ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 29-05-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 90/2021, ಕಲಂ: 3, 7 ಅತ್ಯಾವಶ್ಯಕ ಸರಕುಗಳ ಅಧಿನಿಯಮ-1955 ನೇದ್ದರ ವಿವರ...... ನಮೂದಿತ ಆರೋಪಿತನು ಟಾಟಾ ಏಸ್ ವಾಹನ ನಂ: ಕೆ.ಎ-30/ಎ-0066 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ನಮೂದಿತ ಆರೋಪಿತನು ದಿನಾಂಕ: 28-05-2021 ರಂದು ಸಂಜೆ 07-15 ರಂದು ಅಂಕೋಲಾ ತಾಲೂಕಿನ ಕೆಳಗಿನ ಮಂಜಗುಣಿಯ ಖಾರ್ವಿವಾಡಾದಲ್ಲಿ ತನ್ನ ಟಾಟಾ ಏಸ್ ವಾಹನ ನಂ: ಕೆ.ಎ-30/ಎ-0066 ನೇದರಲ್ಲಿ ಅಂದಾಜು ಸುಮಾರು 15,000/- ರೂಪಾಯಿ ಮೌಲ್ಯದ ಅಂದಾಜು 08-09 ಕ್ವಿಂಟಾಲ್ ತೂಕದ 29 ಚೀಲಗಳಲ್ಲಿ ಪಡಿತತರ ಅಕ್ಕಿಯನ್ನು ಅಕ್ರಮವಾಗಿ ಎಲ್ಲಿಂದಲೋ ತನ್ನ ವಾಹನದಲ್ಲಿ ತುಂಬಿಕೊಂಡು ಬಂದು ಎಲ್ಲಿಗೋ ಸಾಗಾಟ ಮಾಡುತ್ತಿದ್ದಾಗ ಆರೋಪಿ ಚಾಲಕನು ತನ್ನ ವಾಹನವನ್ನು ಬಿಟ್ಟು ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಶಂಕರ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಕಂದಾಯ ನಿರೀಕ್ಷಕರು, ಬಾಸಗೋಡ, ಅಂಕೋಲಾ, ಸಾ|| ಕುಂಬಾರಕೇರಿ, ತಾ: ಅಂಕೋಲಾ ರವರು ದಿನಾಂಕ: 29-05-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 81/2021, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಬಿಳಿ ಬಣ್ಣದ ಬೊಲೆರೋ ವಾಹನದ ಚಾಲಕನಾಗಿದ್ದು, ವಾಹನದ ನಂಬರ್ ಹಾಗೂ ಚಾಳಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 29-05-2021 ರಂದು 19-45 ಗಂಟೆಗೆ ಹೊಸಪಟ್ಟಣ ಕ್ರಾಸದಲ್ಲಿಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ಯಾವುದೋ ಬಿಳಿ ಬಣ್ಣದ ಬೊಲೆರೋ ವಾಹನದ ಆರೋಪಿ ಚಾಲಕನು ತನ್ನ ವಾಹನವನ್ನು ಹೊನ್ನಾವರ ಕಡೆಯಿಂದ ಹೊಸಪಟ್ಟಣ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಹೊನ್ನಾವರ ಕಡೆಯಿಂದ ಇಡಗುಂಜಿ ಕಡೆಗೆ ಹೋಗಲು ಬರುತ್ತಿದ್ದ ಪಿರ್ಯಾದಿಯು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಕ್ಯೂ-5933 ನೇದಕ್ಕೆ ಹಿಂಭಾಗದಲ್ಲಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಗೆ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಕೆಡವಿ, ಪಿರ್ಯಾದಿಯ ಮೂಗಿಗೆ ಹಾಗೂ ಎಡಗೈ ಭುಜಕ್ಕೆ ಒಳನೋವು ಪಡಿಸಿದ್ದಲ್ಲದೇ, ಬಲಗಾಲ ಮೊಣಗಂಟಿನ ಕೆಳಗೆ ಗಾಯ ಪಡಿಸಿ, ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊಸಪಟ್ಟಣದ ಕಡೆಗೆ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮನೋಜ ತಂದೆ ಗಣಪತಿ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ಹೊಟೇಲ್ ವ್ಯಾಪಾರ, ಸಾ|| ಕುಳಿಮನೆ, ಮೇಲಿನ ಇಡಗುಂಜಿ, ತಾ: ಹೊನ್ನಾವರ ರವರು ದಿನಾಂಕ: 29-05-2021 ರಂದು 23-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 49/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಸೋಮಯ್ಯ ತಂದೆ ದುರ್ಗಯ್ಯ ದೇವಡಿಗ, ಪ್ರಾಯ-68 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾವೇರಿ ಸೋಮಯ್ಯನ ಮನೆ, ಮೋಚಿ ಮನೆ, ದೇವಿಕಾನ್, ಬಸ್ತಿ, ಕಾಯ್ಕಿಣಿ, ತಾ: ಭಟ್ಕಳ. ಪಿರ್ಯಾದಿಯ ತಂದೆಯವರಾದ ಇವರು ದಿನಾಂಕ: 25-05-2021 ರಂದು ಬೆಳಿಗ್ಗೆ 06-00 ಗಂಟೆಗೆ ಬಸ್ತಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು, ರಾತ್ರಿಯಾದರೂ ಮನೆಗೆ ಬಾರದೇ ಇದ್ದುದರಿಂದ ಅವರ ಹತ್ತಿರ ಮೊಬೈಲ್ ಇಲ್ಲದೇ ಇರುವುದರಿಂದ ಮಾಹಿತಿ ಸಿಗದ ಕಾರಣ ಪಿರ್ಯಾದಿ ಮತ್ತು ಪಿರ್ಯಾದಿಯ ಮನೆಯ ಜನರು ಸೇರಿ ಅಕ್ಕಪಕ್ಕದ ಊರಿನಲ್ಲಿ, ಸಂಬಂಧಿಕರಲ್ಲಿ ಚೌಕಾಶಿ ಮಾಡಿದ್ದರಲ್ಲಿ ತಂದೆಯವರ ಸುಳಿವು ಸಿಗಲಿಲ್ಲ. ಪಿರ್ಯಾದಿದಾರರ ತಂದೆಯವರು ಬಸ್ತಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೂ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ. ಕಾರಣ ಕಾಣೆಯಾದ ತನ್ನ ತಂದೆಯವರನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಮಹಾಬಲೇಶ್ವರ ತಂದೆ ಸೋಮಯ್ಯ ದೇವಡಿಗ, ಪ್ರಾಯ-36 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾವೇರಿ ಸೋಮಯ್ಯನ ಮನೆ, ಮೋಚಿ ಮನೆ, ದೇವಿಕಾನ್, ಬಸ್ತಿ, ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 29-05-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 92/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಲಕ್ಕು ತಂದೆ ರಾಮು ಕೊಕ್ಕರೆ, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ದೊಡ್ಡ ಯಲವಳ್ಳಿ, ಪೋ: ಕಿರವತ್ತಿ, ತಾ: ಯಲ್ಲಾಪುರ (ಎಚ್.ಎಮ್.ಟಿ ಟ್ಯಾಕ್ಟರ್ ವಾಹನ ನಂ: ಕೆ.ಎ-31/ಟಿ-2872 ನೇದರ ಚಾಲಕ). ಈತನು ದಿನಾಂಕ: 07-05-2021 ರಂದು ಸಮಯ ಸುಮಾರು 16-30 ಗಂಟೆಗೆ ಯಲ್ಲಾಪುರ ತಾಲೂಕಿನ ಹೊಸಳ್ಳಿ ಗ್ರಾಮದ ಪಿರ್ಯಾದಿಯವರ ಜಮೀನಿನಲ್ಲಿ ರಂಟೆ ಹೊಡೆಯಲು ಬಂದವನು, ತನ್ನ ಬಾಬ್ತು ಎಚ್.ಎಮ್.ಟಿ ಟ್ಯಾಕ್ಟರ್ ವಾಹನ ನಂ: ಕೆ.ಎ-31/ಟಿ-2872 ನೇದರಲ್ಲಿ ಪಿರ್ಯಾದಿಯವರ ತಂದೆಯವರಾದ ಶಿವರಾಯ ಇವರಿಗೆ ತನ್ನ ಪಕ್ಕದ ಸೀಟಿನಲ್ಲಿ ಕೂಡ್ರಿಸಿಕೊಂಡು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ, ವಾಹನವನ್ನು ನಿಯಂತ್ರಿಣದಲ್ಲಿಟ್ಟುಕೊಳ್ಳಲಾಗದೇ, ಜಮೀನಿನಲ್ಲಿರುವ ಒಡ್ಡಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ವಾಹನವನ್ನು ಪಲ್ಟಿ ಕೆಡವಿದರಿಂದ ವಾಹನದಲ್ಲಿದ್ದ ಸಾಕ್ಷಿದಾರರಾದ ಶ್ರೀ ಶಿವರಾಯ ತಂದೆ ಬಸವೆಣ್ಣೆಪ್ಪಾ ಖಿಲಾರಿ, ಸಾ|| ಹೊಸಳ್ಳಿ, ತಾ: ಯಲ್ಲಾಪುರ ಇವರಿಗೆ ಎಡಬದಿಯ ಕೈಗೆ, ಬಲಗೈಗೆ ಮತ್ತು ಬಲಬದಿಯ ಕಾಲಿನ ತೊಡೆಯ ಹತ್ತಿರ ರಕ್ತದ ಗಾಯನೋವು ಪಡಿಸಿ, ವಾಹನವನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಲ್ಲೇಶ ತಂದೆ ಶಿವರಾಯ ಖಿಲಾರಿ, ಪ್ರಾಯ-23 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಹೊಸಳ್ಳಿ, ತಾ: ಯಲ್ಲಾಪುರ ರವರು ದಿನಾಂಕ: 29-05-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 35/2021, ಕಲಂ: 325, 341, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಡೆರಿಕ್ ತಂದೆ ಜೂಜಾಂತೋನ್ ಫರ್ನಾಂಡೀಸ್, ಪ್ರಾಯ-45 ವರ್ಷ, ಸಾ|| ರಾಮನಬೈಲ್, ತಾ: ಶಿರಸಿ. ಈತನು ದಿನಾಂಕ: 28-05-2021 ರಂದು 21-30 ಗಂಟೆಯ ಸುಮಾರಿಗೆ ಶಿರಸಿ ಶಹರದ ರಾಮನಬೈಲಿನ ಪಿರ್ಯಾದಿಯ ಮನೆಯ ಎದುರಿಗೆ ಬಂದವನು ಹಣ ನೀಡುವ ವಿಚಾರದಲ್ಲಿ ಪಿರ್ಯಾದಿಗೆ ‘ಬೋಳಿ ಮಗನೇ, ಸೂಳೆ ಮಗನೇ, ಬೇವರ್ಸಿ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಅಡ್ಡಗಟ್ಟಿ ತಡೆದು ನೀಲ್ಲಿಸಿ, ದೂಡಿ ಹಾಕಿ ಎಡಗೈಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿ, ‘ಈ ದಿನ ಉಳಿದುಕೊಂಡಿದ್ದಿಯಾ. ಇನ್ನೊಂದು ದಿನ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾದಿ ಶ್ರೀ ಆಗ್ನೇಲ್ ತಂದೆ ಬಸ್ತ್ಯಾಂವ್ ಫರ್ನಾಂಡೀಸ್, ಪ್ರಾಯ-63 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರಾಮನಬೈಲ್, ತಾ: ಶಿರಸಿ ರವರು ದಿನಾಂಕ: 29-05-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 49/2021, ಕಲಂ: 4, 5, 7, 12 The Karnataka Prevention of Slaughter and Preservation of Cattle act-2020 ಹಾಗೂ ಕಲಂ: 11 (1)(d)(e)(f)(h), 12 The Prevention of Cruelty to Animals Act-1960 ಮತ್ತು ಕಲಂ: 192(a) Indian Motor Vehicle Act-1988 ನೇದ್ದರ ವಿವರ...... ನಮೂದಿತ ಆರೋಪಿತರು 1]. ಶಾಂತಪ್ಪ ಲಕ್ಷ್ಮಣಪ್ಪ ಹುಲ್ಯಾಳ, ಪ್ರಾಯ-38 ವರ್ಷ, ವೃತ್ತಿ-ತರಕಾರಿ ವ್ಯಾಪಾರ, ಸಾ|| ಚಿಕ್ಕಾಂಶಿ ಹೊಸೂರು, ತಾ: ಹಾನಗಲ್, ಜಿ: ಹಾವೇರಿ, 2]. ಪ್ರಶಾಂತ ಹನುಮಂತಪ್ಪ ಭಂಡಾರಿ, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| ಚಿಕ್ಕಾಂಶಿ ಹೊಸೂರು, ತಾ: ಹಾನಗಲ್, ಜಿ: ಹಾವೇರಿ, 3]. ದತ್ತು ವಿಠ್ಠಲ್ ನಾಯ್ಕ, ಪ್ರಾಯ-63 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಪಡಂಬೈಲ್, ತೆರಕನಳ್ಳಿ ಗ್ರಾಮ, ತಾ: ಶಿರಸಿ, 4]. ಮಾದೇವ ಪೂಜಾರಿ, ಅಂದಾಜು ಪ್ರಾಯ-50 ವರ್ಷ, ಸಾ|| ಪಡಂಬೈಲ್, ತೆರಕನಳ್ಳಿ ಗ್ರಾಮ, ತಾ: ಶಿರಸಿ, 5]. ಇಮ್ಮು ಬೇಪಾರಿ, ಅಂದಾಜು ಪ್ರಾಯ-30 ವರ್ಷ, ಸಾ|| ಚಿಕ್ಕಾಂಶಿ ಹೊಸೂರು, ತಾ: ಹಾನಗಲ್, ಜಿ: ಹಾವೇರಿ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ಮತ್ತು 2 ನೇಯವರು ದಿನಾಂಕ: 29-05-2021 ರಂದು 06-15 ಗಂಟೆಯ ಸುಮಾರಿಗೆ 1) ಅಂದಾಜು 2 ವರ್ಷದ ಕಂದು ಬಣ್ಣದ ಆಕಳು ಕರು-1, ಅ||ಕಿ|| 2,100/- ರೂಪಾಯಿ, 2). ಅಂದಾಜು ಒಂದೂವರೆ ವರ್ಷದ ಕಪ್ಪು ಬಣ್ಣದ ಮರಿ ಕೋಣ, ಅ||ಕಿ|| 2,000/- ರೂಪಾಯಿ. ಇವುಗಳನ್ನು ಆರೋಪಿ 5 ನೇಯವರ ನಿರ್ದೇಶನದ ಮೇರೆಗೆ ಆರೋಪಿ 3 ಮತ್ತು 4 ನೇಯವರಿಂದ ಖರೀದಿಸಿಕೊಂಡು ಶಿರಸಿ-ಕುಳುವೆ ರಸ್ತೆಯ ತೆರಕನಳ್ಳಿ ಗ್ರಾಮದ ಪಡಂಬೈಲ್ ಎಂಬಲ್ಲಿಂದ ಮಹೀಂದ್ರಾ ಜೀತೋ ಪ್ಲಸ್ ಹೆಸರಿನ ವಾಹನ ನಂ: ಕೆ.