ಅಭಿಪ್ರಾಯ / ಸಲಹೆಗಳು

ದೈನಂದಿನ ಜಿಲ್ಲಾ ಅಪರಾಧ ವರದಿ

ದಿನಾಂಕ:- 31-01-2021

at 00:00 hrs to 24:00 hrs

 

ಅಂಕೋಲಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2021, ಕಲಂ: 279, 337, 338, 304(ಎ) ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ಎಮ್. ಎ. ಮುಲ್ಲಾ, ಸಾ|| ಧಾರವಾಡ (ಕಾರ್ ನಂ: ಕೆ.ಎ-28/ಎನ್-5425 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 31-01-2021 ರಂದು ಅಂಕೋಲಾ ತಾಲೂಕಿನ ಮಾಸ್ತಿಕಟ್ಟಾದ ಎಕ್ಕೆಗುಳಿಯಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-63 ರ ಡಾಂಬರ್ ರಸ್ತೆಯ ಮೇಲೆ ತನ್ನ ಕಾರ್ ನಂ: ಕೆ.ಎ-28/ಎನ್-5425 ನೇದನ್ನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನು, ಎದುರಿನಿಂದ ಬಸ್ ಬರುತ್ತಿರುವುದನ್ನು ನೋಡಿಯೂ ನಿರ್ಲಕ್ಷ್ಯತನದಿಂದ ತನ್ನ ಮುಂದಿನಿಂದ ಹೋಗುತ್ತಿದ್ದ ಬೇರೊಂದು ಟ್ಯಾಂಕರ್ ಲಾರಿಯನ್ನು ಓವರಟೇಕ್ ಮಾಡಿಕೊಂಡು ರಸ್ತೆಯ ಬಲಕ್ಕೆ ಬಂದವನು ತನ್ನ ಕಾರನ್ನು ನಿಯಂತ್ರಿಸಲಾಗದೇ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಬರುತ್ತಿದ್ದ ವಾ.ಕ.ರ.ಸಾ ಸಂಸ್ಥೆ ಬಸ್ ನಂ: ಕೆ.ಎ-26/ಎಫ್-1083 ನೇದಕ್ಕೆ ಮುಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ 1). ರೇಖಾ ಕೊಕ್ಕಟ್ಟನರ್, ಸಾ|| ಧಾರವಾಡ, 2). ಮೇಘಾ ಶಿಂಗನಾಥ, ಸಾ|| ಧಾರವಾಡ, 3). ಯು. ಬಿ. ಮಿಸ್ತ್ರೀ, ಸಾ|| ಧಾರವಾಡ, ಇವರಿಗೆ ಗಂಭೀರ ಮತ್ತು ಸಾದಾ ಸ್ವರೂಪದ ಗಾಯನೋವು ಪಡಿಸಿದ್ದಲ್ಲದೇ, ಆರೋಪಿ ಚಾಲಕನು ತನಗೂ ಕೂಡ ಗಂಭೀರ ಸ್ವರೂಪದ ಗಾಯನೋವು ಪಡಿಸಿಕೊಂಡಿದ್ದು, ಗಾಯಾಳುಗಳನ್ನು ಉಪಚಾರದ ಸಲುವಾಗಿ ಅಂಕೋಲಾದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಗಾಯಾಳುಗಳನ್ನು ಪರೀಕ್ಷಿಸಿದ ವೈದ್ಯರು ಗಂಭೀರವಾಗಿ ಗಾಯಗೊಂಡ ರೇಖಾ ಕೊಕ್ಕಟ್ಟನರ್, ಸಾ|| ಧಾರವಾಡ ಇವರು ಮೃತಪಟ್ಟಿರುತ್ತಾರೆ ಎಂದು ತಿಳಿಸಿದ ಬಗ್ಗೆ ಪಿರ್ಯಾದಿ ಶ್ರೀ ಈರಯ್ಯಾ ತಂದೆ ಕಳಕಯ್ಯಾ ಗಣಾಚಾರಿ, ಪ್ರಾಯ-46 ವರ್ಷ, ವೃತ್ತಿ-ಚಾಲಕ/ನಿರ್ವಾಹಕ (ಬಿಲ್ಲೆ ಸಂಖ್ಯೆ: 3863), ವಾ.ಕ.ರ.