ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 30-12-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 192/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಸಾಬೀಲ್ ತಂದೆ ಕೊಯಕುಟ್ಟಿ ರಹಮಾನ್, ಸಾ|| ತಿರೂರು, ಕೇರಳಾ ರಾಜ್ಯ (ಕಾರ್ ನಂ: ಜಿ.ಎ-07/ಯು-7000 ನೇದರ ಚಾಲಕ). ಈತನು ದಿನಾಂಕ: 30-12-2021 ರಂದು 13-30 ಗಂಟೆಗೆ ಅಂಕೋಲಾ ತಾಲೂಕಿನ ಪೋಸ್ಟ್ ಬಾಳೆಗುಳಿಯಲ್ಲಿ ವರದರಾಜ ಹೋಟೆಲ್ ಎದುರು ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಚತುಷ್ಪಥ ರಸ್ತೆಯ ಮೇಲೆ ತನ್ನ ಬಾಬ್ತು ಕಾರ್ ನಂ: ಜಿ.ಎ-07/ಯು-7000 ನೇದನ್ನು ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದವನು, ತನ್ನ ಕಾರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲಾಗದೇ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನೋಡಿಕೊಂಡು ಎಚ್ಚರಿಕೆಯಿಂದ ರಸ್ತೆಯನ್ನು ದಾಟುತ್ತಿದ್ದ ರಾಜು ತಂದೆ ನಾಗಪ್ಪ ಕಿತ್ತೂರು, ಪ್ರಾಯ-40 ವರ್ಷ, ಸಾ|| ಕಿತ್ತೂರು, ಧಾರವಾಡ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಎರಡೂ ಕಾಲಿಗೆ ಗಂಭೀರ ಮತ್ತು ತಲೆಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ನಾಗೇಶ ಶೆಟ್ಟಿ, ಪ್ರಾಯ-42 ವರ್ಷ, ವೃತ್ತಿ-ಹೋಟೆಲ್ ವ್ಯಾಪಾರ, ಸಾ|| ಅಂಕೋಲಾ ಅರ್ಬನ್ ಬ್ಯಾಂಕ್ ಹತ್ತಿರ, ಮೇನ್ ರೋಡ್, ತಾ: ಅಂಕೋಲಾ ರವರು ದಿನಾಂಕ: 30-12-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 92/2021, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ-2021 ನೇದ್ದರ ವಿವರ...... ನಮೂದಿತ ಆರೋಪಿತರು 1]. ರಾಜು ಮಂಕಾಳಿ ಗೌಡ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದೇವಣ, ಗೋಕರ್ಣ, ತಾ: ಕುಮಟಾ, 2]. ಗಣಪತಿ ನಾರಾಯಣ ಗೌಡ, ಸಾ|| ಮಾವಿನಕುರ್ವೆ, ತಾ: ಹೊನ್ನಾವರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 30-12-2021 ರಂದು ಮಧ್ಯಾಹ್ನ 12-30 ಗಮಟೆಯ ಸುಮಾರಿಗೆ ತನ್ನ ಲಾಭದ ಸಲುವಾಗಿ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ದೇವಣ ಗ್ರಾಮದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಟ್ಟಡದ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಬರ-ಹೋಗುವ ಸಾರ್ವಜನಿಕರನ್ನು ಕೂಗಿ ಕರೆಯುತ್ತಾ, ತಮ್ಮ ತಮ್ಮ ಅದೃಷ್ಟದ ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿ, ಅದೃಷ್ಟದ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಜನರ ಮನವೊಲಿಸಿ, ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದು ಅವರು ಹೇಳಿದ ಅಂಕೆ-ಸಂಖ್ಯೆಯನ್ನು ತನ್ನ ಹತ್ತಿರ ಇರುವ ಚೀಟಿಯಲ್ಲಿ ಬರೆದುಕೊಂಡು ಓ.ಸಿ ಮಟಕಾ ಜೂಜಾಟ ನಡೆಸುತ್ತಿರುವಾಗ ಪಿರ್ಯಾದಿಯವರು ದಾಳಿ ಮಾಡಿದ ಕಾಲಕ್ಕೆ ನಗದು ಹಣ 1,740/- ರೂಪಾಯಿ ಮತ್ತು ಓ.ಸಿ ಮಟಕಾ ಜೂಜಾಟದ ಸಲಕರಣೆಗಳೊಂದಿಗೆ ಸೆರೆ ಸಿಕ್ಕಿದ್ದು ಮತ್ತು ಓ.ಸಿ ಮಟಕಾ ಜೂಜಾಟದಿಂದ ಸಂಪಾದಿಸಿದ ಹಣವನ್ನು ಆರೋಪಿ 2 ನೇಯವನಿಗೆ ಕೊಡುತ್ತಿದ್ದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ವಸಂತ ಆರ್. ಆಚಾರ್, ಪೊಲೀಸ್ ನಿರೀಕ್ಷಕರು, ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 30-12-2021 ರಂದು 14-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.  

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 158/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಿಯಾಜ್ ಫಾರೂಕ್ ಮುಲ್ಲಾ, ಸಾ|| ನಿಪ್ಪಾಣಿ, ಬೆಳಗಾವಿ (ಲಾರಿ ನಂ: ಎಮ್.ಎಚ್-09/ಇ.ಎಮ್-9027 ನೇದರ ಚಾಲಕ). ಈತನು ದಿನಾಂಕ: 30-12-2021 ರಂದು 14-00 ಗಂಟೆಗೆ ತನ್ನ ಲಾರಿ ನಂ: ಎಮ್.ಎಚ್-09/ಇ.ಎಮ್-9027 ನೇದನ್ನು ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಸ್ತೆಯಲ್ಲಿ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಎಳ್ಳಿಮಕ್ಕಿ ಕ್ರಾಸಿನಲ್ಲಿ ಹೋಗಿ ರಸ್ತೆಯ ಮೇಲಿನ ಹಂಪ್ಸ್ ಅನ್ನು ದಾಟಿ, ಲಾರಿಯ ವೇಗವನ್ನು ನಿಯಂತ್ರಿಸಲಾಗದೇ ಅದೇ ವೇಗದಲ್ಲಿ ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ಬರುತ್ತಿದ್ದ ಪಿರ್ಯಾದಿಯ ಲಾರಿ ನಂ: ಕೆ.ಎ-01/ಎ.ಜಿ-1252 ನೇದರ ಮಧ್ಯದಲ್ಲಿ ಡಿಕ್ಕಿ ಹೊಡೆದು ಜಖಂ ಪಡಿಸಿ, ಪಿರ್ಯಾದಿಗೆ ಹಾಗೂ ಪಿರ್ಯಾದಿಯ ಲಾರಿಯಲ್ಲಿದ್ದ ಯೋಗೇಶ ತಂದೆ ಮಾದೇವ ನಾಯ್ಕ, ಇವರಿಗೆ ಸಣ್ಣಪುಟ್ಟ ಗಾಯನೋವು ಪಡಿಸಿದ್ದಲ್ಲದೇ, ತನ್ನ ಲಾರಿಯಲ್ಲಿದ್ದ ಚೇತನ್ ತಂದೆ ದೇವಾನಂದ ರಜಪೂತ್, ಈತನಿಗೆ ಹಾಗೂ ತನಗೆ ಸಣ್ಣ ಪುಟ್ಟ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ನವೀನ ತಂದೆ ಶಿವಲಿಂಗೆ ಗೌಡ, ಪ್ರಾಯ-28 ವರ್ಷ, ವೃತ್ತಿ-ಲಾರಿ ಚಾಲಕ, ಸಾ|| ಹುಣಸೂರು, ಕಸಬಾ, ಎಮ್ಮೆಕೊಪ್ಪಲ್, ಮೈಸೂರು ರವರು ದಿನಾಂಕ: 30-12-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 173/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ಮೊಗವೀರ, ಪ್ರಾಯ-30 ವರ್ಷ, ವೃತ್ತಿ-ಚಾಲಕ, ಸಾ|| ಕುಂದಾಪುರ, ಉಡುಪಿ (ಕಾರ್ ನಂ: ಕೆ.ಎ-50/ಎ-1994 ನೇದರ ಚಾಲಕ). ಈತನು ದಿನಾಂಕ: 30-12-2021 ರಂದು ಬೆಳಿಗ್ಗೆ 11-45 ಗಂಟೆಯ ಸುಮಾರಿಗೆ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಗುಳ್ಮೇ ಕ್ರಾಸಿನಲ್ಲಿ ತನ್ನ ಕಾರ್ ನಂ: ಕೆ.ಎ-50/ಎ-1994 ನೇದನ್ನು ಭಟ್ಕಳ ಶಹರದ ಕಡೆಯಿಂದ ಕುಂದಾಪುರದ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಎರಡೂ ಬದಿಯಿಂದ ಬರ-ಹೋಗುವ ವಾಹನಗಳನ್ನು ನೋಡಿಕೊಂಡು ನಿಧಾನವಾಗಿ ನಡೆದುಕೊಂಡು ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದ ಪಿರ್ಯಾದಿಯವರ ತಂದೆ ಶ್ರೀ ನಾರಾಯಣ ತಂದೆ ಈರಾ ನಾಯ್ಕ, ಪ್ರಾಯ-64 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆಳಗಿನ ಮನೆ, ಸತ್ಯನಾರಾಯಣ ನಗರ, ಮುಂಡಳ್ಳಿ, ತಾ: ಭಟ್ಕಳ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಶ್ರೀ ನಾರಾಯಣ ತಂದೆ ಈರಾ ನಾಯ್ಕ, ಇವರಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರಾಮಚಂದ್ರ ತಂದೆ ನಾರಾಯಣ ನಾಯ್ಕ, ಪ್ರಾಯ-24 ವರ್ಷ, ವೃತ್ತಿ-ಪೇಂಟಿಂಗ್ ಕೆಲಸ, ಸಾ|| ಕೆಳಗಿನ ಮನೆ, ಸತ್ಯನಾರಾಯಣ ನಗರ, ಮುಂಡಳ್ಳಿ, ತಾ: ಭಟ್ಕಳ ರವರು ದಿನಾಂಕ: 30-12-2021 ರಂದು 18-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 243/2021, ಕಲಂ: 279, 337, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಜೇಂದ್ರ ತಂದೆ ಆನಂದ ಭಾಯಾರ್, ಪ್ರಾಯ-23 ವರ್ಷ, ಸಾ|| ಕಾಸರಗೋಡು, ಕೋಡಿಯಲಬೈಲು, ಮಂಗಳೂರು (ಕೆಂಪು ಬಣ್ಣದ ಹೋಂಡಾ ಸಿಟಿ ಕಾರ್ ನಂ: ಕೆ.ಎ-01/ಎಮ್.ಇ-4170 ನೇದರ ಚಾಲಕ). ಈತನು ದಿನಾಂಕ: 30-12-2021 ರಂದು ಸಂಜೆ 05-00 ಗಂಟೆಯ ಸುಮಾರಿಗೆ ಯಲ್ಲಾಪುರ ತಾಲೂಕಿನ ಹಿಟ್ಟಿನಬೈಲ್ ಗ್ರಾಮದಲ್ಲಿರುವ ಮಹಾರಾಷ್ಟ್ರ ಡಾಬಾದ ಹತ್ತಿರ ಹಾಯ್ದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯ ಮೇಲೆ ತನ್ನ ಕೆಂಪು ಬಣ್ಣದ ಹೋಂಡಾ ಸಿಟಿ ಕಾರ್ ನಂ: ಕೆ.ಎ-01/ಎಮ್.ಇ-4170 ನೇದನ್ನು ಅತೀವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವಂತೆ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಚಲಾಯಿಸಿಕೊಂಡು ಬಂದವನು, ಒಮ್ಮೆಲೇ ಪಿರ್ಯಾದಿಯು ಚಲಾಯಿಸುತ್ತಿದ್ದ ಕಾರನ್ನು ಓವರಟೇಕ್ ಮಾಡಿ ಮುಂದೆ ಹೋಗುತ್ತಿದ್ದವನು, ಎದುರಿನಿಂದ ಅಂದರೆ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಗ್ರೇ ಬಣ್ಣದ ಕಾರ್ ನಂ: ಕೆ.ಎ-03/ಎಮ್.ಎಮ್-6739 ನೇದಕ್ಕೆ ಮುಂದಿನಿಂದ ಢಿಕ್ಕಿ ಪಡಿಸಿದ್ದಲ್ಲದೇ, ಹಿಂದಿನಿಂದ ಪಲ್ಟಿ ಹೊಡೆದು ಪಿರ್ಯಾದಿಯು ಚಲಾಯಿಸುತ್ತಿದ್ದ ಕಾರ್ ನಂ: ಟಿ.ಎಸ್-07/ಜಿ.ಜಿ-0076 ನೇದಕ್ಕೆ ಢಿಕ್ಕಿ ಮಾಡಿ ಅಪಘಾತ ಪಡಿಸಿದ್ದರಿಂದ ಪಿರ್ಯಾದಿ ಹಾಗೂ ಪಿರ್ಯಾದಿಯ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜನರಿಗೆ ಸಾದಾ ಸ್ವರೂಪದ ಗಾಯನೋವು ಆಗಿದ್ದಲ್ಲದೇ, ಅಪಘಾತಗೊಂಡ ಕಾರ್ ನಂ: ಕೆ.ಎ-03/ಎಮ್.ಎಮ್-6739 ನೇದರಲ್ಲಿ ಪ್ರಯಾಣಿಸುತ್ತಿದ್ದ 5-6 ಜನರಿಗೆ ಸಾದಾ ಹಾಗೂ ಭಾರೀ ಸ್ವರೂಪದ ಗಾಯನೋವು ಆಗಿದ್ದಲ್ಲದೇ, ಆರೋಪಿತನು ತಾನು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-01/ಎಮ್.ಇ-4170 ನೇದರಲ್ಲಿ ಪ್ರಯಾಣಿಸುತ್ತಿದ್ದ ತನಗೆ ಹಾಗೂ ಇನ್ನುಳಿದ 3 ಜನರಿಗೆ ಭಾರೀ ಸ್ವರೂಪದ ಗಾಯನೋವು ಆಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಚಿಕಿತ್ಸೆಯಲ್ಲಿದ್ದ ಆರೋಪಿ ಚಾಲಕನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸುಭಾಷ ತಂದೆ ಸ್ವಾಮಿಗೌಡ ರವರಿಗೆ ಚಿಕಿತ್ಸೆ ಫಲಕಾರಿಯಾಗದೇ, ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ 17-40 ಗಂಟೆಗೆ ಮೃತಪಟ್ಟಿರುತ್ತಾನೆ ಹಾಗೂ ಮೂರು ಕಾರುಗಳನ್ನು ಜಖಂಗೊಳಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶ್ರೀನಾಥ ತಂದೆ ಮಲ್ಲೇಶಂ ದಾಸರಿ, ಪ್ರಾಯ-33 ವರ್ಷ, ವೃತ್ತಿ-ಕೋಲಂಬಸ್ ಕಂಪನಿಯಲ್ಲಿ ಖಾಸಗಿ ನೌಕರ, ಸಾ|| ಮನೆ ನಂ: 4-42-640, ಆಸ್ಬೆಟೋಸ್ ಕಾಲೋನಿ, ಬಾಲಾನಗರ ಟೌನಶಿಪ್, ಬಾಲಾನಗರ, ಕೆ.ವಿ ರಂಗಾರೆಡ್ಡಿ, ತೆಲಂಗಾಣ-500037 ರವರು ದಿನಾಂಕ: 30-12-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 129/2021, ಕಲಂ: 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ದತ್ತಾತ್ರೇಯ ತಂದೆ ವೆಂಕಟ್ರಮಣ ಹೆಗಡೆ, ಪ್ರಾಯ-ಅಂದಾಜು 78 ವರ್ಷ, ಸಾ|| ಹಳ್ಳಕೊಪ್ಪ, ಪೋ: ಬೊಪ್ಪನಳ್ಳಿ, ತಾ: ಶಿರಸಿ. ಈತನು ಅಡಿಕೆ ಮರದ ಕೊನೆ ಕೊಯ್ಯಲು ಯಾವುದೇ ಸುರಕ್ಷತಾ ಸಾಮಗ್ರಿಗಳನ್ನು ಕೊಡದೇ ಮತ್ತು ಸುರಕ್ಷತಾ ಕ್ರಮ ವಹಿಸದೇ ಅಡಿಕೆ ಮರವನ್ನು ಹತ್ತಿಸಿದರೇ ಮನುಷ್ಯನ ಪ್ರಾಣ ಅಥವಾ ದೈಹಿಕ ಸುರಕ್ಷತೆಗೆ ಅಪಾಯ ಅಂತಾ ಗೊತ್ತಿದ್ದರೂ ಸಹ ದಿನಾಂಕ: 30-12-2021 ರಂದು ಪಿರ್ಯಾದಿಯ ಗಂಡನಾದ ಶ್ರೀ ಕೃಷ್ಣ ತಂದೆ ಜಾನು ಮರಾಠಿ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಾ|| ಬೈಲಗದ್ದೆ, ಪೋ: ಶಿವಳ್ಳಿ, ತಾ: ಶಿರಸಿ, ಈತನಿಗೆ ಯಾವುದೇ ಸುರಕ್ಷತಾ ಸಾಮಗ್ರಿಗಳನ್ನು ಕೊಡದೇ ಮತ್ತು ಸುರಕ್ಷತಾ ಕ್ರಮ ವಹಿಸದೇ ಆರೋಪಿತನ ತೋಟದಲ್ಲಿರುವ ಅಡಿಕೆ ಮರದ ಕೊನೆಯನ್ನು ಕೊಯ್ಯಲು ಹತ್ತಿಸಿದಾಗ, ಅಡಿಕೆ ಮರದ ಕೊನೆಯನ್ನು ಕೊಯ್ಯುತ್ತಿದ್ದ ಪಿರ್ಯಾದಿಯ ಗಂಡನು 12-30 ಗಂಟೆಯ ಸುಮಾರಿಗೆ ಅಡಿಕೆ ಮರದಿಂದ ಬಿದ್ದು ಮಾರಣಾಂತಿಕ ಗಾಯನೋವನ್ನು ಹೊಂದಿ ಮೃಪಟ್ಟಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಲಕ್ಷ್ಮೀ ಕೋಂ. ಕೃಷ್ಣ ಮರಾಠಿ, ಪ್ರಾಯ-35 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೈಲಗದ್ದೆ, ಪೋ: ಶಿವಳ್ಳಿ, ತಾ: ಶಿರಸಿ ರವರು ದಿನಾಂಕ: 30-12-2021 ರಂದು 14-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 156/2021, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಯಾವುದೋ ಅಪರಿಚಿತ ಲಾರಿ ಚಾಲಕನಾಗಿದ್ದು, ಲಾರಿಯ ನಂಬರ್ ಹಾಗೂ ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ಸರಕಾರಿ ಜೀಪ್ ನಂ: ಕೆ.