Feedback / Suggestions

Daily District Crime Report

Date:- 30-11-2021

at 00:00 hrs to 24:00 hrs

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 85/2021, ಕಲಂ: 143, 147, 341, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ತುಳಸಿ ದಯಾನಂದ ಹೊಸ್ಕಟ್ಟಾ, 2]. ರೇಖಾ ದಿನೇಶ ಹೊಸ್ಕಟ್ಟಾ, 3]. ವೆಂಕಮ್ಮ ಸದಾನಂದ ಹೊಸ್ಕಟ್ಟಾ, 4]. ಚಂದ್ರಕಲಾ ಉಮಾಕಾಂತ ಹೊಸ್ಕಟ್ಟಾ, 5]. ಶ್ರುತಿ ಕೋಂ ರಾಜು ಹೊಸ್ಕಟ್ಟಾ, 6]. ಸುಪ್ರಿತಾ ಕೋಂ. ನವೀನ ಹೊಸ್ಕಟ್ಟಾ, 7]. ಕಮಲಾಕ್ಷಿ ದಾನು ಹರಿಕಂತ್ರ, 8]. ವಿನೋದ ರಾಮಚಂದ್ರ ಹೊಸ್ಕಟ್ಟಾ, 9]. ಪ್ರಮೋದ ಕೃಷ್ಣ ಹೊಸ್ಕಟ್ಟಾ, 10]. ಮಂಜುನಾಥ ಬೀರಪ್ಪ ಹೊಸ್ಕಟ್ಟಾ, ಸಾ|| (ಎಲ್ಲರೂ) ಹೊಸ್ಕಟ್ಟಾ, ತಾ: ಕುಮಟಾ, 11]. ನಾಗವೇಣಿ ಮಹಾಬಲೇಶ್ವರ ಹರಿಕಂತ್ರ, ಸಾ|| ಅಘನಾಶಿನಿ, ತಾ: ಕುಮಟಾ, 12]. ಶೇಖರ  ತಂದೆ ಮಾದೇವ ಹರಿಕಂತ್ರ, ಸಾ|| ಮೊಟೆಗುಣಿ, ಬೆಟ್ಕುಳಿ, ತಾ: ಕುಮಟಾ, 13]. ಗಣೇಶ ಅಂಬಿಗ, ಸಾ|| ಮಿರ್ಜಾನ, ತಾರಿಬಾಗಿಲು, ತಾ: ಕುಮಟಾ ಹಾಗೂ ಇತರರು. ದಿನಾಂಕ: 30-11-2021 ರಂದು 10-30 ಗಂಟೆಯ ಸುಮಾರಿಗೆ ಪಿರ್ಯಾದುದಾರರು ಬಾಡಿಗೆಯ ಮಿನಿ ಟಿಪ್ಪರ್ ವಾಹನದಲ್ಲಿ ದಾಸ್ತಾನು ಮಾಡಿಟ್ಟ ಚಿಪ್ಪಿಯನ್ನು ಲೋಡ್ ಮಾಡಿಸಿ, ಗೋಕರ್ಣದ ನಳಿನಿ ಇಂಡಸ್ಟ್ರೀಸ್ ಗೆ ಖಾಲಿ ಮಾಡಿಸುತ್ತಿದ್ದಾಗ ನಮೂದಿತ ಆರೋಪಿತರು ಹಾಗೂ ಇತರರು ಅಕ್ರಮವಾಗಿ ಸೇರಿಕೊಂಡು ಬಂದು ಪಿರ್ಯಾದಿಯವರು ಲೋಡ್ ಮಾಡಿದ ಚಿಪ್ಪಿ ಲಾರಿಗೆ ಅಡ್ಡಗಟ್ಟಿ ಮುತ್ತಿಗೆ ಹಾಕಿ, ‘ಚಿಪ್ಪಿ ಲಾರಿಯನ್ನು ಬಿಡುವುದಿಲ್ಲ’ ಅಂತಾ ಹೇಳಿದವರಿಗೆ ಪಿರ್ಯಾದಿಯು ತಾನು ಗಣಿಗಾರಿಕೆಯ ಕುರಿತು ಲೈಸೆನ್ಸ್ಸ್ ಪಡೆದುಕೊಂಡಿದ್ದಾಗಿ ತಿಳಿಸಿದರೂ ಸಹ ಪಿರ್ಯಾದಿಯ ಮಾತನ್ನು ಕೇಳದೇ ಪಿರ್ಯಾದಿಗೆ ಮತ್ತು ಅವರ ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದ 1). ಸುಬ್ರಾಯ ಉದ್ದಂಡ ಕವರಿ, ಸಾ|| ತೊರ್ಕೆ, ಗೋಕರ್ಣ, ತಾ: ಕುಮಟಾ, 2). ತಿಮ್ಮಪ್ಪ ರಾಮಾ ಪಟಗಾರ, ಸಾ|| ದೇವರಭಾವಿ, ತಾ: ಕುಮಟಾ, 3). ಹುಲಿಯಾ ಮಂಕಾಳಿ ಗೌಡ, ಸಾ|| ತಲಗೇರಿ, ಇವರಿಗೂ ಕೂಡಾ ಅವಾಚ್ಯ ಶಬ್ದಗಳಿಂದ ಬೈಯ್ದು, ‘ತಾವು ಯಾವುದೇ ಸಂದರ್ಭದಲ್ಲಿಯೂ ಕೂಡಾ ಗಣಿಗಾರಿಕೆ ನಡೆಸಲು ಬಿಡುವುದಿಲ್ಲ. ನೀವು ಚಿಪ್ಪಿ ತೆಗೆಯಲು ಬಂದಿದ್ದೇ ಆದಲ್ಲಿ ನಿಮಗೆ ಇಲ್ಲಿಯೇ ಕೊಂದೇ ಹಾಕುತ್ತೇವೆ’ ಎಂದು ಬೆದರಿಕೆ ಹಾಕಿ, ನಮ್ಮ ಲಾರಿಗೆ ತಡೆ ಒಡ್ಡಿದ ಬಗ್ಗೆ ಪಿರ್ಯಾದಿ ಶ್ರೀ ಆದಿತ್ಯ ತಂದೆ ಪ್ರಕಾಶ ಗಾಂವಕರ, ಪ್ರಾಯ-40 ವರ್ಷ, ವೃತ್ತಿ-ಮೈನ್ಸ್ ಬಿಸಿನೆಸ್, ಸಾ|| ಮಠಾಕೇರಿ, ತಾ: ಅಂಕೋಲಾ ರವರು ದಿನಾಂಕ: 30-11-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 86/2021, ಕಲಂ: 143, 147, 148, 323, 324, 307, 504, 506 ಸಹಿತ 149 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಚಿದಾನಂದ ನಾಗಪ್ಪ ಲಕ್ಕುಮನೆ, ಸಾ|| ಅಘನಾಶಿನಿ, ತಾ: ಕುಮಟಾ, 2]. ಸಂದೀಪ ವೆಂಕಟೇಶ ಹರಿಕಂತ್ರ, ಸಾ|| ಅಘನಾಶಿನಿ, ತಾ: ಕುಮಟಾ, 3]. ಉಮಾಕಾಂತ ಗಣಪತಿ ಹೊಸ್ಕಟ್ಟಾ, ಸಾ|| ಹೊಸ್ಕಟ್ಟಾ, ತಾ: ಕುಮಟಾ, 4]. ರಾಜು ನಾಗೇಶ ಹೊಸ್ಕಟ್ಟಾ, ಸಾ|| ಹೊಸ್ಕಟ್ಟಾ, ತಾ: ಕುಮಟಾ, 5]. ಶ್ರೀನಿವಾಸ ಧಾನು ಹೊಸ್ಕಟ್ಟಾ, ಸಾ|| ಹೊಸ್ಕಟಾ, ತಾ: ಕುಮಟಾ, 6]. ದಯಾನಂದ ರಾಮಾ ಹೊಸ್ಕಟ್ಟಾ, ಸಾ|| ಹೊಸ್ಕಟ್ಟಾ, ತಾ: ಕುಮಟಾ, 7]. ರಾಘವೇಂದ್ರ ಈಶ್ವರ ಹೊಸ್ಕಟ್ಟಾ, ಸಾ|| ಹೊಸ್ಕಟ್ಟಾ, ತಾ: ಕುಮಟಾ, 8]. ದೇವಿದಾಸ ಶಿವು ಹರಿಕಂತ್ರ, ಸಾ|| ಅಘನಾಶಿನಿ, ತಾ: ಕುಮಟಾ, 9]. ಗಣೇಶ ಅಣ್ಣಪ್ಪ ಹರಿಕಂತ್ರ, ಸಾ|| ಅಘನಾಶಿನಿ, ತಾ: ಕುಮಟಾ, 10]. ದಯಾನಂದ ನಾರಾಯಣ ಹೊಸ್ಕಟ್ಟಾ, ಸಾ|| ಹೊಸ್ಕಟ್ಟಾ, ತಾ: ಕುಮಟಾ, 11]. ನವೀನ ನಾಗೇಶ ಹೊಸ್ಕಟ್ಟಾ, ಸಾ|| ಹೊಸ್ಕಟ್ಟಾ, ತಾ: ಕುಮಟಾ, 12]. ಪರಮೇಶ್ವರ ಮಂಕಾಳಿ ಮಸಾಕಲ್, ಸಾ|| ಮಸಾಕಲ್, ತಾ: ಕುಮಟಾ, 13]. ಮಾದೇವ ಸುಕ್ರು ಹೊಸ್ಕಟ್ಟಾ, ಸಾ|| ಹೊಸ್ಕಟ್ಟಾ, ತಾ: ಕುಮಟಾ, 14]. ನಾರಾಯಣ ಸಣ್ಣು ಮೂಡಂಗಿ, ಸಾ|| ಮೂಡಂಗಿ, ತಾ: ಕುಮಟಾ ಹಾಗೂ ಇತರರು. ದಿನಾಂಕ: 30-11-2021 ರಂದು ಮಧ್ಯಾಹ್ನ 03-15 ಗಂಟೆಯ ಸುಮಾರಿಗೆ ಪಿರ್ಯಾದುದಾರರು ಮತ್ತು ರಾಮಾ ವೆಂಕಟರಮಣ ಹೊಸ್ಕಟ್ಟಾ, ಸಾ|| ಹೊಸ್ಕಟ್ಟಾ, ತಾ: ಕುಮಟಾ ಇವರು ಅಘನಾಶಿನಿ ನದಿಯಲ್ಲಿ ಚಿಪ್ಪಿಯನ್ನು ದೋಣಿಯಲ್ಲಿ ತುಂಬಿಕೊಂಡು ವಾಪಸ್ ಹೊಸ್ಕಟ್ಟಾದ ಗಾಂವಕರ ಮೈನ್ಸ್ ನ ಚಿಪ್ಪಿ ದಾಸ್ತಾನು ಮಾಡುವ ಜಾಗಕ್ಕೆ ಬಂದು ದೋಣಿಯನ್ನು ದಡದಲ್ಲಿ ನಿಲ್ಲಿಸಿದಾಗ ನಮೂದಿತ ಆರೋಪಿತರೆಲ್ಲರೂ ಸೇರಿಕೊಂಡು ಸಂಗನಮತ ಮಾಡಿ, ಅಘನಾಶಿನಿ ನದಿಯಲ್ಲಿ ಗೋಕರ್ಣ ಕ್ರೂಸ್ ಟೂರಿಸ್ಟ್ ಬೋಟಿನಲ್ಲಿ ಬಂದು ‘ಸೂಳೇ ಮಕ್ಕಳೇ, ನಿಮಗೆ ಇಲ್ಲಿ ಚಿಪ್ಪಿ ತೆಗೆಯಲು ಹೇಳಿದವರು ಯಾರು?’ ಅಂತಾ ಕೇಳಿದಾಗ, ಪಿರ್ಯಾದುದಾರನು ಆರೋಪಿತರಿಗೆ ‘ನಾವು ಗಾಂವಕರ ಮೈನ್ಸ್ ನ ಲೀಸ್ ನಲ್ಲಿ ಕೂಲಿ ಮಾಡಲು ಬಂದವರು. ಅವರ ಲೀಸ್ ನಂತೆ ಚಿಪ್ಪಿ ತೆಗೆಯಲು ಕೂಲಿ ಕೆಲಸಕ್ಕೆ ಬಂದಿರುತ್ತೇವೆ’ ಅಂತಾ ಹೇಳಿದಾಗ, ಆರೋಪಿ 1, 2 ಹಾಗೂ 3 ನೇಯವರೆಲ್ಲಾ ಸೇರಿಕೊಂಡು ‘ಬೋಳಿ ಮಕ್ಕಳೇ, ನೀವು ಇಲ್ಲಿ ಚಿಪ್ಪಿ ತೆಗೆಯಲು ಬರಬೇಡಿ ಅಂತಾ ಹೇಳಿದರೂ ಕೇಳುವುದಿಲ್ಲ’ ಅಂತಾ ಹೇಳಿ ತಮ್ಮ ದೋಣಿಯಲ್ಲಿದ್ದ ಕುಟಾರಿ ಹಾಗೂ ದೋಣಿಯ ಜಲ್ಲ ತೆಗೆದುಕೊಂಡು ಅವರ ದೋಣಿಯಿಂದ ಜಿಗಿದು ಬಂದವರು, ಪಿರ್ಯಾದಿಗೆ ಹಾಗೂ ರಾಮಾ ವೆಂಕಟರಮಣ ಹೊಸ್ಕಟ್ಟಾ ಇವರಿಗೆ ‘ನಿಮ್ಮನ್ನು ಕೊಂದೇ ಹಾಕುತ್ತೇವೆ’ ಅಂತಾ ಹೇಳಿ ಒಂದೇ ಸಮನೆ ಕೈಯಿಂದ ಮತ್ತು ಆರೋಪಿತರು ತಾವು ತೆಗೆದುಕೊಂಡ ಬಂದ ದೋಣಿಯ ಜಲ್ಲದಿಂದ ಹೊಡೆದು, ಪಿರ್ಯಾದಿಗೆ ಆರೋಪಿ 2 ನೇಯವನು ಕೈಯಿಂದ ಹೊಡೆದು ದೂಡಿ ಹಾಕಿ ಸಾದಾ ಸ್ವರೂಪದ ಗಾಯ ಮತ್ತು ರಾಮಾ ವೆಂಕಟರಮಣ ಹೊಸ್ಕಟ್ಟಾ ಈತನಿಗೆ ಆರೋಪಿ 3, 5 ಹಾಗೂ 6 ನೇಯವರು ಸೇರಿ ಕುಟಾರಿಯ ಕಾವಿನಿಂದ ಹೊಡೆದು ಮತ್ತು ಕಲ್ಲಿನಿಂದ ಆರೋಪಿ 3 ನೇಯವನು ಮುಖಕ್ಕೆ ಜಜ್ಜಿ ರಕ್ತಗಾಯ ಹಾಗೂ ಪಿರ್ಯಾದಿ ಮತ್ತು ರಾಮಾ ವೆಂಕಟರಮಣ ಹೊಸ್ಕಟ್ಟಾ ಇವರು ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾಗ ಗಾಂವಕರ ಮೈನ್ಸ್ ನಲ್ಲಿ ಸೂಪರವೈಸರ್ ಆಗಿ ಕೆಲಸ ಮಾಡುವ ಸದಾನಂದ ಮಂಕಾಳಿ ಹೊಸ್ಕಟ್ಟಾ ಇವರು ಬಿಡಿಸಲು ಬಂದಾಗ ಅವರಿಗೂ ಕೂಡಾ ಆರೋಪಿ 4 ಹಾಗೂ 12 ನೇಯವರು ಸೇರಿ ಕೈಯಿಂದ ಹೊಡೆದು ಸಾದಾ ಸ್ವರೂಪದ ಗಾಯ ಪಡಿಸಿ, ‘ಬೋಳಿ ಮಕ್ಕಳಾ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ‘ಮತ್ತೇ ಅಘನಾಶಿನಿ ನದಿಯಲ್ಲಿ ಚಿಪ್ಪಿ ತೆಗೆಯಲು ಬಂದಲ್ಲಿ ನಿಮಗೆ ಡೀಸೆಲ್ ಹಾಕಿ ಸುಟ್ಟು ಕೊಂದೇ ಬಿಡುತ್ತೇವೆ’ ಅಂತಾ ಜೀವದ ಬೆದರಿಕೆ ಹಾಕಿ ಓಡಿ ಹೋದ ಬಗ್ಗೆ ಪಿರ್ಯಾದಿ ಶ್ರೀ ರಾಘವೇಂದ್ರ ತಂದೆ ತಿಮ್ಮಪ್ಪ ಹರಿಕಂತ್ರ, ಪ್ರಾಯ-36 ವರ್ಷ, ವೃತ್ತಿ-ಮೀನುಗಾರಿಕೆ ಹಾಗೂ ಕೂಲಿ ಕೆಲಸ, ಸಾ|| ಹೊಸ್ಕಟ್ಟಾ, ತಾ: ಕುಮಟಾ ರವರು ದಿನಾಂಕ: 30-11-2021 ರಂದು 16-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 210/2021, ಕಲಂ: 324, 341, 504, 506 ಸಹಿತ 34  ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಕಾರ್ ನಂ: ಜಿ.ಎ-03/ಝೆಡ್-5159 ನೇದರಲ್ಲಿ ಬಂದ ಯಾರೋ ಇಬ್ಬರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದಿಯವರು ತಾನು ಚಲಾಯಿಸುತಿದ್ದ ಟ್ಯಾಂಕರ್ ವಾಹನ ನಂ: ಕೆ.ಎ-19/ಎ.ಬಿ-3272 ನೇದರಲ್ಲಿ ಮಂಗಳೂರಿನಿಂದ ಪೆಟ್ರೋಲ್ ಲೋಡ್ ಮಾಡಿಕೊಂಡು ಬಿಜಾಪುರಕ್ಕೆ ಹೋಗಲು ಹೊರಟು ದಿನಾಂಕ: 30-11-2021 ರಂದು ರಾತ್ರಿ 02-00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಕುಮಟಾ ತಾಲೂಕಿನ ಮಿರ್ಜಾನ ಗ್ರಾಮ ಪಂಚಾಯತ್ ಹತ್ತಿರ ತಲುಪುತ್ತಿದ್ದಂತೆ ಅದೇ ವೇಳೆಗೆ ಎರ್ಟಿಗಾ ಕಾರ್ ನಂ: ಜಿ.ಎ-03/ಝೆಡ್-5159 ನೇದರಲ್ಲಿ ಹೋಗುತ್ತಿದ್ದ ಆರೋಪಿತ ಸವಾರರಿಬ್ಬರು ಪಿರ್ಯಾದಿಯ ಲಾರಿಯನ್ನು ಓವರಟೇಕ್ ಮಾಡಿ ಅಡ್ಟಗಟ್ಟಿ ತಡೆದು ಕಾರಿನಿಂದ ಇಳಿದು ಪಿರ್ಯಾದಿಯನ್ನು ಉದ್ದೇಶಿಸಿ ‘ಬೋಳಿ ಮಗನೇ, ನೀನು ಲಾರಿಯನ್ನು ಎದುರಿನಿಂದ ಚಲಾಯಿಸಿಕೊಂಡು ಬಂದು ನಮ್ಮನ್ನು ಸಾಯಿಸುತ್ತಿದ್ದೆ’ ಅಂತಾ ಅವಾಚ್ಯ ಶಬ್ಬಗಳಿಂದ ಬೈಯ್ದು ಅಲ್ಲಿಯೇ ಬಿದ್ದುಕೊಂಡಿದ್ದ ಕಲ್ಲು ಮತ್ತು ದೊಣ್ಣೆಯಿಂದ ಆರೋಪಿತರಿಬ್ಬರು ಸೇರಿ ಪಿರ್ಯಾದಿಗೆ ತಲೆಗೆ, ಬೆನ್ನಿಗೆ, ಸೊಂಟಕ್ಕೆ ಹಾಗೂ ಬಲಗೈಗೆ ಹೊಡೆದು ಹಲ್ಲೆ ಮಾಡಿದ್ದು, ಇದನ್ನು ನೋಡಿ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಟ್ಯಾಂಕರ್ ಲಾರಿಯ ಕ್ಲೀನರ್ ರಂಜಿತಕುಮಾರ ತಂದೆ ಸುನೀಲ್ ಶೆಟ್ಟಿ, ಸಾ|| ಮಲವಚಿತಿಗೆ, ತಾ: ಬೆಳ್ತಂಗಡಿ, ಜಿ: ದಕ್ಷಿಣ ಕನ್ನಡ ಇವರು ತಪ್ಪಿಸಲು ಹೋದಾಗ ಆತನಿಗೂ ಸಹ ದೊಣ್ಣೆಯಿಂದ ಕಾಲಿಗೆ ಹೊಡೆದು