ಸಾ ಸಂಸ್ಥೆ ಗದಗ ಡಿಪೋ, ಸಾ|| ಅಸುಂಡಿ, ಬಿಂಕದಕಟ್ಟಿ, ಗದಗ ರವರು ದಿನಾಂಕ: 31-01-2021 ರಂದು 15-15 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 10/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಸುರೇಶ ತಂದೆ ರಾಮಾ ನಾಯ್ಕ, ಪ್ರಾಯ-48 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಹನೇಹಳ್ಳಿ, ಬಂಕಿಕೊಡ್ಲ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 30-01-2020 ರಂದು 18-15 ಗಂಟೆಯ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಬಂಕಿಕೊಡ್ಲ ಗ್ರಾಮದ ಹನೇಹಳ್ಳಿ ಕ್ರಾಸ್ ರಸ್ತೆಯ ಮೇಲೆ ತನ್ನ ಲಾಭಕ್ಕೋಸ್ಕರ ಬರ-ಹೋಗುವ ಸಾರ್ವಜನಿಕರನ್ನು ಕರೆಯುತ್ತಾ, ತಮ್ಮ ತಮ್ಮ ಅದೃಷ್ಟದ ಸಂಖ್ಯೆಗಳ ಮೇಲೆ ಹಣದ ಪಂಥ ಕಟ್ಟಿ, ಅದೃಷ್ಟದ ಸಂಖ್ಯೆ ತಾಗಿದರೆ 01/- ರೂಪಾಯಿಗೆ 80/ ರೂಪಾಯಿ ಕೊಡುವುದಾಗಿ ಹೇಳಿ ಅವರ ಮನವೊಲಿಸಿ, ಸಾರ್ವಜನಿಕರಿಂದ ಅಕ್ರಮವಾಗಿ ಹಣ ಪಡೆದು, ಅವರು ಹೇಳಿದ ಅಂಕೆ-ಸಂಖ್ಯೆಯನ್ನು ತನ್ನ ಹತ್ತಿರ ಇರುವ ಚೀಟಿಯಲ್ಲಿ ಬರೆದುಕೊಂಡು ಓ.ಸಿ ಮಟಕಾ-ಜೂಗಾರಾಟ ಆಡಿಸುತ್ತಿದ್ದಾಗ, ನಗದು ಹಣ 840/- ರೂಪಾಯಿ ಮತ್ತು ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳೊಂದಿಗೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪಿ.ಎಸ್.ಐ (ಕಾ&ಸು), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 31-01-2021 ರಂದು 18-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಗೋಕರ್ಣ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 11/2021, ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ-1965 ನೇದ್ದರ ವಿವರ...... ನಮೂದಿತ ಆರೋಪಿತ ಈಶ್ವರ ತಂದೆ ಕೃಷ್ಣಾ ನಾಯ್ಕ, ಪ್ರಾಯ-59 ವರ್ಷ, ವೃತ್ತಿ-ಅಂಗಡಿ ವ್ಯಾಪಾರ, ಸಾ|| ಕಡಿಮೆ, ಗೋಕರ್ಣ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 31-01-2021 ರಂದು 18-00 ಗಂಟೆಗೆ ಹೊಸ್ಕೇರಿ ಗ್ರಾಮದ ಗ್ರಾಮ ಪಂಚಾಯತ ಎದುರಿನ ಗೂಡಂಗಡಿಯ ಪಕ್ಕದ ತಾತ್ಕಾಲಿಕ ಶೆಡ್ ಒಳಗೆ ಸಾರ್ವಜನಿಕರಿಗೆ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾದಿ ಮತ್ತು ಅವರ ಸಿಬ್ಬಂದಿಯವರು ಸೇರಿ ಮುತ್ತಿಗೆ ಹಾಕಿ ದಾಳಿ ಮಾಡಿದಾಗ HAYWARD'S CHEERS WHISKY 90 ML ಅಂತಾ ಬರೆದ 05 ಪ್ಯಾಕೆಟ್ ಗಳು (ಪೌಚ್ ಗಳು), ಅ||ಕಿ|| 175.65/- ರೂಪಾಯಿ ಹಾಗೂ HAYWARD'S CHEERS WHISKY 90 ML ಅಂತಾ ಲೇಬಲ್ ಇರುವ 4 ಖಾಲಿ ಪೌಚ್ ಗಳು ಮತ್ತು 2 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಹಾಗೂ ನಗದು ಹಣ 150 ರೂಪಾಯಿಗಳೊಂದಿಗೆ ಸಿಕ್ಕಿರುತ್ತಾನೆ ಎಂಬ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ನವೀನ್ ಎಸ್. ನಾಯ್ಕ, ಪಿ.