ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 30-04-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 81/2021, ಕಲಂ: 279, 304(ಎ) ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಕ್ಯಾಂಟರ್ ಲಾರಿ ನಂ: ಎಮ್.ಎಚ್-03/ಸಿ.ಪಿ-4285 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ದಿನಾಂಕ: 30-04-2021 ರಂದು ಮಧ್ಯಾಹ್ನ 14-30 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಅಂಕೋಲಾ-ಕುಮಟಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯಲ್ಲಿ ಮಾದನಗೇರಿ ಕ್ರಾಸ್ ಹತ್ತಿರ ತನ್ನ ಕ್ಯಾಂಟರ್ ಲಾರಿ ನಂ: ಎಮ್.ಎಚ್-03/ಸಿ.ಪಿ-4285 ನೇದನ್ನು ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದವನು, ಮಾದನಗೇರಿ ಕಡೆಯಿಂದ ಪೆಟ್ರೋಲ್ ಬಂಕಿಗೆ ಹೋಗಲು ಮೋಟಾರ್ ಸೈಕಲ್ ನಂ: ಕೆ.ಎ-30/ಎಸ್-5738 ನೇದರಲ್ಲಿ ಸವಾರಿ ಮಾಡಿಕೊಂಡು ಬಂದ ಕುಸ್ಲು ತಂದೆ ಈರಾ ಗೌಡಾ ಈತನು ಅಂಕೋಲಾ-ಕುಮಟಾ ರಾಷ್ಟ್ರೀಯ ಹೆದ್ದಾರಿ ತಲುಪುತ್ತಿದ್ದಂತೆ ಆತನ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಸುಮಾರು 4-5 ಮೀಟರ್ ಮುಂದಕ್ಕೆ ಮೋಟಾರ್ ಸೈಕಲ್ ಸಮೇತ ಎಳೆದುಕೊಂಡು ಹೋಗಿ ಆತನ ಕಾಲು ಮತ್ತು ತಲೆ ಒಡೆದು ಭಾರೀ ಗಾಯನೋವು ಪಡಿಸಿ, ಅಪಘಾತದ ಸ್ಥಳದಲ್ಲಿ ಆರೋಪಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿದ್ದು, ಗಾಯಾಳು ಕುಸ್ಲು ಗೌಡ ಈತನಿಗೆ ಅಂಕೋಲಾದ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಗಾಯಾಳು ಕುಸ್ಲು ಗೌಡ ಈತನು ಚಿಕಿತ್ಸೆ ಫಲಕಾರಿಯಾಗದೇ ಸಮಯ 16-30 ಗಂಟೆಗೆ ಮೃತಪಟ್ಟಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸುಕ್ರು ತಂದೆ ಹೊಲಿಯಪ್ಪ ಗೌಡ, ಪ್ರಾಯ-47 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಉಳುವರೆ, ತಾ: ಅಂಕೋಲಾ ರವರು ದಿನಾಂಕ: 30-04-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 130/2021, ಕಲಂ: 143, 147, 341, 342, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ರಾಜು ತಾಂಡೇಲ, ಸಾ|| ಟೊಂಕ, ಕಾಸರಕೋಡ, ತಾ: ಹೊನ್ನಾವರ ಹಾಗೂ ಇತರ 10 ಜನ ಪುರುಷರು ಹಾಗೂ 15 ಜನ ಮಹಿಳೆಯರು (ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ). ದಿನಾಂಕ: 30-4-2021 ರಂದು ಬೆಳಿಗ್ಗೆ 10-30 ಗಂಟೆಯಿಂದ 10-45 ಗಂಟೆಯ ನಡುವಿನ ಅವಧಿಯಲ್ಲಿ ಹೊನ್ನಾವರ ಟೊಂಕ ಕಾಸರಕೋಡದಲ್ಲಿನ ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪೌಂಡಿನಿಂದ 100 ಮೀಟರ್ ದೂರದಲ್ಲಿ  ಕಂಪನಿಯ ವತಿಯಿಂದ ಹಾಳಾಗಿದ್ದ ರಸ್ತೆಗೆ ಕಂಪನಿಯ ವಾಹನಗಳು ಓಡಾಡುವ ಸಲುವಾಗಿ ಜೆ.