ಹಲ್ಲೆ ಮಾಡಿದ್ದಲ್ಲದೇ, ‘ಇನ್ನೊಮ್ಮೆ ಸಿಕ್ಕಾಗ ಕೊಲೆ ಮಾಡುತ್ತೇವೆ’ ಎನ್ನುವುದಾಗಿ ಜೀವದ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾದಿ ಶ್ರೀ ಅಕ್ಷಯಕುಮಾರ ತಂದೆ ವಿಠ್ಠಲ್ ಗೌಡ, ಪ್ರಾಯ-25 ವರ್ಷ, ವೃತ್ತಿ-ಚಾಲಕ, ಸಾ|| ಇಂಡಬೆಟ್ಟಾ ಗ್ರಾಮ, ಪೋ: ಬಾಂಗಡಿ, ತಾ: ಬೆಳ್ತಂಗಡಿ, ಜಿ: ದಕ್ಷಿಣ ಕನ್ನಡ ರವರು ದಿನಾಂಕ: 30-11-2021 ರಂದು 08-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 211/2021, ಕಲಂ: 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಪ್ರಭಾಕರ ತಂದೆ ಲಿಂಗಪ್ಪಾ ಮಡಿವಾಳ, ಪ್ರಾಯ-51 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ, ಸಾ|| ಹಳಕಾರ, ತಾ: ಕುಮಟಾ, 2]. ಪ್ರಕಾಶ ಮಾದೇವ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್, ಸಾ|| ಗುರುನಗರ, ತಾ: ಕುಮಟಾ. ಪಿರ್ಯಾದಿಯವರ ಹೆಂಡತಿಯಾದ ಶ್ರೀಮತಿ ಕರಿಯಮ್ಮಾ ಇವರು ಕಳೆದ ಮೂರು ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಅವರಿಗೆ ವಾರಕ್ಕೆ ಎರಡು ಬಾರಿ ಕುಮಟಾ ತಾಲೂಕಿನ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸುತ್ತಿದ್ದು, ದಿನಾಂಕ: 30-11-2021 ರಂದು ಬೆಳಿಗ್ಗೆ ಪಿರ್ಯಾದಿಯವರು ತನ್ನ ಹೆಂಡತಿ ಶ್ರೀಮತಿ ಕರಿಯಮ್ಮಾ ಇವರಿಗೆ ಕುಮಟಾ ತಾಲೂಕಾ ಆಸ್ಪತ್ರೆಗೆ ಡಯಾಲಿಸಿಸ್ ಗೆ ಕರೆದುಕೊಂಡು ಹೋಗಲು ಮನೆಯಿಂದ ಕುಮಟಾ ಬಸ್ ಸ್ಟ್ಯಾಂಡಿಗೆ ಬಂದು ಅಲ್ಲಿಂದ ಕುಮಟಾ-ಭಟ್ಕಳ ಬಸ್ ನಂ: ಕೆ.ಎ-31/ಎಫ್-1379 ನೇದರಲ್ಲಿ ಹತ್ತಿದ್ದು, ಬೆಳಿಗ್ಗೆ 09-00 ಗಂಟೆಯ ವೇಳೆಯಲ್ಲಿ ಬಗ್ಗೋಣ ಕ್ರಾಸ್ ಹತ್ತಿರ ಪ್ರಯಾಣಿಕರು ಇಳಿಯಲು ಬಸ್ ನಿಲ್ಲಿಸಿದ್ದು, ಶ್ರೀಮತಿ ಕರಿಯಮ್ಮ ಇವರು ಬಸ್ಸಿನಿಂದ ಇಳಿಯುವ ವೇಳೆ, ಅವರು ಇಳಿಯುವುದನ್ನು ನೋಡಿಯೂ ಸಹ ಆರೋಪಿ 2 ನೇಯವನು ಬಸ್ ಹೋಗಲು ಸೀಟಿ ಊದಿದ್ದು, ಅದೇ ವೇಳೆ ಬಸ್ ಚಾಲಕನಾದ ಆರೋಪಿ 1 ನೇಯವನು ಸಹ ಶ್ರೀಮತಿ ಕರಿಯಮ್ಮಾ ಇವರು ಇಳಿಯುವುದನ್ನು ನೋಡಿಯೂ ಸಹ ನಿಷ್ಕಾಳಜಿಯಿಂದ ಬಸನ್ನು ಚಲಾಯಿಸಿದ್ದು, ಇದರಿಂದ ಶ್ರೀಮತಿ ಕರಿಯಮ್ಮಾ ಇವರು ಬಸ್ಸಿನಿಂದ ಕೆಳಕ್ಕೆ ಬಿದ್ದು, ಅವರ ಬಲಗಾಲಿನ ತೊಡೆಯ ಭಾಗದಲ್ಲಿ ಮೂಳೆ ಮುರಿದು ಭಾರೀ ಗಾಯವಾಗಲು ಆರೋಪಿತರಿಬ್ಬರೂ ಕಾರಣರಾದ ಬಗ್ಗೆ ಪಿರ್ಯಾದಿ ಶ್ರೀ ಹುಲಿಯಪ್ಪಾ ತಂದೆ ತುಳಸು ಗೌಡ, ಪ್ರಾಯ-67 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಡಮೆ, ತೊರ್ಕೆ, ಗೋಕರ್ಣ,  ತಾ: ಕುಮಟಾ ರವರು ದಿನಾಂಕ: 30-11-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 144/2021, ಕಲಂ: 8(C), 20(B), ii(A) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತರು 1]. ಜಗದೀಶ ತಂದೆ ಶಂಭು ಗೌಡ, ಪ್ರಾಯ-40 ವರ್ಷ, ಸಾ|| ಗುಣವಂತೆ, ತಾ: ಹೊನ್ನಾವರ, 2]. ರಿಜ್ವಾನ್, ಸಾ|| ಹನಿಪಾಬಾದ್, ತಾ: ಭಟ್ಕಳ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 30-11-2021 ರಂದು 11-45 ಗಂಟೆಗೆ ಇಡಗುಂಜಿ ಕ್ರಾಸ್ ಹತ್ತಿರ ವಿನಾಯಕ ವನದ ಬದಿಯಲ್ಲಿರುವ ಕಚ್ಚಾ ರಸ್ತೆಯ ಮೇಲೆ ತನ್ನ ಸ್ಕೂಟಿ ನಂ: ಕೆ.ಎ-47/ಡಬ್ಲ್ಯೂ-9688 ನೇದನ್ನು ನಿಲ್ಲಿಸಿಕೊಂಡು ಪಾಸ್ ಯಾ ಪರ್ಮಿಟ್ ಇಲ್ಲದೇ ಆರೋಪಿ 2 ನೇಯವನಿಂದ ಖರೀದಿಸಿದ ಸುಮಾರು 6,000/- ರೂಪಾಯಿ ಮೌಲ್ಯದ 60 ಗ್ರಾಂ ಗಾಂಜಾವನ್ನು ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ, ತನ್ನ ಸ್ಕೂಟಿಯ ಮುಂದಿನ ಮಡಗಾರ್ಡ್ ಹತ್ತಿರ ಇರುವ ಬಾಕ್ಸಿನಲ್ಲಿಟ್ಟುಕೊಂಡು ಬರ-ಹೋಗುವ ಜನರಿಗೆ ಮಾರಾಟ ಮಾಡುತ್ತಿದ್ದಾಗ, ದಾಳಿಯ ವೇಳೆ ಸೆರೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಮಾಹಾಬಲೇಶ್ವರ  ಎಸ್. ಎನ್, ಪೊಲೀಸ್ ವೃತ್ತ ನಿರೀಕ್ಷಕರು, ಭಟ್ಕಳ ಗ್ರಾಮೀಣ ವೃತ್ತ, ಭಟ್ಕಳ ರವರು ದಿನಾಂಕ: 30-11-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 104/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ಮಾದೇವಿ ತಂದೆ ನಾರಾಯಣ ದೇವಡಿಗ, ಪ್ರಾಯ-26 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಸಣ್ಣಬಲಸೆ, ಬೈಲೂರು, ತಾ: ಭಟ್ಕಳ. ಪಿರ್ಯಾದಿಯ ಮಗಳಾದ ಇವಳು ಬಿ.