ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 30-09-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 146/2021, ಕಲಂ: 8(c), 20(b)(ii)(B) ಎನ್.ಡಿ.ಪಿ.ಎಸ್ ಎಕ್ಟ್-1985 ನೇದ್ದರ ವಿವರ...... ನಮೂದಿತ ಆರೋಪಿತರು 1]. ನಿತೀನ್ ತಂದೆ ದತ್ತಾ ನಾಯ್ಕ, ಪ್ರಾಯ-23 ವರ್ಷ, ವೃತ್ತಿ-ರಿಕ್ಷಾ ಚಾಲಕ, ಸಾ|| ಸಕಲಬೇಣ, ಅವರ್ಸಾ, ತಾ: ಅಂಕೋಲಾ, 2]. ತುಳಸಿದಾಸ ತಂದೆ ದತ್ತಾ ನಾಯ್ಕ, ಪ್ರಾಯ-20 ವರ್ಷ, ವೃತ್ತಿ-ರಿಕ್ಷಾ ಚಾಲಕ, ಸಾ|| ಸಕಲಬೇಣ, ಅವರ್ಸಾ, ತಾ: ಅಂಕೋಲಾ. ಈ ನಮೂದಿತ ಆರೋಪಿತರು ತಮ್ಮ ತಾಬಾ ಯಾವುದೇ ಪಾಸ್ ಮತ್ತು ಪರ್ಮಿಟ್ ಇಲ್ಲದೇ ತಮ್ಮ ಅಕ್ರಮ ಲಾಭಕ್ಕಾಗಿ ಗಾಂಜಾ ಮಾದಕ ಪದಾರ್ಥ ವಸ್ತುವನ್ನು ಮಾರಾಟ ಮಾಡುತ್ತಿದ್ದವರು, ದಿನಾಂಕ: 30-09-2021 ರಂದು 15-45 ಗಂಟೆಗೆ ಅಂಕೋಲಾ ತಾಲೂಕಿನ ಹಟ್ಟಿಕೇರಿಯ ಬೆಲೇಕೇರಿ ಕ್ರಾಸಿನಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಸ್ತೆಯಲ್ಲಿ ಆರೋಪಿ 1 ನೇಯವನು ಸುಮಾರು 6,000/- ರೂಪಾಯಿ ಮೌಲ್ಯದ 268 ಗ್ರಾಂ. ಗಾಂಜಾ ಮಾದಕ ವಸ್ತು ಮತ್ತು ಅದನ್ನು ಉಪಯೋಗಿಸುವ ಇತರೆ ವಸ್ತುಗಳಾದ ಕಟ್ಟಿಗೆಯ ಬಾಕ್ಸ್-01, ಹಸಿರು ಬಣ್ಣದ ಚಿಲುಮೆ-01, ಸಣ್ಣ ಮತ್ತು ದೊಡ್ಡ ಬಿಳಿ ಪೇಪರ್ ಇರುವ ಕಪ್ಪು ಬಣ್ಣದ ಓ.ಸಿ.ಬಿ ಪ್ಯಾಕೆಟ್ ಗಳು-06, ಕತ್ತರಿ-01 ಹಾಗೂ ಚಿಕ್ಕ ಚಿಕ್ಕ ಪಾಲಿಥಿನ್ ಕೊಟ್ಟೆಗಳು-03 ನೇದವುಗಳನ್ನು ಆಟೋ ರಿಕ್ಷಾ ನಂ: ಕೆ.ಎ-30/9752 ನೇದರ ಮೇಲಾಗಿ ಸಾಗಾಟ ಮಾಡಿಕೊಂಡು ಹೋಗುತ್ತಿದ್ದ ವೇಳೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಪ್ರೇಮನಗೌಡ ಪಾಟೀಲ್, ಪಿ.ಎಸ್.ಐ (ತನಿಖೆ), ಅಂಕೋಲಾ ಪೊಲೀಸ್ ಠಾಣೆ ರವರು ದಿನಾಂಕ: 30-09-2021 ರಂದು 18-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 71/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಕಾಶೀಂಸಾಬ್ @ ಮುನ್ನಾ ತಂದೆ ಅಬ್ದುಲಗಫೂರ್ ಮುಲ್ಲಾ, ಪ್ರಾಯ-50 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ದರ್ಗಾ ಕಂಪೌಂಡ್, ತದಡಿ ಗ್ರಾಮ, ತಾ: ಕುಮಟಾ. ಈತನು ದಿನಾಂಕ: 30-09-2021 ರಂದು ಬೆಳಿಗ್ಗೆ 11-45 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ತದಡಿ ಗ್ರಾಮದ ದರ್ಗಾ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ತನ್ನ ಲಾಭಕ್ಕೋಸ್ಕರ ಬರ-ಹೋಗುವ ಸಾರ್ವಜನಿಕರನ್ನು ಕರೆಯುತ್ತಾ, ತಮ್ಮ ತಮ್ಮ ಅದೃಷ್ಟದ ಸಂಖ್ಯೆಗಳ ಮೇಲೆ ಹಣ ಪಂಥ ಕಟ್ಟಿ, ಅದೃಷ್ಟ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಅವರ ಮನವೊಲಿಸಿ, ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದು, ಅವರು ಹೇಳಿದ ಅಂಕೆ-ಸಂಖ್ಯೆಯನ್ನು ತನ್ನ ಹತ್ತಿರ ಇರುವ ಚೀಟಿಯಲ್ಲಿ ಬರೆದುಕೊಂಡು ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿದ್ದಾಗ, ನಗದು ಹಣ 3,550/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ ಎಸ್. ನಾಯ್ಕ, ಪಿ.ಎಸ್.ಐ (ಕಾ&ಸು) ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 30-09-2021 ರಂದು 19-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 253/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಸುಬ್ರಹ್ಮಣ್ಯ ತಂದೆ ಶಿವಾ ಆಚಾರಿ, ಪ್ರಾಯ-42 ವರ್ಷ, ವೃತ್ತಿ-ಮರಗೆಲಸ, ಸಾ|| ಆಚಾರಿ ಕೇರಿ, ಹಡಿನಬಾಳ, ತಾ: ಹೊನ್ನಾವರ, 2]. ರೋಹನ್ ತಂದೆ ಕೋಸ್ತಾ ಫರ್ನಾಂಡಿಸ್, ಪ್ರಾಯ-39 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಚರ್ಚಕೇರಿ, ಗುಂಡಬಾಳ, ತಾ: ಹೊನ್ನಾವರ, 3]. ಸತೀಶ ತಂದೆ ರಾಮಾ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕೆಂಚಗಾರ, ತಾ: ಹೊನ್ನಾವರ, 4]. ಸುಭ್ರಾಯ ತಂದೆ ಮಂಜು ನಾಯ್ಕ, ಪ್ರಾಯ-56 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಡಗೇರಿ, ಖರ್ವಾ, ತಾ: ಹೊನ್ನಾವರ, 5]. ಶ್ರೀಧರ ತಂದೆ ಶಿವಾ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಡಕಲ್, ಜನಕಡಕಲ್, ತಾ: ಹೊನ್ನಾವರ, 6]. ಮಂಜುನಾಥ ತಂದೆ ಮಾಸ್ತಿ ನಾಯ್ಕ, ಪ್ರಾಯ-64 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಕೆಂಚಗಾರ, ತಾ: ಹೊನ್ನಾವರ, 7]. ಅಣ್ಣಪ್ಪ ತಂದೆ ಗಣಪಯ್ಯ ಗೌಡ, ಸಾ|| ಗುಂಡಬಾಳ, ಹೊನ್ನಾವರ, 8]. ರಾಘವೇಂದ್ರ ತಂದೆ ಲಕ್ಷ್ಮಣ ನಾಯ್ಕ, ಸಾ|| ಕೆಂಚಗಾರ, ತಾ: ಹೊನ್ನಾವರ, 9]. ವಿನಾಯಕ ಆಚಾರಿ, ಸಾ|| ಹಡಿನಬಾಳ, ಹೊನ್ನಾವರ, 10]. ನಾಗರಾಜ ನಾಯ್ಕ, ಸಾ|| ಕೋಟೆಬೈಲ್, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ದಿನಾಂಕ: 30-9-2021 ರಂದು 00.00 ಗಂಟೆಗೆ ಹೊನ್ನಾವರ ತಾಲೂಕಿನ ಕೋಟೆಬೈಲ್ ಕೆಂಚಾಳ ಬಸ್ ನಿಲ್ದಾಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಸೇರಿಕೊಂಡು ತಮ್ಮ ತಮ್ಮ ಅನ್ಯಾಯದ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಅಂದರ್-ಬಾಹರ್ ಜೂಗಾರಾಟವನ್ನು ಆಡುತ್ತಿದ್ದಾಗ ದಾಳಿಯ ಕಾಲ ಆರೋಪಿ 1 ರಿಂದ 6 ನೇಯವರು ನಗದು ಹಣ 15,200/- ರೂಪಾಯಿ, ಇಸ್ಪೀಟ್ ಎಲೆ-52, ಅರ್ಧ ಉರಿದ ಮೇಣದ ಬತ್ತಿ-04 ಹಾಗೂ ಪ್ಲಾಸ್ಟಿಕ್ ಮಂಡ-01 ನೇದವುಗಳೊಂದಿಗೆ ಸೆರೆ ಸಿಕ್ಕಿದ್ದು ಹಾಗೂ ಆರೋಪಿ 7 ರಿಂದ 10 ನೇಯವರು ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಶಶಿಕುಮಾರ ಸಿ. ಆರ್, ಪಿ.ಎಸ್.ಐ (ಕಾ&ಸು, ಸಂಚಾರ), ಹೊನ್ನಾವರ ಪೊಲೀಸ್ ಠಾಣೆ ರವರು ದಿನಾಂಕ: 30-09-2021 ರಂದು 02-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 254/2021, ಕಲಂ: ಮಹಿಳೆ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಮಹಿಳೆ ಕುಮಾರಿ: ಚೈತ್ರಾ ತಂದೆ ಸುಬ್ರಾಯ ಮರಾಠಿ, ಪ್ರಾಯ-20 ವರ್ಷ, ವೃತ್ತಿ-ಮನೆ ಕೆಲಸ, ಸಾ|| ತೊಳಸಾಣಿ, ಪೋ: ಅರೇಅಂಗಡಿ, ತಾ: ಹೊನ್ನಾವರ. ಪಿರ್ಯಾದುದಾರರ ಮಗಳಾದ ಇವಳು ದಿನಾಂಕ: 29-09-2021 ರಂದು 23-30 ಗಂಟೆಯಿಂದ ದಿನಾಂಕ: 30-09-2021 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ರಾತ್ರಿ ಹೊನ್ನಾವರ ತಾಲೂಕಿನ ತೊಳಸಾಣಿ ಗ್ರಾಮದ ತಮ್ಮ ಮನೆಯಲ್ಲಿ ಮಲಗಿದ್ದವಳು, ಮನೆಯಿಂದ ಹೊರಗಡೆ ಹೋದವಳು ಈವರೆಗೂ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡುವಂತೆ ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಸುಬ್ರಾಯ ತಂದೆ ಯಲ್ಲು ಮರಾಠಿ, ಪ್ರಾಯ-45 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ತೊಳಸಾಣಿ, ಪೋ: ಅರೇಅಂಗಡಿ, ತಾ: ಹೊನ್ನಾವರ ರವರು ದಿನಾಂಕ: 30-09-2021 ರಂದು 20-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಯಲ್ಲಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 159/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನಿಹಾಲ್ ಅಹಮ್ಮದ್ ಅಸಗರ್ ಮುಲ್ಲಾ, ಪ್ರಾಯ-29 ವರ್ಷ, ವೃತ್ತಿ-ಚಾಲಕ, ಸಾ|| ಆಶ್ರಯನಗರ, ನಿಪ್ಪಾಣಿ, ತಾ: ಚಿಕ್ಕೋಡಿ, ಜಿ: ಬೆಳಗಾವಿ (ಲಾರಿ ನಂ: ಕೆ.