ಸಿ.ಬಿ ಹಾಗೂ ಟಿಪ್ಪರ್ ಲಾರಿಯಿಂದ ಮಣ್ಣು ಹಾಕಿಸುತ್ತಿದ್ದಾಗ ನಮೂದಿತ ಆರೋಪಿತರು ಸಂಗನಮತ ಮಾಡಿಕೊಂಡು ರಸ್ತೆ ಕಾಮಗಾರಿ ಮಾಡುತ್ತಿದ್ದ ಕಂಪನಿಯ ಇಂಜೀನಿಯರ್ ರಾಜಾರಾಮ ಸಿಂಗ್ ಹಾಗೂ ಉಳಿದವರನ್ನು ಸುತ್ತುವರೆದಿದ್ದು, ಕೆಲಸ ಮಾಡದಂತೆ ತಡೆದ ವಿಷಯ ತಿಳಿದು ಸ್ಥಳಕ್ಕೆ ಹೋದ ಪಿರ್ಯಾದಿ ಹಾಗೂ ಇತರರನ್ನು ಸಹ ಸುತ್ತುವರೆದು ಎಲ್ಲೂ ಹೋಗದಂತೆ ಅಡ್ಡಗಟ್ಟಿ ಅಕ್ರಮವಾಗಿ ತಡೆದು ‘ನೀವು ಇಲ್ಲಿ ರಸ್ತೆ ಕಾಮಗಾರಿ ಮಾಡುವುದು ಬೇಡ’ ಅಂತ ಹೇಳಿ ‘ಬೋಳಿ ಮಕ್ಕಳಾ, ಸೂಳಾ ಮಕ್ಕಳಾ’ ಅಂತೆಲ್ಲ ಅವಾಚ್ಯವಾಗಿ ಬೈಯ್ದು, ಪಿರ್ಯಾದಿಯು ಪೋಲೀಸರಿಗೆ ಮಾಹಿತಿ ನೀಡಿದ್ದರಿಂದ ಆರೋಪಿತರು ‘ನೀವು ಇಲ್ಲಿ ರಸ್ತೆ ಕಾಮಗಾರಿ ಮಾಡಿದರೆ ನಿಮ್ಮನ್ನು ಕೊಂದು ಹಾಕುತ್ತೇವೆ’ ಅಂತಾ ಕೂಗಿ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣ ತಂದೆ ಮಹಾಬಲೇಶ್ವರ ನಾಯ್ಕ, ಪ್ರಾಯ-38 ವರ್ಷ, ವೃತ್ತಿ-ಡೆಪ್ಯೂಟಿ ಮ್ಯಾನೇಜರ್, ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್, ಸಾ|| ತಾಳಮಕ್ಕಿ, ವೆಂಕಟಪ್ಪನವಾಡೆ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 30-04-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 131/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ಹಾಗೂ ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾಸ್ತಿ ತಂದೆ ಕಣಿಯಾ ಮುಕ್ರಿ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಗಜನಿಗುಡಿಕೇರಿ, ಹಳದಿಪುರ, ತಾ: ಹೊನ್ನಾವರ. ಈತನು ಹೊನ್ನಾವರ ತಾಲೂಕಿನ ಹಳದಿಪುರದ ಗಜನಿಗುಡಿಕೇರಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಕೊರೋನಾ ಸಾಂಕ್ರಾಮಿಕ ಸೊಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಲಾಕಡೌನ್ ಆದೇಶ ಮಾಡಿದ್ದರೂ ಸಹ ಮುಖಕ್ಕೆ ಮಾಸ್ಕ ಹಾಕದೇ, ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ, ಕೊರೋನಾ ಸಾಂಕ್ರಾಮಿಕ ರೋಗದ ಸರ್ಕಾರದ ಮತ್ತು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ, ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ಸಾಂಕ್ರಾಮಿಕ ರೋಗದ ಸೊಂಕನ್ನು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳದೇ ಕೋವಿಡ್ ನಿಯಮವನ್ನು ಉಲ್ಲಂಘನೆ ಮಾಡಿ, ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಒಟ್ಟು 3,442/- ರೂಪಾಯಿ ಮೌಲ್ಯದ ಒಟ್ಟು 8.82 ಲೀಟರ್ ಸಾರಾಯಿಯನ್ನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ತಾಬಾದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ದಿನಾಂಕ: 30-04-2021 ರಂದು 18-45 ಗಂಟೆಗೆ ಪಿರ್ಯಾದುದಾರರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸೇರಿ ದಾಳಿ ಮಾಡಿದ ಕಾಲಕ್ಕೆ ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತೇಶ ಉದಯ ನಾಯಕ. ಪಿ.ಎಸ್.ಐ (ಕಾ&ಸು-2), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 30-04-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 59/2021, ಕಲಂ: 4, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಹಾಗೂ ಕಲಂ: 11(1)(D)  PREVENTION OF CRUELTY TO ANIMALS ACT-1960 ಮತ್ತು ಕಲಂ: 379, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಇಬ್ರಾಹಿಂ ಹವ್ವಾ ತಂದೆ ಮೊಹಮ್ಮದ್ ಹುಸೇನ್ ಹವ್ವಾ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹನೀಫಾಬಾದ್, ಹೆಬಳೆ, ತಾ: ಭಟ್ಕಳ, 2]. ಮುಜಾಫರ್ ತಂದೆ ಫಾರೂಕ್ ವಲ್ಕಿ, ಪ್ರಾಯ-44 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಖಲಿಜಾ ಕಬ್ರಾ ಮಸೀದ್ ಹತ್ತಿರ, ಮೂಸಾನಗರ, ತಾ: ಭಟ್ಕಳ, 3]. ಅಲ್ತಾಫ್ ಸಿದ್ದೀಕಿ ತಂದೆ ಅಮೀರ್ ಸಿದ್ದಿಕಿ, ಪ್ರಾಯ-42 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಖಲೀಫಾ ಸ್ಟ್ರೀಟ್, ತಾ: ಭಟ್ಕಳ. ಈ ನಮೂದಿತ ಆರೋಪಿತರು ದಿನಾಂಕ: 20-03-2021 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಪಿರ್ಯಾದಿಯು ಭಟ್ಕಳ ಶಹರದ ಸಿದ್ದಿಕಿ ಸ್ಟ್ರೀಟ್ ನಲ್ಲಿರುವ ತನ್ನ ತಾಯಿಯ ಮನೆಯ ಎದುರಿಗೆ ನಿಲ್ಲಿಸಿದ್ದ ತನ್ನ ಬಾಬ್ತು ಬೊಲೊರೋ ವಾಹನ ನಂ: ಕೆ.