ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 30-01-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 03/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನವಿಲ್ ತಂದೆ ಕ್ಲೇಮಂತ್ ಗುಡಿನ್ಹೋ, ಪ್ರಾಯ-27 ವರ್ಷ, ವೃತ್ತಿ-ಚಾಲಕ, ಸಾ|| ಪಾದ್ರಿಬಾಗ್, ಕಾರವಾರ (ಕಾರ್ ನಂ: ಕೆ.ಎ-30/ಎ-1158 ನೇದರ ಚಾಲಕ). ದಿನಾಂಕ: 30-01-2021 ರಂದು ಮಧ್ಯಾಹ್ನ 14-10 ಗಂಟೆಗೆ ಪಿರ್ಯಾದಿಯ ಗ್ಯಾರೇಜಿನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ತನ್ನ ಪರಿಚಯದ ಅಬ್ದುಲ್ @ ಸುಹೇಲ್ ತಂದೆ ಅಬ್ದುಲ್ ಅಜೀಜ್ ವಾರೀಸ್, ಈತನು ತನ್ನ ಮೋಟಾರ್ ಸೈಕಲ್ ನಂ: ಕೆ.ಎ-01/ಇ.ಎಫ್-2030 ನೇದನ್ನು ಕಾರವಾರ-ಕೋಡಿಬಾಗ್ ಏಕಮುಖ ಸಂಚಾರ ರಸ್ತೆಯಲ್ಲಿ  ಚಲಾಯಿಸಿಕೊಂಡು ಬರುತ್ತಿರುವಾಗ ಕಾರವಾರ ಕಡೆಯಿಂದ ಕೋಡಿಬಾಗ್ ಕಡೆಗೆ ಕಾರ್ ನಂ: ಕೆ.ಎ-30/ಎ-1158 ನೇದರ ಚಾಲಕನಾದ ನಮೂದಿತ ಆರೋಪಿತನು ತನ್ನ ಕಾರನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನು, ಕೋಡಿಬಾಗದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಎದುರುಗಡೆ ಡಿವೈಡರ್ ಹತ್ತಿರ ಕಾರವಾರ ಕಡೆಯಿಂದ ಕೋಡಿಬಾಗ್ ಕಡೆಗೆ ಹೋಗುವ ಏಕಮುಖ ಸಂಚಾರ ರಸ್ತೆಯಲ್ಲಿ ತೀರಾ ಎಡಬದಿಯಿಂದ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬರುತ್ತಿದ್ದ ಪಿರ್ಯಾದಿಯ ಪರಿಚಯದ ಅಬ್ದುಲ್ @ ಸುಹೇಲ್, ಈತನ ಮೋಟಾರ್ ಸೈಕಲಿನ ಮುಂದಿನ ಬಲಬದಿಗೆ ತನ್ನ ಕಾರಿನ ಎದುರಿನಿಂದ ಡಿಕ್ಕಿ ಹೊಡೆದು, ಅಪಘಾತ ಪಡಿಸಿ, ಅಬ್ದುಲ್ @ ಸುಹೇಲ್ ಈತನಿಗೆ ತಲೆಯ ಮೇಲೆ ಬಲಭಾಗದಲ್ಲಿ ಗಾಯ ಹಾಗೂ ಒಳನೋವು, ಬಲಗೆನ್ನೆಯ ಮೇಲೆ ಗಾಯ ಹಾಗೂ ಒಳನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಅಬ್ದುಲ್ ಖಾದರ್ ತಂದೆ ಅಬ್ಬಾಸ್ ಅಲಿ ಮುಲ್ಲಾ, ಪ್ರಾಯ-35 ವರ್ಷ, ವೃತ್ತಿ-ಮೆಕ್ಯಾನಿಕ್, ಸಾ|| ಮುಲ್ಲಾ ಸ್ಟಾಫ್ ಹತ್ತಿರ, ಕಾರವಾರ ರವರು ದಿನಾಂಕ: 30-01-2021 ರಂದು 16-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 11/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸ್ವರಾಜ ತಂದೆ ಯಲ್ಲಾರಿ ನಾಕಾಡಿ, ಪ್ರಾಯ-25 ವರ್ಷ, ವೃತ್ತಿ-ಬೆಳ್ಳಿ ಆಭರಣ ಕೆಲಸ, ಸಾ|| ಮನೆ ನಂ: ಬಿ.ಕೆ ಹಳ್ಳಿ, ತಾ: ಹಳಿಯಾಳ, ಹಾಲಿ ಸಾ|| 217/6, 7 ನೇ ಕ್ರಾಸ್, ಆದರ್ಶನಗರ, ವಡಗಾಂವ, ಬೆಳಗಾವಿ, 2]. ರಮೇಶ ವೆಂಕಟೇಶ ಪಾಲನಕರ್, ಪ್ರಾಯ-27 ವರ್ಷ, ವೃತ್ತಿ-ಬೆಳ್ಳಿ ತಾಮ್ರ ಕೆಲಸ, ಸಾ|| ತವನಂದಿ, ತಾ: ಸೊರಬಾ, ಜಿ: ಶಿವಮೊಗ್ಗ, ಹಾಲಿ ಸಾ|| 92/1, ಯಳಮಾಳ ರೋಡ್, ಪಾಟೀಲ್ ಗಲ್ಲಿ, ವಡಗಾಂವ, ಬೆಳಗಾವಿ. ಈ ನಮೂದಿತ ಆರೋಪಿತರು ದಿನಾಂಕ: 30-01-2021 ರಂದು 14-45 ಘಂಟೆಗೆ ಯಾವುದೇ ಪಾಸ್ ಅಥವಾ ಪರವಾನಿಗೆ ಇಟ್ಟುಕೊಳ್ಳದೇ ತಮ್ಮ ಲಾಭಕ್ಕಾಗಿ ಗೋವಾ ರಾಜ್ಯ ತಯಾರಿಕೆಯ ವಿವಿಧ ಬಗೆಯ ಸುಮಾರು 30,720/- ರೂಪಾಯಿ ಬೆಲೆಬಾಳುವ ಸರಾಯಿಯನ್ನು ತಾವು ಚಲಾಯಿಸುತ್ತಿದ್ದ ಕಾರ್ ನಂ: ಕೆ.ಎ-22/ಝಡ್-8583 ನೇದರಲ್ಲಿ ಹಾಕಿಕೊಂಡು ಗೋವಾದಿಂದ ಮಾಜಾಳಿ ಚೆಕಪೋಸ್ಟ್ ಮುಖಾಂತರ ಸಾಗಾಟ ಮಾಡುತ್ತಿದ್ದವರು, ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ತಪ್ಪಿಸಿಕೊಂಡು ಹೋಗುವ ಉದ್ದೇಶದಿಂದ ಚಲಾಯಿಸಿಕೊಂಡು ಹೋಗಲು ಪ್ರಯತ್ನಪಡುತ್ತಿದ್ದಾಗ ಬೆನ್ನಟ್ಟಿ ಅಸ್ನೋಟಿ ಹತ್ತಿರ ಸದರಿ ಅಬಕಾರಿ ಸ್ವತ್ತುಗಳೊಂದಿಗೆ ದಾಳಿ ನಡೆಸಿ ಹಿಡಿದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರವೀಣಕುಮಾರ ಆರ್, ಪಿ.ಎಸ್.ಐ, ಚಿತ್ತಾಕುಲಾ ಪೊಲೀಸ್ ಠಾಣೆ ರವರು ದಿನಾಂಕ: 30-01-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 22/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ಬಾಳಪ್ಪ ಕುಲ್ಲಿ, ವೃತ್ತಿ-ಚಾಲಕ, ಸಾ|| ರಾಮದುರ್ಗಾ, ಬೆಳಗಾವಿ (ಲಾರಿ ನಂ: ಕೆ.ಎ-22/ಸಿ-1594 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 26-01-2021 ರಂದು 17-45 ಗಂಟೆಗೆ ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ರಸ್ತೆಯಲ್ಲಿ ತನ್ನ ಲಾರಿಯನ್ನು ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತೀವೇಗವಾಗಿ ಹಾಗೂ ಅಜಾರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನು, ತನ್ನ ಮುಂದಿನಿಂದ ಹೋಗುತ್ತಿದ್ದ ಬೇರೊಂದು ಲಾರಿಗೆ ಓವರಟೇಕ್ ಮಾಡಿಕೊಂಡು ರಸ್ತೆಯ ಬಲಕ್ಕೆ ಬಂದವನು, ತನ್ನ ಲಾರಿಯನ್ನು ನಿಯಂತ್ರಿಸಲಾಗದೇ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಪಿರ್ಯಾದಿಯವರ ಜೀಪ್ ನಂ: ಕೆ.ಎ-30/ಜಿ-255 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಜೀಪಿನಲ್ಲಿದ್ದ ಪಿರ್ಯಾದಿಗೆ ಸಾದಾ ಸ್ವರೂಪದ ಗಾಯನೋವು ಪಡಿಸಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಮೇಶ ತಂದೆ ರಮಾಕಾಂತ ಕೊಠಾರಕರ, ಪ್ರಾಯ-28 ವರ್ಷ, ವೃತ್ತಿ-ಚಾಲಕ, ಸಾ|| ತಾಟಗಾರ ಕ್ರಾಸ್, ಉದ್ಯಮ ನಗರ, ತಾ: ಅಂಕೋಲಾ ರವರು ದಿನಾಂಕ: 