ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 29-10-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 158/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸುದರ್ಶನ ತಂದೆ ಶೇಖರ ನಾಯ್ಕ, ಸಾ|| ಬಾವಿಕೇರಿ, ತಾ: ಅಂಕೋಲಾ (ಮೋಟಾರ್ ಸೈಕಲ್ ನಂ: ಕೆ.ಎ-30/ಎಲ್-8929 ನೇದರ ಚಾಲಕ). ಈತನು ದಿನಾಂಕ: 29-10-2021 ರಂದು 17-20 ಗಂಟೆಗೆ ಅಂಕೋಲಾ ತಾಲೂಕಿನ ಬಾಳೆಗುಳಿಯ ಅಲಗೇರಿ ಕ್ರಾಸ್ ಹತ್ತಿರ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಡಾಂಬರ್ ರಸ್ತೆಯ ಮೇಲೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-30/ವಿ-0219 ನೇದನ್ನು ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ತನ್ನ ಮೋಟಾರ್ ಸೈಕಲ್ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ಎಡಬದಿಯಿಂದ ಅಂಕೋಲಾದಿಂದ ಅವರ್ಸಾಕ್ಕೆ ಹೋಗುತ್ತಿದ್ದ ಪಿರ್ಯಾದಿಯ ಮೋಟಾರ್ ಸೈಕಲ್ ನಂ: ಕೆ.ಎ-30/ಎಲ್-8929 ನೇದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಗೆ ಕೈಗೆ ಮತ್ತು ಗದ್ದಕ್ಕೆ ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಮೋಟಾರ್ ಸೈಕಲ ಚಾಲಕನು ತನಗೂ ಕೂಡಾ ತಲೆಗೆ ಸಾದಾ ಸ್ವರೂಪದ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ದೇವಿದಾಸ ತಂದೆ ವಿಷ್ಣು ಮಡಿವಾಳ, ಪ್ರಾಯ-62 ವರ್ಷ, ವೃತ್ತಿ-ಕಾಂಟ್ರ್ಯಾಕ್ಟರ್, ಸಾ|| ಅಂಬೇರಹಿತ್ಲ, ಬೆಳಂಬಾರ, ತಾ: ಅಂಕೋಲಾ ರವರು ದಿನಾಂಕ: 29-10-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 129/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಲಕ್ಷ್ಮಣ ತಂದೆ ಸೋಮಯ್ಯ ದೇವಾಡಿಗ, ಪ್ರಾಯ-40 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಾಳೆಹಿತ್ಲು, ಹೆಬಳೆ, ತಾ: ಭಟ್ಕಳ (ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಎಕ್ಸ್-0361 ನೇದರ ಸವಾರ). ಈತನು ದಿನಾಂಕ: 27-10-2021 ರಂದು 16-00 ಗಂಟೆಗೆ ತನ್ನ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಎಕ್ಸ್-0361 ನೇದನ್ನು ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಬೆಳ್ನೆ ರುದ್ರಭೂಮಿಯ ಹತ್ತಿರ ಡಾಂಬರ್ ರಸ್ತೆಯ ಬದಿಯಿಂದ ನಾಯಿಯು