ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 29-11-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 27/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಶೋಕ ತಂದೆ ಗಣಪತಿ ಗಜೀನಕರ, ಪ್ರಾಯ-57 ವರ್ಷ, ವೃತ್ತಿ-ಗುತ್ತಿಗೆದಾರರು, ಸಾ|| ಕೆ.ಇ.ಬಿ ಹತ್ತಿರ, ಹಣಕೋಣ, ಕಾರವಾರ (ಮೋಟಾರ್ ಸೈಕಲ್ ನಂ: ಕೆ.ಎ-30/ಎಸ್-5056 ನೇದರ ಸವಾರ). ದಿನಾಂಕ: 16-11-2021 ರಂದು ಬೆಳಗ್ಗೆ 08-30 ಗಂಟೆಯಿಂದ 08-40 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯು ತನ್ನ ಮೋಟಾರ್ ಸ್ಕೂಟರ್ ನಂ: ಜಿ.ಎ-09/ಎಫ್-2999 ನೇದನ್ನು ಸೋನಾರವಾಡ ಕಡೆಯಿಂದ ದೇವಳಿವಾಡ ರಸ್ತೆಯ ಮುಖಾಂತರ ಗುರುಮಠ ಕಡೆಗೆ ತನ್ನ ಮೋಟಾರ್ ಸ್ಕೂಟರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ದೇವಾಳಿವಾಡ-ಗುರುಮಠ ರಸ್ತೆಯ ಕಿಶೋರ ಬಾಡಕರ ರವರ ಮನೆಯ ಹತ್ತಿರದ ತಿರುವಿನಲ್ಲಿ ಎದುರಿನಿಂದ ಬಂದಂತ ಮೋಟಾರ್ ಸೈಕಲ್ ನಂ: ಕೆ.ಎ-30/ಎಸ್-5056 ನೇದರ ಸವಾರನು ತನ್ನ ಮೋಟಾರ್ ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ರಸ್ತೆಯ ಎಡಬದಿಯಲ್ಲಿ ತನ್ನ ಮೋಟಾರ್ ಸ್ಕೂಟರನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಪಿರ್ಯಾದಿಯ ಮೋಟಾರ್ ಸ್ಕೂಟರಿನ ಮುಂದಿನ ಬಲಭಾಗಕ್ಕೆ ತನ್ನ ಮೋಟಾರ್ ಸೈಕಲಿನ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಗೆ ಎಡಗೈ ಮೊಣಕೈ ಗಂಟಿನ ಭಾಗಕ್ಕೆ ಪೆಟ್ಟು ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಸಂಜಯ ತಂದೆ ಗಣಪತಿ ಸಾಳುಂಕೆ, ಪ್ರಾಯ-54 ವರ್ಷ, ವೃತ್ತಿ-ವಕೀಲರು, ಸಾ|| ರಾಯ್ಕರ್ ಪ್ಲಾಜಾ, ಕೈಗಾ ರೋಡ್, ಹಬ್ಬುವಾಡ, ಕಾರವಾರ ರವರು ದಿನಾಂಕ: 29-11-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 209/2021, ಕಲಂ: 323, 353, 504 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಂತೋಷ ತಂದೆ ನರಸಿಂಹ ಉಪ್ಪಾರ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಇಂದಿರಾನಗರ, ಹಳದೀಪುರ, ತಾ: ಹೊನ್ನಾವರ. ಈತನು ದಿನಾಂಕ: 29-11-2021 ರಂದು ಮಧ್ಯಾಹ್ನ ಬಾಗಲಕೋಟೆ-ಭಟ್ಕಳ ಬಸ್ಸಿಗೆ ಶಿರಸಿಯಿಂದ ಕುಮಟಾಕ್ಕೆ ಹೋಗಲು ಬಂದು 16-15 ಗಂಟೆಗೆ ಕುಮಟಾ ಹೊಸ ಬಸ್ ಸ್ಟ್ಯಾಂಡ್ ಹತ್ತಿರ ಬಂದಾಗ ಪಿರ್ಯಾದಿಯವರು ಬಸ್ಸಿನಿಂದ ಕೆಳಕ್ಕೆ ಇಳಿದು ಪ್ರಯಾಣಿಕರಿಗೆ ಮರಳಿ ನೀಡಬೇಕಾದ ಚಿಲ್ಲರೆ ಹಣ ನೀಡುತ್ತಿರುವಾಗ, ಆರೋಪಿತನಿಗೆ ಹಾಗೂ ಇನ್ನೊಬ್ಬನಿಗೆ ಸೇರಿಸಿ 70/- ರೂಪಾಯಿ ಚಿಲ್ಲರೆ ನೀಡಿದಾಗ ಆರೋಪಿತನು ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಳಿ ಮಗನೇ ನನಗೆ  35/- ರೂಪಾಯಿ ಬೇರೆ ಕೊಡು. ಚಿಲ್ಲರೆ ಸರಿಯಾಗಿ ಕೊಡಲು ಆಗದಿದ್ದರೆ ನೌಕರಿ ಯಾಕೆ ಮಾಡುತ್ತಿಯಾ?’ ಅಂತಾ ಅವಾಚ್ಯವಾಗಿ ಬೈಯ್ದು, ಪಿರ್ಯಾದಿಯ ಶರ್ಟನ್ನು ಹಿಡಿದು ಎಳೆದು ಹರಿದು, ಕೈಯಿಂದ ಪಿರ್ಯಾದಿಯವರಿಗೆ ಕುತ್ತಿಗೆಗೆ ಹಾಗೂ ಕೆನ್ನೆಯ ಮೇಲೆ ಹೊಡೆದು ಹಲ್ಲೆ ಮಾಡಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಚನ್ನಪ್ಪಾ ತಂದೆ ಯಲ್ಲಪ್ಪಾ ಚೆಲುವಾದಿ, ಪ್ರಾಯ-35 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ (ಬಿಲ್ಲೆ ಸಂಖ್ಯೆ: 1195), ಭಟ್ಕಳ ಘಟಕ, ಸಾ|| ಅಂಬಲಕೊಪ್ಪಾ, ತಾ. ಹುನಗುಂದಾ, ಜಿ: ಬಾಗಲಕೋಟೆ ರವರು ದಿನಾಂಕ: 29-11-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 324/2021, ಕಲಂ: 323, 324, 341, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗೌರೀಶ ನಾರಾಯಣ ನಾಯ್ಕ, ಸಾ|| ಪಾವಿನಕುರ್ವಾ, ಕರ್ಕಿ, ತಾ: ಹೊನ್ನಾವರ, 2]. ಮಹೇಶ ಚನ್ನಪ್ಪ ನಾಯ್ಕ, ಸಾ|| ಕರ್ಕಿ, ನಡುಚಿಟ್ಟೆ, ತಾ: ಹೊನ್ನಾವರ, 3]. ಸುರೇಶ ಮೇಸ್ತಾ, ಸಾ|| ಪಾವಿನಕುರ್ವಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 29-11-2021 ರಂದು ಸಂಜೆ 19-30 ಗಂಟೆಯಿಂದ 19-45 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯವರು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿರುವಾಗ ಹೊನ್ನಾವರ ತಾಲೂಕಿನ ಕರ್ಕಿ ತೂಗು ಸೇತುವೆಯ ಹತ್ತಿರ ಪಿರ್ಯಾದಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ, ಪಿರ್ಯಾದಿಯೊಂದಿಗೆ ಮಾತಿಗೆ ಮಾತು ಬೆಳೆಸಿ ‘ಬೋಳಿ ಮಗನೇ, ಸೂಳಾ ಮಗನೇ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಪಿರ್ಯಾದಿಗೆ ದೂಡಾಡಿ ಕೈಯಿಂದ ಮುಖಕ್ಕೆ ಹಾಗೂ ಮೈಮೇಲೆ ಹೊಡೆದಿದ್ದು, ಆರೋಪಿ 3 ನೇಯವನು ಪಿರ್ಯಾದಿಗೆ ಕಲ್ಲಿನಿಂದ ಮುಖಕ್ಕೆ, ಬಾಯಿಗೆ ಹೊಡೆದು ಗಾಯನೋವು ಪಡಿಸಿದ್ದು