30-01-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2021, ಕಲಂ: 420 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಮತಿ ಮೇರಿ ವಿಜಯಕುಮಾರ ಎಮ್ಮಿ, ಸಾ|| ರಂಗಾಪುರ, ತುಮರಿಕೊಪ್ಪ, ಧಾರವಾಡ, 2]. ರೋಬಿನ್ ಪತ್ರೋನ್ ಫರ್ನಾಂಡೀಸ್, ಸಾ|| ಆರೋಳ್ಳಿ, ಮುಗ್ವಾ, ತಾ: ಹೊನ್ನಾವರ, 3]. ವಿಕ್ಟರ್ ಮಿಂಗ್ಲಿ ಫರ್ನಾಂಡೀಸ್, ಸಾ|| ಮುಗ್ವಾ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಕಳೆದ ಒಂದು ವರ್ಷದ ಹಿಂದೆ ಪಿರ್ಯಾದಿದಾರರಿಗೆ ಹಾಗೂ ಇನ್ನುಳಿದವರಿಗೆ ‘ಮದರ್ ತೆರೆಸಾ’ ಎಂಬ ಸಂಘದಲ್ಲಿ ‘30,000/- ರೂಪಾಯಿ ಹಣ ತುಂಬಿದರೆ ಶೇಕಡಾ 1% ಬಡ್ಡಿ ದರದಲ್ಲಿ 3,00,000/- ರೂಪಾಯಿ ಸಾಲವಾಗಿ ಕೊಡುತ್ತೇವೆ’ ಅಂತಾ ನಂಬಿಸಿ, ಹಣ ಪಡೆದುಕೊಂಡು ಸ್ವೀಕೃತಿಯನ್ನು ನೀಡದೇ ಮೋಸ ಮಾಡಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ವೆಲಂಟಿನ್ ಪ್ರಾನ್ಸಿಸ್ ರೋಡ್ರಿಗೀಸ್, ಪ್ರಾಯ-45 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಅಪ್ಸರಕೊಂಡ, ಕಾಸರಕೋಡ, ತಾ: ಹೊನ್ನಾವರ ರವರು ದಿನಾಂಕ: 30-01-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 12/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಮೋಹನ ನಾರಾಯಣ ನಾಯ್ಕ, ಪ್ರಾಯ-28 ವರ್ಷ, ಸಾ|| ಸಾರಸ್ವತಕೇರಿ, ಮಂಕಿ, ತಾ: ಹೊನ್ನಾವರ, 2]. ಶ್ರೀಕಾಂತ ಧರ್ಮಾ ನಾಯ್ಕ, ಪ್ರಾಯ-28 ವರ್ಷ, ಸಾ|| ಗುಡೇಮಕ್ಕಿ, ಮಂಕಿ, ತಾ: ಹೊನ್ನಾವರ, 3]. ಪ್ರಭಾಕರ ಗೋವಿಂದ ಗೌಡ, ಪ್ರಾಯ-32 ವರ್ಷ, ಸಾ|| ಗುಣವಂತೆ, ತಾ: ಹೊನ್ನಾವರ, 4]. ರಾಜೇಶ ಮಾಬ್ಲೇಶ್ವರ ನಾಯ್ಕ, ಸಾ|| ಗುಳದಕೇರಿ, ಮಂಕಿ, ತಾ: ಹೊನ್ನಾವರ ಹಾಗೂ ಇತರೆ ಮೂವರು. ಈ ನಮೂದಿತ ಆರೋಪಿತರು ದಿನಾಂಕ: 29-01-2021 ರಂದು 20-15 ಗಂಟೆಗೆ ಮಂಕಿಯ ತುಳಶಿ ಬಾರ್ ಹಿಂಭಾಗದ ಖುಲ್ಲಾ ಸ್ಥಳದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಹಣವನ್ನು ಇಸ್ಪೀಟ್ ಎಲೆಗಳ ಮೇಲೆ ಪಣವಾಗಿಟ್ಟು, ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ ಜೂಗಾರಾಟಕ್ಕೆ ಬಳಸಿದ ಒಟ್ಟೂ ಹಣ 2,500/- ರೂಪಾಯಿ ಹಾಗೂ ಇಸ್ಪೀಟ್ ಜೂಗಾರಾಟದ ಸಲಕರಣೆಗಳೊಂದಿಗೆ ಆರೋಪಿ 1 ರಿಂದ 3 ನೇಯವರು ಸೆರೆ ಸಿಕ್ಕಿದ್ದು ಹಾಗೂ ಆರೋಪಿ 4 ನೇಯವನು ಮತ್ತು ಇತರೆ ಆರೋಪಿತರು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣೂರ, ಪಿ.ಎಸ್.