ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 29-09-2021

at 00:00 hrs to 24:00 hrs

 

ಕಾರವಾರ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2021, ಕಲಂ: 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅರುಣ ತಂದೆ ಕೃಷ್ಣ ಹರ್ಕಡೆ, ಸಾ|| ಅಂಕೋಲಾ. ಈತನು ಉತ್ತರ ಕನ್ನಡ ಜಿಲ್ಲಾ ಭಾರೀ ವಾಹನ ಚಾಲಕರ ಮತ್ತು ಕಾರ್ಮಿಕರ ಸಂಘದಲ್ಲಿ ಗೌರವ ಅಧ್ಯಕ್ಷನಾಗಿದ್ದು, ಪಿರ್ಯಾದಿಯವರು ಅರ್ಗಾದ ನೇವಲ್ ಬೇಸ್ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನೇವಲ್ ಬೇಸ್ ಖಾಸಗಿ ಕಂಪನಿಯ ಕೆಲಸದ ಸಂಬಂಧ ಅವರವರಲ್ಲಿ ದ್ವೇಷವಿದ್ದು, ಇದೇ ವಿಷಯದ ಸಂಬಂಧ ನಮೂದಿತ ಆರೋಪಿತನು ದಿನಾಂಕ: 09-09-2021 ರಂದು 15-23 ಗಂಟೆಯ ಸಮಯಕ್ಕೆ ಪಿರ್ಯಾದಿಯವರ ಮೊಬೈಲ್ ನಂ: 96863XXXXX ನೇದಕ್ಕೆ ಕರೆ ಮಾಡಿ ‘ನಿನಗೆ ಒಂದು ಗತಿ ಕಾಣಿಸುತ್ತೇನೆ, ನಿನ್ನ ಹೆಂಡತಿಯನ್ನು ಅತ್ಯಾಚಾರ ಮಾಡುತ್ತೇನೆ. ನನಗೆ ನಿನ್ನ ರಕ್ತವನ್ನು ನೋಡಬೇಕು. ನಿನ್ನನ್ನು ನಾನು ಬಿಡುವುದಿಲ್ಲ. ನಿನ್ನನ್ನು ಕೊಲೆ ಮಾಡುತ್ತೇನೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನರೇಂದ್ರ ತಂದೆ ರಾಮಾ ತಳೇಕರ, ಪ್ರಾಯ-45 ವರ್ಷ, ವೃತ್ತಿ-ಕಾಂಟ್ರ್ಯಾಕ್ಟರ್, ಸಾ|| ಅಮದಳ್ಳಿ, ಕಾರವಾರ ರವರು ದಿನಾಂಕ: 29-09-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 156/2021, ಕಲಂ: 279, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪೈರೋಜ್ ತಂದೆ ಇಸ್ಮಾಯಿಲ್ ಶೇಖ್, ಪ್ರಾಯ-49 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಕಾಕರಮಠ, ತಾ: ಅಂಕೋಲಾ (ಲಾರಿ ನಂ: ಕೆ.ಎ-30/9007 ನೇದರ ಚಾಲಕ). ಈತನು ದಿನಾಂಕ: 29-09-2021 ರಂದು ಬೆಳಿಗ್ಗೆ ಸುಮಾರು 09-20 ಗಂಟೆಯ ಸುಮಾರಿಗೆ ತನ್ನ ಬಾಬ್ತು ಲಾರಿ ನಂ: ಕೆ.ಎ-30/9007 ನೇದನ್ನು ಯಲ್ಲಾಪುರ ತಾಲೂಕಿನ ಆರತಿಬೈಲ್ ಕಣ್ಣಿಮನೆ ಕ್ರಾಸ್ ಹತ್ತಿರ ಕಾರವಾರ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯ ಮೇಲೆ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದವನು, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ತನ್ನ ಎಡಬದಿಯಿಂದ ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟಿ ನಂ: ಕೆ.ಎ-31/ಎಕ್ಸ್-5837 ನೇದಕ್ಕೆ ಮುಂದಿನಿಂದ ಡಿಕ್ಕಿ ಮಾಡಿ. ಅಪಘಾತ ಪಡಿಸಿದ್ದರಿಂದಲೇ ಈ ಅಪಘಾತವಾಗಿ ಸ್ಕೂಟಿ ನಂ: ಕೆ.