ಇರುತ್ತದೆ, ಅಷ್ಟರಲ್ಲಿ ಊರ ಜನರು ಮತ್ತು ವಾಸು ಗೋವಿಂದ ನಾಯ್ಕ, ಸಾ|| ಕರ್ಕಿಹಿತ್ತಲ, ತಾ: ಹೊನ್ನಾವರ ಇವರು ಬಂದು ಪಿರ್ಯಾದಿಗೆ ಹೊಡೆಯುವದನ್ನು ತಪ್ಪಿಸಿದ್ದು, ಆಗ ಆರೋಪಿತರೆಲ್ಲರೂ ಸೇರಿ ಹೋಗುವಾಗ ಪಿರ್ಯಾದಿಗೆ ‘ಈ ದಿನ ತಪ್ಪಿಸಿಕೊಂಡೆ. ಇನ್ನೊಂದು ದಿನ ನಿನಗೊಂದು ಗತಿ ಕಾಣಿಸುತ್ತೇವೆ’ ಅಂತಾ ಹೇಳಿ ಹೋದ ಬಗ್ಗೆ ಪಿರ್ಯಾದಿ ಶ್ರೀ ರಾಮಾ ತಂದೆ ನಾಗೇಶ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಕಾರ್ಪೆಂಟರ್ ಕೆಲಸ, ಸಾ|| ಕರ್ಕಿ, ಹೆಗಡೆಹಿತ್ತಲ, ತಾ: ಹೊನ್ನಾವರ ರವರು ದಿನಾಂಕ: 29-11-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 153/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 27-11-2021 ರಂದು ಮಧ್ಯಾಹ್ನ 15-30 ಗಂಟೆಯಿಂದ ದಿನಾಂಕ: 28-11-2021 ರಂದು ರಾತ್ರಿ 22-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಮನೆಯ ಬಾಗಿಲನ್ನು ಬಲವಾದ ವಸ್ತುವಿನಿಂದ ಒಡೆದು, ಮನೆಯ ಒಳಗಡೆ ಇರುವ 02 ಅಲ್ಮೇರಾಗಳ ಬಾಗಿಲನ್ನು ತೆರೆದು, ಅಲ್ಮೇರಾದಲ್ಲಿದ್ದ 1). ಬಂಗಾರದ ತಾಳಿ-01, 12.00 ಗ್ರಾಂ ತೂಕ, ಅ||ಕಿ|| 50,000/- ರೂಪಾಯಿ, 2). ಬಂಗಾರದ ಕಿವಿ ಒಲೆ-03 ಜೊತೆ, 12.00 ಗ್ರಾಂ ತೂಕ, ಅ||ಕಿ|| 50,000/- ರೂಪಾಯಿ, 3). ನಗದು ಹಣ 15,000/- ರೂಪಾಯಿ. ಹೀಗೆ ಒಟ್ಟೂ ಅಂದಾಜು 24.00 ಗ್ರಾಂ ತೂಕದ ಅ||ಕಿ|| 1,00,000/- ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಮತ್ತು 15,000/- ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಯಶವಂತ ತಂದೆ ರಾಮಚಂದ್ರ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಸರ್ಕಾರಿ ನೌಕರ, ಸಾ|| ಕೆ.ಎಚ್.ಬಿ ಕಾಲೋನಿ, ರಂಗಿನಕಟ್ಟಾ, ತಾ: ಭಟ್ಕಳ ರವರು ದಿನಾಂಕ: 29-11-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 154/2021, ಕಲಂ: 66(ಸಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಹಾಗೂ ಕಲಂ: 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 25-11-2021 ರಂದು 18-30 ಗಂಟೆಗೆ ಪಿರ್ಯಾದಿಯವರ ವೈಯಕ್ತಿಕ ಮೊಬೈಲ್ ನಂ: 97410XXXXX ನೇದನ್ನು ಉಪಯೋಗಿಸಿ ಸಾಮಾಜಿಕ ಜಾಲತಾಣವಾದ ಪೇಸಬುಕ್ ನಲ್ಲಿ ‘ಕೇಸರಿ ಭಾರತ’ ಅಂತಾ ನಕಲಿ ಖಾತೆಯನ್ನು ತೆರೆದು, ಅದರಲ್ಲಿ ಪಿರ್ಯಾದಿಯವರು ಪೋಸ್ಟ್ ಮಾಡಿದ ಹಾಗೇ ಮಾಡಿ, ಪಿರ್ಯಾದಿಯವರಿಗೆ ತೇಜೋವಧೆ ಮಾಡಿದ್ದಲ್ಲದೇ, ಪಿರ್ಯಾದಿಯವರ ಮೊಬೈಲ್ ನಂ: 97410XXXXX ನೇದಕ್ಕೆ ಯಾರ್ಯಾರೋ ಪೋನ್ ಕರೆ ಮೂಲಕ ಪಿರ್ಯಾದಿಯವರಿಗೆ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಮೊಹಮ್ಮದ್ ಶಬಿ ತಂದೆ ಅಬ್ದುಲ್ ಖಾದಿರ್, ಪ್ರಾಯ-33 ವರ್ಷ, ವೃತ್ತಿ-ವ್ಯಾಪಾರ, ಸಾ|| ಅರ್ಬನ್ ಬ್ಯಾಂಕ್ ಹತ್ತಿರ, ಬಜಾರ್ ಬ್ರಾಂಚ್, 1 ನೇ ಪ್ಲೋರ್, ತಾ: ಭಟ್ಕಳ ರವರು ದಿನಾಂಕ: 29-11-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 183/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮುನೀರ್ ತಂದೆ ಮಹಮ್ಮದಸಾಬ್ ಬಳಗಾರ, ಪ್ರಾಯ-35 ವರ್ಷ, ವೃತ್ತಿ-ಮೀನು ವ್ಯಾಪಾರ, ಸಾ|| ಭಾಗವತಿ, ತಾ: ಹಳಿಯಾಳ, 2]. ಸೈಯ್ಯದಅಲಿ ತಂದೆ ಅಬ್ದುಲ್ ಹಮೀದ್ ಲಸ್ಕರವಾಲೆ, ಪ್ರಾಯ-35 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಗಾಂಧಿ ನಗರ, ದಾಂಡೇಲಿ. ಈ ನಮೂದಿತ ಆರೋಪಿತರುಗಳು ದಿನಾಂಕ: 29-11-2021 ರಂದು 19-30 ಗಂಟೆಗೆ ಹಳಿಯಾಳ ತಾಲೂಕಿನ ಭಾಗವತಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ತಮ್ಮ ತಮ್ಮ ಅಕ್ರಮ ಲಾಭಕ್ಕಾಗಿ ಬರುವ-ಹೋಗುವ ಜನರಿಗೆ ಕರೆದು, ಅದೃಷ್ಟ ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿರಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಹಣ ಕೊಡುತ್ತೇನೆ ಅಂತಾ ಜನರ ಮನವೊಲಿಸಿ ಅವರಿಂದ ಹಣ ಪಡೆದು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ದಾಳಿ ಕಾಲಕ್ಕೆ ಜೂಗಾರಾಟದ ಸಾಮಗ್ರಿಗಳಾದ 1). ನಗದು ಹಣ 2,350/- ರೂಪಾಯಿ, 2). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, 3) ಓ.ಸಿ ಅಂಕೆ-ಸಂಖ್ಯೆ ಬರೆದ ಚೀಟಿ-1, ಅ||ಕಿ|| 00.00/- ರೂಪಾಯಿ, 4). ಸಣ್ಣ ಕಾಗದದ ತುಣುಕುಗಳು-15, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಪಿರ್ಯಾದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ನಾವದಗಿ, ಪಿ.ಎಸ್.