ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 31-12-2021

at 00:00 hrs to 24:00 hrs

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 63/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಕಿರಣ ತಂದೆ ಗೋಕುಲದಾಸ ಪಡುವಳಕರ, ಸಾ|| ಭೀಮಕೋಲ, ಹೋಟೆಗಾಳಿ, ಕಾರವಾರ. ಈತನು ದಿನಾಂಕ: 31-12-2021 ರಂದು 15-30 ಗಂಟೆಗೆ ತನ್ನ ತಾಬಾ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಗೋವಾ ರಾಜ್ಯ ತಯಾರಿಕೆಯ LIGHT HORSE Premium blended malt WHISKY-750 ML for sale in goa state only ಅಂತಾ ನಮೂದಿದ್ದ 87 ಸರಾಯಿ ತುಂಬಿದ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಗೂ ಗೋವಾ ರಾಜ್ಯ ತಯಾರಿಕೆಯ GOA 77 Deluxe Cashew Fenny-750 ML ಅಂತಾ ನಮೂದಿದ್ದ 20 ಸರಾಯಿ ತುಂಬಿದ ಪ್ಲಾಸ್ಟಿಕ್ ಬಾಟಲಿಗಳನ್ನು ಹೀಗೆ ಒಟ್ಟು 21,400/- ರೂಪಾಯಿ ಬೆಲೆಬಾಳುವ 107 ಸರಾಯಿ ತುಂಬಿದ ಪ್ಲಾಸ್ಟಿಕ್ ಬಾಟಲಿಗಳನ್ನು 2 ಪಾಲಿಥಿನ್ ಚೀಲದಲ್ಲಿ ಹಾಗೂ ಒಂದು ಬ್ಯಾಗಿನಲ್ಲಿ ಇಟ್ಟುಕೊಂಡು ಗೋವಾ ರಾಜ್ಯದ ಸರಾಯಿಯನ್ನು ತೆಗೆದುಕೊಂಡು ಬಂದು ಮಾರಾಟ/ಸಾಗಾಟ ಮಾಡುವ ಉದ್ದೇಶದಿಂದ ಸದಾಶಿವಗಡ-ಕದ್ರಾ ಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ-34 ರಲ್ಲಿ ಭೀಮಕೋಲಗೆ ಸಂಪರ್ಕ ಕಲ್ಪಿಸುವ ರಸ್ತೆಯಿಂದ ಎಡಕ್ಕೆ ಸುಮಾರು 50 ಮೀಟರ್ ನಷ್ಟು ಒಳಗೆ ಇರುವ ಅರಣ್ಯ ಪ್ರದೇಶದಲ್ಲಿ ತನ್ನ ವಶದಲ್ಲಿಟ್ಟುಕೊಂಡಾಗ ದಾಳಿ ಮಾಡಿದಾಗ ಶೋಧನೆ ಮಾಡುವ ಸಮಯದಲ್ಲಿ ಓಡಿ ಹೋಗಿ ಪರಾರಿಯಾದ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಗೋವಿಂದರಾಜ ದಾಸರಿ, ಪೊಲೀಸ್ ವೃತ್ತ ನಿರಿಕ್ಷಕರು, ಕದ್ರಾ ವೃತ್ತ, ಕದ್ರಾ ರವರು ದಿನಾಂಕ: 31-12-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಚಿತ್ತಾಕುಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 64/2021, ಕಲಂ: 323, 324, 341, 504, 427 ಸಹಿತ 32 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಶ್ರೀಧರ ತಂದೆ ದತ್ತಾರಾಮ ಭಂಡಾರಿ, ಸಾ|| ಆರವ, ಪಂಟಲಭಾಗ, ಕಾರವಾರ, 2]. ಗೋಪಿಚಂದ ರತ್ನಾಕರ ಪಡುವಳುಕರ, ಸಾ|| ಭೀಮಕೋಲ ರಸ್ತೆ, ಹೋಟೆಗಾಳಿ, ಕಾರವಾರ, 3]. ದತ್ತಾರಾಮ ಭಂಡಾರಿ, ಸಾ|| ಆರವ, ಪಂಟಲಭಾಗ, ಕಾರವಾರ, 4]. ಹರಿದಾಸ ಶಿವಾ ಪಡುವಳಕರ್, ಸಾ|| ಆರವ, ಪಂಟಲಭಾಗ, ಕಾರವಾರ. ದಿನಾಂಕ: 31-12-2021 ರಂದು 12-50 ಗಂಟೆಯಿಂದ 01-20 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದುದಾರರು ಮತ್ತು ಆತನ ಮಾವ ದೀಪಕ ಹಾಗೂ ಅತ್ತೆ ಸರಿತಾ ಎಲ್ಲರೂ ಸೇರಿಕೊಂಡು ತಮ್ಮ ಸ್ಕಾರ್ಪಿಯೋ ವಾಹನ ನಂ: ಜಿ.ಎ-03/ವಾಯ್-0433 ನೇದರ ಮೇಲೆ ಪಂಟಭಾಗದಿಂದ ಚೆಂಡಿಯಾಗೆ ಹೋಗುತ್ತಿರುವಾಗ ಕೊಳಗೆಯ ಆರ್ಕ್ ಹತ್ತಿರ ಆರೋಪಿ 1 ನೇಯವನು ತನ್ನ ಮೋಟಾರ್ ಸೈಕಲ್ ಮೇಲೆ ಮೊಬೈಲಿನಲ್ಲಿ ಮಾತನಾಡುತ್ತಾ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ವಾಹನಕ್ಕೆ ತಾಗಿಸಿದಾಗ ಪಿರ್ಯಾದಿಯವರು ‘ಯಾಕೆ ಮೋಟಾರ್ ಸೈಕಲ್ ತಾಗಿಸಿದಿಯಾ?’ ಅಂತಾ ವಿಚಾರಿಸಿದಾಗ ಪಿರ್ಯಾದಿಯವರಿಗೆ ಕೆಟ್ಟದಾಗಿ ಬೈಯ್ದು, ಕೈಯಿಂದ ದೂಡಿ ಎಲ್ಲಿಯು ಹೋಗದಂತೆ ಅಲ್ಲಿಯೇ ನಿಲ್ಲಿಸಿ, ಪಿರ್ಯಾದುದಾರರ ವಾಹನದ ಗ್ಲಾಸನ್ನು ಕಲ್ಲಿನಿಂದ ಒಡೆದು, ನಂತರ ಪಿರ್ಯಾದಿಯು ಎಲ್ಲಿಯು ಹೋಗದಂತೆ ತಡೆದು ನಿಲ್ಲಿಸಿ, ನಂತರ ಪೋನ್ ಮಾಡಿ ತನ್ನ ಸಂಬಂಧಿಕರಾದ ಆರೋಪಿ 2, 3 ಹಾಗೂ 4 ನೇಯವರಿಗೆ ಕರೆಯಿಸಿಕೊಂಡು ನಾಲ್ಕು ಜನ ಆರೋಪಿತರು ಸೇರಿಕೊಂಡು ಪಿರ್ಯಾದುದಾರರಿಗೆ ಹೊಡೆಯುತ್ತಿರುವಾಗ ಸರಿತಾ ಮತ್ತು ದೀಪಕ ರವರು ಬಿಡಿಸಲು ಹೋದಾಗ ಅವರಿಗೆ ಕೈಯಿಂದ ದೂಡಿದ್ದಲ್ಲದೇ, ರಸ್ತೆಯ ಮೇಲಿಂದ ಹೋಗುತ್ತಿದ್ದ ರಿಕ್ಷಾ ಚಾಲಕ ಕಿಶೋರ ಕಲ್ಗುಟ್ಕರ ರವರು ಜಗಳ ಆಡುವುದನ್ನು ನೋಡಿ ಬಿಡಿಸಲು ಬಂದಾಗ ಅವರಿಗೂ ಆರೋಪಿ 2 ನೇಯವನು ಕೈಯಿಂದ ಹೊಡೆದಿದ್ದಲ್ಲದೇ, ಪಿರ್ಯಾದುದಾರರಿಗೆ ರಾಡಿನಿಂದ ಎಡಗೈಯ ಮೇಲೆ ಹೊಡೆದು ಹಾಗೂ ಆರೋಪಿ 4 ನೇಯವನು ಗ್ಲಾಸಿನ ಬಾಟಲಿಯಿಂದ ಪಿರ್ಯಾದಿಯ ಬೆನ್ನಿನ ಭಾಗದಲ್ಲಿ ಹೊಡೆದು, ನಂತರ ಎಲ್ಲರೂ ಸೇರಿಕೊಂಡು ಪಿರ್ಯದುದಾರರಿಗೆ ಹಿಡಿದುಕೊಂಡಾಗ ಆರೋಪಿ 1 ನೇಯವನು ಕಲ್ಲಿನಿಂದ ಪಿರ್ಯಾದಿಗೆ ತಲೆಯ ಮೇಲೆ ಹೊಡೆದು ಗಾಯ ಪಡಿಸಿದ್ದರಿಂದ ನಂತರ, ಅಲ್ಲಿದ್ದವರು ಜಗಳ ಬಿಡಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ರತನ ತಂದೆ ವಿಠ್ಠಲ ಪವಾರ, ಪ್ರಾಯ-31 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಮುಡಗೇರಿ ಪೋಸ್ಟ್, ಆರವ, ಪಂಟಲಭಾಗ, ಕಾರವಾರ ರವರು ದಿನಾಂಕ: 31-12-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 367/2021, ಕಲಂ: 279 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಹನುಮೇಗೌಡ ಎಸ್. ಕೆ. ತಂದೆ ಕುಮಾರ ಎಸ್. ಎಚ್, ಪ್ರಾಯ-24 ವರ್ಷ, ಸಾ|| ಸಿಂಗೋನಳ್ಳಿ, ಹುಲಿಯುರದುರ್ಗ ಹೋಬಳಿ, ಪೋ: ದೊಡ್ಡಮಾವತೂರ, ತಾ: ಕುಣಿಗಲ್, ಜೀ: ತುಮಕೂರು, ಹಾಲಿ ಸಾ|| ದೀಪಿಕಾನಗರ, ಕುಳಾಯಿ, ಮಂಗಳೂರು (ಟ್ಯಾಂಕರ್ ಲಾರಿ ನಂ: ಕೆ.ಎ-04/ಡಿ-8849 ನೇದರ ಚಾಲಕ). ಈತನು ದಿನಾಂಕ: 31-12-2021 ರಂದು ಬೆಳಗ್ಗೆ 06-30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ಹೊನ್ನಾವರ ಕರ್ಕಿ ನಾಕಾ ಹತ್ತಿರ ತನ್ನ ಬಾಬ್ತು ಟ್ಯಾಂಕರ್ ಲಾರಿ ನಂ: ಕೆಎ-04/ಡಿ-8849 ನೇದನ್ನು ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಹೊನ್ನಾವರ ಕರ್ಕಿ ನಾಕಾ ಹತ್ತಿರ ರಸ್ತೆಯನ್ನು ದಾಟುತ್ತಿದ್ದ ಒಂದು ಮೋಟಾರ್ ಸೈಕಲ್ ಸವಾರನಿಗೆ ತಪ್ಪಿಸಲು ಹೋಗಿ ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು, ತನ್ನ ಟ್ಯಾಂಕರ್ ಲಾರಿಯನ್ನು ಪಲ್ಟಿ ಕೆಡವಿ ಅಪಘಾತ ಪಡಿಸಿ, ಟ್ಯಾಂಕರ್ ಲಾರಿಯನ್ನು ಜಖಂ ಪಡಿಸಿದ್ದಲ್ಲದೇ, ತನ್ನ ಟ್ಯಾಂಕರ್ ಲಾರಿಯಲ್ಲಿದ್ದ ಡೀಸೆಲ್ ಸೋರಿಕೆಯಾಗುವಂತೆ ಮಾಡಿದ ಬಗ್ಗೆ ಪಿರ್ಯಾದಿ ಶ್ರೀ ಸುರೇಶ ತಂದೆ ಕಾಳಿಯಣ್ಣನ್, ಪ್ರಾಯ-29 ವರ್ಷ, ವೃತ್ತಿ-ವೆಲಮುರಗನ್ ಟ್ರಾನ್ಸಪೋರ್ಟ್ ಕಂಪನಿಯಲ್ಲಿ ಮ್ಯಾನೇಜರ್, ಸಾ|| ಸೌತ್ ತೊಟ್ಟಂ, ಸರಕಾರ ಉಡುಪ್ಪಂ, ತಾ&ಜಿ: ನಾಮಕ್ಕಲ್, ತಮಿಳನಾಡು, ಹಾಲಿ ಸಾ|| ದೀಪಿಕಾ ನಗರ, ಕುಳಾಯಿ, ಮಂಗಳೂರು ರವರು ದಿನಾಂಕ: 31-12-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಹೊನ್ನಾವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 368/2021, ಕಲಂ: 279, 304(ಎ) ಐಪಿಸಿ ಹಾಗೂ ಕಲಂ: 187 ಎಮ್.