ಎ-23/ಎ-8511 ನೇದರ ಚಾಲಕ). ಈತನು ದಿನಾಂಕ: 30-09-2021 ರಂದು 04-00 ಗಂಟೆಗೆ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್ ಹತ್ತಿರ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರಲ್ಲಿ ತನ್ನ ಬಾಬ್ತು ಟೈಲ್ಸ್ ಬಾಕ್ಸ್ ಗಳನ್ನು ಲೋಡ್ ಮಾಡಿದ ಲಾರಿ ನಂ: ಕೆ.ಎ-23/ಎ-8511 ನೇದನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಅತೀವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದವನು, ಮುಂದಿನಿಂದ ಬಂದ ಲಾರಿಯನ್ನು ತಪ್ಪಿಸಲು ಲಾರಿಯನ್ನು ಬದಿಗೆ ತೆಗೆದುಕೊಂಡಾಗ ಲಾರಿಯ ಮೇಲಿನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿ ಕೆಡವಿ ಅಪಘಾತ ಪಡಿಸಿ, ಲಾರಿಗೆ ಹಾಗೂ ಲಾರಿಯಲ್ಲಿ ಲೋಡ್ ಇದ್ದ ಟೈಲ್ಸ್ ಬಾಕ್ಸ್ ಗಳನ್ನು ಜಖಂಗೊಳಿಸಿದ್ದಲ್ಲದೇ, ಲಾರಿಯಲ್ಲಿದ್ದ ಪಿರ್ಯಾದಿಯವರಿಗೆ ಎದೆಗೆ ಒಳನೋವಾಗುವಂತೆ ಮಾಡಿದ್ದಲ್ಲದೇ, ಆರೋಪಿ ಚಾಲಕನು ತನಗೂ ಸಹ ಗಾಯನೋವು ಪಡಿಸಿಕೊಂಡಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಶ್ರೀ ಬಾಬು ತಂದೆ ಝಾಕೀರ್ ಶೇಖ್, ಪ್ರಾಯ-22 ವರ್ಷ, ವೃತ್ತಿ-ಕ್ಲೀನರ್ ಕೆಲಸ, ಸಾ|| ಉಮೇಶ ನಗರ ಪ್ಲಾಟ್, ತಾ: ಹುಕ್ಕೇರಿ, ಜಿ: ಬೆಳಗಾವಿ ರವರು ದಿನಾಂಕ: 30-09-2021 ರಂದು 16-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಸಿದ್ದಾಪುರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 126/2021, ಕಲಂ: 457, 380, 511, 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ದಿನಾಂಕ: 29-09-2021 ರಂದು ಮಧ್ಯಾಹ್ನ 02-30 ಗಂಟೆಯಿಂದ ದಿನಾಂಕ: 30-09-2021 ರಂದು ನಸುಕಿನ ಜಾವ 02-45 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಸಿದ್ದಾಪುರ ತಾಲೂಕಿನ ಶಿರಳಗಿಯಲ್ಲಿರುವ ಪಿರ್ಯಾದಿಯವರಿಗೆ ಸಂಬಂಧಪಟ್ಟ ಬೀಗ ಹಾಕಿದ ಮನೆಯ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ತೆಗೆದು ಒಳಗಡೆ ಕಪಾಟಿನಲ್ಲಿದ್ದ ವಸ್ತುಗಳನ್ನು ತಡಕಾಡಿ ಕಳ್ಳತನಕ್ಕೆ ಪ್ರಯತ್ನಿಸಿ, ಯಾವುದೇ ಬೆಲೆಬಾಳುವ ವಸ್ತುಗಳು ಸಿಗದೇ ಇದ್ದುದ್ದರಿಂದ ಮನೆಯ ಹೊರಗಡೆ ನಿಲ್ಲಿಸಿಟ್ಟಿದ್ದ ಪಿರ್ಯಾದಿಗೆ ಸಂಬಂಧಪಟ್ಟ ಅ||ಕಿ|| 2,00,000/- ರೂಪಾಯಿ ಮೌಲ್ಯದ ಕೆಂಪು ಬಣ್ಣದ ಟೊಯೋಟಾ ಇಟಿಯೋಸ್ ಕಾರ್ ನಂ: ಕೆ.