ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 30-06-2021
at 00:00 hrs to 24:00 hrs
ಮಂಕಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 97/2021, ಕಲಂ: 269, 270 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ರೂಹುಲ್ ತಂದೆ ಅಮೀರ್ ಕಲಘಟಗಿ, ಸಾ|| ಹಳೆಮಠ, ಮಂಕಿ, ತಾ: ಹೊನ್ನಾವರ, 2]. ಪುರ್ಕಾಣ ತಂದೆ ಫಾರೂಕ್ ಸಯದ್, ಸಾ|| ಸೂಪರ್ ಬಜಾರ್, ಮಂಕಿ, ತಾ: ಹೊನ್ನಾವರ, 3]. ಜೈಲಾನಿ ತಂದೆ ಅಮೀರ್ ಕಡಪಾಡಿ, ಸಾ|| ಹಳೆಮಠ, ಮಂಕಿ, ತಾ: ಹೊನ್ನಾವರ, 4]. ಮುತ್ತಹೇರ್ ತಂದೆ ಜಾಫರ್ ಅಲಿಬಾಪು, ಸಾ|| ನವಾಯತ್ ಕೇರಿ, ಮಂಕಿ, ತಾ: ಹೊನ್ನಾವರ, 5]. ತವಾಬ್ ತಂದೆ ಅಮೀರ್ ಕಡಪಾಡಿ, ಸಾ|| ಹಳೆಮಠ, ಮಂಕಿ, ತಾ: ಹೊನ್ನಾವರ, 6]. ಸತ್ತಾರ್ ತಂದೆ ಜಾಫರ್ ಶೇಖ್, ಸಾ|| ಹಳೆಮಠ, ಮಂಕಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರೆಲ್ಲರೂ ದಿನಾಂಕ: 30-06-2021 ರಂದು 20-45 ಗಂಟೆಗೆ ಮಂಕಿ ಹಳೆಮಠದ ಸರಕಾರಿ ಶಾಲೆಯ ಆವರಣದಲ್ಲಿ ಸೇರಿಕೊಂಡು ಕೋವಿಡ್-19 ಸಾಂಕ್ರಾಮಿಕ ರೋಗದ 2 ನೇ ಅಲೆಯನ್ನು ತಡೆಗಟ್ಟುವ ಉದ್ದೇಶದಿಂದ ಮಾನ್ಯ ಕರ್ನಾಟಕ ಸರಕಾರ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು, ಕಾರವಾರ ರವರ ಆದೇಶದ ಅನುಸಾರ ಮಾನ್ಯ ತಹಶೀಲ್ದಾರ್ ಹಾಗೂ ಮಾನ್ಯ ತಾಲೂಕಾ ದಂಡಾಧಿಕಾರಿಗಳು, ಹೊನ್ನಾವರ ರವರು ಹೊರಡಿಸಿದ ಆದೇಶ ಸೂಚನೆಗಳನ್ನು ಉಲ್ಲಂಘಿಸಿ ತಮ್ಮ ತಮ್ಮ ಲಾಭಕ್ಕೋಸ್ಕರ ಹಣವನ್ನು ಇಸ್ಪೀಟ್ ಎಲೆಗಳ ಮೇಲೆ ಪಂಥವಾಗಿ ಕಟ್ಟಿ ಒಬ್ಬರಿಂದ ಇನ್ನೊಬ್ಬರಿಗೆ ಅಂತರವನ್ನು ಕಾಯ್ದುಕೊಳ್ಳದೇ ಇಸ್ಪೀಟ್ ಎಲೆಗಳ ಅಂದರ್-ಬಾಹರ್ ಜೂಗಾರಾಟ ಆಡುತ್ತಿದ್ದಾಗ ದಾಳಿಯ ಸಮಯದಲ್ಲಿ ಜೂಗಾರಾಟಕ್ಕೆ ಬಳಸಿದ ಸಲಕರಣೆಗಳು ಹಾಗೂ ನಗದು ಹಣ 6,570/- ರೂಪಾಯಿಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣೂರ, ಪಿ.ಎಸ್.ಐ, ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 30-06-2021 ರಂದು 22-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 78/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ವಿಜಯಕುಮಾರ ತಂದೆ ನಾರಾಯಣ ನಾಯ್ಕ, ಪ್ರಾಯ-31 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಬೇಡ್ಕಣಿ, ಕ್ವಾರ್ಟರ್ಸ್ ಕೇರಿ, ತಾ: ಸಿದ್ದಾಪುರ. ಈತನು ದಿನಾಂಕ: 30-06-2021 ರಂದು 19-00 ಗಂಟೆಗೆ ಸಿದ್ದಾಪುರ ತಾಲೂಕಿನ ಬೇಡ್ಕಣಿಯ ಕ್ವಾರ್ಟರ್ಸ್ ಕೇರಿಯಲ್ಲಿರುವ ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 06 ಟೆಟ್ರಾ ಪ್ಯಾಕೆಟ್ ಗಳು, 2). 