ಎ ಪದವಿ ಮುಗಿಸಿಕೊಂಡು ಮನೆಯಲ್ಲಿಯೇ ಕೆಲಸ ಮಾಡಿಕೊಂಡಿದ್ದವಳು, ದಿನಾಂಕ: 27-11-2021 ರಂದು 22-00 ಗಂಟೆಗೆ ಊಟ ಮಾಡಿ ಮನೆಯಲ್ಲಿ ಮಲಗಿದವಳು, ದಿನಾಂಕ: 28-11-2021 ರಂದು ಬೆಳಿಗ್ಗೆ 06-00 ಗಂಟೆಗೆ ಪಿರ್ಯಾದುದಾರರು ಎದ್ದು ನೋಡಿದಾಗ ಕುಮಾರಿ: ಮಾದೇವಿ ಇವಳು ಮನೆಯಲ್ಲಿ ಇರಲಿಲ್ಲ. ಇವಳು ಮನೆಯಲ್ಲಿ ಯಾರಿಗೂ ಹೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ಕುಮಾರಿ: ಮಾದೇವಿ ಇವಳನ್ನು ಎಲ್ಲಾ ಕಡೆ ಹುಡುಕಾಡಿ, ಸಂಬಂಧಿಕರಲ್ಲಿ ಫೋನ್ ಮೂಲಕ ವಿಚಾರಿಸಿ ಪತ್ತೆಯಾಗದೇ ಇರುವುದರಿಂದ ಸದ್ರಿ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಕೃಷ್ಣಮ್ಮ ಕೋಂ. ನಾರಾಯಣ ದೇವಡಿಗ, ಪ್ರಾಯ-55 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಸಣ್ಣಬಲಸೆ, ಬೈಲೂರು, ತಾ: ಭಟ್ಕಳ ರವರು ದಿನಾಂಕ: 30-11-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 146/2021, ಕಲಂ: 279, 337, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಯೋಗೇಶ ತಂದೆ ಮಾಸ್ತಪ್ಪ ನಾಯ್ಕ, ಸಾ|| ಮುಟ್ಟಳ್ಳಿ, ತಾ: ಭಟ್ಕಳ (ನೋಂದಣಿಯಾಗದ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ಸವಾರ). ಈತನು ದಿನಾಂಕ: 30-11-2021 ರಂದು 19-00 ಗಂಟೆಯ ಸಮಯಕ್ಕೆ ತಾನು ಚಲಾಯಿಸಿಕೊಂಡು ಬಂದ ನೋಂದಣಿಯಾಗದ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲನ್ನು ಭಟ್ಕಳ ಕಡೆಯಿಂದ ಗೊರಟೆ ಕಡೆಗೆ ಚತುಷ್ಪಥ (4ವೇ) ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಅತೀವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನು, ಎದುರಿನಿಂದ ಪಿರ್ಯಾದಿಯು ಚಲಾಯಿಸಿಕೊಂಡು ಹೋಗುತ್ತಿದ್ದ  ಟೊಯೋಟಾ ಇನೋವಾ ಕಾರ್ ನಂ: ಜಿ.ಎ-05/ಬಿ-3067 ನೇದಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದರ ಪರಿಣಾಮ ಆರೋಪಿ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು, ಈ ಅಪಘಾತದಲ್ಲಿ ತನ್ನ ಎಡಗಾಲಿಗೆ ತೀವ್ರ ಗಾಯ ಹಾಗೂ ಕೈ ಕಾಲು, ಮತ್ತು ಮುಖಕ್ಕೆ ತೆರಚಿದ ಗಾಯ ಪಡಿಸಿಕೊಂಡು, ಎರಡು ವಾಹನಗಳನ್ನು ಜಖಂಗೊಳಿಸಿದ ಬಗ್ಗೆ ಪಿರ್ಯಾದಿ ರಾಹುಲ್ ತಂದೆ ರಾಮದಾಸ ಶೇಟವೆರೆಕರ್, ಪ್ರಾಯ-44 ವರ್ಷ, ವೃತ್ತಿ-ಕಾಂಟ್ರ್ಯಾಕ್ಟರ್, ಸಾ|| ಹೌಸ್ ನಂ: 148-33, ಎಸ್-2, ವೆರೆಕರ್ ಅಪಾರ್ಟಮೆಂಟ್, ಬೆತೊರಾ ರಸ್ತೆ, ದುರ್ಗಾಭಾಟ್, ಪೊಂಡಾ, ಗೋವಾ ರವರು ದಿನಾಂಕ: 30-11-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 155/2021, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ-2021 ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಬ್ದುಲ್ ರಜಾಕ್ ಶೇಕ್ ತಂದೆ ಸುಲೇಮಾನ್ ಸಾಹೇಬ್, ಪ್ರಾಯ-52 ವರ್ಷ, ವೃತ್ತಿ-ಅಡುಗೆ ಕೆಲಸ, ಸಾ|| ಮುಗ್ದುಮ್ ಕಾಲೋನಿ, ತಾ: ಭಟ್ಕಳ, 2]. ನಾರಾಯಣ ನಾಯ್ಕ, ಸಾ|| ತಲಗೇರಿ, ತಾ: ಭಟ್ಕಳ. ಈ ನಮೂದಿತ ಆರೋಪಿತರು ದಿನಾಂಕ: 30-11-2021 ರಂದು ಬೆಳಿಗ್ಗೆ 10-45 ಗಂಟೆಯ ಸುಮಾರಿಗೆ ಭಟ್ಕಳದ ಶಹರದ ಬಂದರ್ ರಸ್ತೆಯ ಮೈಸೂರ ಕೆಫೆಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ತನ್ನ ಲಾಭಕ್ಕೋಸ್ಕರ ಓ.ಸಿ ಮಟಕಾ ಜೂಗಾರಾಟದ ಅಂಕೆ-ಸಂಖ್ಯೆಗಳ ಮೇಲೆ ಸಾರ್ವಜನಿಕರಿಂದ ಹಣವನ್ನು ಪಡೆದು ಪಂಥವನ್ನಾಗಿ ಕಟ್ಟಿ ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿರುವಾಗ ನಗದು ಹಣ 2,450/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳ ಸಮೇತ ಆರೋಪಿ 1ನೇಯವನು ದಾಳಿಯ ಕಾಲಕ್ಕೆ ಪಿರ್ಯಾದಿಯವರಿಗೆ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 2 ನೇಯವನು ಸ್ಥಳದಿಂದ ಓಡಿ ಹೋದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಯಲ್ಲಪ್ಪ ಎಚ್. ಮಾದರ, ಪಿ.ಎಸ್.ಐ, ಭಟ್ಕಳ ಶಹರ ಪೊಲೀಸ್ ಠಾಣೆ ರವರು ದಿನಾಂಕ: 30-11-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 156/2021, ಕಲಂ: 279, 338 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಉದಯ ಕುಮಾರ ಕೆ. ಸಿ. ತಂದೆ ಚಂದಯ ಜೈನ್, ಸಾ|| ಮರಾಠಿ ಗ್ರಾಮ, ನಾಗೋಡಿ, ತಾ: ಸಾಗರ, ಜಿ: ಶಿವಮೊಗ್ಗ (ಟಿಪ್ಪರ್ ಲಾರಿ ನಂ: ಕೆ.