ಐ (ಎಲ್&ಓ), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 29-11-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 149/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಭೈರವಾ ತಂದೆ ರಾಮಾ ಚನ್ನಯ್ಯಾ, ಪ್ರಾಯ-35 ವರ್ಷ, ವೃತ್ತಿ-ಹೋಟೆಲ್ ಕೆಲಸ, ಸಾ|| ಹಲಗೇರಿ, ತಾ: ಸಿದ್ದಾಪುರ. ಪಿರ್ಯಾದಿಯ ಮಗನಾದ ಈತನು ಗುಲ್ಬರ್ಗಾದಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದವನು, ಆತನಿಗೆ ಆರೋಗ್ಯ ಸರಿ ಇಲ್ಲವೆಂದು ಕಳೆದ ಒಂದು ತಿಂಗಳ ಹಿಂದೆ ಮನೆಗೆ ವಾಪಾಸ್ ಬಂದಿದ್ದವನು, ಅಲ್ಲದೇ ಸ್ವಲ್ಪ ಮಾನಸಿಕವಾಗಿ ಅಸ್ವಸ್ಥನಾಗಿ ಹಲವಾರು ದೇವಸ್ಥಾನಗಳಿಗೆ ಹೋಗಿ ಬಂದಿದ್ದವನು, ದಿನಾಂಕ: 22-11-2021 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋಗಿ ಬರುವುದಾಗಿ ಹೇಳಿ ಹೋದವನು, ಈವರೆಗೆ ಮನೆಗೆ ವಾಪಸ್ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದ ತನ್ನ ಮಗನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಮಾ ತಂದೆ ಭೂತಾ ಚನ್ನಯ್ಯಾ, ಪ್ರಾಯ-66 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಲಗೇರಿ, ತಾ: ಸಿದ್ದಾಪುರ ರವರು ದಿನಾಂಕ: 29-11-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 29-11-2021

at 00:00 hrs to 24:00 hrs

 

ಜೋಯಿಡಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಷರೀಪ ಸಾಬ್ ತಂದೆ ಬುಡೆನಸಾಬ್, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಾರವಳ್ಳಿ, ತಾ: ಶಿಕಾರಿಪುರ, ಜಿ: ಶಿವಮೊಗ್ಗ. ಪಿರ್ಯಾದಿಯ ತಂದೆಯಾದ ಈತನು ಸಾರಾಯಿ ಕುಡಿಯುವ ಚಟದವನಿದ್ದು, ಕಳೆದ ಒಂದು ತಿಂಗಳ ಹಿಂದೆ ತನ್ನ ಮನೆ ಬಿಟ್ಟು ಬಂದವನು, ಸಾರಾಯಿ ಕುಡಿದು, ತನಗೆ ಉಟೋಪಚಾರ ಸರಿ ಇಲ್ಲದೇ, ಅನಾರೋಗ್ಯದಿಂದ ದಿನಾಂಕ: 29-11-2021 ರಂದು 11-00 ಗಂಟೆಗೆ ಜೋಯಿಡಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ, ನಂತರ ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸುವಷ್ಟರಲ್ಲಿ ದಿನಾಂಕ: 29-11-2021 ರಂದು 16-00 ಗಂಟೆಯ ಸುಮಾರಿಗೆ ಅನಾರೋಗ್ಯದಿಂದ ಮೃತಪಟ್ಟಿರುತ್ತಾನೆಯೇ ಹೊರತು ಅವನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಜಾಭಕ್ಷ ತಂದೆ ಷರೀಪ ಸಾಬ್, ಪ್ರಾಯ-21 ವರ್ಷ, ವೃತ್ತಿ-ಬಟ್ಟೆ ವ್ಯಾಪಾರ, ಸಾ|| ಮಾರವಳ್ಳಿ, ತಾ: ಶಿಕಾರಿಪುರ, ಜಿ: ಶಿವಮೊಗ್ಗ ರವರು ದಿನಾಂಕ: 29-11-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 07/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ದುರ್ಗಪ್ಪ ತಂದೆ ಹುಚ್ಚಪ್ಪ ಭೋವಿವಡ್ಡರ, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೋರಿಪೇಟೆ, ತಾ: ಸವಣೂರು, ಜಿ: ಹಾವೇರಿ. ಈತನು ಶಿರಸಿ ಶಹರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದವನು, ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡು ಅನಾರೋಗ್ಯದಿಂದ ಬಳಲುತ್ತಿದ್ದವನು, ಸರಿಯಾದ ಸಮಯಕ್ಕೆ ಊಟ ಮಾಡದೇ, ದಿನಾಂಕ: 29-11-2021 ರಂದು ಬೆಳಿಗ್ಗೆ 09-15 ಗಂಟೆಯ ಪೂರ್ವದಲ್ಲಿ ಶಿರಸಿ ಶಹರದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಎದುರಿಗೆ ಮೃತಪಟ್ಟಿದ್ದು ಇರುತ್ತದೆ. ಈ ಕುರಿತು ಮುಂದಿನ ಕಾನೂನು ಕ್ರಮಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಭೀಮಪ್ಪ ತಂದೆ ತಂದೆ ಹುಚ್ಚಪ್ಪ ಭೋವಿವಡ್ಡರ, ಸಾ|| ಮಾರುತಿ ದೇವಸ್ಥಾನದ ಹತ್ತಿರ, ಗಣೇಶ ನಗರ, ತಾ: ಶಿರಸಿ ರವರು ದಿನಾಂಕ: 29-11-2021 ರಂದು 10-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ವಿಜಯಕುಮಾರ ತಂದೆ ರಾವಸಾಬ್ ಚೌಗುಲಾ, ಪ್ರಾಯ-38 ವರ್ಷ, ವೃತ್ತಿ-ಹೋಟೆಲ್ ಕೆಲಸ, ಸಾ|| ಟೌನ್ ಶಿಪ್, ತಾ: ದಾಂಡೇಲಿ. ಪಿರ್ಯಾದಿಯ ಗಂಡನಾದ ಈತನು ತನಗೆ ಸೋರಿಯಾಸಿಸ್ ಕಾಯಿಲೆ ಇದ್ದ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದವನು, ದಿನಾಂಕ: 29-11-2021 ರಂದು 12-00 ಗಂಟೆಯಿಂದ 12-30 ಗಂಟೆಯ ನಡುವಿನ ಅವಧಿಯಲ್ಲಿ ತಾನು ವಾಸವಾಗಿದ್ದ ಮನೆಯ ಬೆಡ್ ರೂಮಿನ ಜಂತಿಗೆ ಒಂದು ಸೀರೆಯನ್ನು ಕಟ್ಟಿ ಅದನ್ನು ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹೊರತು ಮೃತನ ಸಾವಿನಲ್ಲಿ ಬೇರೇ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ವೀಣಾ ಕೋಂ. ವಿಜಯಕುಮಾರ ಚೌಗುಲಾ, ಪ್ರಾಯ-32 ವರ್ಷ, ವೃತ್ತಿ-ಗೃಹಿಣಿ, ಸಾ|| ಟೌನ್ ಶಿಪ್, ತಾ: ದಾಂಡೇಲಿ ರವರು ದಿನಾಂಕ: 29-11-2021 ರಂದು 13-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

ಇತ್ತೀಚಿನ ನವೀಕರಣ​ : 30-11-2021 01:40 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080