02 ಪ್ಲಾಸ್ಟಿಕ್ ಗ್ಲಾಸುಗಳು. 3). Original Choice Deluxe Whisky 90 ML ಅಂತಾ ಬರೆದ 02 ಮದ್ಯದ ಕಾಲಿ ಟೆಟ್ರಾ ಪ್ಯಾಕೆಟ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಹಾಂತಪ್ಪ ಜಿ. ಕುಂಬಾರ, ಪಿ.ಎಸ್.ಐ, ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 30-06-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 79/2021, ಕಲಂ: 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ತಿಪ್ಪಾ ನಾಯ್ಕ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಾರ್ಸಿಕಟ್ಟಾ, ತಾ: ಸಿದ್ದಾಪುರ. ಈತನು ದಿನಾಂಕ: 30-06-2021 ರಂದು 20-00 ಗಂಟೆಗೆ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿರುವ ತನ್ನ ಅಂಗಡಿಯ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಸಾರ್ವಜನಿಕರಿಗೆ ಮುಕ್ತವಾಗಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾಗ ಪಿರ್ಯಾದಿಯವರು ಸಿಬ್ಬಂದಿಗಳೊಂದಿಗೆ ಸೇರಿ ದಾಳಿ ಮಾಡಿದಾಗ, 1). Original Choice Deluxe Whisky 90 ML ಅಂತಾ ಬರೆದ ಮದ್ಯ ತುಂಬಿದ 4 ಟೆಟ್ರಾ ಪ್ಯಾಕೆಟ್ ಗಳು 2). 2 ಪ್ಲಾಸ್ಟಿಕ್ ಗ್ಲಾಸುಗಳು. 3). Original Choice Deluxe Whisky 90 ML ಅಂತಾ ಬರೆದ 2 ಮದ್ಯದ ಕಾಲಿ ಟೆಟ್ರಾ ಪ್ಯಾಕೆಟ್ ಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಂಜೇಶ್ವರ ವಿ. ಚಂದಾವರ, ಪಿ.ಎಸ್.ಐ (ಕ್ರೈಂ), ಸಿದ್ದಾಪುರ ಪೊಲೀಸ್ ಠಾಣೆ ರವರು ದಿನಾಂಕ: 30-06-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಬನವಾಸಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 64/2021, ಕಲಂ: 323, 324, 326, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಖಾಸಿಂ ಸಾಬ್ ಮಹಮ್ಮದ್ ಸಾಬ್ ಶೇಖ್, 2]. ಅನಿಸ್ ಮಹಮ್ಮದ್ ಖಾಸಿಂ ಶೇಖ್, 3]. ರಫಿಕ್ ಖಾಸಿಂ ಶೇಖ್, ಸಾ|| (ಎಲ್ಲರು) ಶಿರಸಿ, 