ಎಸ್.ಐ (ಕಾ&ಸು), ಗೋಕರ್ಣ ಪೊಲೀಸ್ ಠಾಣೆ ರವರು ದಿನಾಂಕ: 31-01-2021 ರಂದು 19-45 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 23/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಚಂದ್ರಶೇಖರ ತಂದೆ ಶಂಕರ ನಾಯಕ, ಪ್ರಾಯ-40 ವರ್ಷ, ವೃತ್ತಿ-ಪಾನ್ ಬೀಡಾ ವ್ಯಾಪಾರ, ಸಾ|| ವನ್ನಳ್ಳಿ ಶಾಲೆಯ ಹತ್ತಿರ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 30-01-2021 ರಂದು 11-40 ಗಂಟೆಗೆ ವೇಳೆಯಲ್ಲಿ ಕುಮಟಾ ಪಟ್ಟಣದ ನೆಲ್ಲಿಕೇರಿಯ ಹಳೆಯ ಬಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಚೀಟಿ ಬರೆದು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ದಾಳಿಯ ಕಾಲ 1). ನಗದು ಹಣ 1,860/- ರೂಪಾಯಿ, 2). ಅಂಕೆ-ಸಂಖ್ಯೆ ಬರೆದ ಚೀಟಿ-01, ಅ||ಕಿ|| 00.00/- ರೂಪಾಯಿ, 3). ಬಾಲ್ ಪೆನ್-01, ಅ||ಕಿ|| 00.00/- ರೂಪಾಯಿಗಳ ಸಮೇತ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 31-01-2021 ರಂದು 17-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 24/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ರಮೇಶ ತಂದೆ ಬರ್ಮಾ ಉಪ್ಪಾರ, ಪ್ರಾಯ-40 ವರ್ಷ, ವೃತ್ತಿ-ಗಾವಡಿ ಕೆಲಸ, ಸಾ|| ಹೊನ್ಮಾಂವ್, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 30-01-2021 ರಂದು 13-40 ಗಂಟೆಗೆ ಕುಮಟಾ ಶಹರದ ರೈಲ್ವೇ ಸ್ಟೇಶನ್ ಕ್ರಾಸ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ರಸ್ತೆಯಲ್ಲಿ ಓಡಾಡುವ ಜನರನ್ನು ಬರ ಮಾಡಿಕೊಂಡು 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಹೇಳಿ ಅವರನ್ನು ನಂಬಿಸಿ, ಜನರಿಂದ ಹಣ ಪಡೆದುಕೊಂಡು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಮಟಕಾ ಜೂಗಾರಾಟ ಆಡಿಸುತ್ತಿದ್ದಾಗ ಆಟದ ಸಲಕರಣೆಗಳಾದ 1). ಓ.ಸಿ ಚೀಟಿ-1, ಅ||ಕಿ|| 00.00/- ರೂಪಾಯಿ, 2). ಬಾಲ್ ಪೆನ್-1, ಅ||ಕಿ|| 00.00/- ರೂಪಾಯಿ ಹಾಗೂ 3). ನಗದು ಹಣ 2,130/- ರೂಪಾಯಿಯೊಂದಿಗೆ ದಾಳಿಯ ವೇಳೆ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ಆನಂದಮೂರ್ತಿ ಸಿ, ಪಿ.ಎಸ್.