ಎ-27/ಸಿ-3133 ನೇದರಲ್ಲಿ ಯಾವುದೇ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಅಕ್ರಮವಾಗಿ ತುಂಬಿಕೊಂಡು ಅವುಗಳಿಗೆ ಮೇವು, ನೀರು ನೀಡದೇ, ಸರಿಯಾಗಿ ಮಲಗಲು ವ್ಯವಸ್ಥೆ ಮಾಡದೇ, ಇಕ್ಕಟ್ಟಾಗಿ ಹಿಂಸಾತ್ಮಕ ರೀತಿಯಲ್ಲಿ ಒತ್ತೊತ್ತಾಗೆ ಹಗ್ಗದಿಂದ ಕಟ್ಟಿಕೊಂಡು ಪಡಂಬೈಲ್ ಕಡೆಯಿಂದ ಶಿರಸಿ ಮಾರ್ಗವಾಗಿ ಹಾನಗಲ್ ಕಡೆಗೆ ಬಲಿ ಕೊಡುವ ಸಲುವಾಗಿ ಸಾಗಾಟ ಮಾಡಿಕೊಂಡು ಹೊರಟಿದ್ದಾಗ ಪಡಂಬೈಲ್ ಕ್ರಾಸ್ ಹತ್ತಿರ ಸಿಕ್ಕ ಬಗ್ಗೆ ಪಿರ್ಯಾದಿ ಶ್ರೀ ಈರಯ್ಯ ಡಿ. ಎನ್, ಪಿ.ಎಸ್.ಐ (ಕಾ&ಸು), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 29-05-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 61/2021, ಕಲಂ: 323, 3244, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ತನ್ವೀರ್ ತಂದೆ ಹುಸೇನ್ ಸಾಬ್, ಪ್ರಾಯ-27 ವರ್ಷ, ಸಾ|| ಜಾತಿಕಟ್ಟಾ, ಮುಗದೂರ ಕ್ರಾಸ್ ಹತ್ತಿರ, ತಾ: ಸಿದ್ದಾಪುರ. ಈತನು ಪಿರ್ಯಾದಿಯ ಮನೆಯ ಹತ್ತಿರದವನಿದ್ದು, ಪಿರ್ಯಾದಿಯು ಆರೋಪಿತನ ಚಿಕ್ಕಪ್ಪನಿಗೆ ಸಂಬಂಧಪಟ್ಟ ಜಾಗದ ಬೇಲಿಯನ್ನು ಮುರಿದು ಹಾಕಿದ್ದಾನೆ ಎಂದು ಮತ್ತು ಜಾಗವನ್ನು ಅತಿಕ್ರಮಿಸುತ್ತಿದ್ದಾನೆ ಅಂತಾ ತಿಳಿದು, ದಿನಾಂಕ: 29-05-2021 ರಂದು 13-15 ಗಂಟೆಗೆ ಪಿರ್ಯಾದಿಯ ಮನೆಯ ಹತ್ತಿರ ಬಂದು ಅವನೊಂದಿಗೆ ಮಾತನಾಡುತ್ತಾ ‘ಚಿಕ್ಕಪ್ಪನ ಜಾಗವನ್ನು ಅತಿಕ್ರಮಿಸುತಿದ್ದೀಯಾ, ಬೋಸಡಿ ಮಗನೇ?’ ಅಂತಾ ಅವಾಚ್ಯವಾಗಿ ಬೈಯ್ದು, ಕೈಯಿಂದ ಪಿರ್ಯಾದಿಯ ಎಡಭುಜಕ್ಕೆ ಗುದ್ದಿದ್ದಲ್ಲದೇ, ಕಲ್ಲಿನಿಂದ ತಲೆಗೆ ಹೊಡೆದು, ದೊಣ್ಣೆಯಿಂದ ಎಡಭುಜಕ್ಕೆ ಹೊಡೆದನು. ಅಲ್ಲದೇ ಬಾಯಿ ಹಾಕಿ ಹಲ್ಲಿನಿಂದ ಗದ್ದಕ್ಕೆ ಹಾಗೂ ಎಡಭುಜಕ್ಕೆ ಗುದ್ದಿರುತ್ತಾನೆ. ಅಲ್ಲದೇ ಘಟನೆಯ ಕಾಲಕ್ಕೆ ಬಿಡಿಸಲು ಬಂದ ಪಿರ್ಯಾದಿಯ ಹೆಂಡತಿಗೆ ದೂಡಿ ಹಾಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸೈಯ್ಯದ್ ನಿಸಾರ್ ತಂದೆ ಗೌಶಾಸಾಬ್, ಪ್ರಾಯ-48 ವರ್ಷ, ವೃತ್ತಿ-ಹಣ್ಣಿನ ವ್ಯಾಪಾರ, ಸಾ|| ಜಾತಿಕಟ್ಟಾ, ತಾ: ಸಿದ್ದಾಪುರ ರವರು