ಎ-30/ಜಿ-539 ನೇದರಲ್ಲಿ ದಿನಾಂಕ: 30-12-2021 ರಂದು ಬೆಳಗಿನ ಜಾವ ಶಿರಸಿಯಲ್ಲಿ ನಡೆಯುತ್ತಿರುವ ಪೋಲಸೆಟ್-2021 ನೇದರ ಸಿವಿಲ್ ಪೊಲೀಸ್À ಕಾನಸ್ಟೇಬಲ್ ದೈಹಿಕ ಮತ್ತು ಸಹಿಷ್ಣುತೆಯ ಪರೀಕ್ಷೆಯ ಕರ್ತವ್ಯಕ್ಕೆ ಹೋಗುತ್ತಿದ್ದವರು 06-00 ಗಂಟೆಯ ಸುಮಾರಿಗೆ ಶಿರಸಿ-ಸಿದ್ದಾಪುರ ಮುಖ್ಯ ರಸ್ತೆಯ ನಿಡಗೋಡ ಹತ್ತಿರ ಹೋಗುತ್ತಿದ್ದಾಗ ಎದುರಿನಿಂದ ಆರೋಪಿ ಲಾರಿ ಚಾಲಕನು ಬೆಳಗಿನ ಜಾವ ವಾಹನ ಸಂಚಾರ ವಿರಳ ಇದ್ದುದರಿಂದ ಅವನ ಪಥವನ್ನು ಬಿಟ್ಟು ಅವನ ಬಲ ಪಥದಲ್ಲಿ ಅತೀವೇಗವಾಗಿ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬರುತ್ತಿದ್ದುದನ್ನು ನೋಡಿದ ಪೊಲೀಸ್ ಜೀಪ್ ಚಾಲಕ ಶ್ರೀ ಯಲ್ಲಪ್ಪ ಕಾಗವಾಡ, ಸಿ.ಎಚ್.ಸಿ-1392, ಸಿದ್ದಾಪುರ ಪೊಲೀಸ್ ಠಾಣೆ ರವರು ಅಪಘಾತ ತಪ್ಪಿಸುವ ಉದ್ದೇಶದಿಂದ ಜೀಪನ್ನು ಬಲಕ್ಕೆ ತೆಗೆದುಕೊಂಡರೂ ಸಹ ಆರೋಪಿ ಲಾರಿ ಚಾಲಕನು ತನ್ನ ಲಾರಿಯನ್ನು ಅವನ ಎಡಕ್ಕೆ ಕಟ್ ಹೊಡೆದು ಜೀಪಿನ ಮುಂದಿನ ಎಡ ಮೂಲೆಗೆ ಡಿಕ್ಕಿ ಪಡಿಸಿದ ಪರಿಣಾಮ ಜೀಪ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಯ ಹೊಂಡಕ್ಕೆ ಬಿದ್ದು, ಮುಂದಿನ ಟಾಯರ್ ಬ್ರಸ್ಟ್ ಆಗುವಂತೆ ಅಪಘಾತ ಪಡಿಸಿ, ಜೀಪಿನಲ್ಲಿದ್ದ ಪಿ.ಎಸ್.ಐ ಶ್ರೀ ಮಹಂತಪ್ಪ ಜಿ. ಕುಂಬಾರ ಹಾಗೂ ಜೀಪ್ ಚಾಲಕ ಶ್ರೀ ಯಲ್ಲಪ್ಪ ಕಾಗವಾಡ ಇವರಿಗೆ ಗಾಯನೋವು ಪಡಿಸಿ, ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೇ ಹೊಡೆದುಕೊಂಡು ಸಿದ್ದಾಪುರ ಕಡೆಗೆ ಪರಾರಿ ಆದ ಬಗ್ಗೆ ಪಿರ್ಯಾದಿ ಶ್ರೀ ಮಹಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 30-12-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 30-12-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 64/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಆದಿತ್ಯ ತಂದೆ ಕುಮಾರ ನಾಯ್ಕ, ಪ್ರಾಯ-21 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಲಕ್ಷ್ಮೇಶ್ವರ, ತಾ: ಅಂಕೋಲಾ. ಪಿರ್ಯಾದಿಯ ಮಗನಾದ ಈತನು ದಿನಾಂಕ: 29-12-2021 ರಂದು ತನ್ನ ಸ್ನೇಹಿತರೊಂದಿಗೆ ಕೂಡಿಕೊಂಡು ಅಂಕೋಲಾದ ಬಜಾರಿನಲ್ಲಿ ತಿರುಗಾಡುತ್ತಿದ್ದವನು, ಸಾಯಂಕಾಲ 06-00 ಗಂಟೆಯಿಂದ ದಿನಾಂಕ: 30-12-2021 ರಂದು