ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 30-10-2021

at 00:00 hrs to 24:00 hrs

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 23/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಅಮಿತ ತಂದೆ ರೋಹಿದಾಸ ತಾರೀಕರ, ಪ್ರಾಯ-36 ವರ್ಷ, ವೃತ್ತಿ-ಚಾಲಕ, ಸಾ|| ಜೋಶಿವಾಡ, ನಂದನಗದ್ದಾ, ಕಾರವಾರ (ಟಾಟಾ ಕ್ಯಾಬ್ (ಮೊಬೈಲ್) ವಾಹನ ನಂ: ಕೆ.ಎ-16/ಎ-4615) ನೇದರ ಚಾಲಕ). ದಿನಾಂಕ: 30-10-2021 ರಂದು ಬೆಳಿಗ್ಗೆ 10-20 ಗಂಟೆಯಿಂದ 10-25 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯು ತನ್ನ ಕಾರ್ ನಂ: ಜಿ.ಎ-03/ವೈ-5050 ನೇದನ್ನು ಕೋಡಿಭಾಗದಿಂದ ಟೋಲನಾಕಾ ಕಡೆಗೆ ಹೋಗುವ ರಸ್ತೆಯಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಟಾಟಾ ಕ್ಯಾಬ್ (ಮೊಬೈಲ್) ವಾಹನ ನಂ: ಕೆ.ಎ-16/ಎ-4615 ನೇದರ ಆರೋಪಿ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ಶಿವಾಜಿವಾಡದಲ್ಲಿರುವ ನಾಗೇಶ ವೀರಾ ನಾಯ್ಕ ರವರ ಮನೆ ಹತ್ತಿರ ತನ್ನ ಟಾಟಾ ಕ್ಯಾಬ್ (ಮೊಬೈಲ್) ವಾಹನದ ಮುಂದಿನಿಂದ ಹೋಗುತ್ತಿದ್ದ ಪಿರ್ಯಾದಿಯವರ ಕಾರಿಗೆ ತನ್ನ ಟಾಟಾ ಕ್ಯಾಬ್ (ಮೊಬೈಲ್) ವಾಹನದ ಮುಂದಿನ ಭಾಗದಿಂದ ಪಿರ್ಯಾದಿಯ ಕಾರಿನ ಹಿಂದಿನ ಬಲಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಜಖಂ ಪಡಿಸಿದ ಬಗ್ಗೆ ಪಿರ್ಯಾದಿ ಡಾ|| ಕೀರ್ತಿ ತಂದೆ ನಾಗೇಶ ನಾಯ್ಕ, ಪ್ರಾಯ-41 ವರ್ಷ, ವೃತ್ತಿ-ವೈದ್ಯರು, ಸಾ|| ಶಿವಾಜಿವಾಡ, ನಂದನಗದ್ದಾ, ಕಾರವಾರ ರವರು ದಿನಾಂಕ: 30-10-2021 ರಂದು 11-50 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಂಚಾರ ಪೊಲೀಸ್ ಠಾಣೆ ಕಾರವಾರ