ಒಮ್ಮೇಲೆ ಮೋಟಾರ್ ಸೈಕಲಿಗೆ ಅಡ್ಡ ಓಡಿ ಬಂದಾಗ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ತಪ್ಪಿ ಒಮ್ಮೇಲೆ ಸ್ಕಿಡ್ ಆಗಿದ್ದರಿಂದ ಆರೋಪಿ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ತನ್ನ ತಲೆಯ ಭಾಗಕ್ಕೆ ಭಾರೀ ಸ್ವರೂಪದ ಗಾಯನೋವು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ದೇವಿದಾಸ ತಂದೆ ಸೋಮಯ್ಯ ದೇವಾಡಿಗ, ಪ್ರಾಯ-38 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಬಾಳೆಹಿತ್ಲು, ಹೆಬಳೆ, ತಾ: ಭಟ್ಕಳ ರವರು ದಿನಾಂಕ: 29-10-2021 ರಂದು 19-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 191/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಇಮ್ತಿಯಾಜ್ ತಂದೆ ಕಾಶಿಂ ಮುಲ್ಲಾ, ಪ್ರಾಯ-43 ವರ್ಷ, ವೃತ್ತಿ-ಚಾಲಕ, ಸಾ|| ತಳ್ಳಿಗೇರಿ, ತಾ: ಯಲ್ಲಾಪುರ (ಕಾರ್ ನಂ: ಕೆ.ಎ-14/ಎಮ್-4950 ನೇದರ ಚಾಲಕ). ಈತನು ದಿನಾಂಕ: 25-10-2021 ರಂದು 11-40 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಬೇಡ್ತಿ ಬ್ರಿಡ್ಜ್ ಹತ್ತಿರ ಹಾದು ಹೋದ ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿ ಸಂಖ್ಯೆ-93 ರಲ್ಲಿ ತನ್ನ ಕಾರ್ ನಂ: ಕೆ.ಎ-14/ಎಮ್-4950 ನೇದನ್ನು ಯಲ್ಲಾಪುರ ಕಡೆಯಿಂದ ಶಿರಸಿ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು, ತನ್ನ ವಾಹನವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಅದೇ ವೇಳೆ ಶಿರಸಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಆರ್-1783 ನೇದಕ್ಕೆ ಎದುರಿನಿಂದ ಡಿಕ್ಕಿ ಹೊಡೆದು ಅಪಾಘಾತ ಪಡಿಸಿ, ಮೋಟಾರ್ ಸೈಕಲ್ ಸವಾರನಾದ ನಾಗರಾಜ ತಂದೆ ನರಸಿಂಹ ಹೆಗಡೆ, ಸಾ|| ಜಂಬೇಸಾಲ, ಪೋ: ಚಂದಗುಳಿ, ತಾ: ಯಲ್ಲಾಪುರ ಇವರ ಎರಡು ಕಾಲುಗಳಿಗೆ ಮತ್ತು ಮೈಕೈಗೆ ಗಾಯನೋವು ಪಡಿಸಿ, ಎರಡು ವಾಹನಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಸತ್ಯನಾರಾಯಣ ಹೆಗಡೆ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಜಂಬೇಸಾಲ, ಪೋ: ಚಂದಗುಳಿ, ತಾ: ಯಲ್ಲಾಪುರ ರವರು ದಿನಾಂಕ: 29-10-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: 420 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಜಾಫರ್ ಸಾದ್ವಿಕ, ಸಾ|| ಭಟ್ಕಳ. ಈತನು ದಿನಾಂಕ: 11-10-2021 ರಂದು 21-30 ಗಂಟೆಯಿಂದ ದಿನಾಂಕ: 12-10-2021 ರಂದು 23-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ 2 ಲಕ್ಷ ರೂಪಾಯಿ ಹಣಕ್ಕೆ 3 ಲಕ್ಷದ 50 ಸಾವಿರ ರೂಪಾಯಿಯ 24 ಕ್ಯಾರೆಟ್ ನ ಬಂಗಾರದ ಬಿಸ್ಕೆಟ್ ಅನ್ನು ಕೊಡುವುದಾಗಿ ಹೇಳಿ ನಂಬಿಸಿ, ಆರೋಪಿತನು ಪಿರ್ಯಾದಿಗೆ ಪೋನ್ ಮಾಡಿ ಶಿರಸಿ ಶಹರದ ಶಿವಾಜಿ ಚೌಕ ಹತ್ತಿರ ಇರುವ ಪರಾಗ್ ಲಾಡ್ಜಿನ ರೂಮ್ ನಂ: 15 ಕ್ಕೆ ಕರೆಯಿಸಿಕೊಂಡು, ಪಿರ್ಯಾದಿಯಿಂದ 2 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಬಂಗಾರದ ಬಿಸ್ಕೆಟ್ ಅನ್ನು ಕೊಡದೇ ಪಿರ್ಯಾದಿಗೆ ಮೋಸ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಮೋಹನ ತಂದೆ ಲಕ್ಷ್ಮಣ ನಾಯ್ಕ, ಪ್ರಾಯ-35 ವರ್ಷ, ವೃತ್ತಿ-ಬೇಕರಿ ಕೆಲಸ, ಸಾ|| ಶಕ್ತಿ ಚಾಳ, ಇಂದಿರಾನಗರ, ತಾ: ಶಿರಸಿ ರವರು ದಿನಾಂಕ: 29-10-2021 ರಂದು 22-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 165/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಪರಶುರಾಮ ತಂದೆ ದಾಕುಣಿ ದಾದವ, ಪ್ರಾಯ-45 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಬಸವನ ಗಲ್ಲಿ, ಕಿಲ್ಲಾ ಕ್ರಾಸ್ ಹತ್ತಿರ, ಹಳಿಯಾಳ ಶಹರ. ಈತನು ದಿನಾಂಕ: 29-10-2021 ರಂದು 10-55 ಗಂಟೆಗೆ ಹಳಿಯಾಳ ಶಹರದ ಕಿಲ್ಲಾ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ಅಕ್ರಮ ಲಾಭಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ನಿಂತು ಬರ-ಹೋಗುವ ಜನರಿಗೆ ಕರೆದು, ಅದೃಷ್ಟ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿರಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಹಣ ಕೊಡುತ್ತೇನೆ ಅಂತಾ ಜನರ ಮನವೊಲಿಸಿ, ಅವರಿಂದ ಹಣ ಪಡೆದು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ದಾಳಿಯ ಕಾಲಕ್ಕೆ ಜೂಗಾರಾಟದ ಸಾಮಗ್ರಿಗಳಾದ 1). ನಗದು ಹಣ 750/- ರೂಪಾಯಿ, 2). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿ, 3). ಓ.ಸಿ ಅಂಕಿ ಬರೆದ ಚೀಟ್-1, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಪಿರ್ಯಾದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಸತ್ಯಪ್ಪ ಹುಕೇರಿ, ಪಿ.ಎಸ್.