ಐ (ಕಾ&ಸು), ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 31-01-2021 ರಂದು 17-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 25/2021, ಕಲಂ: 78(3) ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತ ಗಜಾನನ ತಂದೆ ಶ್ರೀಕಾಂತ ನಾಯ್ಕ, ಪ್ರಾಯ-26 ವರ್ಷ, ವೃತ್ತಿ-ವ್ಯಾಪಾರ, ಸಾ|| ಗುಂದ, ತಾ: ಕುಮಟಾ. ನಮೂದಿತ ಆರೋಪಿತನು ದಿನಾಂಕ: 30-01-2021 ರಂದು 13-50 ಗಂಟೆಗೆ ಕುಮಟಾ ಪಟ್ಟಣದ ಗುಂದ ಐಡಿಯಲ್ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಬರ-ಹೋಗುವ ಜನರಿಗೆ 01/- ರೂಪಾಯಿಗೆ 80/- ರೂಪಾಯಿ ಕೊಡುವುದಾಗಿ ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓ.ಸಿ ಚೀಟಿ ಬರೆದು ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದಾಗ ದಾಳಿಯ ಕಾಲ ಜೂಗಾರಾಟದ ಸಲಕರಣೆಗಳಾದ 1).ಅಂಕೆ-ಸಂಖ್ಯೆ ಬರೆದ ಓ.ಸಿ ಚೀಟಿ-1, ಅ||ಕಿ|| 00.00/- ರೂಪಾಯಿ, 2). ಬಾಲ್ ಪೆನ್-1, ಅ||ಕಿ|| 00.00/- ರೂಪಾಯಿ ಹಾಗೂ 3). ನಗದು ಹಣ 2,030/- ರೂಪಾಯಿಯೊಂದಿಗೆ ಸಮೇತ ಸಿಕ್ಕ ಬಗ್ಗೆ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಗುಡ್ಡಿ, ಪಿ.ಎಸ್.ಐ, ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 31-01-2021 ರಂದು 18-05 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 26/2021, ಕಲಂ: 87 ಕರ್ನಾಟಕ ಪೊಲೀಸ್ ಎಕ್ಟ್-1963 ನೇದ್ದರ ವಿವರ...... ನಮೂದಿತ ಆರೋಪಿತರು 1]. ಕೃಷ್ಣಾನಂದ ಗಣಪತಿ ಹಲಸಿನಮಕ್ಕಿ, ಸಾ|| ನೆಲ್ಲಿಕೇರಿ, ತಾ: ಕುಮಟಾ, 2]. ನಿತ್ಯಾನಂದ ಮಾರಿ ಹರಿಕಂತ್ರ, ಸಾ|| ಗುಡಕಾಗಾಲ, ತಾ: ಕುಮಟಾ, 3]. ಶಿವರಾಮ ಮಾದೇವ ನಾಯ್ಕ, ಪ್ರಾಯ-40 ವರ್ಷ, ಸಾ|| ಜ್ಯೇಷ್ಠಪುರ, ಬಾಡ, ತಾ: ಕುಮಟಾ, 4]. ಕೃಷ್ಣ ಮಡಿವಾಳ, ಪ್ರಾಯ-35 ವರ್ಷ, ಸಾ|| ಜ್ಯೇಷ್ಠಪುರ, ಬಾಡ, ತಾ: ಕುಮಟಾ, 5]. ರಾಘು ಮೋಹನ ಅಂಬಿಗ, ಸಾ|| ಕಾಗಾಲ, ತಾ: ಕುಮಟಾ, 6]. ರಾಘವೇಂದ್ರ ಗಣಪತಿ ನಾಯ್ಕ, ಸಾ|| ಜ್ಯೇಷ್ಠಪುರ, ಬಾಡ, ತಾ: ಕುಮಟಾ, 7]. ರವಿ ಹೊಸಬಯ್ಯ ಪಟಗಾರ, ಸಾ|| ಜ್ಯೇಷ್ಠಪುರ, ಬಾಡ, ತಾ: ಕುಮಟಾ, 8]. ಪರ್ಭಾಕರ ಬೊಬ್ಬು ಪಟಗಾರ, ಸಾ|| ಜ್ಯೇಷ್ಠಪುರ, ಬಾಡ, ತಾ: ಕುಮಟಾ. ಈ ನಮೂದಿತ ಆರೋಪಿತರು ದಿನಾಂಕ: 30-01-2021 ರಂದು 16-50 ಗಂಟೆಗೆ ಕುಮಟಾ ತಾಲೂಕಿನ ಬಾಡ ಜ್ಯೇಷ್ಠಪುರದ ಕಟ್ಟಿಗೆ ಡಿಪೋ ಹತ್ತಿರ ಗದ್ದೆ ಬಯಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜೂಗಾರಾಟ ನಡೆಸುತ್ತಿದ್ದಾಗ, ನಗದು ಹಣ 3,170/- ರೂಪಾಯಿ ಮತ್ತು ಕೋಳಿ ಅಂಕ ಜೂಗಾರಾಟದ ಸಲಕರಣೆಗಳೊಂದಿಗೆ ಪಿರ್ಯಾದಿಯವರು ದಾಳಿ ನಡೆಸಿದಾಗ ಸಿಕ್ಕ ಬಗ್ಗೆ ಪಿರ್ಯಾದಿ ಸ||ತ|| ಶ್ರೀ ರವಿ ಗುಡ್ಡಿ, ಪಿ.