ಎ-05/ಎಂ.ಕೆ-6205 (ಚಾಸಿಸ್ ನಂ: MBZB2ZBT2000310940911 ಹಾಗೂ ಇಂಜಿನ ನಂ: 2NRV040874) ನೇದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಪುರಶೋತ್ತಮ ತಂದೆ ಮಂಜಾ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಸಮೃದ್ದಿ ಸೊಸೈಟಿಯಲ್ಲಿ ಪೀಲ್ಡ್ ವರ್ಕ್ ಕೆಲಸ, ಸಾ|| ಶಿರಳಗಿ, ತಾ: ಸಿದ್ದಾಪುರ, ಹಾಲಿ ಸಾ|| ವಂದಾನೆ, ತಾ: ಸಿದ್ಧಾಪುರ ರವರು ದಿನಾಂಕ: 30-09-2021 ರಂದು 10-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 30-09-2021

at 00:00 hrs to 24:00 hrs

 

ಹೊನ್ನಾವರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 36/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ವ್ಯಕ್ತಿ ಶ್ರೀ ಕಿರಣ ತಂದೆ ಬಾಲಚಂದ್ರ ನಾಯ್ಕ, ಪ್ರಾಯ-30 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಕಾಸೋಳ್ಳಿ, ಕುದಬೈಲ್, ಹಳದೀಪುರ, ತಾ: ಹೊನ್ನಾವರ. ಪಿರ್ಯಾದಿಯ ಅಣ್ಣನಾದ ಈತನು ದಿನಾಂಕ: 30-09-2021 ರಂದು ಮಧ್ಯಾಹ್ನ 13-00 ಗಂಟೆಯ ಸುಮಾರಿಗೆ ಹೊನ್ನಾವರ ತಾಲೂಕಿನ ಹಳದೀಪುರದ ಜೋಗ್ನಿ ಕಟ್ಟೆಯ ಶ್ರೀಮತಿ ಲಕ್ಮೀ ಕೋಂ. ತಿಮ್ಮಪ್ಪ ನಾಯ್ಕ ಇವರ ಮನೆಯ ಮುಂದಿನ ಅಂಗಳದಲ್ಲಿರುವ ಅಡಿಕೆ ಮರಕ್ಕೆ ಹಬ್ಬಿರುವ ವೀಳ್ಯದೆಲೆ ಕೊಯ್ಯುವ ಕೆಲಸಕ್ಕೆಂದು ಹೋಗಿದ್ದವನು, ಅಲ್ಯೂಮಿನಿಯಮ್ ಏಣಿಯನ್ನು ಅಡಿಕೆ ಮರಕ್ಕೆ ತಾಗಿಸಿ ಇಟ್ಟುಕೊಂಡು, ಏಣಿಯನ್ನು ಹಗ್ಗದಿಂದ ಮರಕ್ಕೆ ಕಟ್ಟಿ, ಏಣಿ ಮೇಲೆ ನಿಂತುಕೊಂಡು ವೀಳ್ಯದೆಲೆ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಏಣಿಗೆ ಕಟ್ಟಿರುವ ಹಗ್ಗ ತುಂಡಾಗಿ ಸಮಯ 16-30 ಗಂಟೆಗೆ ಕಾಲು ಜಾರಿ ಅಡಿಕೆ ಮರದಿಂದ ಕೆಳಗೆ ಬೀಳುವಾಗ ಮರದ ಹತ್ತಿರ ಹಾಯ್ದು ಹೋದ ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಶಾಕ್ ಸಹ ಹೊಡೆದು, ಕೆಳಗೆ ಬಿದ್ದು ಗಾಯಗೊಂಡವನಿಗೆ ಚಿಕಿತ್ಸೆಗೆಂದು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ, ಈಗಾಗಲೇ ಮೃತಪಟ್ಟ ಕುರಿತು ತಿಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಶ್ರವಣ ತಂದೆ ಬಾಲಚಂದ್ರ ನಾಯ್ಕ, ಪ್ರಾಯ-25 ವರ್ಷ. ವೃತ್ತಿ-ಕಂಪ್ಯೂಟರ್ ಆಪರೇಟರ್, ಸಾ|| ಕಾಸೋಳ್ಳಿ, ಕುದಬೈಲ್, ಹಳದಿಪುರ, ತಾ: ಹೊನ್ನಾವರ ರವರು ದಿನಾಂಕ: 30-09-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಸಿದ್ದಾಪುರ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 32/2021, ಕಲಂ: 174(3)(i) ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತಳಾದ ಶ್ರೀಮತಿ ರಂಜೀತಾ ಕೋಂ. ಸುದರ್ಶನ ಭಟ್ಟ, ಪ್ರಾಯ-30 ವರ್ಷ, ವೃತ್ತಿ-ಮನೆವಾರ್ತೆ, ಸಾ|| ಘಟ್ಟಿಕೈ, ತಾ: ಸಿದ್ದಾಪುರ. ಸುದ್ದಿದಾರನ ಮಗಳಾದ ಇವಳು ಕಳೆದ 2016 ರಲ್ಲಿ ವಿವಾಹವಾಗಿದ್ದವಳು, ಗಂಡ ಹೆಂಡತಿ ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡು ಇದ್ದವರಿದ್ದು, ದಿನಾಂಕ: 30-09-2021 ರಂದು ಮಧ್ಯಾಹ್ನ 02-00 ಗಂಟೆಯಿಂದ 02-30 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ತೋಟದಲ್ಲಿ ಮಂಗ ಬೆದರಿಸಲು ಹೋದವಳು ತೋಟದ ಬಾವಿಯ ಹತ್ತಿರ ಬಿದ್ದಂತಹ ತೆಂಗಿನ ಕಾಯಿಯೊಂದನ್ನು ತೆಗೆಯಲು ಹೋದಾಗ ಆಕಸ್ಮಿಕವಾಗಿ ಆಯ ತಪ್ಪಿ ನೆಲಸಮ ಇರುವ ಬಾವಿಯ ನೀರಿನಲ್ಲಿ ಬಿದ್ದವಳು, ಈಜಲು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮೃತಳ ಮೃತದೇಹವು ಮಧ್ಯಾಹ್ನ 03-30 ಗಂಟೆಯ ಸುಮಾರಿಗೆ ಬಾವಿಯ ನೀರನ್ನು ಪಂಪ್ ಸೆಟ್ ಮೂಲಕ ಖಾಲಿ ಮಾಡುತ್ತಿರುವಾಗ ಸಿಕ್ಕಿದ್ದು, ಇದರ ಹೊರತು ಮೃತಳ ಸಾವಿನಲ್ಲಿ ಬೇರೇನೂ ಕಾರಣ ಇರುವುದಿಲ್ಲ. ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಿ ಕೊಡಲು ಕೋರಿದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ನರಸಿಂಹ ಹೆಗಡೆ, ಪ್ರಾಯ-71 ವರ್ಷ, ವೃತ್ತಿ-ಕೃಷಿ ಕೆಲಸ, ಸಾ|| ಹೊಸಕೊಪ್ಪ, ಪೋ: ಕೋಡ್ಸರ, ತಾ: ಸಿದ್ದಾಪುರ ರವರು ದಿನಾಂಕ: 30-09-2021 ರಂದು 17-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

ಇತ್ತೀಚಿನ ನವೀಕರಣ​ : 01-10-2021 02:46 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080