ಐ, ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 30-01-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 12/2021, ಕಲಂ: 4, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಹಾಗೂ ಕಲಂ: 11(1)(D) PREVENTION OF CRUELTY TO ANIMALS ACT-1960  ನೇದ್ದರ ವಿವರ...... ನಮೂದಿತ ಆರೋಪಿತ ಇಬ್ರಾಹಿಂ ಹವಾ, ಸಾ|| ಹನೀಪಾಬಾದ, ಹೆಬಳೆ, ತಾ: ಭಟ್ಕಳ. ನಮೂದಿತ ಆರೋಪಿತನು ಭಟ್ಕಳದ ಹನೀಫಾಬಾದ್ 5 ನೇ ಕ್ರಾಸಿನಲ್ಲಿ ಮುನೀರ್ ಮಸೀದಿ ಹತ್ತಿರ ತನ್ನ ಮನೆಯ ಹತ್ತಿರ ಇರುವ ಒಂದು ಹಳೆ ಕೊಟ್ಟಿಗೆಯ ಪಕ್ಕದಲ್ಲಿ 1). ಕಪ್ಪು ಬಣ್ಣದ ಹೋರಿ-01, ಅ||ಕಿ|| 4,000/- ರೂಪಾಯಿ, 2). ಬೆಲೆಯ ಕಪ್ಪು ಬಣ್ಣದ ಹೋರಿ ಕರು-01, ಅ||ಕಿ|| 1,500/- ರೂಪಾಯಿ, 3). ಬೆಲೆಯ ಕಪ್ಪು ಬಣ್ಣದ ಆಕಳು ಕರು-01, ಅ||ಕಿ|| 1,500/- ರೂಪಾಯಿ, 4). ಕಂದು ಮಿಶ್ರಿತ ಕಪ್ಪು ಬಣ್ಣದ ಹೋರಿ ಕರು-01, ಅ||ಕಿ|| 1,000/- ರೂಪಾಯಿ, 5). ಕಪ್ಪು ಬಣ್ಣದ ಆಕಳು-01, ಅ||ಕಿ|| 2,000/- ರೂಪಾಯಿ. ಇವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಆಹಾರ ನೀರು ಕೊಡದೇ ಅವುಗಳನ್ನು ವಧೆ ಮಾಡುವ ಉದ್ದೇಶದಿಂದ ಕಟ್ಟಿಟ್ಟಿದ್ದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಓಂಕಾರಪ್ಪ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 30-01-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 14/2021, ಕಲಂ: 323, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾರುತಿ ತಂದೆ ದೇಮಣ್ಣಾ ಗುರವ್, ಸಾ|| ಮಾರುತಿ ನಗರ, ದಾಂಡೇಲಿ. ನಮೂದಿತ ಆರೋಪಿತನು ಪಿರ್ಯಾದಿಯ ಹತ್ತಿರ ಕೆಲಸಕ್ಕೆ ಇದ್ದವನು, ಕೆಲಸಕ್ಕೆ ಬಾರದೇ ಪದೇ ಪದೇ ಪಿರ್ಯಾದಿಯ ಹತ್ತಿರ ಬಂದು ‘ಸ್ವಲ್ಪ ಅಡ್ವಾನ್ಸ್ ಹಣ ಕೊಡು’ ಅಂತಾ ಹೇಳುತ್ತಾ ಇದ್ದವನು, ಹಣ ಕೊಡದೇ ಇದ್ದುದರಿಂದ ಅದೇ ದ್ವೇಷದಿಂದ ದಿನಾಂಕ: 30-01-2021 ರಂದು 21-30 ಗಂಟೆಯಿಂದ 21:-45 ಗಂಟೆಯವರೆಗೆ ಪಿರ್ಯಾದಿಯು ತಮ್ಮ ಮನೆಯಲ್ಲಿ ಇದ್ದಾಗ ಪಿರ್ಯಾದಿಯವರನ್ನು ಕೂಗಿ ಕರೆದಾಗ ಪಿರ್ಯಾದಿಯು ಮನೆಯ ಹೊರಗೆ ಬಂದು ‘ಏನಾಯಿತು?’ ಅಂತಾ ಕೇಳಲು, ಆರೋಪಿತನು ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಸಡಿಕೆ ನಾನು ಅಡ್ವಾನ್ಸ್ ಹಣ ಕೊಡು ಅಂತಾ ಕೇಳಿದರೆ ನನಗೆ ಹಣ ಕೊಡುವುದಿಲ್ಲವ ನೀನು?’ ಅಂತಾ ಹೇಳಿದವನೇ ಕೈಯಿಂದ ಪಿರ್ಯಾದಿಯ ಮುಖಕ್ಕೆ ಮೈಗೆ ಹೊಡೆದಿದ್ದಲ್ಲದೇ, ಪಿರ್ಯಾದಿಯು ‘ನನಗೆ ಯಾಕೆ ಹೊಡೆಯುತ್ತೀಯಾ?’ ಅಂತಾ ಕೇಳಿದ್ದಕ್ಕೆ, ತಾನು ತೆಗೆದುಕೊಂಡು ಬಂದಿದ್ದ ಕೊಡಲಿಯಿಂದ ಪಿರ್ಯಾದಿಯ ಕುತ್ತಿಗೆಗೆ ಹೊಡೆದು, ಪಿರ್ಯಾದಿಯ ಕುತ್ತಿಗೆಯ ಬಲಕ್ಕೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿತನು ಹೋಗುವಾಗ ಪಿರ್ಯಾದಿಯನ್ನು ಉದ್ದೇಶಿಸಿ ‘ನೀನು ನನಗೆ ಅಡ್ವಾನ್ಸ್ ಹಣ ಕೊಡದಿದ್ದರೆ ನಿನ್ನನ್ನು ಕೊಂದೆ ಬಿಡುತ್ತೇನೆ’ ಅಂತ ಜೀವದ ಬೆದರಿಕೆ ಹಾಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಮಾರುತಿ ತಂದೆ ಬೈರು ಚಾಂದೇಕರ, ಪ್ರಾಯ-42 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಮಹಿಮಾ ಸ್ಟೋರ್ ಹತ್ತಿರ, ಮಾರುತಿ ನಗರ, ದಾಂಡೇಲಿ ರವರು ದಿನಾಂಕ: 30-01-2021 ರಂದು 23-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 09/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ರಾಜೇಶ ತಂದೆ ಬಸ್ತ್ಯಾಂವ್ ಲುದ್ರಿಂಗ್, ಪ್ರಾಯ-31 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮನ ನಂ: 65, ವಡಗೇರಿ, ಪೋ: ಯಕ್ಕಂಬಿ, ತಾ: ಶಿರಸಿ. ಈತನು ಪಿರ್ಯಾದಿಯವರ ಗಂಡನಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದವನು, ದಿನಾಂಕ: 27-01-2021 ರಂದು 11-00 ಗಂಟೆಗೆ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ವಡಗೇರಿಯ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ, ಕಾರಣ ಕಾಣೆಯಾದವನನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಸುಜಾತಾ ಕೋಂ. ರಾಜೇಶ ಲುದ್ರಿಂಗ್, ಪ್ರಾಯ-29 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮನೆ ನಂ: 65, ವಡಗೇರಿ, ಪೋ: ಯಕ್ಕಂಬಿ, ತಾ: ಶಿರಸಿ ರವರು ದಿನಾಂಕ: 30-01-2021 ರಂದು 13-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ರಾಮನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 10/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಸಂಜು ಗಾಂವಕರ, ಸಾ|| ಅನಮೋಡ, ತಾ: ಜೋಯಿಡಾ. ನಮೂದಿತ ಆರೋಪಿತನು ತನ್ನ ಲಾಭಕ್ಕಾಗಿ ತನ್ನ ತಾಬಾ ವಿವಿಧ ಮಾದರಿಯ ಒಟ್ಟೂ 41,774/- ರೂಪಾಯಿ ಮೌಲ್ಯದ ಗೋವಾ ರಾಜ್ಯ ತಯಾರಿಕೆಯ ಸರಾಯಿಯನ್ನು ಅಕ್ರಮವಾಗಿ ಯಾವುದೋ ರೀತಿಯಲ್ಲಿ ಗೋವಾದಿಂದ ತಂದು ಅನಮೋಡದ ಜನತಾ ಪ್ಲಾಟಿನ ಹಿಂಭಾಗದ ಗದ್ದೆಯ ಹತ್ತಿರದ ಕಾಡಿನಲ್ಲಿ ಮುಚ್ಚಿಟ್ಟು, ದಿನಾಂಕ: 30-01-2021 ರಂದು 19-15 ಗಂಟೆಗೆ ದಾಳಿಗೆ ಹೋದಾಗ ಪೊಲೀಸರನ್ನು ಕಂಡು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಕಿರಣ ಬಿ. ಪಾಟೀಲ್, ಪಿ.