ದೈನಂದಿನ ಜಿಲ್ಲಾ ಅಪರಾಧ ವರದಿ
ದಿನಾಂಕ:- 30-05-2021
at 00:00 hrs to 24:00 hrs
ಮಂಕಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 82/2021, ಕಲಂ: 269, 270 ಐಪಿಸಿ ಹಾಗೂ ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಭಾಸ್ಕರ ತಂದೆ ನಾರಾಯಣ ನಾಯ್ಕ, ಪ್ರಾಯ-28 ವರ್ಷ, ಸಾ|| ಕಳಸಿನಮೂಟೆ, ತಾ: ಹೊನ್ನಾವರ, 2]. ಬಾಬು ಗಣಪತಿ ನಾಯ್ಕ, ಪ್ರಾಯ-35 ವರ್ಷ, ಸಾ|| ಹೊಸಪಟ್ಟಣ, ತಾ: ಹೊನ್ನಾವರ, 3]. ಈಶ್ವರ ತಂದೆ ಗಣಪ ನಾಯ್ಕ, ಸಾ|| ನಾಜಗಾರ, ತಾ: ಹೊನ್ನಾವರ, 4]. ಯೋಗೇಶ ಗಣಪಯ್ಯ ಗೌಡ, ಪ್ರಾಯ-23 ವರ್ಷ, ಸಾ|| ನಾಜಗಾರ, ತಾ: ಹೊನ್ನಾವರ, 5]. ಮಂಜುನಾಥ ಚಂದ್ರು ಗೌಡ, ಪ್ರಾಯ-35 ವರ್ಷ, ಸಾ|| ಕಳಸಿನಮೂಟೆ, ತಾ: ಹೊನ್ನಾವರ, 6]. ನವೀನ ಅಣ್ಣಪ್ಪ ನಾಯ್ಕ, ಪ್ರಾಯ-29 ವರ್ಷ, ಸಾ|| ನಾಜಗಾರ, ತಾ: ಹೊನ್ನಾವರ, 7]. ರಾಮಚಂದ್ರ ನಾರಾಯಣ ನಾಯ್ಕ, ಪ್ರಾಯ-46 ವರ್ಷ, ಸಾ|| ನಾಜಗಾರ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 30-05-2021 ರಂದು 14-45 ಗಂಟೆಯ ಸುಮಾರಿಗೆ ನೆಲವಂಕಿ ಗುಡ್ಡದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರಕಾರ ಹಾಗೂ ಮಾನ್ಯ ಜಿಲ್ಲಾಧಿಕಾರಿ, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ಹೊರಡಿಸಿದ ಲಾಕಡೌನ್ ಆದೇಶಗಳಿದ್ದರೂ ಸಹ ಸಾರ್ವಜನಿಕರಿಗೆ ಮಾರಣಾಂತಿಕ ಸಾಂಕ್ರಾಮಿಕ ರೋಗವನ್ನು ಹರಡುವ ಉದ್ದೇಶದಿಂದ ತಮ್ಮ ತಮ್ಮ ಲಾಭಕ್ಕೋಸ್ಕರ ಕುಟಕುಟಿ ಎಂಬ ಜೂಗಾರಾಟ ಆಡುತ್ತಿದ್ದಾಗ ದಾಳಿಯ ವೇಳೆ ಜೂಗಾರಾಟಕ್ಕೆ ಬಳಸಿದ ನಗದು ಹಣ 4,810/- ರೂಪಾಯಿಗಳು ಹಾಗೂ ಕುಟಕುಟಿ ಜೂಗಾರಾಟಕ್ಕೆ ಬಳಸಿದ ಸಲಕರಣೆಯೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪರಮಾನಂದ ಬಿ. ಕೊಣ್ಣೂರ, ಪಿ.ಎಸ್.ಐ, ಮಂಕಿ ಪೊಲೀಸ್ ಠಾಣೆ ರವರು ದಿನಾಂಕ: 30-05-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮಂಕಿ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 83/2021, ಕಲಂ: 279, 337 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಕುಮಾರ ತಂದೆ ಮೋಳ್ಯ ನಾಯ್ಕ, ಸಾ|| ಬೈಲೂರ, ತಾ: ಭಟ್ಕಳ (ನಂಬರ್ ನಮೂದಿರದ ಮಾರುತಿ ಸುಜುಕಿ ಆಲ್ಟೋ 800 ಕಾರ್ ನೇದರ ಚಾಲಕ). ಈತನು ದಿನಾಂಕ: 07-05-2021 ರಂದು ಬೆಳಿಗ್ಗೆ 09-30 ಗಂಟೆಗೆ ಮಂಕಿ ಅರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಮೇಲೆ ತನ್ನ ನಂಬರ್ ನಮೂದಿರದ ಮಾರುತಿ ಸುಜುಕಿ ಆಲ್ಟೋ 800 ಕಾರ್ ನೇದನ್ನು ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೋಗಲು ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದವನು, ರಸ್ತೆಯ ಬದಿಯಲ್ಲಿ ನಿಂತ ಪಿರ್ಯಾದಿಯ ತಾಯಿ ಶ್ರೀಮತಿ ಕಮಲಾ ನಾಯ್ಕ, ಇವರಿಗೆ ತಾಗಿಸಿ ಬೀಳಿಸಿ, ತಲೆಗೆ ರಕ್ತದ ಗಾಯನೋವು ಪಡಿಸಿದ್ದಲ್ಲದೇ, ತನ್ನ ಕಾರನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಂಜುನಾಥ ತಂದೆ ಚನ್ನಪ್ಪ ನಾಯ್ಕ, ಪ್ರಾಯ-39 ವರ್ಷ, ವೃತ್ತಿ-ಹೊಟೇಲ್ ಕೆಲಸ, ಸಾ|| ಗುಳದಕೇರಿ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 30-05-2021 ರಂದು 19-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುರ್ಡೇಶ್ವರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 50/2021, ಕಲಂ: 279, 338 ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತನು ಟಿಪ್ಪರ್ ವಾಹನ ನಂ: ಕೆ.ಎ-26/4115 ನೇದರ ಚಾಲಕನಾಗಿದ್ದು, ಚಾಲಕನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 30-05-2021 ರಂದು ಪಿರ್ಯಾದಿಯ ತಮ್ಮನಾದ ಶ್ರೀ ಸೋಮಯ್ಯ ತಂದೆ ಸಂಕಯ್ಯ ಗೊಂಡ, ಪ್ರಾಯ-50 ವರ್ಷ, ವೃತ್ತಿ-ವಾಚಮೆನ್, ಸಾ|| ಮಿಡ್ಲಾಮನೆ, ಹಡಾಳ, ಮುರ್ಡೇಶ್ವರ, ತಾ: ಭಟ್ಕಳ ಈತನು ತನ್ನ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ: ಕೆ.ಎ-47/ಕೆ-7748 ನೇದರ ಮೇಲಾಗಿ ಮುರ್ಡೇಶ್ವರ ಕಡೆಯಿಂದ ಹಡಾಳ ಕಡೆಗೆ ಹೋಗುತ್ತಿದ್ದಾಗ ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ ಉತ್ತರಕೊಪ್ಪ ರಸ್ತೆಯ ಕೋನಾರಕೇರಿಯಲ್ಲಿ ರಸ್ತೆಯ ತಿರುವಿನಲ್ಲಿ ಉತ್ತರಕೊಪ್ಪ ಕಡೆಯಿಂದ ಮುರ್ಡೇಶ್ವರ ಕಡೆಗೆ ಬರುತ್ತಿದ್ದ ಟಿಪ್ಪರ್ ವಾಹನ ನಂ: ಕೆ.ಎ-26/4115 ನೇದರ ಆರೋಪಿ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೋಮಯ್ಯ ಈತನ ಮೋಟಾರ್ ಸೈಕಲಿನ ಬಲಬದಿಯ ಹ್ಯಾಂಡಲಿಗೆ ಟಿಪ್ಪರ್ ವಾಹನ ತಾಗಿಸಿದಾಗ ಮೋಟಾರ್ ಸೈಕಲ್ ಮೇಲಿನ ನಿಯಂತ್ರಣ ತಪ್ಪಿ ಟಿಪ್ಪರ್ ವಾಹನದ ಹಿಂಬದಿಯ ಮಡಗಾರ್ಡ್ ಗೆ ತಾಗಿ ಅಪಘಾತ ಉಂಟು ಮಾಡಿದ್ದರಿಂದ ಸೋಮಯ್ಯ ಈತನು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ತಲೆಯ ಬಲಭಾಗಕ್ಕೆ ಮತ್ತು ಬಲಗಾಲಿನ ತೊಡೆಗೆ ಗಂಭೀರವಾಗಿ ಗಾಯಗೊಂಡಿರುವುದನ್ನು ನೋಡಿ ಅಪಘಾತ ಪಡಿಸಿದ ಟಿಪ್ಪರ್ ವಾಹನದ ಆರೋಪಿ ಚಾಲಕನು ತನ್ನ ವಾಹನವನ್ನು ನಿಲ್ಲಿಸಿ ಸ್ಥಳದಿಂದ ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ತಿಮ್ಮಪ್ಪ ತಂದೆ ಸಂಕಯ್ಯ ಗೊಂಡ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಮಿಡ್ಲಾಮನೆ, ಹಡಾಳ, ಪೋ: ಕಾಯ್ಕಿಣಿ, ಮಾವಳ್ಳಿ-2 ಗ್ರಾಮ, ತಾ: ಭಟ್ಕಳ ರವರು ದಿನಾಂಕ: 30-05-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಭಟ್ಕಳ ಶಹರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 68/2021, ಕಲಂ: 4, 12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಹಾಗೂ ಕಲಂ: 11(1)(D) PREVENTION OF CRUELTY TO ANIMALS ACT-1960 ಕಲಂ: 192(a) ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಮೊಹಮ್ಮದ್ ಮೌಲಾ ತಂದೆ ಅಬ್ದುಲ್ ಸತ್ತಾರ್ ಮೆಡಿಕಲ್, ಪ್ರಾಯ-36 ವರ್ಷ, ವೃತ್ತಿ-ವ್ಯಾಪಾರ, ಸಾ|| ಮುಗ್ದುಮ್ ಕಾಲೋನಿ, ಆರಸ್ತಾ ಸ್ಟ್ರೀಟ್, ತಾ: ಭಟ್ಕಳ, 2]. ಮೊಹಮ್ಮದ್ ಸವೂದ್ ತಂದೆ ಅಬು ಮೊಹಮ್ಮದ್ ಕಂಡ್ಲೂರ್, ಪ್ರಾಯ-38 ವರ್ಷ, ವೃತ್ತಿ-ಚಾಲಕ, ಸಾ|| ಮುಗ್ದುಮ್ ಕಾಲೋನಿ, ಆಜಾದ್ ರೋಡ್, ತಾ: ಭಟ್ಕಳ. ಈ ನಮೂದಿತ ಆರೋಪಿತರು ವಧೆ ಮಾಡುವ ಉದ್ದೇಶದಿಂದ 70,000/- ರೂಪಾಯಿ ಮೌಲ್ಯದ 02 ಕೋಣಗಳನ್ನು ಯಾವುದೇ ಪಾಸ್ ಯಾ ಪರವಾನಿಗೆ ಇಲ್ಲದೇ ಅಶೋಕ ಲೈಲ್ಯಾಂಡ್ ವಾಹನ ನಂ: ಕೆ.ಎ-47/9678 ನೇದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ತುಂಬಿಕೊಂಡು ಸಾಗಾಟ ಮಾಡಿಕೊಂಡು ಹೋಗುತ್ತಿರುವಾಗ ಭಟ್ಕಳ ಶಹರದ ಮಗ್ದುಮ್ ಕಾಲೋನಿಯ ಸಫಾ ಸ್ಟ್ರೀಟ್ ನಲ್ಲಿ ದಿನಾಂಕ: 30-05-2021 ರಂದು ಬೆಳಗಿನ ಜಾವ 05-45 ಗಂಟೆಯ ಸುಮಾರಿಗೆ ಪಿರ್ಯಾದಿಯವರ ದಾಳಿ ಕಾಲಕ್ಕೆ 2 ಕೋಣಗಳು ಹಾಗೂ ಅಶೋಕ ಲೈಲ್ಯಾಂಡ್ ವಾಹನ ನಂ: ಕೆ.ಎ-47/9678 (ಅ||ಕಿ|| 1,50,000/- ರೂಪಾಯಿ) ಮತ್ತು ಸ್ಕೂಟಿ ನಂ: ಕೆ.ಎ-47/ಯು-7268 (ಅ||ಕಿ|| 20,000/- ರೂಪಾಯಿ) ನೇದವುಗಳ ಸಮೇತ ಪಿರ್ಯಾದಿಯವರಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಕುಮಾರಿ: ಸುಮಾ ಬಿ, ಡಬ್ಲ್ಯೂ.ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 30-05-2021 ರಂದು 09-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 50/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ರಾಘವೇಂದ್ರ ತಂದೆ ಲಕ್ಷ್ಮಣ ಶೆಟ್ಟಿ, ಪ್ರಾಯ-42 ವರ್ಷ, ಸಾ|| ತಾರಗೋಡ, ತಾ: ಶಿರಸಿ (ಬೊಲೆರೋ ಪಿಕಪ್ ವಾಹನ ನಂ: ಕೆ.