ಎ-31/ಎಕ್ಸ್-5837 ನೇದರ ಸವಾರನಾದ ದುಂಡು ತಂದೆ ಲಕ್ಷ್ಮಣ ಗೋಂದಳಿ, ಈತನ ತಲೆಗೆ, ಹಣೆಗೆ, ಎಡಗಾಲಿಗೆ ಭಾರೀ ರಕ್ತದ ಗಾಯ ಪೆಟ್ಟು ಆಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಲ್ಲದೇ, ಸ್ಕುಟಿ ಹಿಂಬದಿ ಸವಾರನಾದ ಪಿರ್ಯಾದಿಯವರಿಗೂ ಸಹ ಎಡಗಾಲಿನ ಮೊಣಗಂಟಿಗೆ ಹಾಗೂ ಎಡಗೈ ಮೊಣಗಂಟಿನ ಹತ್ತಿರ ಸಾದಾ ಸ್ವರೂಪದ ಗಾಯ ಪೆಟ್ಟು ಪಡಿಸಿ, ಎರಡು ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಬಾಬು ಗೌಡ, ಪ್ರಾಯ-58 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ನೂತನ ನಗರ, ಜಡ್ಡಿ, ತಾ: ಯಲ್ಲಾಪುರ ರವರು ದಿನಾಂಕ: 29-09-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 157/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಗಣಪಾ ತಂದೆ ಪಿಟಿಯಾ ಸಿದ್ದಿ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹರಿಗದ್ದೆ, ಪೋ: ಹಿತ್ಲಳ್ಳಿ, ತಾ: ಯಲ್ಲಾಪುರ. ಪಿರ್ಯಾದಿಯವರ ಗಂಡನಾದ ಈತನು ಕುಡಿಯುವ ಚಟದವನಿದ್ದು, ದಿನಾಲು ಮನೆಗೆ ಕುಡಿದು ಬಂದು ಜಗಳ ಮಾಡುತ್ತಿದ್ದವನಿಗೆ ಪಿರ್ಯಾದಿಯವರು ಮತ್ತು ಪಿರ್ಯಾದಿಯವರ ಸಂಬಂಧಿಕರು ಬುದ್ಧಿವಾದ ಹೇಳಿದಕ್ಕೆ ದಿನಾಂಕ: 20-09-2021 ರಂದು ಮಧ್ಯಾಹ್ನ 14-00 ಗಂಟೆಯ ಸುಮಾರಿಗೆ ಪಿರ್ಯಾದಿಯವರ ಸಂಬಂಧಿಕರ ಊರಾದ ಯಲ್ಲಾಪುರ ತಾಲೂಕಿನ ನಂದಿಬಾವಿ ಊರಿನಿಂದ ಮಂಚಿಕೇರಿಗೆ ಹೋಗಿ ಬರುವುದಾಗಿ ಹೇಳಿ ಹೋದವನು, ಈವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾಣೆಯಾದವನಿಗೆ ಹುಡುಕಿ ಕೊಡುವ ಕುರಿತು ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ದೇವಕಿ ಕೋಂ. ಗಣಪಾ ಸಿದ್ದಿ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹರಿಗದ್ದೆ, ಪೋ: ಹಿತ್ಲಳ್ಳಿ, ತಾ: ಯಲ್ಲಾಪುರ ರವರು ದಿನಾಂಕ: 29-09-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 158/2021, ಕಲಂ: 279, 427, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಪ್ರವೀಣ ತಂದೆ ಬಾಬು ಮಡಗಾಂವಕರ್, ಪ್ರಾಯ-38 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ನೆಹರು ನಗರ, ತಾ: ಶಿರಸಿ, ಹಾಲಿ ಸಾ|| ಅಯ್ಯಪ್ಪನಗರ, ತಾ: ಶಿರಸಿ (ಲಾರಿ ನಂ: ಕೆ.ಎ-18/-7495 ನೇದರ ಚಾಲಕ). ಈತನು ದಿನಾಂಕ: 29-09-2021 ರಂದು ಬೆಳಿಗಿನ 00-10 ಗಂಟೆಗೆ ತನ್ನ ಲಾರಿ ನಂ: ಕೆ.