ಎ-20/ಎ.ಬಿ-1884 ನೇದರ ಚಾಲಕ). ಈತನು ದಿನಾಂಕ: 29-11-2021 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಭಟ್ಕಳ ಶಹರದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ರಘುನಾಥ ರಸ್ತೆಯ ಕ್ರಾಸ್ ಹತ್ತಿರ ತನ್ನ ಟಿಪ್ಪರ್ ಲಾರಿ ನಂ: ಕೆ.ಎ-20/ಎ.ಬಿ-1884 ನೇದನ್ನು ಕುಂದಾಪುರ ಕಡೆಯಿಂದ ಭಟ್ಕಳ ಶಹರ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಸಿಕೊಂಡು ಹೋಗುತ್ತಾ ರಸ್ತೆಯ ಎಡಕ್ಕೆ ಬಂದು ರಸ್ತೆ ದಾಟಲು ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಪದ್ಮಾವತಿ ತಂದೆ ವಾಸದೇವ ಭಟ್, ಪ್ರಾಯ-55 ವರ್ಷ, ಸಾ|| ಮಾರುಕೇರಿ, ತಾ: ಭಟ್ಕಳ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪದ್ಮಾವತಿ ಭಟ್ ಇವರ ತಲೆಗೆ, ಕೈ ಮತ್ತು ಕಾಲುಗಳಿಗೆ ಗಂಭೀರ ಸ್ವರೂಪದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಕೇಶವ ತಂದೆ ಕಾಳಿಂಗ್ ಭಟ್, ಪ್ರಾಯ-40 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮಾರುಕೇರಿ, ತಾ: ಭಟ್ಕಳ ರವರು ದಿನಾಂಕ: 30-11-2021 ರಂದು 14-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 157/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 31-05-2021 ರಂದು 11-00 ಗಂಟೆಯಿಂದ ದಿನಾಂಕ: 31-05-2021 ರಂದು 11-45 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತ ಕಳ್ಳರು ಪಿರ್ಯಾದಿಯವರು ಭಟ್ಕಳ ಶಹರ ಅನ್ಪಾಲ್ ಮಾರ್ಕೆಟ್ ಎದುರುಗಡೆ ನಿಲ್ಲಿಸಿಟ್ಟ ಬಿಳಿ ಬಣ್ಣದ 125 ಸಿ.ಸಿ ಯ ಸುಜುಕಿ ಎಕ್ಸೆಸ್ ಸ್ಕೂಟಿ ನಂ: ಕೆ.ಎ-47/ಕೆ-6966 (ಇಂಜಿನ್ ನಂ: F4862101300 ಹಾಗೂ ಚಾಸಿಸ್ ನಂ: MB8CF4CAHC8211081) ನೇದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಇಕ್ಕೇರಿ ಮೊಹಿದ್ದೀನ್ ಶಾಜೀರ್ ತಂದೆ ಸಮೀಮ್ ಅಹಮ್ಮದ್, ಪ್ರಾಯ-41 ವರ್ಷ, ವೃತ್ತಿ-ಬಟ್ಟೆ ವ್ಯಾಪಾರ, ಸಾ|| ಮನೆ ನಂ: 05, ತಕಿಯಾ ಸ್ಟ್ರೀಟ್, ತಾ: ಭಟ್ಕಳ ರವರು ದಿನಾಂಕ: 30-11-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಜೋಯಿಡಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 41/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 28-11-2021 ರಂದು 07-00 ಗಂಟೆಯಿಂದ ದಿನಾಂಕ: 29-11-2021 ರಂದು 20-30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಮನೆಯ ಕಿಟಕಿಯನ್ನು ಒಡೆದು ಮನೆಯ ಒಳಗೆ ನುಗ್ಗಿ, ಪಿರ್ಯಾದಿಗೆ ಸೇರಿದ 29.53 ಗ್ರಾಂ ತೂಕದ ಬಂಗಾರದ ಮಂಗಳಸೂತ್ರ-01, ಅ||ಕಿ|| 1,40,500/- ರೂಪಾಯಿ ನೇದನ್ನು ಕಳುವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ಸಮೀಕ್ಷಾ ಕೋಂ. ಸಂತೋಷ ನಾಯ್ಕ, ಪ್ರಾಯ-32 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಉಳವಿ, ತಾ: ಜೋಯಿಡಾ ರವರು ದಿನಾಂಕ: 30-11-2021 ರಂದು 20-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ದಾಂಡೇಲಿ ನಗರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 98/2021, ಕಲಂ: 323, 324, 504, 506 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮೆಹಬೂಬ್ ರಫೀಕಸಾಬ್ ಕೊಪ್ಪದ್, ಪ್ರಾಯ-26 ವರ್ಷ, ಸಾ|| ಗಾಂವಠಾಣಾ, ತಾ: ದಾಂಡೇಲಿ. ಈತನು ಪಿರ್ಯಾದಿಯ ಹೆಂಡತಿಯ ತಮ್ಮನಾಗಿದ್ದು, ದಿನಾಂಕ: 30-11-2021 ರಂದು ಬೆಳಿಗ್ಗೆ 08-00 ಗಂಟೆಯ ಸುಮಾರಿಗೆ ಪಿರ್ಯಾದಿಯು ತನ್ನ ಮಗನಾದ ಮಹ್ಮದ್ ಆರಾನಾ ಈತನಿಗೆ ಟಿಫನ್ ಮಾಡಿಸುವ ಸಲುವಾಗಿ ದಾಂಡೇಲಿಯ ಕೆ.ಸಿ ಸರ್ಕಲ್ ಹತ್ತಿರ ಇರುವ ಪಂಜುರ್ಲಿ ಹೋಟೆಲಿಗೆ ಹೋಗುತ್ತಾ ಇರುವಾಗ ಪಂಜುರ್ಲಿ ಹೋಟೆಲಿನ ಮುಂದೆ ನಮೂದಿತ ಆರೋಪಿತನು ಏಕಾಏಕಿ ಪಿರ್ಯಾದಿಯ ಹತ್ತಿರ ಬಂದು ‘ಕ್ಯಾ ಭೇ, ತೂ ಪೊಲೀಸ್ ಸ್ಟೇಷನ್ ಕೋ ಜಾಕೆ ಕಂಪ್ಲೇಂಟ್ ದೇತಾ ಕ್ಯಾಬೆ, ಬೋಸಡಿಕೆ’ ಅಂತಾ ಅವಾಚ್ಯವಾಗಿ ಬೈಯ್ದವನೇ ಕೈಯಿಂದ ಪಿರ್ಯಾದಿಯ ಮುಖಕ್ಕೆ ಹಾಗೂ ಎದೆಗೆ ಹೊಡೆದಾಗ ಪಿರ್ಯಾದಿಯ ಮಗನಾದ ಮಹಮ್ಮದ್ ಆರಾನಾ ಈತನು ಅಳ ತೊಡಗಿದ್ದು, ಆಗ ಪಿರ್ಯಾದಿಯು ತನ್ನ ಮಗನಿಗೆ ಸಮಾಧಾನ ಮಾಡಲು ಹೋಗುತ್ತಿರುವಾಗ ಆರೋಪಿತನು ಅಲ್ಲಿಯೇ ಬಿದ್ದಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ಪಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದಲ್ಲದೇ, ಆರೋಪಿತನು ಹೋಗುವಾಗ ಪಿರ್ಯಾದಿಯನ್ನು ಉದ್ದೇಶಿಸಿ ‘ತು ಆಜ್ ಬಚಗಯಾ ತುಜೆ ಮೈ ನಹಿ ಚೋಡತಾ ಮಾರದುಂಗಾ’ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಇಸ್ಮಾಯಿಲ್ ತಂದೆ ಅಬ್ದುಲ್ ಸಾಬ್ ದೊಡ್ಮನಿ, ಪ್ರಾಯ-35 ವರ್ಷ, ವೃತ್ತಿ-ಗೌಂಡಿ ಕೆಲಸ, ಸಾ|| ಗಾಂಧಿನಗರ, ತಾ: ದಾಂಡೇಲಿ ರವರು ದಿನಾಂಕ: 30-11-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 158/2021, ಕಲಂ: 341, 323, 324, 504, 506 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಮತಿ ದೀಪಾ ಕೋಂ. ಮುರಳೀಧರ ನಾಯ್ಕ, 2]. ಮುರಳೀಧರ ತಂದೆ ನಾಗಪ್ಪ ನಾಯ್ಕ, ಸಾ|| (ಇಬ್ಬರು) ಬೃಂದಾವನ ಲೇಔಟ್, ತಾ: ಮುಂಡಗೋಡ. ದಿನಾಂಕ: 28-11-2021 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಪಿರ್ಯಾದಿ ಹಾಗೂ ಅವಳ ಗಂಡನಾದ ಅನಿಲಕುಮಾರ ರವರು ಮುಂಡಗೋಡಿನ ಶಿರಸಿ ರಸ್ತೆಯಲ್ಲಿರುವ ಅವರ ನಂದಿನಿ ಮಿಲ್ಕ್ ಪಾರ್ಲರ್ ನಲ್ಲಿದ್ದಾಗ ಆರೋಪಿ 1 ನೇಯವಳೊಂದಿಗೆ ಅಲ್ಲಿಗೆ ಬಂದ ಆರೋಪಿ 2 ನೇಯವನು ಪಿರ್ಯಾದಿ ಹಾಗೂ ಅವಳ ಗಂಡನನ್ನು ಉದ್ದೇಶಿಸಿ ಅವಾಚ್ಯವಾಗಿ ಬೈಯ್ದು ‘ಇವರಿಗೆ ಸುಮ್ಮನೆ ಜೀವಂತ ಬಿಡುವುದು ಬೇಡ’ ಅಂತಾ ಕೂಗಾಡುತ್ತಿದ್ದಾಗ, ಆರೋಪಿ 2 ನೇಯವನು ಪಿರ್ಯಾದಿ ಹಾಗೂ ಅವಳ ಗಂಡನಿಗೆ ಅವಾಚ್ಯವಾಗಿ ಬೈಯ್ಯುತ್ತಾ ‘ನನ್ನ ಹತ್ತಿರ ಚಾಕು ಇದೆ. ಧೈರ್ಯ ಇದ್ದರೆ ಹೊರಗೆ ಬನ್ನಿ. ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ’ ಅಂತಾ ಹೇಳಿ ಜೋರಾಗಿ ಕೂಗಾಡಿ, ‘ನಾಳೆ ನಿಮ್ಮನ್ನು ನೋಡಿಕೊಳ್ಳುತ್ತೇನೆ’ ಅಂತಾ ಹೇಳಿ ಹೋದವರು, ದಿನಾಂಕ: 30-11-2021 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ಪಿರ್ಯಾದಿಯ ಮನೆಯ ಹತ್ತಿರ ಹೋಗಿ ಪಿರ್ಯಾದಿಯನ್ನು ಉದ್ದೇಶಿಸಿ ರಂಡೆ, ಸೂಳೆ ಅಂತಾ ಅವಾಚ್ಯವಾಗಿ ಬೈಯ್ಯುತ್ತಾ ಒಮ್ಮೆಲೇ ಪಿರ್ಯಾದಿಯನ್ನು ಅಡ್ಡಗಟ್ಟಿ ‘ಜೀವ ಸಹಿತ ಬಿಡುವುದಿಲ್ಲ’ ಅಂತಾ ಹೇಳಿ, ಕಾಲಿನಿಂದ ಒದ್ದು, ನೆಲಕ್ಕೆ ಕೆಡವಿ, ಕೈಯಿಂದ ಹಾಗೂ ನೀರಿನ ಪೈಪಿನಿಂದ ಪಿರ್ಯಾದಿಗೆ ಹೊಡೆದ ಬಗ್ಗೆ ಪಿರ್ಯಾದಿ ಶ್ರೀಮತಿ ಕುಸುಮಾ ಕೋಂ. ಅನಿಲಕುಮಾರ ರಾಠೋಡ್, ಸಾ|| ತೆಗ್ಗಿನಕೊಪ್ಪ, ತಾ: ಮುಂಡಗೋಡ ರವರು ದಿನಾಂಕ: 30-11-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 159/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ಅನಿತಾ ತಂದೆ ನಾಗಪ್ಪಾ ತಾಂಬೆ, ಪ್ರಾಯ-21 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಕರಗಿನಕೊಪ್ಪಾ, ತಾ: ಮುಂಡಗೋಡ. ಪಿರ್ಯಾದಿಯವರ ಮೊಮ್ಮಗಳಾದ ಇವಳು ದಿನಾಂಕ: 29-11-2021 ರಂದು 10-00 ಗಂಟೆಯ ಸುಮಾರಿಗೆ ತನ್ನ ಮದುವೆಯ ಲಗ್ನ ಪತ್ರಿಕೆಯನ್ನು ಹಂಚಲು ತಡಸಿಗೆ ಹೋಗಿ ಬರುವುದಾಗಿ ಮನೆಯಿಂದ ಹೋದವಳು, ಮರಳಿ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾದವಳಿಗೆ ಮುಂಡಗೋಡ, ತಡಸ, ಕೆಂದಲಗೇರಿ ಕಡೆಗೆ ಹಾಗೂ ಬೇರೆ ಬೇರೆ ಊರುಗಳಿಗೆ ಹೋಗಿ ಪಿರ್ಯಾದಿಯವರು ವಿಚಾರಿಸಿದರಲ್ಲಿ ಅವಳು ಪತ್ತೆಯಾಗಿರುವುದಿಲ್ಲ. ಅವಳಿಗೆ ಈವರೆಗೂ ಹುಡಕಾಡಿ ಪತ್ತೆಯಾಗದೇ ಇದ್ದುದರಿಂದ ಕಾಣೆಯಾದವಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ರೇಣುಕಾ ಗಂಡ ನಾಗಪ್ಪಾ ಹುನಗುಂದ, ಪ್ರಾಯ-60 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕರಗಿನಕೊಪ್ಪಾ, ತಾ: ಮುಂಡಗೋಡ ರವರು ದಿನಾಂಕ: 30-11-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 160/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ಶಿಲ್ಪಾ ತಂದೆ ಭರಮಪ್ಪಾ ಧೂಪದ, ಪ್ರಾಯ-22 ವರ್ಷ, ವೃತ್ತಿ-ವಿದ್ಯಾರ್ಥಿನಿ, ಸಾ|| ಹುನಗುಂದ ಗ್ರಾಮ, ತಾ: ಮುಂಡಗೋಡ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 30-11-2021 ರಂದು 14-00 ಗಂಟೆಯ ಸುಮಾರಿಗೆ ಮನೆಯ ಹಿತ್ತಲಿನಲ್ಲಿ ಹೋದವಳು, ಪರತ್ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾದವಳಿಗೆ ಸುತ್ತಮುತ್ತಲ ಊರುಗಳಲ್ಲಿ ಹಾಗೂ ಮುಂಡಗೋಡದಲ್ಲಿ ಅಹುಡುಕಾಡಿ ವಿಚಾರಿಸಿದರಲ್ಲಿ ಅವಳು ಪತ್ತೆಯಾಗಿರುವುದಿಲ್ಲ. ಇವಳಿಗೆ ಇದುವರೆಗೂ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇದ್ದುದ್ದರಿಂದ ಕಾಣೆಯಾದವಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಭರಮಪ್ಪಾ ತಂದೆ ಯಲ್ಲಪ್ಪಾ ಧೂಪದ, ಪ್ರಾಯ-53 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹುನಗುಂದ ಗ್ರಾಮ, ತಾ: ಮುಂಡಗೋಡ ರವರು ದಿನಾಂಕ: 30-11-2021 ರಂದು 22-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಹಳಿಯಾಳ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 184/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ಪ್ರಿಯಾಂಕಾ ತಂದೆ ಕಲ್ಲಪ್ಪ ಚವತಗುಂಡಿ, ಪ್ರಾಯ-19 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ಅಂತ್ರೋಳ್ಳಿ, ತಾ: ಹಳಿಯಾಳ. ಪಿರ್ಯಾದಿಯವರ ಮಗಳಾದ ಇವಳು ದಿನಾಂಕ: 29-11-2021 ರಂದು ಮಧ್ಯಾಹ್ನ 03-30 ಗಂಟೆಯಿಂದ 04-30 ಗಂಟೆಯ ನಡುವಿನ ಅವಧಿಯಲ್ಲಿ ಹಳಿಯಾಳ ತಾಲೂಕಿನ ಅಂತ್ರೋಳ್ಳಿ ಗ್ರಾಮದ ತನ್ನ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಸಂಬಂಧಿಕರ ಮನೆಗೂ ಹೋಗದೇ, ವಾಪಸ್ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇರುವುದರಿಂದ ಸದ್ರಿ ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ದ್ಯಾಮವ್ವ ಕೋಂ. ಕಲ್ಲಪ್ಪ ಚವತಗುಂಡಿ, ಪ್ರಾಯ-46 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಂತ್ರೋಳ್ಳಿ, ತಾ: ಹಳಿಯಾಳ ರವರು ದಿನಾಂಕ: 30-11-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 116/2021, ಕಲಂ: 323, 326, 504, 506 ನೇದ್ದರ ವಿವರ...... ನಮೂದಿತ ಆರೋಪಿತ ಪ್ರದೀಪ ತಂದೆ ಗುರುಮೂರ್ತಿ ಗೌಡ, ಪ್ರಾಯ-28 ವರ್ಷ, ಸಾ|| ಚಿಕ್ಕಬೆಂಗಳೆ, ಪೋ: ಗುಡ್ನಾಪುರ, ತಾ: ಶಿರಸಿ. ಈತನು ತನ್ನ ಅಜ್ಜ ಬಂಗಾರ್ಯ ತಂದೆ ಹುಲಿಯಾ ಗೌಡ, ಪ್ರಾಯ-90 ವರ್ಷ, ಸಾ|| ಚಿಕ್ಕಬೆಂಗಳೆ, ಪೋ: ಗುಡ್ನಾಪುರ ತಾ: ಶಿರಸಿ ಇವರೊಂದಿಗೆ ವಾಸವಾಗಿದ್ದು, ಮನೆಯಲ್ಲಿ ಯಾವುದೇ ಕೆಲಸ ಮಾಡದೇ ಸ್ನೇಹಿತರೊಂದಿಗೆ ಶೋಕಿ ಮಾಡುತ್ತಾ ತಿರುಗಾಡುವುದು, ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡಿ ಮನೆ ಹೊಲಸು ಮಾಡುವುದು, ತನ್ನ ಅಜ್ಜನಿಗೆ ಸರಿಯಾಗಿ ನೋಡಿಕೊಳ್ಳದೇ ಅವನಿಂದಲೇ ಹಣ ತೆಗೆದುಕೊಂಡು ಖರ್ಚು ಮಾಡುತ್ತಾ ಬಂದವನಿಗೆ, ಅಜ್ಜ ಬಂಗಾರ್ಯ ಇವರು ಬುದ್ಧಿವಾದ ಹೇಳಿದ್ದನ್ನೇ ಸಿಟ್ಟು ಮಾಡಿಕೊಂಡು ದಿನಾಂಕ: 29-11-2021 ರಂದು 19-30 ಗಂಟೆಗೆ ಅಜ್ಜ ಬಂಗಾರ್ಯ ಇವರಿಗೆ ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈಯ್ದು ಜೀವದ ಬೆದರಿಕೆ ಹಾಕಿದ್ದಲ್ಲದೇ, ಬಡಿಗೆಯಿಂದ ಮುಖಕ್ಕೆ ಹೊಡೆದು, ಎಡಭಾಗದ ವಸಡು ಸ್ಥಾನ ಪಲ್ಲಟವಾಗಿ ಹಲ್ಲು ಮುರಿದು ತೀವೃ ಸ್ವರೂಪದ ರಕ್ತದ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಅಣ್ಣಪ್ಪ ತಂದೆ ರಾಮಾ ಗೌಡ, ಪ್ರಾಯ-34 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಮನೆ ನಂ: 158, ಚಿಕ್ಕಬೆಂಗಳೆ, ಪೋ: ಗುಡ್ನಾಪುರ, ತಾ: ಶಿರಸಿ ರವರು ದಿನಾಂಕ: 30-11-2021 ರಂದು 12-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

Daily District U.D Report

Date:- 30-11-2021

at 00:00 hrs to 24:00 hrs

 

ಭಟ್ಕಳ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 08/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಮೆಹಬೂಬ್ ಅಲಿ ತಂದೆ ಅಬ್ದುಲ್ ಖಾದಿರ್, ಪ್ರಾಯ-38 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಆಜಾದ್ ನಗರ, 4 ನೇ ಕ್ರಾಸ್, ಇಮಾಮ್ ಶಫಿ ಪಳ್ಳಿ ಹತ್ತಿರ, ತಾ: ಭಟ್ಕಳ. ಪಿರ್ಯಾದಿಯ ತಮ್ಮನಾದ ಈತನು ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು, ದಿನಾಲೂ ಸರಾಯಿ ಕುಡಿದು ತನ್ನ ಹೆಂಡತಿಯೊಂದಿಗೆ ಗಲಾಟೆ ಮಾಡಿಕೊಳ್ಳುತ್ತಿದ್ದನು. ಇದರಿಂದ ಅವನ ಹೆಂಡತಿ ಬೇಸತ್ತು ತನ್ನ ತವರು ಮನೆಗೆ ಹೋಗಿದ್ದರಿಂದ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ: 