ಎ-15/9284 ನೇದನ್ನು ಕಳುವು ಮಾಡಿಕೊಂಡು ಹೋಗಿ, ಅದರಲ್ಲಿ ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ತಂದ ಜಾನುವಾರುಗಳನ್ನು ಲೋಡ್ ಮಾಡಿ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಹೋಗುವಾಗ ಸಿಕ್ಕಿದ್ದು, ಆದರೆ ತನ್ನ ಮೇಲೆ ಉದೇಶ ಪೂರ್ವಕವಾಗಿ ಪ್ರಕರಣ ದಾಖಲಾಗುವಂತೆ ಮಾಡಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಇಸ್ಮಾಯಿಲ್ @ ಹವ್ವಾ ಇಸ್ಮಾಯಿಲ್ ತಂದೆ ಮೊಹಮ್ಮದ್ ಹುಸೇನ್, ಪ್ರಾಯ-46 ವರ್ಷ, ವೃತ್ತಿ-ಡ್ರೈವಿಂಗ್ ಕೆಲಸ, ಸಾ|| ಮೂಸಾನಗರ, ತಾ: ಭಟ್ಕಳ ರವರು ದಿನಾಂಕ: 30-04-2021 ರಂದು 11-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: 323, 324, 326, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಜಿಕರಿಯಾ ಹರೂನ್ ಸಾಬ್, ಪ್ರಾಯ-33 ವರ್ಷ, 2]. ಜುಬೇರ್ ಹರೂನ್ ಸಾಬ್, ಪ್ರಾಯ-45 ವರ್ಷ, 3]. ಅಂಬರೇಜ್ ಜುಬೇರ್ ಸಾಬ್, ಪ್ರಾಯ-23 ವರ್ಷ, 4]. ವಾಜೀದ್ ಅಬ್ದುಲ್ ಲತೀಫ್ ಸಾಬ್, ಪ್ರಾಯ-22 ವರ್ಷ, ಸಾ|| (ಎಲ್ಲರೂ) ರೇವಣಕಟ್ಟಾ, ಪೋ: ಬಲವಳ್ಳಿ, ತಾ: ಶಿರಸಿ. ದಿನಾಂಕ: 20-03-2021 ರಂದು 20-00 ಗಂಟೆಗೆ ಪಿರ್ಯಾದಿಯ ತಮ್ಮನಾದ ಮುತಹೀರ್ ಅವನ ಸ್ನೇಹಿತನಾದ ಆರೋಪಿ 4 ನೇಯವನೊಂದಿಗೆ ಜಗಳ ಮಾಡುತ್ತಿದ್ದುದನ್ನು ಕಂಡು ಅವರಲ್ಲಿಗೆ ಹೋಗಿ ಇಬ್ಬರಿಗೂ ಜೋರು ಮಾಡಿ ಬಿಡಿಸುತ್ತಿದ್ದಾಗ, ಅಲ್ಲಿದ್ದ ಆರೋಪಿ 4 ನೇಯವನ ಅತ್ತೆ ಮಕ್ಕಳಾದ ಆರೋಪಿ 1, 2 ಮತ್ತು 3 ನೇಯವರೆಲ್ಲ ಏಕಾಏಕಿಯಾಗಿ ಬಂದವರೇ, ತಾನು ವಾಜೀದ್ ಇವನೊಬ್ಬನಿಗೆ ಮಾತ್ರ ಬೈಯ್ದು ಕಳಿಸುತ್ತಿದ್ದೇನೆ ಎಂದು ತಪ್ಪು ತಿಳಿದುಕೊಂಡು, ನನಗೆ ಉದ್ದೇಶಿಸಿ ‘ನಿನ್ನ ತಮ್ಮನ ಪರ ಬಂದಿದ್ದೀಯಾ? ರಾಂಡಕಾ ಬಚ್ಚಾ, ಬೇವರ್ಸಿ, ಸುವರ್ ಕಾ ಬಚ್ಚಾ’ ಎಂದು ಅವಾಚ್ಯವಾಗಿ ಬೈಯ್ಯತೊಡಗಿದ್ದು, ಆಗ ನಾನು ‘ನನಗೇಕೆ ಬೈಯುತ್ತಿದ್ದೀರಿ?’ ಎಂದು ಕೇಳಿದಕ್ಕೆ, ಎಲ್ಲರೂ ಸೇರಿಕೊಂಡು ಕೈಯಿಂದ ಹೊಡೆದಿದ್ದಲ್ಲದೇ. ಪ್ರತಿರೋದಿಸಿದಾಗ ಆರೋಪಿ 1 ನೇಯವನು ಅಲ್ಲಿಯೇ ಇದ್ದ ಅವನ ಮನೆಗೆ ಓಡಿ ಹೋಗಿ ಅಪಾಯಕಾರಿಯಾದ ಒಂದು ಕಬ್ಬಿಣದ ಪಂಚ್ ತಂದವನೇ, ನಾನು ಧರಿಸಿದ್ದ ಟೀ-ಶರ್ಟ್ ಹಿಡಿದು ಎಳೆದುಕೊಂಡು, ತನ್ನ ಬಲಗೈಯಲ್ಲಿದ್ದ ಪಂಚ್ ನಿಂದ ನನ್ನ ಬಾಯಿಗೆ ಬಲವಾಗಿ ಹೊಡೆದು, ಮೇಲ್ತುಟಿ ಹರಿದು, ಮೇಲ್ಭಾಗದ ಬಾಚಿ ಹಲ್ಲೊಂದು ಸಂಪೂರ್ಣ ಮುರಿದು ಬೀಳುವಂತೆ ಮಾಡಿ ತೀವ್ರ ಸ್ವರೂಪದ ಗಾಯಗೊಳಿಸಿದ್ದರಿಂದ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಅಬುಮಹಮ್ಮದ್ ಅಬ್ದುಲ್ ಸಲಾಂ ಸಾಬ್, ಪ್ರಾಯ-34 ವರ್ಷ, ವೃತ್ತಿ-ಅಡಿಕೆ ವ್ಯಾಪಾರ, ಸಾ|| ರೇವಣಕಟ್ಟಾ, ಪೋ: ಬಲವಳ್ಳಿ, ತಾ: ಶಿರಸಿ ರವರು ದಿನಾಂಕ: 30-04-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 46/2021, ಕಲಂ: 66(ಸಿ) ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ನೇದ್ದರ ವಿವರ...... ನಮೂದಿತ ಆರೋಪಿತರು 1]. Oppo A9 2020 IMEI: 865931042677807, 2]. SM-C701F, IMEI: 357169082043805 ನೇದರ ಬಳಕೆದಾರರಾಗಿದ್ದು, ಹೆಸರಿ ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ಸ್ಕೋಡವೇಸ್ ಸಂಸ್ಥೆ ಶಿರಸಿಯಲ್ಲಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಕಳೆದ 03 ವರ್ಷಗಳಿಂದ ಸದರಿ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸ್ಕೋಡವೇಸ್ ಸಂಸ್ಥೆಯು ಆರೋಗ್ಯ, ಶಿಕ್ಷಣ, ಕೃಷಿ, ಸ್ವಯಂ ಉದ್ಯೋಗ, ಮಹಿಳಾ ಸಬಲೀಕರಣ ಸೇರಿದಂತೆ ಹಲವಾರು ರೀತಿಯ ಸಾಮಾಜಿಕ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿದ್ದು, ಸುಮಾರು 250 ಜನ ಕೆಲಸಗಾರರು ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಯೋಜನೆಗಳನ್ನು ರೂಪಿಸುವ ಮತ್ತು ಅನುಷ್ಟಾನಗೊಳಿಸುವ ಸಂದರ್ಭದಲ್ಲಿ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಹಣಕಾಸು, ಯೋಜನೆ, ಆಡಳಿತ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನು ಮತ್ತು ದಾಖಲಾತಿಗಳನ್ನು ಇ-ಮೇಲ್ ಮೂಲಕ ವ್ಯವಹರಿಸುತ್ತಿದ್ದು, ಸಂಸ್ಥೆಯ ಅಧೀಕೃತ ಇ-ಮೇಲ್ ಖಾತೆಗಳು 1). ascodwes@gmail.com, 2). scodwes@gmail.com, 3). scodwes@rediffmail.com ಗಳಿದ್ದು, ದಿನಾಂಕ: 27-04-2021 ರಂದು ಸಂಜೆ 05-00 ಗಂಟೆಯ ಸುಮಾರಿಗೆ ಪಿರ್ಯಾದಿಯವರ ಸಂಸ್ಥೆಯ ಅಧೀಕೃತ ಇ-ಮೇಲ್ ಖಾತೆಯಾದ ascodwes@gmail.com ಮತ್ತು scodwes@gmail.com ನ ಖಾತೆಗಳಿಗೆ ಪಿರ್ಯಾದಿಯವರ ಸಂಸ್ಥೆಯ ಯೂಸರನೇಮ್ ಮತ್ತು ಪಾಸವರ್ಡ್ ಗಳನ್ನು ಬಳಸಿ ಅನಧೀಕೃತವಾಗಿ ಲಾಗಿನ್ ಆಗಿ ಸಂಸ್ಥೆ ಮತ್ತು ಸರ್ಕಾರದ ವಿವಿಧ ಇಲಾಖೆಗೆ ಸಂಬಂಧಿಸಿದ ಮಹತ್ವದ ದಾಖಲಾತಿಗಳನ್ನು ಮತ್ತು ಮಾಹಿತಿಗಳನ್ನು ಕದ್ದಿರುವುದು ಪಿರ್ಯಾದಿ ಮತ್ತು ಅವರ ಸಂಸ್ಥೆಯ ಆಡಳಿತ ಮತ್ತು ಮುಖ್ಯ ಹಣಕಾಸು ಅಧಿಕಾರಿಯವರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಪರಿಶೀಲಿಸಿದಾಗ Oppo A9 2020 IMEI: 865931042677807 ಮತ್ತು SM-C701F, IMEI: 