30/ಆರ್-4417 ನೇದನ್ನು ಭಟ್ಕಳ ಕಡೆಯಿಂದ ಮಂಕಿ, ಹೊನ್ನಾವರ ಕಡೆಗೆ ಹೋಗಲು ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೊಗುತ್ತಿದ್ದಾಗ ಮೋಟಾರ್ ಸೈಕಲಿನ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ಬದಿಯಲ್ಲಿಟ್ಟ ಐ.ಆರ್.ಬಿ ಕಂಪನಿಯ ಸಿಗ್ನಲ್ ಬೋರ್ಡಿಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಮೇತ ರಸ್ತೆ ಬದಿಯಲ್ಲಿ ಬಿದ್ದು ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣುರ, ಪಿ.ಎಸ್.ಐ (ಕಾ&ಸು), ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 29-03-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 51/2021, ಕಲಂ: 283 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಚಿದಾನಂದ ತಂದೆ ನಿಜಗುಣಪ್ಪ ಕೋರಿ, ಪ್ರಾಯ-26 ವರ್ಷ, ವೃತ್ತಿ-ಚಾಲಕ, ಸಾ|| ತಡಹಾಳ, ತಾ: ನವಲಗುಂದ, ಧಾರವಾಡ (ಲಾರಿ ನಂ: ಕೆ.ಎ-63/3781 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 28-03-2021 ರಂದು 11-00 ಗಂಟೆಯಿಂದ ದಿನಾಂಕ: 29-03-2021 ರಂದು 16-00 ಗಂಟೆಯವರೆಗೆ ಯಲ್ಲಾಪುರ ತಾಲೂಕಿನ ಅರಬೈಲ್ ಊರಿನ ಶ್ರೀ ಮಾರುತಿ ದೇವಸ್ಥಾನದ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಲಾರಿ ನಂ: ಕೆ.ಎ-63/3781 ನೇದನ್ನು ಯಾವುದೇ ಸಿಗ್ನಲ್ ಹಾಕದೇ ರಸ್ತೆಯ ಮೇಲೆ ನಿಲ್ಲಿಸಿಟ್ಟು ಇತರೇ ವಾಹನಗಳ ಸಂಚಾರಕ್ಕೆ ಅಡೆ-ತಡೆಯಾಗುವಂತೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ವಿಠ್ಠಲ ಪಿ. ಮಲವಾಡಕರ, ಪ್ರಾಯ-46 ವರ್ಷ, ವೃತ್ತಿ-ಸಹಾಯಕ ಪೊಲೀಸ್ ಉಪ ನಿರೀಕ್ಷಕರು, ಸಾ|| ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 29-03-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 17/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಕೇಶ ಕುಮಾರ ತಂದೆ ನಾಗರಾಜ ಪಿ, ಪ್ರಾಯ-34 ವರ್ಷ, ವೃತ್ತಿ-ಚಾಲಕ, ಸಾ|| 2 ನೇ ಕಾಲೋನಿ, ಅಂಬಿಕಾನಗರ, ದಾಂಡೇಲಿ, ಹಾಲಿ ಸಾ|| ಕುಳಗಿ, ತಾ: ಹಳಿಯಾಳ (ಮಹೀಂದ್ರಾ ಬೊಲೆರೋ ವಾಹನ ನಂ: ಕೆ.ಎ-65/ಎಮ್-0942 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 28-03-2021 ರಂದು ಸಂಜೆ 05-00 ಗಂಟೆಯ ಸುಮಾರಿಗೆ ತಾನೂ ಚಾಲನೆ ಮಾಡುತ್ತಿದ್ದ ಮಹೀಂದ್ರಾ ಬೊಲೆರೋ ವಾಹನ ನಂ: ಕೆ.ಎ-65/ಎಮ್-0942 ನೇದನ್ನು ಅಂಬಿಕಾನಗರ ಕಡೆಯಿಂದ ದಾಂಡೇಲಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಾಲನೆ ಮಾಡಿಕೊಂಡು ಬರುತ್ತಾ ಬಡಾಕಾನಶಿರಡಾ ಗ್ರಾಮದ ವಾಟರ್ ಟ್ಯಾಂಕ್ ಹತ್ತಿರ ವಾಹನದ ಚಾಲನೆಯ ಮೇಲಿನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕ ಇದ್ದ ಕಾಲುವೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ವಾಹನದಲ್ಲಿದ್ದ ಪಿರ್ಯಾದಿಯ ಎಡಗೈ ಮೊಣಕೈ ಹತ್ತಿರ ಒಳನೋವು ಪಡಿಸಿದ್ದಲ್ಲದೇ, ಗದ್ದಕ್ಕೆ ಮತ್ತು ಹಣೆಗೆ ಸಾದಾ ಗಾಯನೋವು ಪಡಿಸಿದ್ದು ಹಾಗೂ ರಾಮು ತಂದೆ ಬಾಗು ತಾಟೆ ಈತನ ಮೇಲ್ತುಟಿಗೆ ಮತ್ತು ಗದ್ದಕ್ಕೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ದೇವು ತಂದೆ ಬೀರು ಜೋರೆ, ಪ್ರಾಯ-24 ವರ್ಷ, ವೃತ್ತಿ-ಅಂಬಿಕಾನಗರ ಕೆ.ಪಿ.ಸಿ.