ಐ (ತನಿಖೆ), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 29-10-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 166/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಲಕ್ಷ್ಮಣ ಬಾಲೇಕರ, ಪ್ರಾಯ-35 ವರ್ಷ, ಸಾ|| ಕೆಸರೊಳ್ಳಿ ಗ್ರಾಮ, ತಾ: ಹಳಿಯಾಳ. ಈತನು ದಿನಾಂಕ: 29-10-2021 ರಂದು 11-35 ಗಂಟೆಗೆ ಹಳಿಯಾಳ ತಾಲೂಕಿನ ಕೆಸರೊಳ್ಳಿ ಗ್ರಾಮದ ಕೆಸರೋಳ್ಳಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ತನ್ನ ಅಕ್ರಮ ಲಾಭಕ್ಕೋಸ್ಕರ ಬರ-ಹೋಗುವ ಜನರನ್ನು ಕರೆದು ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿರಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಆಸೆ ಆಮಿಷ ತೋರಿಸಿ ಕೂಗಿ ಕರೆದು, ಬಂದಂತಹ ಸಾರ್ವಜನಿಕರಿಂದ ಹಣ ಪಡೆದು ನಂಬರಗಳನ್ನು ಚೀಟಿಯಲ್ಲಿ ಬರೆದು ಕೊಡುತ್ತಾ ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ದಾಳಿಯ ಕಾಲಕ್ಕೆ ಓ.ಸಿ ಮಟಕಾ ಜೂಗಾರಾಟದ ನಗದು ಹಣ 710/- ರೂಪಾಯಿ ಮತ್ತು ಸಾಮಗ್ರಿಗಳಾದ 1). ಓಸಿ ನಂಬರ್ ಬರೆದ ಚೀಟಿ-1, 2) ಬಾಲ್ ಪೆನ್-01. ಇವುಗಳೊಂದಿಗೆ ಆರೋಪಿತನು ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ಕೆ. ನಾವದಗಿ, ಪಿ.ಎಸ್.ಐ (ಕಾ&ಸು), ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 29-10-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 136/2021, ಕಲಂ: 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಗಣಪತಿ ತಂದೆ ತಿಮ್ಮಾ ನಾಯ್ಕ, 2]. ಧನಂಜಯ ತಂದೆ ತಿಮ್ಮಾ ನಾಯ್ಕ, ಸಾ|| (ಇಬ್ಬರೂ) ಹಂಜಗಿ, ತಾ: ಸಿದ್ದಾಪುರ. ಈ ನಮೂದಿತ ಆರೋಪಿತರು ಪಿರ್ಯಾದಿಯ ಮನೆಯ ಹತ್ತಿರದವರಾಗಿದ್ದು, ಆರೋಪಿತರ ಅಣ್ಣ ರಮೇಶ ತಿಮ್ಮಾ ನಾಯ್ಕ ಈತನಿಗೆ ಸೇರಿದ್ದೆನ್ನಲಾದ ಅತಿಕ್ರಮಣ ಜಾಗದಲ್ಲಿದ್ದ ಕೆಲವು ಮರಗಳನ್ನು ಆರೋಪಿತರು ಕಡಿದ ವಿಷಯವನ್ನು ಮಂಗಳೂರಿನಲ್ಲಿರುವ ಆರೋಪಿತರ ಅಣ್ಣ ರಮೇಶ ತಿಮ್ಮಾ ನಾಯ್ಕ ಈತನಿಗೆ ಪಿರ್ಯಾದಿಯು ಹೇಳಿದ್ದರಿಂದ ಆರೋಪಿತರ ಅಣ್ಣ ರಮೇಶ ಈತನು ದಿನಾಂಕ: 28-10-2021 ರಂದು ಮಂಗಳೂರಿನಿಂದ ಹಂಜಗಿಗೆ ಬಂದು ಆರೋಪಿತರೊಂದಿಗೆ ಮಾತಿಗೆ ಮಾತು ಬೆಳೆಸಿ, ನಂತರ ಪಂಚಾಯತಿ ಮಾಡಿಕೊಂಡು ಬಗೆ ಹರಿಸಿಕೊಂಡಿದ್ದರಿಂದ ಪಿರ್ಯಾದಿಯ ಮೇಲೆ ದ್ವೇಷದಿಂದ ಇದ್ದರು. ದಿನಾಂಕ: 