357169082043805 ನೇದರ ಆರೋಪಿತ ಬಳಕೆದಾರರು ಪಿರ್ಯಾದಿಯವರ ಸಂಸ್ಥೆಯ 1). ascodwes@gmail.com 2). scodwes@gmail.com ನ ಖಾತೆಯನ್ನು ಪಿರ್ಯಾದಿಯವರ ಸಂಸ್ಥೆಯ ಪಾಸವರ್ಡ್ ಮತ್ತು ಯೂಸರನೇಮ್ ಅನ್ನು ಬಳಸಿ ಲಾಗಿನ್ ಆಗಿರುವುದು ಮತ್ತು scodwes@gmail.com ನ ಖಾತೆಗೆ SM-C701F, IMEI: 357169082043805 ನೇದರಿಂದ ಪುನಃ ಲಾಗಿನ್ ಆಗಲು ಪ್ರಯತ್ನಿಸಿರುವುದು ದಿನಾಂಕ: 29-04-2021 ರಂದು ಮಧ್ಯಾಹ್ನ 02-00 ಗಂಟೆಯ ಸುಮಾರಿಗೆ ಪಿರ್ಯಾದಿಯವರ ಗಮನಕ್ಕೆ ಬಂದಿರುತ್ತದೆ. ಕಾರಣ ತಮ್ಮ ಸಂಸ್ಥೆಯ ಪಾಸವರ್ಡ್ ಮತ್ತು ಯೂಸರನೇಮ್ ಗಳಿಂದ ಅನಧೀಕೃತವಾಗಿ ತಮ್ಮ ಇ-ಮೇಲ್ ಖಾತೆಗಳಿಗೆ ಲಾಗಿನ ಆಗಿ ದಾಖಲಾತಿಗಳನ್ನು ಕಳ್ಳತನ ಮಾಡಿರುವವರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿದ ಬಗ್ಗೆ ಪಿರ್ಯಾದಿ ಡಾ: ವೆಂಕಟೇಶ ತಂದೆ ಲಂಬೋದರ ನಾಯ್ಕ, ಪ್ರಾಯ-51 ವರ್ಷ, ವೃತ್ತಿ-ಕಾರ್ಯ ನಿರ್ವಾಹಕ ನಿರ್ದೇಶಕರು, ಸ್ಕೋಡವೇಸ್ ಸಂಸ್ಥೆ, ಶಿರಸಿ, ಸಾ|| ಬನವಾಸಿ ರಸ್ತೆ, ತಾ: ಶಿರಸಿ ರವರು ದಿನಾಂಕ: 30-04-2021 ರಂದು 21-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 96/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಹೆರಾಲ್ಡ್ @ ಮಿನಾ ತಂದೆ ಡಿಯೋಲ್ ಫರ್ನಾಂಡೀಸ್, ಪ್ರಾಯ-39 ವರ್ಷ, ವೃತ್ತಿ-ಹೊಟೇಲಿನಲ್ಲಿ ಕೆಲಸ, ಸಾ|| ಯಲ್ಲಾಪುರ ನಾಕಾ, ಹಳಿಯಾಳ ಶಹರ. ಈತನು ದಿನಾಂಕ: 30-04-2021 ರಂದು 20-20 ಗಂಟೆಗೆ ಹಳಿಯಾಳ ಶಹರದ ಯಲ್ಲಾಪುರ ನಾಕಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಪಂಜಾಬ್ ಕಿಂಗ್ಸ್ ಪಂದ್ಯಾವಳಿಯ ಮೇಲೆ ತನ್ನ ಅಕ್ರಮ ಲಾಭದ ಸಲುವಾಗಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದಾಗ, ಕ್ರಿಕೆಟ್ ಬೆಟ್ಟಿಂಗ್ ನಿಂದ ಸಂಪಾದಿಸಿದ ನಗದು ಹಣ 2,200/- ರೂಪಾಯಿಗಳೊಂದಿಗೆ ಸೆರೆ ಸಿಕ್ಕಿದ್ದು ಇರುತ್ತದೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಿವಾನಂದ ಕೆ. ನಾವದಗಿ, ಪಿ.ಎಸ್.ಐ, ಹಳಿಯಾಳ ಪೊಲೀಸ್ ಠಾಣೆ ರವರು ದಿನಾಂಕ: 30-04-2021 ರಂದು 21-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 30-04-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 11/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಶೀತಲ್ ಅಜಿತ್ ನಾಯ್ಕ, ಪ್ರಾಯ-26 ವರ್ಷ, ಸಾ|| ಹನೇಹಳ್ಳಿ, ಗೋಕರ್ಣ, ತಾ: ಕುಮಟಾ. ಇವಳು ದಿನಾಂಕ: 29-04-2021 ರಂದು ಸಾಯಂಕಾಲ 06-00 ಗಂಟೆಯ ಸುಮಾರಿಗೆ ತನ್ನ ತಾಯಿಯ ಮನೆಯಾದ ಗಂಗೆಕೊಳ್ಳದಲ್ಲಿದ್ದಾಗ ಸದರಿಯವಳಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಆಗ ಸದರಿಯವಳಿಗೆ ಚಿಕಿತ್ಸೆಗಾಗಿ ಗೋಕರ್ಣದ ಆಸ್ಪತ್ರೆಯಿಂದ ಕುಮಟಾದ ಕೆನರಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸಮಯ ರಾತ್ರಿ 09-00 ಗಂಟೆಯ ಸುಮಾರಿಗೆ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟ ಬಗ್ಗೆ ದೃಢಪಡಿಸಿದ್ದು, ಇದರ ಹೊರತು ಸದ್ರಿಯವಳ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬೀರಪ್ಪ ತಂದೆ ಸುಬ್ರಾಯ ನಾಯ್ಕ, ಪ್ರಾಯ-58 ವರ್ಷ, ವೃತ್ತಿ-ಬಡಿಗೆ ಕೆಲಸ, ಸಾ|| ಗಂಗೆಕೊಳ್ಳ, ಗೋಕರ್ಣ, ತಾ: ಕುಮಟಾ ರವರು ದಿನಾಂಕ: 30-04-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 13/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ರಾಜಪ್ಪಾ ತಂದೆ ನಾಗಪ್ಪಾ ಸುಬ್ಬಾಯವರ, ಪ್ರಾಯ-37 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಕಾಳಗನಕೊಪ್ಪ, ತಾ: ಮುಂಡಗೋಡ. ಸುದ್ದಿದಾರರ ಮಗನಾದ ಈತನು ದಿನಾಂಕ: 19-04-2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಅಡುಗೆ ಕೋಣೆಯಲ್ಲಿ ಬೆಂಕಿ ಕಾಯಿಸುತ್ತಾ ಕುಳಿತಿದ್ದವನು, ಆಕಸ್ಮಿಕವಾಗಿ ಜೋಲಿ ತಪ್ಪಿ ಒಲೆಯ ಮೇಲೆ ಬಿದ್ದವನಿಗೆ ಸುಟ್ಟ ಗಾಯಗಳಾಗಿ ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಾದವನು ಚಿಕಿತ್ಸೆ ಫಲಿಸದೇ ದಿನಾಂಕ: 30-04-2021 ರಂದು ಬೆಳಿಗ್ಗೆ 05-05 ಗಂಟೆಗೆ ಮೃತಪಟ್ಟಿರುತ್ತಾನೆಯೇ ಹೊರತು ಆತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ನನ್ನ ಮಗ ರಾಜಪ್ಪನ ಮೃತದೇಹವು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯ ಶವಾಗಾರದಲ್ಲಿ ಇದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಪುಟ್ಟವ್ವ ಕೋಂ. ನಾಗಪ್ಪಾ ಸುಬ್ಬಾಯವರ, ಪ್ರಾಯ-65 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕಾಳಗನಕೊಪ್ಪ, ತಾ: ಮುಂಡಗೋಡ ರವರು ದಿನಾಂಕ: 30-04-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

ಇತ್ತೀಚಿನ ನವೀಕರಣ​ : 05-05-2021 04:38 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080