ಎಸ್.ಐ (ಕಾ&ಸು), ರಾಮನಗರ ಪೊಲೀಸ್ ಠಾಣೆ ರವರು ದಿನಾಂಕ: 30-01-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 30-01-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ಚಿಂತನಾ ತಂದೆ ರಾಜು ನಾಯ್ಕ, ಪ್ರಾಯ-6 ವರ್ಷ, ಸಾ|| ಅಡಿಮನೆ, ಕೆರೆಕೋಣ, ತಾ: ಹೊನ್ನಾವರ. ಪಿರ್ಯಾದಿಯ ಮಗಳಾದ ಇವಳು ದಿನಾಂಕ: 30-01-2021 ರಂದು ಸಾಯಂಕಾಲ 16-30 ಗಂಟೆಗೆ ತನ್ನ ಮನೆಯ ಮುಂದಿನ ಅಂಗಳದಲ್ಲಿ ಆಟ ಆಡುತ್ತಿದ್ದಾಗ ಮನೆಯ ಅಂಗಳದಲ್ಲಿ ತೋಟದ ಕೆಲಸಕ್ಕೆಂದು ಇಟ್ಟಿದ್ದ ಸಿಮೆಂಟ್ ರಿಂಗ್ ಆಕಸ್ಮಿಕವಾಗಿ ಜಾರಿ ಮೈಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡವಳಿಗೆ ಚಿಕಿತ್ಸೆಗೆಂದು ಹೊನ್ನಾವರದ ತಾಲೂಕಾ ಆಸ್ಪತ್ರೆಗೆ ಕರೆತಂದಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಸದರಿಯವಳು 17-30 ಗಂಟೆಯ ಪೂರ್ವದಲ್ಲಿ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟ ಬಗ್ಗೆ ತಿಳಿಸಿದ್ದು, ಈ ಬಗ್ಗೆ ತನ್ನ ಮಗಳ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ರಾಜು ತಂದೆ ವೆಂಕಟ್ರಮಣ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ವ್ಯಾಪಾರ, ಸಾ|| ಅಡಿಮನೆ, ಕೆರೆಕೋಣ, ತಾ: ಹೊನ್ನಾವರ ರವರು ದಿನಾಂಕ: 30-01-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ದೇಮಕ್ಕಾ ಕೋಂ. ಅಪ್ಪಯ್ಯಾ ಮಾದಪ್ಪಗೌಡ, ಪ್ರಾಯ-71 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಬೆಳವಟಗಿ, ತಾ: ಹಳಿಯಾಳ. ಇವರು ಪಿರ್ಯಾದಿಯವರ ತಾಯಿಯಾಗಿದ್ದು, ತನಗಿರುವ ಹೊಟ್ಟೆನೋವು ಹಾಗೂ ಬಿ.ಪಿ ಇರುವುದನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 29-01-2021 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಬೆಳವಟಿಗೆ ಗ್ರಾಮದ ತಮ್ಮ ಮನೆಯ ಶೌಚಾಲಯದ ಹತ್ತಿರ ಮೈ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಸೋಮನಿಂಗ ತಂದೆ ಅಪ್ಪಯ್ಯ ಮಾದಪ್ಪಗೌಡ, ಸಾ|| ಬೆಳವಟಗಿ, ತಾ: ಹಳಿಯಾಳ ರವರು ದಿನಾಂಕ: 30-01-2021 ರಂದು 00-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 ======||||||||======

 

 

ಇತ್ತೀಚಿನ ನವೀಕರಣ​ : 01-02-2021 12:22 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080