29-10-2021 ರಂದು ಪಿರ್ಯಾದಿಯು ತನ್ನ ಊರಾದ ಹಂಜಗಿಯ ಶಾಲೆಯ ಹತ್ತಿರ ನಡೆದುಕೊಂಡು ಬರುತ್ತಿರುವಾಗ ಅಲ್ಲಿಗೆ ಬಂದ ಆರೋಪಿತರಿಬ್ಬರು ಪಿರ್ಯಾದಿಗೆ ‘ಏನಾ ಸೂಳೆ ಮಗನೇ, ನಿನಗೆ ಮಾಡಲು ಬೇರೆ ಕೆಲಸ ಇಲ್ಲವಾ? ನಾವು ಮರ ಕಡಿದಿದ್ದೇವೆ ಅಂತಾ ನಮ್ಮ ಅಣ್ಣನ ಹತ್ತಿರ ಹೇಳಿದ್ದೀಯಾ’ ಅಂತಾ ಅವಾಚ್ಯವಾಗಿ ಬೈದು, ಆರೋಪಿ 1 ನೇಯವನು ಪಿರ್ಯಾದಿಗೆ ಕೈಯಿಂದ ತಲೆಗೆ, ಮೂಗಿಗೆ ಹಾಗೂ ಮೈ ಮೇಲೆಲ್ಲಾ ಹೊಡೆದು, ಕಾಲಿನಿಂದ ಒದ್ದಿದ್ದು ಹಾಗೂ ಆರೋಪಿ 2 ನೇಯವನು ಕಲ್ಲಿನಿಂದ ಪಿರ್ಯಾದಿಯ ತಲೆಗೆ ಹಾಗೂ ಮುಖಕ್ಕೆ ಹೊಡೆದು ಗಾಯನೋವು ಪಡಿಸಿದ್ದು, ನಂತರ ಆರೋಪಿತರಿಬ್ಬರು ಸೇರಿಕೊಂಡು ’ಈ ದಿನ ಬದುಕಿದ್ದೀಯಾ. ಹೀಗೆ ಮಾಡುತ್ತಿದ್ದರೆ ನಿನ್ನನ್ನು ಹೊಡೆದು ಸಾಯಿಸುತ್ತೇವೆ’ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಜೈರಾಮ ತಂದೆ ಶಂಕರ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಚಾಲಕ, ಸಾ|| ಹಂಜಗಿ, ತಾ: ಸಿದ್ದಾಪುರ ರವರು ದಿನಾಂಕ: 29-10-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 101/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀ ರಾಮಚಂದ್ರ ತಂದೆ ರಾಮ ಭೋವಿವಡ್ಡರ್, ಪ್ರಾಯ-48 ವರ್ಷ, ಸಾ|| ಮನೆ ನಂ: 80, ಬುಗಡಿಕೊಪ್ಪ, ಪೋಸ್ಟ: ಮಳಲಗಾಂವ್, ತಾ: ಶಿರಸಿ. ಈತನು ಕಳೆದ ಒಂದು ವರ್ಷದಿಂದ ಸ್ವಲ್ಪ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದವನಿಗೆ ಮನೆಯ ಜನರು ಔಷಧೋಪಚಾರ ಕೊಡಿಸುತ್ತಾ ಬಂದಿದ್ದರೂ ಸಹ ಗುಣಮುಖನಾಗಿರಲಿಲ್ಲ. ಹೀಗಿದ್ದು ದಿನಾಂಕ: 03-10-2021 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿ ಹಾಗೂ ಅವರ ಮನೆ ಜನರು ದಾಸನಕೊಪ್ಪ ಸಂತೆಗೆ ಹೋಗಿ ಪರತ್ ಸಾಯಂಕಾಲ 04-00 ಗಂಟೆಗೆ ಮನೆಗೆ ಬಂದಾಗ ಮನೆಯಲ್ಲಿ ಇರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ. ಕಾರಣ ಕಾಣೆಯಾದ ತನ್ನ ಗಂಡನಿಗೆ ಹುಡುಕಿ ಕೊಡಬೇಕೆಂದು ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸುಮಲತಾ ಕೋಂ ರಾಮಚಂದ್ರ ಭೋವಿವಡ್ಡರ್, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮನೆ ನಂ: 80, ಬುಗಡಿಕೊಪ್ಪ, ಪೋ: ಮಳಲಗಾಂವ್, ತಾ: ಶಿರಸಿ ರವರು ದಿನಾಂಕ: 29-10-2021 ರಂದು 12-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಬಿಕಾನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 