ಎಲ್ ನಲ್ಲಿ ಸೆಕ್ಯೂರಿಟಿ ಕೆಲಸ, ಸಾ|| ಕುಳಗಿ, ತಾ: ಹಳಿಯಾಳ ರವರು ದಿನಾಂಕ: 29-03-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 29-03-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 16/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಶಫಿವುಲ್ಲಾ ತಂದೆ ಅಬ್ದುಲ್ ಜಬ್ಬಾರ್ ಮಾಂಡ್ಲೀಕ್, ಪ್ರಾಯ-70 ವರ್ಷ, ವೃತ್ತಿ-ಆಟೋ ರಿಕ್ಷಾ ಚಾಲಕ, ಸಾ|| ಹುಲಿದೇವರವಾಡಾ, ತಾ: ಅಂಕೋಲಾ. ನಮೂದಿತ ಮೃತನು ಆಟೋ ರಿಕ್ಷಾ ಓಡಿಸಿಕೊಂಡಿದ್ದವನು, ಬಹಳ ದಿನಗಳಿಂದ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಚಿಂತಿಸುತ್ತಿದ್ದವರು. ದಿನಾಂಕ: 28-03-2021 ರಂದು 23-00 ಗಂಟೆಯಿಂದ ದಿನಾಂಕ: 29-03-2021 ರಂದು ಬೆಳಗಿನ ಜಾವ 04-00 ಗಂಟೆಯ ನಡುವಿನ ವೇಳೆಯಲ್ಲಿ ಮನೆಯಲ್ಲಿ ಎಲ್ಲರೂ ಮಲಗಿದ ವೇಳೆಯಲ್ಲಿ ತಾನು ವಾಸವಾಗಿರುವ ಮನೆಯ ಹಿಂದಿನ ಪಾತ್ರೆ ತೊಳೆಯುವ ಶೆಡ್ಡಿನ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ಜಬ್ಬಾರ್ ತಂದೆ ಶಫಿವುಲ್ಲಾ ಮಾಂಡ್ಲಿಕ್, ಪ್ರಾಯ-43 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಹುಲಿದೇವರವಾಡಾ, ತಾ: ಅಂಕೋಲಾ ರವರು ದಿನಾಂಕ: 29-03-2021 ರಂದು 07-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 17/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಶ್ರೀಪಾದ ತಂದೆ ಗಣಪತಿ ಹೆಗಡೆ, ಪ್ರಾಯ-49 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೋನಾಳ, ಕಲ್ಲೇಶ್ವರ, ತಾ: ಅಂಕೋಲಾ. ನಮೂದಿತ ಮೃತನು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದವನು, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 28-03-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 29-03-2021 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಅಂಕೋಲಾ ತಾಲೂಕಿನ ಕೋನಾಳದಲ್ಲಿರುವ ತನ್ನ ಮನೆಯ ಮುಂದಿನ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಂಡು ಮೃತದೇಹವನ್ನು ಬಿಟ್ಟುಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಗಜಾನನ ತಂದೆ ಗಣಪತಿ ಹೆಗಡೆ, ಪ್ರಾಯ-52 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕೋನಾಳ, ಕಲ್ಲೇಶ್ವರ, ತಾ: ಅಂಕೋಲಾ ರವರು ದಿನಾಂಕ: 29-03-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ರಾಮಾ ತಂದೆ ಶಿವಪ್ಪಾ ಪಟಗಾರ, ಪ್ರಾಯ-38 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ, ಸಾ|| ಹೊಳೆಗದ್ದೆ, ತಾ: ಕುಮಟಾ. ನಮೂದಿತ ಮೃತನು ಪಿರ್ಯಾದಿಯ ತಮ್ಮನಾಗಿದ್ದು, ಈತನು ವಿಪರೀತ ಸರಾಯಿ ಕುಡಿಯುವ ಚಟವನ್ನು ಕಲಿತಿದ್ದು, ಆತನು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡೋ ಅಥವಾ ಇನ್ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆ ಹೊಂದಿ, ದಿನಾಂಕ: 28-03-2021 ರಂದು ಬೆಳಿಗ್ಗೆ 06-30 ಗಂಟೆಯಿಂದ ದಿನಾಂಕ: 29-03-2021 ರಂದು 08-30 ಗಂಟೆಯ ನಡುವಿನ ಅವಧಿಯಲ್ಲಿ ಹಂದಿಗೋಣ ಗೋರೆ ಗುಡ್ಡದಲ್ಲಿರುವ ಮಾವಿನ ಮರಕ್ಕೆ ಲುಂಗಿಯಿಂದ ಕುತ್ತಿಗೆಗೆ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳುವ ಬಗ್ಗೆ ಪಿರ್ಯಾದಿ ಶ್ರೀ ಮಾದೇವ ತಂದೆ ಶಿವಪ್ಪಾ ಪಟಗಾರ, ಪ್ರಾಯ-42 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೊಳೆಗದ್ದೆ, ತಾ: ಕುಮಟಾ ರವರು ದಿನಾಂಕ: 29-03-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ಇತ್ತೀಚಿನ ನವೀಕರಣ​ : 30-03-2021 06:35 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080