ಅಪರಾಧ ಸಂಖ್ಯೆಃ 24/2021, ಕಲಂ: 279, 337 ಐಪಿಸಿ ಹಾಗೂ ಕಲಂ: 177 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತ ಮಹಾಬಲೇಶ್ವರ ತಂದೆ ಸೋಮ ತಳೇಕರ, ಪ್ರಾಯ-70 ವರ್ಷ, ವೃತ್ತಿ-ನಿವೃತ್ತ ನೌಕರ, ಸಾ|| ತೆಲಂಗ ರೋಡ್, ನಂದನಗದ್ದಾ, ಕಾರವಾರ (ಮೋಟಾರ್ ಸ್ಕೂಟರ್ ನಂ: ಕೆ.ಎ-30/ಯು-4582 ನೇದರ ಸವಾರ). ದಿನಾಂಕ: 30-10-2021 ರಂದು ರಾತ್ರಿ 19-05 ಗಂಟೆಯಿಂದ 19-15 ಗಂಟೆಯ ಅವಧಿಯಲ್ಲಿ ಪಿರ್ಯಾದಿಯು ತನ್ನ ಕಾರ್ ನಂ: ಜಿ.ಎ-01/ಇ-4988 ನೇದನ್ನು ಪಣಜಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಕಾರವಾರ ಕಡೆಯಿಂದ ಸದಾಶಿವಗಡ ಕಡೆಗೆ ಹೋಗುವ ಏಕಮುಖ ರಸ್ತೆಯಲ್ಲಿ ರತ್ನಾಸ್ ಹಾಲಿಡೇಸ್ ಹೋಟೆಲಿನ ಎದುರುಗಡೆಯಿಂದ ತನ್ನ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಮೋಟಾರ್ ಸ್ಕೂಟರ್ ನಂ: ಕೆ.ಎ-30/ಯು-4582 ನೇದರ ಆರೋಪಿ ಸವಾರನು ತನ್ನ ಮೋಟಾರ್ ಸ್ಕೂಟರನ್ನು ಕಾರವಾರ ಕಡೆಯಿಂದ ಸದಾಶಿವಗಡ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ರಸ್ತೆಯ ಏಕಮುಖ ಸಂಚಾರ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ತನ್ನ ಮೋಟಾರ್ ಸ್ಕೂಟರನ್ನು ಚಲಾಯಿಸಿಕೊಂಡು ಪಿರ್ಯಾದಿಯ ಕಾರಿನ ಮುಂದಿನ ಬಲಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದಲ್ಲದೇ, ತನಗೆ ಹಣೆಯ ಮೇಲೆ ರಕ್ತಗಾಯ, ಬಲಗಾಲಿನ ಮಂಡಿಯ ಕೆಳಗೆ ರಕ್ತಗಾಯ ಹಾಗೂ ಬಲಗಾಲಿನ ಬೆರಳುಗಳಿಗೆ ರಕ್ತಗಾಯ, ಎಡಗೈ ಮುಷ್ಠಿಯ ಹತ್ತಿರ ರಕ್ತಗಾಯ ಹಾಗೂ ಎಡ ಹುಬ್ಬಿನ ಕೆಳಗೆ ತರಚಿದ ಗಾಯನೋವುಗಳನ್ನು ಪಡಿಸಿಕೊಂಡ ಬಗ್ಗೆ ಪಿರ್ಯಾದಿ ಶ್ರೀ ವಿಶಾಲ ತಂದೆ ದಯಾನಂದ ಲೋಲೇಕರ, ಪ್ರಾಯ-39 ವರ್ಷ, ವೃತ್ತಿ-ಸರ್ಕಾರಿ ನೌಕರ, ಸಾ|| ಕೃಷ್ಣ ದೇವಸ್ಥಾನದ ಹತ್ತಿರ, ಆಗಸ್ ಲೋಲಿಯಂ, ಕಾಣಕೋಣ, ಸೌಥ್ ಗೋವಾ ರವರು ದಿನಾಂಕ: 30-10-2021 ರಂದು 20-10 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕಾರವಾರ ಶಹರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 87/2021, ಕಲಂ: 323, 504 ಸಹಿತ 34 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ದರ್ಶನ ಮಾಜಾಳಿಕರ, 2]. ಆಕಾಶ ಕಿಂದಳಕರ್, 3]. ಲಿಯೋನ ಫರ್ನಾಂಡೀಸ್, ಸಾ|| (ಎಲ್ಲರೂ) ಕಾರವಾರ. ಈ ನಮೂದಿತ ಆರೋಪಿತರಲ್ಲಿ ಆರೋಪಿ 1 ನೇಯವನು ದಿನಾಂಕ: 29-10-2021 ರಂದು ರಾತ್ರಿ 19-15 ಘಂಟೆಗೆ ತನ್ನ ಕಾರ್ ನಂ: ಜಿ.