ವಿ ಎಕ್ಟ್ ನೇದ್ದರ ವಿವರ...... ನಮೂದಿತ ಆರೋಪಿತರು 1]. ಯಾವುದೋ ಅಪರಿಚಿತ ಕಾರ್ ಚಾಲಕ, 2]. ಯಾವುದೋ ಅಪರಿಚಿತ ವಾಹನದ ಚಾಲಕ. ಆರೋಪಿ ಚಾಲಕರಿಬ್ಬರ ವಾಹನದ ನಂಬರ್ ಹಾಗೂ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ದಿನಾಂಕ: 31-12-2021 ರಂದು ರಾತ್ರಿ ಸುಮಾರು 07-50 ಗಂಟೆಗೆ ಆರೋಪಿ 1 ನೇಯವನು ತನ್ನ ಕಾರನ್ನು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಅತೀವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು, ಹಳದಿಪುರ ಗ್ರಾಮದ ಮಾದಿಕೊಟ್ಟಿಗೆ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರಲ್ಲಿ ರಸ್ತೆಯನ್ನು ದಾಟುತ್ತಿದ್ದ ಪಿರ್ಯಾದಿಯ ತಮ್ಮ ಸಂತೋಷ ತಂದೆ ಕೃಷ್ಣ ಖಾರ್ವಿ, ಪ್ರಾಯ-34 ವರ್ಷ, ವೃತ್ತಿ-ಮೀನುಗಾರಿಕೆ, ಸಾ|| ಹಳದಿಪುರ, ಗುಬ್ಬಾಣಿ, ತಾ: ಹೊನ್ನಾವರ ಇವರಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಚಲಾಯಿಸಿಕೊಂಡು ಹೊನ್ನಾವರ ಕಡೆಗೆ ಹೋಗಿದ್ದು, ಈ ಅಪಘಾತದ ರಭಸಕ್ಕೆ ಸಂತೋಷ ತಂದೆ ಕೃಷ್ಣ ಖಾರ್ವಿ ಇವರು ಡಿವೈಡರ್ ನಿಂದ ಆಚೆ ಹಾರಿ ರಸ್ತೆಯ ಮೇಲೆ ಬಿದ್ದಾಗ, ಅದೇ ವೇಳೆಗೆ ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಹೋಗಲು ಬಂದ ಆರೋಪಿ 2 ನೇಯವನು ಅತೀವೇಗವಾಗಿ ಹಾಗೂ ನಿಷ್ಕಾಳಜಿಯಿಂದ ತನ್ನ ವಾಹನವನ್ನು ಚಲಾಯಿಸಿಕೊಂಡು ಬಂದು ಸಂತೋಷ ತಂದೆ ಕೃಷ್ಣ ಖಾರ್ವಿ ಇವರ ಕಾಲುಗಳ ಮೇಲೆ ಹಾಯಿಸಿ ಗಂಭೀರ ಸ್ವರೂಪದ ಗಾಯನೋವು ಪಡಿಸಿ, ಸ್ಥಳದಲ್ಲಿಯೇ ಮೃತನಾಗಲು ಕಾರಣನಾಗಿದ್ದನಲ್ಲಿದೇ, ಆರೋಪಿ 2 ನೇಯವನು ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಕುಮಟಾ ಕಡೆಗೆ ಚಲಾಯಿಸಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಗಣಪತಿ ತಂದೆ ಕೃಷ್ಣ ಖಾರ್ವಿ, ಪ್ರಾಯ-38 ವರ್ಷ, ವೃತ್ತಿ-ಮೀನುಗಾರಿಕೆ ಕೆಲಸ, ಸಾ|| ಹಳದಿಪುರ, ಗುಬ್ಬಾಣಿ, ತಾ: ಹೊನ್ನಾವರ ರವರು ದಿನಾಂಕ: 31-12-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಮಂಕಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 159/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು 1]. ಈಶ್ವರ ಅರುಣ ನಾಯ್ಕ, ಸಾ|| ದೊಡ್ಡಗುಂದ, ಮಂಕಿ, ತಾ: ಹೊನ್ನಾವರ, 2]. ವಿಕ್ರಮ ಈಶ್ವರ ನಾಯ್ಕ, ಸಾ|| ದೊಡ್ಡಗುಂದ, ಮಂಕಿ, ತಾ: ಹೊನ್ನಾವರ, 3]. ಪ್ರಸಾದ ವೆಂಕಟೇಶ ನಾಯ್ಕ, ಸಾ|| ಬಣಸಾಲೆ, ಮಂಕಿ, ತಾ: ಹೊನ್ನಾವರ. ಈ ನಮೂದಿತ ಆರೋಪಿತರು ಸೇರಿಕೊಂಡು ದಿನಾಂಕ: 20-12-2021 ರಂದು ರಾತ್ರಿ 20-00 ಗಂಟೆಯಿಂದ ದಿನಾಂಕ: 21-12-2021 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯು ಮಂಕಿ ಶಹರದ ರಾಘವೇಂದ್ರ ಮಠದ ಹತ್ತಿರ ಇರುವ ಸಮರ್ಥ ಶ್ರೀ ಡಾಬಾದ ಹತ್ತಿರ ನಿಲ್ಲಿಸಿಟ್ಟ ತನ್ನ ಬಾಬ್ತು ಟಿಪ್ಪರ್ ಲಾರಿ ನಂ: ಕೆ.ಎ-35/9087 ನೇದಕ್ಕೆ ಅಳವಡಿಸಿದ ಸುಮಾರು 4,000/- ರೂಪಾಯಿ ಮೌಲ್ಯದ ಬ್ಯಾಟರಿಯನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಗೋಪಾಲ ತಂದೆ ನಾರಾಯಣ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ರೈತಾಬಿ ಕೆಲಸ, ಸಾ|| ಜನತಾ ಕಾಲೋನಿ, ಮಂಕಿ, ತಾ: ಹೊನ್ನಾವರ ರವರು ದಿನಾಂಕ: 31-12-2021 ರಂದು 13-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುರ್ಡೇಶ್ವರ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 117/2021, ಕಲಂ: 379 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರಾದ ಯಾರೋ ಕಳ್ಳರು ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಪಿರ್ಯಾದುದಾರರು ದಿನಾಂಕ: 28-12-2021 ರಂದು ಬೆಳಿಗ್ಗೆ 07-00 ಗಂಟೆಗೆ ತನ್ನ ಬಾಬ್ತು ಹೀರೋ ಸೂಪರ್ ಸ್ಲ್ಪೆಂಡರ್ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-7797 ನೇದನ್ನು ಮನೆಯಿಂದ ಮುರ್ಡೇಶ್ವರ ಬೀಚಿನಲ್ಲಿದ್ದ ಅಂಗಡಿಗೆ ಸವಾರಿ ಮಾಡಿಕೊಂಡು ಮೀನು ಮಾರ್ಕೆಟ್ ಹತ್ತಿರ ಹ್ಯಾಂಡಲ್ ಲಾಕ್ ಮಾಡÀದೇ ಇಟ್ಟು, ತನ್ನ ಫ್ಯಾನ್ಸಿ ಅಂಗಡಿಗೆ ಹೋಗಿ ರಾತ್ರಿ 10-00 ಗಂಟೆಗೆ ಮನೆಗೆ ಹೋಗಲು ಮೀನು ಮಾರ್ಕೆಟ್ ಹತ್ತಿರ ಬಂದು ತನ್ನ ಮೋಟಾರ್ ಸೈಕಲನ್ನು ನೋಡಿದಾಗ ಅಲ್ಲಿ ಇಲ್ಲವಾಗಿದ್ದು, ಈವರೆಗೆ ಹುಡುಕಾಡಿದರೂ ಸಿಕ್ಕಿದ್ದು ಇರುವುದಿಲ್ಲ. ದಿನಾಂಕ: 28-12-2021 ರಂದು ಬೆಳಿಗ್ಗೆ 07-00 ಗಂಟೆಯಿಂದ ದಿನಾಂಕ: 31-12-2021 ರವರೆಗೆ ಅ||ಕಿ|| 70,000/- ರೂಪಾಯಿ ಮೌಲ್ಯದ ತನ್ನ ಬಾಬ್ತು ಹೀರೋ ಸೂಪರ್ ಸ್ಲ್ಪೆಂಡರ್ ಮೋಟಾರ್ ಸೈಕಲ್ ನಂ: ಕೆ.ಎ-47/ವಿ-7797 ನೇದನ್ನು ನಮೂದಿತ ಆರೋಪಿತರು ಕಳವು ಮಾಡಿಕೊಂಡು ಹೋದ ಬಗ್ಗೆ ಪಿರ್ಯಾದಿ ಶ್ರೀ ಮಹ್ಮದ್ ಸುಫಿಯಾನ್ ಗೌಸ್ ಬಾಬು ತಂದೆ ಮಹ್ಮದ್ ಗೌಸ್ ಬಾಬು, ಪ್ರಾಯ-27 ವರ್ಷ, ವೃತ್ತಿ-ಫ್ಯಾನ್ಸಿ ಅಂಗಡಿ, ಸಾ|| ಮಾವಳ್ಳಿ-1, (ದಾರ್ಜಿಕೇರಿ) ಹಿರೇದೊಮ್ಮಿ, ಮುರ್ಡೇಶ್ವರ, ತಾ: ಭಟ್ಕಳ ರವರು ದಿನಾಂಕ: 31-12-2021 ರಂದು 18-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 160/2021, ಕಲಂ: 78(3) ಕರ್ನಾಟಕ ಪೊಲೀಸ್ (ತಿದ್ದುಪಡಿ ವಿಧೇಯಕ) ಕಾಯ್ದೆ-2021 ನೇದ್ದರ ವಿವರ...... ನಮೂದಿತ ಆರೋಪಿತ ಮಂಜುನಾಥ ತಂದೆ ತಿಮ್ಮಯ್ಯ ನಾಯ್ಕ, ಪ್ರಾಯ-33 ವರ್ಷ, ವೃತ್ತಿ-ವ್ಯಾಪಾರ, ಸಾ|| ಯಲ್ವಡಿಕವೂರ, ಸರ್ಪನಕಟ್ಟಾ, ತಾ: ಭಟ್ಕಳ. ಈತನು ದಿನಾಂಕ: 31-12-2021 ರಂದು 15-30 ಗಂಟೆಯ ಸಮಯಕ್ಕೆ ಸರ್ಪನಕಟ್ಟಾ ಕೋಣಾರ ರಸ್ತೆಯಲ್ಲಿನ ಶ್ರೀದೇವಿ ಹೋಟೆಲ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ತನ್ನ ಲಾಭಕ್ಕೋಸ್ಕರ 01/- ರೂಪಾಯಿಗೆ 70/- ರೂಪಾಯಿ ಕೊಡುವ ಶರತ್ತಿನ ಮೇಲೆ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿಸಿ ಓ.ಸಿ ಜುಗಾರಾಟ ನಡೆಸುತ್ತಿದ್ದಾಗ ಓ.ಸಿ ಚೀಟಿ-01, ಬಾಲ್ ಪೆನ್-01 ಹಾಗೂ ನಗದು ಹಣ 540/- ರೂಪಾಯಿಯೊಂದಿಗೆ ಆರೋಪಿತನು ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ, ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 31-12-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 161/2021, ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಈಶ್ವರ ತಂದೆ ಗೋವಿಂದ ದೇವಾಡಿಗ, ಪ್ರಾಯ-44 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಬೆಳ್ನೆ, ಚಿಕ್ಕಯ್ಯನ ಮನೆ, ತಾ: ಭಟ್ಕಳ. ಈತನು ದಿನಾಂಕ: 31-12-2021  ರಂದು 19-00 ಗಂಟೆಯ ಸಮಯಕ್ಕೆ ಮಾವಿನಕುರ್ವಾ ಬೆಳ್ನೆಯ ಜೋಗಿ ಭಟ್ಟರ ಮನೆಯ ಹತ್ತಿರ ಇರುವ ತನ್ನ ಅಂಗಡಿಯ ಹೊರಗಿನ ಸಾರ್ವಜನಿಕ ಸ್ಥಳದಲ್ಲಿ 1). BAGPIPER WHISKY-180 ML ನ ಪ್ಯಾಕೆಟ್ ಗಳು-11, 2). OLD TAVERN WHISKY-180 ML ನ ಪ್ಯಾಕೆಟ್ ಗಳು-24, 3). HAYWARDS WHISKY-90 ML ನ ಪ್ಯಾಕೆಟ್ ಗಳು-20. ಹೀಗೆ ಒಟ್ಟು 3,953.13/- ರೂಪಾಯಿ ಮೌಲ್ಯದ ಅಬಕಾರಿ ಸ್ವತ್ತುಗಳನ್ನು ಒಂದು ರಟ್ಟಿನ ಬಾಕ್ಸಿನಲ್ಲಿ ತನ್ನ ತಾಬಾದಲ್ಲಿ ಇಟ್ಟುಕೊಂಡು ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೆ ಮಾರಾಟ ಮಾಡುತ್ತಿದ್ದಾಗ ಸ್ಥಳದಲ್ಲಿ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಭರತಕುಮಾರ ವಿ,ಪಿ.ಎಸ್.ಐ (ಕಾ&ಸು), ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 31-12-2021 ರಂದು 20-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಶಿರಸಿ ಗ್ರಾಮೀಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 130/2021, ಕಲಂ: 8(C), 20(b)(ii)(A) ಎನ್.ಡಿ.ಪಿ.ಎಸ್ ಎಕ್ಟ್-1985ನೇದ್ದರ ವಿವರ...... ನಮೂದಿತ ಆರೋಪಿತರು 1]. ಅಭಿಷೇಕ ಶ್ರೀಧರ ಹೆಗಡೆ, ಪ್ರಾಯ-22 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ರೇಷನ್ ಅಂಗಡಿ ಹಿಂದುಗಡೆ, ಗಣೇಶ ನಗರ, ತಾ: ಶಿರಸಿ, 2]. ಮಂಜುನಾಥ ಉದಯ ಮಾನೆ, ಪ್ರಾಯ-24 ವರ್ಷ, ವೃತ್ತಿ-ಕಟಿಂಗ್ ಕೆಲಸ, ಸಾ|| ಜನತಾ ಕಾಲೋನಿ, ಸಹಸ್ರಳ್ಳಿ, ಪೋ: ಯಡಳ್ಳಿ, ತಾ: ಶಿರಸಿ. ಈ ನಮೂದಿತ ಆರೋಪಿತರು ಅಕ್ರಮವಾಗಿ ತಮ್ಮ ತಾಬಾ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಮಾರಾಟ ಮಾಡುವ ಉದ್ದೇಶದಿಂದ ದಾಸನಕೊಪ್ಪ ಕಡೆಯಿಂದ ಹುಸುರಿ ಮಾರ್ಗವಾಗಿ ಗ್ರೇ ಬಣ್ಣದ ಹೋಂಡಾ ಕಂಪನಿಯ ಯುನಿಕಾರ್ನ್ ಮೋಟಾರ್ ಸೈಕಲ್ ನಂ: ಕೆ.ಎ-31/ಇ.ಬಿ-6185 ನೇದರ ಮೇಲೆ ಅಜಮಾಸ 4,000/- ರೂಪಾಯಿ ಮೌಲ್ಯದ 136 ಗ್ರಾಂ ತೂಕದ ಗಾಂಜಾ ಮಾದಕವನ್ನು ದಿನಾಂಕ: 31-12-2021 ರಂದು 12-00 ಗಂಟೆಯ ಸುಮಾರಿಗೆ ಸಾಗಾಟ ಮಾಡಿಕೊಂಡು ಶಿರಸಿ ಕಡೆಗೆ ಬರುತ್ತಿದ್ದಾಗ ಮರದಲ್ಲಿ ಮಾರುತಿ ದೇವಸ್ಥಾನದ ಹತ್ತಿರ ಗಾಂಜಾ ಮಾದಕ ವಸ್ತುವಿನೊಂದಿಗೆ ಹಾಗೂ ನಗದು ಹಣ 1,290/- ರೂಪಾಯಿಯೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಈರಯ್ಯ ಡಿ. ಎನ್, ಪಿ.