4]. ಇನ್ನೊಬ್ಬ, ಹೆಸರು ಮತ್ತು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 30-06-2021 ರಂದು ಬೆಳಿಗ್ಗೆ 10-00 ಗಂಟೆಗೆ ಪ್ರಕರಣದ ಪಿರ್ಯಾದಿಯವರು ಆತನ ಅಣ್ಣ ರಾಜೇಶ ನಿಂಗಪ್ಪ ಚಕ್ರಸಾಲಿ ಮತ್ತು ಮಂಜುನಾಥ ಚಂದ್ರಶೇಖರ ಗೌಡ, ಕಿರಣ ಶೇಖಪ್ಪ ಚಕ್ರಸಾಲಿ ಇವರು ಕೂಡಿಕೊಂಡು ಹೆಬ್ಬತ್ತಿ ಗ್ರಾಮದ ಅರಣ್ಯ ಸರ್ವೇ ನಂ: 8 ರಲ್ಲಿ ಬಿತ್ತನೆ ಮಾಡುತ್ತಿರುವಾಗ ನಮೂದಿತ ಆರೋಪಿತರು ಪಿರ್ಯಾದಿ, ಆತನ ಅಣ್ಣ ರಾಜೇಶ ಮತ್ತು ಮಂಜುನಾಥ ಇವರನ್ನು ಉದ್ದೇಶಿಸಿ ‘ಜಮೀನು ನಮ್ಮದು. ನಿಮಗೆ ಯಾವುದೇ ಅಧಿಕಾರ ಇಲ್ಲ, ಬೋಳಿ ಮಕ್ಕಳೆ, ‘ಸೂಳೆ ಮಕ್ಕಳೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಯಿಂದ ಮೈಮೇಲೆ ಹೊಡೆದು ನೆಲಕ್ಕೆ ದೂಡಿ ಕೆಡವಿ, ಗೊಬ್ಬರದ ಕಟ್ಟಿಗೆಯಿಂದ ಹೊಡೆಬಡೆ ಮಾಡಿ, ರಾಜೇಶ ನಿಂಗಪ್ಪ ಚಕ್ರಸಾಲಿ ಈತನಿಗೆ ತೀವೃ ಗಾಯ ಪಡಿಸಿದ್ದಲ್ಲದೇ, ‘ಇನ್ನೊಮ್ಮೆ ಈ ಜಮೀನಿಗೆ ಕಾಲಿಟ್ಟರೆ ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ನಿಂಗಪ್ಪ ಚಕ್ರಸಾಲಿ, ಪ್ರಾಯ-35 ವರ್ಷ, ವೃತ್ತಿ-ಲೆಕ್ಕಿಗ, ಸಾ|| ಹೆಬ್ಬತ್ತಿ, ತಾ: ಶಿರಸಿ ರವರು ದಿನಾಂಕ: 30-06-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಬನವಾಸಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 65/2021, ಕಲಂ: 143, 148, 323, 324, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ನಿಂಗಪ್ಪ ಚಕ್ರಸಾಲಿ, 2]. ರಾಜೇಶ ನಿಂಗಪ್ಪ ಚಕ್ರಸಾಲಿ, 3]. ಸುರೇಶ ನಿಂಗಪ್ಪ ಚಕ್ರಸಾಲಿ, 4]. ಸಿದ್ದು ಗೌಡ, 5]. ಮಲ್ಲಪಯ್ಯ ಗೌಡ, 6]. ಮಂಜು ಗೌಡ, ಸಾ|| (ಎಲ್ಲರೂ) ಹೆಬ್ಬತ್ತಿ, ತಾ: ಶಿರಸಿ. ಪಿರ್ಯಾದಿಯವರು ಹೆಬ್ಬತ್ತಿ ಗ್ರಾಮದ ಸರ್ವೇ ನಂ: 9 ರಲ್ಲಿ ಜಮೀನು ಹೊಂದಿರುತ್ತಾರೆ. ದಿನಾಂಕ: 30-06-2021 ರಂದು 10-30 ಗಂಟೆಗೆ ನಮೂದಿತ ಆರೋಪಿತರಲ್ಲಿ ಆರೋಪಿ 1, 2 ಹಾಗೂ 3, ನೇಯವರು ಪಿರ್ಯಾದಿಯ ಜಮೀನಿನ ಏರಿ ಮೇಲೆ ಕೆಲಸ ಮಾಡುತ್ತಿದ್ದು, ಅವರೊಂದಿಗೆ ಆರೋಪಿತ 4, 5 ಹಾಗೂ 6 ನೇಯವರು ಸಹ ಸ್ಥಳದಲ್ಲಿಯೇ ಸಂಗನಮತ ಮಾಡಿಕೊಂಡು ಏಕೋದ್ದೇಶದಿಂದ ಇದ್ದವರು, ಪಿರ್ಯಾದಿ, ಪಿರ್ಯಾದಿಯ ತಂದೆ ಖಾಸಿಂ ಸಾಬ್, ತಮ್ಮ ರಫೀಕ್ ಇವರೆಲ್ಲರೂ ಕೂಡಿಕೊಂಡು ಆರೋಪಿತರಾದ 1, 2, 3 ನೇಯವರಿಗೆ ‘ಇಲ್ಲಿ ಯಾಕೆ ಕೆಲಸ ಮಾಡುತ್ತೀದ್ದಿರಿ?’ ಅಂತಾ ಕೇಳುತ್ತಿರುವಾಗಲೇ, ಆರೋಪಿ 4, 5 ಹಾಗೂ 6 ನೇಯವರು ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಳಿ ಮಗನಿಗೆ ಜೀವ ಸಹಿತ ಬಿಡಬೇಡಿರಿ’ ಅಂತಾ ಹೇಳಿದಾಗ ಆರೋಪಿ 1, 2 ಹಾಗೂ 3 ನೇಯವರು ಕೂಡಿಕೊಂಡು ಪಿರ್ಯಾದಿಗೆ ‘ಸೂಳೆ ಮಗನೇ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದವರೇ, ಕೈಯಿಂದ ಮೈಮೇಲೆ ಹೊಡೆದು ನೆಲಕ್ಕೆ ದೂಡಿ ಕೆಡವಿ, ರಾಜೇಶ ಈತನು ಕಬ್ಬಿಣದ ವಸ್ತುವಿನಿಂದ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದ್ದಲ್ಲದೇ, ‘ಇವತ್ತು ನೀನು ತಪ್ಪಿಸಿಕೊಂಡಿ. ಇನ್ನೊಮ್ಮೆ ಒಬ್ಬನೇ ಸಿಗು, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಅನಿಸ್ ಅಹಮ್ಮದ್ ತಂದೆ ಖಾಸೀಂ ಸಾಬ್ ಶೇಖ್, ಪ್ರಾಯ-35 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕಸ್ತೂರಬಾ ನಗರ, ತಾ: ಶಿರಸಿ ರವರು ದಿನಾಂಕ: 30-06-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 30-06-2021
at 00:00 hrs to 24:00 hrs
ಕುಮಟಾ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 18/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ನಾರಾಯಣ ತಂದೆ ಜಟ್ಟಿ ಮುಕ್ರಿ, ಪ್ರಾಯ-70 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಂದಿಗೋಣ, ತಾ: ಕುಮಟಾ. ಪಿರ್ಯಾದಿಯ ಗಂಡನಾದ ಇವರು ಕಳೆದ 2 ವರ್ಷಗಳಿಂದ ಪಾರ್ಶ್ವವಾಯು ಖಾಯಿಲೆಯಿಂದ ದೇಹದ ಬಲಭಾಗ ಅಸ್ವಸ್ಥಗೊಂಡು ಮತ್ತು ಲಿವರ್ ಖಾಯಿಲೆಯಿಂದ ಮನಸ್ಸಿಗೆ ಬೇಸತ್ತು ವಿಪರೀತ ಸರಾಯಿ ಕುಡಿಯುತ್ತಿದ್ದವರು, ದಿನಾಂಕ: 29-06-2021 ರಂದು ರಾತ್ರಿ 10-00 ಗಂಟೆಗೆ ಊಟ ಮಾಡಿ ಮನೆಯಲ್ಲಿ ಮಲಗಿದ್ದವರು, ದಿನಾಂಕ: 30-06-2021 ರಂದು ಬೆಳಿಗ್ಗೆ 04-30 ಗಂಟೆಯ ಅವಧಿಯಲ್ಲಿ ತನಗಿದ್ದ ಖಾಯಿಲೆಗೆ ಬೇಸತ್ತು ತನ್ನ ಮನೆಯ ಹಿಂಬದಿಗೆ ಇದ್ದ ತೆಂಗಿನ ತೋಟದಲ್ಲಿ ಇರುವ ಮತ್ತಿ ಜಾತಿಯ ಗಿಡಕ್ಕೆ ಹಗ್ಗವನ್ನು ಕಟ್ಟಿಕೊಂಡು ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿ ಶ್ರೀಮತಿ ಮಾರಿ ನಾರಾಯಣ ಮುಕ್ರಿ, ಪ್ರಾಯ-65 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹಂದಿಗೋಣ, ತಾ: ಕುಮಟಾ ರವರು ದಿನಾಂಕ: 30-06-2021 ರಂದು 07-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======