ಎಸ್.ಐ, ಕುಮಟಾ ಪೊಲೀಸ್ ಠಾಣೆ ರವರು ದಿನಾಂಕ: 31-01-2021 ರಂದು 18-35 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಕುಮಟಾ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 27/2021, ಕಲಂ: 279, 337 ಐಪಿಸಿ ನೇದ್ದರ ವಿವರ...... ನಮೂದಿತ ಆರೋಪಿತ ನೌಶಾದ್ ತಂದೆ ಹಮೀದ್, ಸಾ|| ಪಟ್ಟಿನಾರಯಿಲ್ ಹೌಸ್, ಪೋ: ಕೊಟ್ಟಾಲಿ, ಕಣ್ಣೂರು, ಕೇರಳ (ಕಾರ್ ನಂ: ಜಿ.ಎ-05/ಡಿ-8553 ನೇದರ ಚಾಲಕ). ನಮೂದಿತ ಆರೋಪಿತನು ದಿನಾಂಕ: 31-01-2021 ರಂದು 20-45 ಗಂಟೆಗೆ ತಾನು ಚಲಾಯಿಸುತ್ತಿದ್ದ ಕಾರ್ ನಂ: ಜಿ.ಎ-05/ಡಿ-8553 ನೇದನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ರ ಮೇಲೆ ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಹೋಗಲು ಅತೀವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು, ಕುಮಟಾ ತಾಲೂಕಿನ ಅಳ್ವೇಕೋಡಿ ಮೀನು ಮಾರ್ಕೆಟ್ ಕ್ರಾಸ್ ಹತ್ತಿರ ತನ್ನ ಮುಂದಿನಿಂದ ಪಿರ್ಯಾದಿಯವರು ಕುಮಟಾ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂ: ಕೆ.ಎ-47/ಆರ್-8259 ನೇದಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದು ಅಪಘಾತ ಪಡಿಸಿ, ಪಿರ್ಯಾದಿಯವರ ಸೊಂಟಕ್ಕೆ, ಬಲಗಾಲಿನ ಪಾದಕ್ಕೆ ಗಾಯನೋವು ಪಡಿಸಿದ್ದಲ್ಲದೇ, ಪಿರ್ಯಾದಿಯ ಮೋಟಾರ್ ಸೈಕಲ್ ಹಿಂಬದಿಯಲ್ಲಿ ಕುಳಿತು ಸವಾರಿ ಮಾಡುತ್ತಿದ್ದ ಪಿರ್ಯಾದಿಯ ಹೆಂಡತಿ ಶ್ರೀಮತಿ ಗಿರಿಜಾ ಇವರಿಗೆ ಬಲಗೈ ಮೊಣಗಂಟಿಗೆ, ಸೊಂಟಕ್ಕೆ ಹಾಗೂ ತಲೆಗೆ ಗಾಯ ಪಡಿಸಿದ್ದು, ಪಿರ್ಯಾದಿಯ ಮಗ ಗಹನ (7 ವರ್ಷ), ಈತನಿಗೆ ಎಡಗೈ ಮೊಣಗಂಟಿಗೆ, ತಲೆಗೆ, ಗದ್ದಕ್ಕೆ ಹಾಗೂ ಎಡಗೆನ್ನೆಗೆ ಗಾಯನೋವು ಪಡಿಸಿದ್ದು, ಪಿರ್ಯಾದಿಯ ಮಗಳು ಚಾರ್ವಿ (1 1/2 ವರ್ಷ), ಇವಳಿಗೆ ತುಟಿಗೆ ಹಾಗೂ ಕೈಕಾಲುಗಳಿಗೆ ಗಾಯನೋವು ಪಡಿಸಿದ್ದಲ್ಲದೇ, ಎರಡೂ ವಾಹನ ಜಖಂ ಆಗಲು ಆರೋಪಿ ಕಾರ್ ಚಾಲಕನೇ ಕಾರಣನಾದ ಬಗ್ಗೆ ಪಿರ್ಯಾದಿ ಶ್ರೀ ಗೋವಿಂದ ತಂದೆ ಕುಪ್ಪು ಗೌಡಾ, ಪ್ರಾಯ-36 ವರ್ಷ, ವೃತ್ತಿ-ಮೊಬೈಲ್ ಶಾಪ್, ಸಾ|| ದುಂಡಕುಳಿ, ಪೋ: ದಿವಗಿ, ತಾ: ಕುಮಟಾ ರವರು ದಿನಾಂಕ: 31-01-2021 ರಂದು 22-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. 

 

ಬನವಾಸಿ ಪೊಲೀಸ್ ಠಾಣೆ

ಅಪರಾಧ ಸಂಖ್ಯೆಃ 10/2021, ಕಲಂ: ಹುಡುಗಿ ಕಾಣೆ ನೇದ್ದರ ವಿವರ...... ನಮೂದಿತ ಕಾಣೆಯಾದ ಹುಡುಗಿ ಕುಮಾರಿ: ಜಯಲಕ್ಷ್ಮೀ ತಂದೆ ವೀರಭದ್ರಪ್ಪ ಕಪಾಲೇರ, ಪ್ರಾಯ-18 ವರ್ಷ, ವೃತ್ತಿ-ವಿದ್ಯಾರ್ಥಿ, ಸಾ|| ದೊಡ್ಡಕೇರಿ, ಬನವಾಸಿ, ತಾ: ಶಿರಸಿ. ಇವಳು ಪಿರ್ಯಾದಿಯವರ ಮಗಳಾಗಿದ್ದು, ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದವಳು, ದಿನಾಂಕ: 30-01-2021 ರಂದು ಸಂಜೆ 05-15 ಗಂಟೆಗೆ ಎಂದಿನಂತೆ ಮನೆಯಿಂದ ತಿರುಗಾಡಲು ಹೊರಗೆ ಹೋದವಳು, ವಾಪಸ್ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ. ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ವಿರೇಶ ತಂದೆ ವೀರಭದ್ರಪ್ಪ ಕಪಾಲೇರ, ಪ್ರಾಯ-43 ವರ್ಷ, ವೃತ್ತಿ-ಗಾರೆ ಕೆಲಸ, ಸಾ|| ದೊಡ್ಡಕೇರಿ, ಬನವಾಸಿ, ತಾ: ಶಿರಸಿ ರವರು ದಿನಾಂಕ: 31-01-2021 ರಂದು 21-30 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

 

 

 

 

ದೈನಂದಿನ ಜಿಲ್ಲಾ ಅಸ್ವಾಭಾವಿಕ ಮರಣ ವರದಿ

ದಿನಾಂಕ:- 31-01-2021

at 00:00 hrs to 24:00 hrs

 