ಎಸ್.ಐ (ಕಾ.ಸು & ಸಂಚಾರ), ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ದಿನಾಂಕ: 31-12-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಮುಂಡಗೋಡ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 170/2021, ಕಲಂ: 302 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತರು ಯಾರೋ ಅಪರಿಚಿತರಾಗಿದ್ದು, ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈ ನಮೂದಿತ ಆರೋಪಿತರು ಪಿರ್ಯಾದಿಯ ಅಣ್ಣನಾದ ಮೆಹಬೂಬ್ಅಲಿ ತಂದೆ ಬಾಬುಸಾಬ್ ಜಮಖಂಡಿ, ಪ್ರಾಯ-51 ವರ್ಷ, ವೃತ್ತಿ-ಬ್ಯುಸಿನೆಸ್, ಸಾ|| ಇಂದಿರಾನಗರ, ತಾ: ಮುಂಡಗೋಡ ಈತನೊಂದಿಗೆ ಯಾವುದೋ ದ್ವೇಷದಿಂದ ಇದ್ದವರು,  ದಿನಾಂಕ: 30-12-2021 ರಂದು ರಾತ್ರಿ 09-00 ಗಂಟೆಯಿಂದ ದಿನಾಂಕ: 31-12-2021 ರಂದು ಮಧ್ಯಾಹ್ನ 02-00 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ಹರಿತವಾದ ವಸ್ತುವಿನಿಂದ ಮೆಹಬೂಬ್ಅಲಿ ಈತನ ಹಣೆಯ ಮೇಲೆ ಹಾಗೂ ತಲೆಯ ಎಡಭಾಗದಲ್ಲಿ ಹೊಡೆದು ಮಾರಣಾಂತಿಕ ಗಾಯನೋವು ಪಡಿಸಿ ಮರಣವನ್ನುಂಟು ಮಾಡಿ, ಆತನ ಮೃತದೇಹವನ್ನು ಕಲ್ಲಳ್ಳಿ ಹಾಗೂ ಹನುಮಾಪೂರ ಗ್ರಾಮಗಳ ಮಧ್ಯದಲ್ಲಿರುವ ಕಲ್ಲಳ್ಳಿ ಹಳ್ಳದಲ್ಲಿ ಆತನ ಮೋಟಾರ್ ಸೈಕಲ್ ಸಮೇತ ಎಸೆದು ಹೋದ ಬಗ್ಗೆ ಪಿರ್ಯಾದಿ ಶ್ರೀ ಇಸ್ಮಾಯಿಲ್ ತಂದೆ ಬಾಬುಸಾಬ್ ಜಮಖಂಡಿ, ಪ್ರಾಯ-34 ವರ್ಷ, ವೃತ್ತಿ-ಕಿರಾಣಿ ವ್ಯಾಪಾರ, ಸಾ|| ಹಳ್ಳೂರ ಓಣಿ, ತಾ: ಮುಂಡಗೋಡ ರವರು ದಿನಾಂಕ: 31-12-2021 ರಂದು 15-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 31-12-2021

at 00:00 hrs to 24:00 hrs

 

ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ....

 

======||||||||======

 

 

 

 

 

 

 

 

ಇತ್ತೀಚಿನ ನವೀಕರಣ​ : 02-01-2022 02:01 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080