ಎ-08/ಇ-1557 ನೇದನ್ನು ಅಂಬೇಡ್ಕರ್ ಸರ್ಕಲ್ ಹತ್ತಿರ ರಸ್ತೆಯ ಎಡಬದಿಯಲ್ಲಿ ಇಟ್ಟಿದ್ದನ್ನು ಏಕಾಏಕಿ ರಸ್ತೆಗೆ ತಂದು ಪಿರ್ಯಾದಿ ಹೋಗುತ್ತಿದ್ದ ಸ್ಕೂಟರ್ ನಂ: ಕೆ.ಎ-30/ಎಸ್-2218 ನೇದಕ್ಕೆ ಡಿಕ್ಕಿಯಾಗುವಂತೆ ಮಾಡಿದ್ದು, ಈ ಕುರಿತು ಪಿರ್ಯಾದಿಯು ಆರೋಪಿ 1 ನೇಯವನಿಗೆ ‘ಯಾಕೆ ಒಮ್ಮೇಲೆ ಗಾಡಿ ಬಲಬದಿಗೆ ತೆಗೆದುಕೊಂಡೆ?’ ಅಂತಾ ಕೇಳಿದ್ದಕ್ಕೆ, ಆರೋಪಿ 1 ನೇಯವನು ಪಿರ್ಯಾದಿಗೆ ‘ಬೋಳಿ ಮಗನೇ’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಯಿಂದ ಹೊಡೆಯುತ್ತಿರುವಾಗ ಆರೋಪಿ 1 ನೇಯವನ ಕಾರಿನಲ್ಲಿ ಇದ್ದ ಆರೋಪಿ 2 ಮತ್ತು 3 ನೇಯವರು ಸೇರಿ ಪಿರ್ಯಾದಿಗೆ ಹಾಗೂ ಪಿರ್ಯಾದಿಯ ತಮ್ಮ ಸುದರ್ಶನನಿಗೆ ಕೈಯಿಂದ ಹೊಡೆದು, ಪಿರ್ಯಾದಿ ತಮ್ಮನ ಎಡಗೈಗೆ ಹಾಗೂ ಎಡಗಾಲಿಗೆ ಮತ್ತು ಸೊಂಟದ ಹತ್ತಿರ ಹೊಡೆದು ದುಃಖಾಪತ್ ಪಡಿಸಿರುತ್ತಾರೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ನಾಗರಾಜ ತಂದೆ ಪ್ರಕಾಶ ನಾಯ್ಕ, ಪ್ರಾಯ-42 ವರ್ಷ, ವೃತ್ತಿ-ಸರಕಾರಿ ನೌಕರ, ಸಾ|| ನಂದನಗದ್ದಾ, ಕಾರವಾರ ರವರು ದಿನಾಂಕ: 30-10-2021 ರಂದು 17-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 77/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಮಹೇಶ ತಂದೆ ಗಂಗಾಧರ ಹಳ್ಳೇರ, ಸಾ|| ಎಣ್ಣೆಮಡಿ, ಹಿರೇಗುತ್ತಿ, ತಾ: ಕುಮಟಾ (ಟಿಪ್ಪರ್ ವಾಹನ ನಂ: ಜಿ.ಎ 03 ಟಿ-8414 ನೇದರ ಚಾಲಕ). ಈತನು ದಿನಾಂಕ: 30-10-2021 ರಂದು ಬೆಳಿಗ್ಗೆ 08-55 ಗಂಟೆಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕೆ ಗ್ರಾಮದ ಖುಷಿ ಫಾರಂ ಹೌಸ್ ಹತ್ತಿರ ಗೋಕರ್ಣದಿಂದ ಓಂ ಬೀಚಿಗೆ ಹೋಗುವ ಪಂಚಾಯತ್ ರಸ್ತೆಯ ಮೇಲೆ ತನ್ನ ಟಿಪ್ಪರ್ ವಾಹನ ನಂ: ಜಿ.