ಕುಮಟಾ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 01/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ರಾಮು ತಂದೆ ಹನಮಂತ ಬಂಜೇತ್ರಿ, ಪ್ರಾಯ-65 ವರ್ಷ, ವೃತ್ತಿ-ಭಿಕ್ಷಾಟನೆ, ಸಾ|| ಪೊಲೀಸ್ ಲೈನ್, ಪ್ರತಾಪ ಕಾಲೋನಿ, ಮೀರಜ್, ಮಹಾರಾಷ್ಟ್ರ. ಈತನು ಅಂಗವಿಕಲಾಗಿದ್ದು, ಭಿಕ್ಷಾಟನೆ ಮಾಡುತ್ತಾ ಕುಮಟಾ ಪಟ್ಟಣಕ್ಕೆ ಬಂದವನು, ದಿನಾಂಕ: 31-01-2021 ರಂದು ಬೆಳಿಗ್ಗೆ 08-00 ಗಂಟೆಯ ಸುಮಾರಿಗೆ ಅಂಗವಿಕಲರು ಬಳಸುವ ಸಣ್ಣದಾದ ಕುಳಿತುಕೊಳ್ಳುವ ಎಳೆಯುವ ನಾಲ್ಕು ಚಕ್ರದ ಗಾಡಿಯ ಮೇಲೆ ಭಿಕ್ಷಾಟನೆ ಮಾಡುತ್ತಾ, ಗಾಡಿಯಲ್ಲಿ ಹೋಗುತ್ತಿರುವಾಗ ಆತನಿಗಿದ್ದ ಯಾವುದೋ ಕಾಯಿಲೆಯಿಂದಲೋ ಅಥವಾ ಹೃದಯಘಾತವಾಗಿಯೋ ಕುಮಟಾದ ಗಾಂಧಿನಗರದಲ್ಲಿ ಹಾಯ್ದಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-66 ನೇದರ ಬದಿಯಲ್ಲಿ ತಳ್ಳುಗಾಡಿಯಲ್ಲಿಯೇ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟು ದೊರೆತಿದ್ದು, ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂಬ ಬಗ್ಗೆ ಪಿರ್ಯಾದಿ ಶ್ರೀ ಜೈವಂತ ತಂದೆ ವೆಂಕಟ್ರಮಣ ಭಂಡಾರಿ, ಪ್ರಾಯ-62 ವರ್ಷ, ವೃತ್ತಿ-ಗ್ಯಾರೇಜ್ ಕೆಲಸ, ಸಾ|| ಗಾಂಧಿನಗರ, ತಾ: ಕುಮಟಾ ರವರು ದಿನಾಂಕ: 31-01-2021 ರಂದು 15-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

 

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ

ಯು.ಡಿ.ಆರ್ ಸಂಖ್ಯೆಃ 03/2021, ಕಲಂ: 174 ಸಿ.ಆರ್.ಪಿ.ಸಿ ನೇದ್ದರ ವಿವರ...... ಮೃತನಾದ ಶ್ರೀ ಚಂದ್ರ ತಂದೆ ಈರಪ್ಪ ನಾಯ್ಕ, ಪ್ರಾಯ-43 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಂಗಡಿಮನೆ, ಮದ್ಗಾರಕೇರಿ, ಬೆಳಕೆ, ತಾ: ಭಟ್ಕಳ. ಇವರು ಕಳೆದ ಕೆಲವು ದಿನಗಳಿಂದ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 25-01-2021 ರಂದು ಸಾಯಂಕಾಲ 04-00 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಷ ಪದಾರ್ಥ ಸೇವನೆ ಮಾಡಿ, ಅಸ್ವಸ್ಥಗೊಂಡು ಚಿಕಿತ್ಸೆಯ ಕುರಿತು ಭಟ್ಕಳದ ವೆಲಫೇರ್ ಆಸ್ಪತ್ರೆಗೆ ದಾಖಲಾಗಿ, ಅಲ್ಲಿಂದ ಭಟ್ಕಳದ ರಾಜಗೋಪಾಲ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಉಪಚಾರಕ್ಕೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆಯಲ್ಲಿರುವಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 30-01-2021 ರಂದು ಸಾಯಂಕಾಲ 17-00 ಗಂಟೆಗೆ ಮಣಿಪಾಲದ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಇದರ ಹೊರತು ಅವರ ಮರಣದಲ್ಲಿ ಬೇರೇ ಯಾವುದೇ ಸಂಶಯ ಇರುವುದಿಲ್ಲ ಎಂಬ ಬಗ್ಗೆ ಪಿರ್ಯಾದಿ ಶ್ರೀಮತಿ ಪಾರ್ವತಿ ಕೋಂ. ಚಂದ್ರ ನಾಯ್ಕ, ಪ್ರಾಯ-37 ವರ್ಷ, ವೃತ್ತಿ-ಕೂಲಿ ಕೆಲಸ, ಸಾ|| ಅಂಗಡಿಮನೆ, ಮದ್ಗಾರಕೇರಿ, ಬೆಳಕೆ, ತಾ: ಭಟ್ಕಳ ರವರು ದಿನಾಂಕ: 31-01-2021 ರಂದು 06-00 ಗಂಟೆಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

======||||||||======

 

 

ಇತ್ತೀಚಿನ ನವೀಕರಣ​ : 01-02-2021 01:53 PM ಅನುಮೋದಕರು: SP KARWAR


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080