ಎ-18/-7495 ನೇದರಲ್ಲಿ ಚಿರೇ ಕಲ್ಲು ತುಂಬಿಕೊಂಡು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಲ್ಲಾಪುರ ಪಟ್ಟಣದ ಗಾಂಧಿ ಚೌಕ್ ದಲ್ಲಿರುವ ಪಿರ್ಯಾದಿಯ ಬಾಬ್ತು ವಾಣಿಜ್ಯ ಕಟ್ಟಡದಲ್ಲಿಯ 03 ಅಂಗಡಿಗಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಅಂಗಡಿಗಳಲ್ಲಿ ಇದ್ದ ವಾಣಿಜ್ಯ ಸಾಮಗ್ರಿಗಳನ್ನು ಜಖಂಗೊಳಿಸಿ, ಪಿರ್ಯಾದಿಯವರಿಗೆ ಸುಮಾರು 03 ರಿಂದ 04 ಲಕ್ಷ ರೂಪಾಯಿಯಷ್ಟು ಲುಕ್ಸಾನ್ ಪಡಿಸಿದ್ದಲ್ಲದೇ, ಲಾರಿಯನ್ನು ಜಖಂಗೊಳಿಸಿ, ಲಾರಿಯಲ್ಲಿ ಇದ್ದ 03 ಜನರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಪದ್ಮಾಕರ ಅಸೂಕರ, ಪ್ರಾಯ-59 ವರ್ಷ, ವೃತ್ತಿ-ವ್ಯಾಪಾರ, ಸಾ|| ಉದ್ಯಮ ನಗರ, ತಾ: ಯಲ್ಲಾಪುರ ರವರು ದಿನಾಂಕ: 29-09-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 65/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 27-09-2021 ರಂದು 11-30 ಗಂಟೆಯಿಂದ 12-00 ಗಂಟೆಯ ನಡುವಿನ ಅವಧಿಯಲ್ಲಿ ಶಿರಸಿ ಶಹರದ ಕೋಣನಬಿಡ್ಕಿ ಟೆಂಪೋ ಸ್ಟ್ಯಾಂಡ್ ಹತ್ತಿರ ಪಿರ್ಯಾದಿಯವರು ನಿಲ್ಲಿಸಿದ ಬಾಬ್ತು ಟಾಟಾ ವಿಸ್ಟಾ ಕಾರ್ ನಂ: ಕೆ.ಎ-04/ಎಮ್.ಜಿ -3047 ನೆದರ ಒಳಗಡೆ ಬ್ಯಾಗಿನಲ್ಲಿಟ್ಟ 13 ಗ್ರಾಂ ತೂಕದ ಬಂಗಾರದ ಚೈನ್-01, ಅ||ಕಿ|| 55,000/- ರೂಪಾಯಿ ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಸಂತೋಷ ತಂದೆ ಶಿವಪ್ಪ ಕ್ಷೌರದ, ಪ್ರಾಯ-34 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ಹೀರೂರ, ತಾ: ಹಾನಗಲ್, ಜಿ: ಹಾವೇರಿ ರವರು ದಿನಾಂಕ: 29-09-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 98/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಕುಮಾರಿ: ಕಾವ್ಯ ತಂದೆ ವಿಠ್ಠಲ ಪಟಗಾರ, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಕ್ಯಾದಗಿಸರ, ಇಟಗುಳಿ, ಪೋ: ಇಟಗುಳಿ, ತಾ: ಶಿರಸಿ. ಇವಳು ಪಿರ್ಯಾದಿಯವರ ಮಗಳಾಗಿದ್ದು, ಪಿರ್ಯಾದಿಯವರು ಎಂದಿನಂತೆ ದಿನಾಂಕ: 23-09-2021 ರಂದು ಬೆಳಿಗ್ಗೆ 09-00 ಗಂಟೆಗೆ ಹೆಗಡೆ ರವರ ಮನೆಗೆಲಸಕ್ಕೆ ಹೋಗಿ ಪುನಃ 12-00 ಗಂಟೆಗೆ ಮನೆಗೆ ಬಂದಾಗ ಕಾಣೆಯಾದ ತನ್ನ ಮಗಳಾದ ಕಾವ್ಯ ವಿಠ್ಠಲ ಪಟಗಾರ ಇವಳು ತಾನು ಮನೆಯಲ್ಲಿ ಇಲ್ಲದಿರುವಾಗ ತನಗಾಗಲಿ ಅಥವಾ ಪಕ್ಕದಲ್ಲಿದ್ದ ತನ್ನ ಅಜ್ಜಿಯ ಮನೆಯ ಜನರಿಗಾಗಲಿ ಹೇಳದೇ ಕೇಳದೇ ಹೊರಗಡೆ ಹೋಗಿದ್ದವಳು, ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾಳೆ. ಕಾರಣ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಮಹಾಲಕ್ಷ್ಮೀ ವಿಠ್ಠಲ ಪಟಗಾರ, ಪ್ರಾಯ-40 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕ್ಯಾದಗಿಸರ, ಇಟಗುಳಿ, ಪೋ: ಇಟಗುಳಿ, ತಾ: ಶಿರಸಿ ರವರು ದಿನಾಂಕ: 29-09-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 