ಎ-03/ಟಿ-8414 ನೇದನ್ನು ಗೋಕರ್ಣ ಕಡೆಯಿಂದ ಓಂ ಬೀಚ್ ಕಡೆಗೆ ಹೋಗಲು ಜೋರಾಗಿ ಚಲಾಯಿಸಿಕೊಂಡು ಬಂದವನು, ತನ್ನ ಮುಂದೆ ರಸ್ತೆಯಲ್ಲಿ ಹೋಗುತ್ತಿದ್ದ ಮೋಟಾರ್ ಸೈಕಲಿಗೆ ಓವರಟೇಕ್ ಮಾಡಲು ಹೋಗಿ ರಸ್ತೆಯ ಬಲಕ್ಕೆ ಬಂದು ಓಂ ಬೀಚ್ ಕಡೆಯಿಂದ ಗೋಕರ್ಣ ಕಡೆಗೆ ತನ್ನ ಸೈಡಿನಲ್ಲಿ ಬರುತ್ತಿದ್ದ ಪ್ಯಾಸೆಂಜರ್ ರಿಕ್ಷಾ ನಂ: ಕೆ.ಎ-47/ಎ-1031 ನೇದಕ್ಕೆ ಮುಂದುಗಡೆಯ ಬಲಭಾಗದಲ್ಲಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಪ್ಯಾಸೆಂಜರ್ ರಿಕ್ಷಾ ಚಾಲಕನಾದ ಲೋಕೇಶ ತಂದೆ ವೆಂಕಟೇಶ ಗೌಡ, ಪ್ರಾಯ-24 ವರ್ಷ, ಸಾ|| ಬಿದ್ರಗೇರಿ, ಗೋಕರ್ಣ, ತಾ: ಕುಮಟಾ ಈತನಿಗೆ ಎಡಗಣ್ಣಿನ ಹುಬ್ಬಿಯ ಹತ್ತಿರ, ಮೂಗಿಗೆ ಹಾಗೂ ಗಲ್ಲಕ್ಕೆ ಮತ್ತು ಬಲಗಾಲಿಗೆ ಗಾಯನೋವು ಪಡಿಸಿದ ಬಗ್ಗೆ ಪಿರ್ಯಾದಿ ಶ್ರೀ ಕಿರಣ ತಂದೆ ಲಕ್ಷು ಗೌಡ, ಪ್ರಾಯ-24 ವರ್ಷ, ವೃತ್ತಿ-ಚಾಲಕ, ಸಾ|| ಹಿಲ್ಲೂರ, ತಾ: ಅಂಕೋಲಾ ರವರು ದಿನಾಂಕ: 30-10-2021 ರಂದು 10-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿ.  

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 140/2021, ಕಲಂ: 454, 457, 380 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 29-10-2021 ರಂದು ರಾತ್ರಿ 21-00 ಗಂಟೆಯಿಂದ ದಿನಾಂಕ: 30-10-2021 ರಂದು ಮುಂಜಾನೆ 07-00 ಗಂಟೆಯ ನಡುವಿನ ಅವಧಿಯಲ್ಲಿ ಸಾಲಗಾಂವ ಗ್ರಾಮದ ಪಿರ್ಯಾದಿಯ ಮನೆಯ ಮುಂದಿನ ಬಾಗಿಲಿಗೆ ಹಾಕಿದ ಬೀಗವನ್ನು ಮೀಟಿ ತೆಗೆದು ಮನೆಯ ಒಳ ಹೊಕ್ಕಿ ಮನೆಯಲ್ಲಿಯ ಕೋಣೆಯ ತಿಜೋರಿಯಲ್ಲಿಟ್ಟಿದ್ದ ಒಟ್ಟೂ 16,000/- ರೂಪಾಯಿ ಬೆಲೆಯ 04 ಗ್ರಾಮ ತೂಕದ ಬಂಗಾರದ ಬಟನ್ಸ್-01 ಜೊತೆ ಹಾಗೂ 18,000/- ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀಮತಿ ದಾಕ್ಷಾಯಣಿ ಕೋಂ. ವಾಸುದೇವ ಲಕ್ಮಾಪುರ, ಪ್ರಾಯ-34 ವರ್ಷ, ವೃತ್ತಿ-ಮನೆ ಕೆಲಸ, ಸಾ|| ಸಾಲಗಾಂವ, ತಾ: ಮುಂಡಗೋಡ ರವರು ದಿನಾಂಕ: 30-10-2021 ರಂದು 12-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 138/2021, ಕಲಂ: ಗಂಡಸು ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಗಂಡಸು ಶ್ರೀ ಪ್ರಶಾಂತ ತಂದೆ ಗಣಪತಿ ಗೌಡ, ಪ್ರಾಯ-25 ವರ್ಷ, ವೃತ್ತಿ-ವೆಲ್ಡಿಂಗ್ ಕೆಲಸ, ಸಾ|| ಹೊನ್ನೆಕೊಪ್ಪ, ಹುತ್ಗಾರ ಗ್ರಾಮ, ಪೋ: ಹುಕ್ಕಳಿ, ತಾ: ಸಿದ್ದಾಪುರ. ಪಿರ್ಯಾದಿಯ ಮಗನಾದ ಈತನು ಪಕ್ಕದ ಊರಾದ ಮಳ್ಳಿಬೈಲ್ ಜಡ್ಡಿಯ ಶ್ರೀಪಾದ ಶೇಟ್ ಇವರ ಮಗಳನ್ನು ಕಳೆದ ಎರಡೂ ವರ್ಷಗಳಿಂದ ಪ್ರೀತಿಸುತ್ತಿದ್ದನು, ಇವರ ಪ್ರೀತಿಗೆ ತನ್ನದಾಗಲಿ, ತನ್ನ ಮನೆಯವರದಾಗಲಿ ವಿರೋಧವಿರಲಿಲ್ಲ. ಆದರೆ ಹುಡುಗಿಯ ಮನೆಯವರಿಗೆ ಇಷ್ಟವಿರಲಿಲ್ಲ. ಹೀಗಿರುತ್ತಾ ಪಿರ್ಯಾದಿಯ ಮಗನು ಪ್ರೀತಿಸುತ್ತಿದ್ದ ಹುಡುಗಿಗೆ ಬೇರೆ ಹುಡುಗನೊಂದಿಗೆ ಮದುವೆ ನಿಶ್ಚಯವಾದ ವಿಷಯ ಗೊತ್ತಾಗಿ ಪಿರ್ಯಾದಿಯ ಮಗನು ದಿನಾಂಕ: 29-10-2021 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿಯ ಮನೆಯಿಂದ ಆತನ ಹಳೆಯ ಹೀರೋ ಹೋಂಡಾ ಸಿಡಿ-100 ಮೋಟಾರ್ ಸೈಕಲ್ ನ್ನು ತೆಗೆದುಕೊಂಡು ಹೋದವನು, ಈವರೆಗೆ ಮನೆಗೆ ವಾಪಸ್ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸದ್ರಿ ಕಾನೆಯಾದ ತನ್ನ ಮಗನನ್ನು ಹುಡುಕಿ ಕೊಡಬೇಕೆಂದು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಸುಬ್ಬಾ ಗೌಡ, ಪ್ರಾಯ-55 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹೊನ್ನೆಕೊಪ್ಪ, ಹುತ್ಗಾರ ಗ್ರಾಮ, ಪೋ: ಹುಕ್ಕಳಿ, ತಾ: ಸಿದ್ದಾಪುರ ರವರು ದಿನಾಂಕ: 30-10-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 30-10-2021

at 00:00 hrs to 24:00 hrs

 

ಕಾರವಾರ ಶಹರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 34/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ರಾಮಚಂದ್ರ ತಂದೆ ಗೋವಿಂದ ಪೂಜಾರಿ, ಪ್ರಾಯ-55 ವರ್ಷ, ಸಾ|| ರೂಮ್ ನಂ: 7ಸಿ 504, 5 ನೇ ಮಹಡಿ, ಸಾಯಿನ್ ಬಾಂದ್ರಾ ಲಿಂಕ್ ರಸ್ತೆ, ಮಹಾರಾಷ್ಟ್ರ ನೇಚರ್ ಪಾರ್ಕ್, ಮುಂಬೈ, ಮಹಾರಾಷ್ಟ್ರ. ಪಿರ್ಯಾದಿ ಅಣ್ಣನಾದ ಈತನು ಪಾರ್ಶ್ವವಾಯು ಹಾಗೂ ಲಿವರ್ ಖಾಯಿಲೆಯಿಂದ ಬಳಲುತ್ತಿದ್ದವನು, ಚಿಕಿತ್ಸೆಗಾಗಿ ದಿನಾಂಕ: 14-10-2021 ರಂದು ಕಾರವಾರಕ್ಕೆ ಹೋದವನು, ಅರ್ಥ್ ಮೆಡಿಕಲ್ ಆಸ್ಪತ್ರೆಯಲ್ಲಿ ಹಾಗೂ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮುಂಬೈ ಬರಲು ದಿನಾಂಕ: 28-10-2021 ರಂದು ರಾತ್ರಿ 09-00 ಘಂಟೆಯಿಂದ ದಿನಾಂಕ: 29-10-2021 ರಂದು ಬೆಳಿಗ್ಗೆ 08-30 ಘಂಟೆಯ ನಡುವಿನ ಅವಧಿಯಲ್ಲಿ ಕಾರವಾರದ ಬಸ್ ಸ್ಟ್ಯಾಂಡ್ ಕಡೆಗೆ ಬರುತ್ತಿರುವಾಗ ಅವನಿಗಿದ್ದ ಯಾವುದೋ ಖಾಯಿಲೆಯಿಂದ ಹಳದೀಪುರ್ ಪೆಟ್ರೋಲ್ ಪಂಪ್ ಹತ್ತಿರ ಆಕಸ್ಮಾತ್ ಆಗಿ ಮೃತಪಟ್ಟ ಬಗ್ಗೆ ಕಂಡು ಬರುತ್ತದೆ. ಇದರ ಹೊರತು ತನ್ನ ಅಣ್ಣನ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಶೇಖರ ತಂದೆ ಗೋವಿಂದ ಪೂಜಾರಿ, ಪ್ರಾಯ-53 ವರ್ಷ, ವೃತ್ತಿ-ಕ್ಯಾಂಟೀನ್ ಕೆಲಸ, ಸಾ|| ರೂಮ್ ನಂ: 7ಸಿ 504, 5 ನೇ ಮಹಡಿ, ಸಾಯಿನ್ ಬಾಂದ್ರಾ ಲಿಂಕ್ ರಸ್ತೆ, ಮಹಾರಾಷ್ಟ್ರ ನೇಚರ್ ಪಾರ್ಕ್, ಮುಂಬೈ, ಮಹಾರಾಷ್ಟ್ರ ರವರು ದಿನಾಂಕ: 30-10-2021 ರಂದು 11-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 16/2021, ಕಲಂ: 174(3)(iv) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ಸುರೇಖಾ ಕೋಂ. ತಿರುಪತಿ ಜವಳಕರ, ಪ್ರಾಯ-40 ವರ್ಷ, ವೃತ್ತಿ-ಗೃಹಿಣಿ, ಸಾ|| ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಹತ್ತಿರ, ತಾ: ಶಿರಸಿ. ಪಿರ್ಯಾದಿಯ ಮಗಳಾದ ಇವಳು ಕಳೆದ 2008 ರಲ್ಲಿ ಶಿರಸಿಯ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಹತ್ತಿರದ ನಿವಾಸಿ ತಿರುಪತಿ ಈತನೊಂದಿಗೆ ವಿವಾಹವಾಗಿದ್ದು, ಮೃತಳು ತನ್ನ ಗಂಡ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದವಳು ಇರುತ್ತಾಳೆ. ಮೃತಳು ದಿನಾಂಕ: 24-10-2021 ರಂದು 15-00 ರಂದು ತನ್ನ ವಾಸದ ಮನೆಯನ್ನು ಸ್ವಚ್ಛಗೊಳಿಸುತ್ತಿರುವಾಗ ಆಕಸ್ಮಿಕವಾಗಿ ಮನೆಯಲ್ಲಿದ್ದ 2 