ಬೆಳಿಗ್ಗೆ 05-45 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಅಂಕೋಲಾದ ಬಾಳೆಗುಳಿಯ ವರದರಾಜ್ ಹೋಟೆಲ್ ಎದುರಿಗೆ ಇರುವ ಕೊಂಕಣ ರೈಲ್ವೇ ಹಳಿಯ ಮೇಲೆ ಹೋದವನು, ಚಲಿಸುತ್ತಿರುವ ರೈಲಿಗೆ ಸಿಕ್ಕಿ ಮೃತಪಟ್ಟಿರುತ್ತಾನೆ. ಈ ಕುರಿತು ಮೃತನ ಸಾವಿನ ತನಿಖೆಯನ್ನು ಕೈಗೊಂಡು ಮೃತದೇಹವನ್ನು ಬಿಟ್ಟು ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕುಮಾರ ತಂದೆ ವಿನಾಯಕ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಲಕ್ಷ್ಮೇಶ್ವರ, ತಾ: ಅಂಕೋಲಾ ರವರು ದಿನಾಂಕ: 30-12-2021 ರಂದು 06-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುಂಡಗೋಡ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 41/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಫಕ್ಕೀರಪ್ಪ ತಂದೆ ಗಂಗಪ್ಪ ಅಗಸಿಮನೆ, ಪ್ರಾಯ-73 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮುಡಸಾಲಿ, ತಾ: ಮುಂಡಗೋಡ. ಪಿರ್ಯಾದಿಯ ತಂದೆಯಾದ ಈತನು ಬೆಳೆ ಬೆಳೆಯಲು ತನ್ನ ಹಾಗೂ ತನ್ನ ಸಹೋದರನ ಹೆಸರಿನಲ್ಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘ, ಕಾತೂರಿನಲ್ಲಿ ಸಾಲವನ್ನು ಮಾಡಿದ್ದು, ಬೆಳೆದ ಬೆಳೆಯ ಫಸಲು ಸರಿಯಾಗಿ ಬರದೇ ಇದ್ದುದರಿಂದ ಸಾಲವನ್ನು ತೀರಿಸಲು ಆಗುವುದಿಲ್ಲ ಅಂತಾ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ: 30-12-2021 ರಂದು ಸಾಯಂಕಾಲ 05-00 ಗಂಟೆಯಿಂದ 06-00 ಗಂಟೆಯ ಅವಧಿಯಲ್ಲಿ ಅವರ ಹೊಲದ ಪಕ್ಕದ ಹಳ್ಳದ ಅಂಚಿನಲ್ಲಿರುವ ಮಾವಿನ ಮರಕ್ಕೆ ತನ್ನ ಲುಂಗಿಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಅವರ ಮೃತದೇಹವು ಹೊಲದಲ್ಲಿರುವ ಮನೆಯಲ್ಲಿ ಇದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಿಂಗಜ್ಜ ತಂದೆ ಫಕ್ಕೀರಪ್ಪ ಅಗಸಿಮನಿ, ಪ್ರಾಯ-35 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮುಡಸಾಲಿ, ತಾ: ಮುಂಡಗೋಡ ರವರು ದಿನಾಂಕ: 30-12-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 31-12-2021 01:58 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080