ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕe:- 30-07-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 115/2021, ಕಲಂ: 279, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಆಸೀನ್ ಅಲಿ ತಂದೆ ಮಹ್ಮದ್ ಹನೀಫ್, ಸಾ|| ಮಧ್ಯಪ್ರದೇಶ ರಾಜ್ಯ (ಟಿಪ್ಪರ್ ಲಾರಿ ನಂ: ಎ.ಆರ್-02/2941 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 30-07-2021 ರಂದು ಸಂಜೆ 18-35 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಹಾರವಾಡ ಕ್ರಾಸಿನಿಂದ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಡಾಂಬರ್ ರಸ್ತೆಯಲ್ಲಿ ಟಿಪ್ಪರ್ ಲಾರಿ ನಂ: ಎ.ಆರ್-02/2941 ನೇದರ ಚಾಲಕನು ತನ್ನ ಟಿಪ್ಪರ್ ಲಾರಿಯನ್ನು ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಯಾವುದೇ ಸಿಗ್ನಲ್ ಲೈಟ್ ಅಥವಾ ಕೈ ಸನ್ನೆ ಮಾಡದೇ ಹಾರವಾಡ ಕ್ರಾಸಿನಿಂದ ಮುದಗಾ ಕಡೆಗೆ ಹೋಗಲು ಒಮ್ಮೇಲೆ ಯು ಟರ್ನ್ ಮಾಡಿದ್ದರಿಂದ, ಅದರ ಹಿಂದುಗಡೆ ಬಲಬದಿಯಿಂದ ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಹೋಗಲು ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-9212 ನೇದರ ಮೇಲಾಗಿ ಬರುತ್ತಿದ್ದ ಇಬ್ಬರೂ ಸವಾರರ ಮೋಟಾರ್ ಸೈಕಲಿಗೆ ಟಿಪ್ಪರ್ ಲಾರಿಯ ಬಲಬದಿಯ ಭಾಗದ ಬಂಪರಿಗೆ ಡಿಕ್ಕಿ ಆಗುವಂತೆ ಮಾಡಿ ಅಪಘಾತ ಪಡಿಸಿ, ಮೋಟಾರ್ ಸೈಕಲ ಸವಾರನಾದ ರವಿ ತಂದೆ ಲೋಕು ಗೌಡ, ಪ್ರಾಯ-29 ವರ್ಷ, ವೃತ್ತಿ-ಕೋರ್ಟ್ ನಲ್ಲಿ ಕೆಲಸ ಸಾ|| ಹೊನ್ನಳ್ಳಿ, ತಾ: ಅಂಕೋಲಾ ಈತನಿಗೆ ಬಲ ಭುಜಕ್ಕೆ, ಬಲಕಿವಿಗೆ ಹಾಗೂ ಎರಡು ಕಾಲುಗಳಿಗೆ ಭಾರೀ ಗಾಯನೋವು ಪಡಿಸಿ ಸ್ಥಳದಲ್ಲಿಯೇ ಮರಣವನ್ನುಂಟು ಮಾಡಿದ್ದಲ್ಲದೇ, ಮೋಟಾರ್ ಸೈಕಲ ಹಿಂಬದಿ ಸವಾರ ಹರೀಶ ತಂದೆ ಓಮು ಗೌಡ, ಪ್ರಾಯ-28 ವರ್ಷ, ಸಾ|| ಸೀ-ಬರ್ಡ್ ಕಾಲೋಲನಿ, ಹಟ್ಟಿಕೇರಿ, ತಾ: ಅಂಕೋಲಾ ಇವನಿಗೂ ಸಹ ಎಡಗಾಲಿಗೆ ಹಾಗೂ ಮಂಡಿಯ ಕೆಳಗೆ ಭಾರೀ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಮಹೇಶ ತಂದೆ ಬಾಬು ನಾಯಕ, ಪ್ರಾಯ-53 ವರ್ಷ, ವೃತ್ತಿ-ವ್ಯವಹಾರ, ಸಾ|| ದಂಡೆಭಾಗ, ಅವರ್ಸಾ, ತಾ: ಅಂಕೋಲಾ ರವರು ದಿನಾಂಕ: 30-07-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 30-07-2021

at 00:00 hrs to 24:00 hrs

 

ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 


 

ಇತ್ತೀಚಿನ ನವೀಕರಣ​ : 31-07-2021 12:55 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080