125/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಪ್ರಮೋದ ತಂದೆ ಗಣಪತಿ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹೇಮಗಾರ, ಚಂದ್ರಘಟಗಿ ಗ್ರಾಮ, ತಾ: ಸಿದ್ದಾಪುರ. ಈತನು ದಿನಾಂಕ: 29-09-2021 ರಂದು 14-30 ಗಂಟೆಗೆ ಸಿದ್ದಾಪುರ ತಾಲೂಕಿನ ಹಲಗೇರಿ ಕಾಲೇಜ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಯವರೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 04 ಟೆಟ್ರಾ ಪ್ಯಾಕೆಟ್ ಗಳು, ತಲಾ ಒಂದಕ್ಕೆ 35.13/- ರೂಪಾಯಿಯಂತೆ ಒಟ್ಟೂ ಅ||ಕಿ|| 140.52/- ರೂಪಾಯಿ, 2). 2 ಪ್ಲಾಸ್ಟಿಕ್ ಗ್ಲಾಸುಗಳು, ಅ||ಕಿ|| 00.00/- ರೂಪಾಯಿ, 3). Original Choice Deluxe Whisky 90 ML ಅಂತಾ ಬರೆದ 02 ಮದ್ಯದ ಕಾಲಿ ಟೆಟ್ರಾ ಪ್ಯಾಕೆಟ್ ಗಳು, ಅ||ಕಿ|| 00.00/- ರೂಪಾಯಿ, 4). ಪ್ಲಾಸ್ಟಿಕ್ ಚೀಲ-1, ಅ||ಕಿ|| 00.00/- ರೂಪಾಯಿ. ಇವುಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ಚಂದಾವರ, ಪಿ.ಎಸ್.ಐ (ತನಿಖೆ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 29-09-2021 ರಂದು 15-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 29-09-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 29/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಿತೀನ್ ತಂದೆ ನಾರಾಯಣ ನಾಯ್ಕ, ಪ್ರಾಯ-28 ವರ್ಷ, ವೃತ್ತಿ-ಖಾಸಗಿ ಕೆಲಸ, ಸಾ|| ವಿಘ್ನೇಶ್ವರ ಕಾಲೋನಿ, ಕೋಡಿಬಾಗ, ಕಾರವಾರ. ಈತನು ಅಲ್ಪಸ್ವಲ್ಪ ಮಂದ ಬುದ್ಧಿಯವನಿದ್ದು, ಅತಿಯಾದ ಸರಾಯಿ ಕುಡಿಯುವ ಚಟದವನಾಗಿದ್ದವನು, ಮನೆಯಲ್ಲಿ ಸರಾಯಿ ಕುಡಿಯಲು ಹಣ ನೀಡಲು ಮನೆಯವರಲ್ಲಿ ಕೇಳಿ ಹಣ ನೀಡದೇ ಇದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪದೇ ಪದೇ ಹೇಳುತ್ತಾ ಬಂದವನು, ದಿನಾಂಕ: 29-09-2021 ರಂದು ಬೆಳಿಗ್ಗೆ 07-00 ಗಂಟೆಯಿಂದ 08-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯವರು ಕುಡಿಯಲು ಹಣ ನೀಡದೇ ಇರುವ ಕಾರಣದಿಂದಲೇ ತನ್ನ ಮನೆಯ ಬಚ್ಚಲು ಕೋಣೆಯ ಮೇಲ್ಛಾವಣಿಯ ಕಬ್ಬಿಣದ ಬಾರಿಗೆ ಬೆಡ್ ಶೀಟ್ ತುಂಡಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಲಕ್ಷ್ಮೀ ಕೋಂ. ನಾರಾಯಣ ನಾಯ್ಕ, ಪ್ರಾಯ-65 ವರ್ಷ, ವೃತ್ತಿ-ಮನೆವಾರ್ತೆ, ಸಾ|| ವಿಘ್ನೇಶ್ವರ ಕಾಲೋನಿ, ಕೋಡಿಬಾಗ, ಕಾರವಾರ ರವರು ದಿನಾಂಕ: 29-09-2021 ರಂದು 10-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 01-10-2021 02:44 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080