30-11-2021 ರಂದು 15-30 ಗಂಟೆಯಿಂದ 16-00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಉರುಳು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ. ಇದರ ಹೊರತು ತನ್ನ ತಮ್ಮನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮವಾಗಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಸೀರ್ ಅಹ್ಮದ್ ಶೇಖ್ ತಂದೆ ಅಬ್ದುಲ್ ಖಾದಿರ್, ಪ್ರಾಯ-41 ವರ್ಷ, ವೃತ್ತಿ-ಮೇಸ್ತ್ರಿ ಕೆಲಸ, ಸಾ|| ಆಜಾದ್ ನಗರ, 4 ನೇ ಕ್ರಾಸ್, ಇಮಾಮ್ ಶಫಿ ಪಳ್ಳಿ ಹತ್ತಿರ, ತಾ: ಭಟ್ಕಳ ರವರು ದಿನಾಂಕ: 30-11-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 22/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಉಮೇಶ ತಂದೆ ನಾರಾಯಣ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಗ್ಯಾರೇಜ್ ಕೆಲಸ, ಸಾ|| ಚಳ್ಳಾಸ್ರಾರ ಮನೆ, ಚಿತ್ರಾಪುರ, ಶಿರಾಲಿ, ತಾ: ಭಟ್ಕಳ. ಈತನು ಕಳೆದ 15 ದಿನಗಳಿಂದ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 29-11-2021 ರಂದು 08-00 ಗಂಟೆಯಿಂದ 21-30 ಗಂಟೆಯ ನಡುವಿನ ಅವಧಿಯಲ್ಲಿ ಚಿತ್ರಾಪುರದ ಬಂಡಿಕಾಶಿ ಬೆಟ್ಟದಲ್ಲಿ ಚಾರು ಮರದ ಟೊಂಗೆಗೆ ಹಳದಿ ಬಣ್ಣದ ಪ್ಲಾಸ್ಟಿಕ್ ಹಗ್ಗ ಕಟ್ಟಿ ಅದೇ ಹಗ್ಗವನ್ನು ಉರುಳು ಮಾಡಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಇದರ ಹೊರತು ಅವನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀ ಕೃಷ್ಣ ತಂದೆ ದುರ್ಗಪ್ಪ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚಳ್ಳಾಸ್ರಾರ ಮನೆ, ಚಿತ್ರಾಪುರ, ಶಿರಾಲಿ, ತಾ: ಭಟ್ಕಳ ರವರು ದಿನಾಂಕ: 30-11-2021 ರಂದು 00-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಯಲ್ಲಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 39/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿಯು ಸುಮಾರು 55 ವರ್ಷ ಪ್ರಾಯದ ಅಪರಿಚಿತ ಗಂಡಸ್ಸಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ಮಾನಸಿಕ ಅಸ್ವಸ್ಥನಾಗಿದ್ದು, ಯಾವುದೋ ಊರಿನಿಂದ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಪಕ್ಕದ ಬಳಗಾರ ಕ್ರಾಸಿನ ಆರತಿಬೈಲ್ ಬಸ್ ತಂಗುದಾಣದ ಹತ್ತಿರ ಬಂದು ಯಾವುದೋ ಕಾಯಿಲೆಯಿಂದ ಬಳಲುತ್ತಾ ಬಿದ್ದವನಿಗೆ ಚಿಕಿತ್ಸೆಗಾಗಿ ದಿನಾಂಕ: 12-11-2021 ರಂದು ಯಲ್ಲಾಪುರ ಪೊಲೀಸ್ ಠಾಣಾ ಸಿಬ್ಬಂದಿಯವರು ಯಲ್ಲಾಪುರದ ತಾಲೂಕಾ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿದರೂ ಸಹ  ಗುಣಮುಖನಾಗದಿರುವುದರಿಂದ ಮೆಂಟಲ್ ಹೆಲ್ತ್ ಎಕ್ಟ್ ಅಡಿಯಲ್ಲಿ ಕ್ರಮ ಜರುಗಿಸಲು ಕೋರಿ ಆರೋಗ್ಯ ಇಲಾಖೆಯ ಸಿಬ್ಬಂದಿಯವರ ಸಹಕಾರದೊಂದಿಗೆ  ಮಾನ್ಯ ಸಿ.ಜೆ.ಎಮ್ ನ್ಯಾಯಾಲಯ, ಕಾರವಾರ ರವರ ಬಳಿ ಹಾಜರು ಪಡಿಸಿ, ಅವರ ಆದೇಶದಂತೆ ದಿನಾಂಕ: 17-11-2021 ರಂದು ಮಾನಸಿಕ ಆರೋಗ್ಯ ಕೆಂದ್ರ, ಧಾರವಾಡಕ್ಕೆ ಚಿಕಿತ್ಸೆಗಾಗಿ ತೆಗೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ಅಲ್ಲಿಯ ಮಾನಸಿಕ ತಜ್ಞರು ಕಿಮ್ಸ್ ಆಸ್ಪತ್ರೆ, ಹುಬ್ಬಳ್ಳಿಗೆ ಸೂಚಿಸಿದಂತೆ ಅದೇ ದಿನ ಕಿಮ್ಸ್ ಆಸ್ಪತ್ರೆ, ಹುಬ್ಬಳ್ಳಿಗೆ ಒಯ್ದು ಚಿಕಿತ್ಸೆಗೆ ದಾಖಲಿಸಿದ್ದು, ಸದರಿಯವನು ಅಂದಿನಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವನು, ಚಿಕಿತ್ಸೆ ಫಲಿಸದೇ ದಿನಾಂಕ: 30-11-2021 ರಂದು ಬೆಳಿಗ್ಗೆ 07-00 ಗಂಟೆಗೆ ಮೃತಪಟ್ಟಿರುತ್ತಾನೆ.ಕೀ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಬೇಕು ಎಂಬ ಬಗ್ಗೆ ಪಿರ್ಯಾದಿ ಶ್ರೀ ಕುಮಾರ ತಂದೆ ಈರಯ್ಯಾ ಗದ್ದನಕೇರಿಮಠ, ಪ್ರಾಯ-38 ವರ್ಷ, ವೃತ್ತಿ-ಪೊಲೀಸ್ ಕಾನಸ್ಟೇಬಲ್ (ಬಕಲ್ ನಂ: 1843), ಸಾ|| ಯಲ್ಲಾಪುರ ಪೊಲೀಸ್ ಠಾಣೆ ರವರು ದಿನಾಂಕ: 30-11-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

 

Last Updated: 01-12-2021 04:52 PM Updated By: SP KARWAR


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Uttara Kannada District Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080