ಎ-31/ಎ-1220 ನೇದರ ಚಾಲಕ). ಈತನು ದಿನಾಂಕ: 30-05-2021 ರಂದು 10-00 ಗಂಟೆಗೆ ತನ್ನ ಬೊಲೆರೋ ಪಿಕಪ್ ವಾಹನ ನಂ: ಕೆ.ಎ-31/ಎ-1220 ನೇದನ್ನು ಶಿರಸಿಯಿಂದ ಕೊಳಗಿಬೀಸ್ ಇಳ್ಳುಮನೆ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಗಡಿಕೈ ಕ್ರಾಸ್ ಹತ್ತಿರದ ತಿರುವು ಮತ್ತು ಇಳಿಜಾರಿನ ರಸ್ತೆಯಲ್ಲಿ ವಾಹನದ ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ತೀರಾ ಎಡಕ್ಕೆ ಚಲಾಯಿಸಿ, ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಸದರಿ ವಾಹನದಲ್ಲಿ ತೋಟದ ಕೆಲಸಕ್ಕೆಂದು ಹೊರಟಿದ್ದ ಪ್ರಯಾಣಿಕ ಕೆಲಸಗಾರರಾದ ಪಿರ್ಯಾದಿ ಮತ್ತು ಲೋಕೇಶ ಜಾನು ಗೌಡ, ರಾಘವೇಂದ್ರ ಕೃಷ್ಣ ಗೌಡ, ದಾಮೋದರ ಟಿಕ್ರು ಮರಾಠಿ, ಮಂಜುನಾಥ ನಾಗೇಶ ಮರಾಠಿ, ದಿಕ್ಲು ಶಿವು ಗೌಡ, ಪುರುಷಯ್ಯ ಗಣಪಾ ಮರಾಠಿ ಇವರಿಗೆ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತಾನೂ ಸಹ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜನಾರ್ಧನ ತಂದೆ ದಿಕ್ಲು ಗೌಡ. ಪ್ರಾಯ-33 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಡವಿಮನೆ, ದೇವದಕೆರೆ, ಪೋ: ಭೈರುಂಬೆ, ತಾ: ಶಿರಸಿ ರವರು ದಿನಾಂಕ: 30-05-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 22/2021, ಕಲಂ: 269, 271 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಾರುತಿ ತಂದೆ ಬಸಪ್ಪ ಬಾರಕೇರ, ಪ್ರಾಯ-40 ವರ್ಷ, ವೃತ್ತಿ-ವ್ಯಾಪಾರ, ಸಾ|| ಬಾಮಣಗಿ, ತಾ: ಜೋಯಿಡಾ. ದೇಶಾದ್ಯಂತ ಕೋವಿಡ್-19 ಮಹಾಮಾರಿ ಕೊರೋನಾ ರೋಗ ಹರಡಿದ್ದರಿಂದ ಈ ಬಗ್ಗೆ ಭಾರತ ಸರ್ಕಾರ ದೇಶಾದ್ಯಂತ ಲಾಕಡೌನ್ ಆದೇಶ ಹೊರಡಿಸಿದ್ದು, ಅದರಂತೆ ಕರ್ನಾಟಕ ಸರಕಾರವು ದಿನಾಂಕ: 07-06-2021 ರವರೆಗೆ ಲಾಕಡೌನ ಆದೇಶ ಜಾರಿ ಮಾಡಿದ ಬಗ್ಗೆ ಗೊತ್ತಿದ್ದರೂ ಸಹ ನಮೂದಿತ ಆರೋಪಿತನು ದಿನಾಂಕ: 30-05-2021 ರಂದು ಮಧ್ಯಾಹ್ನ 12-30 ಗಂಟೆಯ ಸಮಯಕ್ಕೆ ತನ್ನ ಅಂಗಡಿಯಲ್ಲಿ ದಿನಸಿ ಸಾಮಾನುಗಳನ್ನು ಖರೀದಿ ಮಾಡಲು ಬಂದ ಗ್ರಾಹಕರಿಗೆ ವಿಧಿವಿರುದ್ಧವಾಗಿ ನಿರ್ಲಕ್ಷ್ಯತನದಿಂದ ಹಾಗೂ ಉದ್ದೇಶ ಪೂರ್ವಕವಾಗಿ ಸರಕಾರದ ಅನುಮತಿ ಅಥವಾ ಪಾಸ್ ಅನ್ನು ಪಡೆದುಕೊಳ್ಳದೇ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ, ಕೊರೋನಾ ರೋಗವು ಒಬ್ಬರಿಂದ ಒಬ್ಬರಿಗೆ ಹರಡಿ ಮಾನವೀಯ ಪ್ರಾಣಕ್ಕೆ ತೊಂದರೆ ಆಗಬಹುದು ಅಂತಾ ಗೊತ್ತಿದ್ದರು ಸಹ ಗ್ರಾಹಕರನ್ನು ಒಬ್ಬರ ಪಕ್ಕದಲ್ಲಿ ಒಬ್ಬರನ್ನು ನಿಲ್ಲಿಸಿ, ಮಹಾಮಾರಿ ಕೊರೋನಾ ರೋಗದ ಸೋಂಕು ಹರಡಿ ಮಾನವನ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ದಿನಸಿ ಸಾಮಾನುಗಳನ್ನು ಗ್ರಾಹಕರಿಗೆ ಕೊಡುತ್ತಿದ್ದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಬ್ಬೀರ್ ಎ. ಕೊತ್ವಾಲ್, ಎ.ಎಸ್.ಐ, ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 30-05-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 73/2021, ಕಲಂ: 269, 270, 271 ಐಪಿಸಿ ಹಾಗೂ ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ನಾಗರಾಜ ತಂದೆ ದೊಡ್ಡಹನುಮಂತಪ್ಪ ವಡ್ಡರ್, ಪ್ರಾಯ-38 ವರ್ಷ, ವೃತ್ತಿ-ಚಹಾ ಅಂಗಡಿ ವ್ಯಾಪಾರ, ಸಾ|| ಬಾಚಣಕಿ, ತಾ: ಮುಂಡಗೋಡ. ಈತನು ದಿನಾಂಕ: 30-05-2021 ರಂದು 15-30 ಗಂಟೆಗೆ ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದ ನ್ಯಾಸರ್ಗಿ ಕ್ರಾಸಿನ ಹತ್ತಿರ ಇರುವ ತನ್ನ ಚಹಾ ಅಂಗಡಿಯಲ್ಲಿ ಕೋವಿಡ್-19 ಕೊರೋನಾ ರೋಗ ಹರಡುವ ಸಂಭವ ಇರುವುದರಿಂದ ಸರ್ಕಾರದ ಲಾಕಡೌನ್ ಆದೇಶ ಇದ್ದ ಬಗ್ಗೆ ಗೊತ್ತಿದ್ದರೂ ಸಹ ಮಾಸ್ಕ್ ಧರಿಸದೇ ವಿಧಿವಿರುದ್ಧವಾಗಿ ನಿರ್ಲಕ್ಷ್ಯತನದಿಂದ ಹಾಗೂ ಉದ್ದೇಶಪೂರ್ವಕವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ, ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಮಹಾಮಾರಿ ಕೊರೋನಾ ರೋಗದ ಸೋಂಕು ಹರಡಿ ಮಾನವನ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಸಾರ್ವಜನಿಕರಿಗೆ ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೇ ಮದ್ಯ ಸೇವಿಸಲು ಅನವು ಮಾಡಿಕೊಟ್ಟು, 180 ML ಅಳತೆಯ OLD TAVERN Whisky ಅಂತಾ ಬರೆದ 04 ಪೌಚ್ ಗಳು, ಒಂದಕ್ಕೆ 87/- ರೂಪಾಯಿಯಂತೆ ಒಟ್ಟೂ ಅ||ಕಿ|| 348/- ರೂಪಾಯಿ, 90 ML ಅಳತೆಯ WELLINGTON Whisky ಅಂತಾ ಬರೆದ 06 ಪೌಚ್ ಗಳು, ಒಂದಕ್ಕೆ 35/- ರೂಪಾಯಿಯಂತೆ ಒಟ್ಟೂ ಅ||ಕಿ|| 210/- ರೂಪಾಯಿ ಹಾಗೂ WELLINGTON Whisky ಅಂತಾ ಬರೆದ 02 ಖಾಲಿ ಪೌಚ್ ಗಳು, 02 ಪ್ಲಾಸ್ಟಿಕ್ ಗ್ಲಾಸ್, ಒಂದು ಲೀಟರ್ ನೀರಿನ ಪ್ಲಾಸ್ಟಿಕ್ ಖಾಲಿ ಬಾಟಲಿ ಹಾಗೂ ನಗದು ಹಣ 215/- ರೂಪಾಯಿಯೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಬಸವರಾಜ ಮಬನೂರ, ಪಿ.ಎಸ್.ಐ, ಮುಂಡಗೋಡ ಪೊಲೀಸ್ ಠಾಣೆ ರವರು ದಿನಾಂಕ: 30-05-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
ಸಿದ್ದಾಪುರ ಪೊಲೀಸ್ ಠಾಣೆ
ಅಪರಾಧ ಸಂಖ್ಯೆಃ 63/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹ್ಮದ್ ಅಸ್ಲಂ ತಂದೆ ಇಬ್ರಾಹಿಂ ಹುಸೇನಸಾಬ್, ಪ್ರಾಯ-30 ವರ್ಷ, ಸಾ|| ಹೆರೂರು, ತಾ: ಸಿದ್ದಾಪುರ (ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-5624 ನೇದರ ಸವಾರ). ಈತನು ದಿನಾಂಕ: 29-05-2021 ರಂದು 19-15 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂ: ಕೆ.ಎ-47/ಜೆ-5624 ನೇದನ್ನು ಕಾನಸೂರ ಕಡೆಯಿಂದ ಹೆರೂರ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಾ ಕಾನಸೂರ-ಹೆರೂರ ರಸ್ತೆಯ ಬಾಳೂರಿನಲ್ಲಿ ಎದುರಿನಿಂದ ಪಿರ್ಯಾದಿಯು ಮೋಟಾರ್ ಸೈಕಲಿನ ಹಿಂದಿನ ಸೀಟಿನಲ್ಲಿ ಕುಳಿತು ಪ್ರಯಾಣಿಸಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-31/ಡಬ್ಲ್ಯೂ-1582 ನೇದಕ್ಕೆ ಎದುರಿನಿಂದ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯ ಬಲಗಾಲಿಗೆ ಸಣ್ಣಪುಟ್ಟ ಪೆಟ್ಟು ಹಾಗೂ ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ಭೀಮಪ್ಪಾ ತಂದೆ ಹುಚ್ಚಪ್ಪಾ ಬೋವಿವಡ್ಡರ, ಸಾ|| ಗಣೇಶ ನಗರ, ತಾ: ಶಿರಸಿ ಇವರ ಮುಖಕ್ಕೆ, ಎಡಕಿವಿ, ಬಲಗೈ ಹಾಗೂ ಬಲಗಾಲಿಗೆ ಗಾಯನೋವು ಪಡಿಸಿರುತ್ತಾನೆ. ಹಾಗೂ ಅಪಘಾತ ಪಡಿಸಿದ ಆರೋಪಿ ಮೋಟಾರ್ ಸೈಕಲ್ ಸವಾರನು ತನಗೂ ಸಹ ತನ್ನ ತಲೆಗೆ ಹಾಗೂ ಬಲಗಾಲಿಗೆ ಮತ್ತು ತನ್ನ ಮೋಟಾರ್ ಸೈಕಲಿನ ಹಿಂಬದಿ ಸವಾರನಾದ ಮುಜಫರ್ ಈತನ ಬಲಗಾಲಿಗೆ ಗಾಯನೋವನ್ನುಂಟು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ರಘುನಾಥ ತಂದೆ ಸುಬ್ಬಾ ಗಾಂವಕರ, ಪ್ರಾಯ-54 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ಗಣೇಶ ನಗರ, ತಾ: ಶಿರಸಿ ರವರು ದಿನಾಂಕ: 30-05-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======
ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ
ದಿನಾಂಕ:- 30-05-2021
at 00:00 hrs to 24:00 hrs
ಮುರ್ಡೇಶ್ವರ ಪೊಲೀಸ್ ಠಾಣೆ
