ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 30-03-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 58/2021, ಕಲಂ: ಹೆಂಗಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹೆಂಗಸು ಶ್ರೀಮತಿ ಶಕುಂತಲಾ ತಂದೆ ಫಕ್ಕೀರಪ್ಪಾ ಹಡಪದ, ಪ್ರಾಯ-27 ವರ್ಷ, ವೃತ್ತಿ-ಮನೆ ಕೆಲಸ, ಸಾ|| ನೀಲಗುಂದ, ತಾ&ಜಿ: ಗದಗ. ಸುದ್ದಿದಾರರ ಹೆಂಡತಿಯಾದ ಇವಳು ದಿನಾಂಕ: 24-03-2021 ರಂದು 13-30 ಗಂಟೆಗೆ ತನ್ನ ಮನೆಯಾದ ಗದಗ ಜಿಲ್ಲೆಯ ನೀಲಗುಂದಕ್ಕೆ ಹೋಗಿ ಬರುವುದಾಗಿ ಹೇಳಿ, ಅಂಕೋಲಾ ಬಸ್ ನಿಲ್ದಾಣದಿಂದ ಬಸ್ ಹತ್ತಿ ಹೋದವಳು, ತಮ್ಮ ಊರಾದ ನೀಲಗುಂದಕ್ಕೂ ಹೋಗದೇ ಅಂಕೋಲಾದಲ್ಲಿರುವ ರೂಮಿಗೂ ವಾಪಸ್ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ. ಸದ್ರಿ ಕಾಣೆಯಾದ ತನ್ನ ಹೆಂಡತಿಯನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಫಕ್ಕೀರಪ್ಪಾ ತಂದೆ ಯಲ್ಲಪ್ಪ ಹಡಪದ, ಸಾ|| ನೀಲಗುಂದ, ತಾ&ಜಿ: ಗದಗ ರವರು ದಿನಾಂಕ: 30-03-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 74/2021, ಕಲಂ: 307, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಹೊನ್ನಪ್ಪ ಪಟಗಾರ, ಪ್ರಾಯ-37 ವರ್ಷ, ಸಾ|| ಜಟಗ ದೇವಸ್ಥಾನದ ಹತ್ತಿರ, ಮಾಸೂರು, ತಾ: ಕುಮಟಾ. ನಮೂದಿತ ಆರೋಪಿತನು ಹಾಗೂ ಪಿರ್ಯಾದಿಯವರು ಒಂದೇ ಊರಿನವರಾಗಿದ್ದು, ಆರೋಪಿತನು ಈ ಹಿಂದಿನಿಂದಲೂ ಪಿರ್ಯಾದಿಯವರೊಂದಿಗೆ ಅನಾವಶ್ಯಕವಾಗಿ ಚಿಕ್ಕಪುಟ್ಟ ವಿಷಯಕ್ಕೆ ತಂಟೆ ತಕಾರಾರು ಮಾಡುತ್ತಾ ಪಿರ್ಯಾದಿಯ ಮೇಲೆ ದ್ವೇಷದಿಂದ ಇದ್ದವನು, ದಿನಾಂಕ: 29-03-2021 ರಂದು ರಾತ್ರಿ 21-45 ಗಂಟೆಯ ಸುಮಾರಿಗೆ ಪಿರ್ಯಾದಿಯವರು ತಮ್ಮ ಮನೆಯ ಎದುರಿಗೆ ನಿಂತುಕೊಂಡಿದ್ದಾಗ ಆರೋಪಿತನು ಪಿರ್ಯಾದಿಯನ್ನು ತಮ್ಮ ಮನೆಯ ಹತ್ತಿರ ಕರೆದು ಪಿರ್ಯಾದಿಯೊಂದಿಗೆ ಅನಾವಶ್ಯಕವಾಗಿ ಜಗಳ ತೆಗೆದು, ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಮಚ್ಚಿಗೆ ಕಡೆಯುವ ಕೋಲಿನಿಂದ ಪಿರ್ಯಾದಿಯ ತಲೆಗೆ ಹಾಗೂ ಮುಖಕ್ಕೆ ಬಲವಾಗಿ ಹೊಡೆದು ಹಲ್ಲೆ ಮಾಡಿ, ಪಿರ್ಯಾದಿಯನ್ನು ಉದ್ದೇಶಿಸಿ ‘ನಿನಗೆ ಇಷ್ಟಕ್ಕೆ ಬಿಡುವುದಿಲ್ಲ. ನಿನ್ನನ್ನು ಕೊಂದು ಹಾಕುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಹರೀಶ ತಂದೆ ರಾಮಕೃಷ್ಣ ಪಟಗಾರ, ಪ್ರಾಯ-32 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಜಟಗ ದೇವಸ್ಥಾನದ ಹತ್ತಿರ, ಮಾಸೂರು, ತಾ: ಕುಮಟಾ ರವರು ದಿನಾಂಕ: 30-03-2021 ರಂದು 01-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 75/2021, ಕಲಂ: 307, 448, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹರೀಶ ತಂದೆ ರಾಮಕೃಷ್ಣ ಪಟಗಾರ, ಪ್ರಾಯ-32 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ಮಾಸೂರು, ತಾ: ಕುಮಟಾ. ನಮೂದಿತ ಅರೋಪಿತನ ಹಾಗೂ ಪಿರ್ಯಾದಿಯ ಗಂಡ ಮಹೇಶ ತಂದೆ ಹೊನ್ನಪ್ಪ ಪಟಗಾರ, ಪ್ರಾಯ-33 ವರ್ಷ, ವೃತ್ತಿ-ದೋಣಿ ಕೆಲಸ, ಸಾ|| ಮಾಸೂರು, ತಾ: ಕುಮಟಾ ಇವರ ನಡುವೆ ಆಗಾಗ ಜಗಳ ಕಲಹಗಳು ನಡೆದು ದ್ವೇಷದಿಂದ ಇದ್ದವರಿದ್ದು, ಆರೋಪಿತನು ಹಳೆಯ ದ್ವೇಷದ ಕಾರಣದಿಂದ ದಿನಾಂಕ: 09-03-2021 ರಂದು 21-45 ಗಂಟೆಯಲ್ಲಿ ಪಿರ್ಯಾದಿಯ ಗಂಡನನ್ನು ಉದ್ದೇಶೀಸಿ ’ಬೋಳಿ ಮಗನೆ, ಸೂಳೆ ಮಗನೆ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಕೈಯಲ್ಲಿ ಮರದ ರೀಪಿನ ತುಂಡನ್ನು ಹಿಡಿದುಕೊಂಡು ಬಂದು ಪಿರ್ಯಾದಿಯ ಗಂಡ ಮಹೇಶ ಪಟಗಾರ ಈತನನ್ನು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿಯ ಮನೆಗೆ ಅಕ್ರಮ ಪ್ರವೇಶವನ್ನು ಮಾಡಿ, ಮನೆಯ ಒಳಗಡೆಯಿರುವ ಪಿರ್ಯಾದಿಯ ಗಂಡ ಮಹೇಶ ಪಟಗಾರ ಈತನ ತಲೆಯ ಮೇಲೆ ರೀಪಿನ ತುಂಡಿನಿಂದ ಬಲವಾಗಿ ಹೊಡೆದು ರಕ್ತಗಾಯ ಪಡಿಸಿದ್ದಲ್ಲೇ, ’ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ಕೊಲೆ ಮಾಡಿಯೇ ಬಿಡುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸವಿತಾ ಮಹೇಶ ಪಟಗಾರ, ಪ್ರಾಯ-28 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಮಾಸೂರು, ತಾ: ಕುಮಟಾ ರವರು ದಿನಾಂಕ: 30-03-2021 ರಂದು 01-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 55/2021, ಕಲಂ: 323, 448, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಗಣಪತಿ ತಂದೆ ಸೋಮಯ್ಯಾ ಮೊಗೇರ, ಸಾ|| ತುದೊಳ್ಳಿ, ಮುರ್ಡೇಶ್ವರ, ತಾ: ಭಟ್ಕಳ. ನಮೂದಿತ ಆರೋಪಿತನು ಪಿರ್ಯಾದಿಯ ಗಂಡನಾಗಿದ್ದು, ಈ ಹಿಂದೆ ಮನೆಯಲ್ಲಿ ಪಿರ್ಯಾದಿಗೆ ವಿನಾಕಾರಣ ಹೊಡೆಬಡೆ ಮಾಡಿ ತೊಂದರೆ ಕೊಡುತ್ತಿದ್ದರಿಂದ ಪಿರ್ಯಾದಿಯು ತನ್ನ ತವರು ಮನೆಯಲ್ಲಿ ಬಂದು ಉಳಿದುಕೊಂಡಾಗ ಅಲ್ಲಿಯೂ ಬಂದು ಜಗಳ ಮಾಡಿ ಪಿರ್ಯಾದಿಗೆ ಹೊಡೆಬಡೆ ಮಾಡಿದ್ದರಿಂದ, ಪಿರ್ಯಾದಿಯು ನೀಡಿದ ದೂರಿನಂತೆ, ಆರೋಪಿತನು ಮಾನ್ಯ ನ್ಯಾಯಾಂಗದ ಬಂಧನದಲ್ಲಿದ್ದು ನಂತರದಲ್ಲಿ ಜಾಮೀನು ಪಡೆದುಕೊಂಡು ಹೊರಗೆ ಬಂದವನು, ದಿನಾಂಕ: 30-03-2021 ರಂದು 19-00 ಗಂಟೆಗೆ ಪಿರ್ಯಾದಿಯ ತವರು ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ, ಮನೆಯಲ್ಲಿದ್ದ ಪಿರ್ಯಾದಿಗೆ ಉದ್ದೇಶಿಸಿ ‘ನೀನು ಇಲ್ಲಿದ್ದು ಏನು ಮಾಡುತ್ತೀಯಾ? ಮನೆಗೆ ಹೋಗುವಾ ಬಾ. ತನಗೆ ಅಡುಗೆ ಮಾಡಿ ಹಾಕುವವರು ಯಾರು?’ ಅಂತಾ ಹೇಳಿದಾಗ, ಪಿರ್ಯಾದಿಯು ಅವನಿಗೆ ‘ನಿಮ್ಮ ಜೊತೆ ಬಂದರೆ ಮತ್ತೆ ಹೊಡೆಬಡೆ ಮಾಡುತ್ತಿರಾ. ತಾನು ಬರುವದಿಲ್ಲ’ ಅಂತಾ ಹೇಳಿದಕ್ಕೆ, ಆಪಾದಿತನು ಪಿರ್ಯಾದಿಗೆ ಉದ್ದೇಶಿಸಿ, ‘ಬೋಸ್ಡಿ ರಂಡೆ, ಕರೆದರೆ ಮನೆಗೆ ಬರುವುದಿಲ್ಲ’ ಅಂತಾ ಹೇಳಿ, ಪಿರ್ಯಾದಿಯ ತಲೆ ಕೂದಲು ಹಿಡಿದು ಎಳೆದಾಡಿ, ಕೈಯಿಂದ ಮೈಮೇಲೆ ಹೊಡೆದು, ಪಿರ್ಯಾದಿಗೆ ‘ನೀನು ಮನೆಗೆ ಬರದೆ ಇಲ್ಲಿಯೇ ಉಳಿದುಕೊಂಡರೆ ಮುಂದೊಂದು ದಿನ ನಿನಗೆ ಒಂದು ಗತಿ ಕಾಣಿಸುತ್ತೇನೆ’ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀಮತಿ ಶ್ರೀಮತಿ ಕೋಂ. ಗಣಪತಿ ಮೊಗೇರ, ಪ್ರಾಯ-40 ವರ್ಷ, ವೃತ್ತಿ-ಮನೆವಾರ್ತೆ, ಸಾ|| ತುದೊಳಿ, ಮುರ್ಡೇಶ್ವರ, ತಾ: ಭಟ್ಕಳ, ಹಾಲಿ ಸಾ|| ಬಿದ್ರಕೇರಿ, ತಾ: ಹೊನ್ನಾವರ ರವರು ದಿನಾಂಕ: 30-03-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 44/2021, ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಬ್ದುಲ್ ಮಜೀದ್ ತಂದೆ ಶಾಹುಲ್ ಹಮೀದ್, ಪ್ರಾಯ-40 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಶಿರೂರ, ಕರಿಕಟ್ಟೆ ಆರ್ಮಿಯಾ, ತಾ: ಬೈಂದೂರ, ಜಿ: ಉಡುಪಿ, 2]. ದೇವೇಂದ್ರ ತಂದೆ ಜಟ್ಟಪ್ಪ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಹೊಸ್ಮನೆ, ಮುಂಡಳ್ಳಿ, ತಾ: ಭಟ್ಕಳ, 3]. ಸಂತೋಷ ಹೆರಿಯಾ ಪೂಜಾರಿ, ಸಾ|| ನಾಗೂರ, ತಾ: ಬೈಂದೂರ, ಜಿ: ಉಡುಪಿ, ಹಾಲಿ ಸಾ|| ಗೊರಟೆ, ಶೇಖರ ನಾಯ್ಕ ಇವರ ಮನೆ ಹತ್ತಿರ, ತಾ: ಭಟ್ಕಳ. ಈ ನಮೂದಿತ ಆರೋಪಿತರು ದಿನಾಂಕ: 30-03-2021 ರಂದು 05-30 ಗಂಟೆಯ ಸಮಯಕ್ಕೆ ಗೊರಟೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ತಮ್ಮ ತಮ್ಮ ಲಾಭಕ್ಕೋಸ್ಕರ ಹಣವನ್ನು ಪಣವಾಗಿಟ್ಟು ಗರಗರ ಮಂಡಲ ಜುಗಾರಿ ಆಟ ಆಡುತ್ತಿದ್ದಾಗ 1). ನಗದು ಹಣ 16,500/- ರೂಪಾಯಿಗಳು, 2). ಕಳವರ, ಆಟಿನ್, ಇಸ್ಪೀಟು, ಡೈಯಿಸ್, ಸೂರ್ಯ, ಚಂದ್ರ ಚಿತ್ರವಿರುವ ಪ್ಲಾಸ್ಟಿಕ್ ಶೀಟ್-01, (ಅ||ಕಿ|| 00.00/- ರೂಪಾಯಿ), 3). ಕಳವರ, ಆಟಿನ್, ಇಸ್ಪೀಟು, ಡೈಯಿಸ್, ಸೂರ್ಯ, ಚಂದ್ರ ಚಿತ್ರವಿರುವ ದಾಳಗಳು-03, (ಅ||ಕಿ|| 00.00/- ರೂಪಾಯಿ), 4). ಪ್ಲಾಸ್ಟಿಕ್ ಡಬ್ಬಾ-01, (ಅ||ಕಿ|| 00.00/- ರೂಪಾಯಿ), 5). ಬೆಳಕಿನ ಸಹಾಯಕ್ಕೆ ಉಪಯೋಗಿಸಿದ ಬ್ಯಾಟರಿ-01, (ಅ||ಕಿ|| 00.00/- ರೂಪಾಯಿ) ಇವುಗಳೊಂದಿಗೆ ಆರೋಪಿ 1 ರಿಂದ 2 ನೇಯವರು ಸ್ಥಳದಲ್ಲಿ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 3 ನೇಯವನು ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಎಚ್. ಓಂಕಾರಪ್ಪ, ಪಿ.ಎಸ್.ಐ (ಕ್ರೈಂ), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 30-03-2021 ರಂದು 07-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 30-03-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 09/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಶಂಕರಿ ತಂದೆ ಅಂಜಯ್ಯ ತಂದೆ ಚಿನ್ನಯ್ಯ, ಪ್ರಾಯ-33 ವರ್ಷ,  ವೃತ್ತಿ-ಕೂಲಿ ಕೆಲಸ, ಸಾ|| ಮನೆ ನಂ: 1-32, ಪೆದ್ದಮುನಗಲಸೆಡ್, ಅಡ್ಡಕಳ, ತಾ: ಗುಡಿಬಂಡ, ಜಿ: ಮೆಹಬೂಬ್ ನಗರ, ತೆಲಂಗಾಣ ರಾಜ್ಯ. ನಮೂದಿತ ಮೃತನು ಜನವರಿ-2021 ರಂದು ತೆಲಂಗಾಣ ರಾಜ್ಯದಿಂದ ಕಾರವಾರದ ಜಿಲ್ಲಾ ಸರಕಾರಿ ಆಸ್ಪತ್ರೆಯ ಕಟ್ಟಡ ಕಾಮಗಾರಿ ಕೆಲಸಕ್ಕೆ ತನ್ನ ಕುಟುಂಬ ಹಾಗೂ ಇನ್ನೂ ಸುಮಾರು 50 ಜನರೊಂದಿಗೆ ಕಾರವಾರಕ್ಕೆ ಬಂದು, ಜಿಲ್ಲಾ ಸರಕಾರಿ ಆಸ್ಪತ್ರೆ ಕಾರವಾರದ ಆವಾರದಲ್ಲಿ ಗುಡಿಸಲನ್ನು ನಿರ್ಮಿಸಿಕೊಂಡು ಅಲ್ಲಿಯೇ ಉಳಿದುಕೊಂಡು ಕಟ್ಟಡ ಕಾಮಗಾರಿ ಕೆಲಸ ಮಾಡಿಕೊಂಡಿದ್ದವನು, ದಿನಾಂಕ: 29-03-2021 ರಂದು ಮಧ್ಯಾಹ್ನ 13-00 ಗಂಟೆಗೆ ಊಟ ಮಾಡುವಾಗ ಒಮ್ಮೆಲೆ ವಾಂತಿ ಮಾಡಿಕೊಂಡಿದ್ದು, ಆತನನ್ನು ಚಿಕಿತ್ಸೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಾರವಾರಕ್ಕೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಆತನು ಚಿಕಿತ್ಸೆಗೆ ತರುವ ಪೂರ್ವದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದ್ದು, ಮೃತನು ಅಸಹಜವಾಗಿ ಮೃತಪಟ್ಟಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀಮತಿ ಸೈದಮ್ಮಾ ಕೋಂ. ಶಂಕರಿ ಅಂಜಯ್ಯ, ಪ್ರಾಯ-26 ವರ್ಷ, ವೃತ್ತಿ-ಗೃಹಿಣಿ, ಸಾ|| ಮನೆ ನಂ: 1-32, ಪೆದ್ದಮುನಗಲಸೆಡ್, ಅಡ್ಡಕಳ, ತಾ: ಗುಡಿಬಂಡ, ಜಿ: ಮೆಹಬೂಬ್ ನಗರ, ತೆಲಂಗಾಣ ರಾಜ್ಯ ರವರು ದಿನಾಂಕ: 30-03-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ಇತ್ತೀಚಿನ ನವೀಕರಣ​ : 01-04-2021 01:09 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080