ಲೀಟರಿನ ಬಾಟಲಿಯಲ್ಲಿದ್ದ 1 ಲೀಟರ್ ನಷ್ಟು ಸೀಮೆಎಣ್ಣೆ ಇದ್ದ ಬಾಟಲಿ ಮೈಮೆಲೆ ಬಿದ್ದಿದ್ದು, ಅದರ ಮುಚ್ಚಳ ಸರಿಯಾಗಿಲ್ಲದ ಕಾರಣ ಸೀಮೆಎಣ್ಣೆಯನ್ನು ಮೃತಳು ಧರಿಸಿದ್ದ ಚೂಡಿದಾರದ ಮೇಲೆ ಬೀಳಿಸಿಕೊಂಡವಳು, ತನ್ನ ಬಟ್ಟೆಯನ್ನು ಬದಲಾಯಿಸದೇ ಮಧ್ಯಾಹ್ನ ಮಕ್ಕಳಿಗೆ ಊಟಕ್ಕೆ ಲೇಟಾಗುತ್ತದೆ ಅಂತಾ ಗಡಿಬಿಡಿಯಲ್ಲಿ ಮಕ್ಕಳಿಗೆ ಬೇಗನೆ ಅಡಿಗೆ ಮಾಡಿ ಉಟಕ್ಕೆ ಬಡಿಸಿ, ನಂತರ ಸ್ನಾನ ಮಾಡಿದರಾಯ್ತು ಅಂತಾ ಅಡಿಗೆ ಮಾಡುವ ಕುರಿತು ಮನೆಯಲ್ಲಿದ್ದ ಗ್ಯಾಸ್ ಸ್ಟೋವ್ ಅನ್ನು ಹಚ್ಚಲು ಬೆಂಕಿ ಕಡ್ಡಿ ಗೀರಿದಾಗ ಅದರ ಬೆಂಕಿ ಆಕಸ್ಮಿಕವಾಗಿ ಮೈಮೇಲಿನ ಬಟ್ಟೆಗೆ ತಗುಲಿ ಬೆಂಕಿ ಹತ್ತಿಕೊಂಡಿದ್ದು, ಭಯದಿಂದ ಕೂಗಿಕೊಂಡಾಗ ಮೃತಳ ಮಕ್ಕಳು ಬೆಂಕಿ ಆರಿಸಲು ಮನೆಯಲ್ಲಿದ್ದ ನೀರನ್ನು ಮೆಮೇಲೆ ಎರಚಿದ್ದು, ಮೃತಳ ಗಂಡನು ಬೆಡ್ ರೂಮಿನಿಂದ ಬೆಡ್ ಶೀಟ್ ತಂದು ಮೈಗೆ ಸುತ್ತಿ ಬೆಂಕಿ ಆರಿಸಿ, ಒಂದು ಆಟೋ ರಿಕ್ಷಾದ ಮೇಲೆ ಶಿರಸಿಯ ಪವಾರ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಯ ವೈದ್ಯಾಧಿಕಾರಿಗಳ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ: 30-10-2021 ರಂದು ಬೆಳಿಗ್ಗೆ 09-30 ಗಂಟೆಗೆ ಮೃತಪಟ್ಟಿರುತ್ತಾಳೆ. ಪಿರ್ಯಾದಿಯು ದಿನಾಂಕ: 24-10-2021 ರಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಗಳ ಆರೈಕೆಯಲ್ಲಿದ್ದು, ಮಗಳಿಂದ ಮತ್ತು ತನ್ನ ಅಳಿಯ ಮೊಮ್ಮಕ್ಕಳಿಂದ ವಿಷಯ ಕೇಳಿ ತಿಳಿದುಕೊಂಡಿದ್ದು ಇರುತ್ತದೆ. ಇದರ ಹೊರತಾಗಿ ತನ್ನ ಮಗಳ ಮರಣದಲ್ಲಿ ತನಗೆ ಸಂಶಯವಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಎನ್. ಶಕುಂತಲಾ ಕೋಂ. ವಸಂತರಾವ್, ಪ್ರಾಯ-61 ವರ್ಷ, ವೃತ್ತಿ-ಗೃಹಿಣಿ, ಸಾ|| ಕುಡಿತಿನಿ, ತಾ: ಬಳ್ಳಾರಿ ರವರು ದಿನಾಂಕ: 30-10-2021 ರಂದು 20-20 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

ಇತ್ತೀಚಿನ ನವೀಕರಣ​ : 01-11-2021 06:33 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080