ಯು.ಡಿ.ಆರ್ ಸಂಖ್ಯೆಃ 15/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಕುಮಾರಿ: ಜಯಶ್ರೀ ತಂದೆ ವೆಂಕಟ್ರಮಣ ನಾಯ್ಕ, ಪ್ರಾಯ-20 ವರ್ಷ, ವೃತ್ತಿ-ನರ್ಸಿಂಗ್ ವಿದ್ಯಾರ್ಥಿನಿ, ಸಾ|| ಪೊಳಗಿಮನೆ, ಬಿದ್ರಮನೆ, ಬಸ್ತಿ, ಪೋ: ಕಾಯ್ಕಿಣಿ, ತಾ: ಭಟ್ಕಳ. ಪಿರ್ಯಾದಿಯ ತಂಗಿಯಾದ ಇವಳು ಉಡುಪಿಯಲ್ಲಿ 2 ನೇ ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯಾಗಿ ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾಳೆ. ಜಯಶ್ರೀ ಇವಳು ಕಳೆದ ಒಂದುವರೆ ತಿಂಗಳ ಹಿಂದೆ ಯಾರೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ ಅಂತಾ ಜಯಶ್ರೀ ಇವಳ ಶಿಕ್ಷಕರು ತಿಳಿಸಿದ ನಂತರ ಜಯಶ್ರೀ ಇವಳಿಗೆ ಮನೆಗೆ ಕರೆದುಕೊಂಡು ಬಂದು ಮುರ್ಡೇಶ್ವರದ ಆರ್.ಎನ್.ಎಸ್. ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಉಪಚಾರ ಮಾಡಿಸಿದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಇವಳು ಹೆಚ್ಚಾಗಿ ಅನುವಂಶಿಕವಾಗಿ ಬಂದ ಮಾನಸಿಕ ಖಾಯಿಲೆಗೆ ಒಳಗಾದಂತೆ ಕಂಡು ಬರುತ್ತಿದೆ ಅಂತಾ ತಿಳಿಸಿ ಉಪಚಾರ ನೀಡಿರುತ್ತಾರೆ. ನಂತರ ಜಯಶ್ರೀ ಇವಳು ದಿನಾಂಕ: 08-05-2021 ರಂದು ಮನೆಯಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಮುರ್ಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಜಯಶ್ರೀ ಇವಳಿಗೆ ಹೊನ್ನಾವರದ ಸೇಂಟ್ ಇಗ್ನೇಶಿಯಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ನೀಡಲಾಗಿದ್ದು, ಜಯಶ್ರೀ ಇವಳು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮಾನಸಿಕವಾಗಿ ನೊಂದುಕೊಂಡವಳು ಅಥವಾ ಅನುವಂಶಿಕವಾಗಿ ಬಂದ ಮಾನಸಿಕ ಖಾಯಿಲೆಗೆ ಒಳಗಾಗಿ ದಿನಾಂಕ: 29-05-2021 ರಂದು 22-00 ಗಂಟೆಯಿಂದ ದಿನಾಂಕ: 30-05-2021 ರಂದು ಬೆಳಗಿನ ಜಾವ 01-45 ಗಂಟೆಯ ನಡುವಿನ ಅವಧಿಯಲ್ಲಿ ಬಸ್ತಿ, ಬಿದ್ರಮನೆಯ ತಮ್ಮ ಮನೆಯ ಮಂದುಗಡೆ ಇರುವ ಬಾವಿಯಲ್ಲಿ ಹಾರಿ ನೀರಿನಲ್ಲಿ ಮಳುಗಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಬಗ್ಗೆ ಪಿರ್ಯಾದಿ ಕುಮಾರಿ: ಶೃತಿ ತಂದೆ ವೆಂಕಟ್ರಮಣ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ಖಾಸಗಿ ಕಂಪನಿಯಲ್ಲಿ ಕೆಲಸ, ಸಾ|| ಪೊಳಗಿಮನೆ, ಬಿದ್ರಮನೆ, ಬಸ್ತಿ, ಪೋ: ಕಾಯ್ಕಿಣಿ, ತಾ: ಭಟ್ಕಳ ರವರು ದಿನಾಂಕ: 30-05-2021 ರಂದು 03-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.
======||||||||======