09/2021, ಕಲಂ: 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಶ್ರೀಮತಿ ಶೀತಲ್ ಕೋಂ. ರಾಮಾ ಭಟ್ಟ ರಟ್ಟಿ, ಪ್ರಾಯ-30 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕೇಗದಾಳ, ಅಂಬಿಕಾನಗರ, ತಾ: ದಾಂಡೇಲಿ. ಇವಳು ಪಿರ್ಯಾದಿಯ ಊರಿನವಳಾಗಿದ್ದು, ಪಿರ್ಯಾದಿಯ ಗಂಡನ ಹೆಸರನ್ನು ಹಾಳು ಮಾಡಿದ ವಿಷಯವನ್ನು ಪಿರ್ಯಾದಿಯು ಕೇಳಲು ದಿನಾಂಕ: 29-10-2021 ರಂದು ಸಂಜೆ 06-15 ಗಂಟೆಗೆ ಆರೋಪಿತಳ ಮನೆಯ ಎದುರು ಇರುವ ರಸ್ತೆಯ ಮೇಲೆ ನಿಂತು ‘ತನ್ನ ಗಂಡನ ಹೆಸರನ್ನು ಯಾಕೆ ಹಾಳು ಮಾಡುತ್ತಿಯಾ?’ ಅಂತಾ ಕೇಳಿದಾಗ ಆರೋಪಿತಳು ಒಮ್ಮೇಲೆ ಸಿಟ್ಟಾಗಿ ತನ್ನ ಕೈಯಲ್ಲಿ ಕುಡುಗೋಲನ್ನು ಹಿಡಿದುಕೊಂಡು ಪಿರ್ಯಾದಿಯನ್ನು ಹೊಡೆಯಲು ಬಂದಿದ್ದು, ಪಿರ್ಯಾದಿಯು ತಪ್ಪಿಸಿಕೊಂಡಾಗ ಕುಡುಗೋಲಿನ ತುದಿಯು ಪಿರ್ಯಾದಿಯ ಗದ್ದದ ಮಧ್ಯದಲ್ಲಿ ತಾಗಿ ರಕ್ತಗಾಯವಾಗಿದ್ದು ಹಾಗೂ ಪಿರ್ಯಾದಿಯನ್ನು ಉದ್ದೇಶಿಸಿ ‘ಬೇವರ್ಸಿ ರಂಡೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ‘ಇನ್ನೊಂದು ದಿನ ನಿನ್ನನ್ನು ಕೊಂದು ಹಾಕುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ದೀಪಾ ಕೋಂ. ನಾಗೇಶ ನಾಳಕರ, ಪ್ರಾಯ-37 ವರ್ಷ, ವೃತ್ತಿ-ಅಡುಗೆ ಸಹಾಯಕಿ, ಸಾ|| ಕೇಗದಾಳ, ಅಂಬಿಕಾನಗರ, ತಾ: ದಾಂಡೇಲಿ ರವರು ದಿನಾಂಕ: 29-10-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 79/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಿರೀಶ ತಂದೆ ರಾಮದಾಸ ನಾಯ್ಕ, ಸಾ|| ಗುಡ್ಡೇಕೇರಿ, ತಾ: ಹೊನ್ನಾವರ (ಖಾಸಗಿ ಬಸ್ ನಂ: ಕೆ.ಎ-47/ಎ-0238 ನೇದರ ಚಾಲಕ). ದಿನಾಂಕ: 29-10-2021 ರಂದು ಬೆಳಿಗ್ಗೆ 07-30 ಗಂಟೆಯ ಸುಮಾರಿಗೆ ಗಾಯಾಳು ಮಹ್ಮದ್ ಅಶ್ಫಕ್ ತಂದೆ ಮಹ್ಮದ್ ಅಕ್ಬರ್ ಶೇಖ್, ಸಾ|| 14 ನೇ ಬ್ಲಾಕ್, ವನಶ್ರೀ ನಗರ, ದಾಂಡೇಲಿ ಇವರು ಗಣೇಶಗುಡಿಯ ಕೆ.ಪಿ.ಸಿ ನಿಗಮದಲ್ಲಿ ಗುತ್ತಿಗೆ ಆಧಾರದ ಮೇಲೆ ಚಾಲಕ ಕೆಲಸ ಮಾಡಿಕೊಂಡು ಇದ್ದವನು, ತನ್ನ ಡ್ಯೂಟಿ ಮುಗಿಸಿಕೊಂಡು ಗಣೇಶಗುಡಿಯಿಂದ ದಾಂಡೇಲಿಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-65/ಎಚ್-4952 ನೇದರ ಮೇಲೆ ಹೋಗುತ್ತಿರುವಾಗ ಗಣೇಶಗುಡಿ-ದಾಂಡೇಲಿ ರಸ್ತೆಯ ಬಾಳೆವಾಡಾ ಕ್ರಾಸ್ ಹತ್ತಿರ ಎದುರುಗಡೆಯಿಂದ ಅಂದರೆ ದಾಂಡೇಲಿ ಕಡೆಯಿಂದ ಬರುತ್ತಿದ್ದ ‘ಶ್ರೀ ಕುಮಾರ’ ಎಂಬ ಖಾಸಗಿ ಬಸ್ ನಂ: ಕೆ.