ದಿನಾಂಕ: 29-05-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 62/2021, ಕಲಂ: 323, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸೈಯ್ಯಸ್ ನಿಸಾರ್ ತಂದೆ ಗೌಶಾಸಾಬ್, ಪ್ರಾಯ-48 ವರ್ಷ, ವೃತ್ತಿ-ಹಣ್ಣಿನ ವ್ಯಾಪಾರ, ಸಾ|| ಜಾತಿಕಟ್ಟಾ, ತಾ: ಸಿದ್ದಾಪುರ. ಈತನು ಪಿರ್ಯಾದಿಯ ಮನೆಯ ಹತ್ತಿರದವನಿದ್ದು, ಅವನ ಮನೆಯ ಹತ್ತಿರ ಪಿರ್ಯಾದಿಯ ಚಿಕ್ಕಪ್ಪನಿಗೆ ಸಂಬಂಧಪಟ್ಟ ಜಾಗಕ್ಕೆ ಪಿರ್ಯಾದಿಯು ಬೇಲಿಯನ್ನು ಹಾಕಿದ್ದನು, ಅದು ಮುರಿದು ಹೋಗಿದ್ದರಿಂದ ಪಿರ್ಯಾದಿಯು ದಿನಾಂಕ: 29-05-2021 ರಂದು ಮಧ್ಯಾಹ್ನ 01-15 ಗಂಟೆಗೆ ಅವನ ಮನೆಯಿಂದ ಹಾದು ಹೋಗುತ್ತಿರುವಾಗ ಈ ಬಗ್ಗೆ ಅವನಿಗೆ ಕೇಳಿದ್ದಕ್ಕೆ ಆರೋಪಿತನು ಏಕಾಏಕಿ ಸಿಟ್ಟುಗೊಂಡು ಪಿರ್ಯಾದಿಯನ್ನು ಉದ್ದೇಶಿಸಿ ’ಸೂಳೆ ಮಗನೇ, ನನಗೆ ಏನ್ ಕೇಳ್ತಿ?’ ಅಂತಾ ಅವಾಚ್ಯವಾಗಿ ಬೈಯ್ದು, ಮೈಮೇಲೆ ಏರಿ ಬಂದು ದೂಡಿ ಹಾಕಿ, ರಾಡ್ ನಿಂದ ಪಿರ್ಯಾದಿಯ ತಲೆಗೆ ಹೊಡೆದುದ್ದಲ್ಲದೇ, ಬಾಯಿ ಹಾಕಿ ಹಲ್ಲಿನಿಂದ ಪಿರ್ಯಾದಿಯ ಬಲಗೈ ಮಧ್ಯದ ಬೆರಳಿಗೆ ಕಚ್ಚಿರುತ್ತಾನೆ. ಅಲ್ಲದೇ ಕೈಯಿಂದ ಎಡಹುಬ್ಬಿನ ಮೇಲೆ ಗುದ್ದಿರುತ್ತಾನೆ ಹಾಗೂ ಪಿರ್ಯಾದಿಗೆ ‘ನಿನಗೆ ಮರ್ಡರ್ ಮಾಡದೇ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ತನ್ವೀರ್ ತಂದೆ ಹುಸೇನ್ ಸಾಬ್, ಪ್ರಾಯ-27 ವರ್ಷ, ಸಾ|| ಜಾತಿಕಟ್ಟಾ, ಮುಗದೂರ ಕ್ರಾಸ್ ಹತ್ತಿರ, ತಾ: ಸಿದ್ದಾಪುರ ರವರು ದಿನಾಂಕ: 29-05-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 29-05-2021

at 00:00 hrs to 24:00 hrs

 

ಮಂಕಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 04/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಈಶ್ವರ ತಂದೆ ಪಾಂಡು ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಸಾರಸ್ವತಕೇರಿ ಕ್ರಾಸ್ ಏರಿಯಾ, ಮಂಕಿ, ತಾ: ಹೊನ್ನಾವರ. ಈತನು ದಿನಾಂಕ 29-05-2021 ರಂದು ಬೆಳಿಗ್ಗೆ 08-00 ಗಂಟೆಯಿಂದ ಮಧ್ಯಾಹ್ನ 15-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯ ಮುಂದೆ ಇರುವ ತನ್ನ ಸ್ವಂತ ಅಡಿಕೆ ಹಾಗೂ ತೆಂಗಿನ ತೋಟದಲ್ಲಿ ಒಣಗಿ ಬಿದ್ದಿರುವ ತೆಂಗಿನಕಾಯಿಗಳನ್ನು ಹೆಕ್ಕುತ್ತಾ ತೋಟದಲ್ಲಿದ್ದ ಬಾವಿ ಕಟ್ಟೆಯ ಪಕ್ಕದಲ್ಲಿ ಬಿದ್ದ ಒಣಗಿದ ತೆಂಗಿನಕಾಯಿ ಹೆಕ್ಕಲು ಅಂತಾ ಹೋದಾಗ ಮಳೆ ಬಿದ್ದು ಹಸಿಯಾಗಿದ್ದ ಮಣ್ಣಿನ ಮೇಲೆ ಆಕಸ್ಮಾತ್ ಆಗಿ ಕಾಲು ಜಾರಿ ಬಾವಿ ಕಟ್ಟೆಯ ಪಕ್ಕದ ಮಣ್ಣು ಕುಸಿದು ಸ್ಥಳದಲ್ಲಿ ಬಿದ್ದು, ಅಲ್ಲಿಂದ ಜಾರಿ ಹೋಗಿ ಬಾವಿಯ ನೀರಿನಲ್ಲಿ ಬಿದ್ದು ಮುಳುಗಿದವನು, ನೀರಿನಿಂದ ಮೇಲೆ ಬರಲಾಗದೇ ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀ ಪಾಂಡು ತಂದೆ ವೆಂಕಟ ನಾಯ್ಕ, ಪ್ರಾಯ-62 ವರ್ಷ, ವೃತ್ತಿ-ಗ್ರಾಮೀಣ ಡಾಕ್ ಸೇವಕ, ಸಾ|| ಸಾರಸ್ವತಕೇರಿ ಕ್ರಾಸ್ ಏರಿಯಾ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 29-05-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಬನವಾಸಿ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ದೇಯಶೀಲ ತಂದೆ ಸಿದ್ಧನಗೌಡ, ಪ್ರಾಯ-60 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗಡಗೇರಿ, ಸುಗಾವಿ, ತಾ: ಶಿರಸಿ. ಈತನು ಕಳೆದ 5-6 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದವನಿಗೆ, ಚಿಕಿತ್ಸೆಯ ಕುರಿತು ಶಿವಮೊಗ್ಗಾದ ಮಾನಸ ನರ್ಸಿಂಗ್ ಹೋಂ ನಿಂದ ಔಷಧೋಪಚಾರ ನಡೆಸಿದರೂ ಸಹ ಆಗಾಗ ಹುಚ್ಚುಹುಚ್ಚಾಗಿ ವರ್ತಿಸುತ್ತಿದ್ದವನು, ಅದೇ ಮಾನಸಿಕ ಖಾಯಿಲೆಯಿಂದ ಜೀವನದಲ್ಲಿ ಬೇಸತ್ತು ದಿನಾಂಕ: 29-05-2021 ರಂದು ಬೆಳಗಿನ ಜಾವ 02-30 ಗಂಟೆಯಿಂದ 05-30 ಗಂಟೆಯ ನಡುವಿನ ಅವಧಿಯಲ್ಲಿ ದನ ಕಟ್ಟಲು ಉಪಯೋಗಿಸುವ ನೈಲಾನ್ ಹಗ್ಗದಿಂದ ಗಡಗೇರಿಯ ಸಂತೋಷ ಅಂದ್ರು ಡಿ’ಸೋಜಾ ಅವರು ಹೊಸದಾಗಿ ಕಟ್ಟಿಸುತ್ತಿದ್ದ ಖಾಲಿ ಮನೆಯ ಹಿಂಭಾಗದ ಮೇಲ್ಛಾವಣಿಯ ಕಬ್ಬಿಣದ ಜಂತಿಗೆ ಕಟ್ಟಿ, ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ಶಿವರಾಜ ತಂದೆ ದೇಯಶೀಲ ಗೌಡ, ಪ್ರಾಯ-32 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಗಡಗೇರಿ, ಸುಗಾವಿ, ತಾ: ಶಿರಸಿ ರವರು ದಿನಾಂಕ: 29-05-2021 ರಂದು 07-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 31-05-2021 12:23 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080