ಎ-47/ಎ-0238 ನೇದರ ಚಾಲಕನಾದ ನಮೂದಿತ ಆರೋಪಿತನು ಬಾಬ್ತು ಬಸ್ಸನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಹ್ಮದ್ ತಂದೆ ಮಹ್ಮದ್ ಅಕ್ಬರ್ ಶೇಖ್ ರವರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು, ಪರಿಣಾಮ ಮಹ್ಮದ್ ತಂದೆ ಮಹ್ಮದ್ ಅಕ್ಬರ್ ಶೇಖ್ ರವರ ಬಲಗಾಲಿ ಭಾರೀ ಸ್ವರೂಪದ ಹಾಗೂ ಮೈ ತುಂಬೆಲ್ಲಾ ಒಳಪೆಟ್ಟು ಆಗಿರುವ ಬಗ್ಗೆ ಪಿರ್ಯಾದಿ ಶ್ರೀ ಒಬ್ಬಯ್ಯ ತಂದೆ ದಾಸಯ್ಯ ಉಮ್ಮಡಿ, ಪ್ರಾಯ-42 ವರ್ಷ, ವೃತ್ತಿ-ಕೆ.ಪಿ.ಸಿ ನಿಗಮದ ಗುತ್ತಿಗೆ ಚಾಲಕ, ಸಾ|| ವಿಜಯನಗರ, ತಾ: ದಾಂಡೇಲಿ ರವರು ದಿನಾಂಕ: 29-10-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

     

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 80/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸಿರಾಜ್ ತಂದೆ ಬಸೀರ್ ಮುಲ್ಲಾ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ನವಗ್ರಾಮ ಕಾಲೋನಿ, ಸೀತಾವಾಡಾ, ರಾಮನಗರ, ತಾ: ಜೋಯಿಡಾ. ಈತನು ರಾಮನಗರದ ಸೀತಾವಾಡಾದ ಕಿತ್ತೂರ ರಾಣಿ ಚೆನ್ನಮ್ಮ ಹಾಸ್ಟೆಲ್ ಗೆ ಹೋಗುವ ದಾರಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕಾಗಿ ಓ.ಸಿ ಮಟಕಾ ಎಂಬ ಜೂಗಾರಾಟದ ಬಗ್ಗೆ ಜನರಿಗೆ ಆಸೆ ತೋರಿಸಿ ಅವರಿಂದ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು ಓ.ಸಿ ಮಟಕಾ ಎಂಬ ಜೂಗಾರಾಟ ಆಡಿಸುತ್ತಿದ್ದವನ್ನು ಪಿರ್ಯಾದಿಯವರು ಪಂಚರು ಹಾಗೂ ಸಿಬ್ಬಂದಿಯವರನ್ನು ಇಟ್ಟುಕೊಂಡು ದಿನಾಂಕ: 29-10-2021 ರಂದು 17-10 ಗಂಟೆಗೆ ದಾಳಿ ಮಾಡಿದಾಗ ಆರೋಪಿತನ ತಾಬಾದಲ್ಲಿ ನಗದು ಹಣ 710/- ರೂಪಾಯಿ ಹಾಗೂ ಓ.ಸಿ ಮಟಕಾ ಚೀಟಿ-1, ಬಾಲ್ ಪೆನ್-1 ಸಿಕ್ಕಿರುತ್ತದೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ವಿನೋದ ಎಸ್. ಕೆ, ಪಿ.ಎಸ್.ಐ (ಕಾ&ಸು), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 29-10-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 29-10-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 25/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಗೋವಿಂದ ಲಕ್ಷ್ಮಣ ಹಳ್ಳೇರ, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಎಣ್ಣೆಮಡಿ, ಹಿರೇಗುತ್ತಿ, ತಾ: ಕುಮಟಾ. ಪಿರ್ಯಾದಿಯವರ ತಮ್ಮನಾದ ಈತನು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದವನು, ದಿನಾಂಕ: 29-10-2021 ರಂದು ಮಧ್ಯಾಹ್ನ 13-00 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದವನು, ಹಿರೇಗುತ್ತಿ ಗ್ರಾಮದ ಬೊಮ್ಮಯ್ಯ ನಾರಾಯಣ ಪಟಗಾರ ಇವರ ಮನೆಯಿಂದ ಸ್ವಲ್ಪ ದೂರದಲ್ಲಿ ಬೆಟ್ಟದ ಮೇಲೆ ಹೋಗಿ ಗದ್ದೆ ಕೆಲಸಕ್ಕೆ ಉಪಯೋಗಿಸುವ ಕ್ರಿಮಿ ಕೀಟನಾಶಕ ಔಷಧಿಯನ್ನು ಸೇವನೆ ಮಾಡಿ ಮೃತಪಟ್ಟಿರುತ್ತಾನೆ. ಇದರ ಹೊರತು ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ಲಕ್ಷ್ಮಣ ಹಳ್ಳೇರ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಎಣ್ಣೆಮಡಿ, ಹಿರೇಗುತ್ತಿ, ತಾ: ಕುಮಟಾ ರವರು ದಿನಾಂಕ: 29-10-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 36/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಸರಸ್ವತಿ ಕೋಂ. ಈರಾ ನಾಯ್ಕ, ಪ್ರಾಯ-46 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಳೂರು, ಗೋಳಿಕೈ ಗ್ರಾಮ, ತಾ: ಸಿದ್ದಾಪುರ. ಪಿರ್ಯಾದಿಯ ಹೆಂಡತಿಯಾದ ಇವಳು ದಿನಾಂಕ: 29-10-2021 ರಂದು ಮಧ್ಯಾಹ್ನ ಸಿದ್ದಾಪುರ ತಾಲೂಕಿನ ಕಳೂರಿನಲ್ಲಿರುವ ತನ್ನ ಗದ್ದೆಯಲ್ಲಿ ತನ್ನ ಗಂಡನೊಂದಿಗೆ ಶುಂಠಿಯ ಕಳೆ ಕೀಳುವ ಕೆಲಸ ಮಾಡುತ್ತಿದ್ದವಳು, ಸಂಜೆ 04-30 ಗಂಟೆಯ ಸುಮಾರಿಗೆ ಏಕಾಏಕಿಯಾಗಿ ಕುಸಿದು ಬಿದ್ದು ತೀರಾ ಅಸ್ವಸ್ಥಳಾದವಳಿಗೆ ಚಿಕಿತ್ಸೆಗೆಂದು ಸಿದ್ದಾಪುರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಮಾರ್ಗಮಧ್ಯ ಸಂಜೆ 05-00 ಗಂಟೆಯ ಸುಮಾರಿಗೆ ಸಿದ್ದಾಪುರ ಶಹರದ ಶಂಕರ ಮಠದ ಹತ್ತಿರ ಮೃತಪಟ್ಟಿದ್ದು, ಇದರ ಹೊರತು ತನ್ನ ಹೆಂಡತಿಯ ಸಾವಿನಲ್ಲಿ ಬೇರೆ ಏನೂ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಈರಾ ತಂದೆ ಈಶ್ವರ ನಾಯ್ಕ, ಪ್ರಾಯ-52 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಳೂರು, ಗೋಳಿಕೈ ಗ್ರಾಮ, ಪೋ: ಬಿಳಗಿ, ತಾ: ಸಿದ್ದಾಪುರ ರವರು ದಿನಾಂಕ: 29-10-2021 ರಂದು 17-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 31-10-2021 06:46 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080